ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಭಾವನಾ...

ಆ ಕನಸು ಒಡೆದ ಗಾಜಿನಂತೆ ನುಚ್ಚು ನೂರಾಗಿ ಹೋಗಿದೆ. ಕಲ್ಪನೆಗಳು ಅರ್ಥ ಕಳೆದುಕೊಂಡಿವೆ. ಆಕಾಂಕ್ಷೆಗಳು ನನ್ನಲ್ಲೇ ಉಳಿದುಹೋಗಿವೆ. ಆಲೋಚನೆಗಳು ಎಲ್ಲೋ ಸಾಗುತ್ತಿವೆ.ಮೊದಲು ಮುಗ್ಧತೆ ಇತ್ತು,ನಿಜ.


ಯಾಕಂದ್ರೆ ನಿನ್ನನ್ನು ಗೆಳೆಯನಾಗಿ ಸ್ವೀಕರಿಸಿಯಾಗಿತ್ತು. ನಿನ್ನ ಊಹೆಗೂ ಮೀರಿ ನಾನಂದು ಖುಷಿಪಟ್ಟಿದ್ದೆ, ಕಾರಣ ನನ್ನ ಕನಸಿಗೆ ರೂಪ ನೀಡಲು ಹೊರಟಿದ್ದೆ. ಅದೂ ಎಂಥಾ ಕನಸು -ಒಂದು ಹುಡುಗ ಒಂದು ಹುಡುಗಿ ಗೆಳೆತನಕ್ಕೊಂದು ಹೊಸ ಅರ್ಥ ನೀಡುವ ಕನಸು.ಹುಡುಗ ಹುಡುಗಿ ಜೊತೆಗೆ ಒಂದೆರಡು ಸಲ ಓಡಾಡಿದ್ರೆ ಸಂಶಯದ ದೃಷ್ಠಿಯಿಂದ ನೋಡೋ ಜನ ನಮ್ಮಿಬ್ಬರನ್ನು ನೋಡಿ ಅಬ್ಬಾ ಇಂಥಾ ಸ್ನೇಹನೂ ಸಾಧ್ಯ ಅಂತ ಮೂಗಿನ ಮೇಲೆ ಕೈಯಿರಿಸಿ ತಮ್ಮ ಯೋಚನೆಗಳನ್ನು ಬದಲಾಯಿಸಬೇಕು.

ಎಲ್ಲರ ಮುಂದೆ ರಾಜಾರೋಷವಾಗಿ ಓಡಾಡಬೇಕು, ಗೆಳೆತನಕ್ಕೆ ನಾವು ಮಾದರಿ ಅನ್ನಿಸ್ಕೊಳ್ಬೇಕು. ಹೀಗೆ ಹುಚ್ಚು ಕಲ್ಪನೆಗಳಲ್ಲಿ ಗೆಳೆತನದ ಹುಡುಕಾಟ ನಡೆಸುತ್ತಿದ್ದೆ. ಆದ್ರೆ ಆ ಕನಸು ನನಸಾಗುವ ಮೊದಲೇ ಬೇರೊಂದು ತಿರುವು ಪಡೆದಿತ್ತು.ಆ ನಿನ್ನ ಬರವಣಿಗೆ ಶೈಲಿ,ಯೋಚನಾ ರೀತಿ,ವಿಭಿನ್ನ ವ್ಯಕ್ತಿತ್ವ ನಿನ್ನನ್ನು ಗೆಳೆಯನಾಗಿ ಸ್ವೀಕರಿಸಲು ಪ್ರೇರೇಪಿಸಿತ್ತು. ನನ್ನ ದುರಾದೃಷ್ಟ ನೋಡು ನಾನಂದುಕೊಂಡದ್ದು ನಿಜ ಆಗಲೇ ಇಲ್ಲ.

ನೀನೂ ನನ್ನನ್ನು ಗೆಳತಿಯಾಗಿ ಒಪ್ಪಿಕೊಳ್ತಾ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅದಿಕ್ಕೆ ನಾನು ಆ ಕನಸನ್ನು 'ಹುಚ್ಚು ಕನಸು' ಅಂತ ಕರೆದದ್ದು.ಕನಸು ನನಸಾಗಲಿಲ್ಲ ಅಂತ ಬೇರೆ ಅರ್ಥ ನೀಡವುದು ನನ್ನಿಂದಾಗದ ಮಾತು. ಒಡೆದ ಗಾಜಿನಂತೆ ನನ್ನ ಕನಸು ಚೂರು ಚೂರಾಗಿ ಹೋಗಿದೆ. ಅದನ್ನು ಜೋಡಿಸುವ ವ್ಯರ್ಥ ಪ್ರಯತ್ನ ನನ್ನದಾಗಿದೆ.
- ಚೈತನ್ಯಾ ಪರಾಡ್ಕರ್

1 comments:

suhas said...

Gud wrtng abt FRNDSHP,i agree ths
'FRNDSHP IS ONE MIND IN TWO BODIES'
Nija jeevanada kelavu ghatanegalu mareyalu tumba kashta alva....
GELETANA nintirude parasapara HONDANIKE,NAMBIKE mele NAMBIKE edre VISHWASA beleyutte VISHWASA dinda PREETI sigutte;FRNDSHP nalli eruva PREETI ye bere aadru...
aa PREETI AMMA-MAGU, Mukhyavagi ANNA-TANGI preeti hage edre uttama adre aa PREETI bere tarahadde agidre GELETANA BAHU DOORADA......... matu
' TRUE FRNDSHP,UNLIKE LOVE,ALWAYS LASTS FOREVER '

Post a Comment