ಸಾಹಿತ್ಯ
ಸಾಹಿತ್ಯವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಧರ್ಮಸ್ಥಳದಲ್ಲಿದ್ದುಕೊಂಡೇ ಅಪೂರ್ವ ಸಾಹಿತ್ಯ ರಚನೆಯ ಮೂಲಕ ಒಂದು ಸಾಧನೆ ಮೆರೆದವರು ಶಾರದಾ ಆರ್.ರಾವ್. ನೋವು ನಲಿವುಗಳ ಜೊತೆ ಜೊತೆಗೆ ಬದುಕಿ ಬಾಳಿದವರು ಶಾರದಾ ಆರ್ ರಾವ್. ಅವರು ಇಂದು ನಮ್ಮೊಂದಿಗಿಲ್ಲ... ಅವರು ಮರೆಯಾಗಿ ಇಂದಿಗೆ ವರ್ಷವೊಂದು ತುಂಬುತ್ತದೆ. ಆದರೆ ಅವರು ಬಿಟ್ಟುಹೋದ ಸಾಹಿತ್ಯ ಕೃತಿಗಳು , ಕನ್ನಡ , ತುಳು ಸಾಹಿತ್ಯ ಪರಂಪರೆಗೆ ಅವರು ಸಲ್ಲಿಸಿದ ಸೇವೆ ಇಂದಿಗೂ ಅವರ ಇರುವಿಕೆಯನ್ನು ಕಾಣಿಸುತ್ತದೆ. ಅಂತಹ ಸರಳ ಸಜ್ಜನ ಸಾಹಿತಿಯ ಕುರಿತೊಂದು ನೋಟ.
``ಐಷಾರಾಮದ ದಂತ ಗೋಪುರದಲ್ಲಿ ಕುಳಿತು ಬರೆಯವವರಿಗಿಂತ ಭಿನ್ನವಾಗಿ ಗೃಹಕೃತ್ಯದೊಂದಿಗೆ ಮನೆಯಲ್ಲಿದ್ದು ವಿಷಯ , ವಸ್ತು , ವೈವಿಧ್ಯತೆಗಳನ್ನು ಬರಹ ರೂಪಕ್ಕೆ ಇಳಿಸುವ ಓರ್ವ ಸಾಧಕಿಯಾಗಿದ್ದರು'' ಈ ಮಾತು ಹೇಳಿದವರು ಸಾಹಿತಿ ಅಮೃತೇಷ್ ತಂಡರ ಅಣ್ಣಿಗೇರಿ .
ಅದೊಂದು ಪುಟ್ಟ ಮನೆ...ಮನೆಯೊಳಗೆಲ್ಲಾ ರಾಶಿ ಕೆಲಸ, ಪತಿ , ಮಕ್ಕಳು, ಅಭಿಮಾನಿಗಳು, ಅವರಿವರ ಒಡನಾಟ. ಈ ನಡುವೆ ಶಾರದಾ ಆರ್.ರಾವ್.
ಇವರು ಧರ್ಮಸ್ಥಳದಲ್ಲಿದ್ದುಕೊಂಡೇ ಅಪಾರ ಸಾಹಿತ್ಯ ಸೇವೆ ನಡೆಸಿದ್ದಾರೆ. 1970ರಿಂದ ಇವರು ತಮ್ಮನ್ನು ಸಾಹಿತ್ಯ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.
1971ರಲ್ಲಿ ಇವರ ತುಳುನಾಟಕ ಕೃತಿಗಳಾದ `ಬದಿತ ಬ್ರಾಂತ್', `ಬೆರ್ಮರೆ ಮಹಿಮೆ'ಗಳಿಗೆ `ಕಲ್ಪನಾ ಪ್ರಶಸ್ತಿ'ಯ ಗರಿ. 1973ರಲ್ಲಿ ಮೂಡಿ ಪೊತರ್ು ಕಂತುನಾಗ ನಾಟಕ ಕೃತಿಗೆ `ಕೊರಡ್ಯಲ್ ಶ್ರೀನಿವಾಸ್ ರಾವ್ ಪ್ರಶಸ್ತಿ ಲಭಿಸಿದೆ.
ಪ್ರಕಟಿತ ಮೊದಲ ಕೃತಿ `ಪ್ರತಿಫಲನ'. ಕಾವ್ಯಕರ ವೀರ, ಕಾವ್ಯ ಗುಚ್ಛ, ಸಪ್ತಸ್ವರ, ಹಾಗೂ ಕವನ ಸಂಕಲನಗಳು ಇವರ ಪ್ರಕಟಿತ ಕೃತಿಗಳು. ಅತ್ತಸದ ಮರ, ಬೇನೆದಾಂತಿ, ಬದುಕ್ , ತಾರ್ಕಣೆ, ಬೆದೆ, ಬೂದಮ್ಮನ ಬಿರ್ಸಾತಿಗೆ ಮೊದಲಾದ ನಾಟಕ ಹಸ್ತಪತ್ರಿಗಳಿಗೆ ಎಂಟು ರತ್ನವರ್ಮ ಹೆಗ್ಗಡೆ ಸ್ಮಾರಕ ಪ್ರಶಸ್ತಿ ಸಿಕ್ಕಿದೆ.
ಬೂದಮ್ಮನ ಬಿರ್ಸಾತಿಗೆ, ಪ್ರೀತಿಯ ಬಲೆ ,ಋಣ ಕಡ್ಪೆರಾವ ಕೃತಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಬರಹಗಾರರಿಗೆ ಅಂತರಂಗದ ಪ್ರಚೋದನೆ ಅತೀಮುಖ್ಯ. ಓದುವ ಹವ್ಯಾಸ ಅದಕ್ಕಿಂತ ಮುಖ್ಯ ಎಂದು ಹೇಳುತ್ತಿದ್ದರು ಶಾರದಾ ಆರ್.ರಾವ್.
ಇದೀಗ ವರ್ಷವೊಂದು ತುಂಬುತ್ತಿದೆ. ಅವರ ಸಾಹಿತ್ಯ ಕೃತಿಗಳು ಇಂದಿಗೂ ಶಾರಾದಾ ಆರ್.ರಾವ್ ಅವರ ನೆನಪನ್ನು ಮತ್ತೆ ಮತ್ತೆ ಹೊತ್ತು ತರುತ್ತವೆ.
- ಅನುರಾಧಾ ಧರ್ಮಸ್ಥಳ.
Subscribe to:
Post Comments (Atom)
Video

0 comments:
Post a Comment