ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಪ್ರಾದೇಶಿಕ ಸುದ್ದಿ
ಮಹೇಶ್ ಪುಚ್ಚಪ್ಪಾಡಿ
.ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಹಾಗೂ ಬಳ್ಳಕ್ಕ ಪ್ರದೇಶದ ಜನರಿಗೆ ಈ ಮಳೆಗಾಲದಲ್ಲಿ ಕುಗ್ರಾಮದ ಅನುಭವಂತೂ ಆಗಲಿದೆ.ಇದಕ್ಕೆ ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಯೇ ಕಾರಣವಾಗಿದೆ. ಗುತ್ತಿಗಾರು - ಬಳ್ಳಕ್ಕ - ಪಂಜ ರಸ್ತೆಯ ಉನ್ನತೀಕರಣಕ್ಕಾಗಿ ಈ ರಸ್ತೆಯನ್ನು ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸೇರಿಸಲಾಗಿತ್ತು



ಹೀಗಾಗಿ ಈ ರಸ್ತೆ ಅಭಿವೃದ್ದಿಗೆ ಸಡಕ್ ಯೋಜನೆಯಡಿಯಲ್ಲಿ 6.5 ಕೋಟಿ ರುಪಾಯಿ ಮಂಜೂರಾಗಿದ್ದು ಶಿಲಾನ್ಯಾಸ ಕಾರ್ಯಕ್ರಮವೂ ನಡೆದು ರಸ್ತೆ ಅಗಲೀಕರಣ ಹಾಗೂ ದುರಸ್ಥಿ ಕಾರ್ಯವೂ ನಡೆದಿತ್ತು. ಇದೇ ಸಂದರ್ಭದಲ್ಲಿ ಕೆಲವೆಡೆ ಈಗಿದ್ದ ಡಾಮರು ರಸ್ತೆಯನ್ನು ಕೂಡಾ ತೆಗೆಯಲಾಗಿತ್ತು.ಆದರೆ ಮಳೆಗಾಲ ಆರಂಭವಾದರು ಕೂಡಾ ಕಾಮಗಾರಿ ಮುಗಿದಿರಲಿಲ್ಲ.

ಆದರೆ ಮಳೆಗಾಲದಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಮಾಡುವುದಾಗಿ ಗುತ್ತಿಗೆದಾರರು ಹೇಳುತ್ತಾ ಬಂದಿದ್ದರು. ಆದರೆ ಇದೀಗ ಮಳೆಗಾಲ ಆರಂಭವಾಗಿದ್ದು ಚಾಹನಗಳ ಓಡಾಟ ಬಹುತೇಕ ನಿಲುಗಡೆಯಾಗಿದೆ.ಕೆಲ ಜೀಪು ಹಾಗೂ ದ್ವಿಚಕ್ರ ವಾಹನಗಳನ್ನು ಬಿಟ್ಟರೆ ಉಳಿದ ಯಾವುದೇ ವಾಹನಗಳು ಇದರಲ್ಲಿ ಸಂಚರಿಸುವಂತಿಲ್ಲ.

ಮಣ್ಣಿನ ರಸ್ತೆಯಿಡೀ ರಾಡಿ ಎದ್ದಿದೆ.ಹೀಗಾಗಿ ವಾಹನಗಳಲ್ಲಿ ಮಾತ್ರವಲ್ಲ ಪಾದಚಾರಿಗಳು ಕೂಡಾ ಪರದಾಟ ನಡೆಸಬೇಕಾದ ಸಂದರ್ಭ ಬಂದಿದೆ.ಇದರಿಂದಾಗಿ ಈ ಭಾಗದ 300 ಮನೆಗಳಿಗೆ ತೊಂದರೆಯಾಗಿದೆ. ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಸಿ ವಾಹನ ಓಡಾಟಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಬೇಕಿದೆ.

1 comments:

Anonymous said...

NICE COVERAGE

Post a Comment