ಅಂಕಣ
ನಮ್ಮೊಳಗೊಬ್ಬ ಸೂಪರ್ಮ್ಯಾನಿಗೂ ಹೋಲಿಸಲು ಅಸಾಧ್ಯ ಅನ್ನುವವನೊಬ್ಬನಿದ್ದಾನೆ.ಹಗಲು ಕೆಲವು ಸರ್ತಿ ತನ್ನಿರುವನ್ನು ತೋರಿಸಿಕೊಂಡರೆ ರಾತ್ರಿ ಆವರಿಸಿಕೊಂಡೇಬಿಡುತ್ತಾನೆ.ನಮ್ಮ ಜೀವನದ ಆತ್ಮೀಯ ಕೂಡಾ ಅವನ ಹೆಸರು `ಕನಸು'.
ಒಂದೊಂದು ಸರ್ತಿ ಜೋಕರ್ ತರಹ ನಮ್ಮ ರೂಪವನ್ನೇ ವಿರೂಪವಾಗಿ ಇನ್ನೊಂದ್ಸರ್ತಿ ಮಹಾನ್ ತರ್ಲೆಯಾಗಿಯಾವುದೋ ಹುಡುಗಿಯ ಜೊತೆ ನಿಮ್ಮನ್ನು ಪ್ರಣಯರಾಜನನ್ನಾಗಿ ಮಾಡುತ್ತಾನೆ.ಮತ್ತೊಂದುಸಲ ರಕ್ಕಸನಾಗಿಇನ್ನೂ ಕೆಲಸರ್ತಿ ದೇವರೆ ಆಗಿ ನಮ್ಮನ್ನೆ ನಮಗೆ ಕೈಮುಗಿಸುತ್ತಾನೆ.
ಹೀಗೆ ಬಹುರೂಪಿಯಾಗಿ ಸಾಹಸಗಳನ್ನು ಮೆರೀತಾನೆ.ಇವನಮುಂದೆ ಸೂಪರ್ ಮ್ಯಾನ್ ಹ್ಯಾರಿಪಾಟರ್ ಎಲ್ಲರೂಗೌಣ.ಯಾವ ನಿರ್ದೇಶಕನ ಕಲ್ಪನೆಗೂ ಚಿತ್ರಕಥೆಗೂ ಕ್ಯಾಮರಾದ ಚೌಕಟ್ಟಿಗೂ ಸಿಗದೆ ವಿಚಿತ್ರವಾದ ವರ್ಣರಂಜಿತ ಚಲನಚಿತ್ರವನ್ನು ಉಣಿಸಿ ಆಸೆ ನಿರಾಸೆಗಳನ್ನ ಸರಿಸಮವಾಗಿ ಕೊಟ್ಟು ಬೆಳಗ್ಗಿನ ಅಲಾರಮ್ಮಿಗೋ,ಕೋಳಿಕೂಗಿಗೋ,ಅಥವಾ ಮುದ್ದುಕಂದನ ಅಳುವಿಗೋ ಹೆದರಿ ಓಡಿಹೋಗುವಾಗ ಮಹಾಪುಕ್ಕಲನಾಗಿ ಕಾಣಿಸುತ್ತಾನೆ.
ಆದ್ರೆ ಮತ್ತೆ ಮತ್ತೆ ಬಯಕೆಗಳ ಬುತ್ತಿಯನ್ನು ಹೊರನೋಟಕ್ಕಷ್ಟೇ ಜಾಹೀರಾತಿನತರಹ ತೋರಿಸಿ ನಮ್ಮನ್ನು ಜೀವನೋತ್ಸಾಹಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಇದ್ದರೆ ಕನಸಿಗೆ ಮಾತ್ರ. ಈ ನಮ್ಮ ಜೀವದ ಗೆಳೆಯ ಸಾವನ್ನೂ ದಯಪಾಲಿಸಲೂಬಹುದುಸಾವನ್ನು ಗೆದ್ದು ತೋರಿಸಲೂಬಹುದು.
ಒಟ್ಟಿನಲ್ಲಿಕನಸೇ ನಿನಗೊಂದು ದೊಡ್ಡ ಸಲಾಮು.
ಕನಸಲ್ಲಿ ನಾನೊಬ್ಬ ಬರಹಗಾರನಾಗುತ್ತಿದ್ದೇನೆ ಅದನ್ನ `ಈ ಕನಸಲ್ಲಿ' ತುಂಬುತ್ತಿದ್ದೇನೆ,ಒಂದಷ್ಟು ಜನ ಓದುತ್ತಿದ್ದಾರೆ ಅವರನ್ನು ಕಂಡು ನನಗೆ ಭಯ ಆಗೋಕೆ ಶುರುವಾಗುತ್ತೆ ನಾನು ಓಡುತ್ತೇನೆ ಸಂದುಗೊಂದುಗಳಲ್ಲಿ ಬಯಲುಗದ್ದೆಗಳಲ್ಲಿ ಬೆಟ್ಟಗುಡ್ಡಗಳಲ್ಲಿ.ಮೊದಲಿಗೆ ಸ್ಲೋಮೋಶನ್ ನಿಂದ ಶುರುವಾಗಿ ನಂತರ ರಾಕೆಟ್ಟಿನ ವೇಗದಷ್ಟುಕೆಳಗಡೆಯಿಂದ ನಾಯಿಯೊಂದು ಉದ್ದದ ಕೋಲು ಹಿಡಿದುಕೊಂಡು ಎಳೆದುಹಾಕಲು ಅಟ್ಟಿಸಿಕೊಂಡು ಬರುತ್ತಿದೆ ನನ್ನಿಂದ ಕೂಗಲೂ ಆಗುತ್ತಿಲ್ಲ .ಅಷ್ಟರಲ್ಲಿ ರಪ್ಪನೆ ಆನೆಯಕಿವಿಯಷ್ಟಗಲದ ಕೈಯ್ಯೊಂದು ನನ್ನ ಮುಖಕ್ಕೆ ಅಪ್ಪಳಿಸುತ್ತದೆ ಗಾಭರಿಯಾಗಿ ಎಚ್ಚರವಾಗುತ್ತೇನೆ ನನ್ನ ಮಗಳ ಮುದ್ದುಕೈ ನನ್ನ ಮುಖವನ್ನು ಸವರುತ್ತಿದೆ!
ಕ್ಷಮಿಸಿ ನನಗೀಗ ಎಚ್ಚರವಾಗಿದೆ ಕನಸಿನ ಗುಂಗಲ್ಲಿಯೇ ಪುಟ್ಟ ಮಗಳ ಮುಖವನ್ನೇ ನೋಡುತ್ತಿದ್ದೇನೆ ಇಷ್ಟು ಪುಟ್ಟ ಕೈ ಅಷ್ಟಗಲ ಹೇಗಾಯಿತೆಂದು ತೋಚುತ್ತಿಲ್ಲ ಮತ್ತೆಕನಸು ಆವರಿಸಬಹುದು ಆಗ ಕನಸು ಕಾಣ್ತಾನೆ ಕನಸುಗಳ ಸವಿಯನ್ನೇ ಗೀಚುತ್ತೇನೆ.
- ವಿನು ಬಳಂಜ
9481247326
ಚಲನ ಚಿತ್ರ ನಿರ್ದೇಶಕರು,
ಬೆಂಗಳೂರು.
Subscribe to:
Post Comments (Atom)



4 comments:
kanasu kaanuttha vaasthavavannu mari bedi, jeevanotsahakke kanasinashte vaasthavavuu beku
ya surely dreams are the real wealth..,. wounderful vinuji
arun kumar sullia
wonderful vinu and ekanasu.........
really all articles coming gr8.......
week by week it will let us more interested to read
vinu balanja avare nivu nodoodikke sundaravaagiddira...
chaithanya kamath
Post a Comment