ಪ್ರಾದೇಶಿಕ ಸುದ್ದಿ
ಕಾಸರಗೋಡು: ಗಡಿನಾಡ ಕಾಸರಗೋಡಿನಲ್ಲಿ ಇದೀಗ ಹಳೆಯ ಪಾತ್ರೆಗಳು, ಪುರಾತನ ಸುರಂಗ ಪತ್ತೆಯಾಗುವುದರೊಂದಿಗೆ ಅನೇಕ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿ ಅಗಲ್ಪಾಡಿ ಕುಂಬ್ಡಾಜೆ ಯಲ್ಲಿ ಈ ಸುರಂಗ ಹಾಗೂ ಪಾತ್ರೆಗಳು ಪತ್ತೆಯಾದವು. ಅನ್ನಪೂರ್ಣೇಶ್ವರೀ ಹೈಸ್ಕೂಲ್ ಬಳಿಯ ಕರುವಲ್ಲಡ್ಕದ ಮುಹಮ್ಮದ್ ಎಂಬವರ ಮನೆ ಹಿತ್ತಿಲಲ್ಲಿ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಈ ಸುರಂಗ ಪತ್ತೆಯಾಯಿತು. ಇದರೊಳಗೆ ಕೆಲವೊಂದು ಮಣ್ಣಿನ ಪಾತ್ರೆಗಳೂ ಇದ್ದವು. ಈ ಸುರಂಗದ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ.
Subscribe to:
Post Comments (Atom)
Video

0 comments:
Post a Comment