ವೈವಿಧ್ಯ
ಹೆಸರಿಗಷ್ಟೇ ಮಳೆಗಾಲ ಪ್ರಾರಂಭವಾಗಿದೆಯಾದರೂ ಬಿದಿರ ಮೆಳೆಗಳ ಪಾಲಿಗವು `ಮರುಸೃಷ್ಠಿ'ಯ ಸಮಯವಾಗಿತ್ತು!. ಮಳೆ ಬೀಳತೊಡಗಿತೆಂದರೆ ಬಿದಿರ ಮೆಳೆಗಳು ಆನಂದದಿಂದ ವಿಹರಿಸುತ್ತವೆ... ಹನಿ ಹನಿ ನೀರನ್ನು ತೊಟ್ಟಿಕ್ಕುತ್ತಾ ಮಳೆಗಾಲದ ಕುಳಿರ್ ಗಾಳಿಗೆ ಮೈಯೊಡ್ಡಿ ಆನಂದದಿಂದ ವಿಹರಿಸುತ್ತವೆ... ಇದೀಗ ಬಿದಿರ ಕಂದಮ್ಮಗಳು ಭುವಿಯೊಡೆದು ಹೊರಬರಲಾರಂಭಿಸಿವೆ... ಹೀಗೆ ಬಿದಿರ ವಂಶೋದ್ಧಾರ! ಈ ಬಿದಿರ ಮರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಕರಾವಳಿಯಲ್ಲಿ `ಕಣಿಲೆ'ಯೆಂದೇ ಖ್ಯಾತಿ ಪಡೆದ ಈ ಬಿದಿರ ಕೂಸು ಉತ್ತಮ ಆಹಾರವೂ ಹೌದು. ಇದೀಗ ಕರಾವಳಿಯಿ ತುಂಬೆಲ್ಲಾ ಬಿದಿರ ಕೂಸಿನ ಮಾರಾಟದ ಭರಾಟೆ. ತರಕಾರಿ ಅಂಗಡಿ, ಸಂತೆ ಮಾರುಕಟ್ಟೆಗಳಲ್ಲಿ, ರಸ್ತೆ ಬದಿಯ ಫೂಟ್ ಪಾತ್ಗಳಲ್ಲಿ ರಾಶಿ ರಾಶಿ ಕಣಿಲೆಗಳು ಕಾಣಸಿಗುತ್ತವೆ. ರುಚಿಕರವಾದ ವೈವಿಧ್ಯಮಯ ಅಡುಗೆಗಳಗಿಗಾಗಿ ಬಿದಿರ ಸಂತತಿಯನ್ನು ನಾಶಪಡಿಸಲಾಗುತ್ತಿದೆ. ನಿರಂತರವಾಗಿ ಈ ರೀತಿ ಬಿದಿರ ನಾಶದಿಂದ ಮುಂದೊಂದು ದಿನ ಈ ಸಂತತಿ ಮರೆಯಾಗುವುದರಲ್ಲಿ ಸಂದೇಹವಿಲ್ಲ.
Subscribe to:
Post Comments (Atom)
Video

0 comments:
Post a Comment