ಸಿನೆಮಾ
ಇದೊಂದು ಪುಟ್ಟ ಹಳ್ಳಿ...ಸರಯೂ ನದಿ ತೀರದಲ್ಲಿ ಮೆಂಪಿ ಬೆಟ್ಟದ ತಪ್ಪಲಲ್ಲಿರುವ ಈ ಸುಂದರ ಹಳ್ಳಿಗೆ ಸರಿಸಾಟಿ ಇನ್ನೊಂದಿಲ್ಲ. ಇಲ್ಲಿನ ಜನರು ಸರಳ ಜೀವಿಗಳು. ದಿನಬೆಳಗಾದರೆ ಬದುಕಿನ ಜಂಜಡಗಳೊಂದಿಗೆ ಸೆಣಸಾಡುತ್ತಾ ಕತ್ತಲಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುವ ಕಷ್ಟಜೀವಿಗಳು. ಪಟ್ಟಣದ ಥಳುಕು-ಬಳುಕಿನ ಜೀವನ ಇನ್ನೂ ಇವರನ್ನು ಸೋಕಿಲ್ಲ. ಈ ಹಳ್ಳಿಯಲ್ಲಿ ಶಾಲೆಯಿಂದ ಹಿಡಿದು ಪೋಸ್ಟಾಫೀಸಿನವರೆಗೆ ಎಲ್ಲವೂ ಇದೆ...ಇವೆಲ್ಲಕ್ಕಿಂತ ಹೆಚ್ಚಾಗಿ ಶಾಂತಿ ನೆಮ್ಮದಿಗಳಿವೆ. ಇದೊಂದು ಮಾದರಿ ಹಳ್ಳಿ...ಇದರ ಹೆಸರು ಮಾಲ್ಗುಡಿ. ಆದರೆ ದುರಾದೃಷ್ಟವಶಾತ್ ಈ ಹಳ್ಳಿ ಕೇವಲ ಕಲ್ಪನೆಯಲ್ಲಷ್ಟೇ ಜೀವಂತವಾಗಿದೆ...ವಾಸ್ತವದಲ್ಲಲ್ಲ.
ಹೌದು! ಲೇಖಕ ಆರ್. ಕೆ ನಾರಾಯಣ್ ಅವರ ಕಲ್ಪನೆಯ ಹಳ್ಳಿ ಮಾಲ್ಗುಡಿ. ಅವರು ಬರೆದ ಕಥೆಗಳೆಲ್ಲವೂ ಮಾಲ್ಗುಡಿಯ ಕಥೆಗಳೇ...ಮಲೆನಾಡಿನ ಸರಳ ಜೀವನ ಶೈಲಿಯಿಂದ ಅತಿಯಾಗಿ ಪ್ರೇರಿತರಾದ ನಾರಾಯಣ್ ತಮ್ಮ ಕಲ್ಪನೆಯಲ್ಲೇ ಹಳ್ಳಿಯೊಂದನ್ನು ಕಟ್ಟಿದರು...ಆ ಹಳ್ಳಿಯ ತುಂಬಾ ಪಾತ್ರಗಳನ್ನು ಸೃಷ್ಟಿಸಿದರು...ಪಾತ್ರಗಳಿಗೆ ಜೀವ ತುಂಬಿದರು...ಆ ಪಾತ್ರಗಳ ಕಥೇಯನ್ನೇ ಬರಹ ರೂಪಕ್ಕಿಳಿಸಿದರು. ಆ ಕಥೆಯೇ... ಮುಂದೆ ಮಾಲ್ಗುಡಿ ಡೇಸ್ ಎಂಬ ಹೆಸರಿನಲ್ಲಿ ಲೋಕವಿಖ್ಯಾತವಾಯಿತು.
ಆರ.ಕೆ ನಾರಾಯಣ್ ಬರೆದ'ಮಾಲ್ಗುಡಿ ಡೇಸ್`ಗೆ ಚಿತ್ರರೂಪ ನೀಡಿದ್ದು ಕನ್ನಡದ ಖ್ಯಾತ ನಟ ಶಂಕರ್ ನಾಗ್. 1987ರಲ್ಲಿ ಶಂಕರ್ ನಾಗ್ ನಾರಾಯಣ್ ಅವರ ಮಾಲ್ಗುಡಿಯ ಕಥೆಗಳನ್ನು ಧಾರಾವಾಹಿ ರೂಪಕ್ಕಿಳಿಸಿದರು. ಮೂವತ್ತೊಂಭತ್ತು ಕಂತುಗಳಲ್ಲಿ ಧಾರಾವಾಹಿ ಮೂಡಿಬಂತು. ವೆಂಡರ್ ಆಫ್ ಸ್ವೀಟ್ಸ್, ಎಂಜಿನ್ ಟ್ರಬಲ್, ಸ್ವಾಮಿ ಆಂಡ್ ಥೀಫ್, ಸ್ವಾಮಿ ಆಂಡ್ ಫ್ರೆಂಡ್ಸ್, ದಿ ಮಿಸ್ಸಿಂಗ್ ಮೇಲ್.....ಹೀಗೆ ನಾರಾಯಣ್ ಅವರ ಜನಪ್ರಿಯ ಕಥೆಗಳೆಲ್ಲವೂ ಮಾಲ್ಗುಡಿ ಡೇಸ್ ಹೆಸರಿನ ಧಾರಾವಾಹಿಯಾಗಿ ರೂಪಾಂತರಗೊಂಡಿತು. ಧಾರಾವಾಹಿಯ ನಿರ್ದೇಶಕರಾಗಿ ಪ್ರತಿಯೊಂದು ಕಥೆಯನ್ನೂ ನೈಜವಾಗಿ ತೆರೆಗೆ ತಂದ ಶಂಕರ್ ಪ್ರತಿಭೆ ನಿಜಕ್ಕೂ ಪ್ರಶಂಸನಾರ್ಹ. ಬಾಲ ಕಲಾವಿದನಾಗಿ ತನ್ನ ಮುಗ್ಧತೆ ಹಾಗೂ ತುಂಟತನದಿಂದ ವೀಕ್ಷಕರ ಮನಸೂರೆಗೊಂಡ ಮಾಸ್ಟರ್ ಮಂಜುನಾಥ್ ಅವರ ಅದ್ಭುತ ನಟನೆ ಎಂದೆಂದೂ ನೆನಪಿರುವಂತಹದ್ದು.
ಶಂಕರ್ ನಿರ್ದೇಶನ ಮಾಲ್ಗುಡಿ ಡೇಸ್ ಯಶಸ್ವಿಯಾದುದು ಅದರ ಸರಳತನದಿಂದ. ಸಾಮಾನ್ಯ ವರ್ಗದ ದೈನಂದಿನ ಜೀವನದ ಜಂಜಡಗಳೇ ಈ ಧಾರಾವಾಹಿಯ ಕಥಾವಸ್ತು. ಮಾಲ್ಗುಡಿ ಡೇಸ್ನ ಒಂದು ಎಪಿಸೋಡ್ ವೀಕ್ಷಿಸಿದರೆ ಸಾಕು ಮಲೆನಾಡ ಹಳ್ಳಿಯೊಂದನ್ನು ಸುತ್ತಿ ಬಂದ ಅನುಭವ...ಕೆಲವೊಮ್ಮೆ ಇದು ಧಾರಾವಾಹಿಯಲ್ಲ ನಮ್ಮದೇ ಮನೆಯ ಕಥೆ ಎಂಬ ಭ್ರಮೆ.
ವೆಂಡರ್ ಆಫ್ ಸ್ವೀಟ್ಸ್, ಸ್ವಾಮಿ ಆಂಡ್ ಫ್ರೆಂಡ್ಸ್,ಇಂಜಿನ್ ಟ್ರಬಲ್... ಇವೆಲ್ಲವೂ ತೀರಾ ಸರಳ ಕಥಾವಸ್ತುವನ್ನಿಟ್ಟುಕೊಂಡು ಹೆಣೆದ ಕಥೆಗಳು. ಮಾನವ ಜೀವನದ ಸೂಕ್ಷ್ಮತೆಗಳನ್ನು ವೀಕ್ಷಕನ ಮನನಾಟುವಂತೆ ಅತ್ಯಂತ ಸರಳ ರೂಪದಲ್ಲಿ ತಮ್ಮ ಕಥೆಗಳಲ್ಲಿ ಬಿಂಬಿಸಿದ್ದಾರೆ ನಾರಾಯಣ್...ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಧಾರಾವಾಹಿ ರೂಪಕ್ಕಿಳಿಸಿದ್ದಾರೆ ಶಂಕರ್. ವೆಂಡರ್ ಆಫ್ ಸ್ವೀಟ್ಸ್ನಲ್ಲಿ ತಂದೆ ಜಗನ್ ಹಾಗೂ ಮಗ ಮಾಲಿ ನಡುವೆ ಕಂಡು ಬರುವ ಜನರೇಶನ್ ಗ್ಯಾಪ್, ಸ್ವಾಮಿ ಆಂಡ್ ಥೀಫ್ನಲ್ಲಿ ತಂದೆ ತನ್ನ ಪುಟ್ಟ ಮಗನ ಮೇಲೆ ಹೇರುವ ಒತ್ತಡಗಳು, ಇಂಜಿನ್ ಟ್ರಬಲ್ನಲ್ಲಿ ಸಾಮಾನ್ಯ ವರ್ಗದ ವ್ಯಕ್ತಿ ಶೇಷಾದ್ರಿ ಲಕ್ಕಿಡಿಪ್ನಲ್ಲಿ ಗೆದ್ದು ಪಡೆದ ರೋಡ್ ರೋಲರ್ ಆವಾಂತರ ...ಹೀಗೆ ಎಲ್ಲವೂ ನಮ್ಮ ಸಮಾಜದ ಪ್ರಸ್ತುತ ವಿಚಾರಗಳೇ...
ಮಾಲ್ಗುಡಿ ಡೇಸ್ ಅನ್ನು ಮೂಲವಾಗಿ ಹಿಂದಿ ಭಾಷೆಯಲ್ಲಿ ಚಿತ್ರೀಕರಿಸಿದ್ದರೂ ಬಳಿಕ ಕನ್ನಡ,ತಮಿಳು,ಮಲಯಾಳಂ ಹೀಗೆ ನಾನಾ ಭಾಷೆಗಳಿಗೆ ಡಬ್ ಮಾಡಲಾಗಿದೆ. ಧಾರಾವಾಹಿಯ ಟೆಲೆಕಾಸ್ಟಿಂಗ್ ರೈಟನ್ನು ದೂರದರ್ಶನ, ಸೋನಿ ಹಾಗೂ ಟಿವಿ ಏಷ್ಯಾಗಳಿಗಷ್ಟೇ ನೀಡಲಾಗಿದೆ. ಎಲ್.ವೈದ್ಯನಾಥನ್ ಅವರ ಇಂಪಾಂದ ಹಿನ್ನೆಲೆ ಸಂಗೀತ ಧಾರಾವಾಹಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.
ವೈಶಾಲಿ ಕಾಸರವಳ್ಳಿ, ಅನಂತ್ ನಾಗ್, ಗಿರೀಶ್ ಕಾನರ್ಾಡ್...ಹೀಗೆ ಕನ್ನಡ ಚಿತ್ರರಂಗದ ಮೇರು ಕಲಾವಿದರೆಲ್ಲರೆಲ್ಲಾ ಮಾಲ್ಗುಡಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ರಚಿಸಿದ ಸ್ಕೆಚ್ಗಳು ಧಾರಾವಾಹಿಗೆ ಹೊಸ ಲುಕ್ ನೀಡಿವೆ. ಧಾರಾವಾಹಿ ನಿಮರ್ಾಣಗೊಂಡು ಇಪ್ಪತ್ತು ವರುಷಗಳೇ ಕಳೆದಿವೆ. ಆದರೆ ಇಂದಿಗೂ ಮಲೆನಾಡ ಜೀವನದ ಕಂಪನ್ನು ಸೂಸೂತ್ತಾ ಜನಮನದಲ್ಲಿ ನೆಲೆನಿಂತಿದೆ.
- ಅಕ್ಷತಾ ಸಿ.ಎಚ್
Subscribe to:
Post Comments (Atom)
Video

13 comments:
haleya nenapu marukalisuva chitragalu, katha vasthu tumba apyaaya.... lekhana chennagide... aa dinagalu enduu marali baaravu...ide vishaada...
malgudi days....one of the best series among tv series....article is good...
olden days are golden days ....nice article..
kuwepug marl
arambaha shoortva annodakke ekanasu udaharane....
chandra shekara, m prabhu, shashank & friends
website maadi, basalaguttiddeve antha haakodu sulabha adre maadodu kashta........
ಮಾಲ್ಗುಡಿ ಡೇಸ್ ನನ್ನ ಅಚ್ಚುಮೆಚ್ಚಿನ ಧಾರಾವಾಹಿ. ನನ್ನ ಕೈಗೆ ಮೊಬೈಲ್ ಬಂದಾಗ ಅವರಿವರಲ್ಲಿ ಕಾಡಿ ಹುಡುಕಿ ಅದರ ಟೈಟಲ್ ಸಾಂಗ್ ಟ್ಯೂನನ್ನು ನನ್ನ ರಿಂಗ್ ಟೋನ್ ಗೆ ಹಾಕಿದ್ದೇನೆ.. ಮೊಬೈಲ್ ಬದಲಾದರೂ ರಿಂಗ್ ಟೋನ್ ಇನ್ನೂ ಅದೇ ಇದೆ. ಆವಾಗ ನಮ್ಮನೆಯಲ್ಲಿ ಟಿವಿ ಇರ್ಲಿಲ್ಲ. ಈ ಧಾರಾವಾಹಿ ನೋಡಲೆಂದೇ ದೂರದ ಗೆಳೆಯನ ಮನೆಗೆ ಹೋಗುತ್ತಿದ್ದೆ.. ಬಹಳ ಸುಂದರವಾದ ಕಥೆ.., ಆಪ್ಯಾಯಮಾನವಾದ ದೃಶ್ಯ, ಸರಳವಾದ ಆದರೆ ಇಂಪಾದ ಸಂಗೀತ ಉತ್ತಮ ನಿರ್ದೇಶನ.. ನನಗೆ ಮತ್ತೆ ಆ ಧಾರಾವಾಹಿಯನ್ನು ಎಲ್ಲೂ ನೋಡಲು ಸಾಧ್ಯವಾಗಿಲ್ಲ.. ಖಾಸಗಿ ಚಾನೆಲಲ್ಲಿ ಬರುತ್ತಿದೆ ಅಂತ ಕೇಳಿದ್ದೆ.. ಯಾವ ಸಮಯ ಯಾವ ಚಾನಲ್ ಅಂತ ವಿವರ ಸಿಕ್ಕಿರಲಿಲ್ಲ.. ಅದರ ಸಿ.ಡಿ. ಎಲ್ಲಾದರು ಇದ್ದರೆ ನನಗೆ ತಿಳಿಸೆ.
ekanasu marla epa change avere badalaguthide yavaga
olleya writeup akshata....olleya Inukunota
ಈ ಕನಸಿನಲ್ಲಿ ಬದಲಾವಣೆಯನ್ನು ಸಧ್ಯದಲ್ಲೇ ನಿರೀಕ್ಷಿಸಿರಿ yavaga when poora pokkade
naavu badalaaguttiddeve annodu nodi nodi naavu halabaraaguttiddeve
ತುಂಬಾ ಧನ್ಯವಾದಗಳು. ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದು. ವಿಶಾಲ ಹೃದಯದಿಂದ ನಮ್ಮನ್ನು ತೆಗಳಿದ ಎಲ್ಲಾ ಓದುಗ ಮಿತ್ರರಿಗೂ ಕೃತಜ್ಞತೆಗಳು. ನಿಮ್ಮಿಂದ ಇನ್ನೂ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೇವೆ.
- ಈ ಕನಸು ತಂಡ
nimma hesaru thilisiddare innu uthamavagiruthithu.
nimma ella anisikegalannu mail madabahudu. hesaru illi hakuvudakke enadaru thondareiddare namage personal mail madabahudu
info@ekanasu.com,webmaster@ekanasu.com,editor@ekanasu.com
Team ekanasu
Post a Comment