ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ನುಡಿಸಿರಿ

ಮೂಡಬಿದಿರೆ: ಆಳ್ವಾಸ್ ನುಡಿಸಿರಿ 2009ರ ಅಂಗವಾಗಿ ಅ.11 ರಂದು ಬೆಳಗ್ಗೆ 10.30ಕ್ಕೆ ಮೂಡಬಿದಿರೆ ವಿದ್ಯಾಗಿರಿಯ ಡಾ.ಶಿವರಾಮ ಕಾರಂತ ಸಭಾಂಗಣದಲ್ಲಿ ನುಡಿಸಿರಿ ಹಿತೈಷಿಗಳ ಸಮಾಲೋಚನಾ ಸಭೆ ಏರ್ಪಡಿಸಲಾಗಿದೆ. ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಕೆ ಚಿನ್ನಪ್ಪ ಗೌಡರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಡಾ. ಮೋಹನ ಆಳ್ವರು ಉಪಸ್ಥಿತರಿರುತ್ತಾರೆ.


ಕಳೆದ ಐದು ವರ್ಷಗಳಿಂದ ಆಳ್ವಾಸ್ ಎಜುಕೇಶನ್ ಫೌಂಡೇಷನ್ ನಿರಂತರ ಆಳ್ವಾಸ್ ನುಡಿಸಿರಿ ಎಂಬ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಏರ್ಪಡಿಸುತ್ತಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಇದೇ ಬರುವ ನವೆಂಬರ್ 6,7, ಮತ್ತು 8ರಂದು ವಿದ್ಯಾಗಿರಿಯಲ್ಲಿ ಡಾ.ಹಂ.ಪಾ.ನಾಗರಾಜಯ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಬಾರಿಯ ನುಡಿಸಿರಿ ನಡೆಯಲಿದೆ. ಆಳ್ವಾಸ್ ಸಂಸ್ಥೆಯ ಹಿತೈಷಿಗಳು, ಕನ್ನಡ ನಾಡು ನುಡಿಯ ಬಗೆಗಿನ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗಿಗಳಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 comments:

Anonymous said...

Enri govindas hogi Alvasa?

Anonymous said...

govindaas... alvaas ... hodalalle aavaas.....

Post a Comment