ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ನುಡಿಸಿರಿ

ಆಳ್ವಾಸ್ ಚಿತ್ರಸಿರಿ ಉದ್ಘಾಟಿಸಿ ಡಾ.ನಾದಾ ಶೆಟ್ಟಿ ಪ್ರಶ್ನೆ

ವಿದ್ಯಾಗಿರಿ(ಆಳ್ವಾಸ್ ಮೂಡಬಿದಿರೆ): ಮೊನಾಲಿಸಾವನ್ನು ಚಿತ್ರಿಸಿದ ಡಾವೆಂಚಿಗಿಂತ ನಮ್ಮ ರವಿವರ್ಮ ಏನು ಕಡಿಮೆ? ಆದರೆ ರವಿವರ್ಮರ ಚಿತ್ರಗಳಿಗೆ ಸಾಕಷ್ಟು ಜಾಗತಿಕ ಮನ್ನಣೆ ಸಿಕ್ಕಿಲ್ಲ. ಭಾರತೀಯ ಚಿತ್ರಕಲೆ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಹೊಂದಿದ್ದರೂ ಮಾರುಕಟ್ಟೆ ಮತ್ತು ಸಾಕಷ್ಟು ಪ್ರಚಾರದ ಕೊರತೆಯನ್ನು ಎದುರಿಸುತ್ತಿದೆ. ಗುಣಮಟ್ಟದ ಜತೆಗೆ ಈ ಕುರಿತೂ ಕಲಾವಿದರು ಮತ್ತು ಕಲಾಸಕ್ತರು ಗಮನಹರಿಸಬೇಕಿದೆ ಎಂದು ವಿಮರ್ಶಕ ಡಾ.ನಾ ದಾಮೋದರ ಶೆಟ್ಟಿ ಹೇಳಿದರು.



ಅವರು ವಿದ್ಯಾಗಿರಿಯಲ್ಲಿ ಮಂಗಳವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಆಳ್ವಾಸ್ ಚಿತ್ರಸಿರಿ 2009ನ್ನು ಉದ್ಘಾಟಿಸಿ ಮಾತನಾಡಿದರು.
ಧ್ಯಾನಸ್ಥ ಸ್ಥಿತಿಯಲ್ಲಿ ಕಲೆ ಅರಳುತ್ತದೆ. ರೇಖೆ, ಬಣ್ಣಗಳಿಗೆ ಜೀವ ಆವಾಹನೆಗೊಂಡಾಗ ಕಲೆಗೆ ದೇವತಾ ಶಕ್ತಿ ಲಭಿಸುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿ ಗಾಯತ್ರಿ ಉಡುಪ ಅವರು ಕಲೆಯಲ್ಲಿ ಒಂಬತ್ತು ಪಾಲು ಮಾನಸಿಕತೆ ಒಂದು ಪಾಲು ಕೈಕೆಲಸ ಎಂದು ಹೇಳಿದರು. ಶಿಲ್ಪಸಿರಿ, ಚಿತ್ರಸಿರಿ, ನುಡಿಸಿರಿಗಳನ್ನು ಆಯೋಜಿಸಿ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಆಳ್ವರು ರಾಷ್ಟ್ರಸಿರಿ ಎಂದರು.ಶಿಬಿರದಲ್ಲಿ ರಾಜ್ಯದ 26 ಖ್ಯಾತ ಕಲಾವಿದರು ಭಾಗವಹಿಸುತ್ತಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಂ.ಮೋಹನ ಆಳ್ವ ವಹಿಸಿದ್ದರು. ಅವರು ಬದುಕಿಗೆ ಕಲೆ ಮೆರುಗು ಕೊಡುತ್ತದೆ. ಜೀವನದ ದಾರಿಯಲ್ಲಿ ಸಂತೋಷ, ನೆಮ್ಮದಿಗಳನ್ನು ನೀಡುತ್ತದೆ ಎಂದು ಹೇಳಿದರು. ಶಿಬಿರದ ಸಂಚಾಲಕ ಕೋಟಿಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಮೌಲ್ಯ ಜೀವನ್ ನಿರೂಪಿಸಿದರು.

0 comments:

Post a Comment