ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಮಂಗಳೂರು: ವರ್ಷ ಕ್ರಿಯೇಷನ್ಸ್ ಆಶ್ರಯದಲ್ಲಿ ನಿರ್ಮಾಣಗೊಂಡ `ಈಕನಸು' ಅಂತರ್ಜಾಲ ಕನ್ನಡ ವಾರಪತ್ರಿಕೆಯನ್ನು ಚಿತ್ರ ನಿರ್ದೇಶಕ ಜೋಗಿ(ಎಚ್.ಗಿರೀಶ್ ರಾವ್) ಶನಿವಾರ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅನಾವರಣಗೊಳಿಸಿದರು.




ಮಾಧ್ಯಮ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಇಂದಿನ ದಿನಗಳಲ್ಲಿ ಯುವ, ಉದಯೋನ್ಮುಖ ಬರಹಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗುತ್ತಿಲ್ಲ. ಇದೀಗ ಈ ಕನಸು ವೆಬ್ ಪತ್ರಿಕೆ ಇದನ್ನು ಸಮರ್ಥವಾಗಿ ನಿರ್ವಹಿಸಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಚಿಕ್ಕ ಚೊಕ್ಕ ಬರಹಗಳ ಮೂಲಕ ಸಮಾಜಮುಖಿಯಾಗಿ ಈ ಕನಸು ಬೆಳಗಲಿ ಎಂದು ಆಶಿಸಿದರು.

ಪತ್ರಿಕೆಯ ಸಂಪಾದಕ ಹರೀಶ್ ಕೆ. ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪಕ ಗಣೇಶ್ ಹೊಸಮನೆ ವಂದಿಸಿದರು. ಕಿರಣ್ ಸಹಕರಿಸಿದರು.

ಮುಂದೆ ಓದಿ



ಪ್ರಿಯ ಓದುಗರೇ...

ನಮ್ಮ ಕನಸಿಗೊಂದು ಅರ್ಧ ನೀಡುತ್ತಿದ್ದೇವೆ. ಕನಸಿನ ಕ್ಯಾನ್ವಾಸ್ ತೆರೆದಿಟ್ಟಿದ್ದೇವೆ. ಒಂದಷ್ಟು ಬಣ್ಣಗಳನ್ನು ಅಲ್ಲಲ್ಲಿ ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಕನಸು ಮನದ ತುಂಬೆಲ್ಲಾ ಮುತ್ತುಕ್ಕುತ್ತಿವೆ. ಕನಸಿನ ಭಾವನೆಗಳಿಗೆ ಸೂಕ್ತ ಅರ್ಧ ಹುಡುಕುವ ಪ್ರಯತ್ನದಲ್ಲಿ ನಾವಿದ್ದೇವೆ. ಅದಕ್ಕೆ ಸಾಥ್ ನೀಡಲು ನೀವೆಲ್ಲಾ ಇದ್ದೀರೆಂಬ ನಂಬಿಕೆ ಭರವಸೆ ನಮ್ಮದು. ಕ್ಯಾನ್ವಾಸ್ ವರ್ಣ ರಂಜಿತವಾಗಿದ್ದಲ್ಲಿ
ನೋಡಲು ಅಂದ. ಅದಕ್ಕೆ ನಿಮ್ಮ ಸಹಕಾರದ ಅಗತ್ಯವಿದೆ. ತಮ್ಮ ಅನುಭವ , ಅಭಿಪ್ರಾಯ, ಕನಸುಗಳಿಗೆ `ಈ ಕನಸು' ಮುಕ್ತವೇದಿಕೆಯಾಗಲಿದೆ. ಕನಸಿನ ಕಥೆಗಳು, ಮನಸ್ಸಿನ ಭಾವನೆಗಳು, ಬರೆಯುವ ತುಡಿತಗಳು ಇಂದಿನಿಂದ `ಈ ಕನಸಿನೊಂದಿಗೆ' ಸಾಗಲಿ. ಹಚ್ಚ ಹಸಿರ ನಿಸರ್ಗ ಸೌಂದರ್ಯದಲ್ಲಿ ವಿಹರಿಸಿದಾಗ ದೊರಕುವ ಆನಂದ ನಮ್ಮದಾಗಬೇಕಾಗಿದೆ. ಆಗ ಮಾತ್ರ ಕನಸು ನನಸಾದ ಅನುಭವ ಪ್ರಾಪ್ತಿಯಾಗುವುದು...ಶುಭವಾಗಲಿ...
-ಸಂ.

ಮುಂದೆ ಓದಿ

ಪ್ರಿಯ ಓದುಗರೇ...
ಈ ಬಾರಿ ನಮ್ಮ ಕಾರಿಡಾರ್ ಅಂಕಣಕ್ಕೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ವೃಂದ ಸ್ಪಂದಿಸಿದೆ. ಉತ್ಸಾಹದಿಂದ ಮುಂದೆ ಬಂದು ಲೇಖನಗಳನ್ನು ಬರೆದಿದ್ದಾರೆ. ತನ್ಮೂಲಕ ಹೊಸ ಮಾಧ್ಯಮ ಬರಹಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಪ್ರಯತ್ನಕ್ಕೆ ಕೈಯಿಕ್ಕಿದ್ದಾರೆ. ಒಪ್ಪು ತಪ್ಪು ಸಹಜ. ಅವುಗಳನ್ನು ತಿದ್ದಿ ತೀಡಿದ್ದೇ ಆದಲ್ಲಿ ಮುಂದೊಂದು ದಿನ ಉತ್ತಮ ಬರಹಗಾರರಾಗುವುದರಲ್ಲಿ ಸಂದೇಹವೇ ಇಲ್ಲ. ಏನೇ ಇರಲಿ ಉತ್ಸಾಹದ ಪ್ರಯತ್ನಕ್ಕೆ `ಈ ಕನಸು' ವೇದಿಕೆ ಒದಗಿಸಿಕೊಟ್ಟಿದೆ. ಪ್ರೋತ್ಸಾಹಿಸಿದ ಕಾಲೇಜಿನ ಪ್ರಾಂಶುಪಾಲರಿಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಿಗೂ ಕೃತಜ್ಞತೆಗಳು.
- ಸಂ.


ತಾಯಿ

ತಾಯಿ ನಿನ್ನ ಮಡಿಲ ಸ್ಪರ್ಶ
ನೀಡಿತು ಹಿತವಾದ ತಂಪು
ತಾಯಿ ನಿನ್ನ ಲಾಲಿ ಹಾಡು
ನೀಡಿತು ಮುದವಾದ ಬೆಳಕು
ತಾಯಿ ನಿನ್ನ ಮಧುರ ನೆನಪು
ನೀಡಿತು ವಿಜಯದ ಕಂಪು
ತಾಯಿ ನಿನ್ನ ಪ್ರೇಮದ ಮುಗ್ಧತೆ
ನೀಡಿತು ಹರುಷದ ನಗೆ
ತಾಯಿ ನಿನ್ನ ಪ್ರೀತಿಯ ನುಡಿ
ನೀಡಿತು ನನಗೆ ವೇದಾಂತದ ತತ್ವ
ಶೋಭಿತಾ, ದ್ವಿತೀಯ ಬಿ.ಎ.

......................................................................

ಬೆರೆತು ಬಾಳುವ

ಹೆತ್ತ ತಾಯಿ ಯಾರೇ ಇರಲಿ
ಹೊತ್ತ ಮಾತೆ ಭಾರತಿ
ಜಾತಿ ಭೇದ ಮರೆತು ನಿತ್ಯ
ಬೆಳಗಿ ಅವಳಿಗಾರತಿ
ನೂರು ಪಥ ಮತಗಳಿರಲಿ
ನೀತಿ ಒಂದೇ ನಿತ್ಯವು
ಭಾರತಾಂಬೆ ನಮ್ಮ ಮಾತೆ
ಎಂಬ ಮಾತು ಸತ್ಯವು
ಕುಡಿಯುವ ನೀರು ಪಡೆವ ಗಾಳಿ
ಬೇರೆ ಬೇರೆ ಇರುವುದೆ
ಜಾತಿ ಬೇರೆ ಇರಲು ನಮ್ಮ
ದೇಶ ಪ್ರೇಮ ಮರೆವುದೆ
ಭೇದ ಮರೆತು ನಿತ್ಯ ನಾವು
ಒಟ್ಟು ಸೇರಿ ಬಾಳುವ
ಒಂದೇ ತಾಯಿ ಮಕ್ಕಳಂತೆ
ಬೆರೆದು ಮುಂದೆ ಬದುಕುವ

ಗಾಯತ್ರಿ, ದ್ವಿತೀಯ ಬಿ.ಎ.

.....................................................................

ಮುದುಡಿದ ಮನಗಳಿಗೆ ಒಂದಷ್ಟು ಕಚಕುಳಿಯಿಡಲು ...



ನಗೆ - ಹನಿ

ರೋಗಿ : ಡಾಕ್ಟರ್, ನನಗೆ ಸರಿ ಹೋಗುತ್ತದೆ ತಾನೇ ?
ಡಾಕ್ಟರ್ : ಆ ಚಿಂತೆ ಬಿಡಿ, ಸರಿಹೋದಿರಿ ಅಂತನೇ ತಿಳೀರಿ.
ತಕ್ಷಣ ಆ ರೋಗಿ ಸಂತೋಷವಾಗಿ ನಗುತ್ತಾ ಎದ್ದು ಹೊರಡತೊಡಗಿದ.
ಡಾಕ್ಟರ್ ಅವನನ್ನು ತಡೆದು ಕೇಳಿದರು, 'ನನ್ನ ಫೀಸ್ ಚುಕ್ತಾ ಮಾಡಿ'.
ರೋಗಿ : ನಿಮ್ಮ ಫೀಸ್ ಚುಕ್ತಾ ಆಯಿತು ಎಂದೇ ತಿಳಿಯಿರಿ.



ಮಗ : ಅಪ್ಪಾ ಒಂದು ವೇಳೆ ನಿಮ್ಮ ಪಕ್ಷದ ಯಾವುದಾದರೂ ವ್ಯಕ್ತಿ ಬೇರೆ ಪಕ್ಷಕ್ಕೆ ಸೇರಿಕೊಂಡು ಬಿಟ್ಟರೆ ನೀವೇನು ಹೇಳುವಿರಿ ?
ರಾಜಕಾರಿಣಿ : ವಂಚನೆ.
ಮಗ : ಒಂದು ವೇಳೆ ಬೇರೆ ಪಕ್ಷದ ವ್ಯಕ್ತಿ ನಿಮ್ಮ ಪಕ್ಷಕ್ಕೆ ಸೇರಿಕೊಂಡು ಬಿಟ್ಟರೆ ಆಗೇನು ಹೇಳುವಿರಿ ?
ರಾಜಕಾರಿಣಿ : ಹೃದಯ ಪರಿವರ್ತನೆ.

ಅಶ್ವಿನಿ, ಪ್ರಥಮ ಬಿ.ಎ.


..................................................................

ಚಂದಿರ




ಬಾನಲ್ಲಿ ಮೂಡಿದ ಚಂದಿರ
ಆ ಚಂದಿರ ನೋಡಲು ಎಷ್ಟು ಸುಂದರ
ಕತ್ತಲು ಕವಿದಾಗ ಬೆಳಗುವ ಚಂದಿರ
ಆ ಕಗ್ಗತ್ತಲಿನಲ್ಲಿ ಹೊಳೆಯುವನು ಚಂದಿರ

ಬೆಳದಿಂಗಳ ನೀಡುವನು ಈ ಜಗಕ್ಕೆಲ್ಲ
ಮಕ್ಕಳು ನೋಡಲು ಬಯಸುವರು ಚಂದಿರನನ್ನು
ಆದರೆ ಹೆತ್ತವರು ಹೇಳುವರು
ನೋಡಲಿಲ್ಲವೇ ಚಂದಿರನನ್ನು
ಆ ಸಮಯದಲ್ಲಿ ಮರೆಯಾಗುವನು ಚಂದಿರ...

ಸ್ವಾತಿ, ದ್ವಿತೀಯ ಬಿ.ಎ.

........................................................................

ಬದುಕು

ಹೂವಿನಂತೆ ಬದುಕಿರಲಿ
ಆ ಬದುಕು ತುಂಬಾ ನಗುವಿರಲಿ
ನಗುವಿನ ತುಂಬಾ ಪ್ರೀತಿ ಇರಲಿ
ಪ್ರೀತಿಯ ತುಂಬಾ ಮುಗ್ಧತೆ
ತುಂಬಿ ನಲಿಯುತಿರಲಿ

ಪ್ರೇಮಲತಾ, ದ್ವಿತೀಯ ಬಿ.ಎ.

...............................................


ಮಳೆ

ಹನಿ ಹನಿಯಾಗಿ ಧರೆಗಿಳಿದ
ಮಳೆ
ಭೂಮಿ ತಂದಿತು ಸಮೃದ್ಧಿಯ
ಬೆಳೆ
ಹಚ್ಚಹಸಿರಿನಿಂದ ಕೂಡಿದ ಭೂಮಿ
ನೀಡಲಿ ನಮಗೆ ನೆಮ್ಮದಿಯ ನೆಲೆ

ಬಿಜಿ, ದ್ವಿತೀಯ ಬಿ.ಎ.

..............................................................

'ಪವರ್ ಸ್ಟಾರ್' ನ ಪವರ್ಫುಲ್ ಚಿತ್ರಗಳು



'ಪುನೀತ್ ರಾಜಕುಮಾರ್' ಎಂದಾಕ್ಷಣ ನೆನಪಾಗುವುದು ಬಾಲನಾಟನಾಗಿ ಮೆರೆದ ಆ ದಿನಗಳು... ನಟನೆ ಎಂಬುದು ರಕ್ತಗತವಾಗಿ ಬಂದಿದೆ. ಯಾಕೆಂದರೆ, ಇವರ ತಂದೆ ಕನ್ನಡದ ವರನಟ, ರಸಿಕರ ರಾಜ ಡಾ| ರಾಜಕುಮಾರ್. ಅವರ ಕಿರಿಯ ಪುತ್ರ ಪುನೀತ್.
ಆರಂಭದಲ್ಲಿ ಮಾಸ್ಟರ್ ಲೋಹಿತ್ ಆಗಿದ್ದು, ತಂದೆಯ ಜೊತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ 'ತಂದೆಗೆ ತಕ್ಕ ಮಗ' (ಸೈ) ಎನಿಸಿಕೊಂಡರು. 'ಪ್ರೇಮದ ಕಾಣಿಕೆ', 'ಯಾರಿವನು?', 'ವಸಂತಗೀತ' ದಂತಹ ಚಿತ್ರಗಳಲ್ಲಿ ಅಭಿನಯಿಸಿ, ಹಾಡಿ ಚಿತ್ರ ರಸಿಕರ ಮನಗೆದ್ದ ಪುನೀತ್ 'ಭಕ್ರ ಪ್ರಹ್ಲಾದ' ದಲ್ಲಿ ಪ್ರಹ್ಲಾದನಾಗಿ, 'ಎರಡು ನಕ್ಷತ್ರಗಳು' ಚಿತ್ರದಲ್ಲಿ ದ್ವಿಪಾತ್ರದಲ್ಲಿ, 'ಬೆಟ್ಟದ ಹೂ' ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ, ಬಾಲನಟನಾಗಿ ಗಮನಸೆಳೆದರು. 'ಬೆಟ್ಟದ ಹೂ' ಚಿತ್ರದ ಅಭಿನಯ ಅವರಿಗೆ 'ರಾಷ್ಟ್ರ ಪ್ರಶಸ್ತಿ' ತಂದುಕೊಟ್ಟಿತು.

ಬಾಲನಾಟನಾಗಿ ಹೆಸರುಪಡೆದ ಪುನೀತ್ ಈಗ ಅಗ್ರಸ್ಥಾನದಲ್ಲಿದ್ದಾರೆ. 'ಅಪ್ಪು' ಚಿತ್ರದಿಂದ ನಾಯಕ ನಟನಾಗಿ ಜನಪ್ರಿಯತೆ ಪಡೆದರು. 'ಅಪ್ಪು' ವಿನಿಂದ 'ಬಿಂದಾಸ್' ತನಕದ ಎಲ್ಲಾ ಚಿತ್ರಗಳು ಶತದಿನೋತ್ಸವವನ್ನು ಆಚರಿಸಿದೆ. 'ಮಿಲನ' ಒಂದು ವರ್ಷದ ಪ್ರದರ್ಶನವನ್ನು ಕಂಡಿದೆ. 'ವಂಶಿ' ಶತದಿನೋತ್ಸವದ ಹೊಸ್ತಿಲಲ್ಲಿದೆ. ಈ ಚಿತ್ರದಲ್ಲಿ ಅವರ ಹಿಡಿದ ಮಚ್ಚಿನ ಬಗ್ಗೆ ವ್ಯಾಪಕ ಅಭಿಪ್ರಾಯ ವ್ಯಕ್ತವಾಗಿವೆ. 'ಜೋಗಿ' ಖ್ಯಾತಿಯ ಪ್ರೇಮ್ ನಿರ್ದೇಶನದ 'ರಾಜ್' ಚಿತ್ರದಲ್ಲಿ ಒಂಥರ ಬೇರೆ ಗೆಟಪ್ ಹಾಗೂ 'ಹೈಪರ್ ಆಕ್ಟೀವ್ ಕ್ಯಾರೆಕ್ಟರ್' ನಲ್ಲಿ ಪ್ರೇಕ್ಷಕರ ಮನಗೆದ್ದರು. 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ಚಿತ್ರಗಳು ಎಂದರೆ ಫೈಟ್, ಡ್ಯಾನ್ಸ್, ಹಾಡು ಎಲ್ಲವೂ ಚೆನ್ನಾಗಿ ಇರುತ್ತದೆ. ಪುನೀತ್ ನಾಯಕ ಮಾತ್ರವಲ್ಲ ತಾಂತ್ರಿಕ ಸಲಹೆಗಾರರಾಗಿದ್ದಾರೆ ಹಾಗೂ ಗಾಯಕನೂ ಆಗಿದ್ದಾರೆ. 'ರಾಜ್' ನಂತರ ಸದ್ಯದಲ್ಲೇ ಯೋಗರಾಜ್ ಭಟ್ಟರೂ ಕಟ್ಟಿಕೊಡುವ ಕಲ್ಲುಗಳನ್ನು ಇಟ್ಟುಕೊಂಡು 'ಲಗೋರಿ' ಆಡಲಿದ್ದಾರೆ. ಅದರ ಬಳಿಕ, ಇನ್ಯಾವ ಥರದ ಆಟಗಳನ್ನು ಆಡುತ್ತಾರೆ ಎನ್ನುವ ಬಗ್ಗೆ ಮಾಹಿತಿಗಳಿಲ್ಲ. ಕಾರಣ ಕತೆ ಹ್ಯಾಗೆ ಬರುತ್ತದೋ, ಪಾತ್ರ ಹ್ಯಾಗೆ ಬರುತ್ತದೋ ಹಾಗೆ ಪುನೀತ್ ಅವರ ಯಾತ್ರೆ ಸಾಗುತ್ತದೆ ಎಂಬುದು ಎಲ್ಲಾ ಅಭಿಮಾನಿಗಳಿಗೆ ಗೊತ್ತು.

ಈಶಪ್ರಸನ್ನ, ಪ್ರಥಮ ಬಿ.ಎ.


............................................................
ಕರಾವಳಿಯ ಗಂಡು ಕಲೆ

ಯಕ್ಷಗಾನ



ಕರ್ನಾಟಕ ಕರಾವಳಿ ಜಿಲ್ಲೆಗಳ ಜನಜೀವನ ಒಂದು ಅನನ್ಯ ಅಂಗವಾಗಿರುವ ಯಕ್ಷಗಾನದ ಬಗ್ಗೆ ಇರುವ ನೆನಪುಗಳೆಲ್ಲ ರಮ್ಯವಾದವುಗಳು. ರಾತ್ರಿಯ ಸಮಯ ತಡೆಹಿಡಿದ ನಿದ್ದೆ ತೂಕಡಿಸುತ್ತಾ ನೋಡಿದ ಪ್ರಸಂಗಗಳಿಂದಾಗಿ ಅದೆಲ್ಲವೂ ಬೇರಾವುದೋ ಜಗತ್ತಿನಲ್ಲಿ ಘಟಿಸಿ ಹೋಗಿದ್ದವೋ ಎಂದು ಅನಿಸುತ್ತದೆ. ಚೆಂಡೆಯ ರಿಂಗಣ ನನ್ನಲ್ಲಿ ಹುಟ್ಟಿಸುವ ಭಾವೋದ್ರೇಕವನ್ನು ಅವ್ಯಕ್ತ ಆನಂದವನ್ನು ಬೇರಾವ ಸಂಗೀತವೂ ಹುಟ್ಟಿಸುವುದಿಲ್ಲ.

ಒಂದು ಯಕ್ಷಗಾನ ಪ್ರಸಂಗವೆಂದರೆ ಕೇವಲ ಒಂದು ರಾತ್ರಿಯ ಘಟನೆಯಲ್ಲ. ಆ ದಿನ ಬೆಳಗಿನಿಂದಲೇ ಅದು ಊರಿನ ಅನುಭವದ ಭಾಗವಾಗತೊಡಗುತ್ತದೆ. ಒಂಭತ್ತು ಗಂಟೆಯ ಹೊತ್ತಿಗೆ ಊರಿನ ಬಯಲಲ್ಲಿ ಲಾರಿಗಳಿಂದ ಡೇರೆಯ ಸಾಮಾನು ಇಳಿಸತೊಡಗಿದೊಡನೆ ತಯಾರಿ ಶುರುವಾದ ಹಾಗೆ. ಹೊಂಡ ಅಗೆಯುವುದರಿಂದ ಮೊದಲಾಗಿ ಎತ್ತರದ ಕಂಬಗಳು ರಂಗಸ್ಥಳ, ಒರಗು ಕುರ್ಚಿಗಳು ಇತ್ಯಾದಿ ಒಂದೊಂದೇ ನಿಧಾನ ಅನಾವರಣಗೊಳ್ಳುತ್ತ ಪ್ರತಿ ಬಾರಿ ಆ ಬಯಲನ್ನು ಹಾದು ಹೋದಾಗಲೂ ಏನೋ ಒಂದು ಹೊಸ ಬೆಳವಣಿಗೆ ಕಾಣಿಸುತ್ತ ದಿನವಿಡೀ ಊರಿನ ದೈನಿಕದ ಭಾಗವಾಗಿ ಬೆಳೆಯುತ್ತ ಮುಸ್ಸಂಜೆಯ ವೇಳೆಗೆ ಸಂಪೂರ್ಣ ಸಿದ್ಧವಾಗುತ್ತದೆ.

ಈ ಕಲೆ ಪ್ರೇಕ್ಷಕರಿಂದ ತುಂಬ ಅಪೇಕ್ಷಿಸುತ್ತದೆ. ನೋಡುಗ ಗಾಢವಾಗಿ ಒಳಗೊಳ್ಳದೇ ಇದ್ದರೆ ಯಕ್ಷಗಾನ ಒಂದು ಅನುಭವವಾಗಲು ಸಾಧ್ಯವಿಲ್ಲ. ಕಾಣದ ಕಣ್ಣಿಗೆ ಆ ಚಿಕ್ಕ ರಂಗಸ್ಥಳವೇ ಎಲ್ಲವೂ ಆಗಬೇಕು. ಇದೋ ಮೇಘದೋಪಾದಿಯಲ್ಲಿ ಎರಗಿ ಬರುತ್ತಿರುವ ಹನ್ನೊಂದು ಅಕ್ಷೊಹಿಣಿ ಸೈನ್ಯ ಎಂದರೆ ಅಲ್ಲಿ ಅದು ಕಾಣಬೇಕು. ಹೀಗೆ ಒಂದು ಮಗ್ಗುಲಲ್ಲಿ ನೋಡುಗರ ಕಲ್ಪನಾಶಕ್ತಿಯನ್ನು ಪೂರ್ತಿಯಾಗಿ ಅವಲಂಬಿಸಿದರೂ ಶಾಸ್ತ್ರಬದ್ಧ ಶಿಸ್ತು ಕೂಡ ಇಲ್ಲಿ ಅಷ್ಟೇ ಮುಖ್ಯ. ಪಾತ್ರಧಾರಿಯ ವೇಷಭೂಷಣಗಳು ಕಿರೀಟ, ಅಂಗವಸ್ತ್ರದ ಬಣ್ಣ ಹೀಗೆ ಪ್ರತಿಯೊಂದೂ ಆಯಾ ಪಾತ್ರದ ವ್ಯಕ್ತಿತ್ವವನ್ನು ಸ್ಥಾನಮಾನವನ್ನು ಸೂಚಿಸುತ್ತದೆ. ಇಂಥ ಅನೇಕ ಸೂಕ್ಷ್ಮ ವಿವರಗಳನ್ನು ಪಾಲಿಸುತ್ತ ಈ ಕಲಾಶಾಸ್ತ್ರದ ಪ್ರಕಾರ ವೇಷ ಕಟ್ಟಬೇಕು. ಆಂಗಿಕ ಅಭಿನಯ ಹಸ್ತಮುದ್ರೆಗಳ ಬಳಕೆ ಪಾತ್ರ ಪ್ರವೇಶದ ರೀತಿ ಮುಂತಾದವು ಶಾಸ್ತ್ರೀಯ ಚೌಕಟ್ಟನ್ನು ಒದಗಿಸುತ್ತವೆ. ಘನಘೋರ ಕಾಳಗ ನಡೆಯುತ್ತಿರುವ ಅದೇ ರಂಗಸ್ಥಳದ ಒಂದು ಭಾಗದಲ್ಲಿ ಕೂತು ಪ್ರೇಕ್ಷಕರಂತೆಯೇ ಬಟ್ಟೆ ತೊಟ್ಟು ಆಗಾಗ ಚಹಾ ಹೀರುತ್ತ ಪ್ರಸಂಗವನ್ನು ಮುನ್ನಡೆಸುವ ಭಾಗವತವನ್ನೂ ಚಂಡೆ ಮೃದಂಗದವರನ್ನು ಪ್ರೇಕ್ಷಕ ಅಗತ್ಯವಾದಾಗ ಮಾತ್ರ ತನ್ನ ಗ್ರಹಿಕೆಯ ಒಳಗೆ ತರಬೇಕು. ನಡುವೆ ಪಾತ್ರ ಪೋಷಣೆಗೆ ಅಥವಾ ಕಥೆ ಮುಂದುವರಿಯಲು ಅಗತ್ಯವಾದ್ದು ಭಾಗವತ ಕೂಡ ಪಾತ್ರದ ಜೊತೆ ಅಶರೀರವಾಗಿಯೋ ಎಂಬಂತೆ ಮಾತನಾಡುವ ಸಂಪ್ರದಾಯವೂ ಇದೆ. ಇದೆಲ್ಲವೂ ಯಕ್ಷಗಾನದಲ್ಲಿ ಸಮ್ಮತವೇ ಯಾವುದೋ ಪ್ರೇಕ್ಷಕನ ರಸಾನುಭವಕ್ಕೆ ಭಂಗ ತರುವುದಿಲ್ಲ. ಪ್ರೇಕ್ಷಕನ ಕಲ್ಪನಾಶಕ್ತಿ ಕಲಾಶಾಸ್ತ್ರದ ಶಿಸ್ತು ಗ್ರಹಿಕೆಯ ಪ್ರಬುದ್ಧತೆಗಳು ಇಲ್ಲಿ ಮೇಳೈಸಿ ರಂಗಪ್ರಯೋಗದಲ್ಲಿ ಇರಬೇಕಾದ ಆರೋಗ್ಯಕರ ಅಂತರ ಮತ್ತು ಸಂಬಂಧಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯೊಂದಿಗೆ ಯಕ್ಷಗಾನ ತನ್ನ ಸಂರಚನೆಯಲ್ಲಿಯ ವಾಸ್ತವ ಫ್ಯಾಂಟಸಿ, ಭಾಷೆ ಪುರಾಣಗಳನ್ನು ಏಕಕಾಲಕ್ಕೆ ಹಿಡಿದಿಟ್ಟುಕೊಂಡಿದೆ.

ಯಕ್ಷಗಾನವನ್ನು ಆಸ್ವಾದಿಸಬಲ್ಲ ಪ್ರಬುದ್ಧ ಪ್ರೇಕ್ಷಕರು ಪುಣ್ಯವಶಾತ್, ಕರ್ನಾಟಕದ ಕರಾವಳಿಯ ಜಿಲ್ಲೆಗಳಲ್ಲಿ ಇನ್ನೂ ಇದ್ದಾರೆ. ಇವರಲ್ಲಿ ಅನಕ್ಷರಸ್ಥರೂ ಇದ್ದಾರೆ ಇದಕ್ಕೆ ಬೇಕಾಗಿರುವುದು ಮನಸ್ಸಿನ ಪ್ರಬುದ್ಧತೆ ಹೊರತು ಸಾಕ್ಷರತೆಯನ್ನು ಕಣ್ಣಿನ ಹಸಿವು ಟಿವಿಯನ್ನು ಒಂದು ಆಕರ್ಷಕ ಮಾಧ್ಯಮವನ್ನಾಗಿ ಮಾಡಿರುವಂತೆಯೇ, ಮನಸ್ಸಿನ ಕಲ್ಪನೆಯ ಸಾಧ್ಯತೆಗಳನ್ನು ಕಸಿದುಕೊಳ್ಳುತ್ತ ಹೋಗುತ್ತಿದೆ ಎಂಬುದನ್ನು ನಾವು ಮತ್ತೆ ಮತ್ತೆ ಅರಿವಿಗೆ ತಂದುಕೊಳ್ಳಬೇಕಾಗಿದೆ.

ನಡುನಡುವೆ ಮಾಡುವ ನಿದ್ದೆ ಕೂಡ ಯಕ್ಷಗಾನದ ಅನುಭವದ ಒಂದು ಅಂಗ ಯಕ್ಷಗಾನ ಪ್ರೇಮಿಗೆ ಒಂದು ಪ್ರಸಂಗ ಅಂದರೆ ಕನಿಷ್ಠ ಎರಡು ದಿನಗಳ ಅನುಭವ ಪ್ರಸಂಗದ ದಿನದ ಬೆಳಗಿನಿಂದಲೇ ಶುರುವಾದ ಅದು ಆವತ್ತಿನ ರಾತ್ರಿಯ ನಿದ್ದೆಯನ್ನು ಮರಳಿ ಗಳಿಸುವವರೆಗೂ ವಿಸ್ತರಿಸುತ್ತದೆ. ಮಂಗಳ ಹಾಡುತ್ತಿದ್ದಂತೆ ಆಗಲೇ ಡೇರೆಯ ಸುಮಾರು ಭಾಗ ಬಿಟ್ಟುಹೋಗಿದ್ದು ಗಮನಕ್ಕೆ ಬರತೊಡಗುತ್ತದೆ. ರಾತ್ರಿಯಿಡೀ ಜರುಗಬೇಕಾದ ಯಕ್ಷಗಾನವನ್ನು 3 ಗಂಟೆಗೆ ಇಳಿಸಿದಾಗ ಮಧ್ಯಾಹ್ನದ ಹೊತ್ತು ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಉಸಿರು ಕಟ್ಟಿಕೊಂಡು ಕಟ್ಟೆಚ್ಚರದಲ್ಲಿ ನೋಡಬೇಕಾದಾಗ ಕಳೆದುಹೋಗುವ ಅನುಭವದ ಮಗ್ಗಲುಗಳು ಎಷ್ಟೊಂದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದುರದೃಷ್ಟವೆಂದರೆ ಯಾರಿಗೂ ಈಗ ಪುರಸತ್ತಿಲ್ಲ. ರಾತ್ರಿಯಿಡೀ ಕೂತು ನೋಡುವ ತಾಳ್ಮೆಯಿಲ್ಲ. ಮುಖ್ಯವಾಗಿ ಇಂಥದೊಂದು ಕಲೆಯ ಮಹತ್ವವನ್ನು ಅರಿಯುವ, ಅದನ್ನು ಗೌರವಿಸುವ ಜೀವನ ಕ್ರಮ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ರೇಶ್ಮ, ಪ್ರಥಮ ಬಿ.ಎ.


.....................................................................


ಅಮ್ಮ

ಅಮ್ಮ ನಿನ್ನ ತೋಳಲ್ಲಿ ನಾನು
ಆಡುತಿಹೆನು ನಗುನಗುತ
ಹರುಷದಲಿ

ಹಸಿವಿನ ಅರಿವಿಲ್ಲ
ನೋವಿನ ಅನುಭವವಿಲ್ಲ
ಅಮೃತದ ಸವಿಯನ್ನು ಉಣ್ಣಿಸಿ
ಸಲಹುತಿರುವೆ ನೀನು

ಲೋಕದ ಅರಿವನ್ನು ನೀಡಮ್ಮ
ಬದುಕುವುದ ಕಲಿಸಮ್ಮ
ನಿನಗಿಂತ ಹಿರಿಯರಿಲ್ಲ ಈ ಜಗದಲ್ಲಿ
ನನ್ನ ಸರ್ವಸ್ವ ನೀನೆಯಮ್ಮ

ವಾಸು ಪಿ., ದ್ವಿತೀಯ ಬಿ.ಎ.

...............................................................

ಮಾತೃ ಭಾಷೆಯ ಸೆಳೆತ...

ಅದು ಆಗಸ್ಟ್ ತಿಂಗಳ ಮಳೆ ಸಂಜೆ. ಮನಸ್ಸು ಮಳೆಯ ಹನಿಯೊಂದಿಗೆ ಲೀನವಾಗಿತ್ತು. ಅಷ್ಟರಲ್ಲೇ ಬಂದರು. ಮಳೆಯಲ್ಲಿ ನೆನೆಯುತ್ತಾ - ನೆನೆಯುತ್ತಾ ಗೆಳತಿಯರು ಪ್ರಾರಂಭಿಸಿದರು ವಟ ಗುಟ್ಟಲು. ಅದು ಕಾಂಕ್ರೀಟ್ ಕಾಡಾದ ಕಾರಣ ಕಪ್ಪೆಯ ಸದ್ದಿರಲಿಲ್ಲ. ಅದಕ್ಕೆ ಇವರ ಸದ್ದು ಏಕಾಂತವನ್ನು ಮುರಿದ ಗೆಳತಿಯರು ಕನ್ನಡತಿಯಾರಾದರೂ ಮನೆಗೆ ಬಂದರೂ ಇಂಗ್ಲೀಷಲ್ಲೇ ಮಾತಾಡುತ್ತಿದ್ದರು. ಮೊದಲೇ ನನ್ನ ಏಕಾಂತ ಮುರಿದು ಸಿಟ್ಟು ಇತ್ತು. ಅವರ ಇಂಗ್ಲೀಷ್ ಸಹಿಸಲಾಗದೆ ಹೊರಗಡೆ ಹೋಗಿ ಕುಳಿತೆ. ಮಳೆಯ ಹನಿ ಬಿದ್ದಂತೆ ಮನಸ್ಸಿನಲ್ಲಿ ಯೋಚನೆ ಹೊಳೆಯಿತು. ಅಲ್ಲಾ ಯಾಕೆ ನಾನು ಅವರ ಇಂಗ್ಲೀಷ್ ಸಹಿಸದಾದೆ ? ನಾನೇನೂ ಇಂಗ್ಲೀಷ್ ಭಾಷೆಯ ದ್ವೇಷಿಯಲ್ಲ. ಕಾಲೇಜಿನಲ್ಲಿ ಇದ್ದಷ್ಟೂ ವೇಳೆ ನಾನು ಸಂವಹಿಸುವುದು ಇಂಗ್ಲೀಷಿನಲ್ಲಿಯೇ ಹೊರಗಡೆ ಹೋದರೂ ಇಂಗ್ಲೀಷ್ ಯಾಕೋ ಇತ್ತೀಚೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ. ಏನೋ ಯಾಂತ್ರಿಕತೆ ಆವರಿಸಿದಂತೆ ಹೀಗೆ ಯೋಚನಾ ಲಹರಿ ಹೊರಬರುತ್ತಿದ್ದಂತೆ ಕೈಯಲ್ಲಿದ್ದ ಜಂಗಮ ದೂರವಾಣಿ (ಮೊಬೈಲ್) ರಿಂಗಣಿಸಿತು. ಅಮ್ಮನ ಕರೆ ಅದು. ಸಂತೋಷದಿಂದ ಮಾತಾಡತೊಡಗಿದೆ. ಹೀಗೆ ಹದಿನೈದು ನಿಮಿಷ ಸುಧೀರ್ಘ ಮಾತಿನ ಬಳಿಕ ಮನಸ್ಸು ಹಗುರಾಗಿತ್ತು. ಸಂತೋಷದ ಒರತೆ ಹೃದಯದಲ್ಲಿ ಜಿನುಗಲು ಪ್ರಾರಂಭಸಿತ್ತು. ಕಾರಣ ತಿಳಿಯದಾದೆ. ಯಾಕೆ ಅಮ್ಮನೊಂದಿಗೆ ಮಾತಾಡಿದೆ. ಕಾರಣವಿರಬಹುದು ಎಂದು ಸುಮ್ಮನಾದೆ. ಮತ್ತೆ ಮೌನದ ಸೆರಗ ಸೇರಿದೆ. ಕೂಡಲೇ ಗೆಳತಿಯರು ನಾನಿದ್ದಲ್ಲಿಗೆ ಬಂದು ನನ್ನೊಂದಿಗೆ ಇಂಗ್ಲೀಷಿನಲ್ಲೇ ಮಾತಾಡತೊಡಗಿದರು. ಮತ್ತೆ ಪುನಃ ಯಾಂತ್ರಿಕತೆ ನನ್ನಲ್ಲಿ ಆವರಿಸಿತ್ತು. ಸಂತೋಷದ ಒರತೆ ಬತ್ತಿದಂತಾಯಿತು. ಈಗ ಸರಿಯಾಗಿ ನನ್ನ ಆಗದ ಸಂತೋಷದ ಕಾರಣ ತಿಳಿಯಿತು. ಅದು ಮಾತೃ ಭಾಷೆಯ ಸೆಳೆತ. ಕನ್ನಡದಲ್ಲಿ ಮಾತಾಡಿ ಹಲವಾರು ದಿನಗಳಾಗಿತ್ತು. ಪರಭಾಷಾ ದ್ವೇಷಿಯಲ್ಲದಿದ್ದರೂ ಸ್ವಭಾಷಾ ಪ್ರೇಮ ಹೃದಯದಲ್ಲಿ ಗಟ್ಟಿಯಾಗಿ ಊರಿತ್ತು. ಅಂದಿನಿಂದ ನಿರ್ಧರಿಸಿದೆ ಇನ್ನು ಮುಂದೆ ಮನೆಯಲ್ಲಿ ಸ್ವಭಾಷೆ ಕನ್ನಡದಲ್ಲಿ ಮಾತನಾಡಬೇಕು. ಇದು ಇತರ ಗೆಳತಿಯರಿಗೂ ಅನ್ವಯ ಎಂದು.

ನಮ್ಮಲ್ಲಿ ಕನ್ನಡ ಮಾತಾಡಲು ಯಾಕೆ ಹಿಂಜರಿಕೆ ಎಂದರೆ ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಕನ್ನಡ ಒಂದೇ ಭಾಷೆ ಎಂದರೆ ಸಾಲದು. ಇದು ಇಪ್ಪತ್ತೊಂದನೇ ಶತಮಾನ. ಇದು ಇಪ್ಪತ್ತೊಂದನೇ ಶತಮಾನವಾದರೇನು ? ಸುಮಾರು ಎರಡು ಸಾವಿರ ವರುಷಗಳ ಇತಿಹಾಸವಿರುವ ನಮ್ಮ ಕನ್ನಡ ಬಿಡಬೇಕೇ ? ಸ್ಪರ್ಧಾತ್ಮಕ ಯುಗವೆಂದು ಸ್ವಭಾಷೆಯ ಕತ್ತು ಹಿಸುಕುವುದು ಸರಿಯೇ ? ನಮ್ಮ ಭಾಷೆಯನ್ನು ನಾವು ಗೌರವಿಸಬೆಕು, ಪ್ರೀತಿಸಬೇಕು, ಬೆಳೆಸಬೇಕು, ಉಳಿಸಬೇಕು. ಕನ್ನಡಿಗರಾದ ನಾವು ನಮ್ಮಲ್ಲಿ ಮಲಗಿರುವ ಭಾಷಾ ಪ್ರೇಮವನ್ನು ಬಡಿದೆಬ್ಬಿಸಬೇಕಿದೆ...

ಸಿರಿಗನ್ನಡಂ ಗೆಲ್ಗೆಂ ಸಿರಿಗನ್ನಡಂ ಬಾಳ್ಗೆ

ಅಶ್ವಿನಿ ಐಗಳ್, ದ್ವಿತೀಯ ಬಿ.ಎ. (ಪತ್ರಿಕೋದ್ಯಮ ವಿಭಾಗ)

...................................................................

ಚಿಂತೆ - ಚಿತೆ

ಚಿಂತೆ ಮನುಷ್ಯನನ್ನು ಕೈಬಿಡದೇ ಕಾಡುವ, ನಮ್ಮೊಳಗೆ ಇರುವ ಶತ್ರುಗಳಲ್ಲಿ ಒಂದು ಯಾವುದೋ ಒಂದು ಇಷ್ಟವಿಲ್ಲದ ಸಂಗತಿ ಅಥವಾ ಆಗಬಾರದ್ದು ನಡೆದುಹೋದಾಗ ಮನಸ್ಸಿಗೆ ಚಿಂತೆ ಹತ್ತಿಕೊಳ್ಳುವುದು ಸಹಜ. ಈ ಚಿಂತೆ ಮನುಷ್ಯನನ್ನು ಕಾಡಲಾರಂಭಿಸುತ್ತದೆ.

ಚಿಂತೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಸ್ವಾಭಾವಿಕ ಚಿಂತೆ, ಅಂದರೆ ಯಾವುದಾದರೊಂದು ತಪ್ಪು ಅದು ತಿಳಿದೋ, ತಿಳಿಯದೆಯೋ ನಡೆದುಹೋದಾಗ ಮುಂದೆ ಏನಾಗುತ್ತದೋ ಎಂದು ಚಿಂತಿಸುವುದು. ಎರಡನೆಯದ್ದು ಅನಾವಶ್ಯಕವಾಗಿ ಚಿಂತೆಗೊಳಗಾಗುವುದು. ಉದಾ : ನಾಳೆ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವುದಾದರೆ ಇವತ್ತು ನಿದ್ರೆಯಿಲ್ಲದೆ ಚಿಂತಿಸುವುದು.

ಚಿಂತೆ ಮತ್ತು ಚಿಂತೆಗೆ ವ್ಯತ್ಯಾಸವೆಂದರೆ ಮಧ್ಯದಲ್ಲಿರುವ ಸೊನ್ನೆ ಮಾತ್ರ. ಚಿತೆ ಸತ್ತ ಮನುಷ್ಯನನ್ನು ಒಮ್ಮೇಲೆ ಸುಟ್ಟರೆ, ಚಿಂತೆ ಜೀವಂತ ಮನುಷ್ಯನನ್ನು ಜೀವನ ಪರ್ಯಂತ ಸುಡುತ್ತದೆ. ಅನುಭವಿಗಳ ಮಾತಿನ ಪ್ರಕಾರ, ಮುನ್ನುಗ್ಗುತ್ತಿರುವ ಪ್ರವಾಹವನ್ನಾದರೂ ತಡೆಯಬಹುದು, ವೇಗವಾಗಿ ಬೀಸುವ ಗಾಳಿಯನ್ನಾದರೂ ತಡೆಯಬಹುದು, ಸುಡುವ ಬೆಂಕಿಯನ್ನಾದರೂ ನಂದಿಸಬಹುದು. ಆದರೆ ಚಿಂತಿಸುವ ಮನುಷ್ಯನನ್ನು ಮಾತ್ರ ತಡೆಯಲು ಅಸಾಧ್ಯವೆನಿಸುತ್ತದೆ. ಇದಕ್ಕೇ ಹಿರಿಯರು ಮನಸ್ಸನ್ನು ಮರ್ಕಟಕ್ಕೆ ಹೋಲಿಸುತ್ತಾರೆ.

ಹಾಗಾದರೆ ಈ ಚಿಂತೆಗೆ ಪರಿಹಾರವೇ ಇಲ್ಲವೇ ? ಖಂಡಿತಾ ಇದೆ. ಸಮಸ್ಯೆಗಳು ಬಂತೆಂದು ತಲೆಯ ಮೇಲೆ ಕೈಹೊತ್ತು ಕುಳಿತರೆ ಏನೂ ಆಗದು. ಬದಲಿಗೆ ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಈ ಚಿಂತೆ ನಮ್ಮನ್ನು ಯಾಕೆ ಕಾಡುತ್ತದೆ ? ಇದರಿಂದ ನಮಗಾಗುವ ತೊಂದರೆ ಏನು ? ನಾನು ಇನ್ನು ಏನು ಮಾಡಬಹುದು ? ಎಂಬಿತ್ಯಾದಿ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡರೆ ಖಂಡಿತವಾಗಿ ಈ ಚಿಂತೆಯನ್ನು ಹೋಗಲಾಡಿಸಬಹುದು.

ಡೇಲ್ ಕಾರ್ನೆಗಿಯವರು ತಮ್ಮ ಒಂದು ಪುಸ್ತಕದಲ್ಲಿ ಚಿಂತೆಯನ್ನು ಕ್ಷಣಿಕವೆಂದು ವಿವರಿಸುತ್ತಾರೆ. ಚಿಂತೆಯ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳುವ ಬದಲು ಒಂದು ಪೆನ್ನು ಹಾಗೂ ಪೇಪರ್ ತೆಗೆದುಕೊಂಡು ಕೆಲವೊಂದು ಪ್ರಶ್ನೆಗಳನ್ನು ಬರೆದುಕೊಳ್ಳಬೇಕು.

1) ನಾನು ಯಾವ ಕಾರಣಕ್ಕಾಗಿ ಚಿಂತಿಸುತ್ತಿದ್ದೇನೆ ಎಂದು ಸ್ಪಷ್ಟವಾಗಿ ಬರೆದುಕೊಳ್ಳುವುದು.
2) ಈ ಬಗ್ಗೆ ನಾನು ಏನೆಲ್ಲಾ ಮಾಡಲು ಸಾಧ್ಯವಿದೆ ಎಂಬುವುದನ್ನು ಬರೆಯುತ್ತಾ ಹೋಗುವುದು.
3) ಬರೆದುದರಲ್ಲಿ ಯಾವುದನ್ನು ಕಾರ್ಯಗತಗೊಳಿಸಲು ಸೂಕ್ತ ಎಂಬುವುದನ್ನು ತೀರ್ಮಾನಿಸುವುದು.
4) ಆ ತೀರ್ಮಾನವನ್ನು ತಡಮಾಡದೇ ಕಾರ್ಯಗತಗೊಳಿಸಲು ಹೊರಡುವುದು.

ಇದರಿಂದ ನಮ್ಮ ಚಿಂತೆಗೆ ಒಂದು ನಿರ್ದಿಷ್ಟ ರೂಪ ದೊರಕುತ್ತದೆ ಮತ್ತು ಪರಿಹಾರ ಕೂಡಾ ಸಾಧ್ಯವಾಗುತ್ತದೆ. ಅದರಿಂದ ಚಿಂತೆಯಿಂದ ಪಾರಾಗಿ ನಿಶ್ಚಿಂತತೆಯಿಂದ ಬದುಕಲು ಇದೊಂದು ಅದ್ಭುತ ಉಪಾಯ. ಈಗ ನಿಮ್ಮ ಸರದಿ. ನಿಮ್ಮನ್ನು ಯಾವುದಾದರೂ ಚಿಂತೆ ಕಾಡುತ್ತಿದೆಯೇ ? ಹಾಗಾದರೆ ತಡಮಾಡಬೇಡಿ. ಈ ವಿಧಾನವನ್ನು ಉಪಯೋಗಿಸಿ ನೋಡಿ. ಚಿಂತೆ ದೂರವಾಗುತ್ತದೆ. ನಿಶ್ಚಿಂತೆ ನಿಮ್ಮದಾಗುತ್ತದೆ.

ಶ್ರೀನಾಥ್, ಪ್ರಥಮ ಬಿ.ಎ.

...............................................................

ಅಮೂಲ್ಯ ನುಡಿಮುತ್ತುಗಳು

1) ನಾರಿಯ ಉನ್ನತಿ ಇಲ್ಲವೇ, ಅವನತಿಯ ಮೇಲೆಯೇ ರಾಷ್ಟ್ರದ ಉನ್ನತಿ ಮತ್ತು ಅವನತಿಯು ಅವಲಂಬಿತವಾಗಿದೆ.
2) ಜೀವನದಲ್ಲಿ ನೀನು ಯಶಸ್ವಿಯಾಗಬೇಕಾದರೆ ಪ್ರಯತ್ನವನ್ನು ನಿನ್ನ ಮಿತ್ರನನ್ನಾಗಿ ಮಾಡಿಕೊ.
3) ಜೀವನದ ಮೌಲ್ಯಗಳನ್ನು ತಿಳಿಯುವುದು ಬಡನತದಿಂದ.
4) ಒಬ್ಬ ಮುತ್ತೈದೆಗೆ ಉಡಿ ತುಂಬಿದರೆ ನೂರೊಂದು ಗೋದಾನ ಮಾಡಿದ ಪುಣ್ಯ ಖಂಡಿತ.
5) ಯಾವ ವಿಶ್ವವಿದ್ಯಾನಿಲಯವು ಕಲಿಸದ ವಿದ್ಯೆಯನ್ನು ಬಡತನ ಕಲಿಸುತ್ತದೆ.
6) ನಿರಾಶಾವಾದಿ ಅವಕಾಶಗಳನ್ನು ಕಷ್ಟವಾಗಿಸಿಕೊಂಡರೆ, ಆಶಾವಾದಿ ಕಷ್ಟಗಳನ್ನೇ ಅವಕಾಶವನ್ನಾಗಿಸಿಕೊಳ್ಳುವ.
7) ಪುಸ್ತಕವು ಯೌವನದಲ್ಲಿ ಮಾರ್ಗದರ್ಶನ, ವೃದ್ಧಾಪ್ಯದಲ್ಲಿ ಮನೋರಂಜನೆ.
8) ಪ್ರತಿಭೆಯ ಮಲತಾಯಿಯೇ ಬಡತನ.
9) ಸುಳ್ಳಿನದ್ದು ವಿಮಾನ ವೇಗವಾದರೆ, ಸತ್ಯದ್ದು ಬಂಡಿಯ ವೇಗ. ಆದ್ದರಿಂದಲೇ ನಮಗೆ ಸತ್ಯ ತಿಳಿಯುವ ಹೊತ್ತಿಗೆ ಕಾಲ ಕಳೆದು ಹೋಗಿರುತ್ತದೆ.
10) ತಾನು ಅಜ್ಞಾನಿ ಎಂದು ತಿಳಿದುಕೊಳ್ಳುವುದು ಜ್ಞಾನದ ಮೊದಲು ಮೆಟ್ಟಿಲು.
11) ಮಾನವರು ಸಮಯವನ್ನು ಕೊಲ್ಲುವ ಮಾತನಾಡುತ್ತಾರೆ. ಸಮಯವು ಮೌನವಾಗಿ ಅವರನ್ನು ಕೊಲ್ಲುತ್ತದೆ.
ಶ್ರೀನಾಥ್, ಪ್ರಥಮ ಬಿ.ಎ.

..................................................................

ವಿದ್ಯಾಸಂಸ್ಥೆ

ವಿದ್ಯಾರ್ಥಿ ಜೀವನದ ಪ್ರತಿಕ್ಷಣಗಳು ಕೂಡ ಅಮೂಲ್ಯವಾದುದು. ಈ ಒಂದು ಸಮಯದಲ್ಲಿ ಕಲಿಕೆಯ ಜೊತೆಗೆ ತಮ್ಮನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಕಲಿಕೆಯಲ್ಲಿ ಮಾತ್ರವಲ್ಲದೆ ತಮ್ಮ ಪ್ರತಿಭೆಯನ್ನು ಸದಾ ಎಲ್ಲರೆದುರು ತೋರಿಸುವಲ್ಲಿ ಸಹಾಯಕವಾಗುತ್ತದೆ. ಜೀವನಕ್ಕೆ ಒಂದು ಗುರಿ ಎಂಬುವುದು ಬೇಕು. ಇಲ್ಲವಾದರೆ ಅದು ದಾರಿ ಇಲ್ಲದ ಪಯಣವಾಗುತ್ತದೆ. ಈ ನಮ್ಮ ವಿದ್ಯಾರ್ಥಿ ಜೀವನ ಸಾಧನೆಯ ಮೊದಲ ಘಟ್ಟವಿದ್ದಂತೆ. ಇಲ್ಲಿ ಪ್ರತಿಯೊಬ್ಬರಲ್ಲೂ ಸ್ನೇಹ ಬೆಳೆಯುವಲ್ಲಿ ಹಾಗೂ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರಲ್ಲಿ ವಿದ್ಯಾಸಂಸ್ಥೆಯು ದೇಗುಲವಿದ್ದಂತೆ. ಈ ದೇಗುಲದಿಂದ ಎಲ್ಲರೂ ಒಳ್ಳೆಯ ನಡೆನುಡಿಯನ್ನು ಕಲಿತು ಮುಂದೆ ಸಮಾಜದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸುವಂತ ವ್ಯಕ್ತಿಯಾಗಿ ಹೊರಹೊಮ್ಮಬೇಕು. ನಮಗೀಗ ಹೈಸ್ಕೂಲು ಜೀವನ ನೆನಪಾಗುವಂತೆ ಮುಂದೆ ಕಾಲೇಜಿನ ಜೀವನವು ಕೂಡ ಒಂದು ಸವಿ ಸುಂದರ ನೆನಪುಗಳು ನಮ್ಮ ಜೀವನದುದ್ದಕ್ಕೂ ನೆನಪಿರುತ್ತವೆ. ಆದ್ದರಿಂದ ಎಲ್ಲರೂ ಸಿಕ್ಕಂತಹ ಅವಕಾಶವನ್ನು ಉಪಯೋಗಿಸಿಕೊಂಡು ನಮ್ಮನ್ನು ನಾವು ಅಭಿವೃದ್ಧಿಪಡಿಸಿಕೊಳ್ಳೋಣ. ಸೂರ್ಯನಿಂದ ಹೊರಹೊಮ್ಮುವ ಕಿರಣಗಳಂತಹ ದಿವ್ಯ ಪ್ರತಿಭೆ ಇರುವ ನಾವು ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳೋಣ.

ವಾಸು, ದ್ವಿತೀಯ ಬಿ.ಎ.



....................................................................................


ನಾನು ಮುಳುಗಿರುವೆ!
ಹೇಗಿದೆ ತುಣುಕು...? ನನ್ನ ಬಹುದೊಡ್ಡ ಆಸೆ ಅಂದರೆ ಸಮುದ್ರದ ನೀರಿನ ಮೇಲೆ ಎಲೆಯಂತೆ ತೇಲಾಡಬೇಕೆಂದು . ಅದು ನನಸಾಗಬೇಕೆಂದರೆ ಸಾಯಬೇಕು...ನನ್ನ ನೆನಪಾದಾಕ್ಷಣ ಪ್ರತೀ ಸಂಜೆಯ ನೋಡಲು ನೀನು ಸಾಗರದ ದಡಕ್ಕೆ ಬರುತ್ತೀಯಲ್ಲಾ... ನೇಸರ ಸಾಗರದೊಳಗೆ ಲೀನವಾಗುವ ಹೊತ್ತು...ಚಂದಿರ ಬಾನನ್ನು ಬೆಳಗೋ ಹೊತ್ತು... ನನ್ನ ಮಾಯಗಳು...ನಾ ಬರೆದ ಸಾಲುಗಳು... ನಿನ್ನ ಮುತ್ತಿನಂಥಹ ಮನಸ್ಸಿನಲ್ಲಿ ಕರಗೋ ಹೊತ್ತಿಗೆ... ಬಹುಶಃ ಸಾಗರದ ದಡದಲ್ಲಿ ನಾನು ಮುಳುಗಿರುವೆ...!
ದೀಷ್ಮಾ ಡಿ. ಶೆಟ್ಟಿ.



ಕಂಡದ್ದನ್ನಾಡಿದರೆ...

ಆತ ಬಲರಾಮ್. ಸೈಕಲ್ ರಿಕ್ಷಾ ಚಾಲಕನ ಮಗ. ಕಲಿಕೆಯಲ್ಲಿ ಮುಂದಿದ್ದರೂ, ಹಳ್ಳಿಯ ಜೀತ ಜಮೀನ್ದಾರಿ ಪದ್ದತಿಯ ಕ್ರೌರ್ಯ ದಿಂದಾಗಿ ಕೆಲಸಕ್ಕೆ ಹೋಗ ಬೇಕಾಗುತ್ತದೆ. ಇತರರಂತೆ ಹಳ್ಳಿಯಲ್ಲೇ ತನ್ನ ಹಣೆಬರಹವನ್ನು ಒಪ್ಪಿಕೊಂಡಿರಲು ಆತನಿಗೆ ಇಷ್ಟವಿರಲಿಲ್ಲ. ಕಷ್ಟಪಟ್ಟು ಕಾರ್ ಡ್ರೈವಿಂಗ್ ಕಲಿತು ಜಮೀನ್ದಾರರ ಮಗನ ಡ್ರೈವರ್ ಆಗಿ ದಿಲ್ಲಿಗೆ ಬರುತ್ತಾನೆ. ಕರುಣೆಯೇ ಇಲ್ಲದೇ ದುಡ್ಡೇ ದೊಡ್ಡಪ್ಪ ಎಂದು ಹಣವನ್ನೇ ಸರ್ವಸ್ವ ಎಂದು ಭಾವಿಸಿದ ಜನರನ್ನು ಕಂಡು ಅನೇಕ ಪಾಠಗಳನ್ನು ಕಲಿಯುತ್ತಾನೆ. ಮುಂದೊಂದು ದಿನ ಆತ ಶ್ರೀಮಂತನಾಗುತ್ತಾನೆ. ಶ್ರೀಮಂತನಾಗಲು ಆತ ಮಾಡಬೇಕಾಗಿ ಬರುವ ಕೃತ್ಯಗಳನ್ನು, ನೈಜ ಭಾರತವನ್ನು 'ದಿ ವೈಟ್ ಟೈಗರ್' ಬಿಚ್ಚಿಡುತ್ತದೆ.
ಅವನು ಜಮಾಲ್ ಮಲಿಕ್. ಮುಂಬೈಯ ಧಾರಾವಿ ಸ್ಲಂ ನಿವಾಸಿ. ಆತನ ಅಣ್ಣ ಸಲೀಂ ಮಲಿಕ್. ತುಂಟಾಟದಿಂದ ಬಾಲ್ಯ ಕಳೆಯುತ್ತಿರುವಾಗ ಕೋಮು ಗಲಭೆಯ ಕುರುಡು ನರ್ತನಕ್ಕೆ ಸಿಲುಕಿ ಅವರ ತಾಯಿ ಬಲಿಯಾಗುತ್ತಾರೆ. ಸಂದರ್ಭದಲ್ಲಿ ರಕ್ಷಣೆ ನೀಡಬೇಕಾದ 'ಬೇಲಿಗಳು' ಮಜಾ-ಮಸ್ತಿಯಲ್ಲಿ ಕಾಲ ಕಳೆಯುತ್ತಿರುತ್ತವೆ! ದಿಕ್ಕು ದೆಸೆಯಿಲ್ಲದ ಇಬ್ಬರಿಗೆ ಇನ್ನೊಬ್ಬಳು ತಬ್ಬಲಿ ಹುಡುಗಿ ಲತಿಕಾ ಸಿಗುತ್ತಾಳೆ. ಯಾವುದೋ ಗೂಡಿನಲ್ಲಿ ಕಾಲ ಕಳೆಯುವ ಅವರು ನಂತರ ಊರಿನ ಕಸದ ರಾಶಿಯಲ್ಲಿ ಗುಜರಿ ಹೆಕ್ಕುವ ಕೆಲಸ ಮಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬರುವ, ಅನಾಥ ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಕಣ್ಣು ಕಿತ್ತು ಭಿಕ್ಷೆ ಬೇಡಿಸುವ, ಅನೈತಿಕ ದಂಧೆಗಳಿಗೆ ನೂಕುವ ತಂಡ ಮೂವರನ್ನೂ ಕಿಡ್ನ್ಯಾಪ್ ಮಾಡುತ್ತದೆೆ. ಜಮಾಲ್ನ ಕಣ್ಣು ಕೀಳುವ ಸಂದರ್ಭ ಬಂದಾಗ ಸಲೀಂನ ಉಪಾಯದಿಂದ ಅವರಿಬ್ಬರೂ ತಪ್ಪಿಸಿಕೊಳ್ಳುತ್ತಾರೆ. ಆದರೆ ಲತಿಕಾ ವೇಶ್ಯಾವಾಟಿಕೆಗೆ ಬಲಿಪಶುವಾಗುತ್ತಾಳೆ. ಹೀಗೆ ನಸುಗಾರ ಜಮಾಲ್ ರಿಯಾಲಿಟೀ ಶೋವೊಂದರಲ್ಲಿ ಮಿಲಿಯನೇರ್ಗೆ ಸ್ಪರ್ದಿಸುವ ಕತೆಯನ್ನು ಬಿಂಬಿಸುವ ಚಿತ್ರ 'ಸ್ಲಂ ಡಾಗ್ ಮಿಲಿಯನೇರ್'.
ಎರಡು ಅಪೂರ್ವ ಕೃತಿಗಳು ಬಂದಾಗ ಭಾರತೀಯ ಸಮಾಜದಲ್ಲಿ 'ಭಾರತದ ಕರಾಳ ಮುಖ'ವನ್ನು ಚಿತ್ರಿಸಿದ್ದರ ಕುರಿತು ತೀವ್ರ ಚಚರ್ೆಗೆ ಒಳಪಟ್ಟಿತು. 'ಭಾರತವನ್ನು ಬೈಯ್ಯಿರಿ, 'ಬುಕರ್' ಪಡೆಯಿರಿ!', 'ಸ್ಲಂ ಡಾಗ್ ನೋಡಿ ಸಮಯ ವ್ಯರ್ಥ ಮಾಡಬೇಡಿ' ಎಂದು ಹಲವು ಘಟಾನುಘಟಿಗಳು ಅಂಕಣ ಬರೆದರು. "ಸ್ಲಂ ಡಾಗ್ಗಿಂತ ಒಳ್ಳೆಯ ಸಿನಿಮಾ ಬಾಲಿವುಡ್ನಲ್ಲಿ ಮೊದಲೇ ಬಂದಿದೆ" ಎಂದರು ಹಲವರು. ಇಷ್ಟಕ್ಕೆಲ್ಲಾ ಕಾರಣ ಇಷ್ಟೇ ಎರಡೂ ಅಪೂರ್ವ ಕಲಾಕೃತಿಗಳು ನೈಜ ಭಾರತವನ್ನು ಚಿತ್ರಿಸಿದೆ! 'ಬಿಳಿ ಹುಲಿ' ಬಲರಾಂ ತಾನು ಎದುರಿಸಿದ್ದ ನ್ನೆಲ್ಲಾ ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ. ಸ್ಲಂ ಹುಡುಗ ಜಮಾಲ್ ವಿದೇಶಿ ಪ್ರವಾಸಿಗರಿಗೆ ಗೈಡ್ ಮಾಡಲು ಕಾರು ನಿಲ್ಲಿಸಿ ಡ್ರೈವರ್ ಸಮೇತ ಪ್ರವಾಸಿ ತಾಣಕ್ಕೆ ಹೋಗಿ ಹಿಂದೆ ಬರುವಾಗ ಅವರಿದ್ದ ಕಾರಿನ ಟೈರ್ಗಳನ್ನೆಲ್ಲಾ ಯಾರೋ ಕಿಡಿಗೇಡಿಗಳು ಕಳವು ಮಾಡಿರುತ್ತಾರೆ. ಜಮಾಲ್ಗೆ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆಗ ಡ್ರೈವರ್ ಕಾರಣವಿಲ್ಲದೆ ಜಮಾಲ್ಗೆ ಬೈಯ್ಯುತ್ತಾ ಹಿಗ್ಗಾ ಮುಗ್ಗ ಥಳಿಸುತ್ತಾನೆ. ಡ್ರೈವರ್ನಿಂದ ಆತನನ್ನು ಬಿಡಿಸಿದ ವಿದೇಶಿ ದಂಪತಿಯಲ್ಲಿ ಜಮಾಲ್ ' ಣಜ ಡಿಜಚಿಟ ಟಿಜಚಿ' ಎನ್ನುತ್ತಾನೆ. ವೈಟ್ ಟೈಗರ್ ಮತ್ತು ಸ್ಲಂ ಡಾಗ್ನ ಪ್ರತಿಯೊಂದುಅಂಶವನ್ನಿಟ್ಟು ಕೊಂಡು ಬೇಕಾದಷ್ಟು ಚಚರ್ೆ ಮಾಡಬಹುದು. ಅರವಿಂದ ಅಡಿಗ ವೃತ್ತಿಯಲ್ಲಿ ಓರ್ವ ಪತ್ರಕರ್ತರಾಗಿದ್ದವರು. 'ಟೈಮ್ಸ್' ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅವರು ಕೋಲ್ಕತ್ತಾದ ಗ್ರಾಮವೊಂದಕ್ಕೆ ಹೋದಾಗ ಅಲ್ಲಿ ಪರಿಚಿತನಾದ ಸೈಕಲ್ ರಿಕ್ಷಾ ಚಾಲಕನ ಜೀವನದ ಪ್ರತಿಮೆಯನ್ನಿಟ್ಟುಕೊಂಡು 'ವೈಟ್ ಟೈಗರ್' ಬರೆದಿದ್ದಾರೆ. ಇಲ್ಲಿ ಅವರು ಕಂಡದ್ದೆಲ್ಲಾ ಮೂಡಿ ಬಂದಿದೆ. 'ಸ್ಲಂ ಡಾಗ್' ಮೂಲ ದಕ್ಷಿಣ ಆಫ್ರಿಕಾದಲ್ಲಿ ಭಾರತದ ರಾಯಭಾರಿಯಾಗಿದ್ದ ವಿಕಾಸ್ ಸ್ವರೂಪ್ ಬರೆದ ' ಆ್ಯಂಡ್ ಕ್ಯು' ಕಾದಂಬರಿ. ಡ್ಯಾನಿ ಬೋಯ್ಲ್ ಅದನ್ನು ತೆರೆಯ ಮೇಲೆ ಮೂಡಿಸಿದ್ದಾರೆ. ಎರಡೂ ಕೃತಿಗಳಲ್ಲಿ ವೈಭವೀಕರಣ ಇಲ್ಲ. ಭಾರತದ ಪ್ರತಿಯೊಂದು ಸಮಸ್ಯೆಯ ಕುರಿತು ಅಪರೂಪದ ಕೃತಿಗಳು ಬೆಳಕು ಚೆಲ್ಲಿದೆ ಅಷ್ಟೇ. ಭಾರತದ ಮತ್ತೊಂದು ಮುಖವನ್ನು ತೆರೆದಿಟ್ಟ ಕಾರಣಕ್ಕಾಗಿಯೇ ಅವೆರಡೂ ಟೀಕೆಗೆ ಗುರಿಯಾಗಿದೆ. ರೀಲ್ಲಿರೋದೆಲ್ಲಾ ರೀಯಲ್ಲಲ್ಲ ಎಂಬ ಮಾತಿದೆ. ಆದರೆ ಇವೆರಡೂ ಶೇ 50ರಷ್ಟು ಮಾತ್ರ ರೀಯಲ್ಲನ್ನು ತೋರಿಸಿಸದೆ. ನಿಜ. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೊದ್ನಂತೆ. ಕಂಡದ್ದನ್ನಾಡಿದರೆ ಕೆಂಡದಂತಹಾ ಸಿಟ್ಟು ಅಲ್ವಾ?
ಅಂದ ಹಾಗೆ ಸ್ಲಂ ಡಾಗ್ ಪ್ರತಿಷ್ಠಿತ 8 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದೆ. ಸಂಗೀತ ಲೋಕದ ಮಾಂತ್ರಿಕ . ಆರ್. ರೆಹಮಾನ್ 'ಡಬಲ್' ಸಾಧನೆ ಮಾಡಿದ್ದಾರೆ. ಹ್ಯಾಟ್ಸ್ ಆಫ್ 'ಸ್ಲಂ ಡಾಗ್', 'ಜೈ ಹೋ...' ಮಿಲಿಯನೇರ್!



-ಇರ್ಷಾದ್ ಎಂ.ವೇಣೂರು












ಆಳುವವರ
ಸಂವೇದನೆಗಳು
ಸತ್ತಾಗ ಅವಿವೇಕಗಳು ಸಂಭವಿಸುತ್ತವೆ
ಎಲ್ಲರಿಗೂ ಆಶ್ಚರ್ಯವಾಗಿದೆ. ಕೋಪವೂ ಬಂದಿದೆ. ಇಷ್ಟು ವರ್ಷಗಳಿಂದ ಸತ್ಯವೆಂದು ನಂಬಿಕೊಂಡು ಬಂದಿದ್ದ ಗೋಪುರವೊಂದು ಒಮ್ಮಿಂದೊಮ್ಮೇಲೆ ಕುಸಿಯುತ್ತಿದೆಯೇನೋ ಅನ್ನುವ ಭಯ ಎಲ್ಲ ಶ್ರದ್ಧಾವಂತ ಹಿಂದೂಗಳನ್ನು ಕಾಡುತ್ತಿದೆ.
ಇಸ್ಲಾಮಿಕ್ ಭಯೋತ್ಪಾದನೆ ತನ್ನ ಕರಾಳ ಮುಖವನ್ನು ತೋರಿಸಿದಾಗಲೆಲ್ಲಾ ಹಿಂದೂ ಸಮಾಜದ ಕೆಲವು ವ್ಯಕ್ತಿಗಳು ಇಸ್ಲಾಮಿಕ್ ಭಯೋತ್ಪಾದಕರಿಂದ ಹಿಂದೂ ಸಮಾಜವನ್ನು, ಹಿಂದೂ ಶ್ರದ್ಧಾಕೇಂದ್ರಗಳನ್ನು ರಕ್ಷಿಸಲು "ಹಿಂದೂ ಆತ್ಮಾಹುತಿ ದಳ" ತಯಾರಾಗಬೇಕು ಎಂಬರ್ಥದ ಮಾತುಗಳನ್ನಾಡಿದ್ದರು. ಈಗಲೂ ಆಡುತ್ತಿದ್ದಾರೆ. ಆದರೆ ಹಿಂದೂ ಸಮಾಜದ ವಿವೇಕಿಗಳು ಇಂಥ ವಿಕ್ಷಿಪ್ತ, ಅಪಾಯಕಾರಿ ಚಿಂತನೆಗಳನ್ನು ವ್ಯವಸ್ಥಿತವಾಗಿ ಅದುಮಿದ್ದರು. ಇದುವರೆಗೂ ಎಂಥದೇ ಸಂದರ್ಭ ಬಂದರೂ ಹಿಂದೂ ಉಗ್ರಗಾಮಿಯಾಗಲಾರ ಎಂಬ ಅಚಲ ನಂಬಿಕೆ ದೇಶದ ಕೋಟಿ ಕೋಟಿ ಹಿಂದೂಗಳಲ್ಲಿ ಮನೆಮಾಡಿತ್ತು.
ಆದರೆ ಈಗ ಅಂಥ ಗಟ್ಟಿ ನಂಬಿಕೆಯ ಬುಡವೇ ಅಲುಗಾಡುತ್ತಿದೆ. ಕಳೆದ ಕೆಲವು ದಿನಗಳಿಂದ ದೇಶದ ಗಮನ ಸೆಳೆದಿರುವ ವಿದ್ಯಮಾನಗಳು ಹಿಂದೂ ವಿಶ್ವಾಸವನ್ನು ಪ್ರಶ್ನಿಸಲು ಸಾಕಷ್ಟು ಸರಕುಗಳನ್ನು ಒದಗಿಸುತ್ತಿವೆ. ಸಾಧ್ವಿ ಪ್ರಜ್ಞಾಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಬಂಧನ ದೇಶದ ಜನಮಾನಸದಲ್ಲಿ "ಹಿಂದೂ ಉಗ್ರವಾದ" ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಳ್ಳುವಂತೆ ಮಾಡಿದೆ.
ಸಾಧ್ವಿ ಪೂರ್ಣಚೇತನಗಿರಿ ಅಲಿಯಾಸ್ ಪ್ರಜ್ಞಾಸಿಂಗ್ ಠಾಕೂರ್ಗೆ ಈಗ 38 ವರ್ಷ ವಯಸ್ಸು. ಈಕೆ ಜನಿಸಿದ್ದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಲಹಾರ್ ಪಟ್ಟಣದಲ್ಲಿ, 1970ರಲ್ಲಿ.
ಈಕೆಯ ಬದುಕು ನಿಜಕ್ಕೂ ವರ್ಣರಂಜಿತ. ಮೊದಲಿನಿಂದಲೂ ಗಿಡ್ಡವಾಗಿ ಕೂದಲು ಕತ್ತರಿಸಿಕೊಳ್ಳುತ್ತಿದ್ದಳು. ಹುಡುಗರಂತೆ ಬಟ್ಟೆ ಧರಿಸುವುದು, ಪಲ್ಸರ್-ಬುಲ್ಲೆಟ್ ಬೈಕ್ಗಳನ್ನು ವೇಗವಾಗಿ ಓಡಿಸುವ ಹವ್ಯಾಸವೂ ಇತ್ತು. ಒಂದರ್ಥದಲ್ಲಿ ಈಕೆಗೆ ಬೈಕುಗಳ ಬಗ್ಗೆ ತೀವ್ರ ವ್ಯಾಮೋಹ. ಕರಾಟೆಯಂತಹ ಆತ್ಮರಕ್ಷಣೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಳು. ಒಮ್ಮೆ ಪುಂಡಾಟಿಕೆಯಲ್ಲಿ ತೊಡಗಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೆ ತನ್ನ 'ಕೈ'ರುಚಿಯನ್ನೂ ತೋರಿಸಿದ್ದಳಂತೆ!
ಇವಳು 1993ರಲ್ಲಿ ಎಬಿವಿಪಿಯನ್ನು ಸೇರಿದಳು. ಆರಂಭದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದರೂ ನಂತರದ ದಿನಗಳಲ್ಲಿ ತನ್ನ ಭಾಷಣ ಕಲೆಯಿಂದ ಹೆಸರು ಗಳಿಸತೊಡಗಿದಳು. 2002ರಲ್ಲಿ ಮಧ್ಯಪ್ರದೇಶ ಎಬಿವಿಪಿ ಘಟಕದ ಅಧ್ಯಕ್ಷೆಯೂ ಆದಳು. ಅದಲ್ಲದೆ 2002ರಲ್ಲಿ ಗುಜರಾತ್ ಚುನಾವಣೆಯ ವೇಳೆ ಬಿಜೆಪಿ ಪರ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದಳು ಎಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. 2007ನೆ ಇಸವಿಯಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲೂ ಈಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದಳು. ನಂತರ ಅದೇ ವರ್ಷ ಲೌಕಿಕ ಬದುಕಿಗೆ ವಿದಾಯ ಹೇಳಿ ಸನ್ಯಾಸ ಸ್ವೀಕರಿಸಿ ಸಾಧ್ವಿ ಪೂರ್ಣಚೇತನಗಿರಿ ಎಂಬ ಹೆಸರನ್ನು ಪಡೆದುಕೊಂಡಳು. ಈಗ ಈಕೆಯನ್ನು 2006 ಸೆಪ್ಟೆಂಬರ್ನಲ್ಲಿ ಮಾಲೇಗಾಂವ್ನಲ್ಲಿ 38 ಮಂದಿಯನ್ನು ಬಲಿತೆಗೆದುಕೊಂಡ ಸ್ಫೋಟ ಪ್ರಕರಣಕ್ಕೆ ಸಂಭಂದಿಸಿದಂತೆ ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದಲ್ಲದೆ 2006ನೇ ಇಸವಿಯಲ್ಲೇ ನಡೆದ ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿಯೂ ಈಕೆಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.
ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಭಾರತೀಯ ಸೇನೆಯಲ್ಲಿ ಅಧಿಕಾರಿ. ಮಹಾರಾಷ್ಟ್ರ ರಾಜ್ಯದ ಮಧ್ಯಮ ವರ್ಗದ ಬ್ರಾಹ್ಮಣ ಮನೆತನವೊಂದರಲ್ಲಿ ಜನಿಸಿದ ಪುರೋಹಿತ್ ಬಾಲ್ಯದಿಂದಲೂ ದೇಶದ ಬಗ್ಗೆ ಅಗಾಧ ಭಕ್ತಿಯನ್ನು ಹೊಂದಿದ್ದ. ಇದೇ ದೇಶಭಕ್ತಿ ಅವನನ್ನು ಸೇನೆಗೆ ಸೇರುವಂತೆ ಮಾಡಿತು. ಸೇನೆಯಲ್ಲಿ ಇದುವರೆಗೂ ಶ್ರೀಕಾಂತ್ ಪುರೋಹಿತ್ ಮೇಲೆ ಯಾವುದೇ ಆಪಾದನೆಗಳಿಲ್ಲ. ಆದರೆ ಈಗ ಮಾಲೇಗಾಂವ್ ಸ್ಫೋಟಕ್ಕೆ ಆರ್ಡಿಎಕ್ಸ್ ಪೂರೈಸಿದ ಗುರುತರ ಆರೋಪ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಮೇಲಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಶ್ರೀಕಾಂತ್ ಪುರೋಹಿತ್ ಈಗ ಜೈಲಿನಲ್ಲಿದ್ದಾರೆ. ಇವರಲ್ಲದೆ ಇನ್ನಿಬ್ಬರು ಸೇನಾಧಿಕಾರಿಗಳ ಬಗ್ಗೆ ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ವಿನಾಯಕ ದಾಮೋದರ ಸಾವರ್ಕರ್ ಅವರ ಸೊಸೆ ಹಿಮಾನಿ ಸಾವರ್ಕರ್ ನೇತೃತ್ವದಲ್ಲಿರುವ 'ಅಭಿನವ ಭಾರತ' ಎಂಬ ಸಂಘಟನೆಯ ಮೇಲೂ ಪೋಲಿಸರ ಗುಮಾನಿ ಆರಂಭವಾಗಿದೆ.
ಇವಿಷ್ಟು ವಿಚಾರಗಳು "ಹಿಂದೂ ಉಗ್ರಗಾಮಿಗಳು" ಎಂದು ಹೇಳಲು ಹಲವು ಮಂದಿಗೆ ಕಾರಣ ಒದಗಿಸಿಕೊಟ್ಟಿವೆ.
ಪ್ರಜ್ಞಾ ಸಿಂಗ್ ಮತ್ತು ಶ್ರೀಕಾಂತ್ ಪುರೋಹಿತ್ ಎದುರಿಸುತ್ತಿರುವ ಆರೋಪಗಳು ಯಾವ ದೃಷ್ಟಿಯಿಂದ ನೋಡಿದರೂ ಗುರುತರವಾದವುಗಳು. ಅವರ ಪಾತ್ರ ಮಾಲೇಗಾಂವ್ ಸ್ಫೋಟ ಮತ್ತು ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಪ್ರಕರಣಗಳಲ್ಲಿ ಸಾಬೀತಾದರೆ ಅವರಿಗೆ ಖಂಡಿತಾ ಶಿಕ್ಷೆಯಾಗಲೇಬೇಕು. ದೇಶದ ಕಾನೂನಿಗಿಂತ ಸಾಧ್ವಿಯೂ ದೊಡ್ಡವಳಲ್ಲ, ಲೆಫ್ಟಿನೆಂಟ್ ಕರ್ನಲ್ ಕೂಡ ದೊಡ್ಡವನಲ್ಲ.
ಆದರೆ ಒಮ್ಮೆ ತಾಳಿ. ಇವರಿಬ್ಬರ ಮೇಲಿರುವ ಆರೋಪಗಳು ಒಂದು ವೇಳೆ ಸಾಬೀತಾದರೆ "ಹಿಂದೂ ಉಗ್ರವಾದ" ಅಥವಾ "ಹಿಂದೂ ಭಯೋತ್ಪಾದನೆ" ಎಂಬ ಆರೋಪಗಳು ಸಾಬೀತಾದಂತಾಗುತ್ತವೆಯೇ? "ಸವರ್ೇಪಿ ಸುಖಿನಃ ಸಂತು ಸವರ್ೇ ಸಂತು ನಿರಾಮಯ" ಎನ್ನುವ ಸಂಸ್ಕೃತಿಯ ಮಂದಿ ಧಾಮರ್ಿಕ ಭಯೋತ್ಪಾದನೆಯಂತಹ ಹೇಯ ಕೃತ್ಯಕ್ಕೆ ಕೈಹಾಕಲು ಹೇಗೆ ಸಾಧ್ಯ?
ಭಾರತದ ಮೇಲೆ ಮೊಟ್ಟಮೊದಲ ಇಸ್ಲಾಮಿಕ್ ದಾಳಿ ನಡೆದದ್ದು 1191ರಲ್ಲಿ. ಅದನ್ನು ಮೊದಲನೆಯ ತರೈನ್ ಯುದ್ಧ ಅಂತ ಕರೆಯುತ್ತಾರೆ. ಯುದ್ಧದಲ್ಲಿ ಎಲ್ಲಿಂದಲೋ ಬಂದ ಮೊಹಮದ್ ಘೋರಿ ನಮ್ಮ ಪ್ರಥ್ವಿರಾಜ್ ಚೌಹಾಣನ ಎದುರು ಸೋಲನನುಭವಿಸಿದ. ಸೋತ ಮೊಹಮದ್ ಘೋರಿ ಪ್ರಥ್ವಿರಾಜನಲ್ಲಿ ದಯಾಭಿಕ್ಷೆಯನ್ನು ಬೇಡಿದ. ಪ್ರಥ್ವಿರಾಜನ ಮನ ಕರಗಿತು, ಮೊಹಮದ್ ಘೋರಿಯನ್ನು ಕೊಲ್ಲದೆ ಹಾಗೇ ಬಿಟ್ಟ. ಆದರೆ ಅದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದೇನು? 1192ರಲ್ಲಿ ಮೊಹಮದ್ ಘೋರಿ ಮತ್ತೊಮ್ಮೆ ಭಾರತದ ಮೇಲೆ ದಂಡೆತ್ತಿ ಬಂದ. ಯುದ್ಧದಲ್ಲಿ ಪ್ರಥ್ವಿರಾಜ್ ಸೋಲುಂಡ. ಆದರೆ ಮೊಹಮದ್ ಘೋರಿ ಪ್ರಥ್ವಿರಾಜನಿಗೆ ಅಭಯ ನೀಡಲಿಲ್ಲ. ಬದಲಿಗೆ ಅವನ ಶಿರಚ್ಛೇದ ಮಾಡಿದ! ಅಲ್ಲಿಂದ ಶುರುವಾಯಿತು ಭಾರತದ ಮೇಲಿನ ಇಸ್ಲಾಮಿಕ್ ಆಕ್ರಮಣ.
ನಂತರದ ದಿನಗಳಲ್ಲಿ ಒಂದಾದಮೇಲೊಂದರಂತೆ ಹಿಂದೂ ಶ್ರದ್ಧಾ ಕೇಂದ್ರಗಳು ದಾಳಿಕೋರರ ಕೈಯಲ್ಲಿ ಪುಡಿಯಾಗತೊಡಗಿದವು. ಹೀಗೇ ಸುಮಾರು ಮೂವತ್ತು ಸಾವಿರ ಹಿಂದೂ ದೇವಾಲಯಗಳನ್ನು ಇಸ್ಲಾಮಿಕ್ ದಾಳಿಕೋರರು ನಾಶಮಾಡಿರಬಹುದು ಎಂದು ಖ್ಯಾತ ಇತಿಹಾಸಕಾರ ಸೀತಾರಾಮ್ ಗೋಯಲರು ತಮ್ಮ ಊಟಿಜಣ ಖಿಜಟಠಿಟಜ: ಘಚಿಣ ಚಿಠಿಠಿಜಟಿಜಜ ಣಠ ಣಜಟ? ಎಂಬ ಎರಡು ಸಂಪುಟಗಳ ಗ್ರಂಥದಲ್ಲಿ ಅಂದಾಜಿಸಿದ್ದಾರೆ. ಇನ್ನೊಬ್ಬ ಖ್ಯಾತ ಇತಿಹಾಸತಜ್ಞ ವಿಲ್ ಡ್ಯುರಾಂಟ್ "ಭಾರತದ ಮೇಲೆ ನಡೆದ ಇಸ್ಲಾಮಿಕ್ ಆಕ್ರಮಣವು ಜಗತ್ತಿನ ಇತಿಹಾಸದ ಅತ್ಯಂತ ಕ್ರೂರ ಆಕ್ರಮಣಗಳಲ್ಲಿ ಒಂದು" ಎಂದು ಅಭಿಪ್ರಾಯಪಟ್ಟಿದ್ದರೆ. ಬಲವಂತದ ಮತಾಂತರ, ಮಹಿಳೆಯರ ಮಾನಭಂಗ, ನಗನಾಣ್ಯಗಳ ಲೂಟಿಗೆ ಸಮಯದಲ್ಲಿ ತಡೆಯೇ ಇರಲಿಲ್ಲ.
ಅವತ್ತು ಆರಂಭವಾದ ಭಾರತದ ಮೇಲಿನ ಇಸ್ಲಾಮಿಕ್ ಆಕ್ರಮಣ ಇವತ್ತಿಗೂ ನಿಂತಿಲ್ಲ. ವರ್ಷಂಪ್ರತಿ ಅಮರನಾಥ ಯಾತ್ರಾಥರ್ಿಗಳ ಮೇಲೆ ದಾಳಿ ಮಾಡುವುದು, ಅನ್ಯಾಯವಾಗಿ ಕೆಲವು ಮಂದಿಯನ್ನು ಬಲಿತೆಗೆದುಕೊಳ್ಳುವುದು ನಡೆದೇ ಇದೆ. ಕಾಶಿ ಸಂಕಟಮೋಚನ ಮಂದಿರದ ಮೇಲಿನ ದಾಳಿ, ಅಕ್ಷರಧಾಮ ದೇಗುಲದ ಮೇಲಿನ ದಾಳಿ, ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದ ಮೇಲಿನ ದಾಳಿ, ವಿಶ್ವಪ್ರಸಿದ್ಧ ಹಂಪಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಆಕ್ರಮಣ... ಇವೆಲ್ಲ ಘಜ್ನಿ-ಘೋರಿ ಸಂಸ್ಕೃತಿಯ ಮತ್ತು ಅವರು ನಡೆಸಿದ ಕೃತ್ಯಗಳ ಮುಂದುವರೆದ ಭಾಗವೇ ಆಗಿದೆ.
ಕಾಶ್ಮೀರದಿಂದ ಹೊರಹಾಕಲ್ಪಟ್ಟ ಮೂರು ಲಕ್ಷ ಮಂದಿ ಕಾಶ್ಮೀರಿ ಪಂಡಿತರು ಇವತ್ತು ದಿಲ್ಲಿಯ ಬೀದಿಗಳಲ್ಲಿ ಅನಾಥರಾಗಿ ಓಡಾಡಿಕೊಂಡಿರಲು ಕಾರಣವೂ ಘಜ್ನಿ-ಘೋರಿ ಮನಸ್ಥಿತಿಯೇ ಆಗಿದೆ. ನೆಮ್ಮದಿಯಾಗಿ ಕಾಶ್ಮೀರ ಕಣಿವೆಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದ ಪಂಡಿತ ಸಮುದಾಯದವರು ತಮ್ಮ ಮೂಲ ನೆಲೆಯನ್ನು ಬಿಡುವಂತಾಗಲು ಕಾರಣವೇ ಕಾಶ್ಮೀರ ಕಣಿವೆಯಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದನೆ. ತಮ್ಮ ನೆಲೆಯನ್ನೇ ಕಳೆದುಕೊಂಡು ದೆಹಲಿಯ ಬೀದಿಗಳಲ್ಲಿ ನಿರ್ಗತಿಕರಂತೆ ಓಡಾಡಿಕೊಂಡಿರಲು ಇಸ್ಲಾಮಿಕ್ ಭಯೋತ್ಪಾದಕರು ನಡೆಸಿದ ಹಿಂದೂ ಜನಾಂಗೀಯ ನಿಮರ್ೂಲನೆಯೇ ಕಾರಣ. ಬಾಂಗ್ಲಾ ವಲಸಿಗರ ಸಂಖ್ಯೆ ಮಿತಿಮೀರಿ ಅಸ್ಸಾಮಿನ ವಿವಿಧ ಹಳ್ಳಿಗಳಿಂದ ಸುಮಾರು ಎಪ್ಪತ್ತಾರು ಸಾವಿರ ಹಿಂದೂಗಳನ್ನು ಓಡಿಸಲಾಗಿದೆ. ಅವರೆಲ್ಲರೂ ಈಗ ಉದಲ್ಗುರಿ ಮತ್ತು ದಾರಂಗ್ನಲ್ಲಿ ಅಸ್ಸಾಮ್ ಸರಕಾರ ನಡೆಸುವ ಸುಮಾರು 32 ಪುನರ್ವಸತಿ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಹಿಂದೂಗಳು ಬಿಟ್ಟ ಹಳ್ಳಿಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ತುಂಬಿಕೊಂಡು ಆಲ್ ಅಸ್ಸಾಂ ಮುಸ್ಲಿಮ್ ಚಾತ್ರ ಪರಿಷತ್, ಸಿಮಿ, ಮುಸ್ಲಿಮ್ ಸ್ಟುಡೆಂಟ್ ಅಸೋಸಿಯೇಷಯ್ ನಂಥ ಸಂಘಟನೆಗಳ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ. ಇಂಥ ಸಂಗತಿಗಳು ನಮ್ಮ ದೇಶದ ಸರ್ವಧರ್ಮ ಸಮನ್ವಯಕಾರರ ಕಣ್ಣಿಗೆ ಬೀಳುವುದಿಲ್ಲ.
ಅದು ಇಸ್ಲಾಮ್ ಇರಬಹುದು, ಕ್ರಿಶ್ಚಿಯಾನಿಟಿ ಇರಬಹುದು, ಯಹೂದಿ ಮತವಿರಬಹುದು ಅಥವಾ ಹಿಂದೂ ಧರ್ಮವೇ ಇರಬಹುದು. ಪ್ರತಿಯೊಬ್ಬ ಧಮರ್ೀಯನಿಗೂ ತನ್ನ ಧರ್ಮದ ಶ್ರದ್ಧಾ ಕೇಂದ್ರಗಳು ಪರಮ ಪವಿತ್ರ ಸ್ಥಳದಂತೆ ಕಾಣುತ್ತವೆ. ಅಂಥ ಸ್ಥಳಗಳನ್ನು ಪರಧಮರ್ೀಯರು ಬಂದು ಆಕ್ರಮಿಸಿಕೊಳ್ಳುವುದನ್ನು, ಭಕ್ತನೊಬ್ಬನ ರಕ್ತ ಚೆಲ್ಲುವುದನ್ನು ಯಾವ ಧರ್ಮ ನಿಷ್ಠನೂ ಸಹಿಸಲಾರ. ಆದರೆ ಹಿಂದೂ ಧರ್ಮದ ದುದರ್ೆಸೆ ನೋಡಿ; ಹಿಂದೂ ಧರ್ಮದ ತವರು ನೆಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳನ್ನು ವಿನಾಕಾರಣ ಕೊಲ್ಲಲಾಗುತ್ತಿದ್ದರೂ ಸಕರ್ಾರಗಳಿಂದ ಹಿಂದೂಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗುತ್ತಿಲ್ಲ. ಹಿಂದೂಗಳಿಗೆ ರಕ್ಷಣೆ ನೀಡಬೇಕಾದ ಅಗತ್ಯತೆಯೂ ನಮ್ಮ ಸಕರ್ಾರಗಳಿಗಿಲ್ಲ. ಏಕೆಂದರೆ ಹಿಂದೂಗಳು ಒಂದು ರಾಜಕೀಯ ಶಕ್ತಿಯಾಗಿ ಇನ್ನೂ ಹೊರಹೊಮ್ಮಿಲ್ಲ.
ಇವತ್ತು ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗಳನ್ನು ಸಂಘಟಿಸುತ್ತಿರುವವರು ಯಾರು ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತ ಹಿಂದೂವಿಗೂ ಗೊತ್ತಿದೆ. ಬಗ್ಗೆ ನಮ್ಮನ್ನಾಳುವ ಸಕರ್ಾರಗಳು ಏನು ಮಾಡುತ್ತಿವೆ, ಏನು ಮಾಡುತ್ತಿಲ್ಲ ಎಂಬುದೂ ತಿಳಿದಿವೆ.
ತನ್ನ ಶ್ರದ್ಧಾ ಕೇಂದ್ರಗಳನ್ನು ದಾಳಿಕೋರರಿಂದ ರಕ್ಷಿಸಲು ಸರಕಾರಗಳಿಂದ ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಹಿಂದೂಗಳ ಮನಸ್ಸಿನಲ್ಲಿ ಇದೆ. ಎಗ್ಗಿಲ್ಲದೆ ನಡೆಯುವ ಶದ್ಧಾಕೇಂದ್ರಗಳ ಮೇಲಿನ ದಾಳಿ ಹಿಂದೂ ಮನಸ್ಸಿನಲ್ಲಿ ಆಕ್ರೋಶವನ್ನೂ, ಅಭದ್ರತೆಯ ಭಾವವನ್ನೂ ಮೂಡಿಸಬಲ್ಲದು. ಇಂಥ ಅಭದ್ರತೆಯ ಭಾವ ಕೆಲವೊಮ್ಮೆ ತಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ನಡೆಸುವವರ ವಿರುದ್ಧ ತಾವೂ ದಾಳಿ ನಡೆಸಬೇಕು ಎನ್ನುವ ಆತುರದ, ಅನುಚಿತ ತೀರ್ಮಾನ ಕೈಗೊಳ್ಳಲು ಕಾರಣವಾಗುತ್ತದೆ. ಅದು ತಪ್ಪೇ ಇರಬಹುದು, ಆದರೆ ರಕ್ಷಣೆ ನೀಡಬೇಕಾದವರು ಸುಮ್ಮನಿದ್ದಾಗ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳೋಣ ಎಂಬ ತೀಮರ್ಾನಕ್ಕೆ ಕೆಲವರು ಬರುವುದು ಸಹಜ. ಅಂಥ ತೀಮರ್ಾನ, ಅಭದ್ರತೆಯ ಭಾವ ಮತ್ತು ಆಕ್ರೋಶ ಕೆಲವು ಸಂದರ್ಭಗಳಲ್ಲಿ ಅವಿವೇಕದ ಕೆಲಸಗಳಿಗೆ ಕಾರಣವಾಗುತ್ತದೆ.
ಒಂದೆಡೆ ನಮ್ಮ ಪ್ರಧಾನ ಮಂತ್ರಿಗಳು ದೇಶದ ಸಂಪತ್ತಿನ ಮೇಲೆ ಪ್ರಾಥಮಿಕ ಹಕ್ಕಿರುವುದು ಮುಸ್ಲಿಮರಿಗೆ ಎಂದು ಹೇಳುತ್ತಾರೆ. ಇನ್ನೊಂದೆಡೆ ಮತಾಂತರ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಬರುವ ಹಿಂದೂ ಪ್ರತಿಕ್ರಿಯೆಗಳನ್ನು 'ಕೋಮುವಾದ' ಎಂಬ ಹೆಸರಿನಲ್ಲಿ ಮರಳಿ ಹಿಂದೂಗಳ ತಲೆಗೇ ಕಟ್ಟಲಾಗುತ್ತಿದೆ. ಇಂಥ ಅವಿವೇಕದ ಕೆಲಸಗಳು ಒಬ್ಬ ಸಾಮಾನ್ಯ ಹಿಂದೂವಿನ ಧಾಮರ್ಿಕ ಭಾವನೆಗಳನ್ನು ತೀವ್ರವಾಗಿ ಕೆರಳಿಸಬಲ್ಲದು. ಸಾಮಾನ್ಯ ಪ್ರಜೆಯೊಬ್ಬನ ಮನದಲ್ಲಿ ಅಭದ್ರತೆಯ ಭಾವನೆಯನ್ನು ಹುಟ್ಟಿಸಬಲ್ಲದು.
ಯಾರೇನೇ ಅನ್ನಲಿ, ಇವತ್ತು ಜಗತ್ತಿನಲ್ಲಿ ಹಿಂದೂ ಧರ್ಮ ಅನ್ನುವುದು ಅಲ್ಪಸಂಖ್ಯಾತ ಧರ್ಮಗಳ ಪೈಕಿ ಒಂದು. ಭಾರತದಲ್ಲಿ ಹಿಂದೂಗಳು ಸಂಖ್ಯಾದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಒಸಾಮಾ ಬಿನ್ ಲಾಡೆನ್, ಮುಲ್ಲಾ ಓಮರ್ಗಳಿಂದ ಪ್ರಾಯೋಜಿತ ಜಾಗತಿಕ ಭಯೋತ್ಪಾದನೆಯನ್ನು ಏಕಾಂಗಿಯಾಗಿ ಎದುರಿಸುವ ಚೈತನ್ಯ ಹಿಂದೂ ಧರ್ಮದಕ್ಕೆ ಇರುವುದರ ಬಗ್ಗೆ ಅನುಮಾನಗಳಿವೆ. ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಹೇಗೆ ಅಭದ್ರತೆಯ ಭಾವ ಕಾಡುತ್ತಿದೆ ಎಂದು ನಮ್ಮ ವಿಚಾರವಾದಿಗಳು ವಾದಿಸುತ್ತಿದ್ದಾರೋ ಹಾಗೆಯೇ ಜಾಗತಿಕ ಮಟ್ಟದಲ್ಲಿ ಹಿಂದೂಗಳಿಗೂ ಅಭದ್ರತೆಯ ಭಾವ ಕಾಡುತ್ತಿದೆ. ಇಂಥ ಅಭದ್ರತೆಯ ಭಾವ ಅವಿವೇಕದ ಕೆಲಸಗಳಿಗೆ ಪ್ರೇರಣೆ ನೀಡಲು ಸಾಕು. ಇದೇ ಅಭದ್ರತೆಯ ಭಾವ ಮತ್ತು ಅಸ್ತಿತ್ವದ ಪ್ರಶ್ನೆ ಶ್ರೀಕಾಂತ್ ಪುರೋಹಿತ್ ಮತ್ತು ಪ್ರಜ್ಞಾ ಸಿಂಗ್ ಪ್ರಕರಣಗಳಲ್ಲಿ ಕಂಡುಬಂದಿದೆಯೆ ಹೊರತು ಇದು - ಕೆಲವರು ಪ್ರತಿಪಾದಿಸುತ್ತಿರುವಂತೆ - ಹಿಂದೂ ಉಗ್ರವಾದವೂ ಅಲ್ಲ, ಹಿಂದೂ ಭಯೋತ್ಪಾದನೆಯೂ ಅಲ್ಲ.
ಮಾಲೇಗಾಂವ್ ಪ್ರಕರಣ ಮತ್ತು ಸಂಜೋತಾ ರೈಲಿನಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ಇವರ ಪಾತ್ರ ಇತ್ತೇ, ಇದ್ದರೆ ಯಾವ ಅದು ಯಾವ ಮಟ್ಟದ್ದು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ತನಿಖೆಯ ನಂತರ ಅವರಿಬ್ಬರು ತಪ್ಪಿತಸ್ಥರೆಂದು ತಿಳಿದುಬಂದರೆ ಅವರಿಬ್ಬರಿಗೆ ದೇಶದ ಕಾನೂನಿನ ಪ್ರಕಾರ ತಕ್ಕ ಶಿಕ್ಷೆಯಾಗಬೇಕು. ದೇಶದ ಸಂವಿಧಾನ ಮತ್ತು ಸಮಗ್ರತೆಯೆದುರು ಯಾವ ಧರ್ಮ-ಮತವೂ ದೊಡ್ಡದಲ್ಲ.
ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ, ತನ್ನ ನಿರ್ಲಕ್ಷದ ಮೂಲಕ ಹಿಂದೂಗಳಲ್ಲಿ ಅಭದ್ರತೆಯ ಭಾವನೆಯನ್ನು ಹುಟ್ಟುಹಾಕಿದ ಸರಕಾರಗಳಿಗೆ ಮೊದಲು ಶಿಕ್ಷೆಯಾಗಬೇಕು. ಜಾತ್ಯತೀತತೆಯ ಸೋಗಿನಲ್ಲಿ ಧಾಮರ್ಿಕ ತಾರತಮ್ಯ ತೋರುವ ರಾಜಕಾರಣಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಆಗ ಮಾತ್ರ ಇನ್ನಷ್ಟು ಸಾದ್ವಿ ಪ್ರಜ್ಞಾ ಸಿಂಗ್ಗಳು, ಶ್ರೀಕಾಂತ್ ಪ್ರಸಾದ್ ಪುರೋಹಿತ್ಗಳು ಹುಟ್ಟುವುದನ್ನು ತಪ್ಪಿಸಬಹುದು.
ವಿಜಯ್ ಜೋಶಿ,
ಕುಂದಾಪುರ

ಮುಂದೆ ಓದಿ
| | |Home