ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಚುನಾವಣೆ ಬಂದಾಕ್ಷಣ ಎಚ್ಚರಗೊಳ್ಳುವ ನಮ್ಮ ರಾಜಕಾರಣಿಗಳಿಗೆ ಬಡವರು ಯಾಕೆ ಕಣ್ಣಿಗೆ ಬೀಳುತ್ತಿಲ್ಲ...? ವೇದಿಕೆಯೇರಿದಾಕ್ಷಣ `ರಾಮ ರಾಜ್ಯ', `ಬಡತನ ನಿವಾರಣೆ' ಅದೂ ಇದೂ ಎಂದು ನೂರೆಂಟು ಬೊಗಳೆ ಬಿಡುವ ಮಂದಿಗೆ ನಮ್ಮ ಅಕ್ಕಪಕ್ಕದಲ್ಲೇ ಒಪ್ಪತ್ತಿನ ಕೂಳಿಗೂ ಗತಿಯಿಲ್ಲದೆ ನೊಂದು ಜೀವನ ಸಾಗಿಸುವ ಮಂದಿ ಯಾಕೆ ಕಣ್ಣಿಗೆ ಬೀಳುತ್ತಿಲ್ಲ. ಇವರೆಲ್ಲರ ಉದ್ಧಾರಕ್ಕೆ ಸರಕಾರ ಯಾಕೆ ಮುಂದಾಗುತ್ತಿಲ್ಲ. ಇದು ಈ ಹಿಂದೆಯೂ, ಇಂದೂ, ಮುಂದೆಯೂ ನಮ್ಮೆಲ್ಲರನ್ನು ಕಾಡುವ ಒಂದು ಪ್ರಶ್ನೆ.









ಇವತ್ತು ನಾನು ಹೇಳ್ತಿರೋದು ಇದೇ ರೀತಿಯ ಒಂದು ಕಥೆ. ಸರಕಾರ ಅಧಿಕಾರಕ್ಕೆ ಬರುವಾಗ, ವಿಧಾನ ಸೌಧದ ಎದುರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾರುದ್ದದ ಭರವಸೆಗಳನ್ನು ನೀಡುತ್ತವೆ. ಆದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಫಂಡಿಜೆಯಂತಹ ಊರಿನಲ್ಲಿರೋ ಹಿಂದುಳಿದ ಪಂಗಡಕ್ಕೆ ಸೇರಿರೋ ಅಪ್ಪಿಗೆ ದೊರೆಯುತ್ತಿದೆಯೋ ಅಥವಾ ಇತ್ತ ಕಾರ್ಕಳದ ಈದು ಗ್ರಾಮದಲ್ಲಿರೋ ಮಲೆಕುಡಿಯ ಜನಾಂಗದವರಿಗೆ ಸಿಗುತ್ತಿದೆಯೋ ಎಂಬುದನ್ನು ನಮ್ಮನ್ನಾಳುವ ಸಕರ್ಾರಗಳು ಎಷ್ಟರ ಮಟ್ಟಿಗೆ ಯೋಚಿಸಿದೆ.?










ಸರಕಾರ ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ , ಗುಡ್ಡಗಾಡು ಹಾಗೂ ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕೋಟ್ಯಾಂತರ ರುಪಾಯಿ ಮಂಜೂರು ಮಾಡುತ್ತಿದೆ. ಆದರೆ ಅವೆಲ್ಲವೂ ಪರಿಣಾಮಕಾರಿಯಾಗಿ ಅವರಿಗೆ ಸಿಗುತ್ತಿಲ್ಲ. ಇದಕ್ಕೊಂದು ಸ್ಪಷ್ಟ ನಿದರ್ಶನ ಇಲ್ಲಿದೆ.
ಇದು ಪ್ರಜ್ಞಾವಂತರ ಜಿಲ್ಲೆಯೆಂದೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಜನಾಂಗಕ್ಕೆ ಸೇರಿದ ಮನೆಯೊಂದರ ಕಥೆ.

ದೇರೇಬೈಲ್ ಕೊಂಚಾಡಿಯ ಸೂಜಿಕಲ್ ಎಂಬಲ್ಲಿದ್ದಾರೆ ಈ ಕಥೆಯ ಕಥಾನಾಯಕಿ. ಆದರೆ ಇವರ ಕುಟುಂಬಕ್ಕೆ ಸರಕಾರದ ಯೋಜನೆಗಳ್ಯಾವುವೂ ಇಂದಿನ ತನಕವೂ ತಲುಪಿಲ್ಲ. ಇನ್ನೂ ಇವರು ನಾಗರೀಕ ಸಮಾಜಕ್ಕೆ ಸೇರಿದವರಂತೆ ಕಂಡುಬರುತ್ತಿಲ್ಲ. ಇರಲೊಂದು ಸೂರಿಲ್ಲ...ಇವರಿಗೆ ತುಳು ಭಾಷೆಯೊಂದನ್ನು ಬಿಟ್ಟರೆ ಇನ್ಯಾವುದೂ ತಿಳಿಯುತ್ತಿಲ್ಲ. ಎರಡು ಮಂದಿ ಹೆಣ್ಣು ಮಕ್ಕಳಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಮನೆಯ ಆಧಾರಸ್ಥಂಭದಂತಿದ್ದ ಇವರ ಪತಿ ಇಹಲೋಕ ತ್ಯಜಿಸಿದ್ದಾರೆ.











ಇವರ ಮನೆಯನ್ನು ನೋಡಿದರೆ ಅದೊಂದು ಗುಡಿಸಲಿನಂತಿದೆ. ಗುಡಿಸಲು ಹೇಳಲೂ ಕಷ್ಟರಕವಾದಂತಿದೆ. ಅಷ್ಟೊಂದು ಇಕ್ಕಟ್ಟಾಗಿ ಇದು ಮೂಡಿಬಂದಿದೆ. ಇವರ ಜೀವನಾಧಾರಕ್ಕೆ ಈಗ ಸಿಬ್ಲು ಚಟ್ಟಿ(ಕಾಡುಬಳ್ಳಿಯಿಂದ ಮಾಡುವ ತಟ್ಟೆ)ತಯಾರಿಕೆಯೇ ಮೂಲವಾಗಿದೆ.
ಕಷ್ಟದಲ್ಲಿ ದಿನಕ್ಕೆರಡು ತಟ್ಟೆಗಳ ನಿರ್ಮಾಣ. ಒಂದಕ್ಕೆ ರು.10ರಂತೆ ಇದಕ್ಕೆ ಲಭಿಸುತ್ತವೆ. ಇದೇ ಜೀವನ ರಥದ ಪಯಣಕ್ಕೆ ಆದಾಯ ಮೂಲ.ಅನಾರೋಗ್ಯ ಪೀಡಿತರಾದರೆ ಅದೂ ಇಲ್ಲ.


ಸರಕಾರದ ಆಶ್ರಯ ಯೋಜನೆಯಲ್ಲಿ ಇವರಿಗೆ ಮನೆಸಿಗಲಿಲ್ಲ. ಭಾಗ್ಯಜ್ಯೋತಿಯೋಜನೆಯಲ್ಲಿ ವಿದ್ಯುತ್ ಕೂಡಾ ದಕ್ಕಿಲ್ಲ. ನಗರ ನೈರ್ಮಲ್ಯ ಯೋಜನೆಯಡಿ ಶೌಚಾಲಯವೂ ಸಿಕ್ಕಿಲ್ಲ. ನಲ್ವತ್ತು ವರ್ಷಗಳಿಂದ ಒಂದೇ ಜಾಗದಲ್ಲಿ ವಾಸವಾಗಿರುವ ಇವರಿಗೆ ಜಾಗದ ಹಕ್ಕು ಪತ್ರಕೂಡ ದೊರೆತಿಲ್ಲ. ಮತದಾನದಿಂದಲೂ ಇವರು ವಂಚಿತರಾಗಿದ್ದಾರೆ. ಈ ಕಾರಣಕ್ಕಾಗಿಯೋ ಏನೂ ಇಂದಿನ ತನಕ ಯಾವೊಬ್ಬ ರಾಜಕಾರಣಿಯೂ ಈ ಬಡ ಮಹಿಳೆಯತ್ತ ಕಣ್ಣೆತ್ತಿಯೂ ನೋಡಿಲ್ಲ!


ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರೋರ್ವರು ಇವರಿಗೆ ತಾತ್ಕಾಲಿಕ ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಾರೆ. ಆದರೆ ಆ ಅಕ್ಕಿಯನ್ನು ತರಲು 60ರುಗಳಿಗೆ ಕಷ್ಟಪಡುವ ಪರಿಸ್ಥಿತಿ. ಇಂತಹ ಇನ್ನೂ ಅನೇಕ ಬಡ ಜನಗಳು ನಮ್ಮ ನಡುವಿದ್ದಾರೆ. ಸರಕಾರ ಇವರತ್ತ ಒಂದು ನೋಟ ಹರಿಸಬೇಕಾಗಿದೆ.
- ಆಶಾ

ಮುಂದೆ ಓದಿ

ಕಾಸರಗೋಡು: ಬೆಂಗಳೂರು ಸರಣಿ ಸ್ಫೋಟ ಮತ್ತು ದಕ್ಷಿಣ ಭಾರತದ ವಿವಿಧೆಡೆ ಹರಡಿರುವ ಉಗ್ರಗಾಮಿ ನಂಟು ಹೊಂದಿದ ಮತ್ತೋರ್ವನನ್ನು ಕಾಸರಗೋಡಿನಿಂದ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ಆದಿತ್ಯವಾರ ಸಂಜೆ 6.30ಕ್ಕೆ ಚೆಮ್ನೂಡ್ ಸಮೀಪದ ಚೆಂಬರಿಕ ಕಡಲ ತೀರದ ಬಾಡಿಗೆ ಕ್ವಾರ್ಟಸ್ ಗೆ ಕರ್ನಾಟಕ ಉಗ್ರ ನಿಗ್ರಹ ದಳದ ತಂಡ ಧಾಳಿ ನಡೆಸಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡರು. ಈತ ತಮಿಳುನಾಡು ನಿವಾಸಿಯಾಗಿದ್ದು, ತಮಿಳು ಮಾತ್ರವೇ ಮಾತನಾಡುತ್ತಿರುವುದಾಗಿ ಇಲ್ಲಿನ ನಾಗರಿಕರು ತಿಳಿಸಿದ್ದಾರೆ.

ಈ ಧಾಳಿಯ ಅಲ್ಪ ಹೊತ್ತಿನ ಬಳಿಕ ನಿಗ್ರಹ ದಳದ ಇನ್ನೊಂದು ತಂಡ ನಡೆಸಿದ ದಾಳಿಯಲ್ಲಿ ಮತ್ತೋರ್ವನನ್ನು ಕಸ್ಟಡಿಗೆ ತೆಗೆದಿರುವುದಾಗಿ ಹೇಳಲಾಗುತ್ತಿದೆ. ಒಂದು ವಾರದ ಹಿಂದೆ ಕಾಸರಗೋಡಿನ ಟ್ರಾವೆಲ್ಸ್ ಏಜೆನ್ಸಿಯೊಬ್ಬರ ನೆರವಿನಿಂದ ಈ ಬಾಡಿಗೆ ಮನೆ ಖರೀದಿಸಿ ಕೊಂಡಿದ್ದು ಇಲ್ಲಿ ಇಬ್ಬರು ವಾಸಿಸುತ್ತಿದ್ದಾರೆನ್ನಲಾಗಿದೆ. ಇವರಿಬ್ಬರು ಕರ್ನಾಟಕ ಪೊಲೀಸ ವಶದಲ್ಲಿದ್ದು, ಉಗ್ರಗಾಮಿ ನಂಟು ಮತ್ತು ವಿದ್ವಂಸಕ ಕೃತ್ಯದ ಪ್ರಮುಖ ಮಾಹಿತಿಗಳು ತನಿಖಾದಳಕ್ಕೆ ದೊರೆತಿದೆಯೆಂದು ತಿಳಿದುಬಂದಿದೆ.

ಮುಂದೆ ಓದಿ

ಸುಳ್ಯ: ಸುಳ್ಯದ ಗಾಂಧೀನಗರದ ಕ್ರೀಡಾಂಗಣದಲ್ಲಿ ಆರು ದಿನಗಳ ಕಾಲ ವಿಜ್ರಂಭಿಸಿದ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಪುರುಷರ ವಿಭಾಗದಲ್ಲಿ ಎಚ್.ಎಸ್.ಐ.ಐ.ಡಿ.ಸಿ ಹರಿಯಾನ ತಂಡ ಪಂದ್ಯಾಕೂಟದ ಕೊನೆಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಚೆನ್ನೈನ ದಕ್ಷಿಣ ರೈಲ್ವೇ ತಂಡವನ್ನು ನೇರ ಸೆಟ್ಗಳಲ್ಲಿ ಸೋಲಿಸಿ ಪ್ರಥಮ ಸ್ಥಾನಿಯಾಗಿ ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯುವ ಫೈನಲ್ ಲೀಗ್ ಹಂತಕ್ಕೆ ಪ್ರವೇಶ ಪಡೆಯಿತು.

ಫೈನಲ್ ಪಂದ್ಯದಲ್ಲಿ ಹರಿಯಾನ ತಂಡದ ನಾಯಕ ರಘುವೀರ್ ಸಿಂಗ್ ನೇತೃತ್ವದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ತಂಡ ಸುಲಭವಾಗಿ ದಕ್ಷಿಣ ರೈಲ್ವೇ ತಂಡವನ್ನು ಸೋಲಿಸಿತು. ತಂಡದ ನೀಳಕಾಯ ಆಟಗಾರರಾದ ಸುಬೇಸಿಂಗ್, ಜಿತೇಂದ್ರ, ಸುರ್ಜೀತ್ ಸಿಂಗ್ ಸರ್ವಾಂಗಾಟ ಪ್ರದರ್ಶಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಆಕರ್ಷಕ ಹೊಡೆತ ಮತ್ತು ತಡೆಗಳ ಮೂಲಕ ಅಂಕಗಳ ಕೊಳ್ಳೆಹೊಡೆಯುತ್ತಾ ಹೋದ ಹರಿಯಾನ ತಂಡ ಒಮ್ಮೆ ಕೂಡಾ ಹಿಂದೆ ಬಿದ್ದಿಲ್ಲ.

ಮುಂದೆ ಓದಿ

ಉಡುಪಿ: ಹಲವೆಡೆಗಳಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರ ಜಾಲವನ್ನು ಉಡುಪಿ ಪೊಲೀಸರು ಬೇಧಿಸಿದ್ದು, ಓರ್ವ ಮಹಿಳೆಯೂ ಸೇರಿದಂತೆ ನಾಲ್ವರನ್ನು ಬಂಧಿಸಿ ಅವರಿಂದ ಸುಮಾರು 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಕಾಸರಗೋಡು ಜಿಲ್ಲೆಯವರಾದ ದೇವಿನಗರ ಕುಂಬ್ಳೆ ನಿವಾಸಿ ರತನ್ (20), ಕುಂತದಡ್ಕ ನಿವಾಸಿಗಳಾದ ಕುಮಾರ (20) ಹಾಗೂ ದಶರಥ (20) ಅವರನ್ನು ದಸ್ತಗಿರಿ ಮಾಡಲಾಯಿತು. ಅವರನ್ನು ವಿಚಾರಿಸಿದಾಗ ಉಡುಪಿ ಕಡಿಯಾಳಿ ರಾಘವೇಂದ್ರ ಆಚಾರ್ಯ, ಒಳಕಾಡು ಅರುಣ ಪಟವರ್ಧನ, ಕೋಟ ಯಜ್ಞನಾರಾಯಣ ಭಟ್ ಎಂಬವರಲ್ಲಿ ಕಳವು ಮಾಡಿರುವುದನ್ನು ಒಪ್ಪಿಕೊಂಡರು. ಕೃತ್ಯದಲ್ಲಿ ಲಲಿತಾ (26) ಎಂಬಾಕೆ ಸಹಕರಿಸಿದ್ದಾಗಿ ತಿಳಿಸಿದರು. ಆರೋಪಿಗಳಿಂದ 509 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಮುಂದೆ ಓದಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಇದೀಗ ಕುಖ್ಯಾತ ಪಾತಕಿ ದಾವೂದ್ ಸಹಚರರನ್ನು ಬಂಧಿಸಿದ್ದಾರೆ. ರಾಜಕಾರಣಿಗಳ ಹತ್ಯೆ ಸಂಚನ್ನು ವಿಫಲಗೊಳಿಸುವ ಕಾರ್ಯ ಯಶಸ್ವಿಯಾಗಿದೆ.

ಇಂಟರ್ ಪೋಲ್ನಿಂದ ಗುರುತಿಸಲ್ಪಟ್ಟ ಕ್ರಿಮಿನಲ್ ರಶೀದ್ ಮಲಬಾರಿ ಯಾನೆ ಡಬಲ್ ಸಾಹಿಲ್ ಇಸ್ಮಾಯಿಲ್ ಶೇಖ್, ಸಯಾಫ್ ಟಿ.ಎ, ಮೊಹಮ್ಮದ್ ಹಾಸಿಂ, ಇಬ್ರಾಹಿಂ ಯಾನೆ ಸಾಹಿಬ್ ಇಬ್ರಾಹಿಂ ಎಂಬವರನ್ನು ಬಂಧಿಸಲಾಗಿದೆ.

ಪಶ್ಚಿಮ ವಲಯ ವಿಶೇಷ ಪೊಲೀಸ್ ಪತ್ತೆದಳ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ, ಮಂಗಳೂರು ಉಡುಪಿ ಅಪರಾಧ ಪತ್ತೆದಳ ಸಿಬ್ಬಂದಿಗಳು ನಡೆಸಿದ ಕಾಯರ್ಾಚರಣೆಯಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ಪಿಸ್ತೂಲ್, ಸಜೀವ ಮದ್ದುಗುಂಡುಗಳು, ಆಯುಧಗಳು, ದೇಶ ವಿದೇಶಗಳ ಸಿಮ್ ಕಾಡರ್್ಗಳು ಸೇರಿದಂತೆ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮುಂದೆ ಓದಿ

ಎಸ್.ಎಸ್.ಎಲ್.ಸಿ ಪರೀಕ್ಷೆ...
ಮಂಗಳೂರು: ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಇಂದಿನಿಂದ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆಬರೆಯಲಾರಂಭಿಸಿದರು. ಮಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಅಂತಿಮ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಒಂದು ನೋಟ ಇಲ್ಲಿದೆ.












































ಚಿತ್ರಗಳು: ಪ್ರಸನ್ನ ಬಿ.ಪಿ

ಮುಂದೆ ಓದಿ

ಸುಳ್ಯ : ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ಪಶ್ಚಿಮ ರೈಲ್ವೇ ಮುಂಬೈ ಪ್ರಥಮ ಸ್ಥಾನಿಯಾಗಿ ಮತ್ತು ಮುಂಬೈನ ಮಧ್ಯ ರೈಲ್ವೇ ತಂಡ ದ್ವಿತೀಯ ಸ್ಥಾನಿಯಾಗಿ ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯುವ ಫೈನಲ್ ಲೀಗ್ ಹಂತಕ್ಕೆ ತೇರ್ಗಡೆ ಪಡೆಯಿತು.

ನಾಲ್ಕು ತಂಡಗಳು ಸ್ಪರ್ಧಿಸಿದ ಮಹಿಳಾ ವಿಭಾಗದ ಲೀಗ್ ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಶ್ಚಿಮ ರೈಲ್ವೇ ತಂಡ ಮಧ್ಯ ರೈಲ್ವೇ ತಂಡವನ್ನು 3-0 ನೇರ ಸೆಟ್ನಲ್ಲಿ ಸೋಲಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.
ಭಾರತ ತಂಡದ ಆಟಗಾರ್ತಿ ಪಶ್ಚಿಮ ರೈಲ್ವೇಯ ನಾಯಕಿ ಶಿಬಿ ಕೆ.ಜೆ ಅವರ ಅದ್ಭುತ ಆಟದ ನೆರವಿನೊಂದಿಗೆ ಪಶ್ಚಿಮ ರೈಲ್ವೇ ಚಾಂಪಿಯನ್ ಆಗಿ ಮೂಡಿಬಂತು.

ಫೈನಲ್ ಲೀಗ್ ಹಂತಕ್ಕೆ:

ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಪುರುಷರ ವಿಭಾಗದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಮುಂಬೈನ ಪಶ್ಚಿಮ ರೈಲ್ವ ಏಜಯಗಳಿಸಿ ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ವಾಲಿಬಾಲ್ ಫೈನಲ್ ಲೀಗ್ ಹಂತಕ್ಕೆ ಪ್ರವೇಶ ಪಡೆಯಿತು. ಇಂದಿನ ಪಂದ್ಯದಲ್ಲಿ ಪಶ್ಚಿಮ ರೈಲ್ವೇ ತಂಡ ಉತ್ತಮ ಪ್ರದರ್ಶನ ನೀಡಿ ಕೊಚ್ಚಿನ ಪೋರ್ಟರ್ ಟ್ರಸ್ಟ್ ತಂಡವನ್ನು 3-0 ನೇರ ಸೆಟ್ಗಳಲ್ಲಿ ಸೋಲಿಸಿತು.

ಪಶ್ಚಿಮ ರೈಲ್ವೇ ತಂಡ ಆರಂಭದಲ್ಲಿಯೇ ಆಕರ್ಷಕ ಹೊಡೆತಗಳ ಮೂಲಕ ಅಂಗಳನ್ನು ಕೊಳ್ಳೆಹೊಡೆಯುತ್ತಾ ಸಾಗಿತು. ನಾಯಕ ಜೈ ಗಣೇಶ್ , ಮಣಿಕಂಠನ್ , ಕನೀಶ್ , ಮಹಾರಾಜ ಉತ್ತಮ ಆಟವನ್ನು ಪ್ರದಶರ್ಿಸಿದರು. ಮೊದಲ ಸೆಟ್ಟನ್ನು ಸುಲಭದಲ್ಲಿ ಗೆದ್ದುಕೊಂಡ ರೈಲ್ವೇ ತಂಡಕ್ಕೆ ಎರಡನೇ ಮತ್ತು ಮೂರನೇ ಸೆಟ್ನಲ್ಲಿ ಕೊಚ್ಚಿನ್ ತಂಡ ಉತ್ತಮ ಪ್ರತಿರೋಧ ವ್ಯಕ್ತಪಡಿಸಿದರೂ ಸಂಘಟಿತ ಹೋರಾಟ ನೀಡಿದ ಪಶ್ಚಿಮ ರೈಲ್ವೇ ಸುಲಭ ಜಯ ದಾಖಲಿಸಿತು. ರಾಬಿನ್ ಲೀಗ್ನ ಎರಡೂ ಪಂದ್ಯ ಗೆದ್ದುಕೊಂಡ ಪಶ್ಚಿಮ ರೈಲ್ವೇ ಪ್ರಥಮವಾಗಿ ಫೈನಲ್ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.

ಮುಂದೆ ಓದಿ

ಮಂಗಳೂರು : ಬಿಜೆಪಿ ಕರ್ನಾಟಕದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಎನ್ ಡಿಎ ಸರಕಾರ ಅಧಿಕಾರಕ್ಕೇರುವುದು ನಿಶ್ಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅಭಿಪ್ರಾಯಪಟ್ಟರು.

ತೊಕ್ಕೊಟ್ಟಿನ ಉಳ್ಳಾಲದಲ್ಲಿ ಭಾನುವಾರ ನಡೆದ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಬೆಲೆಏರಿಕೆ, ನಿರುದ್ಯೋಗ, ಭಯೋತ್ಪಾದನೆ ಇವುಗಳೆಲ್ಲವೂ ಕಾಂಗ್ರೆಸ್ ಸರಕಾರದ ಕೊಡುಗೆಗಳು ಎಂದು ಟೀಕಿಸಿದ ಅನಂತಕುಮಾರ್, ಸೋನಿಯಾರವರ ರೋಮ್ ರಾಜ್ಯ ನಮಗೆ ಬೇಡ, ಮಹಾತ್ಮಗಾಂಧಿಜಿ ಕಂಡ ರಾಮರಾಜ್ಯ ನಮಗೆ ಬೇಕಾಗಿದೆ. ಅದಕ್ಕೆ ಎಲ್.ಕೆ.ಅಡ್ವಾಣಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ಕುಮಾರ್ ಕಟೀಲ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಮಚಂದರ್ ಬೈಕಂಪಾಡಿ, ಮಾಜಿ ಶಾಸಕ ಜಯರಾಂ ಶೆಟ್ಟಿ, ಮಂಗಳೂರು ಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಬೋಳಿಯಾರು, ಜಿಲ್ಲಾ ಕಾರ್ಯದರ್ಶಿ ಮೋಹನ್ ರಾಜ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುಲಸ್ಯ ರೈ ಮೊದಲಾದವರಿದ್ದರು.

ಮುಂದೆ ಓದಿ

ಮಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹಳೆ ಮುಖಗಳಿಗೆ ಟಿಕೆಟ್ ನೀಡುವ ಮೂಲಕ ಯುವಜನತೆಗೆ ಅವಕಾಶ ನೀಡದೆ ವಂಚನೆ ಮಾಡಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ ಸದಾನಂದ ಗೌಡ ಆರೋಪಿಸಿದ್ದಾರೆ.

ಕಾಂಗ್ರೆಸ್ ಬಿಡುಗಡೆಗೊಳಿಸಿದ 22 ಮಂದಿಯ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯು `ಹಳೆ ಮದ್ಯ -ಹೊಸ ಬಾಟ್ಲಿ'ಗೆ ಎಂಬಂತಾಗಿದೆ ಎಂದವರು ಟೀಕಿಸಿದ್ದಾರೆ.

ಪಕ್ಷದ ಚುನಾವಣಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 60ರ ದಶಕದಲ್ಲಿ ಸ್ಪಧರ್ಿಸಿದ್ದವರಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ. ಯುವಕರಿಗೆ ಆದ್ಯತೆ ನೀಡದೇ `ನವ ಭಾರತ್ ನಿಮರ್ಾಣ ಮಾಡಲು ಹೊರಟಿದೆ ವ್ಯಂಗ್ಯವಾಡಿದ್ದಾರೆ.

ಯುಪಿಎ ಮೈತ್ರಿಕೂಟ ಕುಸಿದು ಹೋಗುತ್ತಿದೆ . ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ `ಮುಳುಗುವ ಹಡಗು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.

ಮುಂದೆ ಓದಿ

ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಚಲನಚಿತ್ರನಟಿ ತಾರಾ ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗಿದ್ದಾರೆ. ಏ.4ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಹೇಳಿದ್ದಾರೆ.

ಭಾನುವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಮಾವೇಶದಲ್ಲಿ ತಾರಾ ಪಾಲ್ಗೊಂಡಿದ್ದು, ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವ ಬಿಜೆಪಿ ಪಕ್ಷದಲ್ಲಿ ತಾನು ಗುರುತಿಸಿಕೊಳ್ಳಲು ಇಚ್ಚಿಸುವುದಾಗಿ ತಾರಾ ಹೇಳಿದ್ದರು.

ಮುಂದೆ ಓದಿ

ಮಂಗಳೂರು: ಸುರಕ್ಷಿತ, ಸುಭದ್ರ ಸಮಾಜಕ್ಕಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸೋಣ ಎಂದು ಚಲನಚಿತ್ರ ನಟಿ ತಾರಾ ಹೇಳಿದ್ದಾರೆ.
ಸಂಘನಿಕೇತನದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದ ಮಹಿಳಾ ಸಮಾವೇಶವದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರನ್ನು ಪೂಜ್ಯ ಭಾವದಿಂದ ಕಾಣಲು ಬಿಜೆಪಿಯ ಸುಭದ್ರ ಸರಕಾರ ರಚನೆಯಾಗಬೇಕು. ಸರಕಾರ ಸ್ಥಿರವಾಗಿರಬೇಕು. ದೇಶವನ್ನು ಕಟ್ಟಲು ಮಾತೆಯರೆಲ್ಲ ಮುಂದಾಗೋಣ ಎಂದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಲೋಚನಾ ಜಿ.ಕೆ.ಭಟ್ ಮಾತನಾಡಿ ಈ ಬಾರಿ ಕಾರ್ಯಕರ್ತರ ಇಚ್ಛಾಬಲ ಪಕ್ಷವನ್ನು ಗೆಲ್ಲಿಸಲಿದೆ ಎಂದರು.
ಸಮಾವೇಶವನ್ನು ಮಾಜಿ ಕಾರ್ಪೊರೇಟರ್ ರಾಮೇಶ್ವರಿ ಶೆಟ್ಟಿ ಉದ್ಘಾಟಿಸಿದರು.

ಮಾಜಿ ಕಾರ್ಪೊರೇಟರ್ ಮನೋರಮಾ ಭಟ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸುಧಾ ಎಸ್.ಭಟ್, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಶಾಸಕ ಎನ್.ಯೋಗೀಶ್ ಭಟ್, ಕ್ಷೇತ್ರ ಅಧ್ಯಕ್ಷ ಸತೀಶ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ಮಹಿಳೆಯರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮೋನಪ್ಪ ಭಂಡಾರಿ ಸ್ವಾಗತಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆಶಾ ಜಗದೀಶ್ ಪ್ರಸ್ತಾಪಿಸಿದರು. ಪ್ರಧಾನ ಕಾರ್ಯದರ್ಶಿ ಸುಮನಾ ಶರಣ್ ಸ್ವಾಗತಿಸಿದರು.

ಮುಂದೆ ಓದಿ

ಈ ಕನಸು ಎಕ್ಸ್ಲೂಸಿವ್
ಮಂಗಳೂರು: ಡೆನ್ ಡೆನ್ ಹಡಗು ಮುಳುಗಿ ವರುಷಗಳುರುಳಿದ್ದಾಗಿದೆ. ಇದೀಗ ಈ ಹಡಗನ್ನು ಮೇಲೆತ್ತುವ ಸಾಹಸ. ಇದಕ್ಕಾಗಿ ಕೋಟಿ ಕೋಟಿ ಖರ್ಚು. 6ಮಂದಿ ಡೆಲ್ಲಿಯ ತಂತ್ರಜ್ಞರು ಇದೀಗ ಸಮುದ್ರದೊಳಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಬೆಳ್ಳಂ ಬೆಳಗ್ಗೆ 6ಕ್ಕೆ ಇವರು ಸಮುದ್ರದೊಳ ಪ್ರವೇಶಿಸಿದರೆ ಮತ್ತೆ ಮೇಲೆ ಬರುವುದು ಸಂಜೆ 4ರ ಸುಮಾರಿಗೆ. ಅಷ್ಟಕ್ಕೂ ಅವರಲ್ಲೇನು ಮಾಡುತ್ತಿದ್ದಾರೆಂಬ ಕುತೂಹಲವೇ...





ಹೌದು... ಮುಳುಗಿದ ಡೆನ್ ಡೆನ್ ಹಡಗಿನ ಫ್ಯಾನು, ಮುಖ್ಯ ಭಾಗಗಳನ್ನು ಇದೀಗ ಕತ್ತರಿಸಲಾಗುತ್ತದೆ. ಇದರಿಂದಾಗಿ ಹಡಗನ್ನು ಮೇಲೆಳೆಯಲು ಅನುಕೂಲವಾಗುತ್ತದೆ. ಅತ್ಯಾಧುನಿಕ ಲೇಸರ್ ತಂತ್ರಜ್ಞಾನವನ್ನು ಬಳಸಿ ಈ ಕಾರ್ಯಾಚರಣೆಯನ್ನು ನೀರೊಳಗಿನಿಂದ ನಡೆಸಲಾಗುತ್ತಿದೆ ಎಂದು ಶೇಖ್ ಮೊಹಮ್ಮದ್ ಭಾಷಾ ತಿಳಿಸಿದ್ದಾರೆ.

ಫೇರ್ ಡೀಲ್ ಸಂಸ್ಥೆಯು ಮುಳುಗಿದ ಹಡಗನ್ನು ಖರೀದಿಸಿದೆ. ಮಂಗಳೂರಿನ ಸಿಟಿ ಸ್ಟೀಲ್ ಸಂಸ್ಥೆಯ ಮೊಹಮ್ಮದ್ ನವಾಝ್ ಎಂಬವರು ಇದನ್ನು ಮೇಲೆತ್ತಿ ಒಡೆಯುವ ಗುತ್ತಿಗೆಯನ್ನು ವಹಿಸಿಕೊಂಡಿದ್ದಾರೆ. ಇದಕ್ಕಾಗಿ 2.91ಕೋಟಿ ವ್ಯಯಿಸಲಾಗಿದೆ.




ಶೇ70 ಪೂರ್ಣ: ಡೆನ್ ಡೆನ್ ಹಡಗಿಗೆ ಅತ್ಯಂತ ಬಲಶಾಲಿಯಾದ ಉಕ್ಕಿನ ಸರಪಣಿಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಹಡಗನ್ನು ಆರಂಭದಲ್ಲಿ ನೇರವಾಗಿ ನಿಲ್ಲಿಸುವುದು ಈ ಸಂಸ್ಥೆಯ ಯೋಜನೆ. ಬಳಿಕ ಅದನ್ನು ದಡಕ್ಕೊಯ್ದು ಅದನ್ನು ವ್ಯವಸ್ಥಿತವಾಗಿ ಒಡೆಯಲಾಗುವುದು. ಹಡಗನ್ನು ಮೇಲೆತ್ತುವ ನಿಟ್ಟಿನಲ್ಲಿ 150ಟನ್ ಸಾಮರ್ಥ್ಯ ಎಳೆಯುವ ಯಂತ್ರಗಳು ಸಮುದ್ರ ತಟದಲ್ಲಿ ಸ್ಥಾಪನೆಗೊಂಡಿದೆ. ಶಕ್ತಿಯುತ ರೋಪುಗಳ ಮೂಲಕ ಹಡಗು ಹಾಗೂ ಸರಪಣಿಗಳನ್ನು ಜೋಡಿಸುವ ಕಾರ್ಯ ನಡೆಸಲಾಗಿದೆ. ಒಟ್ಟಾರೆಯಾಗಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದು ಭಾಷಾ ಅವರ ಅಭಿಪ್ರಾಯ. ಒಡೆದ ಹಡಗಿನ ಭಾಗಗಳನ್ನು ಖರೀದಿಸಲು ಈಗಾಗಲೇ ಮಾತುಕತೆಗಳು ಪೂರ್ಣಗೊಂಡಿವೆ.







ಕಿನಾರೆಯಲ್ಲಿ ಯಂತ್ರ: ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಇದೀಗ ಯಂತ್ರಗಳದ್ದೇ ಕಾರುಬಾರು. ಬೃಹದಾಕಾರದ ಬುಲ್ಡೋಜರ್ಗಳು. ಜೀಪು.. ವಿಂಚ್ ಮೆಷಿನುಗಳು... ಗ್ಯಾಸ್ ಕಟ್ಟರುಗಳು... ಗ್ಯಾಸ್ ಸಿಲಿಂಡರುಗಳು... ಯಾಂತ್ರೀಕೃತ ಬೋಟುಗಳು... ಹೀಗೆ ಸಾಗರ ತಡದಲ್ಲಿ ವಿವಿಧ ಸಲಕರಣೆಗಳು. ಇವೆಲ್ಲವೂ ಮುಳುಗಿದ ಹಡಗಿನ ಮೇಲೆತ್ತುವ ಕಾರ್ಯಕ್ಕಾಗಿ... ಸುಮಾರು 30 ಮಂದಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.














ಮುನಿಸಿತ್ತು: ಸುಂದರ ಕಡಲತೀರ ತಣ್ಣೀರು ಬಾವಿಯಲ್ಲಿ ಡೆನ್ ಡೆನ್ ಹಡಗು 2007ರ ಜೂ.23ರಂದು ಮುಳುಗಿದೆ. ಇದು ಆಫ್ರಿಕಾದ ಏರಿಟ್ರಿಯಾ ದೇಶದ ಹಡಗು. ಅಂದು ಪ್ರಕೃತಿ ಮುನಿಸಿತ್ತು. ಹಾಗಾಗಿ ಹಡಗು ಮುಳುಗಿತ್ತು!. ದುಬಾಯಿಯಿಂದ ಹೊರಟ ಹಡಗು ತಾಂತ್ರಿಕ ವೈಫಲ್ಯದಿಂದಾಗಿ ಮಂಗಳೂರು ಬಂದರಿನ ಅನತಿ ದೂರದಲ್ಲಿ ಲಂಗರು ಹಾಕಿತ್ತು. ಮಳೆಯಬ್ಬರ ಅಧಿಕವಾಗಿತ್ತು.










ಸಮುದ್ರದಲ್ಲಿ ಬಿರುಗಾಳಿ ಗೆ ಸಿಲುಕಿದ ಹಡಗು ತಣ್ಣೀರು ಬಾವಿ ಕಡಲ ಕಿನಾರೆಯ ತನಕ ಸಾಗಿ ಮರಳಿನಲ್ಲಿ ಹೂತಿತು... ಮಳೆ -ಗಾಳಿಯಬ್ಬರದಿಂದಾಗಿ ಕಾರ್ಯಾಚರಣೆ ಫಲಕಾರಿಯಾಗಿಲ್ಲ... ಕೊಂಚ ಕೊಂಚವೇ ವಾಲುತ್ತಿದ್ದ ಹಡಗು ಮುಸ್ಸಂಜೆಯ ವೇಳೆ ನೀರೊಳಗೆ ಮುಳುಗಿತು... ಅದರಲ್ಲಿದ್ದ ಒಟ್ಟು 24ಮಂದಿಯ ಪೈಕಿ 21ಮಂದಿ ಸುರಕ್ಷಿತವಾಗಿ ದಡ ಸೇರಿದರು. ಮೂವರು ಜಲಸಮಾಧಿಯಾದರು. ಇದೀಗ ಡೆನ್ ಡೆನ್ ಮುಳುಗಿ ವರುಷಗಳು ಕಳೆದಿವೆ. ಕಿನಾರೆಯಿಂದ ತುಸು ದೂರದಲ್ಲಿ ಬೋರಲಾಗಿ ಬಿದ್ದ ಹಡಗು ಗೋಚರಿಸುತ್ತಿದೆ. ಒಳಗೇನಿದೆಯೋ ಗೊತ್ತಿಲ್ಲ... ಕೋಟಿ ಕೋಟಿ ಖರ್ಚು ಮಾಡಿ ಹಡಗು ಖರೀದಿಸಿದ್ದಾರೆ. ಇದನ್ನು ಮೇಲೆತ್ತಲು ಮತ್ತಷ್ಟು ಕೋಟಿ ವ್ಯಯಿಸಲಾಗುತ್ತಿದೆ. ಅಂತೂ ಇದೊಂದು ಕುತೂಹಲಕ್ಕೆ ಕಾರಣವಾಗಿದೆ.




ಚಿತ್ರ - ವರದಿ : ಹರೀಶ್ ಕೆ. ಆದೂರು.

ಮುಂದೆ ಓದಿ

ಕನ್ನಡದ ಮೊದಲ ಆನಿಮೇಷನ್ ಚಿತ್ರ ಬಿಡುಗಡೆಗೆ ಸಿದ್ಧ
ಇದೇ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಆನಿಮೇಷನ್ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡದಲ್ಲೊಂದು ನೂತನ ದಾಖಲೆ ಬರೆಯಲಿರುವುದು ಸುಳ್ಳಲ್ಲ. ಅಂದ ಹಾಗೆ ಚಿತ್ರದ ಟೈಟಲ್ ಇದು ಬೊಂಬೆಯಾಟವಯ್ಯ.



ಸುಮಾರು ಒಂದು ಕೋಟಿ ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ನಿರ್ದೇಶಕ ಜಗ್ಗೇಶ್ ಅಭಿನಯದ ಮಠ ಚಿತ್ರವನ್ನು ನಿರ್ದೇಶಿಸಿದ್ದ ಗುರುಪ್ರಸಾದ್. ಮೈಸೂರಿನ ಕುವೆಂಪು ನಗರದಲ್ಲಿರುವ ಎ.ಪಿ.ಎಸ್. ಆನಿಮೇಷನ್ ಸ್ಟುಡಿಯೋದಲ್ಲಿ ಚಿತ್ರ ರೂಪುಗೊಂಡಿದೆ. ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯ ತಂತ್ರಜ್ಞರು ಕಳೆದ ಹನ್ನೊಂದು ತಿಂಗಳಿನಿಂದ ಎಡೆಬಿಡದೆ ಹಾಕಿದ ಪ್ರಯತ್ನದ ಫಲವೇ ಈ ಚಿತ್ರ.

ಸುಮಾರು 120 ನಿಮಿಷದ ಈ ಚಿತ್ರದಲ್ಲಿ 50ಕ್ಕೂ ಅಧಿಕ ಪಾತ್ರಗಳಿವೆ. 4.20ಸಾವಿರ ಚಿತ್ರಗಳನ್ನು ಜೋಡಿಸಿ ರಚಿಸಲಾದ ಈ ಸಿನಿಮಾಕ್ಕೆ ಯಾವುದೇ ವಿದೇಶಿ ಅಥವ ಹೊರರಾಜ್ಯದ ಸಹಾಯ ಪಡೆದಿಲ್ಲ ಅನ್ನುವುದು ಅಗ್ಗಳಿಕೆಯ ಸಂಗತಿ.

ಅಂದಹಾಗೆ ಚಿತ್ರದ ಕಥೆ ರಾಜರ ಕಾಲದ್ದು. ರಾಜ, ವಿದೂಷಕ, ಆತನ ಮಕ್ಕಳು ಹೀಗೆ ವಿವಿಧ ಪಾತ್ರಗಳು. ಆದರೆ ಚಿತ್ರಕಥೆ ಹಾಗೂ ಸಂಭಾಷಣೆಗಳಲ್ಲಿ ಪ್ರಸ್ತುತ ಸಾಮಾಜಿಕ ಸ್ಥಿತಿಗತಿಗಳ ಬಳಕೆಯಿದೆಯಂತೆ. ಪಾ.ಪ ಪಾಂಡು ಖ್ಯಾತಿಯ ಜಹಂಗೀರ್, ದನಂಜಯ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ.

ಇದೊಂದು ಮಕ್ಕಳ ಮನರಂಜನೆಯ ಚಿತ್ರವಾಗಿದ್ದು ಮಕ್ಕಳು ಸಾಧಕರಾಗಲು ಹೇಗೆ ಪ್ರಯತ್ನಿಸಬೇಕು ಎಂಬ ಸಂದೇಶ ಹೊಂದಿದೆಯಂತೆ.
ಹ್ಞಾಂ, ಚಿತ್ರಕ್ಕೆ ಸಂಗೀತ ನೀಡಿದವರು ಅನೂಪ್ ಸೀಳಿನ್. ಸಂಕಲನ ಬಿ.ಎಸ್.ಕೆಂಪರಾಜ್ ಅವರದು. ಮೂಲಕಥೆ ಎ.ಎಂ.ಪ್ರಕಾಶ್ ರವರ ಬಂದ ಕೊಂಡಗಿ ಎಂಬ ಮಕ್ಕಳ ನಾಟಕದ್ದು. ನಿದರ್ೇಶಕ ಗುರುಪ್ರಸಾದ್, ಲೋಕೇಶ್ವರಯ್ಯ, ಜೆ.ಸಿ.ರಾಜು ಮತ್ತು ಎಸ್.ಕೆ.ಶಂಕರರಾವ್ ಸೇರಿ ಭಗವತಿ ಕ್ರಿಯೇಷನ್ ಲಾಂಛನದಲ್ಲಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಆನಿಮೇಷನ್ ಕಾರ್ಯ ಸಂಪೂರ್ಣಗೊಂಡಿದ್ದು ಬಿಡುಗಡೆಯ ದಿನಗಣನೆಯಲ್ಲಿದೆ.

ಒಟ್ಟಿನಲ್ಲಿ ಕನ್ನಡ ಚಲನಚಿತ್ರ ಮಂಡಳಿಯ ಅಮೃತ ಮಹೋತ್ಸವದ ಸಂದರ್ಭದಲ್ಲೇ ಇಂಥಾದ್ದೊಂದು ನೂತನ ಪ್ರಯತ್ನ ಸಾಕಾರಗೊಳ್ಳುತ್ತಿರುವುದು ಸಂತಸದ ಸಂಗತಿಯೇ ಸರಿ. ಹಾಗೆಯೇ, ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳ ತವರೂರಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಲ್ಲೇ ಇದೂ ಜನ್ಮ ತಾಳಿದ್ದು ಸೋಜಿಗ ತರುವ ವಿಚಾರ!
ರಾಕೇಶ್ ಕುಮಾರ್ ಕಮ್ಮಜೆ, ಮೈಸೂರು.

ಮುಂದೆ ಓದಿ
12:44 AM

ಕ್ಷಿಪಣಿ ವಿವಾದ!

Posted by ekanasu

ನವದೆಹಲಿ: ಕೇಂದ್ರದ ಯು.ಪಿ.ಎ ಸರ್ಕಾರ ಇಸ್ರೇಲ್ ಐ.ಎ.ಐ ಸಂಸ್ಥೆಯಿಂದ 10ಸಾವಿರ ಕೋಟಿಯಷ್ಟು ದೊಡ್ಡ ಮೊತ್ತದ ಹಣತೆತ್ತು ಯುದ್ಧ ಕ್ಷಿಪಣಿ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿರುವ ಮಹತ್ವಕಾರಿ ಅಂಶವೊಂದಿ ಇದೀಗ ತೀವ್ರ ವಿವಾದಕ್ಕೆಡೆಮಾಡಿಕೊಟ್ಟಿದೆ.
ಈ ಹಿಂದೆ ಭಾರತೀಯ ನೌಕಾಪಡೆ ಇಸ್ರೇಲ್ ನಿಂದ ಬರಾಕ್ ಎನ್.ಜಿ ಕ್ಷಿಪಣಿ ಖರೀದಿಯ ಸಂದರ್ಭದಲ್ಲಿ 400ಕೋಟಿ ಲಂಚ ನೀಡಿದ ಪ್ರಕರಣದ ಕುರಿತು ಸಿ.ಬಿ.ಐ ತನಿಖೆ ನಡೆಯುತ್ತಿರುವಾಗಲೇ ಅದೇ ಕಂಪೆನಿಯಿಂದ ಮತ್ತೆ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಸಹಿಮಾಡಿರುವುದೇ ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ಭೂಮಿಯಿಂದ ಆಗಸಕ್ಕೆ ಚಿಮ್ಮುವ ಮಧ್ಯಮ ಗುರಿಯ ಕ್ಷಿಪಣಿಯನ್ನು ಇಸ್ರೇಲ್ ಕಂಪೆನಿಯಿಂದ ಖರೀದಿಸಲು ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಮಾಡಿತ್ತು.

ಮುಂದೆ ಓದಿ
11:41 PM

ಸೋಲ್ ಎಂದರೆ ಆತ್ಮ !

Posted by ekanasu

ಪುಟ್ಟ ಅಂಗಡಿ ಬಾಗಿಲಿಗೆ ಹೊಡೆದಿರುವ ಆಣಿಯಲ್ಲಿ ಚಪ್ಪಲಿ ಸರ ತೂಗುತ್ತಿದೆ. ಬಗೆ ಬಗೆಯ ಪಾದರಕ್ಷೆಗಳು. ರೂಪ, ಬಣ್ಣ ಎಲ್ಲವೂ ಆಕರ್ಷಕ. ಒಂದರ ಕೆಳಮೈ ಸಂಪೂರ್ಣ ಪ್ಲಾಸ್ಟಿಕ್, ಮತ್ತೊಂದರದ್ದು ಚರ್ಮ. ಇನ್ನೂ ಒಂದರದ್ದು ಮತ್ತೂ ಏನೋ ? ಬಲಗಾಲಿನ ಉಂಗುಷ್ಟಕ್ಕಿದ್ದ ಅಲಂಕಾರ ಎಡಗಾಲಿನ ಉಂಗುಷ್ಟಕ್ಕೂ ಇದೆ. ಎಲ್ಲವೂ ಒಂದೇ ನಮೂನೆ, ಅವಳಿಗಳು.

ಮೋಚಿ ಈಜೀವಗಳ ಬ್ರಹ್ಮ. ಹಣೆ ಮೇಲೆ ಬರೆದರೂ ಅವನೇ. ಅವತಾರ ಕಲ್ಪಿಸಿದವನೂ ಅವನೇ. ದೇಹಕ್ಕೆ ಆತ್ಮ ಜೋಡಿಸಿ ಹೊಲೆದಿದ್ದಾನೆ ; ಸಂಬಂಧದ ನೂಲಿನಿಂದ. ಒಂದನ್ನೊಂದು ಬಿಡಲಾರದು. ನಂಟಿಗೆ ಅಂಟು ಬೇರೆ ಹಚ್ಚುತ್ತಾನೆ. ಅದಕ್ಕೆ ಚಪ್ಪಲಿಗೆ ದೇಹ ಬೇರೆಯಿದೆ ; ಆತ್ಮವೇ ಬೇರೆ. ಅದೇ ನಮ್ಮ ಬಾಯಲ್ಲಿ "ಸೋಲ್' ಆದದ್ದು. ಸೋಲ್ ಎಂದರೆ ಆತ್ಮವೂ ತಾನೆ. ಚಪ್ಪಲಿಯ ಸೋಲ್ "ಮೆಟ್ಟಿ' ನ ಆತ್ಮ. ಆ ಬ್ರಹ್ಮನ ಅಧೀನ ಈ ಮೋಚಿ ಸಹ ಬ್ರಹ್ಮ.

ಆಗಾಗ್ಗೆ ಸಂಬಂಧ ಬೇರಾದೀತು ಎಂದಾಗ ಮತ್ತೊಮ್ಮೆ ಅಂಟು ಹಚ್ಚಿ ಒಣಗಿಸುತ್ತಾನೆ. ಮತ್ತೆ ಸಂಬಂಧ ಹಸಿ ಹಸಿ. ಮತ್ತಷ್ಟು ಕಾಲ ಜೀವನ. ನಮ್ಮ ಹಾಗೆ ನಾವು ತುಳಿಯುವ ಅವೂ. ಥೇಟ್ ನಮ್ಮಂತೆಯೇ.

ಸಂಸಾರದಲ್ಲಿ ಸರಿಗಮ ಹಾಡುವ ಖಯ್ಯಾಲಿ. ಆ ಹಾಡಿನ ದುಡಿತಕ್ಕೆ ಅವು ಶರಣು. "ಆತ್ಮ' ಇರುವವರೆಗೆ ಬದುಕು. ನಂತರ ಪ್ರಕೃತಿಯಲ್ಲಿ "ಲೀನ'. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ.

ನೂಲು ಕಡಿದು ಹೋದರೂ ಪಡೆದ ಆಯಸ್ಸಿಗೆ ಖೋತಾ ಇಲ್ಲ. ಮೋಚಿ ಮತ್ತೊಮ್ಮೆ ಹೊಸ ದಾರದಲ್ಲಿ ಹೊಲೆದು ಕೊಡುತ್ತಾನೆ. ಅನುರೂಪವೋ, ಪ್ರತಿರೂಪವೋ ನಂತರದ ಮಾತು. ನಮ್ಮ ಸಂಬಂಧ ಹಳಸಿ ಹೋಗಿ ಮತ್ತೊಂದು ಸಂಬಂಧ ಹುಡುಕಿಕೊಂಡಂತೆ. ಮತ್ತಷ್ಟು ದೂರ ಸಾಗಲಿಕ್ಕೆ ಒಂದು ಜೊತೆಯಷ್ಟೇ. ಆಯಸ್ಸಿನ ಲೆಕ್ಕಾಚಾರದಲ್ಲಿ ಇದ್ದದ್ದಷ್ಟೇ. ಸವೆಯುವುದೆಂದರೆ ಆತ್ಮ-ದೇಹ ಒಂದಾದಂತೆ ; ಇದೊಂದು ಬಗೆಯ "ಅದ್ವೈತ' !

ಎರಡು ಜೀವಕ್ಕೂ ಒಂದೇ ಹೆಸರು-ಚಪ್ಪಲಿ. ನಮ್ಮ "ದಂಪತಿ'ಯ ಹಾಗೆ. ಒಂದು ಬಿಟ್ಟು ಮತ್ತೊಂದಿಲ್ಲ. ಬೆಲೆಯೂ ಅಷ್ಟೇ. ಒಂದಿದ್ದರೆ ಮತ್ತೊಂದಕ್ಕೆ. ಇಬ್ಬರೂ ಇದ್ದರೆ ಬದುಕಿಗೂ ಬೆಲೆ. ಮೋಚಿ ಬಳಿ ಹಳವುಬಾರಿ ರೂಪುಗೊಂಡರೂ ಒಂದು ದಿನ ಪರ್ಯಟನ ವೀರನ ಪ್ರಯಾಣಕ್ಕೆ ಪೂರ್ಣ ವಿರಾಮ. ಮತ್ತೊಂದದ್ದೂ ಆಗ "ಜೀವ'ದಾನ. ಜೋಡಿ ಜೀವಗಳ ಕಥೆಯಲ್ಲಿ ಸಹಬಾಳ್ವೆ-ಸಮಾನತೆ-ಸಹ "ಗಮನ' ಪದ್ಧತಿ.
-ಅರವಿಂದ ನಾವಡ

ಮುಂದೆ ಓದಿ

ಮಂಗಳೂರು: ಕಾಪು ಕಲ್ಯದ ಮನೆಯೊಂದರಲ್ಲಿ ಶಂಕಿತ ಉಗ್ರನೋರ್ವನನ್ನು ಉಡುಪಿ ಅಪರಾಧ ಪತ್ತೆದಳದ ಪೊಲೀಸರು ಹಾಗೂ ಮಂಗಳೂರು ಅಪರಾಧ ಪತ್ತೆದಳದ ಪೊಲೀಸರು ಜಂಟಿಯಾಗಿ ಬಂಧಿಸಿದ್ದಾರೆ. ಆದರೆ ಈ ವಿಷಯವನ್ನು ಪೊಲೀಸ್ ಮೂಲ ನಿರಾಕರಿಸಿದೆ.

ಕಾಪು ಪರಿಸರದಲ್ಲಿ ಯುವಕರನ್ನು ಒಟ್ಟು ಸೇರಿಸಿಕೊಂಡು ಹಲಿಮಾ ಭಟ್ಕಳ್ ಎಂಬ ಕ್ರಿಕೆಟ್ ತಂಡವೊಂದನ್ನು ರಚಿಸಿಕೊಂಡಿದ್ದ ಕಾಪು ಕಲ್ಯ ನಿವಾಸಿ ಭಾರತ್ ನಗರದ ಇಬ್ರಾಹಿಂ ಎಂಬಾತನೇ ಬಂಧಿತ ಉಗ್ರ.
ಮಂಗಳೂರು ಪೊಲೀಸರು ಬೆಂಗಳೂರಿನಿಂದ ಬಂದ ಮಾಹಿತಿಯಂತೆ ಉಡುಪಿ ಪೊಲೀಸರ ಸಹಾಯದೊಂದಿಗೆ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟಿ.ವಿ ವೀಕ್ಷಿಸುತ್ತಿದ್ದ ಇಬ್ರಾಹಿಂ ನನ್ನು ಬಂಧಿಸಿದರು.

ಮುಂದೆ ಓದಿ
11:26 PM

ಕಪಿಲ್ ಕರಾಮತ್

Posted by ekanasu

ಸುಳ್ಯ,: ಭಾರತದ ವಾಲಿಬಾಲ್ ನ ವಿಜಯಕ್ಕಾಗಿ ಶ್ರಮಿಸಿದ ಆಟಗಾರ ಕೆ.ಜೆ.ಕಪಿಲ್ ದೇವ್ ಇದೀಗ ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಭಾರತ ವಾಲಿಬಾಲ್ತಂಡದ ಈ ಕ್ರೀಡಾಪಟು ಹಲವಾರು ವರುಷಗಳಿಂದ ಭಾರತ ತಂಡದ ಸದಸ್ಯರಾಗಿದ್ದು ಇವರು ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಗಳಲ್ಲಿ ಭಾರತದ ವಿಜಯಕ್ಕೆ ಪ್ರಮುಖ ಕಾರಣಕರ್ತರು.
ದಕ್ಷಿಣ ರೈಲ್ವೇ ತಂಡದ ಸದಸ್ಯರಾಗಿ ಕಪಿಲ್ ಸುಳ್ಯಕ್ಕೆ ಆಗಮಿಸಿ ಮಿಂಚಿನ ಆಟದ ಮೂಲಕ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದಾರೆ. ದಕ್ಷಿಣ ರೈಲ್ವೇಯ ವಿ.ಎಂ.ವಿಜೇಶ್, ಶಿವರಾಜನ್, ಕೆ.ಎಸ್.ಇ.ಬಿ.ಯ ಜಯಲಾಲ್ ಕೆ.ಜೆ,ಪಂಜಾಬ್ನ ಗುಲಾಂದರ್ ಸಿಂಗ್, ಮಂದೀಪ್ ಸಿಂಗ್, ಹೆಚ್.ಎಸ್.ಐ.ಟಿ.ಡಿ.ಸಿ ಹರಿಯಾನದ ದುಬೇಸಿಂಗ್, ಜಿತೇಂದ್ರ, ಸಂಜಯ್ ಕುಮಾರ್ ಮೊದಲಾದವರು ಭಾರತ ತಂಡದ ಆಟಗಾರರಾಗಿ ಭಾಗವಹಿಸುತ್ತಿದ್ದಾರೆ.
ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಸುನಿಲ್ ಕುಮಾರ್, ಮುಖೇಶ್ ಲಾಲ್, ಅಬೂಬಕ್ಕರ್, ಎಸ್.ವಿನೋದ್ ಮೊದಲಾದವರು ಭರ್ಜರಿ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಅಲ್ಲದೇ ಯುವ ಆಟಗಾರರಾದ ಕೊಚ್ಚಿನ್ ಫೋಟರ್್ ಟ್ರಸ್ಟ್ನ ಹಫೀಲ್, ಮನು, ಜೆ.ಎಸ್.ಡಬ್ಲ್ಯು ಬಳ್ಳಾರಿಯ ಅವಿನಾಶ್, ಕೆ.ಎಸ್.ಇ.ಬಿ.ಯ ಶಾಂಜಿ ಥಾಮಸ್ ಪಶ್ಚಿಮ ರೈಲ್ವೆಯ ಜೈ ಗಣೇಶ್, ಅಂಕಿತ್ ಚೌಧರಿ, ದ.ರೈಲ್ವೇಯ ಪ್ರಭಾಕರನ್ ಅದ್ಭುತ ಆಟದ ಮೂಲಕ ಗಮನ ಸೆಳೆದಿದ್ದಾರೆ.
ಪುರುಷರಿಗಿಂತ ತಾವೇನೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಮಹಿಳಾ ತಂಡದಲ್ಲೂ ಹಲವು ಪ್ರತಿಭಾವಂತ ವಾಲಿಬಾಲ್ ತಾರೆಗಳು ಸುಳ್ಯದಲ್ಲಿ ಮಿಂಚುತ್ತಿದ್ದಾರೆ.

ಮುಂದೆ ಓದಿ



ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಪುರುಷರ ರೌಂಡ್ ರಾಬಿನ್ ಲೀಬ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಪಶ್ಚಿಮ ರೈಲ್ವೇ ತಂಡ ರಾಷ್ಟ್ರೀಯ ತಂಡದ ತಾರೆಗಳನ್ನೊಳಗೊಂಡ ಚೆನ್ನೈನ ದಕ್ಷಿಣ ರೈಲ್ವೇ ತಂಡವನ್ನು 3-0 ನೇರ ಸೆಟ್ಗಳಿಂದ ಸೋಲಿಸಿತು.


ಭಾರತ ತಂಡದ ಕಪಿಲ್ ದೇವ್ , ಶಿವರಂಜನ್, ವಿಜೇಶ್ ಅವರನ್ನೊಳಗೊಂಡ ದಕ್ಷಿಣ ರೈಲ್ವೇ ತಂಡ ಕಳೆಗುಂದಿದ ಪ್ರದರ್ಶನ ನೀಡಿದ್ದು, ಅದ್ಭುತ ಆಟ ಪ್ರದರ್ಶಿಸಿದ ಪಶ್ಚಿಮ ರೈಲ್ವೇ ತಂಡ ಗೆಲುವು ದಾಖಲಿಸಿತು.

ಮುಂದೆ ಓದಿ

ಈ ಕನಸು ಎಕ್ಸ್ಲೂಸಿವ್
ಗಡಿಯಾರದ ಮುಳ್ಳು ಹತ್ತು ತೋರಿಸುತ್ತಿತ್ತು..ಅದೆಲ್ಲಿದ್ದರೋ ಗೊತ್ತಿಲ್ಲ...ನೂರಾರು ಜನ ಯುವಕರು ಒಟ್ಟಾಗಿದ್ದರು.ಗ್ರಾಮದಲ್ಲಿದ್ದ ಹಿರಿಯ ಪುರೋಹಿತರಾದ ಮದಕುಡೆ ಹರಿಭಟ್ ಅಲ್ಲೊಂದು ಕಡೆ ಸ್ವಸ್ತಿಕವಿಟ್ಟು ಊದುಬತ್ತಿ ಹಚ್ಚಿ ಕರ್ಪೂರಾರತಿ ಮಾಡಿದರು. ಈ ವರೆಗೆ ಸುಮ್ಮನಿದ್ದ ಆ ಯುವಕರಲ್ಲಿ ಅದೇನು ಉತ್ಸಾಹ ಮೂಡಿತೋ ಗೊತ್ತಿಲ್ಲ...ಬರಿಕಾಲಲ್ಲಿ ಕತ್ತಿ ಹಿಡಿದು ಸಾಗುತ್ತಾ ವೀರಾವೇಶದಿಂದ ವಿಸ್ತಾರವಾಗಿ ತುಂಬಿನಿಂತಿದ್ದ ಮುಳ್ಳಬಲೆಗಳನ್ನು ನೆಲಸಮಗೊಳಿಸಹೊರಟರು...





ಹೌದು... ಈ ಘಟನೆ ನಡೆದಿದ್ದು ಯುಗಾದಿಯ ಶುಭದಿನದಂದು. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ವ್ಯಾಪ್ತಿಯ ಕುರ್ಲೊಟ್ಟು ಸಮೀಪದ `ಅಂಗರಕರಿಯ'ದಲ್ಲಿದ್ದ
ಸಾವಿರಾರು ವರ್ಷಗಳ ಹಿಂದಿದ್ದ `ಪುರಾತನ ದೇಗುಲದ' ಶೋಧಕಾರ್ಯಕ್ಕೆ ನಾಂದಿಯಾಯಿತು.
ಈ ಘಟನೆಗೆ ಸಾಕ್ಷಿಯಾದವರು ಊರ ಹಿರಿಯರು. ಯುವ ಜನತೆ ಉತ್ಸಾಹದಿಂದ ನಾಲ್ಕಾರು ಎಕ್ಕರೆಗಳಲ್ಲಿ ಹರವಿ ನಿಂತಿದ್ದ ಮುಳ್ಳುಗಂಟಿ, ಕಾಡುಪೊದೆಗಳನ್ನು ನೆಲಸಮಗೊಳಿಸುತ್ತಿದ್ದರೆ ಹಿರಿತಲೆಗಳು ಹಳೆಯ ಕಥೆ ಬಿಚ್ಚತೊಡಗಿದರು...









ಅಂಗರಕರಿಯ ನದೀ ತಟದಲ್ಲಿದ್ದ ಈ ದೇವಸ್ಥಾನ ಬಹಳ ಕಾರಣೀಕವಾಗಿತ್ತೆಂದು ಈ ಹಿರಿಯರು ತಾವು ಕೇಳಿದ್ದನ್ನು ನೆನಪಿಸಿದರು. ಇತ್ತೀಚೆಗೆ ಈ ಪ್ರದೇಶದಲ್ಲಿದ್ದ ಬೃಹದಾಕಾರದ ಮರಕಡಿಯಲು ಬಂದಿದ್ದ ಕೆಲ ಮಂದಿಗೆ ಇಲ್ಲೊಂದು ಸರ್ಪ ಕಾಣಿಸಿಕೊಂಡಿದ್ದು, ಅವರು ಮರವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರಂತೆ.










ಅಲ್ಲಿತ್ತೊಂದು ಕುರುಹು: ಮಧ್ಯಾಹ್ನ ಗಂಟೆ ಒಂದಾಗುವ ಹೊತ್ತಿಗೆ ಒಂದಷ್ಟು ಭಾಗದ ಪೊದೆಗಳು ನಾಶಗೊಂಡಿದ್ದವು. ವಿಸ್ತಾರವಾದ ಪ್ರದೇಶದ ಮಧ್ಯಭಾಗದಲ್ಲಿ ಕುರುಹೊಂದು ಕಾಣಸಿಕ್ಕಿತು. ಸೇರಿದ್ದ ಗ್ರಾಮಸ್ಥರ ಮುಖದಲ್ಲೊಂದು ಮಂದಹಾಸ ಮೂಡಿತು. ಕೊನೆಗೂ ತಾವು ಹುಡುಕುತ್ತಿದ್ದ ದೇಗುಲದ ಕುರುಹು ಸಿಕ್ಕಿದ ಸಂತೋಷ ಅವರ ಮುಖದಲ್ಲಿ ಕಂಡುಬಂತು...



ಹೊಸಂಗಡಿ ಮತ್ತು ಬಡಕೋಡಿ ಗ್ರಾಮಗಳನ್ನೊಳಗೊಂಡ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ `ಗ್ರಾಮ ದೇವಸ್ಥಾನ'ವಿಲ್ಲ. ಈ ಭಾಗದಲ್ಲಿ ಕೊರಂಗಳ ಗೋಪಾಲಕೃಷ್ಣ ದೇವಸ್ಥಾನವಿದ್ದರೂ ಅದೊಂದು `ಮಠ'ದಂತೆ ಗೋಚರವಾಗುತ್ತದೆ. ಅಲ್ಲಿ ಕೊಡಿಯೇರಿ ಜಾತ್ರೆ ನಡೆಯುವುದಿಲ್ಲ. ಹಾಗಾಗಿ ಈ ಭಾಗಕ್ಕೆ ಈ ಹಿಂದೆ ಇದೇ ಗ್ರಾಮದೇವಸ್ಥಾನವಾಗಿದ್ದಿರಬಹುದೆಂಬ ನಂಬಿಕೆ ಇಲ್ಲಿನ ಹಿರಿಯರದ್ದು.
ಇತ್ತೀಚೆಗೆ ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ ಈ ಕ್ಷೇತ್ರದಲ್ಲಿ `ಪಂಚಾಯತನ' ಪೂಜೆ ನಡೆಯುತ್ತಿತ್ತಂತೆ. ಇದೀಗ ಈ ಕ್ಷೇತ್ರದ ಸಾನಿಧ್ಯ ಅತ್ಯಂತ ಕಾರಣೀಕವಾಗಿದ್ದು ಈ ಕ್ಷೇತ್ರಕ್ಕೊಂದು ಐತಿಹ್ಯವಿದೆಯೆಂದು ನಂಬಲಾಗಿದೆ.






ಹಿರಿಯರ ಪ್ರಕಾರ ಇಲ್ಲಿ ಸೂರ್ಯನಾರಾಯಣ ದೇವಸ್ಥಾನವಿತ್ತೆಂದೂ ಸುಮಾರು ಒಂದು ಸಾವಿರ ವರ್ಷದ ಇತಿಹಾಸ ಈ ಕ್ಷೇತ್ರಕ್ಕಿದೆಯೆಂದೂ ಹೇಳಲಾಗುತ್ತಿದೆ.
ಈ ಕ್ಷೇತ್ರದಲ್ಲಿದ್ದ ದೇವರ ವಿಗ್ರವನ್ನು ನಂತರದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿಗೆ ಕೊಂಡೊಯ್ದು ಅಲ್ಲಿ ಸ್ಥಾಪಿಸಲಾಯಿತೆಂದೂ ಹೇಳಲಾಗುತ್ತಿದೆ.
ಪೆರಿಂಜೆಯ ಪಡ್ಡ್ಯಾರಬೆಟ್ಟದ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಭೂತಕೋಲದ ಸಂದರ್ಭ, ಪಾಡ್ದನದಲ್ಲಿ `ಕೊಡಂಗೆಯಿಂದ ಬಂದು ಸೂರ್ಯನಾರಾಯಣ ದೇವರಿಗೆ ನಮಸ್ಕರಿಸಿ ಮುಂದೆ ಬಂದೆ' ಎಂದು ಹೇಳಲಾಗುತ್ತಿತ್ತೆಂದು ಹಿರಿಯರು ನೆನಪಿಸುತ್ತಾರೆ. ಇದು ಇಲ್ಲಿ ಸೂರ್ಯನಾರಾಯಣ ದೇಗುಲವಿತ್ತೆಂಬ ವಿಚಾರಕ್ಕೆ ಒಂದಷ್ಟು ಪುಷ್ಠಿನೀಡುತ್ತದೆ.






ಪಡುಭಾಗಕ್ಕೆ ಮುಖವಾಗಿರುವ ಕೆಂಪು ಕಲ್ಲಿನ ಮೆಟ್ಟಿಲುಗಳನ್ನು ಹೊಂದಿದ ಒಂದು ಚೌಕಾಕಾರದ ನಿರ್ಮಿತಿ ಇದೀಗ ಗೋಚರಿಸಿದೆ. ಇಷ್ಟು ಮಾತ್ರವಲ್ಲದೆ ಅಲ್ಲೇ ಸನಿಹದಲ್ಲಿ ಹಲವಾರು ಕಲ್ಲುಗಳು ಲಭಿಸಿದ್ದು ಇವೆಲ್ಲವೂ ಈ ಕ್ಷೇತ್ರಕ್ಕೆ ಸಂಬಂಧಪಟ್ಟವುಗಳಾಗಿರಬಹುದೆಂದು ಊಹಿಸಲಾಗಿದೆ.





ಈ ಭಾಗದಲ್ಲಿ ಯಾರೇ ಜ್ಯೋತಿಷ್ಯ ಪ್ರಶ್ನೆಯಿಟ್ಟರೂ ಇಲ್ಲಿದ್ದ ದೇಗುಲದ ಪುನರುತ್ಥಾನವಾಗಬೇಕೆಂಬ ವಿಚಾರ ಕಂಡುಬರುತ್ತಿದೆ. ಇದೀಗ ಊರ ಜನತೆ ಒಟ್ಟಾಗಿದ್ದಾರೆ. ಶುಭ ಕಾರ್ಯಕ್ಕೆ ಚಾಲನೆ ದೊರೆತಿದೆ. ಇನ್ನು ಇಲ್ಲೊಂದು ಸುಂದರ ಕ್ಷೇತ್ರ ನಿರ್ಮಾಣವಾಗಲಿದೆ.ಇದಕ್ಕೆ ಭಕ್ತಾಧಿಗಳ ಸಹಕಾರ ಬೇಕಾಗಿದೆ.


ಚಿತ್ರ-ವರದಿ : ಹರೀಶ್ ಕೆ.ಆದೂರು.

ಮುಂದೆ ಓದಿ

ಇದು ಗಣೇಶನ ಸಿನೆಮಾ ಹಾಡಲ್ಲ...ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದೀಚೆಗೆ ವಿವಿಧ ತಾಲೂಕುಗಳಲ್ಲಿ ಮಳೆಯಾರ್ಭಟದ ಒಂದು ನೋಟ. ಕಳೆದೆರಡು ದಿನಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗಿದೆ. ಗಾಳಿ, ಸಿಡಿಲಿನಬ್ಬರಗಳಿಂದ ಕೂಡಿದ ಮಳೆಯಾಗಿವೆ.
ಕೆಲಭಾಗದಲ್ಲಿ ಗಾಳಿಯ ರಭಸ ಹೆಚ್ಚಿತ್ತು.




ಹಲವೆಡೆಗಳಲ್ಲಿ ಗಾಳಿಯ ರಭಸಕ್ಕೆ ಮರಗಳು ನೆಲಸಮವಾಗಿವೆ. ಕೆಲವೊಂದು ಕೃಷಿತೋಟಗಳಲ್ಲಿ ಹಾನಿಗಳುಂಟಾಗಿವೆ. ಸಿಡಿಲಿನಬ್ಬರ ಅಧಿಕವಾಗಿತ್ತು. ಬೆಳ್ತಂಗಡಿ ತಾಲೂಕಿನ ಪೆರಿಂಜೆ ಹೈಸ್ಕೂಲ್ ಸಮೀಪ ಸಿಡಿಲಿನಾಘಾತಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಬಿಸಲಿ ಝಳ ಹೆಚ್ಚುತ್ತಿರುವ ದಿನದಲ್ಲಿ ಮಳೆಸುರಿದು ಇಳೆಗೆ ತಂಪೊದಗಿಸಿದೆ. ಈ ಬಾರಿಯ ವಿಚಿತ್ರವೆಂದರೆ ಆಲಿಕಲ್ಲು ಮಳೆ.
ಹಲವಾರು ಸಮಯಗಳಿಂದ ಈ ರೀತಿಯ ಆಲಿಕಲ್ಲು ಮಳೆಯಾಗಿಲ್ಲ ಎಂದು ಬೆಳ್ತಂಗಡಿ ತಾಲೂಕಿನ ಪೆರಿಂಜೆಯ ಹಿರಿಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಅಂಗಳದಲ್ಲಿ ಅಡಿಕೆ ಒಣಗಿಸುತ್ತಿದ್ದ ಅಡಿಕೆ ಬೆಳೆಗಾರರು ಅಕಾಲಿಕ ಮಳೆಯಿಂದಾಗಿ ತೊಂದರೆಗೊಳಗಾಗಿದ್ದಾರೆ.

































ಚಿತ್ರಗಳು: ಹರೀಶ್ ಕೆ.ಆದೂರು.

ಮುಂದೆ ಓದಿ

ವ್ಯಾನು ಬಂತು.

ಕೆಳಗಿಳಿದ ಪೋಲೀಸರು ಗಾಂಧೀನಗರದಿಂದ ಮೆಜೆಸ್ಟಿಕ್ಕಿಗೆ ಹೋಗುವ ಅಂಡರ್ಪಾಸ್ ದಾರಿಯತ್ತ ನಡೆಯುತ್ತಿದ್ದಾರೆ. ಆ ದಾರಿಯಲ್ಲಿ ನೀಲಿ, ಕಪ್ಪು ಟರ್ಪಲ್ಲಿನ ಮೇಲೆ ಆಟಿಕೆ, ಗುಳಿಗೆ, ಸೊಳ್ಳೆ ಕೊಲ್ಲುವ ಎಲೆಕ್ಟ್ರಿಕ್ಕು ಬ್ಯಾಟು, ಇಪ್ಪತ್ತೈದು ರೂಪಾಯಿಗೆ ಶರ್ಟು ಕಲರ್ ಕಲರ್ ಪ್ಲಾಸ್ಟಿಕ್ ಹೂವಿನ ಕುಂಡ ಮಾರುವವನು.......ಅನಾಮಿಕ ನಾಗರೀಕರ ದೊಡ್ಡ ಪಡೆಯಿದೆ.



ಪೋಲೀಸರು ಬರುತ್ತಿರುವುದನ್ನು ಕಂಡ ಕೂಡಲೇ ಅಂಡರ್ ಪಾಸಲ್ಲೇ ಇರುವ ಸಣ್ಣ ಕೋಣೆಯ ಬಾಗಿಲು ತೆಗೆಯಲು ಒದ್ದಾಡುತ್ತಿದ್ದಾನೆ ಮೀಸೆ ಚಿಗುರಿದ ಹುಡುಗ. ಮತ್ತೊಬ್ಬ "ಬೇಗ ತೆಗಿ ಮಚ್ಚಾ" ಎಂದು ಕೂಗುತ್ತಿದ್ದಾನೆ. ಬಾಗಿಲು ತೆರೆಯುತ್ತದೆ. ಅವಸರದಿಂದ ಟರ್ಪಲ್ಲಿನ ಮೇಲೆ ಹಾಕಿರುವ ವಸ್ತುಗಳನ್ನೆಲ್ಲ ಒಂದೇ ಬಾರಿ ಎಳೆಯುತ್ತಿದ್ದಾರೆ ಅವರಿಬ್ಬರೂ. ಹಾಗೆ ಎಳೆಯುವಾಗ ಒಂದೇ ಒಂದು ಆಟಿಕೆ, ಕಲರ್ ಕಲರ್ಶರ್ಟು ಹೊರಗೆ ಬೀಳದಿರುವುದರ ಮೂಲಕ ಅವರ ಚಾಕಚಕ್ಯತೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗುವವರಿಗೆ, ಅಲ್ಲಿಂದ ಹಿಂದಿರುಗಿ ಗಾಂಧೀನಗರ, ನ್ಯಾಶನಲ್ ಮಾರ್ಕೆಟಿನ ಕಡೆಗೆ ಹೊಗುವವರಿಗೆ ಕಾಣಿಸುತ್ತದೆ. ಆ ನಿಯಮಿತ ಸಮಯದಲ್ಲಿ ಮತ್ತೆ ಕೆಲವರಿಗೆ ತಮ್ಮ ಟರ್ಪಲ
ನ್ನು ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ.


ವ್ಯಾನಿನಿಂದ ಇಳಿದ ಸಿಬ್ಬಂದಿಗೆ ಅಲ್ಲಿ ಅರೆ-ಬರೆ ಹರಡಿಕೊಂಡ ನಾಲ್ಕಾರು ಮಂದಿ ಗಂಟು ಮೂಟೆ ಕಟ್ಟುತ್ತಿರುವುದು ಕಣ್ಣಿಗೆ ಬಿದ್ದಿದೆ. ಅವರಿಗೆಲ್ಲ ವಾರ್ನ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ವಸ್ತುಗಳೊಂದಿಗೆ ಓಡಿ ಕೆಲವು ನಿಮಿಷಗಳಾಗಿದೆ. ಆಗಲೇ ಇಡೀ ಅಂಡರ್ ಪಾಸ್ ಟರ್ಪಲ್ಲಿನ ಮೇಲೆ ಮಾರುವ ಅಂಗಡಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಕಪಾಲಿ, ತ್ರಿಭುವನ್ ಸಿನಿಮಾ ಥಿಯೇಟರ್ಗಳು ಅದೇ ಸಮಯಕ್ಕೆ ಮ್ಯಾಟನಿ ಶೋ ಬಿಟ್ಟಿರುವುದರಿಂದ ಅಂಡರ್ಪಾಸಲ್ಲಿ ವ್ಯಾಪಾರ ಮಾಡುತ್ತಿದ್ದ ಜಾಗದಲ್ಲಿ ಜನ ತುಂಬುತ್ತಿದ್ದಾರೆ. ಟರ್ಪಲ್ಲಿನ ಅಂಗಡಿ ಹರಡಿಕೊಂಡ ಜಾಗದಲ್ಲಿ ಕಿಲೋ ಮೀಟರ್ ವೇಗದ ಅವಸರವಿರುವವರಂತೆ ಹೆಜ್ಜೆ ಹಾಕುವ ಜನರ ಕಾಲು, ಚಪ್ಪಲಿಯ ದೊರಗು ಶಬ್ದ ತುಂಬುತ್ತಿದೆ.



ಪೋಲೀಸರು ಮತ್ತೆ ವ್ಯಾನಿನ ಕಡೆ ನಡೆಯುತ್ತಿದ್ದಾರೆ.

ಮೆಲ್ಲಗೆ ಅಂಡರ್ ಪಾಸಿನ ರೂಮಿನ ಅರೆ ಮುಚ್ಚಿದ ಬಾಗಿಲು ತೆರೆದುಕೊಳ್ಳುತ್ತದೆ.

ಟರ್ಪಲ್ಲಿನ ಅಂಗಡಿ ಮಂದಿ ಮತ್ತೆ ಯಥಾ ಸ್ಥಳದತ್ತ ಹಿಂದಿರುಗುತ್ತಿದ್ದಾರೆ. ಅಂಡರ್ ಪಾಸ್ ಒಳಹೋಗುವ ಮೆಟ್ಟಿಲ ಹತ್ತಿರ ಟರ್ಪಲಿನ ಮೇಲೆ ಐದು- ಹತ್ತು ರುಪಾಯಿಗೆ ಬೆರಕೆ ವಸ್ತುಗಳನ್ನು ಮಾರುವ ಒಬ್ಬನನ್ನು ಪೋಲೀಸ್ ಪೇದೆ ಹಿಡಿದಿದ್ದಾನೆ. ಅವನ ಪಕ್ಕದವನತ್ತ ಗುರ್ರ್ ಎನ್ನುತ್ತಿದ್ದಾನೆ. ನಾಲ್ಕೈದು ಅಂಗಡಿ ಹಾಕುವಷ್ಟು ದೂರದಲ್ಲಿ ವ್ಯಕ್ತಿಯೊಬ್ಬ ಪ್ರತೀ ಟರ್ಪಲು ಹಾಸಿದ ಅಂಗಡಿಯವನಿಂದ ಹತ್ಹತ್ತು ರುಪಾಯಿ ವಸೂಲು ಮಾಡುತ್ತಿದ್ದಾನೆ. ಎಲ್ಲರಿಂದ ವಂತಿಗೆ ಸಂಗ್ರಹಿಸಿ ಅವನು ಪೋಲೀಸ್ ಪೇದೆಯತ್ತ ನಡೆಯುತ್ತಿದ್ದಾನೆ. ನಿತ್ಯ ನಡೆದುಕೊಂಡು ಹೋಗುವವರಿಗೆ ಅದು ಹಳಸಲು ಇಮೇಜು. ಅದಾಗ ತಾನೇ ಬೆಂಗಳೂರಿಗೆ ಬಂದ ಹಳ್ಳಿ ಹುಡುಗನಿಗೆ ಇದನ್ನೆಲ್ಲಾ ತೋರಿಸುತ್ತಾನೆ ಗೆಳೆಯ. ತನ್ನೂರಿನ ಬಯಲಾಟದ ಸಂದರ್ಭದಲ್ಲಿ ಕಂಡ ಇದಕ್ಕಿಂತ ಹೊರತಾದ ಬಣ್ಣ ಬಣ್ಣದ ಇಮೇಜು ನೆನಪಿಗೆ ಬರುತ್ತದೆ.



ತನ್ನ ಜೊತೆಗಿರುವ ಗೆಳೆಯ ಇದನ್ನೆಲ್ಲಾ ಸಿನಿಮಾದ ಸನ್ನಿವೇಶ ಎಂದು ವಿವರಿಸುತ್ತಾ ಮೆಜೆಸ್ಟಿಕ್ ತಲುಪಲು ಅಂಡರ್ ಪಾಸಿನ ಮೆಟ್ಟಿಲು ಹತ್ತುತ್ತಾನೆ. ಹತ್ತುವಾಗ ಮತ್ತೆ ತುಂಬಿರುವ ಅಂಡರ್ ಪಾಸಿನ ಜಗಲಿ, ಅದರಲ್ಲಿ ಅದಮ್ಯ ಗುರಿ ಇರುವವರಂತೆ ವೇಗವಾಗಿ ನಡೆಯುವವರ ಜೊತೆ ಚೌಕಾಸಿ ವ್ಯಾಪಾರ ಮಾಡುವ ಪರ್ಟಲ್ಲಿನ ಅಂಗಡಿಯ ಅನಾಮಿಕ ನಾಗರೀಕರನ್ನು ಕಂಡಾಗ ತನ್ನ ಬದುಕಿನ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಬೆಂಗಳೂರಿನಂತಹ ನಗರದೊಳಗೆ ಬದುಕಬೇಕು ಅಂತ ಅನ್ನಿಸುತ್ತದೆ!!!


ಬರೆ
ದ್ದು: ಕಾರ್ತಿಕ್ ಪರಾಡ್ಕರ್

ಮುಂದೆ ಓದಿ

ನನ್ನ ಬದುಕಿನ ನಿರೀಕ್ಷೆಯೇ
ನನ್ನಾಸೆಗಳ ಅಮೃತಧಾರೆಯೇ
ನನ್ನೊಲವಿನ ಪ್ರಕೃತಿಯೇ

ನಿನ್ನ ಕಣ್ಣುಗಳಲ್ಲಿನ ನಿರೀಕ್ಷೆಯ ದೀಪ ಕಂಡು ಮೂಕ ವಿಸ್ಮಿತನಾಗಿದ್ದೇನೆ. ನವವಧುವಿನಂತೆ ಮಿನುಗುತ್ತಿರುವ ನಿನ್ನ ನೋಡಿ ಪ್ರಫುಲ್ಲಿತನಾಗಿದ್ದೇನೆ. ನನ್ನ ಮನಸು ತುಂಬಿ ಬರುತ್ತಿದೆ ಗೆಳತಿ..
ನಿನ್ನ ಪ್ರೀತಿಗೆ.. ಅದರ ರೀತಿ.. ಕಣ್ಣ ಹನಿಗಳೆ ಕಾಣಿಕೆ..




ನಾನ್ಯಾರೋ.. ನೀನ್ಯಾರೋ? ನಮ್ಮನ್ನು ಒಂದು ಮಾಡಿದವರು ಯಾರೋ? ನಿನ್ನನ್ನು ಕಾಣಲು ತವಕಿಸುವ ನನ್ನ ಮನಸು, ಕಾಣದೆ ಪರಿತಪಿಸುವ ನಿನ್ನ ಹೃದಯ.. ಈಗ ಜಗತ್ತಿಗೆ ನಾನೇ ನಾಯಕ.. ನೀನೇ ನಾಯಕಿ.

ನನ್ನಾಗಮನದ ಸುದ್ದಿ ತಿಳಿಯುತ್ತಲೇ ಮುಡಿ ತುಂಬ ಹೂಗಳ ಮಾಲೆ ಮುಡಿದು ಮಿಂಚುವ ಪರಿಯೇನು? ತರುಲತೆಗಳನ್ನು ಜೋಡಿಸಿ ತಳಿರು ತೋರಣ ಕಟ್ಟಿ ಕಾಯುವ ನಿನ್ನ ಒಲವೇನು?

ಎಳೆಬಿಸಿಲ ರಂಗವಲ್ಲಿ ಬರೆದು, ಇಬ್ಬನಿ ಬೆಳಕಲ್ಲಿ ಪ್ರಭಾವಳಿ ಕಟ್ಟಿ ಆಸೆ ಕಣ್ಣುಗಳಲ್ಲಿ ನೋಡುವ ತುಂಟ ಹುಡುಗಿ, ತಂಗಾಳಿಯಲ್ಲಿ ಹೂಗಂಧ ಚೆಲ್ಲಿ, ಕೋಗಿಲೆಯ ಕಂಠದಲ್ಲಿ ಸ್ವಾಗತ ಗೀತೆ ಹಾಡಿಸುವ ನಿನ್ನ ಜತನಕೆ ನಾ ಏನ ಹೇಳಲೇ? ಮಿರುಗುವ ಚಿನ್ನದ ಚಿಗುರುಗಳಲ್ಲಿ ನಿನ್ನೊಳಗಿನ ತುಡಿತವನ್ನು ನಾ ಕಾಣಬಲ್ಲೆ. ತಂಬೆಲರಿಗೆ ಓಲಾಡುವ ಹೂಗಳಲ್ಲಿ ಮನಸಿನ ಆಸೆಗಳನ್ನು ಅರಿಯಬಲ್ಲೆ. ನಿನ್ನ ಮನಸು, ಕನಸುಗಳನ್ನೆಲ್ಲ ಹೊಚ್ಚ ಹೊಸದಾಗಿಸಿಕೊಂಡು ಬಂದು ನಿಲ್ಲೋ ದೇವತೆ ನೀನು..

ಗೊತ್ತು ಕಣೆ.. ನೀನು ಶರತ್ಕಾಲದ ಕಾವಿನಲ್ಲಿ ಬೆಂದವಳು. ಶಿಶಿರನ ಚಳಿಯಲ್ಲಿ ನಡುಗುತ್ತ ಎಲ್ಲವನ್ನೂ ಕಳೆದುಕೊಂಡು ಬೆತ್ತಲಾದವಳು. ಆದರೆ, ನಾನು ಬರುತ್ತೇನೆ, ಚೈತ್ರದ ಪ್ರೇಮಾಂಜಲಿ ಹಾಡಿ ಹೊಸ ಕನಸುಗಳಿಗೆ ಗರ್ಭ ಕಟ್ಟಿಸುತ್ತೇನೆ ಎನ್ನು ವ ಒಂದೇ ಒಂದು ನಿರೀಕ್ಷೆಯಲ್ಲಿ ಬೂದಿಯಿಂದೆದ್ದು ಬರುವ ಫೀನಿಕ್ಸ್ ನಂತಾಗುತ್ತಿ ಎನ್ನುವುದು ಗೊತ್ತು.

ನನಗಾಗಿ ಇಷ್ಟೆಲ್ಲ ಕಾಯುವ ನಿನಗಾಗಿ ನಾನು ಏನು ಕೊಟ್ಟೆ? ನೀನು ಕರೆದಾಗಲೆಲ್ಲ ನಾನು ಬರಲಾರೆ.. ನೀನು ಕಾದು ಕಾದು, ನಿರೀಕ್ಷೆಯ ದೀಪವನ್ನೇ ಆರಾಸುತ್ತಾ ಕುಳಿತಿದ್ದರೆ ನಾನು ಯಾವತ್ತೋ ಬರುತ್ತೇನೆ. ನಿನ್ನೊಳಗೆ ಒಂದಷ್ಟು ಆಸೆಗಳನ್ನು ಹುಟ್ಟಿಸಿ, ನನ್ನ ಪಾಡಿಗೆ ನಾನು ಹೊರಟು ಹೋಗುತ್ತೇನೆ. ಮತ್ತೆ ನೀನು ಒಂಟಿ ಒಂಟಿ. ನೀನು ಆ ಏಕಾಂಗಿ ಬದುಕಿನಲ್ಲಿ ಪಡುವ ಪಾಡು ನನಗೆ ಗೊತ್ತು. ಬಂದೇ ಬರುತ್ತೇನೆ ಎನ್ನುವ ಒಂದೇ ಒಂದು ಗುಟುಕು ಆಸೆಯಿಂದ ನೀನು ಕಷ್ಟಗಳನ್ನೆಲ್ಲ ನುಂಗಿಕೊಳ್ಳುತ್ತೀಯಲ್ಲಾ? ಆ ಆಶಾವಾದಕ್ಕೆ ಏನೆಂದು ಹೇಳಲೇ?

ತುಂಬ ಖುಷಿಯಲ್ಲಿರುವ ನಿನಗೆ ನೋವಿನ ಕತೆಗಳನ್ನು ನೆನಪಿಸಿ ಮತ್ತಷ್ಟು ನೋವು ಕೊಡುವುದು ನನ್ನ ಉದ್ದೇಶವಲ್ಲ. ಆದರೆ, ಬದುಕೆಂದರೆ ನೋವು ಮತ್ತು ನೋವಿನ ನಂತರ ಬರುವ ಸುಖದ ನಿರೀಕ್ಷೆ, ಅದು ಸಾಕಾರವಾಗುವ ಸಂಭ್ರಮವೇ ಆಲ್ಲವೇ?

ನಾನು ದೂರವಿದ್ದರೂ ನನ್ನ ಮನಸು ನಿನ್ನೊಳಗೇ ಇರುತ್ತದೆ ಗೆಳತಿ, ನಿನ್ನೊಳಗೆ ಕಟ್ಟಿಸಿದ ಕನಸುಗಳ ಗರ್ಭ ಫಲವಾಗಿ ಜೀವ ತಳೆದಾಗ ನಿನ್ನಷ್ಟೇ ಖುಷಿಪಡುತ್ತೇನೆ. ತುಂಬಿದ ಫಲವತಿಯಾಗಿ ನಿಂತ ನಿನ್ನ ಕೆನ್ನೆಯ ಕೆಂಪನ್ನು ಕಂಡು ನಾನು ನಲಿದಾಡುತ್ತೇನೆ. ನನಗಾಗಿ ಕಾಯುವ ಜೀವವೊಂದು ಇಲ್ಲಿದೆ ಎನ್ನುವ ನಂಬಿಕೆಯಿಂದ ಎಲ್ಲೇ ಗಿರಗಿಟ್ಲೆ ತಿರುಗಿದರೂ ಖುಷಿಯಾಗಿರುತ್ತೇನೆ.

ಈಗ ಮಧುರ ಮಿಲನದ ಹೊತ್ತು. ಬಾ ಗೆಳತಿ.. ನಿನ್ನನ್ನು ತಬ್ಬಿಕೊಳ್ಳುತ್ತಿದ್ದೇನೆ. ಹೂಗಳ ಚೆಲುವು,ಇಬ್ಬನಿಯ ಚೆಂದ, ಮಳೆ ಬಂದಾಗ ಎದ್ದೇಳುವ ಕಂಪು, ಈ ನಂದನವನದಲಿ ಒಂದಾಗೋಣ. ನಿನ್ನ ತೆಕ್ಕೆಯಲ್ಲಿ ನನ್ನನ್ನು ನಾನು ಸಮಪರ್ಿಸಿಕೊಳ್ಳುತ್ತಿದ್ದೇನೆ. ಇವತ್ತು ಬದುಕಿನ ನವ ಮನ್ವಂತರವಾಗಬೇಕು, ಹೊಸ ಯುಗಾದಿಯಾಗಬೇಕು, ನಮ್ಮಿಬ್ಬರ ಪ್ರೀತಿ ಕಂಡು ಇಡೀ ಜಗತ್ತೇ ಸಂಭ್ರಮಿಸಬೇಕು.. ಬಾ ಗೆಳತಿ..

- ಇಂತಿ ನಿನ್ನ ಪ್ರೀತಿಯ ವಸಂತ...

- . ಕೃಷ್ಣ ಭಟ್

ಮುಂದೆ ಓದಿ

ಎಲ್ಲರಿಗೂ ಯುಗಾದಿಯ ಶುಭಾಷಯಗಳು...
ಈ ಕನಸಿಗೆ ತಿಂಗಳು ತುಂಬುವ ತವಕ. ಯುಗಾದಿಯ ಶುಭಾವಸರದಲ್ಲಿ `ಯುಗಾದಿ ವಿಶೇಷ ಸಂಚಿಕೆ'ಯನ್ನು ನೀಡುವುದರೊಂದಿಗೆ `ಈ ಕನಸಿನ' ನಾಲ್ಕನೇ ಸಂಚಿಕೆ ನಿಮಗೊಪ್ಪಿಸಲು ಸಂತಸವಾಗುತ್ತಿದೆ.
`ಈ ಕನಸು' ಅಂತರ್ಜಾಲ ವಾರಪತ್ರಿಕೆ ಆರಂಭವಾದಂದಿನಿಂದ ಪ್ರತಿ ಕ್ಷಣ ಕ್ಷಣಕ್ಕೂ ಪತ್ರಿಕೆಯ ಅಭಿವೃದ್ಧಿ, ಯೋಚನೆ, ಯೋಜನೆಗಳಿಗೆ ಬೆಂಬಲವಾಗಿ ನಿಂತವರು ನಮ್ಮೆಲ್ಲಾ ಓದುಗ ಸ್ನೇಹಿತರು. ಅವರೆಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಗಳು.



ಯುಗಾದಿ ಮತ್ತೆ ಬಂದಿದೆ. ಹಳೆಯ ಕಹಿ ನೆನಪುಗಳನ್ನು ಅಲ್ಲಿಗೇ ಬಿಟ್ಟು ಹೊಸ ಚಿಂತನೆಗೆ ತೊಡಗಿಕೊಳ್ಳೋಣ. ನಮ್ಮೆಲ್ಲ ಓದುಗ ಮಿತ್ರರಿಗೆ, ಬರಹಗಾರರಿಗೆ, ಪ್ರೋತ್ಸಾಹಕರಿಗೆ, ಜಾಹೀರಾತುದಾರರಿಗೆ ಹೊಸ ವರುಷದ ಶುಭಾಷಯಗಳು. ಯುಗಾದಿ ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ತರಲೆಂದು ಹಾರೈಸುತ್ತೇನೆ.
- ಸಂ.

ಇರುಳ ಕತ್ತಲೆಯ ಕಳೆದು ಹೊಸ ಬೆಳಕ ಹಾದಿಯಲಿ...
ಮತ್ತೆ ಬಂದಿದೆ ನೋಡ ಹೊಸ ಯುಗಾದಿಯು...'


ಈ ರೀತಿಯಾಗಿ ಹೊಸ ವರ್ಷಕ್ಕೆ ಪಾದಾರ್ಪಣೆ.
ವರ್ಷದುದ್ದಕ್ಕೂ ಕಂಡುಂಡ ಬೇಸರಗಳಿಗೆ ಒಂದು ಪೂರ್ಣವಿರಾಮ. ಇರುಳು ಕಳೆದು ಬೆಳಕು ಹರಿಯುವ ವೇಳೆ ಹೊಸ ಆಸೆ...ಹೊಸ ಹುರುಪಿನೊಂದಿಗೆ...ಹೊಸ ವರುಷವ ಸ್ವಾಗತಿಸೋಣ...
ಮತ್ತೆ ಹಳೆಯ ಕಹಿ ನೆನಪುಗಳ ಕಳೆದು ಸಿಹಿಯುಂಬ ಆಸೆಯಲಿ....
ಅದೇ ಊರು, ಅದೇ ಗಾಳಿ, ಅದೇ ನೆಲ, ಅದೇ ಜಲ ಆದರೂ ಹೊಸ ತನದ ಹೊಸ ಹುರುಪು... ಇದು ಯುಗಾದಿಯ ಹೊಸತು.
ವಿವಾದ, ಗಲಭೆ, ಸೋಲು, ದೊಂಬಿ, ಕ್ಲೇಷ, ಕಷ್ಟ, ಹಾನಿ, ಒಡಕು,ಖಿನ್ನತೆ, ಬೇಸರ,ದುಗುಡ ಇವೆಲ್ಲವುಗಳಿಗೆ ಒಂದು ಸಣ್ಣ ವಿದಾಯ ಹೇಳಿ ಮತ್ತೆ ಹೊಸ ಯೋಜನೆ, ಯೋಚನೆಗಳತ್ತ ಬೆಳಕು ಚೆಲ್ಲಲು ಮುಂದಡಿಯಿಡುವ ಶುಭದಿನವೇ ಈ ಯುಗಾದಿ!

ಅದಕ್ಕಾಗಿಯೇ ಬೆಳ್ಳಂ ಬೆಳಗ್ಗೆಯೇ ಕೋಗಿಲೆ ಮಧುರ ಧ್ವನಿಯಲ್ಲಿ ಕೂಗಿ ಕರೆದಿದೆ.... ಬಾನಾಡಿಗಳು ಆಗಸದಲ್ಲಿ ಚಿಲಿಪಿಲಿಗಾನ ಹಾಡುತ್ತಾ ಸಾಗಿವೆ. ಎಳೆಚಿಗುರ ಹಸಿರ ವರ್ಣರಾಶಿಯ ಮರ ಹಳದಿ ಹೂಗಳಿಂದ ಶೋಭಿಸುತ್ತಿವೆ... ಅದೇ ಆಗಸ ಎಂದಿಗಿಂತಲೂ ಶುಭ್ರವಾಗಿ ಕಂಗೊಳಿಸುತ್ತಿದೆ... ರವಿ ಹೊಸ ಹುರುಪಿನಿಂದ ಮೇಲೆದ್ದು ಬಂದಿದ್ದಾನೆ... ಇವೆಲ್ಲವೂ ಹೊಸ ವರ್ಷದಲ್ಲಿ ಹೊಸ ಆಸೆಗಳೊಂದಿಗೆ ಹೊಸ ತನದಿಂದ ಮೂಡಿಬರಲಾರಂಭಿಸಿವೆ... ಹೀಗೆ ಹೊಸಯುಗವೊಂದರ ಪ್ರಾರಂಭಕ್ಕೆ ನಾಂದಿಯಾಗಿದೆ.

ದ್ವೇಷ ಬೇಡ...ಬದಲಾಗಿ ಪ್ರೀತಿ ಬೇಕು. ಪರಸ್ಪರ ಪ್ರೀತಿ, ವಿಶ್ವಾಸಗಳಿಂದಷ್ಟೇ ಸುಖೀ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಹೊಸ ವರ್ಷ ಸಾಗಬೇಕು. ಇದಕ್ಕಾಗಿ ಜನತೆ ಸಿದ್ಧರಾಗಬೇಕು. ಕೇವಲ ಹಳೆಯ ಕಹಿ ಘಟನೆಗಳಿಗೆ ಮತ್ತೆ ಜೋತು ಬೀಳದೆ ಹೊಸ ನಾಳಿನ ಹೊಸ ಬಾಳಿನ ನಿರೀಕ್ಷೆ ನಮ್ಮದಾಗಬೇಕು.

ಕೇವಲ ಋಣಾತ್ಮಕ ಚಿಂತನೆಯಿಂದ ಹೊರ ಬಂದು ಒಂದಷ್ಟು ಧನಾತ್ಮಕ ಅಂಶದತ್ತ ಯೋಚಿಸುವ ಕಾರ್ಯ ಆಗಬೇಕು. ತನ್ಮೂಲಕ ಮನಸ್ಸನ್ನು ವಿಕಸನಗೊಳಿಸುವ, ತೆರೆದಿಡುವ ಕಾರ್ಯವನ್ನು ಮಾಡಬೇಕಾಗಿದೆ.

ವರ್ಷದುದ್ದಕ್ಕೂ ಕಹಿಯುಂಡು ಬೆಂದ ಜನ ಇನ್ನಾದರೂ ಸಿಹಿಯನುಭವಕ್ಕೆ ಕಾಲಿಡಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ತನ್ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು. ಹೊಸ ವರ್ಷದಲ್ಲಿ ಸತ್ ಚಿಂತನೆ, ಸತ್ಪ್ರೇಮಗಳ ಮೂಲಕ ಸುಖೀ ಸಮಾಜದ ಕಲ್ಪನೆಗೆ ನಾವೆಲ್ಲ ಕಾರಣಿಗಳಾಗೋಣ... ಹೊಸ ನಾಡೊಂದರ ಉಗಮಕ್ಕೆ ನಾಂದಿ ಹಾಡೋಣ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಹೊಸ ವರ್ಷಕೆ ಹೊಸ ಹರ್ಷವ ಹೊಸತು ಹೊಸತು ತರುತಿದೆ...
ಪ್ರೀತಿಯಿಂದ,
ಹರೀಶ್ ಕೆ.ಆದೂರು.
ಸಂಪಾದಕ.

ಮುಂದೆ ಓದಿ

ವಿಶೇಷ ಸಂದರ್ಶನ

2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಾದರಿ ಪ್ರದರ್ಶನ ನೀಡಬೇಕೆಂಬ ಉದ್ದೇಶದಿಂದ 40 ಪುರುಷರ ಮತ್ತು 30 ಮಹಿಳಾ ಈಜು ಪ್ರತಿಭೆಗಳನ್ನು ತರಬೇತಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿದೆ. ಈಜು ತರಬೇತಿಗಾಗಿ ಅಕಾಡೆಮಿ ಒಂದನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತಾದರೂ ಸರಿಯಾಗಿ ಈಜುಕೊಳಗಳು ಲಭಿಸದ ಕಾರಣ ಆಸೆ ಪೂರೈಸಲು ಸಾಧ್ಯವಾಗಿಲ್ಲ ಎಂದು ಭಾರತದ ಮಾಜಿ ಈಜುಪಟು ಸೆಬಾಸ್ಟ್ಯನ್ ಸೇವ್ಯರ್ ಹೇಳಿದ್ದಾರೆ.



ಹಿಂದೆಲ್ಲ ಈಜು ಪಟುಗಳಿಗೆ ಸಹಕಾರ, ಪ್ರೋತ್ಸಾಹ ಕಡಿಮೆಯಿತ್ತು. ಆದರೆ ಈಗ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ದೊರೆಯುತ್ತಿದೆ. ಸಾಕಷ್ಟು ಅವಕಾಶಗಳಿದ್ದರೂ ಯುವಜನತೆ ಈಜಿನತ್ತ ಆಕರ್ಷಿತರಾಗುತ್ತಿಲ್ಲ ಎಂದು ಸೇವ್ಯರ್ ಖೇದ ವ್ಯಕ್ತಪಡಿಸುತ್ತಾರೆ.

ಜ್ಯೂನಿಯರ್ ತಾರೆಗಳಾದ ಪ್ರದೀಪ್ ಕುಮಾರ್, ನಿಹಾರ್ ಅಮೀನ್ ಮೊದಲಾದವರು ಭಾರತರಕ್ಕೆ ನಿರೀಕ್ಷೆ ಹುಟ್ಟಿಸುವ ಪ್ರತಿಭೆಗಳು ಎಂದ ಅವರು ಮುಂದಿನ ಏಷ್ಯನ್ನಲ್ಲಿ ವೀರ ಧವಳ್ ಚಿನ್ನ ಬಾಚುವುದು ಖಚಿತ ಎಂದರು.

ಈಜಿನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಬಾಚುತ್ತಿದ್ದ ಭಾರತದ ಮಾಜಿ ಈಜುಪಟು ಸೆಬಾಸ್ಟ್ಯನ್ ಸೇವ್ಯರ್ ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ದಕ್ಷಿಣ ರೈಲ್ವೇ ತಂಡದ ವ್ಯವಸ್ಥಾಪಕರಾಗಿ ಅವರು ಸುಳ್ಯಕ್ಕೆ ಆಗಮಿಸಿದ್ದಾರೆ.


ಮುಂದೆ ಓದಿ

ವಿಶೇಷ ವರದಿ
ಬೆಳ್ತಂಗಡಿ: ಮಳೆಗಾಲದಲ್ಲಂತೂ ಸದಾ ಸುದ್ದಿಯಲ್ಲಿರುವ ಚಾರ್ಮಾಡಿಗೆ ಇದೀಗ ಕಾಯಕಲ್ಪದ ಯೋಗ. ಅತ್ಯಂತ ಕ್ಲಿಷ್ಟಕರ ತಿರುವುಗಳಿಂದೊಡಗೂಡಿದ ಚಾರ್ಮಾಡಿ ರಸ್ತೆಯ ಪ್ರಯಾಣ ಒಂದು ರೋಮಾಂಚಕ ಅನುಭವ. ಈ ಘಾಟಿ ರಸ್ತೆಯ ಪ್ರಯಾಣ ಅಷ್ಟೇ ಅಪಾಯಕಾರಿಯೂ ಹೌದು. ಕಳೆದ ಮಳೆಗಾದಲ್ಲಿ ಕುಸಿದ ರಸ್ತೆಗೆ ಒಂದಷ್ಟು ಕಾಯಕಲ್ಪ ನೀಡುವ ಕಾರ್ಯ ಇಂದಾಗುತ್ತಿದೆ.


ಇತ್ತ ಕರಾವಳಿಯನ್ನು ಮತ್ತು ಘಟ್ಟ ಪ್ರದೇಶವನ್ನು ಸಂಪರ್ಕಿಸುವ ಕೊಂಡಿಯಂತಿದೆ ಈ ಚಾರ್ಮಾಡಿ.
ಮಂಗಳೂರು - ಚಿಕ್ಕಮಗಳೂರು ನಗರವನ್ನು ಸಂಪರ್ಕಿಸುವ ಕಡೂರು - ಕಾಂಞಂಗಾಡು ರಾಜ್ಯ ಹೆದ್ದಾರಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಗಾದಲ್ಲಿ ಕುಸಿತ ಕಂಡುಬಂತು. ಇದರಿಂದಾಗಿ ಸಂಚಾರಕ್ಕೆ ತೀವ್ರ ತೊಡಕಾಯಿತು.

ಈ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಇತ್ತ ಕೆಳಭಾಗಕ್ಕೆ ಬರಲು ತೀವ್ರ ತೊಂದರೆಯುಂಟಾಗುತ್ತದೆ. ಈ ಕಾರಣಕ್ಕಾಗಿ ಈ ರಸ್ತೆಯನ್ನು ಇದೀಗ ರು.6.45ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ಥಿಗೊಳಿಸಲಾಗುತ್ತಿದೆ.

ಕಳೆದ ಮಾರ್ಚ್ 4ರಿಂದ ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. 3 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿ ಮೇ 31ರ ವರೆಗೆ ಹೆದ್ದಾರಿಯಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಉಜಿರೆ ಮತ್ತು ಚಾರ್ಮಾಡಿ ಘಾಟ್ ಮೇಲ್ಭಾಗದಲ್ಲಿ ನಿಷೇಧಿತ ಸೂಚನಾ ಫಲಕ ಅಳವಡಿಸಲಾಗಿದೆ.


ಹೈದ್ರಾಬಾದಿನ ಸಿಂಗ್ ಇಂಜಿನಿಯರ್ ಎಂಡ್ ಟ್ರೇಡಿಂಗ್ ಕಂಪೆನಿಯು ಕಾಮಗಾರಿಗೆ ಗುತ್ತಿಗೆ ವಹಿಸಿ ಕಾಮಗಾರಿಯನ್ನು ನಡೆಸುತ್ತಿದೆ. ಈ ಸಂಸ್ಥೆಯ ಆಡಳಿತ ನಿರ್ದೇಶಕ ಟಿ.ಸತ್ಯಮೂರ್ತಿ ನೇತೃತ್ವದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರಮುಖ 7 ಕಡೆಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯ ತ್ವರಿತಗತಿಯಿಂದ ಸಾಗುತ್ತಿದೆ.


ಚಾರ್ಮಾಡಿ ಘಾಟಿಯ 2-3,9-10,10-11ನೇ ತಿರವುಗಳ ಮಧ್ಯೆ 7 ಕಡೆಗಳಲ್ಲಿ ಕುಸಿದಿರುವ ರಸ್ತೆಗಳಿಗೆ ಶಾಶ್ವತ ತಡೆಗೊಡೆಗಳನ್ನು ರಚಿಸಲಾಗುತ್ತಿದೆ. ನಿಗಧಿತ ಗುರಿಯಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸುಮಾರು ಸುಮಾರು 75ಪರಿಣಿತ ಕಾರ್ಮಿಕರು ದಿನದ 12ಗಂಟೆಗಳ ಕಾಲ ಅವಿರತವಾಗಿ ದುಡಿಯುತ್ತಿದ್ದಾರೆ.


ಮುಂದೆ ಓದಿ
| | |Home