ಪ್ರಾದೇಶಿಕ ಸುದ್ದಿ
ಮಂಗಳೂರು:ಮಳೆಗಾಲದಲ್ಲಿ ಸೂಕ್ತ ಮಳೆಯಾಗಿಲ್ಲ. ಹೀಗಾಗಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥನ ಮೊರೆಹೋಗಿದ್ದಾರೆ ಭಕ್ತವೃಂದ. ಶನಿವಾರ ಕದ್ರಿಯ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಯಿತು. ಸೀಯಾಳಾಭಿಷೇಕವೂ ನಡೆಯಿತು. ಈ ಸಂದರ್ಭದಲ್ಲಿ ಕ.ಸಾ.ಪ.ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರ, ಶಾಸಕ ಅಭಯಚಂದ್ರ ಉಪಸ್ಥಿತರಿದ್ದರು.
ರಾಜ್ಯ-ರಾಷ್ಟ್ರ
ಶಿವಮೊಗ್ಗ: ಮಲೆನಾಡಿನ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ತೊಂದರೆ ಯುಂಟಾಗಲಿದೆ. ಜಲಾಶಯದಲ್ಲಿ 1741 ಅಡಿ ನೀರಿದೆ. ಜಲಾಶಯದ ಒಳ ಹರಿವು 1008 ಕ್ಯೂಸೆಕ್ಸ್. ಹೊರ ಹರಿವು 4708 ಕ್ಯೂಸೆಕ್ಸ್. ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿದ್ದೇ ಈ ತೊಂದರೆಗೆ ಕಾರಣವಾಗಿದೆ.
ರಾಜ್ಯ- ರಾಷ್ಟ್ರ
ಪಾಪ್ ಸಂಗೀತ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದ ಅಪಾರ ಅಭಿಮಾನಿಗಳ ಹೃದಯ ಗೆದ್ದ ಪಾಪ್ ಸಂಗೀತ ಕ್ಷೇತ್ರದಲ್ಲೇ ಒಂದು ಅದ್ವಿತೀಯ ಸಾಧನೆ ಮೆರೆದ ಮೈಕಲ್ ಜಾಕ್ಸನ್ ಅಮೆರಿಕದ ಸಮಯದಂತೆ ಗುರುವಾರ ಮಧ್ಯಾಹ್ನ 2.26ರ ವೇಳೆಗೆ ಲಾಸ್ ಏಂಜಲೀಸ್ ಆಸ್ಪತ್ರೆಯಲ್ಲಿ ನಿಧನಹೊಂದಿದರು.ತೀವ್ರ ನಿಗಾ ಘಟಕದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ಜಾಕ್ಸನ್ ಸಹೋದರ ಜರ್ಮೈನ್ ಸುದ್ದಿಗಾರರಿಗೆ ತಿಳಿಸಿದರು.
ಸಿನೆಮಾ
ಅನುಭವಿಸಿ ಎಂಜಾಯ್ ಮಾಡಬೇಕು.
ಅದು ನಿರ್ಜನ ಪ್ರದೇಶ..ತಾನೆಲ್ಲಿದ್ದೇನೆಂದು ಆತನಿಗೇ ತಿಳಿದಿಲ್ಲ. ಆದರೂ ಆತ ನಡೆಯುತ್ತಾ ಮುಂದೆ ಸಾಗುತ್ತಿದ್ದಾನೆ...ದೂರದ ಚರ್ಚ್ ನಿಂದ ಗಂಟೆಯ ಸದ್ದು ಕ್ಷೀಣವಾಗಿ ಕೇಳಿಬರುತ್ತಿದೆ..ಸುತ್ತಲೂ ಬೃಹತ್ ಕಟ್ಟಡಗಳು...ಆತನನ್ನು ಬಿಟ್ಟರೆ ಅಲ್ಲೆಲ್ಲವೂ ನಿಸ್ತೇಜ..ಪಕ್ಕನೆ ಆತನ ದೃಷ್ಟಿ ಗೋಡೆಗೆ ನೇತು ಹಾಕಿದ್ದ ಗಡಿಯಾರದ ಮೇಲೆ ಬೀಳುತ್ತದೆ...ಅರೆ.. ಇದೇನಿದು..? ಮುಳ್ಳಿಲ್ಲದ ಗಡಿಯಾರ! ಆಶ್ಚರ್ಯ,...
ಭಯಗಳು ಒಟ್ಟೊಟ್ಟಿಗೆ ಆತನನ್ನು ಆವರಿಸುತ್ತವೆ..ಕೂಡಲೇ ಕಿಸೆಯಲ್ಲಿದ್ದ ತನ್ನ ವಾಚನ್ನು ತೆಗೆದು ನೋಡುತ್ತಾನೆ...ಅದಕ್ಕೂ ಮುಳ್ಳಿಲ್ಲ!. ಇಲ್ಲ...ನಾನು ಈ ಖಾಲಿ ರಸ್ತೆಗಳ ಪಾಳು ಸಾಮ್ರಾಜ್ಯದಲ್ಲಿ ಕಳೆದೇ ಹೋಗುವೆನು... ಆತ ಹೀಗಂದುಕೊಳ್ಳುತ್ತಿದ್ದಂತೇ ದೂರದಿಂದ ಕುದುರೆಗಳ ಗೊರಸಿನ ಸಪ್ಪಳ ಕೇಳಿಸುತ್ತದೆ.
ಕುದುರೆ ಗಾಡಿ ವೇಗವಾಗಿ ಈತನನ್ನು ದಾಟಿ ಮುನ್ನಡೆಯುತ್ತದೆ. ಆದರೆ..ಮುಂದಿದ್ದ ದೀಪದ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಅಲ್ಲೇ ನಿಲ್ಲುತ್ತದೆ. ಗಾಲಿಯೊಂದು ಗಾಡಿಯಿಂದ ಕಳಚಿ ಆತನ ಕಾಲ ಬಳಿ ಬಂದು ಬೀಳುತ್ತದೆ..ಕುದುರೆಗಳು ಮುನ್ನುಗ್ಗುತ್ತಾ ರಭಸವಾಗಿ ಗಾಡಿಯನ್ನೆಳೆಯುತ್ತವೆ...ಆ ರಭಸಕ್ಕೆ ಗಾಡಿಯೊಳಗಿನ ಪೆಟ್ಟಿಗೆಯೊಂದು ಕೆಳ ಬೀಳುತ್ತದೆ...ಅದು ಶವಪೆಟ್ಟಿಗೆ..ಗಾಡಿ ಮುನ್ನಡೆಯುತ್ತದೆ..ಆತ ಪೆಟ್ಟಿಗೆ ಬಳಿ ಸಾಗುತ್ತಾನೆ..ಥಟ್ಟನೆ ಪೆಟ್ಟಿಗೆಯ ಸಂದಿನಿಂದ ಕೈಯೊಂದು ಕಾಣಿಸಿಕೊಳ್ಳುತ್ತದೆ..ಮೊದಲು ನಿಸ್ತೇಜವಾಗಿದ್ದ ಕೈಯಲ್ಲಿ ಬಳಿಕ ಚಲನೆ ಕಾಣಿಸಿಕೊಳ್ಳುತ್ತದೆ...ಬಳಿಯಲ್ಲೇ ನಿಂತಿದ್ದ ಆತನ ಕೈಯ್ಯನ್ನು ಅದು ಹಿಡಿದೆಳೆಯುತ್ತದೆ...ಆತ ಭಯಭೀತನಾಗುತ್ತಾನೆ..ಶವಪೆಟ್ಟಿಗೆಯ ಮುಚ್ಚಳ ರಟ್ಟುತ್ತದೆ...ನೋಡಿದರೆ ಪೆಟ್ಟಿಗೆಯೊಳಗೆ ತನ್ನದೇ ಪ್ರತಿರೂಪ! ಚಿಟ್ಟನೆ ಚೀರುತ್ತಾ ಐಸಾಕ್ ಕಣ್ಬಿಟ್ಟಾಗ ತಾನು ಮನೆಯಲ್ಲಿರುವುದು ಭಾಸವಾಗುತ್ತದೆ. ಅಂದರೆ..ಇದುವರೆಗೆ ಕಂಡದ್ದು ಕನಸೇ?..ಎಂಥಾ ವಿಚಿತ್ರ ಕನಸು!..ಏನಿದರ ಗೂಢಾರ್ಥ? ಡಾ.ಐಸಾಸ್ ಬೋರ್ಜ್ ಚಿಂತಿತನಾಗುತ್ತಾನೆ.
ಮನಸ್ಸು ಭಾವನೆಗಳ ಗೂಡು..ನೂರಾರು ಭಾವನೆಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರುವ ಅದು ಅವ್ಯಕ್ತ ಭಾವನೆಗಳಿಗೆ ಕನಸಿನ ರೂಪ ನೀಡುತ್ತದೆ. ಕನಸುಗಳ ಮೂಲಕ ಜೀವನದ ಸೂಕ್ಷ್ಮಗಳನ್ನು ತಿಳಿಸುವ ಪ್ರಯತ್ನವನ್ನೂ ಮಾಡುತ್ತದೆ. ಬದುಕಿನ ಮುಸ್ಸಂಜೆಯಲ್ಲಿರುವ ತಾನು ಇಂದು ಕಂಡ ಕನಸು ಸಾವಿನ ಸಂಕೇತವಿರಬಹುದೇ? ಐಸಾಕ್ ಚಿಂತಿತನಾಗುತ್ತಾನೆ.
ಡಾ. ಐಸಾಕ್ ಒಬ್ಬ ಹಿರಿಯ, ಎಕ್ಸ್ಪರ್ಟ್ ಡಾಕ್ಟರ್. ಲುಂಡ್ ವಿಶ್ವವಿದ್ಯಾಲಯದಲ್ಲಿ ತನ್ನ ಗೌರವ ಡಾಕ್ಟರೇಟನ್ನು ಪಡೆಯಲು ಆತ ಕ್ಯಾಲಿಫೋ ರ್ನಿಯಾದಿಂದ ಲುಂಡ್ಗೆ ಪ್ರಯಾಣ ಬೆಳೆಸುತ್ತಾನೆ. ಪ್ರಯಾಣದ ದಿನಗಳಲ್ಲಿ ಕನಸುಗಳು ಆತನನ್ನು ಅತಿಯಾಗಿ ಕಾಡುತ್ತವೆ. ವೃದ್ಧಾಪ್ಯದಲ್ಲಿ ಸಾವಿನ ಭೀತಿ ಆತನನ್ನು ಆವರಿಸುತ್ತದೆ. ಕೊನೆಯ ದಿನಗಳಲ್ಲಿ ಹಳೆಯ ನೆನಪುಗಳ ಸಹಾಯದಿಂದ ತನ್ನ ಇಡೀ ಜೀವನವನ್ನು ಪುರ್ನ ವಿಮರ್ಶೆ ಮಾಡುವ ಸಾಹಸಕ್ಕೆ ಆತ ಕೈ ಹಾಕುತ್ತಾನೆ.
`ವೈಲ್ಡ್ ಸ್ಟ್ರಾಬೆರೀಸ್' ಇಗ್ಮಾರ್ ಬರ್ಗಮನ್ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲೊಂದು. ಸ್ವತಃ ಬರ್ಗಮನ್ ರೇ ರಚಿಸಿ ನಿರ್ದೇಶಿಸಿರುವ ಈ ಸ್ವೀಡಿಶ್ ಚಿತ್ರ ಬಿಡುಗಡೆಗೊಂಡದ್ದು 1957ರಲ್ಲಿ. ತೊಂಭತ್ತೊಂದು ನಿಮಿಷಗಳ ಈ ಚಿತ್ರ ಬರ್ಗಮನ್ ರೇ ರಚಿಸಿ ನಿರ್ದೇಶಿಸಿದ ಅತ್ಯಂತ ಎಮೋಷನಲ್ ಹಾಗೂ ಆಪ್ಟಿಮಿಸ್ಟಿಕ್ ಚಿತ್ರವೆಂಬ ಖ್ಯಾತಿಗೂ ಪಾತ್ರವಾಗಿದೆ.
`ಸೆಲ್ಫ್ ಡಿಸ್ಕವರಿ' ಬರ್ಗಮನ್ ರೇ ಕಾಮನ್ ಥೀಮ್. ಇವರ ಎಲ್ಲಾ ಚಿತ್ರಗಳಲ್ಲೂ ಏಕಾಂಗಿತನವಿದೆ..ಆಶಾವಾದವಿದೆ...ಸಾವಿನ ಭೀತಿಯಿದೆ..ಇವೆಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯಿದೆ. ಬರ್ಗಮನ್ ರೇ ಚಿತ್ರಗಳಲ್ಲಿ ಕನಸುಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ. ಅವರ ಪ್ರಕಾರ ಕನಸುಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗದ ಜೀವನದ ಸತ್ಯಗಳನ್ನು ಮನದಟ್ಟು ಮಾಡುವ ಶಕ್ತಿಯಿದೆ.
ಬರ್ಗಮನ್ ರೇ ಭಾವುಕ ಜೀವಿ. ಚಿಕ್ಕಂದಿನಿಂದಲೇ ಸೂಕ್ಷ್ಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. 1918ರ ಜುಲೈ 14ರಂದು ಸ್ವೀಡನ್ನಲ್ಲಿ ಕೆರಿನ್ ಹಾಗೂ ಎರಿಗ್ ಬರ್ಗಮನ್ ರೇ ದಂಪತಿಗಳ ಪಉತ್ರರಾಗಿ ಜನಿಸಿದ ಇವರು ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದವರು. ತಂದೆಯ ಅತಿಯಾದ ಡಿಸಿಪ್ಲಿನ್ನಿಂದ ಬೇಸತ್ತು ಮಾನಸಿಕ ಖಿನ್ನತೆಗೆ ಒಳಗಾದವರು. ಈದೇ ಖಿನ್ನತೆಯನ್ನು ಮುಂದೆ ತಮ್ಮ ಚಿತ್ರಗಳಲ್ಲೂ ಬಿಂಬಿಸಿದವರು.
ತಮ್ಮ ಹತ್ತೊಂಭತ್ತನೇ ವಯಸ್ಸಿನಲ್ಲಿ ಕಲೆ ಹಾಗೂ ಸಾಹಿತ್ಯಗಳ ಅಧ್ಯಯನಕ್ಕಾಗಿ ಸ್ಟಾಕ್ಹೋಮ್ ವಿಶ್ವವಿದ್ಯಾಲಯವನ್ನು ಸೇರಿದ ಬರ್ಗಮನ್ ರೇ ಬಳಿಕ ನಾಟಕ ಹಾಗೂ ಸಿನಿಮಾದ ಗೀಳನ್ನು ಹಚ್ಚಿಕೊಂಡರು. ಗ್ರಾಜುಯೇಟ್ ಆಗುವ ಮೊದಲೇ ಲೆಕ್ಕವಿಲ್ಲದಷ್ಟು ನಾಟಕಗಳನ್ನು ರಚಿಸಿದರು. 170 ನಾಟಕಗಳನ್ನು ರಚಿಸಿದ ಬಳಿಕ ಸಿನಿಮಾ ರಂಗದತ್ತ ಮುಖಮಾಡಿದರು. 1944ರಲ್ಲಿ `ಟೋರ್ಮೆಂಟ್' ಚಿತ್ರಕ್ಕೆ ಸ್ಕ್ರೀನ್ ಪ್ಲೇ ಬರೆಯುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಬರ್ಗಮನ್ ನಂತರದ ದಿನಗಳಲ್ಲಿ 62ಕ್ಕೂ ಅಧಿಕ ಚಿತ್ರಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಬರ್ಗಮನ್ ನಿರ್ದೇಶಿಸಿದ 'ಸ್ಮೈಲ್ಸ್ ಆಫ್ ಸಮ್ಮರ್ ನೈಟ್' ಅವರಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
ಕ್ರೈಸ್ ಆಂಡ್ ವಿಸ್ಪರ್ಸ್, ಪರ್ರ್ಸೋನಾ, ವೈಲ್ಡ್ ಸ್ಟ್ರಾಬೆರೀಸ್, ದಿ ಸೈಲೆನ್ಸ್, ವಿಂಟರ್ ಲೈಟ್, ದಿ ವರ್ಜಿನ್ ಸ್ಪ್ರಿಂಗ್, ದಿ ಸರ್ಪೆಂಟ್ಸ್ ಎಗ್...ಹೀಗೆ ಒಂದರ ಮೇಲೊಂದು ಪಾಪ್ಯುಲರ್ ಸಿನಿಮಾಗಳನ್ನು ನೀಡಿದರೂ ಬರ್ಗಮೆನ್ ಅವರ ಸಿನಿಮಾ ಕ್ರೇಜ್ ನಿಲ್ಲಲಿಲ್ಲ. 1957ರಲ್ಲ ವೈಲ್ಡ್ ಸ್ಟ್ರಾಬೆರೀಸ್ ಚಿತ್ರವನ್ನು ನಿರ್ದೇಶಿಸಿ ಇಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
ಸಿನಿಮಾ ಜೀವನದಲ್ಲಿ ಬರ್ಗಮೆನ್ ಯಶಸ್ಸು ಸಾಧಿಸಿದರೂ ಅವರ ವೈವಾಹಿಕ ಜೀವನ ಹತಾಶೆ, ನೋವುಗಳಿಂದ ಮಡುಗಟ್ಟಿತ್ತು. ಆದ ಐದು ವಿವಾಹಗಳಲ್ಲಿ ನಾಲ್ಕು ವಿಚ್ಚೇದನದಿಂದ ಕೊನೆಗೊಂಡವು. ಕೊನೆಯ ಮಡದಿ ಇಂಗ್ರಿಡ್ ಕ್ಯಾನ್ಸರ್ ನಿಂದ ಮೃತಳಾದಾಗ ಬದುಕೇ ದುಸ್ತರವೆನಿಸತೊಡಗಿತು. ಆದರೂ ಬಗರ್್ಮನ್ರ ಸ್ರೀ ವ್ಯಾಮೋಹ ನೀಗಲಿಲ್ಲ. ಹ್ಯಾರಿಯಟ್ ಆಂಡರ್ಸನ್, ಬೀಬಿ ಆಂಡರ್ಸನ್ ರಂತಹ ಖ್ಯಾತನಟಿಯರ ಹೆಸರುಗಳು ಆಗಾಗ್ಗೆ ಇವರ ಹೆಸರಿನೊಂದಿಗೆ ಸೇರಿಕೊಳ್ಳುತ್ತಿದ್ದವು.
ಜನವರಿ 30,1976 ಬರ್ಗಮನ್ ಪಾಲಿಗೆ ಕರಾಳ ದಿನ. ಸ್ಟಾಕ್ ಹೋಮ್ನ ರಾಯಲ್ ಡ್ರಮಾಟಿಕ್ ಥಿಯೇಟರ್ನಲ್ಲಿ ಗೆಳೆಯ ಆಗಸ್ಟ್ ಸ್ಟ್ರಿಂಡ್ಬ ರ್ಗರ ' ಡಾನ್ಸ್ ಆಫ್ ಡೆಥ್' ಚಿತ್ರ ಬಿಡುಗಡೆ ಸಮಾರಂಭದಲ್ಲಿ ಬರ್ಗಮನ್ ಪೋಲೀಸರಿಂದ ಬಂಧಿತರಾದರು. ಟಾಕ್ಸ್ ಇವೇಶನ್ ಕೇಸ್ ಅವರ ಮೇಲಿತ್ತು. ಈ ಪ್ರಕರಣ ಬರ್ಗಮನ್ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿತು. ಪ್ರಕರಣದಲ್ಲಿ ತಾನು ನಿರಪರಾಧಿಯೆಂದು ಸಾಬೀತಾದ ಕೂಡಲೇ ಸ್ವೀಡನ್ ಬಿಡಲು ತೀರ್ಮಾನಿಸಿದರು. ಸ್ವತಃ ಸ್ವೀಡನ್ನ ಪ್ರಧಾನಿಯೇ ಅಂಗಲಾಚಿದರೂ ಬರ್ಗಮನ್ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಜೀವನದಲ್ಲಿ ಮತ್ತೆಂದೂ ಸ್ವೀಡಿಶ್ ಚಿತ್ರರಂಗದಲ್ಲಿ ಕೆಲಸ ಮಾಡುವುದಿಲ್ಲವೆಂದು ತೀರ್ಮಾನಿಸಿ ಜರ್ಮನಿಗೆ ತೆರಳಿದರು. ಬರ್ಗಮನ್ ನಿಧರಾದುದರಿಂದ ಸ್ವೀಡಿಶ್ ಚಿತ್ರರಂಗಕ್ಕಾದ ಒಟ್ಟು ನಷ್ಟ 10 ಮಿಲಿಯನ್ ಟಾಲರ್.
ಬರೇ ಸಾವು, ವಂಚನೆ, ಅನಾರೋಗ್ಯ, ವೃದ್ಧಾಪ್ಯಗಳನ್ನಷ್ಟೇ ಬಿಂಬಿಸುವ ಬರ್ಗಮನ್ ಅವರ ಚಿತ್ರಗಳು ಮಾಧ್ಯಮಗಳಿಂದ ಆಗಾಗ್ಗೆ ಠೀಕೆಗೊಳಗಾಗುತ್ತಿದ್ದವು. ಇವರ ಚಿತ್ರಗಳಲ್ಲಿ ಸ್ತ್ರೀ ಕೇವಲ ಸೆಕ್ಸ್ ಸಿಂಬಲ್. ನಾನು ಕೇವಲ ಇಂಟಲೆಕ್ಚುವಲ್ ಸಿನಿಮಾಗಳನ್ನಷ್ಟೇ ನಿರ್ದೇಶಿಸುವುದಿಲ್ಲ..ವೀಕ್ಷಕರು ನನ್ನ ಚಿತ್ರಗಳನ್ನು ಅರ್ಥೈಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅನುಭವಿಸಬೇಕು...ಅನುಭವಿಸಿ ಎಂಜಾಯ್ ಮಾಡಬೇಕು. ಪ್ಲೇ ಬಾಯ್ ಪತ್ರಿಕೆಗೆ ಬರ್ಗಮೆನ್ ನೀಡಿದ ಸ್ಟೇಟ್ಮೆಂಟ್ ಇದು.
ಬರ್ಗಮೆನ್ ಅವರ ಚಿತ್ರಗಳೆಷ್ಟು ಸೂಕ್ಷ್ಮವೋ ಅವನ್ನು ಶೂಟ್ ಮಾಡುತ್ತಿದ್ದ ಲೊಕೇಶನುಗಳೂ ಅಷ್ಟೇ ಸೆನ್ಸಿಟಿವ್. ಸ್ವೀಡನ್ನ ಲ್ಯಾಂಡ್ಸ್ಕೇಪ್ ಗಳೆಂದರೆ ಬರ್ಗ ಮೆನ್ ಅವರಿಗೆ ಅಚ್ಚುಮೆಚ್ಚು. ಅವರ ಪ್ರಾರಂಭದ ಚಿತ್ರಗಳೆಲ್ಲಾ ಚಿತ್ರೀಕರಣಗೊಂಡದ್ದು ಸ್ವೀಡನ್ನಲ್ಲೇ. ಸಿನಿಮಾದ ಪ್ರತಿಯೊಂದು ಚಿಕ್ಕಪುಟ್ಟ ಅಂಶಗಳಿಗೂ ಇಂಪಾರ್ಟೆನ್ಸ್ ನೀಡುತ್ತಿದ್ದ ಕೆಲವೇ ನಿರ್ದೇಶಕರಲ್ಲಿ ಇವರು ಕೂಡಾ ಒಬ್ಬರು. ಕಾಸ್ಟ್ಯೂಮ್, ಲೊಕೇಶನ್, ಲೈಟ್ಸ್, ಕ್ಯಾಮರಾ ಆಂಗಲ್..ಎಲ್ಲವೂ ಬರ್ಗಮನ್ ಅವರ ಪಾಲಿಗೆ ಸಿನಿಮಾದ ಯಶಸ್ಸನ್ನು ನಿರ್ಧರಿಸುವ ಅಂಶಗಳು. ಅವೆಲ್ಲರಲ್ಲಿ ಫರ್ಫೆಕ್ಷನ್ಸ್ ಸಾಧಿಸಿದಾಗಲೇ ಮನಸ್ಸಿಗೆ ನೆಮ್ಮದಿ.
ಅರವತ್ತು ವರುಷಗಳ ಕಾಲ ಸಿನಿಮಾರಂಗದಲ್ಲಿ ಸಕೃಯವಾಗಿ ದುಡಿದರೂ ಬರ್ಗ ಮೆನ್ ಅವರಿಗೆ ಸಿನಿಮಾಸಕ್ತಿ ಕಡಿಮೆಯಾಗಲಿಲ್ಲ. 84ರ ಹರೆಯದಲ್ಲಿ ಸಾರಾಬಂಧ್ ಚಿತ್ರವನ್ನು ನಿರ್ದೇಶಿಸಿದರು. ಕೊನೆಯ ದಿನಗಳಲ್ಲಿ ತಾಯ್ನಾಡಿಗೆ ಮರಳುವ ಹಂಬಲವಾಯಿತು. ಬರ್ಗ ಮನ್ ಸ್ವೀಡನಿಗೆ ಮರಳಿದರು. 2007ರ ಜುಲೈ 30 ರಂದು ಅಲ್ಲೇ ತಮ್ಮ ಕೊನೆಯುಸಿರೆಳೆದರು.
ಇಂದು ಬರ್ಗಮನ್ ಹೆಸರು ಕೇಳುತ್ತಿದ್ದಂತೇ ನೆನಪಾಗುವುದು ಅವರ ಇಮೋಷನಲ್ ಚಿತ್ರಗಳು. ವೀಕ್ಷಕರನ್ನು ಭಾವುಕ ಲೋಕಕ್ಕೆ ಕೊಂಡೊಯ್ಯುವ ಬರ್ಗಮನ್ ಅವರ ಸಿನಿಮಾಗಳು ಎಂದಿಗೂ ಎವರ್ ಗ್ರೀನ್...ಅವರ ಚಿತ್ರಗಳು ಪರಿಚಯಿಸುವ ಜೀವನದ ಸೂಕ್ಷ್ಮಗಳು ಎಂದಿಗೂ ರಿಲೆವೆಂಟ್.
- ಅಕ್ಷತಾ ಭಟ್ ಸಿ.ಎಚ್
ಕ್ಲಿಕ್...
ಪವಿತ್ರ ಗಂಗೆಯ ಬೆತ್ತಲೆ ನೋಟ




ಚಿತ್ರಗಳು-ಪ್ರಕಾಶ್ ಶೆಟ್ಟಿ,ಉಳಯಪ್ಪಾಡಿ
ಕ್ಲಿಕ್
ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿಯ ಗಂಗಾ ನದಿಯ ಚಿತ್ರಗಳನ್ನು ಮಿತ್ರರಾದ ಪ್ರಕಾಶ್ ಅವರು ಸೆರೆಹಿಡಿದುದು ಹೀಗೆ. 




ನಾಳೆ ಇನ್ನಷ್ಟು ಕುತೂಹಲಕಾರೀ ಚಿತ್ರಗಳನ್ನು ನಿರೀಕ್ಷಿಸಿ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ
ಚಿತ್ರಗಳು - ಪ್ರಕಾಶ್
ಪ್ರಿಯ ಓದುಗರೇ,
ಈ ಕನಸು.ಕಾಂ. ದಿನ ದಿನಕ್ಕೆ ವೈವಿಧ್ಯಮಯ ಸುದ್ದಿ,ಲೇಖನ,ವಿಶೇಷ ವರದಿ, ಅಂಕಣ ಬರಹಗಳೊಂದಿಗೆ ಜನಪ್ರಿಯತೆ ಗಳಿಸುತ್ತಿರುವುದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಇನ್ನಷ್ಟು ಜನತೆಯೆಡೆಗೆ ಸಾಗುವ ನಿಟ್ಟಿನಲ್ಲಿ ನಿಮ್ಮೆಲ್ಲರ ಅಭಿಪ್ರಾಯಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಕನಸು ವೈವಿಧ್ಯಮಯವಾಗಿ ಮೂಡಿಬರಲು ನಿಮ್ಮೆಲ್ಲರ ಅಮೂಲ್ಯ ಸಲಹೆ ಸೂಚನೆಗಳನ್ನು ಮುಕ್ತ ಹಸ್ತದಿಂದ ನಿರೀಕ್ಷಿಸುತ್ತಿದ್ದೇವೆ.ಸಲಹೆಗಳನ್ನು ಇ ಮೇಲ್ ಮುಖಾಂತರ editor@ekanasu.com ಗೆ ಕಳುಹಿಸಿ.
ಇಂತು ವಂದನೆಗಳು,
-ಸಂ.
ವೈವಿಧ್ಯ
ಅದೇ ಮತ್ತೆ ಪರೆಶನ ಪರಾಕ್ರಮ ,.
ಎಲ್ಲ್ ಹೋಗಿದ್ದೋ ಹಾಳಾಗಿ ನಿನ್ನೆಯಿಂದ ನಿನ್ನ ಹುಡುಕುತ್ತಾ ಇದ್ದೀವಿ... ಈಗ ಎಲ್ಲಿಂದ ಬರ್ತಿದಿಯಾ, ನಿನ್ನ ಅಮ್ಮನ ಅವಸ್ತೆ ಹೇಳತೀರದು ಅಂದೇ , ಇಲ್ಲ ಸಾರ್ ನಾನು ಬೆಂಗಳೂರಿಗೆ ಹೋಗಿದ್ದೆ ಅಂತ ಬಾಂಬ್ ಸಿಡಿಸಿದ ನಾನು ನಿಂತಲ್ಲೇ ದಂಗಾಗಿ ಹೋದೆ, ಅಲ್ಲ ಕಣೋ ನಿಮ್ಮ ಅಮ್ಮ ಹೇಳಿದ್ರು ಚಿಕ್ಕಪ್ಪನ ಮನೆಗೆ ನಿದಿಗೆ ಗೆ ಹೋಗ್ತೀನಿ ಅಂತ ಹೊದ್ಯಂತೆ ಅಲ್ಲೂ ತಲುಪಿಲ್ಲ ಮನೆಗೂ ಬಂದಿಲ್ಲ ಅಂತ ಗೋಳು ಕಣೋ ಅಂದೇ. ಈಗ ಬೇಗ ಮನೆಗೆ ಹೋಗು ಅಂದೇ ಹೋಗ್ತೀನ್ ಸಾರ್ ಅಂದ .,., ಸಾರ್ ಸಾಯಂಕಾಲ ಸಿಕ್ತೀರ ಅಂದ ನೋಡಾನ್ ತಗೋ ಅಂತ ನಾನು ಹೊರಟೆ, ಇದು ಬೆಳಗಿನ ಸಮಯ ೧೦ ಗಂಟೆಗೆ ಇವನು ರೋಡಿನಲ್ಲಿ ಸಿಕ್ಕಾಗ ನಡೆದದ್ದು, ಆದರೆ ನಾನು ಮಾತ್ರ ಸಂಜೆ ವರೆಗೂ ಯೋಚಿಸಿದ್ದು ಒಂದೇ ನಿದಿಗೆ ಅಂತ ಹೇಳಿ ಬೆಂಗಳೂರು ಹೇಗೆ ತಲುಪಿದ ಅಂತ.
ಸಂಜೆ ನಾನು ಬರುವಾಗ ಕಾಂಪೌಂಡ್ ನ ಮೇಲೆ ಕುಂತಿದ್ದ, ಇವನು ನನ್ನ ನೋಡಿದ ಕೂಡಲೇ ಸಾರ್ ಬೆಂಗಳೂರು ತುಂಬ ಚಂದಗೈತ್ ಸಾರ್ ಅಂತ ಶುರು ಮಾಡಿದ .,.
ವಿಷ್ಯ ಏನಂತ ಸರಿಯಾಗಿ ಈಗ ಹೇಳೋ ಅಂದೇ, ಅದೇ ಸಾರ್ ನಮ್ಮ ತಾಯಿ ನಂಗೆ ತುಂಬ ಪ್ರೀತಿ ಮಾಡ್ತಾಲ್ ಸಾರ್, ಓಹೋ ಅದಕ್ಕೆ ನೀನ್ ಬೆಂಗಳೂರು ಹೋದ , ಅಲ್ಲಸಾರ್ ಅದು ಎನಾತ್ ಅಂದ್ರೆ ನಾನು ನಿನ್ನೆ ಸಂಜೆ ನಮ್ಮ ಚಿಕ್ಕಪನ ಮನೆ ಇಲ್ಲೇ ನಿದಿಗೆ ಹಂಗೆ ಹೊಗಾನ ಅಂತ ಬಸ್ ಹತ್ತಿದೆ ಅದು ನೋಡಿದ್ರೆ ಬೆಂಗಳೂರು ಬಸ್ ನಾನ್ ಸ್ಟಾಪ್ ನಂಗೆ ಗೊತ್ತಿಲ್ಲ, ಕಂಡಕ್ಟರ್ ಗರಂ ಆಗಿ ನಿದಿಗೆ ನಿಲ್ಸಲ್ಲ ಅಂದ ಭದ್ರಾವತಿ ಇಳಿ ಅಂದ , ನಾನ್ ಹೇಳ್ದೆ ನಾನ್ ಇಳಿದರೆ ನಿದಿಗೆ ಇಲ್ಲಾ ಅಂದ್ರೆ ಬೇರೆಕಡೆ ಇಳಿಯಲ್ಲ ಅಂದೇ ಅವನ್ಗು ನಂಗು ಜೋರ್ ಜಗಳ ಆಯ್ತು, ಆಮೇಲೆ ಯಾವಾಗ್ ನಿದ್ದೆ ಮಾಡಿದ್ನೋ ಗೊತ್ತಿಲ್ಲಾ ಬೆಂಗಳೂರಲ್ಲಿ ಎಚ್ಹರ ಆತು ಇಳ್ದು ಅಲೆಲ್ಲ ಸುತ್ತಿ ಕೈಯಾಗ್ ಇದ್ ವಾಚ್ ಮಾರಿ ಹೊಟ್ಲಾಗ್ ಊಟ ಮಾಡ್ದೆ ಆಮೇಲೆ ಶಿವರಾಜ್ಕುಮಾರ್ ಸಿನಿಮಾ ನೋಡ್ದೆ ಆಮೇಲೆ ಬಸ್ ಸ್ಟ್ಯಾಂಡ್ ವಾಪಸ್ ಬಂದೆ ಅಲ್ಲಿ ಡಿಪೋ ಮೇನೇಜರ್ ಹತ್ರ ಹೇಳ್ದೆ ನಿದಿಗಿ ಇಳೆಬೇಕಾಗಿತ್ತು ಇಲ್ ಇಳ್ದೆ ಅಂತ , ಅವರು ನಿನಗೀಗ ಎಲ್ಲಿ ಹೋಗ್ಬೇಕು ಅಂತ ಕೇಳಿದ್ರು ಶಿವಮೊಗ್ಗ ಅಂದೇ ನಿಂತಿರೋ ಬಸ್ ತೋರ್ಸಿ ಅದು ಹೋಗುತ್ತೆ ಅಂದ್ರು.
ಅದರಾಗ್ ಬಂದ್ ಕುಂತೆ ಅಷ್ಟೆ ಅಂದ. ಅಲ್ಲ ಕಣೋ ದುಡ್ಡು ! ಹೋಗಬೇಕಾದ್ರೆ ಜಗಳ ದಿಂದ ಅವ್ನ್ ದುಡ್ಡು ಕೇಳಲಿಲ್ಲ , ಬರಬೇಕಾದರೆ ಡಿಪೋ ಮೇನೇಜರ್ ಹೇಳಿದಾರ್ ಅಂತ ಕಂಡಕ್ಟರ್ ಗೆ ಹೇಳಿದೆ ಅವ್ನು ಹೊರಗೆ ಡಿಪೋ ಮೇನೇಜರ್ ನಿಂತಿರುವುದು ನೋಡಿದ ನಂತರ ಸುಮ್ಮನಾದ , ಕೆ ಬಿ ಕ್ರಾಸಗೆ ಊಟ ತಿಂಡಿ ಎಲ್ಲ ಕೊಡುಸ್ದ ಮದ್ಯ ದಾಗ್ ಒಂದ್ ಜಾಗಾ ನಿಲ್ಲ್ಸ್ದಾಗ ವಡೆ ತಿಂಡಿ ಎಲ್ಲ ಅವ್ನೆ ತಂದು ಕೊಟ್ಟ ಈಗ ಶಿವಮೊಗ್ಗ ಬಸ್ಸ್ಟ್ಯಾಂಡ್ ಇಳಿಬೇಕಾದ್ರೆ ೫೦ ರೂ. ಜೋಬಗಿಟ್ಟ ನೋಡ್ರಿ ಬಾಳ ಒಳ್ಳೆಯ್ ಕಂಡಕ್ಟರ್ ಅಂತ ಕುಷಿಂದ ಹೇಳಿದ. ಮತ್ತೇನು ಹೇಳಿದ ಅಂತ ಕೇಳಿದೆ ಆರಾಮಾಗಿ ತಲುಪಿದೆ ಅಂತ ಹೇಳ್ರಿ ಡಿಪೋ ಮೇನೇಜರ್ ಗೆ ಅಂತ ಹೇಳಕ್ಕೆ ಹೇಳಿದ ನೀವೇ ಹೇಳ್ಬಿದ್ದ್ರಿ ಅಂತ ಬರ್ತ ಇದ್ದೆ ಆಗ ಕರದ್ ಡಿಪೋ ಮೇನೇಜರ್ ನಿಮಗೆ ಏನ್ ಆಗ್ಬೇಕು ಅಂತ ಕೇಳಿದ ನಮ್ಮ ಚಿಕ್ಕಪ್ಪ ಅಂದೇ ,..
- ಇಸ್ಮಾಯಿಲ್ ಶಿವಮೊಗ್ಗ
ಬೆಳೆ-ತೋಟ
ಮಂಗಳೂರು:`ಆಳುವ ದೊರೆಯೇ ರೈತನ ಮೊರೆಯ ಕೇಳುವೆಯಾ' ಈ ನಿವೇದನೆ ಬೆಳ್ತಂಗಡಿ ತಾಲೂಕಿನ ಕೃಷಿಕರದ್ದು. ತಾಲೂಕಿನಲ್ಲಿ ತೀವ್ರ ರೀತಿಯಲ್ಲಿ ವಾನರ ಸೇನೆ ಇದೀಗ ಆಕ್ರಮಣ ಕಾರಿ ಧಾಳಿಯನ್ನಿರಿಸಿದೆ. ರೈತರ ಕೃಷಿ ಸಂಪೂರ್ಣ ಮಂಗಗಳ ಹಾವಳಿಗೆ ತುತ್ತಾಗಿ ತೀವ್ರ ತೊಂದರೆಯನ್ನನುಭವಿಸುವಂತಾಗಿದೆ.
ಜನಪ್ರತಿನಿಧಿಗಳು ಇತ್ತ ತಲೆಹಾಕುತ್ತಿಲ್ಲ. ಕೃಷಿ ಸಂಬಂಧಿತ ಇಲಾಖೆಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣೆ ಬಂದಾಗ ರೈತರ ಮನೆ ಬಾಗಿಲು ತಟ್ಟುವ ರಾಜಕೀಯ ಪಕ್ಷದ ಮುಖಂಡರು ಗೆದ್ದು ಬಂದಾಗ ರೈತನತ್ತ ಯಾಕೆ ಮುಖಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ಇದೀಗ ರೈತ ಎತ್ತಿದ್ದಾನೆ. ಪ್ರಜ್ಞಾವಂತ ರಾಜಕಾರಣಿಗಳು ಇದಕ್ಕೆ ಉತ್ತರಿಸಬೇಕಾಗಿದೆ. ಸರ್ಕಾರ ಚಿಂತನೆ ನಡೆಸಬೇಕಾಗಿದೆ.
ಭಾವನಾ
ಮಧ್ಯಾಹ್ನ ಮುನಿಸಿಕೊಂಡು ಕೂತಿದ್ದೆ. ಆಗ ನೀನು ಬಂದು" ಸ್ವಾರಿ ಕಣೇ" ಅಂದು ಬಿಟ್ಟು ಏನೋ ಮಾತಾಡಿದ್ದೀಯಾ... ಯಾಕೋ ಇಷ್ಟವಾಗಲಿಲ್ಲ. ಬಿಟ್ಟೂ ಬಿಡದೆ ಮೂರು ವರ್ಷಗಳ ಕಾಲ ಕಾಡಿದ್ದೀಯಾ ... ನೋಯಿಸಿದ್ದೀಯಾ... ಕಾಯಿಸಿದ್ದೀಯಾ... ಎಲ್ಲರೆದುರಿಗೆ ಅವಮಾನಿಸಿದ್ದೀಯಾ.... ದೂರ ಹೋಗಿದ್ದೀಯಾ.. ಇವೆಲ್ಲದರ ನಡುವೆ ನಾನು ನಿನ್ನನ್ನು ಪ್ರೀತಿಸಿದೆ.
ಮನಸ್ಸಿಗೆ ಹೃದಯ ಶತ್ರುವಂತೆ...ಮನಸ್ಸು ತನ್ನದೇ ಆದ ಕೆಲವು ತತ್ವಗಳಿಗೆ ಒಗ್ಗಿಕೊಂಡಿತ್ತು. ಇದ್ಯಾವುದರ ಪರಿವೆಯೂ ಇಲ್ಲದೆ ಹೃದಯ ನನಗಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿತು... ಪ್ರೀತಿಸುತ್ತಲೇ ಇದೆ . ಅದಕ್ಕೆ ಗೊತ್ತಿರೋದು ಪ್ರೀತಿ ಒಂದೇ...
ಭಾವುಕ ಜೀವಿ ನೀನು. ಭಾವನೆಗಳೇ ಇಲ್ಲದ ನನ್ನ ಬದುಕು ಈಗ ಭಾವನೆಗಳ ಜೊತೆ ಜಿದ್ದಾ ಜಿದ್ದಗೆ ಬಿದ್ದಿದೆ. ಇದು ನಾನು ಇಷ್ಟ ಪಟ್ಟ ಬದುಕೂ ಅಲ್ಲ.ಇಷ್ಟು ದಿವಸ ಸಹಿಸಿಕೊಂಡೆ ಯಾಕ್ ಗೊತ್ತಾ...?ಒಂದಲ್ಲಾ ಒಂದು ದಿನ ನಿನಗೆ ನನ್ನ ಪ್ರೀತಿ ಅರ್ಥವಾಗಬಹುದು... ಅಂತರ್ಮುಖಿಯ ಅಂತರಂಗವನ್ನು ಅರಿಯುವ ಪ್ರಯತ್ನವನ್ನು ಮಾಡುವೆ ಎಂಬ ಭರವಸೆಯಲ್ಲಿ...ಆದರೆ?
ನೀನು ಮಾಡಿದ್ದು ಮನಸ್ಸಿಗೆ ಗಾಯ... ಆಡಿದ್ದು ಪ್ರೀತಿಯೊಂದಿಗಿನ ಆಟ. ದೇಹದ ಮೇಲಿನ ಗಾಯಕ್ಕೆ ಮದ್ದು ಹಚ್ಚಬಹುದು. ಆದರೆ ಮನಕ್ಕೆ ಮದ್ದು ಹಚ್ಚಬಹುದೇ...?
ಪ್ರೀತಿ ಅಂದ್ರೆ ಅರ್ಥವಾಗದ್ದು ಅಂತ ಹೇಳಿ ಸಾರ್ವಜನಿಕವಾಗಿ ನಿಂತು ಪ್ರೀತಿಗೆ ವ್ಯಾಖ್ಯಾನ ನೀಡಲು ಹೊರಟೆ ನೀನು. ಎಂತಹ ಹೃದಯ ನಿನ್ನದು... ನಿನ್ನ ಬದುಕಿನಲ್ಲಿ ನಿನ್ನವರನ್ನು ದೂರ ಮಾಡಲು ನಾನು ಬಂದು ಬಿಟ್ಟೆ ಎಂದು ಅನಿಸಲಾರಂಭಿಸಿದೆ... ಯಾಕಂದ್ರೆ ನಿನ್ನನ್ನು ಪ್ರೀತಿಸುವವರು ಕೆಲವರು. ಇದ್ಯಾವುದರ ಪರಿವೆಯೂ ಇಲ್ಲದೆ ನಾನು ಪ್ರೀತಿಸಿದ್ದು ನಿನ್ನನ್ನು. ಅದು ನನ್ನ ತಪ್ಪು.
ಯಾರು ಯಾರನ್ನು ಪ್ರೀತಿಸೋದಿಲ್ಲ ಹೇಳು? ಹಸು ಕರುವನ್ನು, ತಾಯಿ ಮಗುವನ್ನು ಮುಂದೊಂದು ದಿನ ಅವರು ನನ್ನವರಾಗಿ ಉಳಿಯುವುದಿಲ್ಲ ಎಂದು ಗೊತ್ತಿದ್ದರೂ... ಪ್ರೀತಿ ಅನ್ನೋದು ಸಾಗರ... ಅದಕ್ಕೆ ಸಾವಿರ ಮುಖವಾಡಗಳು. ನಿಂಗೊಂದು ಸತ್ಯ ಗೊತ್ತಾ ... ನೀರಲ್ಲಿ ಸಾವಿರ ದಿನ ಕಲ್ಲಿದ್ದರೂ ಅದು ಕರಗೋದೆ ಇಲ್ಲ... ಮೆದುವಾಗುವುದೇ ಇಲ್ಲ... ಹಾಗೇ ಇರಬೇಕು ನಾನೂ... ಭಾವನೆಗಳೆಲ್ಲವನ್ನು ಹಿಡಿದು ಗಟ್ಟಿಯಾಗಿ....
ಇಂದಿಗೂ ನೀನು ನನ್ನವನಲ್ಲ ಎಂಬ ಕಟುಸತ್ಯವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಹೃದಯದ ಮೂಲೆಯಲ್ಲಿ ಗುಬ್ಬಿ ಗೂಡು ಕಟ್ಟಿದೆ. ಬಹುದೊಡ್ಡದಾದ ಗೂಡು... ಪ್ರತೀ ಕಡ್ಡಿಯಲ್ಲೂ ಬೊಗಸೆ ತುಂಬಾ ಪ್ರೀತಿಯನ್ನು ತುಂಬಿಟ್ಟಿದೆ. ಮುದೊಂದು ದಿನ ಯಾರೋ ಬಂದು ಒಡೆಯುತ್ತಾರೆ ಎಂಬ ಪರಿವೆಯೂ ಇಲ್ಲದೆ...ಇಷ್ಟಾಗಿಯೂ ನಿನ್ನ ಬಗ್ಗೆ ಉಳಿದಿರೋದು ಮತ್ತದೇ ಪ್ರೀತಿ, ಹಿಡಿ ವಿಶ್ವಾಸ... ಮತ್ತೆ ನಮ್ಮ ಬಾಂಧವ್ಯ ಹೀಗೇ ಕೊನೆವರೆಗೂ ಇರುತ್ತೆ ಅನ್ನೋ ಬಲವಾದ ನಂಬಿಕೆ.
- ಅಂತರ್ಮುಖಿ
ಅಂಕಣ
ಹೌದು..! ಮನುಷ್ಯನಿಗೆ ಯಾವುದು ಅವಶ್ಯಕವಾಗುವುದೋ ಅದನ್ನು ಅನಿವಾರ್ಯ ಅಂದಾಗ ಪಡದೇ ತೀರಲು ಯತ್ನಿಸುತ್ತಾನೆ...ಹಸಿವಿನಿಂದ ಕಾಮದವರೆಗೆ ! ಹಸಿವೆಗೆ ಸೋತವನು ಸೋಮಾರಿಯಾದರೂ ಕೆಲಸಗಾರನಾಗುತ್ತಾನೆ. ಬಿಕ್ಷುಕನೂ ಹಾಡುಗಾರನಾಗುತ್ತಾನೆ..! ಕೋಟ್ಯಾಧೀಶ್ವರ ನಂ.1 ಸ್ಥಾನಕ್ಕೇರಲು ಇಪ್ಪತ್ತನಾಲ್ಕು ಗಂಟೆಗಳನ್ನು ಹಗಲಾಗಿ ಪರಿವರ್ತಿಸಲು ಯತ್ನಿಸುತ್ತಾನೆ. ಬಾಳೆ ಹಣ್ಣಿನ ಮಂಡಿಯವನು ಹಣ್ಣಾಗದಿದ್ದರೂ ಬೇಡಿಕೆಗೆ ಹಬೆಯ ಮೊರೆ ಹೋಗುತ್ತಾನೆ.
ಮಾವಿನ ಹಣ್ಣಿನ ಗಾಡಿಯವನು ಸೀಜನ್ ಮುಗಿಯಿತು ಅಂದಾಗ ಹುಳ ಮನೆಮಾಡಿರುವ ಹಣ್ಣನ್ನೂ ರಾಶಿಗಿಡುತ್ತಾನೆ. ಹೆಣ್ಣಿನ ಬಗ್ಗೆ ಹಿಡಿತ ಇಲ್ಲದೋನು ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿರೋ ಕಚಡ ಕಾಮರೂಪಿಯೂ ಆಗಬಹುದು. ಅನಿವಾರ್ಯತೆ ಎಂಬುವುದು ಪಡೆಯುವ ಮತ್ತು ಕೊಳ್ಳುವ ಯುದ್ಧ.
ತಕ್ಕಡಿಯಲ್ಲಿ ನ್ಯೂಟ್ರಲ್ ಪಾಯಿಂಟ್ ಗುರುತು ಇರುವ ಹಾಗೆ ನಮ್ಮ ಮನಸ್ಸಲ್ಲೂ ನ್ಯೂಟ್ರಲ್ ಪಾಯಿಂಟ್ ಒಂದಿದ್ದರೆ ಯೋಚನೆ-ವಿವೇಚನೆಗೆ ಅದು ನಿಲ್ದಾಣ ಆಗಬಲ್ಲದು.ಯೋಚನೆ-ವಿವೇಚನೆಗೆ ಮನಸಲ್ಲಿ ಆ ನಿಲ್ದಾಣ ಇಲ್ಲದಾಗ ತಕ್ಕಡಿಯ ಮುಳ್ಳಿನಂತೆ ನಮ್ಮ ಮನಸ್ಸು ಚಂಚಲ ಆಗುತ್ತ ಅತ್ತಿತ್ತ ಸರಿದಾಡಬಹುದು. ಆಯ್ಕೆಯ ಭಾರವನ್ನು ಅದು ಸಮತೋರಿಸದೇ ಹೋಗಬಹುದು...ಚಂಚಲತೆ ನಮ್ಮ ಗೆಳೆಯನಾಗಬಹುದು. ಚಂಚಲತೆಯ ಗೆಳೆತನ ಜೀವನದಲ್ಲಿ ಒಳ್ಳೆಯ ಧಿಕ್ಸೂಚಿಯಾಗಲು ಸಾಧ್ಯವಿಲ್ಲ. ಕೆಲವು ಸರ್ತಿ ಇಂತಿಷ್ಟು ಸಮಯ ಒಂದು ಸಾಧನೆಗೆ ಮೀಸಲಾಗಿರಿಸಿ, ಅಲ್ಲಿ ಬೇಕಾದ್ದನ್ನ ಪಡೆದುಕೊಳ್ಳಲಾಗದಿದ್ದರೆ ಮತ್ತೆ ಕೆಲಸಮಯವನ್ನು ಇನ್ನೊಂದು ರೀತಿಯ ಸಾಧನೆಗೆ ಮೀಸಲಿಡುವುದು... ಹೀಗೆ ಜೀವನದಲ್ಲಿ ಪ್ರಾಕ್ಟಿಕಲ್ ಲೈಫ್ ಸಿಸ್ಟೆಮ್ ಅಳವಡಿಸಿಕೊಂಡಾಗ ಒಂದು ಪ್ರಶ್ನೆ..! ಇದು ಅನಿವಾರ್ಯತೆಯಾ? ಅಥವಾ ತಪ್ಪು ಲೆಕ್ಕಾಚಾರವಾ?
ಮೂವತ್ತಕ್ಕೇ ಹಾರ್ಟ್ ಅಟ್ಯಾಕಂತೆ ಅನ್ನುವ ಈ ದಿನಗಳಲ್ಲಿ ಲೈಫ್ ತುಂಬ ಶಾರ್ಟ್ ! ರೇಖಾಗಣಿತದಲ್ಲಿ ಸೆಂಟಿಮೀಟರ್ ಗೆರೆ ಅಂತಾರಲ್ವಾ ಹಾಗೆ ! ಸ್ವಲ್ಪ ಒತ್ತಿ ಆ ಗೆರೆಯನ್ನ ಪೆನ್ಸಿಲ್ಲಿಂದ ಎಳೆದ್ರೆ, ಎರಡು ಸರ್ತಿ ಅದರ ಪಾಯಿಂಟ್ ಮುರಿದು ಹೋದ್ರೆ, ಶಾರ್ಪನರಲ್ಲಿ ನಾಲ್ಕು ಸರ್ತಿ ತಿರುಗಿಸಿದ್ರೆ ಬೆರಳಿನ ತುದಿಗಷ್ಟೆ ಉಳಿಯುವ ತುಂಡು ಸಿಗುತ್ತದೆ. ಅದರಲ್ಲಿ ಸಾರ್ಥಕತೆ ಪಡೆಯುವುದು ಸಾಧ್ಯವೆ?
ಈ ರೀತಿಯ ಅನಿವಾರ್ಯತೆಗೆ?-ಸಾಧನೆಗೆ? ಸಂಬಂಧಪಟ್ಟ ಹಾಗೆ ನನ್ನ ಕ್ಷೇತ್ರದ ಒಂದು ಉದಾಹರಣೆಗೆ ಗಮನಕ್ಕೆ ತರ್ತೀನಿ. ನನ್ನ ಬರವಣಿಗೆಗೆ ಸುಲಭವಾಗಿ ಸಿಗೋದು ಇದೇ. ಒಬ್ಬಳು ತಾಯಿ ಮಹಾನ್ ಕನಸುಗಾರ್ತಿ! ಅವಳ ಮಗಳು ಸ್ಟೇಜ್ ಷೋಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ..ಒಳ್ಳೆಯ ನಿರ್ದೇಶಕರುಗಳು ಅವಳೇ ಸಿನಿಮಾ ಪ್ರೊಡ್ಯೂಸ್ ಮಾಡ್ತೀನಿ ಅಂದ್ರೂ ಬೇಡ ಎಂದು ಬುದ್ಧಿವಾದ ಹೇಳುವಷ್ಟು ಮುಖಭಾವದವಳು. ! ಕನಸುಗಾರ್ತಿ ತಾಯಿಗೆ ಮಗಳ ಡ್ಯಾನ್ಸೇ ಸಿನಿಮಾ ನಾಯಕಿ ಆಗೋದಕ್ಕೆ ಪ್ರಚೋದನಾಮಾನದಂಡ ಆಯಿತು. ಅವಳ ಬಾಯಲ್ಲಿ ನನ್ನ ಮಗಳು `ಈರೋಯಿನ್' ಆದರೆ ಮಾತ್ರ ಅನ್ನುವ ಮಾತು ಚಿಕ್ಕಪುಟ್ಟ ಅವಕಾಶ ಕೊಡಲು ಮುಂದೆಬಂದವರಿಗೆ ಉತ್ತರವಾಯಿತು. ಪಾಪ ಮಗಳಿಗೂ ಕನಸಿನ ವಯಸ್ಸು ! ತಾಯಿ -ಮಗಳು ಇಬ್ಬರಲ್ಲೂ ಯೋಚನೆ ವಿವೇಚನೆಯ ನಿಲ್ದಾಣಗಳಿರಲಿಲ್ಲ. ಕಾಕತಾಳಿಯ ಎನ್ನುವಂತೆ ಒಬ್ಬರು ನಿದರ್ದೇಶಕರು ಕನಸುಗಾರ್ತಿ ತಾಯಿಗೆ ಗಂಟು ಬಿದ್ದರು. ಇಂಥವರ ಹುಡುಕಾಟ-ಹುಡುಗಾಟಕ್ಕೆ ಒಂದು ಬೈ-ಟೂ ಟೀ ತಂಡವೇ ಇರುತ್ತದೆ. ಹೀಗೂ ಉಂಟೇ ಅನ್ನುವ ವಿಶೇಷತೆ ಬೇಡ.. ಈ ತರದ ವ್ಯವಸ್ಥೆ ಹಲವಾರು ಕಡೆ ಬೇರೆ ಬೇರೆ ರೂಪಾಂತರಗಳಲ್ಲಿರುತ್ತದೆ.
ಅಂತೂ ಇಂತೂ ಸಿನಿಮಾ ಸೆಟ್ಟೇರುವ ದಿನ ಬರುತ್ತದೆ. ಈರೋಯಿನ್ ಆಗಬೇಕೆಂದವಳು ಎರಡನೇ ನಾಯಕಿಯಾಗಿ ಅವಕಾಶ ಗಿಟ್ಟಿಸಿದ್ದಾಳೆ..! ಮೊದಲಿಗೆ ಹಲವಾರು ನಾಯಕರ ಹೆಸರುಗಳನ್ನ ಹೇಳಿದ ನಿರ್ದೇಶಕ ಸಿಟ್ಟಿಂಗ್ ಚಾರ್ಜ್ ನ ಬಡ್ಜೆಟ್ ವಸೂಲಿ ಮಾಡ್ತಾನೆ ಇದ್ದ. ! ಸದ್ಯದ ಪರಿಸ್ಥಿತೀಲಿ ತುಂಬ ಡಿಮ್ಯಾಂಡ್ ಮಾಡೋ ಹೀರೋಗಳಿಗಿಂತ ವಿಲನ್ ಗಳನ್ನೇ ಹೀರೋ ಮಾಡೋದೊಳಿತು...! ಹೀರೊ ಆಗಿ ಗೊತ್ತಾದವನು ಆರಡಿ ಇದ್ದಾನೆ ಅವನ ಮುಂದೆ ವಿಲನ್ ಕಮ್ಮಿ ಅಂದ್ರೂ ಅಷ್ಟಿರಬೇಕು, ಇಲ್ಲ ಸ್ವಲ್ಪ ಹೆಚ್ಚೇ ..ಮದ್ರಾಸಿನಿಂದ ಕರೆಸುವುದು ಎಂದು ನಿರ್ಧಾರವಾಯಿತು. ಹಿರಿಯ, ಪ್ರಶಸ್ತಿ ವಿಜೇತ ಛಾಯಾಗ್ರಾಹಕರು ಕ್ಯಾಮೆರಾ ಮ್ಯಾನ್ ಆಗಿ ಫಿಕ್ಸ್ ಆದರು. ಅವರಿಗೂ ಆದಾಯದ ಕೊರತೆ ಇದ್ದಿದ್ದರಿಂದ ಆಯ್ತೆಂದು ಹೇಳಿದ್ದರು.ಒಂದಷ್ಟು ಅನುಭವಕ್ಕೆ ತಕ್ಕಬುದ್ದಿವಾದವನ್ನ ನಿರ್ದೇಶಕನಿಗೆ ಹೇಳಿದ್ರು...! ಆಕ್ಷನ್ ಹೇಳ್ತೀನಿ ಹೇಳಿದ ಶಾಟ್ ತೆಗೀರಿ ಮತ್ತೆ ಕಟ್ ಹೇಳ್ತೀನಿ. ಅರ್ಧ ಟೀ ತರಿಸ್ಕೊಂಡು ಕುಡೀರಿ..ಅಂದ ಹಿರಿಯ ಮನಸ್ಸು ಅದೆಷ್ಟು ವೃತ್ತಿ ಅಪಮಾನ ಪಟ್ಕೊಂಡ್ರೋ ಆ ಮುಪ್ಪಲ್ಲೂ ಅನಿವಾರ್ಯತೆಯ ಮಾನದಂಡ.
ಮುಹೂರ್ತದ ದಿನದಂದು ಊರವರು,ಪರ ಊರಿನವರು, ಲೋಕಲ್ ಪತ್ರಕರ್ತರೆಲ್ಲ ಸೇರಿದ್ದರು.ಮದ್ರಾಸಿನಿಂದ ಯಾವ ಫ್ಲೈಟಲ್ಲೂ ಅಲ್ಲಿಯ ವಿಲನ್ ಬೆಂಗಳೂರಿಗೆ ಕಾಲಿಡಲೇ ಇಲ್ಲ.ಅಲ್ಲಿ ಸಹನಿರ್ಮಾಪಕರೇ ಕಾದು ಕುಳಿತಿದ್ದರು. ಹೀರೋ ಶಾಟ್ ಮುಗಿಯಿತು. ``ಈರೋಯಿನ್'' ನಾಲ್ಕು ದಿನ ಬಿಟ್ಟು ಬರುವವಳಿದ್ದಳು. ಇದರ ಮದ್ಯೆ ಮದ್ರಾಸ್ ವಿಲನ್ ನೋಡುವ ಕಾತರದಿಂದ ಜನ ಕಾಯುತ್ತಲೇ ಇದ್ದರು. ನಿರ್ದೇಶಕರು ಬಾಯಿಗೆ ಬಂದಂತೆ ಯಾರ್ಯಾರನ್ನೋ ಬೈದರು ಜೋಕರ್ ನಂತೆ.( ಜೋಕರ್ ಅನ್ನಲು ಅವರ ಮಾತಿನ ದಾಟಿಗೂ, ಪದಗಳಿಗೂ ಅವರಿಗೂ ಹೊಂದಾಣಿಕೆಯೇ ಇರಲಿಲ್ಲ. ಐದಡಿ ಮಾತ್ರ ಇದ್ದರು. ಯಾವ ತಕ್ಕಡಿಯಲ್ಲಿ ತೂಗಿದರೂ ನಲವತ್ತೈದರ ಮೇಲಿರಲಿಲ್ಲ.) ಕೊನೆಗೆ ಛಾಯಾಗ್ರಾಹಕರಿಗೆ ಹೇಳಿ ಆಚೆ ಹೋದ ನಿರ್ದೇಶಕರು ಮತ್ತೆ ಕೆಲ ಹೊತ್ತಿನ ನಂತರ ಶೂಟಿಂಗ್ ಜಾಗದತ್ತ ಪ್ರವೇಶ ಆದಾಗ ಕಲರ್ ಫುಲ್ ಆಗಿದ್ದರು. ಬಣ್ಣದ ಹೊಂದಾಣಿಕೆ ಇಲ್ಲದ ಪ್ಯಾಂಟು ಶರಟು, ಅದರೊಳಗೆ ಎದ್ದು ಕಾಣುವ ಇನ್ನೊಂದು ಕಣ್ಣು ಕುಕ್ಕುವ ಬನಿಯನ್ನು ಸಾಲದೆಂಬಂತೆ ಕತ್ತಲ್ಲಿ ಶಾಲಿನ ಹಾರ .. ಜನ ಆಹಾ ಅಂದರು..ಚಪ್ಪಾಳೆ ತಟ್ಟಿದರು..ಇದು ತನಗೆ ಪ್ರೋತ್ಸಾಹ ಅಂದುಕೊಂಡು ಯಾಮಾರಿದ ನಿರ್ದೇಶಕ ಚಪ್ಪಾಳೆ ಜೊತೆ ಶಿಳ್ಳೆಯನ್ನೂ ಗಿಟ್ಟಿಸಿಕೊಂಡ. ಹಿರಿಯ ಛಾಯಾಗ್ರಾಹಕರು ಒಂದು ಟೀ ಗೆ ಆರ್ಡರ್ ಮಾಡಿದರು. ಮುಖಕ್ಕೆ ನೀರು ಚಿಮುಕಿಸಿಕೊಂಡರು. ಆಂಟಿ ಪಬ್ಲಿಸಿಟಿ ಗೆ ನಾನೆ ಮದ್ರಾಸ್ ವಿಲನ್ ಅಂದಿದ್ದೆ. ಈಗ ವಿಲನ್ ನಾನೆ ..ಯಾರು ಗೆಸ್ ಮಾಡೋಕೆ ಸಾಧ್ಯಾನೆ ಇಲ್ಲ ಅಂದುಬಿಟ್ಟ. ಎಲ್ಲರ ತೆಗೆದ ಬಾಯಿ ಹಾಗೆ ಇತ್ತು. ಸಹನಿರ್ಮಾಪಕನಿಗೆ ಏರ್ಪೋರ್ಟ್ ಕಾಯೋ ಅನಿವಾರ್ಯತೆ ಇತ್ತಾ..! ನಿರ್ದೇಶಕನಿಗೆ ಸುಳ್ಳು ಹೇಳೋ ಅನಿವಾರ್ಯತೆ ಇತ್ತಾ? ಅಂತೂ ಅವರವರಲ್ಲಿ ಯಾವುದೋ ಒಂದು ಸಂಗತಿ ಅನಿವಾರ್ಯವಾಗಿತ್ತು.
ಆಕ್ಷನ್ !
ಛಾಯಾಗ್ರಾಹಕರು ನಿರ್ದೇಶಕರ ಅಪ್ಪಣೆಯಂತೆ ಬಣ್ಣ ಬಣ್ಣದ ಬಟ್ಟೆಗಳೊಡನೆ ನಿರ್ದೇಶಕರದ್ದೇ ಶಾಟ್ ತೆಗೆದರು. ಶಾಟ್ ಇಷ್ಟೆ..! ಅಲ್ಲಿರುವ ಗುಡಿಗೆ ವಿಲನ್ ಸುತ್ತು ಬರೋದು.. ನಮಸ್ಕಾರ ಮಾಡುವುದು.. ನಾಮ ಇಟ್ಟುಕೊಳ್ಳುವುದು..!
ನಂತರ
ಸೆಕೆಂಡ್ ಈರೋಯಿನ್ ಬರಲು ..ಅಪ್ಪಣೆಯಾಯ್ತು.. ಅವಳನ್ನ ಕರಿಯೋಕೆ ಹೋದ ಸೆಟ್ಟಿನ ಯಾರೂ ಮತ್ತೆ ಅವಳ ರೂಮಿನಿಂದ ಹೊರಗೆ ಬರಲೇ ಇಲ್ಲ...! ಮತ್ತೆ ನಿರ್ದೇಶಕ ತಾಂಡವ ನೃತ್ಯದೊಂದಿಗೆ ಅಲ್ಲಿಗೆ ದಾಳಿಯಿಟ್ಟ... ಜನರೂ ಹಿಂಬಾಲಿಸಿದರು. ನಿರ್ದೇಶಕ ಹಾಗೆ ಬಾಗಿಲಲ್ಲಿ ಕಲ್ಲಾಗಿಬಿಟ್ಟ. ಕನಸುಗಾರ್ತಿ ತಾಯಿ -ಈರೋಯಿನ್ ಮಗಳು ಸಹಸ್ರನಾಮಾರ್ಚನೆ ಮಾಡುತ್ತಲೇ ಇದ್ದರು. ಕೆಲವೊಂದು ಚೂಡಿದಾರ್..ಪೈಜಾಮ ಅವನ ಮೇಲೆ ಪುಷ್ಪದಂತೆ ಬೀಳುತ್ತಿತ್ತು. ಈ ಅನಿವಾರ್ಯತೆ ಯಾಕೆ ಬಂತು !
ಹೀರೋಯಿನ್ನು ಪರ್ಚೇಸ್ ಮಾಡಿದ್ದ ಅಷ್ಟೂ ಚೂಡಿದಾರ್ ವೇಲುಗಳನ್ನ ನಿರ್ದೇಶಕರು ಅವರ ಶಾಟಿನಲ್ಲಿ ಕುತ್ತಿಗೆಗೆ ಸುತ್ತಿಕೊಂಡಿದ್ದರು. ನಾನಿವಾಗ ಯಾವ ಡ್ರೆಸ್ಸ್ ಹಾಕಲಿ..ಇದು ಈರೋಯಿನ್ ಪ್ರಶ್ನೆ. ಜನ ಚದುರಿದರು ಸಿನಿಮಾವನ್ನೇ ನೋಡಿ ಖುಷಿಪಟ್ಟುಕೊಂಡವರಂತೆ. ನಿರ್ದೇಶಕ ಕಂ ನಿರ್ಮಾಪಕ ನಿಂತೇ ಇದ್ದ. ದೂರದಲ್ಲಿ ಯೂನಿಟ್ ಗಾಡಿ ನಿಂತಿತ್ತು. ಯೂನಿಟ್ ಸೀನಿಯರ್-ಕಾಸ್ಟೂಮರ್- ಪ್ರೊಡಕ್ಷನ್ ಚೀಫ್ - ಮೇಕಪ್ ಮ್ಯಾನ್ ತಮ್ಮ ಬಾಟ ಚೀಟಿ ಹಿಡಿದು ನಿಂತಿದ್ದರು.
ಕ್ಷಮಿಸಿ..ಮತ್ತದೇ ಅನಿವಾರ್ಯತೆಯ ಪ್ರಶ್ನೆ.
ಮುಕ್ತಾಯಕ್ಕೆ ಇನ್ನೊಂದು ಸಾಲು. ನನಗೂ ನಿಮಗೂ ಸೇರಿಸಿ ಅನಿವಾರ್ಯತೆ ಯಾವ ರೂಪದ್ದೇ ಇರಲಿ- ಇರಬಹುದು..ಅದರ ಅಪ್ಪುಗೆಗೆ ಮುನ್ನ ಸ್ವಲ್ಪ ಎಚ್ಚರವನ್ನು ಬೆಚ್ಚಗೆ ಮಾಡಿಕೊಳ್ಳಿ.
- ವಿನು ಬಳಂಜ
ಧಾರಾವಾಹಿ ನಿರ್ದೇಶಕರು,ಬೆಂಗಳೂರು.
ವೈವಿಧ್ಯ
ಫಾರಿನ್ ಅ, ಆ, ಇ...
ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲಂಡ್...
ಅಲ್ಲಿ ಆಸ್ಟ್ರೇಲಿಯಾದಲ್ಲಿ ನಮ್ಮವರಿಗೆ ಹೊಡೆದಾಗ ನಮಗೆ ಇಲ್ಲಿ ಕೆನ್ನೆ ಊದುತ್ತದೆ. ಕೋಪ, ತಾಪ ಹೆಚ್ಚಾಗುತ್ತದೆ. ಎಲ್ಲೆಲ್ಲೂ ಅದರದ್ದೇ ಮಾತುಕತೆ ಬೇರೆ. ಇದು ಬರೀ ಆಸ್ಟ್ರೇಲಿಯಾದ ಕಥೆ ಮಾತ್ರ ಅಲ್ಲ. ಬೇರೆ ದೇಶಗಳಲ್ಲೂ ಇದೇ ಕಿರಿ ಕಿರಿ ಅಂತೆ. ಹೀಗೆಲ್ಲಾ ಚರ್ಚೆಗಳು, ಅದಕ್ಕೆ ಪುಷ್ಟಿ ಕೊಡೋ ಸುದ್ದಿ ಕಳೆದ ತಿಂಗಳು ಮತ್ತು ಈ ತಿಂಗಳು ಎಲ್ಲೆಡೆ ರಾಜವಾಡಿದ್ದು ಗೊತ್ತೇ ಇದೆ.
ಆದರೆ, ನಾವೇನು ಇದರಲ್ಲಿ ಕಡಿಮೆಯಾ. ನೀವೀಗ ನೋಡುತ್ತಿರುವ ಅಥವಾ ಕೇಳುತ್ತಿರುವ ಅಮೀರ್ ಖಾನ್ ಜಾಹೀರಾತೇ ನೋಡಿರಬಹುದು. ಅಲ್ಲಿ ಟ್ಯಾಕ್ಸಿ ಡ್ರೈವರ್ ‘ಫಾರಿನ್ ಟೂರಿಸ್ಟ್’ಗಳನ್ನು ತಮಾಷೆ ಮಾಡೋದನ್ನು ನೋಡಿ ಸಹಿಸೋದಕ್ಕೆ ಆಗದ ಆಮೀರ್ ಖಾನ್ ಅವರತ್ತ ಕಿಡಿಕಾರಿ ‘ಅತಿಥಿ ದೇವೋಭವ’ ಅನ್ನೋ ವಾಕ್ಯದ ನಿಜವಾದ ಅರ್ಥ ಹೇಳುತ್ತಾನೆ. ಆಮೇಲೆ ಎಲ್ಲರಿಗೂ ಅದೇ ವಾಕ್ಯದ ಪುನರುಚ್ಚಾರ ಮಾಡಿ ಸ್ಪಷ್ಟವಾಗಿ ಹೇಳ್ತಾನೆ ಪ್ರವಾಸಿಗರು ನಮಗೆ ಭಾರಿ ಮುಖ್ಯ ಅಂತ.
ಇದೆಲ್ಲಾ ಸರಿ. ಆದರೆ ಈ ಜಾಹೀರಾತು ಆಸ್ಟ್ರೇಲಿಯಾದಲ್ಲಿ ಪ್ಲೇ ಯಾರು ಮಾಡ್ತಾರೆ ಅಂತ ಕೇಳ್ತೀರಾ. ಛೆ. ಅದಲ್ಲಾ ಇಲ್ಲಿ ವಿಚಾರ. ನಮಗೆ ಈ ಜಾಹೀರಾತು ತರಬೇಕಾದ ಅಗತ್ಯ ಏನಿತ್ತು ಅನ್ನೋದರ ಹಿಂದೆ ಸ್ವಲ್ಪ ಯೋಚಿಸೋಣ. ಬಹುಷಃ ನಿಜಾರ್ಥದ ಅನುಭವವಾಗುತ್ತದೆ ಆಗ. ನಮ್ಮಲ್ಲೂ ಇಂತಹ ರೇಸಿಸ್ಟ್ ಯೋಚನೆಗಳು, ಬಣ್ಣದ ಬಗ್ಗೆ ತಾರತಮ್ಯದ ಭಾವನೆಗಳು ಭಾರಿ ಪ್ರಮಾಣದಲ್ಲಿರೋದು ಗೊತ್ತಿದ್ದರೂ ಅದನ್ನು ಎಲ್ಲೆಡೆ ಹೇಳಿಕೊಂಡು ಬರೋದು ಬುದ್ಧಿವಂತಿಕೆಯ ಲಕ್ಷಣ ಅಲ್ಲ.
ಇನ್ನು ನಾವು ಯೋಚಿಸಬೇಕಾಗಿರೋದು ಆಯಾ ದೇಶಗಳ ಬಗೆಗೆ. ಅಲ್ಲದೇ ಆ ದೇಶದ ಮಂದಿ ನಮ್ಮನ್ನು ಅಲ್ಲಿ ಕರೆಯುವಾಗ ಯಾಕೆ ಈ ರೀತಿಯ ವಿಚಾರಗಳನ್ನು ದೂರವಿಡುವ ಬಗ್ಗೆ ಗೋಜಿಗೆ ಹೋಗುವುದಿಲ್ಲ ಅನ್ನುವುದುರ ಬಗ್ಗೆ. ನಿಜವಾಗಿ ನೋಡಬೇಕಾದರೆ, ಇಂತಹ ದೇಶಗಳಲ್ಲಿ ರೇಸಿಸಮ್ ಇರ್ಬಹುದು ಅಥವಾ ವಿದೇಶಿಯರ ಮೇಲೆ ಸ್ವಲ್ಪ ದ್ವೇಶಿಸಮ್ ಸ್ವಲ್ಪ ಇರೋದು ಸಹಜ. ಅದರ ಜತೆಗೆ, ನಮ್ಮೂರ ಮಂದಿ ಅಲ್ಲಿ ಹೋಗಿ, ಅಲ್ಲಿನ ಮಂದಿಗಿಂತ ಹೆಚ್ಚು ಮಾರ್ಕ್ಸ್ ಪಡೆಯೋದು ಬೇರೆ ಇದಕ್ಕೆ ಕಾರಣ ಅನ್ನೋದೂ ಸರಿಯೇ.
ಇದೆಲ್ಲದರ ಜತೆಗೇ ಇನ್ಯಾರೋ ಹೇಳ್ತಾ ಇದ್ದರು, ಅಲ್ಲಿ ಫಾರಿನ್ ನಾಡುಗಳಲ್ಲಿ, ನಮ್ಮವರ ಮೇಲೆ ಅಲ್ಲಿನ ಮಂದಿ ಹರಿಹಾಯೋದಕ್ಕೆ ಕಾರಣಗಳು ಹುಟ್ಟು ಹಾಕೋದು ಕೆಲವೊಮ್ಮೆ ನಮ್ಮವರೇ ಅಂತ. ಅವರನ್ನು ಬಿಳಿ ವರ್ಣದವರು, ಗೋರಾ ಅಂತ ತಮಾಷೆ ಮಾಡೋ ಭಾರತೀಯರಿಗೆ ಕಮ್ಮಿಯಿಲ್ಲವಂತೆ. ಅದೇನೇ ಇದ್ದರೂ ನಮ್ಮೂರ ಮಂದಿ ಮಾಡಿದ್ದೇ ಸರಿ ನಮಗೆ ಅಲ್ವಾ.
ಆದ್ರೆ ನಾವು ಸೀರಿಯಸ್ಸಾಗಿ ಥಿಂಕ್ ಮಾಡ್ಬೇಕಾಗಿರೋದು ಇಷ್ಟನ್ನ. ಅಲ್ಲಿ ಫಾರಿನ್ ನೆಲದಲ್ಲಿ ಕಲಿಯೋದು ಸರಿ. ಆದ್ರೆ ನಮ್ಮ ನೆಲದಲ್ಲಿ ಕಲಿಯುವ ಬಗ್ಗೆ ನಾವು ಜಾಸ್ತಿ ಚಿಂತಿಸೋದು ಒಳ್ಳೇದಲ್ವಾ ಅಂತ. ಹಾಗೇ, ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾಷಣ ಕೇಳಲು ಇತ್ತೀಜೆಗೆ ಅವಕಾಶ ಸಿಕ್ಕಿತ್ತು ಬೆಂಗಳೂರಿನ ಪ್ರತಿಷ್ಟಿತ ಸಫಾಯ ಹೈಸ್ಕೂಲಿನಲ್ಲಿ. ಅಲ್ಲೊಬ್ಬ ಹುಡುಗಿ ಕೇಳಿದ್ದು ಇಷ್ಟನ್ನ; ಫಾರಿನ್ ನೆಲದಲ್ಲಿ ನಮ್ಮವರು ಕಲಿಯೋದ್ಯಾಕೆ ಈ ರೀತಿ ರೇಸಿಸಮ್ ನ ತೊಂದರೆ ಇರೋವಾಗ ಅಂತ.
ಅದಕ್ಕೇ ಕಲಾಮ್ ತಲೆದೂಗಿದರು. ಅಲ್ಲದೇ ಹೇಳಿದ್ದು ಸರಿರ ಅನಿಸಿತು. ನಮ್ಮೂರಲ್ಲೇ ಹೆಚ್ಚೆಚ್ಚು ವಿದ್ಯಾ ಮಂದಿರಗಳು ತಲೆಯೆತ್ತಬೇಕು. ವಿದೇಶಕ್ಕೆ ಓಡೋ ಚಟ ಕಡಿಮೆಯಾಗಬೇಕು, ರಿಸರ್ವೇಶನ್ ನ ಹಾವಳಿಗೆ ಕಡಿವಾಣ ಬೀಳಬೇಕು. ಹಾಗಾದಾಗ ಮಾತ್ರ ನಮ್ಮಲ್ಲಿನ ವಿದ್ಯಾರ್ಥಿಗಳು ನಮ್ಮಲ್ಲೇ ಉಳಿದು ಇಲ್ಲೇ ಕಲೀತಾರೆ.
ಕಲಾಂ ಹೇಳೋ ಮಾತಲ್ಲಿ ಎಷ್ಟು ಅರ್ಥ ಇದೆ. ಅದರ ಜತೆಗೇ, ನಮ್ಮಲ್ಲಿರೋ ಶಾಲೆಗಳ, ಸರಕಾರಿ ಕಾಲೇಜುಗಳ ನಂಬರ್ಸ್ ಹೆಚ್ಚಿಸಿದರೂ, ಅಲ್ಲಿನ ಗುಣಮಟ್ಟ ಬೆಳೆಸಬೇಕಾದ ಅಗತ್ಯ ಇರೋದಂತೂ ಸತ್ಯ.
ನಮ್ಮಲ್ಲಿ ಐಐಎಸ್ಸಿ ಇರ್ಬಹುದು. ಎಂಐಟಿ ಕೇಳಿರೋ ಮಂದಿ ಲೋಕದಲ್ಲೆಲ್ಲಾ ಸಿಗ್ತಾರೆ, ಆದ್ರೆ ಐಐಎಸ್ಸಿ ಕೇಳಿದ ಮಂದಿ ಬಹಳ ಅಪರೂಪ. ನಮ್ಮಲ್ಲಿ ಜೆಎನ್ಯು ಇರ್ಬಹುದು, ಆಕ್ಸ್ ಫರ್ಡ್, ಕೇಂಬ್ರಿಜ್ ಕೇಳಿರೋ ಮಂದಿ ಸಿಕ್ತಾರೆ, ಆದ್ರೆ ಜವಾಹರ್ ಲಾಲ್ ನೆಹರು ಯುನಿವರ್ಸಿಟಿ ಹೆಸರಿಗೆ ಅಷ್ಟು ಬೆಲೆ ಇಲ್ಲ.
ಪರಿಸ್ಥಿತಿ ಹೀಗಿರುವಾಗ ನಾವೇನು ಮಾಡಬೇಕು?
ಪ್ರಶ್ನೆ ಮಾತ್ರ ಇದೆ.
- ಬಡೆಕ್ಕಿಲ ಪ್ರದೀಪ
ಪ್ರತಿನಿಧಿ; ಆಜ್ ತಕ್
ಆಟ - ಅವಲೋಕನ
ಬಹು ನಿರೀಕ್ಷೆಯ ಟಿ-ಟ್ವೆಂಟಿ ವರ್ಲ್ಡ್ ಕಪ್ ನ ಫೈನಲ್ನಲ್ಲಿ ಶ್ರೀಲಂಕ ಮತ್ತು ಪಾಕೀಸ್ತಾನ ಮಧ್ಯೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿತ್ತು.ಟಾಸ್ ಗೆದ್ದ ಶ್ರೀಲಂಕಾ ಕಫ್ತಾನ ಕುಮಾರ್ ಸಂಗಕ್ಕಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಬ್ಯಾಟ್ಸಮ್ಯಾನ್ ಗಳಿಂದ ನಿರೀಕ್ಷಿತ ಫಲಿತಾಂಶ ಹೊರಬರಲಿಲ್ಲ.


ತಂಡದ ಆರಂಭಿಕ ಆಟಗಾರ ದಿಲ್ಶನ್ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಶ್ರೀಲಂಕಾದ ಬ್ಯಾಟಿಂಗ್ ಗೆ ಹೊಡೆತ ಬಿತ್ತು. ಮಧ್ಯಮ ಕ್ರಮಾಂಕದಲ್ಲಿ ಕುಮಾರ ಸಂಗಕ್ಕಾರ ಮತ್ತು ಬಾಲಂಗೋಚಿ ಆಟಗಾರ ಆಂಜಲೋ ಮಾತ್ಯೂಸ್ ಬ್ಯಾಟಿಂಗ್ ನಿಂದಾಗಿ ಶ್ರೀಲಂಕಾ 138/6 ಮೊತ್ತ ಗಳಿಸುವಲ್ಲಿ ಸಫಲವಾಯಿತು.
ಇದನ್ನು ಬೆನ್ನಟ್ಟಿದ ಪಾಕೀಸ್ತಾನ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. 54 ರನ್ ಗಳಿಸಿದ ಅಫ್ರಿದಿ ಮ್ಯಾನ್ ಆಫ್ ದ ಮ್ಯಾಚ್ ಗಳಿಸಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕದ ಆಟಗಾರ ತಿಲಕರತ್ನೆ ದಿಲ್ಶನ್ ಅರ್ಹವಾಗಿ ಮ್ಯಾನ್ ಆಫ್ ದ ಸಿರೀಸ್ ಗಳಿಸಿದರು.
ವಿಶೇಷ ವರದಿ
ಇದು ಈ ಕನಸು ಎಕ್ಸ್ಲೂಸಿವ್
ಪೊಲೀಸರಿಂದಲೇ ಕಾನೂನು ಉಲ್ಲಂಘನೆ!!!
ಕಾರ್ಕಳ ಜನತೆ ಇನ್ನು ಸಂಚಾರಿ ನಿಯಮ ಪಾಲಿಸಬೇಕಾಗಿಲ್ಲ...


ಕಾರ್ಕಳದ ಪೊಲೀಸ್ ಸಿಬ್ಬಂದಿ ವಿಶ್ವನಾಥ್ ತಮ್ಮ ಬೈಕ್ನಲ್ಲಿ ತ್ರಿಬ್ಬಲ್ ರೈಡ್ ಮಾಡಿದ್ದು ಹೀಗೆ...!
ರಾಜ್ಯ - ರಾಷ್ಟ್ರ
ಕೊಲ್ಕತ್ತ:ಇಲ್ಲಿನ ಎವಿಯೇಶನ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿ ಡಯನಾ ಪಾಲ್ಗೊಂಡು ಮಾಧ್ಯಮ ಮಂದಿಗೆ ಹೀಗೆ ಫೋಸ್ ನೀಡಿದರು...
ರಾಜ್ಯ - ರಾಷ್ಟ್ರ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ ನಾಥ್ ಸಿಂಗ್ ನವದೆಹಲಿಯ ಪಕ್ಷದ ಕೇಂದ್ರೀಯ ಕಚೇರಿಯಲ್ಲಿ ಸಮಾಲೋಚನೆಯಲ್ಲಿ ಪಾಲ್ಗೊಂಡರು.
ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ವಿಕ್ರಮ್ ಎಂಬಾತ ಆತ್ಮಹತ್ಯೆಮಾಡಿಕೊಂಡವ.ಈತ ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇದಕ್ಕೂ ಮೊದಲು ಈತ ಮನೆಮಂದಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದ್ದ. ಈತನ ಕೊಠಡಿಯಲ್ಲಿ ಎರಡುಪುಟಗಳ ಪತ್ರವೊಂದು ಲಭ್ಯವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯ - ರಾಷ್ಟ್ರ
ನವದೆಹಲಿ: ಇತ್ತೀಚೆಗೆ ನಡೆದ ಮುಂಬಯಿ ದಾಳಿ ಹಾಗೂ ಕರಾವಳಿಯಲ್ಲಿ ಉಗ್ರರ ಅಟ್ಟಹಾಸದ ಸೂಚನೆಯ ಹಿನ್ನಲೆಯಲ್ಲಿ ಕರಾವಳಿ ವ್ಯಾಪ್ತಿಯಲ್ಲಿ ಇನ್ನಷ್ಟು ಭದ್ರತೆ ನೀಡುವ ಸಲುವಾಗಿ ಇದೀಗ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದು ರಚಿಸಲ್ಪಟ್ಟಿದೆ.ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.ಕರಾವಳಿಯ ರಕ್ಷಣೆಯ ಕುರಿತಂತೆ ಸಮರ್ಪಕ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಸಭೆ ಸೇರಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಆಟ - ಅವಲೋಕನ
ವಿಜಯವಾಡ: ಇದೀಗ ಟ್ವೆಂಟಿ -20 ಕ್ರಿಕೆಟ್ ಮೊದಲಿನ ಚಾರ್ಮ್ ಉಳಿಸಿಕೊಂಡಿಲ್ಲವಾದರೂ ಬೇರೇ ರೀತಿಯಲ್ಲಿ ಸುದ್ದಿಯಾಗುತ್ತಿದೆ. ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ಕ್ರಿಕೆಟ್ನಿಂದ ಹೊರಬಿದ್ದು ಒಂದು ಸುದ್ದಿಯಾದರೆ ಇದೀಗ ಮಹಿಳೆಯರ ತಂಡ ಇನ್ನೊಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.ಮಹಿಳಾ ತಂಡದಲ್ಲಿ ಸ್ಥಾನ ದೊರೆಯಬೇಕಾದರೆ `ತನ್ನ ಕೆಲವೊಂದು ಆಸೆ ಪೂರೈಸುವಂತೆ 'ತಂಡದ ಮೇನೇಜರ್ ವಿ.ಚಾಮುಂಡೇಶ್ವರ ನಾಥ್ ಆಮಿಷವೊಡ್ಡಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಇದೀಗ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಾದೇಶಿಕ ಸುದ್ದಿ
ಕಟೀಲು: ಹೀಗೂ ಉಂಟೇ.? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಹೌದು ಎಂಬ ಉತ್ತರ ದೊರೆಯುತ್ತದೆ. ಇದಕ್ಕೆ ಸಾಕ್ಷಿಯಾಗಿದ್ದು ಕಟೀಲಿನಲ್ಲಿ ನಡೆದ ಘಟನೆ.ಕಟೀಲು ದೇಗುಲದ ಕಾಣಿಕೆ ಹುಂಡಿ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಪೊಲೀಸ್ ಈ ಹಣ ಎಗರಿಸಿದ್ದಾನೆ. ತಹಶೀಲ್ದಾರ್,ಅಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಸಲಾಗುತ್ತಿತ್ತು. ಸಂಪೂರ್ಣ ಘಟನೆಯವಿಡಿಯೋ ಚಿತ್ರೀಕರಣವನ್ನೂ ನಡೆಸಲಾಗುತ್ತಿತ್ತು. ಆದರೆ ಈ ಸಂಗತಿ ಗೊತ್ತಿದ್ದೋ ಇಲ್ಲದೆಯೋ ಪೊಲೀಸರು ನೋಟಿನ ಕಂತೆಯನ್ನು ಕಿಸೆಗೆ ತುರುಕಿದ್ದರು... ವಿಡಿಯೋ ಕಣ್ಣು ಮಾತ್ರ ಇದನ್ನು ಸೂಕ್ಷವಾಗಿ ಚಿತ್ರಿಸಿತ್ತು...ಕೊನೆಗೆ ತಪ್ಪೊಪ್ಪಿಕೊಂಡ ಪೊಲೀಸ್ ಹಣ ಹಿಂತಿರುಗಿಸಿದರು! ಹೇಗಿದೆ ಕಳ್ಳ ಪೊಲೀಸ್!
ರಾಜ್ಯ - ರಾಷ್ಟ್ರ
ಕಾಞಂಗಾಡ್-ಕಾಣಿಯೂರು ರೈಲು ಹಳಿ
ಸುಳ್ಯ : ಸುಳ್ಯದ ಜನತೆಯ ಬಹು ನಿರೀಕ್ಷೆಯ `ರೈಲು ಹಳಿ' ಕನಸು ಇದೀಗ ನನಸಾಗುವ ಹಂತ ಸಮೀಪಿಸುತ್ತಿದೆ. ಇದೀಗ ಕಾಂಞಂಗಾಡ್ ಕಾಣಿಯೂರು ನಡುವಿನ ರೈಲು ಹಳಿಯ ದ್ವಿತೀಯ ಹಂತದ ಸಮೀಕ್ಷೆ ಪ್ರಾರಂಭಗೊಂಡಿದೆ. ಇದರಿಂದಾಗಿ ಸ್ಥಳೀಯರ ಮುಖದಲ್ಲಿ ಮಂದಹಾಸ ಮೂಡಬತೊಡಗಿದೆ.
ಎಲ್ಲಿ - ಹೇಗೆ
ಒಟ್ಟು 83 ಕಿಲೋಮೀಟರ್ ಉದ್ದದ ಹಳಿನಿರ್ಮಾಣಕ್ಕಾಗಿ ರೈಲ್ವೇ ಬಜೆಟ್ನಲ್ಲಿ ಹತ್ತು ಲಕ್ಷ ರುಪಾಯಿ ಮೀಸಲಿರಿಸಿತ್ತು. ಕೇರಳದ ಕಾಂಞಂಗಾಡ್ ಮತ್ತು ಪುತ್ತೂರು ಸಮೀಪದ ಕಾಣಿಯೂರು ಮಧ್ಯೆ ಈ ಹಳಿ ನಿರ್ಮಾಣಗೊಳ್ಳಲಿದೆ.
ಯಾರು ನಡೆಸ್ತಿರೋದು
ದಕ್ಷಿಣ ರೈಲ್ವೆಯ ಸಮೀಕ್ಷೆ ಮತ್ತು ನಿಮರ್ಾಣ ವಿಭಾಗದ ಉಪ ಕಾರ್ಯನಿರ್ರ್ವಾಹಕರಾದ ರತಿ. ಆರ್. ರಾಜನ್ ಅವರ ನೇತೃತ್ವದಲ್ಲಿ ತಂಡ ಸಮೀಕ್ಷೆ ನಡೆಸುತ್ತಿದೆ. ಚೆನ್ನೈನಿಂದ ಆಗಮಿಸಿದ ಟ್ರಾಫಿಕ್ ಇನ್ಸ್ಪೆಕ್ಟರುಗಳಾದ ಎನ್.ಸೂರ್ಯನ್, ಜಿ. ದೇವರಾಜ್, ಟಿ.ವಿ.ಸ್ವಾಮಿನಾಥನ್, ಎಸ್. ಕೃಷ್ಣನಾಯಕ್ ಮತ್ತಿತರರು ತಂಡದಲ್ಲಿದ್ದಾರೆ. ಕಾಞಂಗಾಡ್ ಪಣತ್ತೂರು ಮಧ್ಯೆ 41 ಕಿ.ಮೀ. ಬ್ರಾಡ್ಗೇಜ್ ಹಳಿಯ ರೀಕನ್ಸಯಿನ್ಸ್ ಅಂಡ್ ಇಂಜಿನಿಯರಿಂಗ್ ಸಮೀಕ್ಷೆ ಈಗ ನಡೆಯುತ್ತಿದೆ.
ಪೆರಿಯ ಬ್ಯಾಂಕ್ ದರೋಡೆ: 3 ಕೋಟಿ ಚಿನ್ನ 6 ಲಕ್ಷ ನಗದು ಕಳವು
ಕಾಸರಗೋಡು : ಪೆರಿಯ ಬಜಾರ್ನ ನಾರ್ತ್ ಮಲಬಾರ್ ಗ್ರಾಮೀಣ ಬ್ಯಾಂಕಿಗೆ ಕನ್ನ ಕೊರೆದ ದುಷ್ಕರ್ಮಿಗಳು 3 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 6 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಸಂಭವಿಸಿದ್ದು ಇದೀಗ ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಆರಂಭಗೊಂಡಿದೆ.
ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ಕಳ್ಳತನ ಇದಾಗಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪದ ಎರಡನೇ ಮಹಡಿಯಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಕಚೇರಿ ವಹಿವಾಟು ಪೂರ್ಣಗೊಂಡ ಬಳಿಕ ಬ್ಯಾಂಕ್ ಹಿಂಬದಿಯ ಕಿಟಕಿ ತೆರೆದು ಒಳ ನುಗ್ಗಿದ ಕಳ್ಳರು ಸೇಫ್ ಲಾಕರನ್ನು ಹಾಲ್ ಗೆ ಎಳೆದು ಈ ಕಳವು ನಡೆಸಿದ್ದಾರೆ.
ಹೇಗಾಯ್ತು ಈ ಘಟನೆ
ಮಂಗಳವಾರ ರಾತ್ರಿ 1.50ರ ವೇಳೆಗೆ ಈ ಕೃತ್ಯ ನಡೆದಿದೆ. ಕನಿಷ್ಠ ಹತ್ತು ಮಂದಿಯ ತಂಡ ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ.
ಬೆರಳಚ್ಚುಗಳು, ಕಳ್ಳರು ಬಳಸಿದ ಕತ್ತಿ ಸ್ಥಳದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಡಿವೈಎಸ್ಪಿ ಹಬೀಬ್ ರೆಹಮಾನ್, ಎಡಿಜಿಪಿ ಮಹೇಶ್ ಕುಮಾರ್ ಸಿಂಗ್ಲಾ, ಐಜಿ ಟೋಮಿನ್ ತಚ್ಚಂಗೇರಿ, ಜಿಲ್ಲಾ ಪೊಲೀಸ್ ವರಿಷ್ಠರು ಭೇಟಿ ನೀಡಿದ್ದಾರೆ. ವರ್ಷದ ಹಿಂದೆ ಇದೇ ಬ್ಯಾಂಕ್ ನಲ್ಲಿ ಕಳ್ಳತನ ಯತ್ನ ನಡೆದಿತ್ತು. ಇದರ ಆರೋಪಿಯನ್ನು ಇತ್ತೀಚೆಗೆ ಬೇರೊಂದು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈತನನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.
ಪ್ರಾದೇಶಿಕ ಸುದ್ದಿ
ಗೋಲಿಬಾರ್ ಪ್ರಕರಣಕ್ಕೆ ಸಾಕ್ಷಿನುಡಿದ 31ಮಂದಿ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೇ.1ರಂದು ಆಂದ್ರ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣದ ಬಗೆಗಿನ ನ್ಯಾಯಾಂಗ ತನಿಖೆ ಇಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಆರಂಭಗೊಂಡಿದ್ದು ತನಿಖಾಧಿಕಾರಿಗಳಾಗಿ ನೇಮಕಗೊಂಡಿರುವ ಪುತ್ತೂರು ಸಹಾಯಕ ಕಮಿಷನರ್ ಡಾ.ಹರೀಶ್ ಅವರ ಬಳಿ ಪ್ರಕರಣದ ಕುರಿತು 31ಮಂದಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಮೃತ ಐತಪ್ಪ ಅವರ ಸಹೋದರ ಬಾಬು ಅವರು ತಾವು ಘಟನೆ ನಡೆದ ದಿನ ಮನೆಯಲ್ಲಿಯೇ ಇದ್ದು ಗಲಾಟೆ ಸದ್ದು ಕೇಳಿ ಘಟನಾ ಸ್ಥಳಕ್ಕೆ ಬಂದಾಗ ತನ್ನ ತಮ್ಮ ಐತಪ್ಪ ಗುಂಡುತಾಗಿ ಬಿದ್ದಿರುವುದು ಕಂಡುಬಂತು. ಆತ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಅನಗತ್ಯವಾಗಿ ಆತನ ಮೇಲೆ ಗುಂಡು ಹಾರಿಸಲಾಗಿದೆ. ಹೊರ ನೋಟಕ್ಕೆ ಪೊಲೀಸರು ಪಾನಮತ್ತರಾಗಿದ್ದು ತಿಳಿದು ಬರುತ್ತಿತ್ತು. ಪೊಲೀಸರು ಗುಂಡು ಹಾರಿಸುವ ಯಾವುದೇ ಅಗತ್ಯವಿರಲಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ 40 ಮಂದಿ ಆಗಮಿಸಿ ತಾವು ಸಾಕ್ಷಿ ನುಡಿಯುವುದಾಗಿ ಹೆಸರು ನೀಡಿದ್ದರು. ಆದರೆ ಅವರಲ್ಲಿ 31ಮಂದಿ ಮಾತ್ರ ಹಾಜರಾದರು. ಅವರಲ್ಲಿ 9ಮಂದಿ ಲಿಖಿತ ಹೇಳಿಕೆ ನೀಡಿದರೆ ಉಳಿದವರು ಬಾಯಿಮಾತಲ್ಲಿ ಸಾಕ್ಷಿ ನುಡಿದರು.
ಮುಂದಿನ ಚುನಾವಣೆ ಜೂ.22ರಂದು ನಡೆಸುವುದಾಗಿ ತನಿಖಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಾದೇಶಿಕ ಸುದ್ದಿ
ಉಡುಪಿ :ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಹೂಡೆ ಅಳಿವೆ ಪ್ರದೇಶದಲ್ಲಿ ಸ್ವಣರ್ಾ ನದಿಗೆ ಇಬ್ಬರು ಬಿದ್ದು ನೀರುಪಾಲಾಗಿದ್ದಾರೆ. ಇವರು ವಿಹಾರಾರ್ಥ ದೋಣಿಯೊಂದರಲ್ಲಿ ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಗಳು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾಥರ್ಿ ಶೋಹಿಬ್ (20) ಮತ್ತು ಮುಂಬೈಯಿಂದ ಬಂದಿದ್ದ ಆತನ ಸಂಬಂಧಿ ಶಕೀಲ್ (15) ಎಂಬವರೇ ನದಿಗೆ ಆಹುತಿಯಾದವರು. ಸುಮಾರು 8 ಮಂದಿ ದೋಣಿಯಲ್ಲಿ ತೆರಳಿದ್ದರು.
ಅಂಕಣ
ಚಂದಿರನಿರದ ಆಕಾಶದಲ್ಲಿ ಬರೀ ಕತ್ತಲೆ ತುಂಬಿತ್ತು. ನಕ್ಷತ್ರಗಳೆಲ್ಲಾ ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದವು. ಒಂದರ ಮುಖ ಮತ್ತೊಂದಕ್ಕೆ ಕಾಣಿಸುತ್ತಿರಲಿಲ್ಲ. ಕತ್ತಲೆಯಲ್ಲಿ ಮಿಂದ ಅವು ಬೇರೆಯವರಿಗೂ ತೋರುತ್ತಿರಲಿಲ್ಲ. ದೀಪವೇ ಇರದ ನಡುಗಡ್ಡೆಯಂತಾಗಿದ್ದ ಆಕಾಶದಲ್ಲಿ ಮಾತುಗಳಷ್ಟೇ ಕೇಳಿಸುತ್ತಿತ್ತು. ಕೆಳಗೆ ಇಣುಕಿ ನೋಡಿದವು. ಅವುಗಳ ದುರಾದೃಷ್ಟ, ಅಲ್ಲೂ ಬೆಳಕಿರಲಿಲ್ಲ.
ನಕ್ಷತ್ರಗಳಿಗೆ ಬಹಳ ವಿಚಿತ್ರವೆನಿಸಿತು. ಅಲ್ಲೂ ಏನೂ ತೋರುತ್ತಿರಲಿಲ್ಲ. ಆಗಾಗ್ಗೆ ರಸ್ತೆಯಲ್ಲಿ ವಾಹನಗಳ ಲೈಟು ಕೋರೈಸುವುದು ಬಿಟ್ಟರೆ ಮತ್ತೇನೂ ಇಲ್ಲ. ಆ ಪ್ರಕಾಶವೋ ಕಣ್ಣನ್ನೇ ಕುಕ್ಕುತ್ತಿತ್ತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮತ್ತೆ ಕತ್ತಲೆಯೇ. ಆ ಪ್ರದೇಶವೂ ನಮ್ಮೂರಿನ ಹಾಗೆಯೇ ಎಂದಿತು ಒಂದು ತಾರೆ. ಅದಕ್ಕೆ ಮತ್ತೊಂದು ತಾರೆ, "ಹಾಗಲ್ಲ. ನಮ್ಮೂರಿನಂತೆಯೇ ಆ ಊರೂ’ ಎಂದು ಭಾಷಾ ಪ್ರಯೋಗ ಸರಿಪಡಿಸಲು ಹೋಯಿತು.
ಪಕ್ಕದಲ್ಲೇ ಬದಿಗೆ ಸರಿದಿದ್ದ ಚಂದಿರ ಎಲ್ಲವನ್ನೂ ನೋಡುತ್ತಿದ್ದ. "ಕತ್ತಲೆಯಲ್ಲಿ ಇರಲಿಕ್ಕೆ ಕಷ್ಟ. ಬೇಕಿದ್ದರೆ ಬೆಳಕಿನಲ್ಲೇ ಕರಗಿ ಹೋದರೂ ಪರವಾಗಿಲ್ಲ’ ಎಂದಿತು ಆ ತಾರೆ. ಅದಕ್ಕೆ ಮತ್ತೊಂದು ತಾರೆ, "ಬೆಳಕಿನಲ್ಲಿ ಕರಗಿ ಹೋಗುವುದೇ ಕಷ್ಟ. ಕತ್ತಲೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭಯವಿಲ್ಲ. ಬೆಳಕು ಬಂದ ಮೇಲೆ ಮತ್ತೆ ಮಿನುಗಬಹುದು’ ಎಂದಿತು. ಹೀಗೇ ವಾದ ಮುಂದುವರಿದೇ ಇತ್ತು. ಚಂದಿರ ತುಟಿಕ್‌ಪಿಟಿಕ್ಕೆನ್ನದೆ ನೋಡುತ್ತಿದ್ದ. ವಾದ ಕೇಳಿ, ಕೇಳಿ "ಏನನ್ನೋ ಹೇಳಬೇಕೆಂದು ಬಾಯಿ ಬಿಡಲು ಹೋದವನಿಗೆ ಅವನ ಹಿಂದಿದ್ದ ಸೂರ್ಯ ಸುಮ್ಮನಿರು ಅಂದ. ತಾರೆಗಳ ಕತ್ತಲ ಕನವರಿಕೆ ಮುಂದುವರಿದೇ ಇತ್ತು ಪಾಡ್ಯ ಬರುವವರೆಗೂ.
ಅರವಿಂದ ನಾವಡ
ಯುವಾ...
ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.
ಏನಾದರು ಆದರೆ ಮೊದಲು ಬಂದು ನನ್ನ ಬಳಿ ಹೇಳಿ ನಂತರ ಸಮಾಧಾನ ಮಾಡಿದ ನಂತರ ಮನೆಗೆ ಹೋಗುತ್ತಾನೆ ಅಲ್ಲಿ ವರೆಗೂ ನಿದ್ದೆ ಮಾಡುವದಿಲ್ಲಾ.
ಇಂದು ಅದೇ ಆದದ್ದು,ಅದು ಆದದ್ದು ಹೀಗೆ...ಸಂಜೆ ಫಸ್ಟ್ ಶೋ ಸಿನಿಮಾ ನೋಡಲು ವಿನಾಯಕ ಟಾಕಿಸಿಗೆ ಹೋದಾಗ ಸಿನಿಮಾ ಪ್ರಾರಂಭವಾಗಿ ೨೦ ನಿಮಿಷ ಆಗಿತ್ತು ನಮಗೆಲ್ಲಾ ತಿಳಿದಿರುವಂತೆ ಗೇಟ್ ಮ್ಯಾನ್ ಟಾರ್ಚ್ ಹಾಕಿ ದಾರಿ ತೋರಿಸುತ್ತಾನೆ ಅದರಂತೆ ನಾವು ಹೋಗಿ ಕೂರುತ್ತೇವೆ. ಇಲ್ಲೂ ಅದೇ ಆದದ್ದು ಇವನು ಕತ್ತಲೆಯಲ್ಲಿ ಹೋಗಿ ಸೀಟಿನಲ್ಲಿ ಕುಳಿತ ನಂತರ, ಎದುರು ಸೀಟಿಗೆ ಕಾಲು ತಾಗಿಸಿ ಕುಳಿತ ಅದು ಸ್ಪಂಜಿನ ಸೀಟು ನಮಗೆಲ್ಲ ತಿಳಿದಿದೆ .
ಸಿನಿಮಾ ನೋಡುವದರಲ್ಲಿ ತಲ್ಲಿನನಾದ ಪರೇಶ್ ಗೆ ಇದು ಸ್ಪಂಜಿಗಿಂತ ಮೃದು ಇದೆ ಎಂಬ ವಿಷಯ ತಿಳಿಯಲು ಸುಮಾರು ೩೦ ನಿಮಿಷ ಕಳೆದಿತ್ತು. ಕ್ರಮೇಣ ತನ್ನ ಎರಡು ಕಾಲುಗಳನ್ನು ಎದುರಿನ ಸ್ಪಂಜಿನ ಮೇಲೆ ಒತ್ತ ತೊಡಗಿದ ಅಷ್ಟರಲ್ಲಿ ಕತ್ತಲೆಯಲ್ಲಿ ಎದುರಿನ ಸೀಟಿನಿಂದ ಒಂದು ಆಕೃತಿ ಇವನ ಕಡೆಗೆ ತಿರುಗಿ ಚಟಾರಣೆ ಬೀಸಿ ಇವನ ಕೆನ್ನೆಗೆ ಹೊಡೆಯಿತು . ಕಾರಣ ಇಷ್ಟೇ ಸ್ಪಂಜು ಎಂದು ಇವನು ತಿಳಿದದ್ದು ಮುಂದೆ ಕುಳಿತಿದ್ದ ಹೆಂಗಸಿನ ಸೀಟ್ ಆಗಿತ್ತು ಅವಳು ನೋವು ತಡೆಯಲಾರದೆ ಚಟಾರಣೆ ಬಾರಿಸಿದ್ದಳು ಕ್ಷಣಮಾತ್ರದಲ್ಲಿ ಇದು ನಡೆದು ಹೋಯಿತು. ರಾಸ್ಕಲ್ ಅರ್ದ ಗಂಟೆ ಇಂದ ನೋಡ್ತಿದೀನಿ ಎಂದು ಗಲಾಟೆ ಶುರು ಮಾಡಿದಳು ಅಷ್ಟರಲ್ಲಿ ಇವನು ಅಲ್ಲಿಂದ ಓಡಿದ್ದು ಮತ್ತೆ ಬಂದು ಕುಳಿತದ್ದು ನಮ್ಮ ಮನೆಯ ಮುಂದಿನ ಕಾಂಪೌಂಡ್ ನಲ್ಲಿ ಇದಿಷ್ಟು ನಡೆದ ಸಂಗತಿ .
ಇದು ನಾನು ಬೇಕಂತ ಮಾಡಿದ್ದಲ್ಲ ಕತ್ತಲೆಯಲ್ಲಿ ನನಗೆ ಗೊತ್ತಾಗಲಿಲ್ಲ ಅಂತ ಅಳತೊಡಗಿದ ನಂತರ ನಗತೊಡಗಿದ . ನಾನು ಅವನಿಗೆ ಮನೆ ಒಳಗೆ ಕರೆದು ಮುಖ ನೋಡಿದಾಗ ಸರಿ ಸುಮಾರೋ ೧೦೦ ಪೌಂಡ್ ಹೊಡೆತ ಬಿದ್ದ ಹಾಗೆ ಕಿವಿ ಕೆನ್ನೆ ಎಲ್ಲಾ ಸರಿಯಾಗಿ ಊದಿಕೊಂಡಿತ್ತು,ಇನ್ನಾದರು ಹುಷಾರಾಗಿರು ಅಂತ ಹೇಳಿ ಮನೆ ಕಳಿಸಿದೆ . ಇದು ಅಲ್ಲಿಗೆ ಮುಗಿಯಲಿಲ್ಲಾ ಮತ್ತೊಂದು ವಾರದಲ್ಲಿ ಹೊಸ ವಿಷಯ ಮಾಡಿ ಕೊಂಡು ಬಂದ ಅದು ನಿಮಗೆ ಮುಂದೆ ತಿಳಿಸುತ್ತೇನೆ
-ಇಸ್ಮಾಯಿಲ್
ಶಿವಮೊಗ್ಗ,ಯು.ಎ.ಇ
ವಿಶೇಷ ವರದಿ
ಹರೀಶ್ ಕೆ.ಆದೂರು.
ಮನುಷ್ಯನಿಗೆ ಬರುವ ಕಾಯಿಲೆಗಳನ್ನು ಔಷಧಿರಹಿತ ಚಿಕಿತ್ಸೆ ನೀಡಿ ಶಮನಗೊಳಿಸಲು ನಮ್ಮ ದೇಹದಲ್ಲಿ ತಕ್ಕ ಸಾಮರ್ಥ್ಯವಿದೆಯೆಂಬ ಸಂದೇಶವನ್ನು ಜನಮಾನಸದಲ್ಲಿ ಪಸರಿಸಿ `ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ' ಹೊಸ ಶಕೆಯೊಂದನ್ನು ಪ್ರಾರಂಭಿಸಿದವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು. ಶಾಂತಿವನ ಟ್ರಸ್ಟ್ ಅಡಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯವನ್ನು 1987ರಲ್ಲಿ ಸ್ಥಾಪಿಸುವ ಮೂಲಕ ದೇಶೀಯ ಚಿಕಿತ್ಸಾ ಪದ್ಧತಿಯ ಪುನರುತ್ಥಾನಕ್ಕೆ ಕಾರಣೀಕರ್ತರಾದರು. ಇದೀಗ ಈ ಶಾಂತಿವನ ಹಲವು ಜೀವಗಳಿಗೆ ನೆಮ್ಮದಿಯ ತಾಣವಾಗಿ ಸದ್ದಿಲ್ಲದೆ ಕಾರ್ಯವೆಸಗುತ್ತಿದೆ. ಇದರತ್ತ ಒಂದು ನೋಟ...
`ನನ್ನ ಬಗ್ಗೆ ನಾನೆಷ್ಟೇ ಹೇಳಿದರೂ ಅದು ಸ್ವಾರ್ಥದಿಂದ. ಆದರೆ ಇತರರು ಹೇಳಿದರೆ ಅದು ನಿಜಾರ್ಥ'. ಇದು ಶಾಂತಿವನದ ಬಗ್ಗೆ ಅಕ್ಷರಶಃ ಸತ್ಯ. ಯಾಕೆಂದರೆ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಇದನ್ನು ಕಣ್ಣಾರೆ ಕಂಡು ಅನುಭವಿಸಿ ಮನದಾಳದಿಂದ ಅದೆಷ್ಟೋ ಮಾತುಗಳನ್ನಾಡಿದ್ದಾರೆ. ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ... ಈ ಎಲ್ಲಾ ಮಾತುಗಳೇ `ಶಾಂತಿವನ'ದ ಸಂಪೂರ್ಣ ಚಿತ್ರಣವನ್ನು ನಮ್ಮೆಲ್ಲರ ಮುಂದೆ ಕಟ್ಟಿಕೊಡುತ್ತವೆ. ಒಂದು ಆಸಕ್ತಿಯನ್ನು ಕೆರಳಿಸುವಂತೆ ಮಾಡುತ್ತವೆ.
ಎರಡು ದಿನಗಳ ಹಿಂದೆ. ಎಂಟ್ಹತ್ತು ವರ್ಷಗಳ ಹಿಂದೆ ಹೋಗಿದ್ದ , ಕಂಡಿದ್ದ ಶಾಂತಿವನವನ್ನು ಮತ್ತೊಮ್ಮೆ ನೋಡುವ ಹಂಬಲವಾಯ್ತು... ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆಯೂ ಅತ್ತ ಹೊರಟೇಬಿಟ್ಟೆ. ಬಾನೆತ್ತರದ ಮರಗಳು... ಔಷಧೀಯ ಸಸ್ಯಗಳು, ಹೆಸರೇ ಸೂಚಿಸುವಂತೆ ಅದೊಂದು `ಶಾಂತಿವನ'! ವಾಹನಗಳ ಕರ್ಕಶವಿಲ್ಲ... ಶಬ್ಧಮಾಲಿನ್ಯಕ್ಕೆ ಅವಕಾಶವೇ ಇಲ್ಲ. ಪರಿಸರದ ಶುಭ್ರ ವಾತಾವರಣದೊಳಗೆ ಪ್ರವೇಶಿಸುತ್ತಲೇ ಅವ್ಯಕ್ತ ಆನಂದ. ಅದು ಅನುಭವಿಸಿದವನಿಗಷ್ಟೇ ಅದರ ಸವಿ ಸವಿಯಲು ಸಾಧ್ಯ.
ಆರೋಗ್ಯವೆಂದರೆ ಕೇವಲ ರೋಗ ರಹಿತನಾಗಿರದೆ ಶಾರೀರಿಕ , ಮಾನಸಿಕ , ಬೌದ್ಧಿಕ , ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿಯೂ ಪರಿಪೂರ್ಣನಾಗಿರುವುದು ಎಂಬ ಅರ್ಥ ಹೊಂದಿದೆ.
ಆಧುನಿಕ ವೈದ್ಯ ಪ್ರಪಂಚದ ಪ್ರಕಾರ ಶರೀರದ ಬೇರೆ ಬೇರೆ ಭಾಗಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆಗೆ ಬಳಸುವುದು ಪ್ರಸ್ತುತ ಚಿಕಿತ್ಸಾ ಪದ್ಧತಿಯ ಪರಿಕಲ್ಪನೆ. ಆದರೆ ಅವ್ಯಾವುದೂ ಇಂದಿನ ತನಕ ನಿರೀಕ್ಷಿತ ಫಲವನ್ನು ನೀಡಿಲ್ಲ. ಇದರ ಬದಲಾಗಿ ಸಂಪೂರ್ಣ ದೇಹವನ್ನು ಒಂದೇ ಘಟಕ ಎಂದು ಪರಿಗಣಿಸಿ ಆರೈಕೆ ನಡೆಸುವ ಪರಿಕಲ್ಪನೆಗೆ ಜಗತ್ತಿನ ಉದ್ದಗಲಕ್ಕೂ ಒಂದು ಚಾಲನೆ ಇಂದು ದೊರಕಿದೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ಸೇವಿಸುವ ಔಷಧಿ ನೋವನ್ನು ತಾತ್ಕಾಲಿಕವಾಗಿ ಮಾತ್ರ ಶಮನಗೊಳಿಸುತ್ತದೆ. ಆದರೆ ಅದು ಖಂಡಿತವಾಗಿಯೂ ನೆಮ್ಮದಿಯನ್ನು ನೀಡಲಾರದು. ಆದರೆ ಪ್ರಕೃತಿ ಚಿಕಿತ್ಸೆ ಇವೆಲ್ಲಕ್ಕಿಂತ ವಿಶೇಷವಾದುದು. ಇದೊಂದು ಅಪೂರ್ವವಾದ ಚಿಕಿತ್ಸಾ ಪದ್ಧತಿ. 
ಇದರಿಂದ ಆಯುರಾರೋಗ್ಯ ವೃದ್ಧಿಯಾಗುವುದು. ಇದು ಔಷಧಿ ರಹಿತ ಚಿಕಿತ್ಸಾ ಪದ್ಧತಿ. ಇಲ್ಲಿ ಯೋಗ ಚಿಕಿತ್ಸೆ, ಅಯಸ್ಕಾಂತ ಚಿಕಿತ್ಸೆ, ಸೂಜಿ ಚಿಕಿತ್ಸೆ, ವಿದ್ಯುತ್ ಚಿಕಿತ್ಸೆ, ಫಿಸಿಯೋಥೆರಪಿ, ರೇಖೀ ಚಿಕಿತ್ಸೆ, ಪ್ರಾಣಶಕ್ತಿ ಚಿಕಿತ್ಸೆ ಇವೇ ಮೊದಲಾದ ಚಿಕಿತ್ಸೆಗಳ ಸಂಯೋಜನೆಯನ್ನು ಬಳಸಲಾಗುತ್ತದೆ. ಪ್ರಕೃತಿ ಚಿಕಿತ್ಸೆಯು ಪ್ರಕೃತಿಯ ಭಾಷೆಯನ್ನು ತಿಳಿಯಲು ಸಹಕರಿಸುವುದು. ಇದರ ಅನುಕರಣೆಯಿಂದ ನಮಗೆ ನಾವೇ ಗುರು.
ಇಲ್ಲಿ ಈಜುಕೊಳವಿದೆ. ಉತ್ತಮ ಗ್ರಂಥಾಲಯವಿದೆ. ಸುಸಜ್ಜಿತ ಕಂಪ್ಯೂಟರೀಕೃತ ರೋಗ ಪರೀಕ್ಷಾ ಪ್ರಯೋಗಾಲಯವಿದೆ. ಕೊಬ್ಬು ವಿಶ್ಲೇಷಕ ಯಂತ್ರದ ವ್ಯವಸ್ಥೆಯಿದೆ. ಮನೋರಂಜನಾ ಸೌಕರ್ಯಗಳಿವೆ. ಅಷ್ಟೇ ಅಲ್ಲದೆ ಶ್ರೀ ಕ್ಷೇತ್ರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸಂದರ್ಶಿಸಲು ಅವಕಾಶವೂ ಇವೆ.
ಹೀಗೊಂದು ವಿಶೇಷ
ಮಾನವ ಶರೀರವು ಪಂಚ ಮಹಾಭೂತಗಳ ಸಂಯೋಜನೆಯಿಂದಾದ ಸೃಷ್ಟಿ ಎಂಬ ಪರಿಕಲ್ಪನೆಯ ಹಿನ್ನಲೆಯಲ್ಲಿ ಚಿಕಿತ್ಸಾ ವಿಧಾನವು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ತತ್ವಗಳನ್ನಾಧರಿಸಿಕೊಂಡಿವೆ. ಮನುಷ್ಯನ ಸುತ್ತಮುತ್ತಲಿರುವ ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಜೀವಿಗಳ ವಿರುದ್ಧ ಈ ದೇಹವನ್ನು ಪುನಶ್ಚೇತನಗೊಳಿಸಲು, ಪನರುಜ್ಜೀವನಗೊಳಿಸಲು ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಚಿಕಿತ್ಸಾ ಸಾಧನಗಳಾಗಿ ಪಂಚಭೂತಗಳನ್ನು ಬಳಸಲಾಗುತ್ತದೆ.


ಎಲ್ಲಿದೆ ಈ ವನ!?
ಶ್ರೀ ಕ್ಷೇತ್ರ ಧರ್ಮಸ್ಥಳದ ಅನತಿ ದೂರದಲ್ಲಿ ನಿಸರ್ಗದೊಳಗಿದೆ ಈ ಶಾಂತಿವನ. ಪ್ರಶಾಂತ ನೇತ್ರಾವತೀ ನದೀ ತೀರದಲ್ಲಿ 30 ಎಕರೆಗಳ ವಿಶಾಲ ಪ್ರದೇಶದಲ್ಲಿ ನೆಲೆನಿಂತಿದೆ. ಸುಸಜ್ಜಿತವಾದ 200 ಹಾಸಿಗೆಗಳನ್ನೊಳಗೊಂಡ ಚಿಕಿತ್ಸಾಲಯ, ಹವಾನಿಯಂತ್ರಣ ಕೊಠಡಿ, ವಿಶೇಷ ವ್ಯವಸ್ಥೆಗಳನ್ನೊಳಗೊಂಡ ಕುಟೀರಗಳು , ಸಾಮಾನ್ಯ ವ್ಯವಸ್ಥೆಯನ್ನೊಳಗೊಂಡ ಕೊಠಡಿಗಳನ್ನೊಳಗೊಂಡು ಫ್ರೆಂಚ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಮಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ ಈ ಶಾಂತಿವನ.
ಇಲ್ಲಿ ಏನೆಲ್ಲಾ ಚಿಕಿತ್ಸೆಗಳಿವೆ...?
ಜಲ ಚಿಕಿತ್ಸೆ
ಪೃಥ್ವಿ ಚಿಕಿತ್ಡೆ
ಆಕಾಶ ಚಿಕಿತ್ಸೆ
ಆಕಾಶ ಚಿಕಿತ್ಸೆ
ವಾಯು ಚಿಕಿತ್ಸೆ
ಸೂರ್ಯ/ಅಗ್ನಿ ಚಿಕಿತ್ಸೆ.
ಅಂಗ ಮರ್ದನ ಚಿಕಿತ್ಸೆ
ಪಥ್ಯಾನ್ನ ಚಿಕಿತ್ಸೆ
ಸೂಜಿ ಚಿಕಿತ್ಸೆ
ಅಯಸ್ಕಾಂತೀಯ ಚಿಕಿತ್ಸೆ
ಯೋಗ ಚಿಕಿತ್ಸೆ
ಪ್ರಾಣಿಕ್ ಹೀಲಿಂಗ್/ರೇಖೀ ಚಿಕಿತ್ಸೆ
ಕರುಳು ಶುದ್ಧೀಕರಣ ಚಿಕಿತ್ಸೆ
ಈಜು ಚಿಕಿತ್ಸೆ
ಈ ರೋಗಕ್ಕೆ ಇಲ್ಲಿದೆ ಚಿಕಿತ್ಸೆ:
ಅಸ್ತಮಾ, ನೇಸಲ್ ಎಲರ್ಜಿ, ಗಂಟಲು ವ್ಯಾಧಿ
ಮಧುಮೇಹ , ಥೈರಾಯಿಡ್ ತೊಂದರೆಗಳು, ಸ್ಥೂಲಕಾಯ
ರಕ್ತದೊತ್ತಡ, ಹೃದಯ ರೋಗಗಳು
ಉದ್ವೇಗ, ಖಿನ್ನತೆ , ಮನೋದೌರ್ಬಲ್ಯ
ದೀರ್ಘ ತಲೆನೋವು
ನರಗಳ ದೌರ್ಬಲ್ಯ
ಸಂಧಿವಾತ, ಬೆನ್ನುನೋವು, ಮಂಡಿನೋವು.
ಜಠರ ಕಾಯಿಲೆ, ಅಗ್ನಿಮಾಂದ್ಯ, ಡಯಾರಿಯಾ, ಅತಿ ಭೇದಿ.
ಸೋರಿಯಾಸಿಸ್ , ಚರ್ಮಕಾಯಿಲೆಗಳು.
Video






