ವಿಚಾರ
ಶ್ರೀ ಹರಿಯ ಪ್ರತಿಯೊಂದು ಅವತಾರಗಳು ವಿಶಿಷ್ಟವಾಗಿದ್ದು ಪ್ರಾಕೃತಿಕವಾದ ಸೃಷ್ಟಿಯ ವೈವಿಧ್ಯಗಳಲ್ಲಿ ಅಡಕವಾಗಿರುವ ದೈವೀ ಶಕ್ತಿಯ ಪ್ರಭಾವವನ್ನು ತಿಳಿಯಲು ಸಹಕಾರಿಯಾಗಿದೆ. ಭಾದ್ರಪದ ಶುಕ್ಲಪಕ್ಷ ದ್ವಾದಶಿಯಂದು ಮಹರ್ಷಿ ಕಶ್ಯಪ ಮತ್ತು ಅದಿತಿ ದೇವಿಯರ ಕಂದನಾಗಿ ಆವಿರ್ಭವಿಸಿದ ವಾಮನನ ಮಹಿಮೆಗಳು ಭಾಗವತಾದಿ ಪುರಾಣಗಳಲ್ಲಿ ವರ್ಣಿಸಲ್ಪಟ್ಟಿದೆ.
ಅದಿತಿ ಮಾತೆಯ ಉತ್ತಮ ಪುತ್ರರತ್ನನನ್ನು ಹಡೆಯಬೇಕೆಂದು ಪತಿಯಾದ ಕಶ್ಯಪರಲ್ಲಿ ಭಿನ್ನವಿಸಿಕೊಂಡಾಗ ಬ್ರಹ್ಮನಿಂದ ಉಪದೇಶಿಸಲ್ಪಟ್ಟ ಪಯೋವ್ರತ ಆಚರಿಸುವಂತೆ ಮಹರ್ಷಿಗಳು ಪತ್ನಿಗೆ ಹೇಳಿದರು. ಫಾಲ್ಗುಣ ಶುದ್ಧ ಪಾಡ್ಯದಿಂದ ದ್ವಾದಶಿಯವರೆಗೆ ಹನ್ನೆರಡು ದಿನಗಳವರೆಗೆ ಗೋಕ್ಷೀರವನ್ನು ಮಾತ್ರ ಆಹಾರವಾಗಿ ಸ್ವೀಕರಿಸಿ ಸದ್ವಚನ ಸಂಪನ್ನರಾಗಿ ಯಾರಿಗೂ ಹಿಂಸೆ ಮಾಡದೇ ವ್ರತನಿಷ್ಠರಾಗುವುದೇ `ಪಯೋವ್ರತ' . ಶ್ರೀಮದ್ ಭಾಗವತದ ಅಷ್ಟಮ ಸ್ಕಂದದಲ್ಲಿ ವಿವರಿಸಿದಂತೆ ಸಾಧ್ವಿ ಅದಿತಿ ದೇವಿ ಈ ವ್ರತವನ್ನು ಆಚರಿಸಿ ವಿಷ್ಣುವಿನ ಅವತಾರವಾದ ವಾಮನನ್ನು ಮಗನಾಗಿ ಪಡೆದಳು.
ಭಾಗವತೋತ್ತಮರಾದ ಪ್ರಹ್ಲಾದರ ಮೊಮ್ಮಗ ವಿರೋಚನನ ಮಗ ಬಲಿ ಚಕ್ರವರ್ತಿ ಸ್ವರ್ಗಾಪೇಕ್ಷೆಯಿಂದ ನೂರು ಅಶ್ವಮೇಧ ಮಾಡುವ ಸಿದ್ಧತೆಯಲ್ಲಿದ್ದನು. ಒಂದು ಮನ್ವಂತರದ ಅವಧಿಗೆ ಒಬ್ಬ ಇಂದ್ರ ಈ ಮಾತನ್ನು ಉಳಿಸುವುದಕ್ಕಾಗಿ ಮತ್ತು ಬಲಿಯ ಭಕ್ತಿಯ ದೃಢತೆಯನ್ನು ತಿಳಿಯುವುದಕ್ಕಾಗಿ ವಾಮನನು ರಾಕ್ಷಸೇಂದ್ರನ ಆಸ್ಥಾನಕ್ಕೆ ಆಗಮಿಸಿದನು. ಶುಕ್ರಾಚಾರ್ಯರ ನಿರ್ದೇಶನದಲ್ಲಿ ನರ್ಮದಾ ನದೀ ತೀರದ `ಭೃಗುವತ್ಸಕ' ಯಾಗ ಶಾಲೆಗೆ ಯಾಚಕ ವಟುವಾಗಿ ಬಂದ ವಾಮನನು ಕೇಳಿದ್ದು ಮೂರಡಿ ನೆಲ, ನಡೆಯುವ ಜಾಗ. ದಾನ ಶೂರನಾದ ಬಲಿ ತ್ರಿಪಾದ ಸ್ಥಳವನ್ನು ಕೊಡುತ್ತೇನೆಂದು ಹೇಳಿದಾಗ ಶುಕ್ರಾಚಾರ್ಯರು ಆಕ್ಷೇಪಿಸಿದರೂ ವಚನ ಭ್ರಷ್ಟನಾಗಲು ಒಪ್ಪದ ಚಕ್ರವರ್ತಿ ಮೂರು ಹೆಜ್ಜೆಯನ್ನು ಇಡಬೇಕೆಂದು ವಿಪ್ರಕುಮಾರನಲ್ಲಿ ವಿನಂತಿಸಿದ್ದು ಭಕ್ತಿಯ ಸಾದೃಶ್ಯ ಅಲ್ಲಿ ವ್ಯಕ್ತವಾಯಿತು.
ವಿಶ್ವಜಿತ್ ಯಾಗ ಮಾಡಿ ಬ್ರಹ್ಮದತ್ತವಾದ ವೈಹಾಯಸ ಎಂಬ ವಿಮಾನವನ್ನು ಶುಕ್ರಾಚಾರ್ಯರಿಂದ ದಿವ್ಯ ಶಂಖವನ್ನೂ ಪಡೆದ ಬಲಿಗೆ ಯಜ್ಞವಿಧಿಗಳಾದ ಅಗ್ನಿಯ ಆಧಾನ, ಬ್ರಹ್ಮೌದನ ಇತ್ಯಾದಿಗಳ ಬಗ್ಗೆ ತಿಳುವಳಿಕೆ ಇದ್ದಿತ್ತು. ಅದರಂತೆ ಯಾಗದೀಕ್ಷಿತನಾದನು. ಯಾವುದೇ ಋಣ ಇಟ್ಟುಕೊಳ್ಳದೇ ದಾನ ಮಾಡಬೇಕು.
``ಪಾದೋಸ್ಯ ವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವ ಉದೈತ್ಪುರುಷಃ ಪಾದೋ ಸ್ಯೇಹಾಭವಾತ್ಪುನಃ'' ಪುರಷಸೂಕ್ತ ವೈದಿಕ ಮಂತ್ರ ಸಾಹಿತ್ಯದಲ್ಲಿ ತಿಳಿಸಿದಂತೆ ವಿಷ್ಣುವು ಪಾದದಿಂದ ವಿಶ್ವವನ್ನು ಅಳೆಯುತ್ತಾನೆ. ಹುಟ್ಟಿದಾಗಲೇ ಸೂರ್ಯನಿಂದ ಗಾಯತ್ರಿ ಮಂತ್ರ ಉಪದೇಶಿಸಲ್ಪಟ್ಟು ಬ್ರಹಸ್ಪತಿ ಯಜ್ಞೋಪವೀತ ಕರುಣಿಸಿದರು. ಕಶ್ಯಪರಿಂದ ಬ್ರಹ್ಮಜ್ಞಾನದ ಮಾರ್ಗ ಸೂಚಿಸಲ್ಪಟ್ಟು ಪೃಥ್ವೀ ದೇವಿ ಕೃಷ್ಣಾಜಿನ ಅದಿತಿಯಿಂದ, ಕೌಪೀನ ಬ್ರಹ್ಮನಿಂದ, ಕಮಂಡಲ ಕುಬೇರನಿಂದ, ಭಿಕ್ಷಾಪಾತ್ರೆ ಜಗತ್ತಿನ ತಾಯಿಯಾದ ಪಾರ್ವತೀ ದೇವಿಯಿಂದ ವಾಮನನಿಗೆ ಮೊದಲ ಭಿಕ್ಷೆ ಕೊಡಲ್ಪಟ್ಟಿತು.
ಬಲಿಯ ಚಕ್ರವರ್ತಿ ಯ ರಾಜ್ಯವನ್ನು ಮೊದಲ ಹೆಜ್ಜೆಯಿಂದ ಸ್ವೀಕರಿಸಿ ಎರಡನೇ ಪಾದದಿಂದ ಸಮಸ್ತ ಭೂಮಿ ಆಕಾಶಕ್ಕೂ ವಿಸ್ತರಿಸಿದ ತ್ರಿವಿಕ್ರಮನ ಮೂರನೇ ಪಾದ ಬಲಿಯ ಶಿರದ ಮೇಲೆ ಇಡಲ್ಪಟ್ಟಿತು.
ಬಲಿಯ ಭಕ್ತಿ ತ್ಯಾಗಗಳಿಂದ ಪ್ರಸನ್ನನಾದ ತ್ರಿವಿಕ್ರಮನಾಗಿ ಬೆಳೆದ ವ್ಯಾಪಕನಾದ ವಿಷ್ಣುವು ಭಕ್ತನಿಗೆ ಪರಮಪಾದದ ಬೆಳಕನ್ನು ತೋರಿಸಿದನು. ಭೂಮಿಯ ಅಡಿಯಲ್ಲಿರುವ ಅಧೋಲೋಕ ಸುತಲದಲ್ಲಿ ಬಲಿಯು ಸಾಮ್ರಾಟನಾಗಿ ಮೆರೆದರೆ ಹರಿಯು ಅವನಿಗೆ ನಿತ್ಯದರ್ಶನವೀಯುವ ಭಗವಂತನಾಗಿ ಕಂಗೊಳಿಸಿದನು. ವೈವಸ್ವತ ಮನ್ವಂತರದ ಏಳನೆಯ ಪರ್ಯಾಯದ ತ್ರೇತಾಯುಗದಲ್ಲಿ ವಾಮನ ಅವತಾರ ತಾಳಿದ ನಾರಾಯಣ ಬಲಿ ಚಕ್ರವರ್ತಿಗೆ ಮುಂದಿನ ಸಾವರ್ಣಿ ಮನ್ವಂತರಕ್ಕೆ ಇಂದ್ರ ಪದವಿ ಎಂದು ವರಪ್ರದಾನ ... ಇವೆಲ್ಲಾ ಪರಮಾತ್ಮನ ಪರಮ ಪಾದದ ಮಹಿಮೆಗಳು. ವಾಮನ ಜಯಂತೀ ಸಂದರ್ಭದಲ್ಲಿ ತ್ರಿಲೋಕ ವಿಸ್ತಾರವಾದ ವಾಮನನ ತ್ರಿಪಾದಾಮೃತ ನಡೆ ನುಡಿಯನ್ನು ಪುರಾಣ ಶ್ರವಣದಿಂದ ತಿಳಿಯುವುದು ಜ್ಞಾನ ದಾಯಕ.
- ಎಲ್.ಎನ್. ಭಟ್ ಮಳಿ.
ಸಿನೆಮಾ
ಇದೊಂದು ಪುಟ್ಟ ಹಳ್ಳಿ...ಸರಯೂ ನದಿ ತೀರದಲ್ಲಿ ಮೆಂಪಿ ಬೆಟ್ಟದ ತಪ್ಪಲಲ್ಲಿರುವ ಈ ಸುಂದರ ಹಳ್ಳಿಗೆ ಸರಿಸಾಟಿ ಇನ್ನೊಂದಿಲ್ಲ. ಇಲ್ಲಿನ ಜನರು ಸರಳ ಜೀವಿಗಳು. ದಿನಬೆಳಗಾದರೆ ಬದುಕಿನ ಜಂಜಡಗಳೊಂದಿಗೆ ಸೆಣಸಾಡುತ್ತಾ ಕತ್ತಲಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುವ ಕಷ್ಟಜೀವಿಗಳು. ಪಟ್ಟಣದ ಥಳುಕು-ಬಳುಕಿನ ಜೀವನ ಇನ್ನೂ ಇವರನ್ನು ಸೋಕಿಲ್ಲ. ಈ ಹಳ್ಳಿಯಲ್ಲಿ ಶಾಲೆಯಿಂದ ಹಿಡಿದು ಪೋಸ್ಟಾಫೀಸಿನವರೆಗೆ ಎಲ್ಲವೂ ಇದೆ...ಇವೆಲ್ಲಕ್ಕಿಂತ ಹೆಚ್ಚಾಗಿ ಶಾಂತಿ ನೆಮ್ಮದಿಗಳಿವೆ. ಇದೊಂದು ಮಾದರಿ ಹಳ್ಳಿ...ಇದರ ಹೆಸರು ಮಾಲ್ಗುಡಿ. ಆದರೆ ದುರಾದೃಷ್ಟವಶಾತ್ ಈ ಹಳ್ಳಿ ಕೇವಲ ಕಲ್ಪನೆಯಲ್ಲಷ್ಟೇ ಜೀವಂತವಾಗಿದೆ...ವಾಸ್ತವದಲ್ಲಲ್ಲ.
ಹೌದು! ಲೇಖಕ ಆರ್. ಕೆ ನಾರಾಯಣ್ ಅವರ ಕಲ್ಪನೆಯ ಹಳ್ಳಿ ಮಾಲ್ಗುಡಿ. ಅವರು ಬರೆದ ಕಥೆಗಳೆಲ್ಲವೂ ಮಾಲ್ಗುಡಿಯ ಕಥೆಗಳೇ...ಮಲೆನಾಡಿನ ಸರಳ ಜೀವನ ಶೈಲಿಯಿಂದ ಅತಿಯಾಗಿ ಪ್ರೇರಿತರಾದ ನಾರಾಯಣ್ ತಮ್ಮ ಕಲ್ಪನೆಯಲ್ಲೇ ಹಳ್ಳಿಯೊಂದನ್ನು ಕಟ್ಟಿದರು...ಆ ಹಳ್ಳಿಯ ತುಂಬಾ ಪಾತ್ರಗಳನ್ನು ಸೃಷ್ಟಿಸಿದರು...ಪಾತ್ರಗಳಿಗೆ ಜೀವ ತುಂಬಿದರು...ಆ ಪಾತ್ರಗಳ ಕಥೇಯನ್ನೇ ಬರಹ ರೂಪಕ್ಕಿಳಿಸಿದರು. ಆ ಕಥೆಯೇ... ಮುಂದೆ ಮಾಲ್ಗುಡಿ ಡೇಸ್ ಎಂಬ ಹೆಸರಿನಲ್ಲಿ ಲೋಕವಿಖ್ಯಾತವಾಯಿತು.
ಆರ.ಕೆ ನಾರಾಯಣ್ ಬರೆದ'ಮಾಲ್ಗುಡಿ ಡೇಸ್`ಗೆ ಚಿತ್ರರೂಪ ನೀಡಿದ್ದು ಕನ್ನಡದ ಖ್ಯಾತ ನಟ ಶಂಕರ್ ನಾಗ್. 1987ರಲ್ಲಿ ಶಂಕರ್ ನಾಗ್ ನಾರಾಯಣ್ ಅವರ ಮಾಲ್ಗುಡಿಯ ಕಥೆಗಳನ್ನು ಧಾರಾವಾಹಿ ರೂಪಕ್ಕಿಳಿಸಿದರು. ಮೂವತ್ತೊಂಭತ್ತು ಕಂತುಗಳಲ್ಲಿ ಧಾರಾವಾಹಿ ಮೂಡಿಬಂತು. ವೆಂಡರ್ ಆಫ್ ಸ್ವೀಟ್ಸ್, ಎಂಜಿನ್ ಟ್ರಬಲ್, ಸ್ವಾಮಿ ಆಂಡ್ ಥೀಫ್, ಸ್ವಾಮಿ ಆಂಡ್ ಫ್ರೆಂಡ್ಸ್, ದಿ ಮಿಸ್ಸಿಂಗ್ ಮೇಲ್.....ಹೀಗೆ ನಾರಾಯಣ್ ಅವರ ಜನಪ್ರಿಯ ಕಥೆಗಳೆಲ್ಲವೂ ಮಾಲ್ಗುಡಿ ಡೇಸ್ ಹೆಸರಿನ ಧಾರಾವಾಹಿಯಾಗಿ ರೂಪಾಂತರಗೊಂಡಿತು. ಧಾರಾವಾಹಿಯ ನಿರ್ದೇಶಕರಾಗಿ ಪ್ರತಿಯೊಂದು ಕಥೆಯನ್ನೂ ನೈಜವಾಗಿ ತೆರೆಗೆ ತಂದ ಶಂಕರ್ ಪ್ರತಿಭೆ ನಿಜಕ್ಕೂ ಪ್ರಶಂಸನಾರ್ಹ. ಬಾಲ ಕಲಾವಿದನಾಗಿ ತನ್ನ ಮುಗ್ಧತೆ ಹಾಗೂ ತುಂಟತನದಿಂದ ವೀಕ್ಷಕರ ಮನಸೂರೆಗೊಂಡ ಮಾಸ್ಟರ್ ಮಂಜುನಾಥ್ ಅವರ ಅದ್ಭುತ ನಟನೆ ಎಂದೆಂದೂ ನೆನಪಿರುವಂತಹದ್ದು.
ಶಂಕರ್ ನಿರ್ದೇಶನ ಮಾಲ್ಗುಡಿ ಡೇಸ್ ಯಶಸ್ವಿಯಾದುದು ಅದರ ಸರಳತನದಿಂದ. ಸಾಮಾನ್ಯ ವರ್ಗದ ದೈನಂದಿನ ಜೀವನದ ಜಂಜಡಗಳೇ ಈ ಧಾರಾವಾಹಿಯ ಕಥಾವಸ್ತು. ಮಾಲ್ಗುಡಿ ಡೇಸ್ನ ಒಂದು ಎಪಿಸೋಡ್ ವೀಕ್ಷಿಸಿದರೆ ಸಾಕು ಮಲೆನಾಡ ಹಳ್ಳಿಯೊಂದನ್ನು ಸುತ್ತಿ ಬಂದ ಅನುಭವ...ಕೆಲವೊಮ್ಮೆ ಇದು ಧಾರಾವಾಹಿಯಲ್ಲ ನಮ್ಮದೇ ಮನೆಯ ಕಥೆ ಎಂಬ ಭ್ರಮೆ.
ವೆಂಡರ್ ಆಫ್ ಸ್ವೀಟ್ಸ್, ಸ್ವಾಮಿ ಆಂಡ್ ಫ್ರೆಂಡ್ಸ್,ಇಂಜಿನ್ ಟ್ರಬಲ್... ಇವೆಲ್ಲವೂ ತೀರಾ ಸರಳ ಕಥಾವಸ್ತುವನ್ನಿಟ್ಟುಕೊಂಡು ಹೆಣೆದ ಕಥೆಗಳು. ಮಾನವ ಜೀವನದ ಸೂಕ್ಷ್ಮತೆಗಳನ್ನು ವೀಕ್ಷಕನ ಮನನಾಟುವಂತೆ ಅತ್ಯಂತ ಸರಳ ರೂಪದಲ್ಲಿ ತಮ್ಮ ಕಥೆಗಳಲ್ಲಿ ಬಿಂಬಿಸಿದ್ದಾರೆ ನಾರಾಯಣ್...ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಧಾರಾವಾಹಿ ರೂಪಕ್ಕಿಳಿಸಿದ್ದಾರೆ ಶಂಕರ್. ವೆಂಡರ್ ಆಫ್ ಸ್ವೀಟ್ಸ್ನಲ್ಲಿ ತಂದೆ ಜಗನ್ ಹಾಗೂ ಮಗ ಮಾಲಿ ನಡುವೆ ಕಂಡು ಬರುವ ಜನರೇಶನ್ ಗ್ಯಾಪ್, ಸ್ವಾಮಿ ಆಂಡ್ ಥೀಫ್ನಲ್ಲಿ ತಂದೆ ತನ್ನ ಪುಟ್ಟ ಮಗನ ಮೇಲೆ ಹೇರುವ ಒತ್ತಡಗಳು, ಇಂಜಿನ್ ಟ್ರಬಲ್ನಲ್ಲಿ ಸಾಮಾನ್ಯ ವರ್ಗದ ವ್ಯಕ್ತಿ ಶೇಷಾದ್ರಿ ಲಕ್ಕಿಡಿಪ್ನಲ್ಲಿ ಗೆದ್ದು ಪಡೆದ ರೋಡ್ ರೋಲರ್ ಆವಾಂತರ ...ಹೀಗೆ ಎಲ್ಲವೂ ನಮ್ಮ ಸಮಾಜದ ಪ್ರಸ್ತುತ ವಿಚಾರಗಳೇ...
ಮಾಲ್ಗುಡಿ ಡೇಸ್ ಅನ್ನು ಮೂಲವಾಗಿ ಹಿಂದಿ ಭಾಷೆಯಲ್ಲಿ ಚಿತ್ರೀಕರಿಸಿದ್ದರೂ ಬಳಿಕ ಕನ್ನಡ,ತಮಿಳು,ಮಲಯಾಳಂ ಹೀಗೆ ನಾನಾ ಭಾಷೆಗಳಿಗೆ ಡಬ್ ಮಾಡಲಾಗಿದೆ. ಧಾರಾವಾಹಿಯ ಟೆಲೆಕಾಸ್ಟಿಂಗ್ ರೈಟನ್ನು ದೂರದರ್ಶನ, ಸೋನಿ ಹಾಗೂ ಟಿವಿ ಏಷ್ಯಾಗಳಿಗಷ್ಟೇ ನೀಡಲಾಗಿದೆ. ಎಲ್.ವೈದ್ಯನಾಥನ್ ಅವರ ಇಂಪಾಂದ ಹಿನ್ನೆಲೆ ಸಂಗೀತ ಧಾರಾವಾಹಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.
ವೈಶಾಲಿ ಕಾಸರವಳ್ಳಿ, ಅನಂತ್ ನಾಗ್, ಗಿರೀಶ್ ಕಾನರ್ಾಡ್...ಹೀಗೆ ಕನ್ನಡ ಚಿತ್ರರಂಗದ ಮೇರು ಕಲಾವಿದರೆಲ್ಲರೆಲ್ಲಾ ಮಾಲ್ಗುಡಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ರಚಿಸಿದ ಸ್ಕೆಚ್ಗಳು ಧಾರಾವಾಹಿಗೆ ಹೊಸ ಲುಕ್ ನೀಡಿವೆ. ಧಾರಾವಾಹಿ ನಿಮರ್ಾಣಗೊಂಡು ಇಪ್ಪತ್ತು ವರುಷಗಳೇ ಕಳೆದಿವೆ. ಆದರೆ ಇಂದಿಗೂ ಮಲೆನಾಡ ಜೀವನದ ಕಂಪನ್ನು ಸೂಸೂತ್ತಾ ಜನಮನದಲ್ಲಿ ನೆಲೆನಿಂತಿದೆ.
- ಅಕ್ಷತಾ ಸಿ.ಎಚ್
ರಾಜ್ಯ - ರಾಷ್ಟ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಹು ದಿನಗಳ ಕನಸು ನನಸಾಗುವ ಸುದಿನ! ಹೌದು ಮಂಗಳೂರು ಬೆಂಗಳೂರು ಹಗಲು ರೈಲಿಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಇದೇ 29ರಂದು ಬೆಳಗ್ಗೆ 8.45ಕ್ಕೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಸಚಿವ ಮುನಿಯಪ್ಪ ಹಗಲು ರೈಲಿಗೆ ಮಂಗಳೂರಿನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ತನ್ಮೂಲಕ ಕರ್ನಾಟಕದ ಜನತೆಯ ಬಹುನಿರೀಕ್ಷೆಯ ಹಗಲು ರೈಲು ಕೊನೆಗೂ ಓಡುವಂತಾಗಿದೆ.
ಹೋರಾಟದ ಫಲ
ಹಗಲು ರೈಲು ಓಡಾಟ ನಡೆಸಬೇಕೆಂದು ಹಲವು ಸಂಘಟನೆಗಳು ತೀವ್ರ ಹೋರಾಟವನ್ನು ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿವೆ. ಸಂಸದ ಡಿ.ವಿ.ಸದಾನಂದ ಗೌಡರು ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಅವರ ಅವಧಿಯಲ್ಲಿ ಹಗಲು ರೈಲು ಓಡಾಟ ಮಾತ್ರ ಕನಸಿನ ಮಾತಾಗಿತ್ತು. ಇದೀಗ ಸಂಸದ ನಳಿನ್ ಕುಮಾರ್ ಕಟೀಲು ಅವರ ಸಮಯದಲ್ಲಿ ಹಗಲು ರೈಲು ಓಡಾಟ ನಡೆಯುತ್ತಿರುವುದು ಸಂತೋಷದ ವಿಚಾರ.
ಮಂಗಳೂರು ಬೆಂಗಳೂರು ನಡುವೆ ಹಸಿರ ಕಾನನದೊಳಗೆ ಬೆಟ್ಟ ಗುಡ್ಡಗಳ ಮಧ್ಯೆ ಈ ರೈಲು ಬಾಗಿ ಬಳಕುತ್ತಾ ಚುಕುಪುಕು ಸದ್ದುಮಾಡುತ್ತಾ ಸಾಗಲಿವೆ. ಅಂತೂ ಚೇತೋಹಾರಿ ಅನುಭವವನ್ನು ಈ ರೈಲು ನೀಡಲಿದೆ. 16ಬೋಗಿಗಳನ್ನು ಹೊಂದಿದ ರೈಲು ವಾರಕ್ಕೆ 3ದಿನ ಮಂಗಳೂರಿನಿಂದಲೂ ಉಳಿದ 3ದಿನ ಬೆಂಗಳೂರಿನಿಂದ ಮಂಗಳೂರಿಗೂ ಪ್ರಯಾಣ ಬೆಳೆಸಲಿದೆ.
ಲಾಬಿ
ಹಗಲು ರೈಲು ಓಡಾಟಕ್ಕೆ ಖಾಸಗೀ ಬಸ್ಸುಗಳ ತೀವ್ರ ಲಾಬಿ ಇತ್ತು. ಇದರಿಂದಾಗಿ ಇಷ್ಟು ವರ್ಷಗಳ ಕಾಲ ಈ ರೈಲು ಓಡಾಟಕ್ಕೆ ವಿಳಂಬವಾಗಿತ್ತು. ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳು ತೀವ್ರ ಹದಗೆಟ್ಟ ಸಂದರ್ಭದಲ್ಲೂ ಈ ರೈಲು ಓಡಾಟವನ್ನು ಪ್ರಾರಂಭಿಸಿರಲಿಲ್ಲ. ಅಂತೂ ಈಗಲಾದರೂ ರೈಲು ಓಡಾಟ ಆರಂಭಗೊಳ್ಳೂತ್ತಿರುವುದು ಖುಷಿ ತಂದುಕೊಟ್ಟಿದೆ ಎನ್ನುತ್ತಾರೆ ನಾಗರೀಕರು.
ನಷ್ಟಹಗಲು ರೈಲು ಓಡಾಟ ನಡೆಸಿದರೆ ಗೂಡ್ಸ್ ರೈಲು ಓಡಾಟಕ್ಕೆ ತೊಂದರೆಯಾಗಲಿದೆ ಎಂಬ ಮಾತು ಕೇಳಿಬರತೊಡಗಿದೆ. ಇದರಿಂದಾಗಿ ಮತ್ತೆ ರೈಲು ಓಡಾಟಕ್ಕೆ ಕುತ್ತು ಬರಲಿದೆಯೇ ಎಂಬ ಆತಂಕ ಮನೆಮಾಡಿದೆ. ಏನೇ ಆಗಲಿ ಮಂಗಳೂರು ಬೆಂಗಳೂರು ಹಗಲು ರೈಲು ಓಡಾಟವಾದರೆ ರಾಜ್ಯದ ಪ್ರವಾಸೋದ್ಯಮ ದೃಷ್ಠಿಯಿಂದಲೂ ಅಭಿವೃದ್ಧಿ ಆಗಲಿದೆ. ನೆಟ್ಟಣದ ಹಸಿರ ಐಸಿರಿಯ ನಡುವೆ ಹಾದು ಹೋಗುವ ಚೇತೋಹಾರಿ ಅನುಭವಪಡೆಯಲು ಪ್ರವಾಸಿಗರು ಇನ್ನಷ್ಟು ಸಂಖ್ಯೆಯಲ್ಲಿ ಈ ರೈಲು ಪ್ರಯಾಣ ನಡೆಸಲಿದ್ದಾರೆ. ಒಟ್ಟಿನಲ್ಲಿ ಕರಾವಳಿ, ರಾಜ್ಯದ ಹಿತ ದೃಷ್ಠಿಯಿಂದ ಈ ರೈಲು ಓಡಾಟ ನಡೆಯಬೇಕಾಗಿದೆ.
ರಾಜ್ಯ - ರಾಷ್ಟ್ರ
ನಾಳೆ ಗಣೇಶ ಚತುರ್ಥಿ... ನಮ್ಮೆಲ್ಲಾ ಓದುಗ ಬಳಗ, ಜಾಹೀರಾತುದಾರರಿಗೆ ಈ ಕನಸು ತಂಡದ ಪರವಾಗಿ ಶುಭಾಷಯಗಳು. ಗಣೇಶ ಚತುರ್ಥಿ ಎಲ್ಲರಿಗೂ ಸನ್ಮಂಗಲ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ರಾಜ್ಯ - ರಾಷ್ಟ್ರ
ಈ ಬಾರಿ ಗೌರಿ ಗಣೇಶ ಹಬ್ಬ ಒಂದೇ ದಿನ. ಅದು ರವಿವಾರ. ಆದರೆ ಗಣೇಶ ಚತುರ್ಥಿಯ ಮೊದಲ ದಿನ ಗೌರಿ ಹಬ್ಬದ ಆಚರಣೆ ಸಾಮಾನ್ಯ. ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ. ಭಾದ್ರಪದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ.
ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.ಗೌರಿ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಆ ಪ್ರಕಾರ ಮುತ್ತೈದೆಯರು ಇದೀಗ ಗೌರಿ ಸಂಭ್ರಮದಲ್ಲಿದ್ದಾರೆ. ಅಂತೂ ಗೌರಿ ಗಣೇಶ ಹಬ್ಬ ಸಕಲ ಸನ್ಮಂಗಲವನ್ನುಂಟುಮಾಡಲಿ ಎಂಬುದೇ ನಮ್ಮ ಹಾರೈಕೆ.
ರಾಜ್ಯ ರಾಷ್ಟ್ರ
ಮಂಗಳೂರು: ಅಕ್ಷರಶಃ ಮಹಾಮಾರಿ... ಹೌದು ಮಂಗಳೂರಿನ ಪಾಲಿಗೆ ಈ ಅಂತಾರಾಷ್ಟ್ರೀಯ ವಾಹಿನಿಗಳು ಮಹಾಮಾರಿಯಾಗಿ ಪರಿಣಮಿಸಿದೆ. ಇದರ ಒಂದೊಂದು ವರದಿಗಳೇ ಇಂದು ಮಂಗಳೂರು ಸ್ವಾಸ್ಥ್ಯಕೆಡುವಂತಾಗಲು ಪ್ರಮುಖ ಕಾರಣವಾಗಿದೆ. ಈ ವಾಹಿನಿಗಳು ಇಲ್ಲಿಗೆ ಆಗಮಿಸಲು ಕಾಣದ `ಕೈ'ಗಳ ಕೈವಾಡವಿರುವುದು ಅಷ್ಟೇ ಸತ್ಯ.
ಮಂಗಳೂರಿನಲ್ಲಿ ಏನೂ ಆಗದಿದ್ದರೂ ಈ ವಾಹಿನಿಗಳು ಧಿಡೀರ್ ಪ್ರತ್ಯಕ್ಷಗೊಳ್ಳುತ್ತಿವೆ. ಅದೇನೋ ಇಡೀ ಮಂಗಳೂರೇ ಹೊತ್ತಿ ಉರಿದಿದೆ ಎಂದು ಬಿಂಭಿಸುತ್ತವೆ. ಸಣ್ಣ ಹೊಡೆದಾಟ ಮಂಗಳೂರಲ್ಲಿ ನಡೆದರೂ ಅದು ದೊಡ್ಡ `ಕೋಮುಗಲಭೆ' ಎಂಬುದಾಗಿ ಬಿಂಭಿಸುತ್ತವೆ ಈ ಚಾನೆಲ್ ಗಳು. ಇತ್ತೀಚೆಗೆ ಪ್ರಾರ್ಥನಾ ಮಂದಿರಗಳ ಮೇಲೆ(ಮತಾಂತರ ಗೊಳ್ಳುವ)ನಡೆದ ದಾಳಿ ಇಡೀ ವಿಶ್ವಾದ್ಯಂತ ಸುದ್ದಿಯಾಯಿತು. ಇದೇ ದೊಡ್ಡ ಸುದ್ದಿ ಎಂಬಂತೆ ಬಿಂಬಿಸಲ್ಪಟ್ಟಿತು. ಆದರೆ ವಾಸ್ತವ ಸಂಗತಿಯೇ ಬೇರೆಯಾಗಿದ್ದವು. ಇದೀಗ ಮಂಗಳೂರಿನಲ್ಲಿ ಕೋಮು ಗಲಭೆ ಯಾಗುತ್ತದೆ ಎಂಬ ಸುದ್ದಿಯನ್ನು ಕಾಣದ `ಕೈ'ಗಳು ಹೇಳಿದ್ದು ಕರ್ನಾಟಕದಲ್ಲಿ ಕೋಮು ಧಳ್ಳುರಿಯನ್ನು ಸೃಷ್ಠಿಸುವ ಸಲುವಾಗಿಯೇ ಕೆಲವೊಂದು ವ್ಯಕ್ತಿಗಳು, ಸಂಘಟನೆಗಳು ಸಂಚು ರೂಪಿಸುತ್ತಿದ್ದು ಅದಕ್ಕೆ ರಾಜಕೀಯ ಹಾಗೂ ಧನ ಬೆಂಬಲ ದೊರಕುತ್ತಿದ್ದು ಅದಕ್ಕೆ ತಾಳ ಹಾಕುವ ಈ ಸುದ್ದಿವಾಹಿನಿಗಳು ಇವತ್ತು ಮಂಗಳೂರಿನ ಸ್ವಾಸ್ಥ್ಯ ಹದಗೆಡಿಸುತ್ತಿವೆ ಎಂಬುದಂತೂ ಸತ್ಯ.
ಮಂಗಳೂರಿನಲ್ಲಿ ಅದೆಷ್ಟೋ ಧನಾತ್ಮಕ ಅಂಶಗಳು ನಿರಂತರ ನಡೆಯುತ್ತಿರುತ್ತವೆ. ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗುವ ಅಂಶಗಳೂ ಬೇಕಾದಷ್ಟಿವೆ. ಅಷ್ಟು ಮಾತ್ರವಲ್ಲದೆ ಸಾಧನೆ ಮಾಡಿದವರೂ ಅನೇಕರಿದ್ದಾರೆ. ನಿತ್ಯ ನವೀನ ಹೊಸ ಹೊಸ ಧನಾತ್ಮಿಕ ಸುದ್ದಿಗಳು ರಾಶಿಬೀಳುತ್ತಿವೆ. ಆದರೆ ಇಂತಹ ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಅದ್ಯಾಕೆ ಸುದ್ದಿಯಾಗುತ್ತಿಲ್ಲ. ರಾತ್ರಿ ಬೆಳಗಾಗುವುದರೊಳಗೆ ತಮ್ಮ ಒ.ಬಿ.ವ್ಯಾನ್ ಹಿಡಿದು ಪ್ರತಿಷ್ಠಿತ ಹೊಟೇಲುಗಳಲ್ಲಿ ಇವರ್ಯಾರು ಯಾಕೆ ಬೀಡುಬಿಡುತ್ತಿಲ್ಲ ಎಂಬುದು ಕಟುಸತ್ಯ. ಯಾಕೆ ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ...? ಕೇವಲ ಕೋಮು ಗಲಭೆಗಳನ್ನು ದೊಡ್ಡದಾಗಿ ಬಿಂಭಿಸಿ ಇಲ್ಲೇನೋ `ಆಕಾಶವೇ ಕಳಚಿ ಬಿತ್ತು' ಎಂಬಂತೆ ಬಿಂಭಿಸುವ ಈ ಮಂದಿ ಒಂದಷ್ಟು ವಿವೇಚಿಸಬೇಕಾಗಿದೆ. ಯೋಚಿಸಬೇಕಾಗಿದೆ. ಇನ್ನಾದರೂ ಯಾರನ್ನೋ ನೆಚ್ಚಿಸುವ ಸಲುವಾಗಿ ಇಂತಹ ಕಾರ್ಯ ಮಾಡದಿರಲಿ...ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದದ್ದು. ಆದರೆ ಬದಲಾಗಿ ಸ್ವಾಸ್ಥ್ಯ ಕೆಡಿಸುವ ಕಾರ್ಯ ಮಾಡದಿರಲಿ...
- ನಾಡೋಡಿ.
ಪ್ರಾದೇಶಿಕ ಸುದ್ದಿಧರ್ಮಸ್ಥಳ: ಹಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರೀತಿ-ಗೌರವದೊಂದಿಗೆ ಅವುಗಳೊಡನೆ ನಮಗೆ ಭಾವನಾತ್ಮಕ ಸಂಬಂಧವಿದೆ. ಗೋ ಹತ್ಯೆಯನ್ನು ತಡೆದು ಗೋಮಾತೆಯ ರಕ್ಷಣೆ ಬಗ್ಯೆ ಜನ ಜಾಗೃತಿ ಮೂಡಿಸಲು ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯನ್ನು ಆಯೋಜಿಸಿದ್ದು ಸೆ. 28 ರಂದು ವಿಜಯದಶಮಿಯ ಶುಭ ದಿನ ಕುರುಕ್ಷೇತ್ರದಿಂದ ಪ್ರಾರಂಭಗೊಳ್ಳುವ ರಥ ಯಾತ್ರೆಯು 108 ದಿನಗಳ ಕಾಲ ದೇಶಾದ್ಯಂತ 5 ಲಕ್ಷ ಗ್ರಾಮಗಳಲ್ಲಿ ಸಂಚರಿಸಿ ಮಕರ ಸಂಕ್ರಾಂತಿಯಂದು ನಾಗಪುರದಲ್ಲಿ ಸಮಾಪನಗೊಳ್ಳಲಿದೆ ಎಂದು ಯಾತ್ರಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಗುರುವಾರ ಮಹೋತ್ಸವ ಸಭಾ ಭವನದಲ್ಲಿ ಸ್ವಾಗತ ಸಮಿತಿಯ ಸಮಾಲೋಚನಾ ಸಭೆಗೆ ಚಾಲನೆ ನೀಡಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ನವೆಂಬರ್ 30 ರಿಂದ ಡಿಸೆಂಬರ್ 7 ರ ವರೆಗೆ ಕರ್ನಾಟಕ ರಾಜ್ಯದಲ್ಲಿ ರಥ ಯಾತ್ರೆ ನಡೆಯಲಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಉಪ ಯಾತ್ರೆಯನ್ನು ಆಯೋಜಿಸಲಾಗಿದೆ.
ಗೋ ವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋ ರಕ್ಷಣಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದೇಶಿ ತಳಿಯ ಗೋವುಗಳಿಂದ ಗರ್ಭದಾನ ತಡೆಗಟ್ಟಬೇಕು. ಗೋಮಾಂಸ ಭಕ್ಷಣೆ ನಿಷೇಧಿಸಬೇಕು. ಗೋರಕ್ಷಣೆಗಾಗಿ ಪ್ರತ್ಯೇಕ ಸಚಿವ ಖಾತೆಯನ್ನು ರಚಿಸಿ, ದನದ ಸೆಗಣಿ ಮತ್ತು ಮೂತ್ರದ ಉಪಯೋಗದೊಂದಿಗೆ ದೇಶವನ್ನು ಸ್ವಾವಲಂಭಿಯಾಗಿ ಮಾಡಬೇಕು ಎಂದು ಡಾ. ಹೆಗ್ಗಡೆಯವರು ಒತ್ತಾಯಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗೋ ಸಂಪತ್ತಿನ ವೃದ್ಧಿಗಾಗಿ ಬೆಂಬಲ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಕಳೆದ ವರ್ಷ ಒಂದು ಕೋಟಿ ರೂ. ಅನುದಾನ ನೀಡಿದ್ದು ಈ ವರ್ಷವೂ ಒಂದು ಕೋಟಿ ರೂ. ನೆರವು ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ಕೊಕ್ಕಡದಲ್ಲಿ ಗೋ ಶಾಲೆಯನ್ನು ಪ್ರಾರಂಭಿಸಲಾಗಿದೆ. ಗೋ ಮೂತ್ರದಿಂದ ಜೀವಾಮೃತ ತಯಾರಿಸಿ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಗೆ ಪೂರ್ಣ ಬೆಂಬಲ ನೀಡುವುದಾಗಿ ಡಾ. ಹೆಗ್ಗಡೆಯವರು ಭರವಸೆ ನೀಡಿದರು. ವರ್ತೂರು ನಾರಾಯಣ ರೆಡ್ಡಿ, ರಾಮಣ್ಣ ಗೌಡ, ಪ್ರೊ.ಬಿ.ಎಮ್. ಕುಮಾರಸ್ವಾಮಿ, ಸೀತಾರಾಮ ಕೆದಿಲಾಯ, ಗೋಪಾಲ ಚೆಟ್ಟಿಯಾರ್, ಎಮ್.ಬಿ. ಪುರಾಣಿಕ್, ಕೃಷ್ಣಮೂರ್ತಿ ಮತ್ತು ಜಯರಾಮ ಬೊಳ್ಳಾಜೆ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ - ಸುನಿಲ್ ಬೇಕಲ್
ಕ್ಲಿಕ್...
ಮೂಡಬಿದಿರೆಯಲ್ಲಿ ಇತ್ತೀಚೆಗೆ ಛಾಯಾಚಿತ್ರ ದಿನದಂದು ಪ್ರದರ್ಶನಗೊಂಡ ಚಿತ್ರಗಳಿವು...
ಪ್ರಾದೇಶಿಕ ಸುದ್ದಿ
ಮಂಗಳೂರು: ನೇತ್ರಾವತೀ ನದೀ ತಿರುವು ಯೋಜನೆ ಅವೈಜ್ಞಾನಿಕವಾಗಿದ್ದು ಇದು ಸೂಕ್ತವಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಯೋಜನೆಯಿಂದ ಹಾನಿಗಳಾಗುವ ಸಾಧ್ಯತೆಗಳಿವೆ. ಇದರ ಬಗ್ಗೆ ಸೂಕ್ತ ಅಧ್ಯಯನ ನಡೆಯಬೇಕಾಗಿದೆ ಎಂದರು.
ನೇತ್ರಾವತೀ ತಿರುವಿನಿಂದ ಅಪಾಯವೇ ಅಧಿಕ ಎಂದವರು ಸೂಚ್ಯವಾಗಿ ತಿಳಿಸಿದರು. ಇದರೊಂದಿಗೆ ನೇತ್ರಾವತೀ ನದೀ ತಿರುವು ಯೋಜನೆಗೆ ಪ್ರಭಲ ವಿರೋಧ ಜಿಲ್ಲೆಯಿಂದ ವ್ಯಕ್ತವಾದಂತಾಗಿದೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಭಾರತೀಯ ಜನತಾ ಪಕ್ಷ ಮತ್ತೊಮ್ಮೆ `ಪಕ್ಷ ಮುಖ್ಯ ವ್ಯಕ್ತಿ ಮುಖ್ಯ ಅಲ್ಲ' ಎಂಬುದನ್ನು ಸಾರಿಹೇಳಿದೆ. ಇದಕ್ಕೆ ಜ್ವಲಂತ ಸಾಕ್ಷಿ ಜಸ್ವಂತ್ ಸಿಂಗ್. ಜಿನ್ನಾ ಭಾರತ ವಿಭಜನತೆ ಸ್ವಾತಂತ್ರ್ಯ ಎಂಬ ಪುಸ್ತಕದಿಂದಾಗಿ ಜಸ್ವಂತ್ ಸಿಂಗ್ ಅವರಿಗೆ ಬಿಜೆಪಿ ಗೇಟ್ ಪಾಸ್ ಹೇಳಿದೆ. ತನ್ಮೂಲ ಜಿನ್ನಾ ಪ್ರಕರಣದಲ್ಲಿ ಬಿಜೆಪಿಯಲ್ಲಿ ಎರಡನೇ ತಲೆದಂಡವಾದಂತಾಗಿದೆ.ಏತನ್ಮಧ್ಯೆ ಜಸ್ವಂತ್ ಸಿಂಗ್ ಪರೆದ ಪುಸ್ತಕವನ್ನು ಗುಜರಾತ್ ಸರಕಾರ ನಿಷೇಧಿಸಿದೆ. ವಲ್ಲಭಾ ಭಾಯ್ ಪಟೇಲ್ ಕುರಿತು ಅವಹೇಳನಾಕಾರಿ ಅಗೌರವ ತೋರಿ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ 30ವರ್ಷ್ ಗಳಷ್ಟು ಸುಧೀರ್ಘಕಾಲ ಸೇವೆಸಲ್ಲಿಸಿದ ಜಸ್ವಂತ್ ಸಿಂಗ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಇನ್ನು ಸಿಂಗ್ ಅವರಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ರಾಜ್ ನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಬಿ.ಜೆ.ಪಿಯತ್ತ ಆರ್.ಎಸ್.ಎಸ್ ಕಿಡಿಕಾರಿದೆ. ಬಿ.ಜೆ.ಪಿ.ಯಲ್ಲಿ ಪಕ್ಷದೊಳಗಿನ ಬಿಕ್ಕಟ್ಟು ಹೆಚ್ಚಿದೆ. ಇದಕ್ಕೆ ನಾಯಕತ್ವದ ಬಲದಾವಣೆಯೊಂದೇ ಸೂಕ್ತ ಪರಿಹಾರ ಎಂದು ಆರ್.ಎಸ್.ಎಸ್ ವರಿಷ್ಠ ಮೋಹನ್ ಭಾಗವತ್ ಖಾಸಗೀ ದೂರದರ್ಶನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಕಂಡುಬಂದ ಬಿಕ್ಕಟ್ಟು ನಿವಾರಣೆಯ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಬಿಜೆಪಿ ಚಿಂತನ ಬೈಠಕ್ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಭಾಗವತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ರಾದೇಶಿಕ ಸುದ್ದಿ
ಶಿವಮೊಗ್ಗ/ಮಂಗಳೂರು: ಇದೀಗ ಮತ್ತೆ ನಕ್ಸಲ್ ಚಟುವಟಿಕೆ ಗರಿಕೆದರಿಕೆ.ಮಂಗಳೂರಿನ ಪೊಲೀಸ್ ಅಧಿಕಾರಿ ವೆಂಕಟೇಶ ಪ್ರಸನ್ನ ಶೃಂಗೇರಿಯಲ್ಲಿರುವ ಮನೆಗೆ ರಾತ್ರಿ ತೆರಳಿ ಮನೆಮಂದಿಯನ್ನು ಬೆದರಿಸಿ ಜೀವ ಬೆದರಿಕೆಯೊಡ್ಡಿ ತೆರಳಿದೆ. 13ಮಂದಿ ಕಾರ್ಯಕರ್ತರ ತಂಡ ಭೇಟಿನೀಡಿದ್ದು ವೆಂಕಟೇಶ ಪ್ರಸನ್ನರ ತಂದೆಯವರಲ್ಲಿ ಮಾತುಕತೆ ನಡೆಸಿದೆ. ಬಿ.ಜೆ.ಪಿಯನ್ನು ಬೆಂಬಲಿಸದೆ ನಕ್ಸಲರನ್ನು ಬೆಂಬಲಿಸುವಂತೆ ತಾಕೀತು ಮಾಡಿದ್ದಲ್ಲೆದೆ, ಪೊಲೀಸರಿಗೆ ನಕ್ಸಲ್ ಕುರಿತು ಯಾವುದೇ ಮಾಹಿತಿಯನ್ನು ನೀಡಬಾರದೆಂದು ತಾಕೀತು ಮಾಡಿದೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಇದೀಗ ಆಘಾತ ಕಾರಿ ಅಂಶವೊಂದನ್ನು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದ ಹಲವು ಕಡೆಗಳಲ್ಲಿ ಅಂತರ್ಜಲ ತೀವ್ರ ರೀತಿಯಲ್ಲಿ ಕುಸಿತ ಕಂಡಿದೆ . ನವದೆಹಲಿ ಸೇರಿದಂತೆ ಇತರ ಕೆಲವು ಭಾಗಗಳಲ್ಲಿ ತೀವ್ರ ರೀತಿಯಲ್ಲಿ ಅಂತರ್ಜಲ ಬತ್ತಿಹೋಗುತ್ತಿರುವ ಬಗ್ಗೆ ನಾಸಾ ವಿಜ್ಞಾನಿಗಳು ಆಘಾತಕಾರಿ ಅಂಶವನ್ನು ಇದೀಗ ಬಯಲುಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಮತ್ತಷ್ಟು ತೊಂದರೆಗಳಾಗುವ ಸಾಧ್ಯತೆಗಳಿವೆ. ಕೃಷಿ ಸೇರಿದಂತೆ ಇತರ ಕಾರ್ಯಗಳಿಗಾಗಿ ಜಲ ವಿನಿಯೋಗ ಅಧಿಕವಾಗುತ್ತಿದ್ದು ಜಲ ಮರುಪೂರಣ ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ನಾಸಾ ತಿಳಿಸಿದೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಮಹಾಮಾರಿ ಎಚ್.1 ಎನ್.1 ತನ್ನ ರುದ್ರ ನರ್ತನವನ್ನು ದೇಶದಲ್ಲಿ ಮುಂದುವರಿಸಿದೆ. ಇದೀಗ ಮುಂಬೈನಲ್ಲಿ ಮಹಿಳೆಯೊಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ ಇದರೊಂದಿಗೆ ದೇಶದಲ್ಲಿ ಮಹಾಮಾರಿ ಎಚ್1ಎನ್1 ಸೋಂಕಿಗೆ ಬಲಿಯಾದವರ ಸಂಖ್ಯೆ 29ಕ್ಕೇರಿದೆ. ಇದೀಗ ರಾಜ್ಯದಲ್ಲಿ 12ಮಂದಿಗೆ ಈ ಸೋಂಕು ತಗುಲಿದೆ. 172ಮಂದಿ ಇದೀಗ ಈ ರೋಗಕ್ಕೆ ಗುರಿಯಾಗಿದ್ದಾರೆ.
ಬಂದ್
ಎಚ್. 1 ಎನ್.1 ತೀವ್ರತೆ ಅತಿಯಾಗಿದ್ದು ಇದೀಗ ಪುಣೆಯಲ್ಲಿ ಅತೀ ಹೆಚ್ಚು ಅಂದರೆ 13 ಬಲಿಯಾಗಿದ್ದಾರೆ. ಇದೀಗ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ, ಕಾಲೇಜುಗಳು ಮತ್ತು ಸಿನಿಮಾ ಮಂದಿರಗಳನ್ನು ಇದೇ ಆಗಸ್ಟ್ 23ರ ತನಕ ಮುಚ್ಚುವಂತೆ ಆದೇಶಿಸಲಾಗಿದೆ.
ಹೆಚ್ಚಿದ ಪ್ರಕರಣ
ರಾಜ್ಯದಲ್ಲಿ ಈ ಪ್ರಕರಣ ಹೆಚ್ಚಿದೆ. ಬೆಂಗಳೂರಿನಲ್ಲಿ 11 ಮಂದಿಗೆ ಪ್ರಕರಣ ಕಂಡುಬಂದಿದೆ. ಈತನಕ 172 ಪ್ರಕರಣ ದಾಖಲಾಗಿದೆ. ಮಂಗಳೂರು , ಉಡುಪಿ, ಮಣಿಪಾಲದಲ್ಲಿ ಪ್ರಕರಣ ಜಾಸ್ತಿಯಾಗಿದೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ರಾಜ್ಯದ ಐದು ಕಡೆಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು ಬೆಳಗ್ಗೆ 7ರಿಂದ ಬಿರುಸಿನ ಮತದಾನ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಇಲೆಕ್ಟ್ರಾನಿಕ್ಸ್ ಮತಯಂತ್ರ ಕೆಟ್ಟು ಹೋಗಿ ಚುನಾವಣಾ ಮತದಾನದಲ್ಲಿ ವಿಳಂಬವಾಗಿದ್ದು ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆಗಳು ವರದಿಯಾಗಿವೆ. ರಾಮನಗರ, ಕೊಳ್ಳೇಗಾಲ, ಚನ್ನಪಟ್ಟಣ, ಚಿತ್ತಾಪುರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿವೆ. ಈ ಎಲ್ಲಾ ಚುನಾವಣಾ ಸ್ಥಳಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಚುನಾವಣಾ ಅಕ್ರಮಗಳು ನಡೆಯದಂತೆ ಸೂಕ್ತ ವ್ಯವಸ್ಥೆಗೊಳಿಸಲಾಗಿದೆ.
ಅಭ್ಯರ್ಥಿಗಳಿಂದ ಮತದಾನ
ರಾಮನಗರದ ಜೆಡಿಎಸ್ ಅಭ್ಯರ್ಥಿ ಕೆ. ರಾಜು ಶಾಂತಿನಿಕೇತನ ಕಾಲೇಜಿನಲ್ಲಿ ಮತಚಲಾಯಿಸಿದರು. ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಚಕ್ಕೆರೆ ಗ್ರಾಮದಲ್ಲಿ ಬೆಳಿಗ್ಗೆ ಮತ ಚಲಾಯಿಸಿದ್ದಾರೆ.
ಕೆಟ್ಟುಹೋದ ಯಂತ್ರ
ಮತದಾನಕ್ಕೆ ಬಳಸಲಾದ ಇಲೆಕ್ಟ್ರಾನಿಕ್ ಮತಯಂತ್ರಗಳ ದೋಷದಿಂದಾಗಿ ಕೆಲವೆಡೆ ಮತದಾನಕ್ಕೆ ತೊಂದರೆಗಳುಂಟಾಗಿವೆ. ಗೋವಿಂದರಾಜನಗರದ ಹಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಆರಂಭಗೊಂಡಿತು. ಚಿತ್ತಾಪುರದ ಮತಗಟ್ಟೆಗಳಲ್ಲೂ ಇದೇ ರೀತಿಯ ತೊಂದರೆಗಳು ಕಂಡುಬಂದವು.
ವಿಚಾರ
``ನಮ್ಮ ದೇಶವು ಸದಾ ಸಮಸ್ತ ಭರತಖಂಡವಾಗಿ ಉಳಿಯಬೇಕು, ಬೆಳೆಯಬೇಕು'' ಈ ಉದಾತ್ತ ನಿಲುವು ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಜೀವನದ ಧ್ಯೇಯವಾಗಿತ್ತು. 63ನೆಯ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರದ ಪುನರುತ್ಥಾನದ ಪ್ರಸಕ್ತ ಪಥದ ಬಗ್ಗೆ ಯೋಚಿಸುವುದು ಸಹಜವಾಗುತ್ತದೆ.
ಪಾಶ್ಚಿಮಾತ್ಯರ ದಾಸ್ಯದಿಂದ ಬಿಡುಗಡೆಯಾಗಿ ನಾವು ಸಾಕಷ್ಟು ಪ್ರಗತಿ ಕಂಡಿದ್ದೇವೆ. ಆದರೆ ಅಭಿವೃದ್ಧಿ ಆಗಲೇ ಬೇಕಾದ ಇನ್ನೂ ಅನೇಕ ವಿಷಯಗಳಿವೆ. ವರ್ಷದಿಂದ ವರ್ಷಕ್ಕೆ ಆಹಾರ ಉತ್ಪಾದನೆಯಲ್ಲಿ ನಮ್ಮ ದೇಶವು ಹಿಂದೆ ಬೀಳುತ್ತಿದ್ದು ಧಾನ್ಯಗಳ ಆಮದು ಮಾಡಿಕೊಳ್ಳುವ ಸ್ಥಿತಿ ಹೆಚ್ಚುತ್ತಿದೆ. ಕೃಷಿ ಕ್ಷೇತ್ರದ ಪುನರುಜ್ಜೀವನಕ್ಕೆ ನಾವೆಲ್ಲರೂ ಕೈಗಾರಿಕೆಗಳ ಮಾದರಿಯನ್ನೇ ಸ್ವೀಕರಿಸಬೇಕಾಗಿದೆ.
ಕುಡಿಯುವುದಕ್ಕೆ ಶುದ್ಧ ನೀರು, ಉಣ್ಣುವುದಕ್ಕೆ ಯೋಗ್ಯ ಆಹಾರ, ಧರಿಸುವುದಕ್ಕೆ ಒಳ್ಳೆಯ ವಸ್ತ್ರ, ವಾಸಿಸಲು ಯೋಗ್ಯ ಮನೆ, ಜೀವನಾಧಾರಕ್ಕೆ ಪೂರಕವಾದ ಉದ್ಯೋಗ... ಈ ಅನುಕೂಲಗಳಿಲ್ಲದ ನಿರಾಶ್ರಿತರು ಅನೇಕ ಸಂಖ್ಯೆಯಲ್ಲಿ ಭಾರತದಲ್ಲಿ ಇನ್ನೂ ಇದ್ದಾರೆ ಎಂದರೆ ನಮ್ಮ ದೇಶದ ಪ್ರಗತಿಯ ಬಗ್ಗೆ, ಸಮಗ್ರತೆಯ ಬಗ್ಗೆ ಚಿಂತಿಸಬೇಕಾಗುತ್ತದೆ.
ಮಿತಿ ಮೀರಿದ ಖಾಸಗೀ ಒಡೆತನ ಮತ್ತು ಖಾಸಗೀಕರಣಗಳು ಕೂಡ ಸ್ವಾತಂತ್ರ್ಯದ ದುರುಪಯೋಗವೇ ಎಂಬುದು ಪ್ರಜ್ಞಾವಂತರ ಅಭಿಮತ. `ಸರ್ವರಿಗೆ ಸಮಪಾಲು' ಸ್ವಾತಂತ್ರ್ಯ ಹೋರಾಟಗಾರರ ಈ ಮಾತು ಮೂಲೆಪಾಲಾಗುತ್ತಿದೆ. ಕೆಲವೊಂದು ಖಾಸಗೀ ಗಣ್ಯ ವ್ಯಕ್ತಿಗಳು ಒಂದೊಂದು ಜಿಲ್ಲೆಯಷ್ಟು ದೊಡ್ಡ ಪ್ರದೇಶವನ್ನು ಪರೋಕ್ಷವಾಗಿ ತಮ್ಮ ಅಧೀನದಲ್ಲಿಟ್ಟುಕೊಂಡು ಪ್ರಬಲ ಶ್ರೀಮಂತರಾಗಿದ್ದಾರೆ.
ಮೇರೆ ಮೀರುತ್ತಿರುವ ಪ್ರತ್ಯೇಕತೆಯ ಕೂಗುಗಳು. ಭಾಷೆ, ಸಂಸ್ಕೃತಿ, ಕಲೆ, ಈ ನಿಮಿತ್ತಗಳಿಂದ ಪ್ರತ್ಯೇಕ ರಾಜ್ಯದ ಸ್ಥಾಪನೆಗೆ ಆಗ್ರಹಗಳು ಹೆಚ್ಚುತ್ತಿರುವುದು ಸ್ವಾತಂತ್ರ್ಯದ ಸಾರ್ವಭೌಮತೆಗೆ ಪೂರಕವಲ್ಲ.
ಸ್ತ್ರೀ-ಪುರುಷ ಸಮಾನತೆಗಳು ಉದ್ಯೋಗ, ಉಡುಗೆ ತೊಡುಗೆಗಳಿಗೆ ಸೀಮಿತವಾಗದೆ ಪ್ರಾಕೃತಿಕ ಸಹಜತೆಯನ್ನು ಉಭಯರೂ ಒಪ್ಪಿಕೊಂಡು ಮಹಿಳೆ ಕುಟುಂಬ ಪೋಷಕಿ ಮತ್ತು ಸ್ವಸ್ಥ ಸಮಾಜದ ಸ್ಥಾಪಕಿ ಎಂಬ ಗೌರವ ಎಲ್ಲೆಡೆ ಮೂಡಬೇಕು. `ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ' ಎಂಬಂತೆ ನಾರಿಯರು ಪೂಜನೀಯರೂ, ಸ್ವತಂತ್ರರೂ ಆದಾಗ ದೇವತೆಗಳೂ ಅಲ್ಲಿ ನೆಲೆಯಾಗಬಹುದು.
ಶಿಕ್ಷಣದ ವಿಕೇಂದ್ರೀಕರಣ ಅಧಿಕವಾಗುತ್ತಿದ್ದು ವಿಶ್ವವಿದ್ಯಾನಿಲಯ ಎಂಬ ಯೋಗ್ಯ ಪದ ಅರ್ಥ ಕಳೆದುಕೊಂಡಂತೆ ಭಾಸವಾಗುತ್ತದೆ. ಭಾಷೆಯ ಸಹಿತ ಒಂದೊಂದು ವಿಷಯಗಳಿಗೂ ಪ್ರತ್ಯೇಕವಾದ ಡೀಮ್ಡ್ ಯುನಿವರ್ಸಿಟಿಗಳು ಹೆಚ್ಚುತ್ತಿವೆ.
ಆರೋಗ್ಯದ ವಿಷಯದಲ್ಲಿ ಈಗ ಹಿಂದೆಗಿಂತ ಹೆಚ್ಚು ಸಮಸ್ಯೆಗಳು ತಲೆದೋರುತ್ತಿವೆ. ಹೊಸ ಹೊಸ ರೋಗಗಳು ಜನರ ಪ್ರಾಣ ಹಿಂಡುತ್ತಿವೆ. ದಶಕದ ಹಿಂದೆ ನಮ್ಮ ದೇಶದಲ್ಲಿ ಕಂಡರಿಯದ ವಿವಿಧ ವ್ಯಾಧಿಗಳು, ಜ್ವರಗಳು ನಮ್ಮನ್ನು ಸುತ್ತುವರಿಯುತ್ತಿವೆ.
ಮನೆಗೆ ಸೀಮಿತವಾಗಿರಬೇಕಿದ್ದ ಆಂತರಿಕ ಆಚರಣೆಗಳ ಭಿನ್ನತೆಗಳು, ಮತ ಭೇದಗಳು ಬೀದಿಗೆ ಬಂದು ಮತೀಯ ಸಂಘರ್ಷವನ್ನು ಕೆಲವೊಮ್ಮೆ ಉಂಟು ಮಾಡುತ್ತಿವೆ. ರಾಷ್ಟ್ರ ರಕ್ಷಣೆಗೆ ಸವಾಲಾಗಿ ವಿವಿಧ ಭಯೋತ್ಪಾದನಾ ಚಟುವಟಿಕೆಗಳು ಅಲ್ಲಲ್ಲಿ ಬೆಳೆಯುತ್ತಿವೆ. ಸಣ್ಣ ಸಣ್ಣ ಕಳ್ಳತನಗಳು ಕಡಿಮೆಯಾದರೂ ಹೈಟೆಕ್ ಮೋಸಗಳು ಹೆಚ್ಚಾಗುತ್ತಿವೆ. ಖೋಟಾ ಪದವಿಗಳು, ಖೋಟಾ ಹಣಕಾಸು ಸಂಸ್ಥೆಗಳು... ಮುಂತಾದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿದೆ. ತಜ್ಞರ ಮಾಹಿತಿ ಪಡೆಯದೆ ನದಿಗಳ ತಿರುವು ಯೋಜನೆ ಸಿದ್ಧವಾಗುತ್ತಿದೆ. ಇವೆಲ್ಲ ಸ್ವಾತಂತ್ರ್ಯದ ಪ್ರತಿಷ್ಠಾಪನೆಗೆ ಸಮಸ್ಯೆಗಳಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ತೊಂದರೆಗಳನ್ನು ನಿವಾರಿಸಬಹುದು.
ಸಾತ್ವಿಕ ಚಿಂತನೆಗಳನ್ನು ಜೀವನದ ಧ್ಯೇಯವಾಗಿಟ್ಟುಕೊಂಡ, ತಾಪಸೋತ್ತಮರ, ದಾರ್ಶನಿಕರ ಆದರ್ಶಗಳನ್ನು ರಾಷ್ಟ್ರೋತ್ಥಾನಕ್ಕಾಗಿ ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರ ಸಹಿತ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡಲಿ. ವಾಣಿಜ್ಯ, ಕೈಗಾರಿಕೆ, ಶಿಕ್ಷಣ ಕ್ಷೇತ್ರದಲ್ಲಿ ನಾವು ಈಗ ಸಾಧಿಸಿದ ಅಭಿವೃದ್ಧಿ, ಕೃಷಿ ಪರಿಸರದ ಉಳಿವಿನವರೆಗೂ ವಿಸ್ತರಿಸಲ್ಪಡಲಿ. ವ್ಯಕ್ತಿ ಪ್ರತಿಷ್ಠೆ ಇಲ್ಲದೆ ಸಾಂಘಿಕ-ಕ್ರಿಯಾಶೀಲತೆಯೇ ಆಧಾರವಾಗಿ ಸ್ವಾತಂತ್ರ್ಯದ ಸವಿ ಸರ್ವರಿಗೂ ಲಭ್ಯವಾಗಲಿ.
-ಎಲ್.ಎನ್. ಭಟ್ಟ ಮಳಿ
ರಾಜ್ಯ - ರಾಷ್ಟ್ರ
ಮಂಗಳೂರು: ನಾಳೆ ಸ್ವಾತಂತ್ರ್ಯೋತ್ಸವ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯಾದ್ಯಂತ ನಾಳೆ ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ವೇದಿಕೆ ಸಜ್ಜುಗೊಂಡಿದೆ.ಹತ್ತು ಹಲವು ವೈಶಿಷ್ಠ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವನ್ನು ಆಚರಿಸಲು ಜನತೆ ಅಣಿಯಾಗಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಈ ಬಾರಿ ಕಾರ್ಗಿಲ್ ಯೋಧರ ಸನ್ಮಾನಕ್ಕೆ ವ್ಯವಸ್ಥೆ ನಡೆಸಲಾಗಿದೆ. ಅಂತೂ ನಾಡು ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಿದ್ಧಗೊಳ್ಳುತ್ತಿದೆ.
ಪ್ರಾದೇಶಿಕ ಸುದ್ದಿ
ಮಂಗಳೂರು: ಇಂದಿಗೆ ವರ್ಷವೊಂದು ತುಂಬಿತು. ಗುರುಪುರ ಸಮೀಪದ ಉಳಾಯಿ ಬೆಟ್ಟು ಶಾಲಾ ವಾಹನ ದುರಂತ ಸಂಭವಿಸಿ ವರ್ಷಪೂರ್ತಿಯಾದರೂ ಇನ್ನೂ ಮನದಲ್ಲಿ ನೋವು ಮಡುಗಟ್ಟಿ ನಿಂತಿದೆ. ಆ.14,2008ರ ಮುಂಜಾನೆ ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಶಾಲಾ ವಾಹನವೊಂದು ನಿಯಂತ್ರಣ ಕಳಕೊಂಡು ಫಲ್ಗುಣೀ ನದಿಗೆ ಉರುಳಿಬಿದ್ದು 11ಮಂದಿ ಜಲಸಮಾಧಿಯಾದರು. ಇದು ಜಿಲ್ಲೆಯ ಮಟ್ಟಿಗೆ ದೊಡ್ಡ ದುರಂತವಾಗಿ ಕಂಡುಬಂತು. ಆ.15ರ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದ್ದಂತೆಯೇ ಇತ್ತ ದೊಡ್ಡ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ಇಡೀ ಜಿಲ್ಲೆ ನೋವಿನಿಂದ ಕಂಬನಿ ಮಿಡಿಯಿತು... ಮುಂದೆಂದೂ ಹೀಗಾಗದಿರಲೆಂದು ಆಶಯಿಸಿತು.
ಪ್ರಾದೇಶಿಕ ಸುದ್ದಿ
ಮಂಗಳೂರು: ಜಿಲ್ಲೆಯಲ್ಲಿ ಹಂದಿ ಜ್ವರ ಹತೋಟಿಯಲ್ಲಿದೆ. ಯಾವುದೇ ಭಯ ಬೇಡ. ಆದರೆ ಸೂಕ್ತ ಎಚ್ಚರಿಕೆ ವಹಿಸುವುದು ಮುಖ್ಯ ಹೀಗೆಂದವರು ಜಿಲ್ಲಾಧಿಕಾರಿ ಪೊನ್ನುರಾಜ್. ಅವರು ಸುದ್ದಿಗಾರರೊಂದಿಗೆ ಮಾತನಾಡಿ; ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿಗಳನ್ನು ವಾರಗಳ ಕಾಲ ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುವುದು. ನಂತರ ಅವರಲ್ಲಿ ರೋಗ ಇಲ್ಲ ಎಂಬ ಅಂಶ ದೃಢ ಪಟ್ಟ ಬಳಿಕ ಇತರ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು. ಈಗಾಗಲೇ ಒಟ್ಟು 7ಮಂದಿಗೆ ಎಚ್.1 ಎನ್.1 ಸೋಂಕು ದೃಢಪಟ್ಟಿದ್ದು ಈ ಪೈಕಿ 5ಮಂದಿ ಗುಣಮುಖರಾಗಿದ್ದಾರೆ.2ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ್ದಾರೆ. ಜನತೆಯಲ್ಲಿ ಜಾಗೃತಿ ಉಂಟಾಗಿದೆ. ಈ ಕಾರಣದಿಂದ ರೋಗ ಹತೋಟಿಗೆ ತರಲು ಸಹಾಯಕವಾಗಿದೆ ಎಂದರು.
ಪ್ರಾದೇಶಿಕ ಸುದ್ದಿ
ಇಂದು ಕೃಷ್ಣಾಷ್ಟಮಿ. ನಾಡಿನೆಲ್ಲಡೆ ವೈಭವದಿಂದ ಆಚರಿಸಲಾಗುತ್ತಿದೆ. ಈ ಶುಭಾವಸರದಲ್ಲಿ ನಮ್ಮೆಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ ಈ ಕನಸು ತಂಡದ ಪರವಾಗಿ ಶುಭಾಷಯಗಳು.
- ಸಂ.
ಭಕ್ತಿ ಸಿಂಚನ
ಜೀರ್ಣವಾದ ದೇವ ಮಂದಿರ.
ಗರ್ಭ ಗುಡಿಯ ಗೋಡೆಗಳು ಮಾತ್ರ ಉಳಿದಿವೆ. ಮಂಟಪ, ಮುಂಭಾಗದ ಗೋಪುರ, ಕೊಡಿಮರದ ಕಲ್ಲಿನ ಪೀಠಗಳ ಸ್ಪಷ್ಟ ಕುರುಹುಗಳಿವೆ. ಗುಡಿಯ ಗೋಡೆಯನ್ನೇ ಆಧಾರವಾಗಿಸಿಕೊಂಡು ಮರವೊಂದು ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ಈ ದೇವಾಲಯ ಎತ್ತರದ ಪ್ರದೇಶದಲ್ಲಿ ಹಸಿರ ಸೊಬಗಿನ ನಡುವೆ ಶಿಥಿಲ ಸ್ಥಿತಿಯಲ್ಲಿಯೂ ಕಂಗೊಳಿಸುತ್ತಿದೆ. ಗದ್ದೆ ತೋಟಗಳನ್ನು ದಾಟಿ ಬೆಟ್ಟವನ್ನು ಹತ್ತಿ ಒಳಗೆ ಪ್ರವೇಶಿಸುತ್ತಿದ್ದಂತೆ ಭಕ್ತಿ ಭಾವ ತಾನಾಗಿ ಸ್ಪುರಿಸುತ್ತದೆ. ಕೈಗಳು ಒಟ್ಟು ಸೇರುತ್ತವೆ... ಅಚ್ಚರಿ , ಭಯ, ವಿಷಾಧ, ಅಸಹಾಯಕ ಭಾವಗಳು ಸಂಚರಿಸಿ ಮರೆಯಾಗುತ್ತವೆ. ಗುಡಿಯೊಳಗೆ ದೇವನಿದ್ದಾನೋ ಇಲ್ಲವೋ?!
ಇದ್ದಾಳೆ... ಪ್ರಸನ್ನ ಮುಖದ ದುರ್ಗೆ ತಾಳ್ಮೆಯಿಂದ ಕಾದುನಿಂತಿದ್ದಾಳೆ. `ಕಾದಿರುವಳು ಜನನಿ ಭಕ್ತರು ಬರುವರೆಂದು'ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಪಂಜಕ್ಕೆ ಸೇರುವ ಮಾರ್ಗದಲ್ಲಿ 13ಕಿ.ಮೀ.ದೂರದಲ್ಲಿದೆ ಬಳ್ಪ ಗ್ರಾಮ. ರಾಜರಸೇನೆಯ ಬೀಡು ಪ್ರದೇಶವಾಗಿ , ಯುದ್ಧ ವಿದ್ಯೆಯ ತರಬೇತಿ ಕೇಂದ್ರವಾಗಿ ಬಲಪಟ್ಟಣವೆಂದು ಐತಿಹಾಸಿಕವಾಗಿ ಪ್ರಸಿದ್ಧವಾದ ಸ್ಥಳ. ಕುಮಾರ ಪರ್ವತದ ತಪ್ಪಲಿನಲ್ಲಿ ಹಸಿರ ಕಾಡಿನ ನಡುವೆ ಇದೆ ಈ ಹಳ್ಳಿ. ಒಂದೆಡೆ ಕುಮಾರಧಾರಾ ನದೀ , ಇನ್ನೊಂದೆಡೆ ಸುತ್ತುವರೆದು ನಿಂತಿರುವ ಬಂಟಮಲೆ ಪರ್ವತ. ನಡುವಿನ ಬಯಲಲ್ಲಿ ಜನವಸತಿ...ಗದ್ದೆ ತೋಟಗಳು ಹಾಗೂ ಹಲವಾರು ದೇವಾಲಯಗಳು ದೈವಸ್ಥಾನಗಳು. ಈ ಊರಿಗೆ, ಊರಿನ ಪ್ರಧಾನ ದೇವತೆ ತ್ರಿಶೂಲಿನಿ ದೇವಿಗೆ ಕದಂಬರಿಂದ ಆರಂಭಿಸಿ ಹೊಯ್ಸಳ, ವಿಜಯ ನಗರ, ಕೆಳದಿ, ಕೊಡಗುಗಳ ರಾಜವಂಶಗಳ ಸಂಬಂಧವಿತ್ತು. ಶೈವ ಶಾಕ್ತ ಹಾಗೂ ನಾಥ ಯೋಗಿಗಳ ಪಂಥದ ಅನುಯಾಯಿಗಳು ಉಪಾಸನೆ , ಸಾಧನೆ ಮಾಡಿರುವ ಪವಿತ್ರ ಮಹಿಮಾವಂತ ಕ್ಷೇತ್ರವಿದು.
ಇಂತಿಪ್ಪ ಪುಣ್ಯತರ ಪಾವನ ಗ್ರಾಮದಲ್ಲಿ ದುರ್ಗೆಯ ಪ್ರಾಚೀನ ದೇವಸ್ಥಾನ. ಕೆಂಪು ಮುರಕಲ್ಲಿನಲ್ಲಿ ಕೆತ್ತನೆ ಕೆಲಸಗಳಿಂದ ಕೂಡಿರುವ ಸುಂದರವಾದ ಕಟ್ಟಡ ಸರ್ವಾಂಗ ಪರಿಪೂರ್ಣವಾಗಿದ್ದು ನವಾಹ ಉತ್ಸವ ನಡೆಯುತ್ತಿತ್ತಂತೆ. (9ನೇ ಶತಮಾನದ ಕದಂಬ ರಾಜ ಭೋಗವರ್ಮನ ಶಾಸನದಂತೆ ಉಂಬಳಿಗಳ ದಾನದ ಉಲ್ಲೇಖವಿದೆ.) ಶ್ರೀ ದುರ್ಗೆಯ ಬಿಂಬ ಸರಳ ಸುಂದರ. ಸೂಕ್ಷ್ಮವಾದ ಕೆತ್ತನೆಗಳಿಲ್ಲ. ಆದರೆ ಅವಶ್ಯಕವಾದ ಎಲ್ಲಾ ಲಕ್ಷಣಗಳನ್ನೂ ಆಭರಣಗಳನ್ನೂ ಹೊಂದಿವೆ. ಮುಖದಲ್ಲಿ ಬೆಳದಿಂಗಳು ಬೀರುವಂತಹ ಪ್ರಸನ್ನತೆ.
ಕಾಲದ ವಿಷಮ ಗತಿಯಿಂದ, ಕಾಡಾನೆಗಳ ಉಪಟಳದಿಂದ ಕಟ್ಟಡಗಳು ಬಿದ್ದವು. ಪೂಜಾದಿ ವಿನಿಯೋಗಗಳು ಕ್ಷೀಣವಾದವು. ಜನರ ಅವಗಣನೆಗೆ ಗುರಿಯಾಯಿತು. 80-90 ವರ್ಷಗಳಷ್ಟು ಕಾಲ ಮಳೆಬಿಸಿಲೆನ್ನದೆ ಮುಕ್ತ ಪ್ರಕೃತಿಯಲ್ಲಿ ದೇವಸ್ಥಾನ ನಿಂತಿತ್ತು. ಕಾಲಕಳೆದಂತೆ ಪಾಳುಬಿತ್ತು. ಆದರೆ ಜಗನ್ಮಾತೆ ಮಾತ್ರ ಸೃಷ್ಟಿ ಸ್ಥಿತಿ ಸಂಹಾರಗಳೆಲ್ಲ ನನ್ನದೇ ಕಾರ್ಯ. ಬೇಕೆಂದಾಗ ಮಾಡಿಸಿಕೊಳ್ಳುತ್ತೇನೆ. ಬೇಡವಾದಾಗ ಉರುಳಿಸುತ್ತೇನೆ ಎಂಬುದನ್ನು ಸೂಚಿಸುವಂತೆ ಮಾಡು ಬಿದ್ದ ಗುಡಿಯಲ್ಲಿ ನಗುತ್ತಾ ನಿಂತಿದ್ದಾಳೆ.
ಬಳ್ಪ ,ಮೋರೋಜ ಮನೆತನದವರ ಅಧೀನದಲ್ಲಿರುವ ಈ ಪ್ರಾಚೀನ ಮಂದಿರ ಈಗ ಉದ್ಧಾರದ ಹಂತದಲ್ಲಿದೆ. ಶೃಂಗೇರಿಯ ಪೂಜ್ಯ ಜಗದ್ಗುರುಗಳ ಆಶೀರ್ವಾದದೊಡನೆ ಕಾರ್ಯಾರಂಭವಾಗಿದೆ. ಶಿಲ್ಪ ಪರಂಪರೆಯ ಕುರುಹಾದ ಹಳೆಯ ವಿಗ್ರಹವನ್ನು ರಕ್ಷಿಸಿ ಇಡಲಾಗಿದೆ. ಜೀರ್ಣಮಂದಿರವನ್ನು ಕೆಡವಿ ಅದೇ ಮಾದರಿಯಲ್ಲಿ ಕೆಂಪು ಮುರದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ದೇವರ ಭಕ್ತಿ ಎಂಬ ದೃಷ್ಟಿಯಿಂದ ಅಲ್ಲವಾದರೂ ಪರಂಪರೆಯ ಉಳಿವು ಎಂಬುದಕ್ಕಾಗಿ ಈ ಕಾರ್ಯಕ್ಕೆ ಜನರ ಸಹಾಯ ಸಹಕಾರ ಅತ್ಯವಶ್ಯ. ಆಸಕ್ತರು ಇವರನ್ನು ಸಂಪರ್ಕಿಸಿ : ಎಂ.ವಿ ಶ್ರೀವತ್ಸ. 9880300639.
- ಶ್ರೀ ವಾಗೀಶ ಎಸ್.ಶಾಸ್ತ್ರಿ.
ಸಂಸ್ಕೃತ ಉಪನ್ಯಾಸಕರು.
ಗೋವಿಂದ ದಾಸ ಕಾಲೇಜು, ಸುರತ್ಕಲ್.
ಕಲೆ -ಸಾಧನೆ
ಅವನ ಕಾಲ್ಗೆಜ್ಜೆಯ ಸದ್ದೇ ಆಗಿರುತ್ತದೆ. ಹಾಗಾಗಿ ಹಲವು ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ ಇರುವಾಗ, ಹವ್ಯಾಸಿಗಳಿಗೆ ಕೇವಲ ಇದು ಹವ್ಯಾಸ, ಹಾಗಿರುವಾಗಲೇ ಕಲೆಯ ಬಗ್ಗೆ ಹೇಳುವಾಗ ಹವ್ಯಾಸಿಗಳಿಗೆ ಇರುವ ಅಥವಾ ಇರಬೇಕಾದ ಜವಾಬ್ದಾರಿ ಅಧಿಕ ಅಲ್ಲವೇ? ಬಹುಶ ಈಗಿನ ಕಾಲಮಾನಕ್ಕೆ ಅನುಸರಿಸಿ ಹವ್ಯಾಸಿಗಳೇ ಕಲೆಯ ಜೀವನಾಡಿ ಎನ್ನಬಹುದು. ಹವ್ಯಾಸಿಗಳಿಗೆ ಇದು ಕೇವಲ ಹವ್ಯಾಸ ಆದುದರಿಂದ ಅವರಿಂದ ಹೆಚ್ಚು ಅರ್ಥಪೂರ್ಣ ನಿರ್ವಹಣೆಯನ್ನು ಕಲಾಕ್ಷೇತ್ರ ನಿರೀಕ್ಷಿಸುತ್ತದೆ.
ಕೆಲವು ದಿನಗಳ ಮೊದಲು ಮಿತ್ರರೊಬ್ಬರು ಕೇರಳದ ಹವ್ಯಾಸಿ ಕಲಾವಿದರ ಕಥಕ್ಕಳಿ ನೋಡಿ ಆ ಅನುಭವವನ್ನು ನನ್ನಲ್ಲಿ ಹಂಚಿಕೊಂಡಿದ್ದರು. ಆದಿನದ ಕಥಕ್ಕಳಿ ಕಾರ್ಯಕ್ರಮದ ಶಿಸ್ತು ಮತ್ತು ಕಥಕ್ಕಳಿಯ ಬಗ್ಗೆ ತಿಳಿಯದೆ ಇರುವವನ್ನು ಕೂಡ ಆ ಪರಿಧಿಯೊಳಗೆ ತರುವ ಪರಿಸರ ನಿರ್ಮಾಣ ಇವು ಪ್ರಧಾನವಾಗಿ ಮೊದಲ ಅಂಶ. ವೇದಿಕೆಯ ಹಿನ್ನೆಲೆ. ವೇದಿಕೆಯ ಪರಿಕರಗಳು. ಮತ್ತು ಸಭಾಂಗಣದ ವ್ಯವಸ್ಥೆ ಎಲ್ಲವೂ ಅದಕ್ಕೆ ಅನುಯೋಜ್ಯವಾಗಿ ನಡೆದುಕೊಂಡು ಬಂದಂತೆ ಇತ್ತು.
ಆದುದರಿಂದ ಕಾರ್ಯಕ್ರಮ ಆರಂಭವಾಗುವ ಮೊದಲೇ ಅದರಬಗ್ಗೆ ಪ್ರಭಾವಿತರಾಗಿ ಬಿಡುತ್ತೇವೆ.ಇಂತಹ ವಾತವರಣ ಕಲೆಯ ತವರೂರಲ್ಲಿ ಉಂಟುಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಅದು ಸ್ವನಿರ್ಮಿತ. ಇದು ಕೇವಲ ಒಂದು ಉದಾಹರಣೆ ಮಾತ್ರ.. ಇದೆ ರೀತಿ ಯಕ್ಷಗಾನದಲ್ಲಿ ಸಾಧ್ಯವಿಲ್ಲವೇ. ಯಾವುದನ್ನು ಅನುಕರಿಸುತ್ತೆವೋ ಅದು ಪೂರ್ಣವಾಗಿ ದಾರಿ ತಪ್ಪಿದಂತೆ ಅನ್ನಿಸಿಬಿಡುತ್ತದೆ. ಕೆಲವೊಮ್ಮೆ ಇದೆಲ್ಲ ಆಭಾಸಗಳಿಗೆ ಎಡೆಮಾಡಿಕೊಡುತ್ತವೆ. ಕೆಲವು ಕಡೆ ಹಿಮ್ಮೆಳದವರು ಕೂರುವ ವ್ಯವಸ್ಥೆಯೇ ಸರಿಯಿರದೆ ಏನೋ ಒಂದು ಹರಕೆ ಸಲ್ಲಿಸಿದಂತೆ ಇರುವುದು. ಯಕ್ಷಗಾನ ಪಾತ್ರಗಳು ಮುಖ್ಯವಾಗಿ ಕೂರುವ ಆಸನ ಸಿಂಹಾಸನ ಯಾವುದೊ ಒಂದು ಪ್ಲಾಸ್ಟಿಕ್ ಕುರ್ಚಿ ಇಟ್ಟಿರುತ್ತಾರೆ ವೇಷಧಾರಿ ಅದರಲ್ಲಿ ಕೂರಬೇಕಾದರೆ ಭಯ ಪಟ್ಟೇ ಕೂರುವಂತ ಸ್ಥಿತಿ. ಕೆಲವೊಮ್ಮೆ ಕುಳಿತನೆಂದರೆ ಆಸನ ಅವನ ಸಹಿತ ಎದ್ದು ಬಂದು ಬಿಡುತ್ತವೆ.ಇಲ್ಲಿ ಅಷ್ಟಾದರೂ ಸಿಗುವುದಲ್ಲ ಎಂದು ತೃಪ್ತಿ ಪಟ್ಟುಕೊಳ್ಳುವ ಸಂಭವವೇ ಅಧಿಕ. ಇದೆಲ್ಲ ಕೆಲವೊಮ್ಮೆ ತೀರ ಅಭಾಸಗಳಿಗೆ ಎಡೆ ಮಾಡಿಕೊಡುತ್ತವೆ.
ಯಕ್ಷಗಾನ ಬೆಳೆದು ಬಂದ ಪರಿಸರದಲ್ಲಿ ಒಂದು ಆಟ ನೋಡಿದವನಿಗೆ ಏನೂ ಅನ್ನಿಸದೇ ಇರಬಹುದು ಆದರೆ ಹೊಸತಾಗಿ ಯಕ್ಷಗಾನ ನೋಡುವವ ಪೂರ್ಣವಾಗಿ ವಿಮುಖನಾಗುವ ಸ್ಥಿತಿ.. ಕೇವಲ ಬಣ್ಣ ಬಣ್ಣದ ಝಗ ಮಘಿಸುವ ವೇಷ ಭೂಷಣದಿಂದ ಚೆಂಡೆಯ ಸದ್ದಿನಿಂದ ಸೆಳೆದಿಡಲು ಸಾಧ್ಯವೇ? ಇದ್ದರೂ ಅದು ಕೇವಲ ತಾತ್ಕಾಲಿಕ ಆಗುವ ಸಂಭವವೇ ಹೆಚ್ಚು.
ಎಲ್ಲವನ್ನು ಹೊಂದಿಸಿಕೊಳ್ಳುವಾಗ ಸಂಘಟಕ ಸುಸ್ತಾಗಿಬಿಡುತ್ತಾನೆ. ಇಷ್ಟಾದರೂ ವ್ಯವಸ್ಥೆಯಾಯಿತಲ್ಲ ಎಂಬ ತೃಪ್ತಿಯಿಂದ ಕಾರ್ಯಕ್ರಮ ಹೇಗೋ ಮುಂದುವರಿಯುತ್ತದೆ. ಕಲಾವಿದರೂ ಅಂತೆ ಹಲವು ಸಮಸ್ಯೆಗಳನ್ನು ಎದುರಿಸಿಯೇ ಸಿದ್ದರಾಗುವ ಅನಿವಾರ್ಯತೆ. ಬಿಡುವಿಲ್ಲದ ವೃತ್ತಿ ಚಟುವಟಿಕೆಯಿಂದ ದೈಹಿಕವಾಗಿಯೂ ಸುಸ್ತಾಗಿರುತ್ತಾರೆ. ಹಾಗಾಗಿ ಎಷ್ಟು ಸಾಧ್ಯವಾಯಿತೋ ಅಷ್ಟು ಎಂಬಲ್ಲಿಗೆ ತೃಪ್ತಿಪಡುವ ಅನಿವಾರ್ಯತೆ ಇರುವುದು ಕೂಡ ಸಹಜ.
ಯಕ್ಷಗಾನವೆಂಬ ಹವ್ಯಾಸ..
ಈ ಯಕ್ಷಗಾನ ತೀರ ಅಪರಿಚಿತವಾಗಿರುವ ಒಂದು ಸ್ಥಳದಲ್ಲಿ ತೆಂಕು ಹವ್ಯಾಸಿಗಳ ಒಂದು ಪ್ರದರ್ಶನದಲ್ಲಿ ಚೌಕಿ ಪೂಜೆಯಾಗಿ ಪೀಠಿಕೆ ಆರಂಭಿಸಲು ಹಿಮ್ಮೇಳದವರು ವೇದಿಕೆಯೇರಿ ಭಾಗವತರು ಮದ್ದಲೆಯವರು ಕುಳಿತು ಚೆಂಡೆಯವರು ನಿಂತು ಪೀಠಿಕೆ ಆರಂಭಿಸಿದರು. ಆವಾಗ ಅಲ್ಲೇ ಇದ್ದ ಒಬ್ಬ ಕುರ್ಚಿಯೊಂದನ್ನು ತಂದು ಚೆಂಡೆಯವರನ್ನು " ಯಾಕೆ ಸಾರ್ ನಿಂತೇ ಇದ್ದೀರಾ..ಕುಳಿತುಕೊಳ್ಳಿ ಸಾರ್ " ಎಂದು ಕೂರುವುದಕ್ಕೆ ಒತ್ತಾಯ ಮಾಡಿದ್ದೂ ನಂಗೆ ಇನ್ನೂ ನೆನಪಿದೆ. ಪಾಪ ಅವನಿಗೇನು ಗೊತ್ತು ಚೆಂಡೆಯವರು ನಿಂತೇ ಬಾರಿಸುವುದು ಅಂತ. ಹೀಗೆ ಅತಿ ವ್ಯತಿರಿಕ್ತ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನ ಅತಿ ದೊಡ್ಡ ಸವಾಲಿನ ಕೆಲಸ. ಮತ್ತು ಅಷ್ಟೇ ಜಾಗರೂಕರಾಗಿರಬೇಕಾದ ಸಮಯವೂ ಹೌದು. ಈಗಿನ ಕಾಲದಲ್ಲಿ ಯಾವುದೇ ಒಂದು ವಿಷಯ ಪ್ರಸ್ತುತ ಪಡಿಸುವುದಿದ್ದರೆ ಅದಕ್ಕೆ ತಕ್ಕುದಾದ ವಾತವರಣವನ್ನು ಮೊದಲೇ ನಿರ್ಮಿಸುವುದು ಅನಿವಾರ್ಯ.
ಅಂತೆ ಕಲೆಯಬಗ್ಗೆ ಏನೊಂದೂ ತಿಳಿಯದಲ್ಲಿ ಮೊದಲೇ ಅದರಬಗ್ಗೆ ಗೌರವ ಬರುವಂತೆ ಪರಿಸರ ನಿರ್ಮಾಣ ಅತಿ ಅಗತ್ಯ. ಏನೋ ಒಂದು ಹರಕೆ ಸಂದಾಯ ಮಾಡಿ ಯಕ್ಷಗಾನ ಸೇವೆ ಮಾಡಿದೆವು ಎಂದು ಧನ್ಯರಾಗುವ ಬದಲು ಮಾಡಿದ ಕಾರ್ಯಕ್ರಮ ಹೇಗಾಯಿತು ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳಿತಲ್ಲವೇ. ರಾತ್ರಿ ಯಿಂದ ಬೆಳಗಿನ ಜಾವದ ವರೆಗೆ ನಡೆಯುವ ಯಕ್ಷಗಾನ ಪ್ರದರ್ಶನಕ್ಕೂ ಈ ಕಾಲಮಿತಿಯ ಯಕ್ಷಗಾನಕ್ಕೂ ಹಲವು ಭಿನ್ನವಾದ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪ್ರವೇಶವಾಗುವಾಗ ಸರಿ ಸುಮಾರು ನಡು ರಾತ್ರಿ ಕಳೆದು ೧-೨ ಗಂಟೆಯಾಗುತ್ತದೆ ಆವಾಗ ಸಾಮಾನ್ಯವಾಗಿ ಪ್ರೇಕ್ಷಕ ನಿದ್ದೆಗೆ ಶರಣಾಗುವ ಹೊತ್ತು ಹಾಗೆಂದು ಬಡಿದೆಬ್ಬಿಸುವಂತೆ ಮಹಿಷನ ಪ್ರವೇಶ ಆದರೆಯೇ ಆಟಕ್ಕೆ ಒಂದು ಸೊಗಸು.ಸಭೆಯಲ್ಲಿ ಕಲರವ ಉಂಟು ಮಾಡಿ ಮಹಿಷ ಪ್ರವೇಶ ಸಾಧಾರಣ ಒಂದು ಸಂಪ್ರದಾಯ.
ಕಾಲಮಿತಿಯಲ್ಲಿ ಅಂತಹ ಭಾಗವನ್ನು ಆದಷ್ಟು ಮೊಟಕು ಗೊಳಿಸುವುದು ಒಳ್ಳೆಯದಲ್ಲವೇ? ಪ್ರೇಕ್ಷಕರೊಂದಿಗೆ ಅನಗತ್ಯ ವಿನೋದವಾಡಿ..ಒಂದು ರೀತಿ ಕಬ್ಬಡ್ಡಿಯಾಡಿ ಕೊಂಡು ವ್ಯರ್ಥ ರಂಜನೆಯನ್ನುಂಟು ಮಾಡಿಕೊಳ್ಳುವುದು ತೀರ ಹಾಸ್ಯಾಸ್ಪದವಾಗಿ ಕೆಲವೊಮ್ಮೆ ಕಂಡು ಬರುವುದು. ತಾತ್ಕಾಲಿಕ ಮನರಂಜನೆಯಾದರೂ ಒಟ್ಟು ಶಿಸ್ತಿನಿಂದ ಅದು ದೂರವಾಗುವ ಸಂಭವವೇ ಹೆಚ್ಚು. ಪ್ರೇಕ್ಷಕರು ಏನು ಬಯಸುತ್ತಾರೋ ಅದನ್ನು ಕೊಡುವಂತಾಗಬಾರದು. ಪರ್ಯಾಯವಾಗಿ ಕಲೆಯ ಅಂತರಂಗದ ತಿರುಳೇನಿದೆ ಅದರ ದರ್ಶನ ಮಾಡಿಸಬೇಕು.
ಇವುಗಳೆಲ್ಲ ಹವ್ಯಾಸಿಗಳಿಂದ ಖಂಡಿತ ಸಾಧ್ಯವಿದೆ. ಯಾಕೆಂದರೆ ಇದೇನೂ ಅವರಿಗೆ ಉದ್ಯೋಗವಲ್ಲ.. ಇದರಿಂದ ಬರುವ ಆದಾಯಕ್ಕೆ ಕಾಯುವ ಕೈಗಳಿಲ್ಲ. ಸಂಬಳ ಕೊಡುವ ಮೇಳದ ಯಜಮಾನನ ನಿಬಂಧನೆ ಕಟ್ಟುಪಾಡುಗಳಿಲ್ಲ. ಹೊಸತನ್ನೇ ಆವಿಷ್ಕರಿಸಬೇಕೆನ್ನುವ ತುಡಿತವಿರಿಸಿಕೊಳ್ಳಬೇಕಾಗಿಲ್ಲ.
ರಾಜ್
ಬೆಂಗಳೂರು
ಪ್ರಾದೇಶಿಕ ಸುದ್ದಿ
ದಿನ ನಿತ್ಯದ ಪತ್ರಿಕಾ ವರದಿಗಳ ದೃಶ್ಯ ವಿಶ್ಲೇಷಣೆ
ನಾಗೇಂದ್ರ ಮತ್ತು ಹರೀಶ್ ಆದೂರ್
ನಮ್ಮ ಟಿವಿ ಕೃಪೆ ಮುಂದೆ ಓದಿ
ಪ್ರಾದೇಶಿಕ ಸುದ್ದಿ
ಮಂಗಳೂರು;ಇಂದು ಬೆಳಗ್ಗೆ 11 ಘಂಟೆಯ ಸುಮಾರಿಗೆ ಮಂಗಳೂರಿನ ಜ್ಯೋತಿ ಸಮೀಪದ ಟ್ರೇಡ್ ಸೆಂಟರ್ ಎಂಬ ಏಳು ಮಹಡಿಯ ಕಟ್ಟಡದಲ್ಲಿ ಬೆಂಕಿ ಹತ್ತಿಕೊಂಡಿರುವುದು ವರದಿಯಾಗಿದೆ. ಕಟ್ಟದ 4ನೇ ಅಂತಸ್ತಿನಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು 100 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಯಾಗಿದ್ದರು.
ಅಗ್ನಿಶಾಮಕ ದಳ ಮತ್ತು ಪೋಲೀಸರ ಯಶಸ್ವ ಕಾರ್ಯಚರಣೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. 3 ಘಂಟೆಯವರೆಗೆ ಜ್ಯೋತಿ ಹಾಗೂ ಬಂಟ್ಸ್ ಹಾಸ್ಟೇಲ್ ಬಳಿ ರಸ್ತೆ ಸಂಚಾರದಲ್ಲಿ ತೊಡಕು ಉಂಟಾಗಿತ್ತು

ಫೋಟೋ - ಸತೀಶ್ ಇರಾ
ಶಿಕ್ಷಣ
`ಕಲಿಕೆಯ ಸಂದರ್ಭದಲ್ಲಿ ಕೇವಲ `ಪದವಿ' ಪ್ರಮಾಣ ಪತ್ರ ಪಡೆದರಷ್ಟೇ ಸಾಲದು ವೃತ್ತಿಯಲ್ಲಿ ಆಳವಾದ ಹಾಗೂ ಅಪಾರವಾದ ಶ್ರದ್ಧೆ, ಅನುಭವವಿದ್ದದ್ದೇ ಆದಲ್ಲಿ ಆ ವಿದ್ಯಾರ್ಥಿ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ' ಈ ಮಾತನ್ನು ಹೇಳಿದವರು ಮೂಡಬಿದಿರೆ ಸಮೀಪದ ಬನ್ನಡ್ಕದಲ್ಲಿದ್ದು ವಿಶ್ವಖ್ಯಾತಿಯನ್ನು ಪಡೆದ ಜಿ. ರಾಮಕೃಷ್ಣ ಆಚಾರ್.
ವಿದ್ಯಾರ್ಥಿಗೆ ಏನು ಕಲಿಸಬೇಕೋ ಅದನ್ನು ಸಮರ್ಪಕವಾಗಿ ಕಲಿಸುವುದು ನಮ್ಮ ಉದ್ದೇಶವಾಗಿದೆ. ಪ್ರಾಯೋಗಿಕ ಜ್ಞಾನವನ್ನು ತಿಳಿಸುವುದರೊಂದಿಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದಂತಹ ಅಂಶಗಳನ್ನು ತಿಳಿಸಲಾಗುವುದು ಎಂದು ಅವರು ಹೇಳುತ್ತಾರೆ. ಇದನ್ನು ಪ್ರತ್ಯಕ್ಷವಾಗಿ ಅವರ ಶಿಕ್ಷಣ ಸಂಸ್ಥೆಯಲ್ಲಿ ಕಾಣಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿ 13ರ ಮೂಡಬಿದಿರೆ - ಕಾರ್ಕಳ ರಸ್ತೆಯಲ್ಲಿ ಸಾಗುವಾಗ `ಬನ್ನಡ್ಕ' ಎಂಬಲ್ಲಿ ರಸ್ತೆಯ ಎಡಭಾಗದಲ್ಲಿ ವೈಭವದಿಂದ ತಲೆಯೆತ್ತಿನಿಂತಿದೆ ಎಸ್.ಕೆ.ಎಫ್ ಸಮೂಹ ಶಿಕ್ಷಣ ಸಂಸ್ಥೆ. ಇಲ್ಲಿರುವ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಾಯೋಗಿಕ ಜ್ಞಾನದೊಂದಿಗೆ ವೃತ್ತಿಕೌಶಲ್ಯವನ್ನು ಪಡೆಯುತ್ತಿದ್ದಾರೆ. ಶಿಸ್ತಿಗೆ ಪ್ರಾಮುಖ್ಯತೆ ನೀಡುತ್ತಾ, ವೃತ್ತಿ ತರಬೇತಿ ನೀಡಲಾಗುತ್ತದೆ. ಈ ಶಿಕ್ಷಣ ಸಂಸ್ಥೆಯು ಕಳೆದ 2ದಶಕಗಳಿಂದ ಪ್ರಸಿದ್ಧಿ ಪಡೆದ ಎಸ್.ಕೆ.ಎಫ್. ಬಾಯ್ಲರ್ಸ್ ಮತ್ತು ಡ್ರೈಯರ್ಸ್ ಉತ್ಪಾದನಾ ಘಟಕದ ಅಂಗ ಸಂಸ್ಥೆಯಾಗಿ ಇಂದು ಬೆಳೆಯುತ್ತಿದೆ...ಜೊತೆಗೆ ಬೆಳಗುತ್ತಿದೆ.
ಕೇಂದ್ರ ಸರಕಾರದ ಎನ್.ಸಿ.ವಿ.ಟಿ ಸಂಯೋಜನೆಯನ್ನು ಹೊಂದಿದ ಕೈಗಾರಿಕಾ ತರಬೇತಿ ಕೇಂದ್ರ ಇದಾಗಿದೆ. `ತರಬೇತಿ - ಉತ್ಪಾದನೆ' ಎಂಬ ಧ್ಯೇಯದೊಂದಿಗೆ 5ವಿಷಯಗಳಲ್ಲಿ ಇಲ್ಲಿ ವೃತ್ತಿ ತರಬೇತಿಯನ್ನು ನುರಿತ ತಂತ್ರಜ್ಞರ ಸಹಕಾರದೊಂದಿಗೆ ನೀಡಲಾಗುತ್ತಿದೆ. ಈ ತರಬೇತಿ ಕೇಂದ್ರದ ವೈಶಿಷ್ಟ್ಯತೆಯೆಂದರೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು `ಕ್ಯಾಂಪಸ್ ಇಂಟರ್ವ್ಯೂ'ಗಳನ್ನು ಈ ಸಂಸ್ಥೆಯಲ್ಲಿ ಹಮ್ಮಿಕೊಳ್ಳುತ್ತಿದ್ದು ಇಲ್ಲಿ ತರಬೇತಿ ಪಡೆದ ತರಬೇತುದಾರರು ತರಬೇತಿ ಮುಗಿದು ಹೊರಬರುವಷ್ಟರಲ್ಲಿ ಉತ್ತಮ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. ವಿವಿಧ ಹೆಸರಾಂತ ಕಂಪೆನಿಗಳಲ್ಲಿ ಉತ್ತಮ ಸಂಭಾವನೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ನಿರಂತರವಾಗಿ ಉದ್ಯಮಿಗಳು ಆಗಮಿಸುತ್ತಿದ್ದಾರೆ. ತಮ್ಮ ಬೃಹತ್ ಕೈಗಾರಿಕೋದ್ಯಮಗಳನ್ನು ಈ ಪ್ರದೇಶದಲ್ಲಿ ಸ್ಥಾಪಿಸುವ ಮೂಲಕ ಹಲವಾರು ಮಂದಿಯ ಉದ್ಯೋಗಕ್ಕೆ ಕಾರಣರಾಗುತ್ತಿದ್ದಾರೆ. ಮಂಗಳೂರು ಎಸ್.ಇ.ಝೆಡ್, ಒ.ಎನ್.ಜಿ.ಸಿ, ಪಿ.ಸಿ.ಪಿ.ಆರ್.ಐ ಮೊದಲಾದ ಉದ್ಯಮಗಳು ಜಿಲ್ಲೆಗೆ ಕಾಲಿಡುತ್ತಿವೆ. ಇದರಿಂದಾಗಿ ಭವಿಷ್ಯದ ಉದ್ಯೋಗಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯವನ್ನು ಈ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಇಲೆಕ್ಟ್ರಿಶಿಯನ್, ಫಿಟ್ಟರ್, ರೆಫ್ರಿಜರೇಶನ್ ಅಂಡ್ ಏರ್ ಕಂಡೀಷನಿಂಗ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಮೆಕ್ಯಾನಿಕ್ ಇಲೆಕ್ಟ್ರಾನಿಕ್ಸ್ ಈ ತರಬೇತಿಗಳ ಜೊತೆ ಜೊತೆಗೆ ಕೃಷಿ ಆಧಾರಿತ ಕೈಗಾರಿಗಳನ್ನೂ ಇಲ್ಲಿ ಅಭ್ಯಸಿಸಬಹುದಾಗಿದೆ.
ಉದ್ಯಮದೊಂದಿಗೆ ತರಬೇತಿ, ಕಲಿಕೆಯೊಂದಿಗೆ ಗಳಿಕೆ, ಪ್ರತಿಭಾವಂತರಿಗೆ ಶುಲ್ಕ ವಿನಾಯಿತಿ, ಪ್ರತಿಭಾನ್ವಿತ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಾಯ್ಲರ್ ತಯಾರಿಕೆಯಲ್ಲಿ ತರಬೇತಿ, ನುರಿತ ಬೋಧಕ ವರ್ಗ, ಪಠ್ಯಪೂರಕ ಚಟುವಟಿಕೆಗಳು, ಸುಸಜ್ಜಿತ ವಸತಿ ನಿಲಯದ ಸೌಲಭ್ಯ ಇವೆಲ್ಲವೂ ಎಸ್.ಕೆ.ಎಫ್ ಐ.ಟಿ.ಐ.ನಲ್ಲಿ ಕಾಣಸಿಗುತ್ತವೆ.
ದೇಶದಲ್ಲಿಯೇ ಪ್ರಥಮವಾಗಿ ರೈಸ್ ಮಿಲ್ ಟೆಕ್ನಾಲಜಿಯಲ್ಲಿ ಟ್ರೇಡ್ ಸಟರ್ಿಫಿಕೇಟ್ ಮತ್ತು ಡಿಪ್ಲೋಮಾ ತರಬೇತಿ ನೀಡುವ ಯೋಜನೆ ಈ ಸಂಸ್ಥೆಗಿದೆ. ಆಹಾರ ಧಾನ್ಯಗಳ ನಿರ್ವಹಣೆ, ಮಾರುಕಟ್ಟೆ ವಿಷಯದಲ್ಲಿ ಬಿ.ಬಿ.ಎಂ ಮತ್ತು ಎಂ.ಬಿ.ಎ ಕೋರ್ಸ್ಗಳನ್ನು ಆರಂಭಿಸುವ ಉದ್ದೇಶ ಸಂಸ್ಥೆಯ ಅಧ್ಯಕ್ಷರದ್ದು. ಐದು ಎಕ್ಕರೆ ಜಾಗದಲ್ಲಿ ಬಹುಮುಖೀ ಆಯಾಮದ ಶಿಲ್ಪಕಲಾ ಕಾಲೇಜನ್ನು ನುರಿತ ಶಿಲ್ಪಿಗಳ ಮಾರ್ಗದರ್ಶನದಲ್ಲಿ ನಡೆಸುವ ಕನಸು ಸಂಸ್ಥೆಯ ಅಧ್ಯಕ್ಷರದ್ದಾಗಿದೆ.
ಸಾಹಿತ್ಯ
ಅಂದು ನನ್ನ ಬಾಲ್ಯದ ದಿನಗಳು. ತುಂಬಾ ಬಡತನದ ದಿನಗಳು. ಆವಾಗ ನನ್ನ ಅಜ್ಜನೊಂದಿಗೆ ಹೆಗಲಲ್ಲಿ ಜೋಳಿಗೆ ನೇತಾಡಿಸಿಕೊಂಡು ಪೌರೋಹಿತ್ಯಕ್ಕೆ ಹೋಗುವ ಕಾಲಘಟ್ಟ. ಸಾಧಾರಣ ಮೈಲು ಗಟ್ಟಲೆ ನಡೆದೇ ಹೋಗುವುದು ಮತ್ತು ಒಂದು ಮನೆಯ ಸಮಾರಂಭಕ್ಕೆ ಹೋದೆವೆಂದರೆ ಆ ಮನೆಯಲ್ಲಿ ೩-೪ ದಿನ ವಾಸ್ತವ್ಯ. ಕೆಲವೊಮ್ಮೆ ಒಂದು ತರಹದ ಶಿಕ್ಷೆ ಎಂದೆನಿಸುತ್ತಿತ್ತು.
ಆದರೂ ಹೊಟ್ಟೆ ತುಂಬಾ ಊಟ ಕೈಗೆ ಅಲ್ಪ ಸ್ವಲ್ಪ ದಕ್ಷಿಣೆ, ಬಟ್ಟೆ ಇಂತಹ ಲೋಭ ಅಪೇಕ್ಷಿತನಾಗಿ ಏನೋ ಅಜ್ಜನ ಜತೆ ಹೋಗುತ್ತಿದ್ದೆ. ಅಜ್ಜನಿಗೂ ನಾನೆಂದರೆ ಒಂದು ಸಲೀಸು. ಯಾಕೆಂದರೆ ಅವರಿಗೆ ಎದುರಾಡುವ ಸ್ವಭಾವ ನನ್ನದಾಗಿರಲಿಲ್ಲ. ಒಂದು ರೀತಿಯ ನನ್ನ ಸಾಧುತನ (ಇದು ನಾನು ತಿಳಿದುಕೊಂಡದ್ದು) ಇಷ್ಟವಾಗಿತ್ತೋ ಏನೋ. ಅಜ್ಜ ಎಂದರೆ ನನ್ನ ತಾಯಿಯ ತಂದೆ.ಹೆಸರು ಮಠ ಅಚ್ಚುತ ಭಟ್ಟ.ಸಾಧಾರಣ ಊರೆಲ್ಲ ಬಲ್ಲ ವ್ಯಕ್ತಿ. ಋಗ್ವೇದ ಪಾರಂಗತರಾದ ಅವರಲ್ಲಿ ಕೆಲವು ಸಮಯ ವೇದ ಮಂತ್ರ ವಿದ್ಯಾರ್ಥಿಯಾಗಿದ್ದೆ. ಅದೇ ಜೀವನ ತುಂಬಾ ಮೇಲ್ಮಟ್ಟದ್ದು ಅಂತ ಈಗಿನ ಮನೋಭಾವಕ್ಕೆ ಯೋಚನೆ ಬರುವುದುಂಟು.
ಆವಾಗ ಚೇವಾರು ನಮ್ಮ ಪೈವಳಿಕೆ ಪಂಚಾಯತಿನ ಕುಗ್ರಾಮ. ಈಗಿರುವ ಡಾಮರು ರಸ್ತೆ ಆವಾಗ ಕಲ್ಲು ಮಣ್ಣಿನ ಕಚ್ಚಾ ರಸ್ತೆಯಾಗಿತ್ತು.ದಿನದಲ್ಲಿ ಶಂಕರ್ ವಿಟ್ಟಲ್ ಬಸ್ ಒಂದು ಸಲ ಬಂದು ಹೋಗುತ್ತಿತ್ತು.ಅವಾಗ ನಮಗೆಲ್ಲ ಬಸ್ ಪ್ರಯಾಣ ಕನಸಿನ ಪ್ರಯಾಣ. ಕಾಲಿಗೆ ಚಪ್ಪಲಿಯೂ ಇಲ್ಲದೆ ಆ ಗುಡ್ಡ ಕಾಡಿನಲ್ಲಿ ತುಂಡು ಬೈರಾಸು ಉಟ್ಟು ನಡೆಯುತ್ತಿದ್ದ ದಿನಗಳನ್ನು ನೆನದರೆ ಕಷ್ಟವಾದರೂ ಈಗ ಅನ್ನಿಸುತ್ತದೆ ಎಂತಹ ಸುವರ್ಣಯುಗ.!!!
ಚೇವಾರು ಎಂದರೆ ಆಗ ಒಂದು ಶಾಲೆ, ಒಂದು ಸರ್ಕಾರೀ ಆಸ್ಪತ್ರೆ (ಅದು ಕೇವಲ ಒಂದು ಸಣ್ಣ ಕೋಣೆ ಮಾತ್ರ), ಒಂದು ಸಣ್ಣ ಹೋಟೆಲು , ಒಂದು ಗೂಡಂಗಡಿ, ಕಮ್ತಿ ಯವರ ರೇಶನ್ ಅಂಗಡಿ, ಒಂದು ಟೈಲರ್ ಶಾಪು, ಹೀಗೆ ಎಂದು ನೆನಪು. ಇಂತಹ ಚೇವಾರಿನ ದೊಡ್ಡ ಮನೆಯೊಂದರಲ್ಲಿ ಆದಿನ ಉಪಯನ ಸಂಸ್ಕಾರ. ನಮ್ಮಜ್ಜ ಪುರೋಹಿತರು. ನಾನು ಅವರ ಬಾಲಂಗೋಚಿ.
ದೊಡ್ಡ ಮನೆ ಬೇರೆ ಯಾರದ್ದೂ ಅಲ್ಲ ಆವಾಗ ಯಕ್ಷಗಾನದ ಚೆಂಡೆ ಮದ್ದಲೆ ಸದ್ದು ದಿನನಿತ್ಯ ಮೊಳಗುವ ಕಮ್ತಿಯವರ ಮನೆಯಾಗಿತ್ತು. ತುಂಬಾ
ದೊಡ್ಡ ಮನೆ. ಹಾಗೂ ಊರಿನ ಗಣ್ಯ ವ್ಯಕ್ತಿಗಳೂ ಆಗಿದ್ದರು. ಪ್ರಖ್ಯಾತ ಚೆಂಡೆ ಮದ್ದಲೆ ವಾದಕರಾದ ಚೇವಾರು ರಾಮಕೃಷ್ಣ ಕಾಮತ್ ಮತ್ತು ಜನಾರ್ದನ ಕಾಮತ್ ಅವರುಗಳ ಮನೆಯಾಗಿತ್ತು. ಅವರ ಮಕ್ಕಳ ಉಪನಯನ ಕಾರ್ಯಕ್ರಮ ಎಂದೇ ನನ್ನ ನೆನಪು.ಈ ವಿವರಣೆಗಳು ಪ್ರತಿ ಶತ ಕರಾರುವಾಕ್ ಎಂದು ಹೇಳುವುದಿಲ್ಲ. ಆದರೆ ನಾನು ಹೇಳುವಂತಹ ಮುಖ್ಯ ವಿಷಯಗಳಿಗೆ ಕೇವಲ ಇದು ವಿಶೇಷಣ ಅಷ್ಟೇ.ನೆನಪಿನ ಸುಳಿಯಿಂದ ಒಂದೊಂದೇ ಆಯ್ಕೆ ಮಾಡಿ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಇದು ಎಷ್ಟು ಪ್ರಾಮುಖ್ಯವೋ ಅದು ನನಗೆ ತಿಳಿಯದು.
ರಾಮಕೃಷ್ಣ ಕಮ್ತಿಗಳು ಚೆಂಡೆ ಕಮ್ತಿಗಳು ಎಂದೇ ನನ್ನ ಅಜ್ಜ ಹೇಳುವ ರೀತಿ.ಅಜ್ಜ ಹೇಳುವಂತೆ ಅವರ ಚೆಂಡೆವಾದನ ತುಂಬಾ ಇಷ್ಟ ಪಡುತ್ತಿದ್ದರು. ಬಲು ದೂರದವರೆಗೆ ಮೈಕಿಲ್ಲದೆ ಸ್ಪಷ್ಟವಾಗಿ ಕೇಳುತ್ತಿದ್ದ ಅವರ ಚೆಂಡೆ ಪೆಟ್ಟುಗಳ ಬಗ್ಗೆ ಸದಾ ಹೇಳುತ್ತಿದ್ದರು.ಅಬ್ಬರದ ಚೆಂಡೆ ಅವರದ್ದು ಎಂದು ಒಂದು ಪ್ರತೀತಿ ಇತ್ತು. ನಮ್ಮ ಸುತ್ತ ಮುತ್ತಲಿನ ಯಕ್ಷಗಾನ ಕಾರ್ಯಕ್ರಮದಲ್ಲಿ ಚೆಂಡೆ ಕಮ್ತಿಯರ ಚೆಂಡೆ ಇಲ್ಲವಾದರೆ ಅದು ಸಪ್ಪೆ ಎಂದು ಹಲವರು ಹೇಳುವುದನ್ನು ಹಲವು ಸಲ ಕೇಳಿದ್ದೇನೆ. ಅವರ ತಮ್ಮ ಚೇವಾರು ಜನಾರ್ದನ ಕಾಮತ್. ಇವರೂ ಹಾಗೆ ಚೆಂಡೆ ಮದ್ದಲೆ ವಾದಕರು. ಹಾಗೆ ಹೇಳುವದಾದರೆ ಆ ಮನೆಯಲ್ಲಿ ಎಲ್ಲರೂ ಕಲಾವಿದರೆ ಎಂದು ನನ್ನ ಭಾವನೆ. ಚೇವಾರು ಶಂಕರ್ ಕಾಮತ್ ಕೂಡ ಉತ್ತಮ ಕಲಾವಿದ. ಇದಕ್ಕಿಂತ ಹೆಚ್ಚಾಗಿ ಅಲ್ಲಿಯ ಬಗ್ಗೆ ನನಗೆ ತಿಳಿಯದು.ಅಲ್ಪ ಸ್ವಲ್ಪ ಹಿರಿಯರು ಹೇಳಿದುದೆ ನನ್ನ ತಿಳುವಳಿಕೆ.
ಈ ಇಬ್ಬರು ವ್ಯಕ್ತಿಗಳು ನಾನು ಯಕ್ಷಗಾನದ ವೇದಿಕೆಯಲ್ಲಿ ಕಂಡ ಪ್ರಥಮ ಚೆಂಡೆ ಮದ್ದಲೆ ವಾದಕರು ಇದು ನನಗೆ ಚೆನ್ನಾಗಿ ನೆನಪಿದೆ. ಚೇವಾರು ಶಾಲೆಯಲ್ಲಿ ನಡೆದ ಯಾವುದೊ ಕಾರ್ಯಕ್ರಮಕ್ಕೆ ಯಕ್ಷಗಾನ ಬಯಲಾಟವಿತ್ತು. ಪ್ರಸಂಗ ಇನ್ನು ನೆನಪಿದೆ. ಕರ್ಣಾವಸಾನ. ದೇವಕಾನ ಕೃಷ್ಣ ಭಟ್, ಪೂಕಳ ಲಕ್ಷ್ಮೀನಾರಯಣ ಭಟ್, ಕಟ್ಟದ ಮನೆ ಕೃಷ್ಣ ಭಟ್ ಹೀಗೆ ಕಲಾವಿದರು ಇದ್ದುದು ನೆನಪು. ಆವಾಗ ಕಮ್ತಿಯರ ಚೆಂಡೆ ಕೇಳಿದ್ದೆ.ಆಗಿನ ಆಟಗಳೆಲ್ಲ ತುಂಬಾ ಸರಳವಾದ ಯಕ್ಷಗಾನ ಪ್ರದರ್ಶನಗಳು. ಈಗೀಗ ಮಸಾಲೆ ಅಧಿಕವಾಗಿ ಯಕ್ಷಗಾನ ಮರೆಯಾಗಿದೆ.
ಆದಿನ ಅಂದರೆ ಆ ಮನೆಯ ಸಮಾರಂಭದ ಕೊನೆಯ ದಿನವೋ ನೆನಪಿಲ್ಲ ದೊಡ್ಡದಾಗಿ ಮೈಕು ಹಾಕಿದ್ದರು. ಆಗಿನ ಮೈಕು ಎಂದರೆ ಮನೆಯ ಹತ್ತಿರದ ದೊಡ್ಡ ಮರದ ತುದಿಗೆ ಕಟ್ಟುವುದು. ಅದು ಊರೆಲ್ಲ ಸಮಾರಂಭ ಇಲ್ಲೇ ಎಂದು ಸಾರುತ್ತಿತ್ತು. ಮೈಕದಲ್ಲಿ ಸ್ವ ಅಭಿಮಾನದ ಪ್ರತೀಕವೆಂಬಂತೆ ಯಕ್ಷಗಾನ ಒಂದು ಮೊಳಗುತ್ತಿತ್ತು. ನಾನು ಅಂಗಳದ ಮೂಲೆಯಲ್ಲಿಟ್ಟ ಈಸಿಚೆಯರ್ ನಲ್ಲಿ ಒರಗಿ ಯಕ್ಷಗಾನ ಆಲಿಸುತ್ತ ಎರಡು ಕೈಗಳಿಂದ ಈಸಿಚೆಯರ್ ಆಕಡೆ ಈಕಡೆ ಮದ್ದಲೆಯಂತೆ ಬಾರಿಸುತ್ತ ಒಂದು ವಿಧದಲ್ಲಿ ತಲ್ಲೀನನಾಗಿದ್ದ ನೆನಪು. ಹೊರಗೆ ಏನು ಇದೆ ಎಂಬುದರ ಪರಿವೆ ಇಲ್ಲ. ಅದೊಂದು ರೀತಿ ಯಕ್ಷಗಾನದ ಮರುಳು. ಅದು ಈಗಲೂ ಇದೆ, ಕೆಲವೊಮ್ಮೆ ಹೊರ ಪ್ರಪಂಚದ ಅರಿವು ಮರೆತು ಕೈಯಾಡಿಸಿ ಮುಜುಗರ ಅನುಭವಿಸಿದ್ದಿದೆ.
ಹೀಗೆ ತಲ್ಲೀನನಾಗಿದ್ದಾಗ ಜನಾರ್ದನ ಕಮ್ತಿಯರು ಬಂದು ನನ್ನಲ್ಲಿ ಕೇಳಿದರು " ನೀನು ಮದ್ದಲೆ ಬಾರಿಸ್ಲಿಕ್ಕೆ ಕಲಿಯುತ್ತಿಯ ?" ಒಂದು ಕ್ಷಣ ವಿಚಲಿತವಾಯಿತು ಮನಸ್ಸು. ಏನು ಹೇಳಬೇಕೆಂಬುದೇ ತೋಚಲಿಲ್ಲ. ಉತ್ಸಾಹವೇನೋ ಇತ್ತು. ಒಂದೇ ಏಟಿಗೆ ಉತ್ತರ ಹೇಳುವ ಮನೋಭಾವ, ಹಾಗು ಪರಿಸ್ಥಿತಿ ನನ್ನದಲ್ಲ. ಅಜ್ಜನಲ್ಲಿ ವೇದ ಮಂತ್ರಗಳ ಪಾಠವೆ ಸರಿಯಾಗಿ ಕಲಿಯಲು ಅಸಾಧ್ಯವಾದ ಕಾಲ. ಹೊಟ್ಟೆ ಹಸಿವು ನಾಳೆ ಮನೆಯಲ್ಲಿ ಊಟವ ಹೊರಗೆ ಊಟವ ಎಂಬಂತ ಸ್ಥಿತಿ. ಸ್ವತಂತ್ರವಾಗಿ ನಮ್ಮ ನಿಲುಮೆಯನ್ನು ಹೇಳಿಕೊಳ್ಳಲಾಗದ ಅಸಹನೀಯ ಬದುಕು. "ಅಜ್ಜನಲ್ಲಿ ಕೇಳ್ಬೇಕು " ಎಂದು ಒಂದು ರೀತಿ ಹುಡುಗಾಟಿಕೆಯಲ್ಲೇ ಉತ್ತರಿಸಿದೆ. ಅವರು ಏನು ತಿಳಿದುಕೊಂಡರೋ ತಿಳಿಯದು. ಮತ್ತೆ ಅಜ್ಜನಲ್ಲೂ ಇದನ್ನೇ ಪ್ರಸ್ತಾಪ ಮಾಡಿದರು. ಅಜ್ಜ ನನ್ನನ್ನು ದುರುಗುಟ್ಟಿದಾಗ ಮುಂದಿನದು ಏನೆಂದು ಹೇಳುವುದು? ವಾಪಸಾಗುವಾಗ ಅಜ್ಜನಿಂದ ಎಚ್ಚರಿಕೆಯ ಸಮಾಧಾನ.
" ನಿನಿಗೆ ನಾನೇ ಗುರು. ನನ್ನಿಂದ ಮೇಲಿನ ಗುರು ನಿನಗೆ ಬೇಡ."
ಅಂತೂ ನನ್ನಲ್ಲಿ ಮದ್ದಲೆಗಾರನಾಗುವ ಲಕ್ಷಣ ಆ ಮಹನೀಯರು ಹೇಗೆ ಕಂಡುಕೊಂಡರೋ ಅಂತೂ ಒಬ್ಬ ಕಲಾವಿದನಾಗುವ ಅವಕಾಶ ಇಲ್ಲವಾಯಿತು.
ಹೀಗೆ ಮದ್ದಲೆ ಎಂದರೆ ಒಂದು ತರಹ ಮನಸ್ಸಿಗೆ ಮುದನೀಡುವ ಸಾಧನವಾಯಿತು. ನನ್ನ ತಂದೆಯವರೂ ಮೃದಂಗ ವಾದಕರಾಗಿದ್ದರು. ಅವರು ಈ ಯಕ್ಷಗಾನದ ಪದ್ದತಿಯಲ್ಲ. ಕರ್ನಾಟಕ ಸಂಗೀತವೋ ಅದರ ರೀತಿ ಏನೆಂದು ನನಗೆ ಈಗಲೂ ತಿಳಿದಿಲ್ಲ. ಭರತ ನಾಟ್ಯಕ್ಕೆ ಮೃದಂಗವಾದಕರಾಗಿ ಹೋಗುತ್ತಿದ್ದರು. ಮಂಗಳೂರಿನ ಕಲಾನಿಕೆತನದಲ್ಲಿ ಮಾಸ್ತರಾಗಿ ಕೆಲಸ ಕೂಡ ಮಾಡ್ತಿದ್ದರು ಎಂದು ಕೇಳಿದ್ದೆ. ಆದರ ಬಾಲ್ಯದಿಂದಲೇ ಅವರ ಸಂಸರ್ಗವನ್ನು ಕಳೆದುಕೊಂಡೋ ಅಂತೂ ಅವರ ಬಗೆಗಿನ ಅರಿವು ಮಿತಿಯೊಳಗೆ ಮಾತ್ರ. ಬಹುಶಃ ಈ ಅನುವ0ಷಿಕ ಗುಣ ನನ್ನಲ್ಲಿ ಕಂಡುಕೊಂಡರೋ ತಿಳಿಯದು.ಮದ್ದಲೆ ವಾದನ(ಕೇಳುವುದು ಮಾತ್ರ) ಎಂದರೆ ಈಗಲೂ ನನ್ನಾಸಕ್ತಿ. ಅದು ಶಾಸ್ತ್ರಿಯ ಸಂಗೀತವೇ ಇರಲಿ, ಯಕ್ಷಗಾನವೇ ಇರಲಿ.
ಮದ್ದಲೆ ಮತ್ತು ಮೃದಂಗ ಹಲವರಿಗೆ ತಿಳಿದಿದೆಯೋ ಇಲ್ಲವೊ ಎರಡೂ ವಿಭ್ಭಿನ್ನ ಪ್ರಾಕಾರ ಎಂದು ನನಗೆ ಕೆಲವು ಸಮಯಗಳ ಮೊದಲು ತಿಳಿಯುತು. ಮೃದಂಗ ಎಂದರೆ ಮದ್ದಲೆಯ ನವೀಕೃತ ಹೆಸರೋ ಎಂದು ಸಣ್ಣವರಿರುವಾಗ ಭಾವಿಸಿದ್ದೆವು.ಮೃದಂಗ ಮದ್ದಲೆಯಿಂದ ಸ್ವಲ್ಪ ಉದ್ದ ಕಡಿಮೆ.ಮದ್ದಲೆ ಉದ್ದವಾಗಿ ಸುಮಾರು ೨೧ ರಿಂದ ೨೩ ಇಂಚು ಇದ್ದು ಮೃದಂಗ ೧೯ ರಿಂದ ೨೦ ಇಂಚು ಉದ್ದ ಇದೆ. ಮೃದಂಗದ ಶ್ರುತಿ ಸ್ವಲ್ಪ ಇಳಿ ಶ್ರುತಿಯಿದ್ದು ಎಡ ಬಲ ಸಾಮನ್ಯ ಒಂದೇ ರೀತಿ ಇದೆ. ಮದ್ದಲೆಯ ಎಡ ಬಲ ತುಸು ವೆತ್ಯಾಸದಿಂದ ಕೂಡಿದೆ. ಇದು ನನಗೆ ಇತ್ತೀಚೆಗಷ್ಟೇ ತಿಳಿದು ಬಂತು. ಯಕ್ಷಗಾನದಲ್ಲಿ ಈಗ ಮದ್ದಲೆ ಬಾರಿಸುವವರು ಇಲ್ಲವೇ ಇಲ್ಲ ಎಂದು ನನ್ನ ಅನಿಸಿಕೆ. ಅದನ್ನು ಬಾರಿಸುವುದು ತುಂಬಾ ಕಠಿಣ ಎಂದು ಕೇಳಿದ್ದೇನೆ.
ಯಕ್ಷಗಾನದಲ್ಲಿ ಮದ್ದಲೆ ವಾದಕರು ಶ್ರುತಿಯವನನ್ನು ಬಿಟ್ಟರೆ ಭಾಗವತರಿಗೆ ತೀರ ಹತ್ತಿರದವರು. ಆದರೆ ಶ್ರುತಿ ಬಾರಿಸಲು ಹೆಚ್ಚೇನು ನೈಪುಣ್ಯತೆ ಅವಶ್ಯಕತೆ ಇಲ್ಲ. ಹಾಗಾಗಿ ಭಾಗವತರ ಆತ್ಮಕ್ಕೆ ಹತ್ತಿರವಾಗುವವರು ಮದ್ದಲೆಯವರು, ಚೆಂಡೆಯವರು ಆನಂತರವೇ. ಆದರೆ ಇತ್ತೀಚಿಗೆ ಯಕ್ಷಗಾನದಲ್ಲಿ ಚೆಂಡೆ ಸದ್ದು ಅಧಿಕವಾದಂತೆ ಯಕ್ಷಗಾನ ಕಂಡಾಗ ನನಗೆ ಅನ್ನಿಸುತ್ತದೆ. ನನ್ನ ಅನಿಸಿಕೆ ಪ್ರಕಾರ ಭಾಗವತಿಕೆ ರೈಸುದು ಮದ್ದಲೆವಾದನ ಮಾತ್ರ ಇರುವಾಗಲೇ. ಹಿಮ್ಮೇಳದ ಸದ್ದು ದೂರದಲ್ಲಿ ನಿಂತು ಗಮನಿಸಿದರ ಮದ್ದಲೆಯ ನಿನಾದವೇ ಪ್ರಧಾನವಾಗಿ ಅಂತರಾಳದ ಧ್ವನಿಯಂತೆ ಮೊಳಗುತ್ತದೆ.
ಒಂದು ರೀತಿಯ ಹೃದಯದ ಮಿಡಿತ ಇದ್ದ ಹಾಗೆ. ಆದರೆ ಯಕ್ಷಗಾನ ಎಂದರೆ ಚೆಂಡೆಯ ಅಬ್ಬರವೇ ಕಣ್ಣುಮುಂದೆ ನಿಲ್ಲುವುದು. ಅದೊಂದು ರೀತಿಯ ತಪ್ಪು ಕಲ್ಪನೆ ಎಂದೇ ನನ್ನ ಅನಿಸಿಕೆ. ಸಮರ್ಥ ಭಾಗವತ ಯಾವುದೇ ಪದವನ್ನಾದರೂ ಕೇವಲ ಶ್ರುತಿ ಮತ್ತು ಮದ್ದಲೆ ವಾದನದಲ್ಲೇ ಮೇಲೆ ಹಾಕಬಲ್ಲ.ಮದ್ದಲೆಗೆ ಪ್ರಾಧಾನ್ಯತೆ ಕೊಟ್ಟಲ್ಲಿ ಯಕ್ಷಗಾನ ಹೆಚ್ಚೆಚ್ಚು ಕಳೆಕಟ್ಟಬಲ್ಲುದು .
ಮದ್ದಲೆಯೂ ಕಲಾವಿದನೂ ಜತೆಯಾಗಿ ವಿಶ್ರಾಂತಿಯಲ್ಲಿ
ಚೆಂಡೆ ಇದ್ದರೆ ಅಥವಾ ಚೆಂಡೆಯ ಪದ ಇದ್ದರೆ ಮಾತ್ರ ಆಟ ರೈಸುದು ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿ ಇದೆ. ತಾಳ ಲಯ ತಪ್ಪಿದರೆ ಯಾವ ಸಲಕರಣೆ ಇದ್ದರೂ ಅದು ಅಷ್ಟೇ.
ಈ ಮದ್ದಲೆ ವಾದನವನ್ನು ಈ ರೀತಿಯಾಗಿ ಹಿಮ್ಮೇಳದಲ್ಲಿ ತುಂಬಾ ಇಷ್ಟ ಪಡುತ್ತೇನೆ. ನಮ್ಮ ಬಲಿಪರು ಕೆಲವು ಪ್ರಸಂಗಗಳನ್ನು ಅದು ಚೆಂಡೆ ಪ್ರಸಂಗ ಇದು ಮದ್ದಲೆ ಪ್ರಸಂಗ ಅಂತ ವರ್ಗೀಕರಣ ಮಾಡ್ತಾರೆ. ಇದರಲ್ಲಿ ಮದ್ದಲೆ ಪ್ರಸಂಗ ಎಂದರೆ ನನಗೆ ತುಂಬಾ ಆನಂದವನ್ನು ಕೊಡುತ್ತದೆ.
ಹಲವು ಕಲಾವಿದರ ಶೈಲಿಯನ್ನು ಗುರುತಿಸಿದ್ದೇನೆ. ಮದ್ದಲೆಯಲ್ಲಿ ನಾನು ಅತ್ಯಂತ ಇಷ್ಟ ಪಟ್ಟ ಕಲಾವಿದ ಕಿರಿಯ ಕುದ್ರೆಕೊಡ್ಲು ರಾಮಭಟ್ . ಹಿರಿಯ ರಾಮಭಟ್ ಬಗ್ಗೆ ನಾನು ಹೇಳುವಲ್ಲಿ ತೀರ ಅಶಕ್ತ ಏಕೆಂದರೆ,ಅವರು , ನಾನು ಕಂಡೆ ಇಲ್ಲದ ಮಹಾನ್ ಕಲಾವಿದರು. ಕಿರಿಯರು ನನ್ನ ತಂದೆಯ ಸಹಚರರಾಗಿ ಇದ್ದುದನ್ನು ಕ್ಷೀಣವಾಗಿ ಮನಸ್ಸು ನೆನಪಿಸುತ್ತದೆ. ಅದಕ್ಕಾಗಿ ನಾನು ಇಷ್ಟವದದ್ದಲ್ಲ.
ಹಲವು ವರ್ಷ ಮೊದಲು ಪೆರ್ಲ ಕೃಷ್ಣ ಭಟ್ ರವರ ತಾಳಮದ್ದಲೆ ಬಳಗವಿತ್ತು. ಅದರಲ್ಲಿ ಹಿಮ್ಮೇಳದಲ್ಲಿ ಬಲಿಪ್ಪರೊಂದಿಗೆ ಕುದ್ರೆಕೊಡ್ಲು ರಾಮಭಟ್ ಮತ್ತು ಪುಂಡಿಕ್ಕಾಯಿ ಕೃಷ್ಣ ಭಟ್ ಇದ್ದರು ಇವರ. ಹಿಮ್ಮೇಳ ಕೇಳುವುದೆಂದರೆ ಅದು ನಿಜಕ್ಕೂ ಒಂದು ಶ್ರೇಷ್ಠ ಹಿಮ್ಮೇಳ. ಬಲಿಪ್ಪರಿಗೆ ಹಿತವಾದ ಸಾಥ್ ನೀಡುವ ಈ ಚೆಂಡೆ ಮದ್ದಲೆ ವಾದಕರು ಅದ್ಭುತ ಲೋಕವನ್ನೇ ಸೃಷ್ಟಿಸ ಬಲ್ಲರು. ಇವರ ಜತೆಗಾರಿಕೆಯ ಹಲವು ಯಕ್ಷಗಾನಗಳು ನನ್ನ ಅಮೂಲ್ಯ ಸಂಗ್ರಹಗಳಲ್ಲಿ ಇವೆ. ಹೀಗೆ ರಾಮಭಟ್ ಮದ್ದಲೆ ಅಂದರೆ ಬಲಿಪ್ಪರಿಗೆ ಸರಿಯಾದ ಜತೆಗಾರಿಕೆ ಅಂತ ನನ್ನ ಭಾವನೆ. ನಾನು ಇಗಲೂ ಅದನ್ನು ತುಂಬಾ ತನ್ಮಯನಾಗಿ ಅನುಭವಿಸುವವನು. ಇನ್ನು ಮೊನ್ನೆ ನಮ್ಮನ್ನಗಲಿದ ಮಹಾ ಕಲಾವಿದ ಚಿಪ್ಪಾರು ಅವರ ಚೆಂಡೆಯ ಬಗ್ಗೆ ಹೆಚ್ಚಿನವರು ಹೊಗಳಿದರೆ ನಾನು ಅವರ ಚೆಂಡೆಗಿಂತ ಮದ್ದಲೆ ವಾದನವನ್ನು ಬಹಳವಾಗಿ ಇಷ್ಟಪಡುತ್ತೇನೆ.
ಲೋಕ ಕಂಡ ಅದ್ಭುತ ಮದ್ದಲೆ ಅಥವಾ ಮೃದಂಗ ವಾದಕರು. ಹೀಗೆ ಹಲವರ ಕೈಚಳಕವನ್ನು ಸವಿಯುವ ಮನೋಭಾವ. ಗೋರೆ, ಪದ್ಯಾಣ ಶಂಕರಣ್ಣ, ಉಪಾದ್ಯಾಯ, ಇವರುಗಳ ಮದ್ದಲೆ ವಾದನ ಒಂದು ರಸಪೂರ್ಣ ಹಿಮ್ಮೆಳವಾಗಿರುತ್ತದೆ. ಹೀಗೆ ತೆಂಕು ಬಡಗು ಎರಡು ಶೈಲಿಯನ್ನು ರೂಢಿಸಿಕೊಂಡ ಅಡೂರು ಗಣೇಶ್ ರವರ ಮದ್ದಲೆ ಪ್ರತಿಬೆ ಕೂಡ ಪ್ರಶಂಸಾರ್ಹವೆ. ಹೊಸನಗರ ಮೇಳದ ಯುವ ಕಲಾವಿದ ಅಡೂರು ಹರೀಶ್ ಕೂಡ ಒಬ್ಬ ಉತ್ತಮ ಮದ್ದಲೆ ವಾದಕ. ಒಬ್ಬ ಉತ್ತಮ ಚೆಂಡೆ ವಾದಕ ಮದ್ದಲೆ ವಾದಕನಿಗೆ ರಂಗದಲ್ಲಿ ಮನ್ನಣೆ ಕೊಡುತ್ತಾನೆ. ಏಕೆಂದರೆ ಭಾಗವತನ ಪದದ ತಾಳ ಗುರುತಿಸುವ ಕೆಲಸ ಮದ್ದಲೆ ವಾದಕನದ್ದು. ಅನಂತರ ಚೆಂಡೆಯವನು ಹಿಂಬಾಲಿಸಬೇಕು. ಇದು ಕ್ರಮ.
ಆದರೆ ಕೆಲವೊಮ್ಮೆ ಚೆಂಡೆ ಸುಮ್ಮನೆ ಹರಟೆ ಮಾಡಿ ಗೊಂದಲ ಮಾಡಿ ಮದ್ದಲೆ ವಾದನ ಕೇಳದಂತೆ ಮಾಡಿದಾಗ ನನ್ನಂತಹವನಿಗೆ ಅಸಹನೆಯಾಗುತ್ತದೆ.ಚೆಂಡೆವಾದಕ ಮದ್ದಲೆ ವಾದಕನನ್ನು ಹಿಂದಿಕ್ಕುವ ಧೋರಣೆ ತಳೆದರೆ, ಇಲ್ಲ, ಮದ್ದಲೆಗಾರನ ನಡೆ ಅರ್ಥವಾಗದೆ ಹೋದರೆ, ಇಂತಹ ಕಿರಿ ಕಿರಿಗಳು ಆಗುವುದು ಸಹಜ. ಇಬ್ಬರಲ್ಲೂ ಸ್ಪರ್ಧೆ ಇರದೇ ಪರಸ್ಪರ ಮಾನಸಿಕ ಹೊಂದಾಣಿಕೆ ಇದ್ದರೆ, ಅಂತಹ ಹಿಮ್ಮೇಳ ಒಂದು ರಸಗವಳವಿದ್ದಂತೆ. ಗೋರೆ ಮತ್ತು ದೇಲಂಥ ಮಜಲು ಈಗಿರುವಲ್ಲಿ ಉತ್ತಮ ಹೊಂದಾಣಿಕೆಯ ಹಿಮ್ಮೆಳವಾದಕರು. ಇದು ನನ್ನ ಅಭಿಮತ.
ಹಲವುಸಲ ಈ ಮದ್ದಲೆ ವಾದನದ ಲಯವಿನ್ಯಾಸ ಕೇಳಿದಾಗ ನಾನು ಮದ್ದಲೆಗಾರನಾಗದೆ ಇದ್ದರೂ ಪರವಾಗಿಲ್ಲ ಅದರ ಮಟ್ಟುಗಳ, ಧೀಂ...ತರಿಕಿಟ ...ತಾಳಗಳ ಅಲ್ಪ ಜ್ಞಾನವನ್ನಾದರೂ ಗಳಿಸಬೇಕೆಂಬ ಮಹದಾಸೆ ಇದೆ. ಆದರೆ ಇಂದಿಗೂ ನಾನು ಮದ್ದಲೆ ವಾದನ ತನ್ಮಯನಾಗಿ ಆಲಿಸುವ ಪ್ರೆಕ್ಷಕನಾಗಿಯೇ ಉಳಿದಿದ್ದೇನೆ. ಅದರೂ ಈ ರಸಾಸ್ವಾದನೆಗೆ ಎಲ್ಲ ತಿಳಿದಿರಬೇಕೆಂದು ನಿಯಮವೇನೂ ಇಲ್ಲವಲ್ಲ .ಮದ್ದಲೆ ವಾದನದ ಕುರಿತು ಬರೆಯುವ ಜ್ಞಾನ ನನ್ನಲ್ಲಿಲ್ಲ ಆದರೂ ಉತ್ತಮ ಮದ್ದಲೆ ವಾದನ ಕೇಳಿ ಆನಂದಿಸುವ ತುಡಿತ ಇದ್ದೆ ಇದೆ. ಅಡುಗೆ ರುಚಿ ಆಸ್ವಾದಿಸಲು ಅಡುಗೆ ಮಾಡಿ ತಿಳಿದಿರಬೇಕೆಂದೇನು ಇಲ್ಲವಲ್ಲ.ಉತ್ತಮವಾದ ಭಕ್ಷ್ಯದ ಗುಣಗಳನ್ನು ಹೇಳಲು ಅದು ಸರಿಯಾಗಿ ರುಚಿನೋಡುವ ಮನೋಭಾವ ಇದ್ದರೆ ಸಾಕು. ಎಲ್ಲರೂ ವರ್ತಕರಾದರೆ ಗ್ರಾಹಕ ಯಾರು.? ವೇದಿಕೆ ಕಲಾವಿದರಿಂದಲೇ ತುಂಬಿದರೆ ಪ್ರೇಕ್ಷಕನೂ ಬೇಕಲ್ಲ ? ಹಾಗಾಗಿ ಪ್ರಾಮಾಣಿಕವಾಗಿ ನನ್ನ ಅಭಿಪ್ರಾಯ ಇಷ್ಟೇ ಇಂದಿಗೂ ನಾನು ಯಕ್ಷಗಾನದ ಸಾಧಾರಣ ಪ್ರೇಕ್ಷಕ ಮಾತ್ರ
ರಾಜ್
ಬೆಂಗಳೂರು
ನೆನಪುಗಳ ಮಾತು ಮಧುರ
ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.
ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲ
ಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.
ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.
ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.
ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.
ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.
ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.
ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.
ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.
ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.
ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.
ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.
ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...
ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ
ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.
ಋತುಮಾನಗಳು ಬದಲಾಗಿದೆ
ಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...
ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು....
ಅವಳದೇ ಅಪ್ಪ...ಕ್ಷಮಿಸಿ,
ಮುಂದುವರೆಸಲು ಕಷ್ಟ ಆಗ್ತಿದೆ....
- ವಿನು ಬಳಂಜ
ಚಲನ ಚಿತ್ರ ನಿರ್ದೇಶಕರು,ಬೆಂಗಳೂರು
9481247326
Video
