ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
10:09 PM

ಶುಭಾಶಯ

Posted by ekanasu

ರಾಜ್ಯ - ರಾಷ್ಟ್ರ

ಕನ್ನಡವೇ ನಿತ್ಯ...ಕನ್ನಡವೇ ಸತ್ಯ.... ಮತ್ತೆ ಕನ್ನಡ ರಾಜ್ಯೋತ್ಸವ ಬಂದಿದೆ. ನಮ್ಮೆಲ್ಲಾ ಓದುಗ ಮಿತ್ರರಿಗೂ ಜಾಹೀರಾತು ದಾರರಿಗೂ ಸಮಸ್ತ ಕನ್ನಡ ನಾಡಿನ ಜನತೆಗೂ ಈ ಕನಸು ತಂಡದ ಪರವಾಗಿ ಶುಭಾಶಯಗಳು...ಸಿರಿಗನ್ನಡಂ ಗೆಲ್ಗೆ...
- ಸಂ.

ಮುಂದೆ ಓದಿ

ನುಡಿಸಿರಿ

ಮಂಗಳೂರು: ನ. 6,7 ಮತ್ತು 8ರಂದು ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ 2009 ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ನಾಡಿನೆಲ್ಲೆಡೆಯಿಂದ ಪ್ರಸಿದ್ಧ ಸಾಹಿತಿಗಳು ಆಗಮಿಸಲಿದ್ದಾರೆ. ಕನ್ನಡ ಮನಸ್ಸು ಸಮನ್ವಯದೆಡೆಗೆ ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.


ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡದ ಖ್ಯಾತ ಕವಿ, ವಿಮರ್ಶಕ, ಅನುವಾದಕ, ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿರುವ ಡಾ.ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ನ.6 ರಂದು ನುಡಿಸಿರಿಯನ್ನು ಉದ್ಘಾಟಿಸಲಿದ್ದಾರೆ ಎಂದರು.

'ಕನ್ನಡ ಮನಸ್ಸು: ಸಮನ್ವಯದೆಡೆಗೆ' ಎಂಬ ಮುಖ್ಯ ಪರಿಕಲ್ಪನೆಯಡಿ ಹಿರಿಯ ಸಂಶೋಧಕ ಡಾ.ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದೆ. ನ.6ರಂದು 2.20 ರಿಂದ ನಡೆಯುವ 'ಭಾಷೆ ಮತ್ತು ಸಾಹಿತ್ಯ- ಸಮನ್ವಯದೆಡೆಗೆ' ಎಂಬ ಮೊದಲ ಗೋಷ್ಠಿಯಲ್ಲಿ ಭಾಷೆಯ ಕುರಿತು ಬಿ.ಎನ್.ಸುಮಿತ್ರಾಬಾಯಿ, ಸಾಹಿತ್ಯದ ಕುರಿತು ಡಾ.ಸಿ.ಎನ್.ರಾಮಚಂದ್ರನ್ ಭಾಗವಹಿಸಲಿದ್ದಾರೆ. ನ.7 ರಂದು ಬೆಳಗ್ಗೆ 9.50ರಿಂದ ನಡೆಯುವ 'ಸಂಸ್ಕೃತಿ ಸಮನ್ವಯದೆಡೆಗೆ' ಎಂಬ ಎರಡನೇ ವಿಚಾರಗೋಷ್ಠಿಯಲ್ಲಿ ಶಿಷ್ಟ ಸಂಸ್ಕೃತಿ ಕುರಿತು ಡಾ.ಮಲ್ಲೇಪುರಂ.ಜಿ.ವೆಂಕಟೇಶ್, ಜಾನಪದ ಸಂಸ್ಕೃತಿ ಕುರಿತು ಡಾ.ಹಿ.ಶಿ ರಾಮಚಂದ್ರೇಗೌಡ ಮಾತನಾಡಲಿದ್ದಾರೆ. ಅದೇ ದಿನ ಅಪರಾಹ್ನ 2.20ರಿಂದ ನಡೆವ ಧರ್ಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಡಾ. ಶ್ರೀರಾಮ ಭಟ್ಟ, ಡಾ.ಎಚ್.ಎನ್ ಮುರಳೀಧರ ಭಾಗವಹಿಸಲಿದ್ದಾರೆ. ನ.8 ರಂದು ಬೆಳಗ್ಗೆ 9.50ರಿಂದ ನಡೆವ ಮಾಧ್ಯಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಗಿರೀಶ್ ರಾವ್ (ಜೋಗಿ) ಮುದ್ರಣ ಮಾಧ್ಯಮದ ಕುರಿತು ಜಿ,ಎನ್ ಮೋಹನ್ ವಿದ್ಯುನ್ಮಾನ ಮಾಧ್ಯಮದ ಕುರಿತು ಮಾತನಾಡಲಿದ್ದಾರೆ ಎಂದವರು ವಿವರಿಸಿದರು.

ನುಡಿಸಿರಿಯ ಅಂಗವಾಗಿ `ಶಿಲ್ಪ ಸಿರಿ' ಮತ್ತು `ಚಿತ್ರ ಸಿರಿ' ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಕಾರ್ಯಕ್ರಮಗಳೂ ಕ್ಲಪ್ತ ಸಮಯದಲ್ಲಿ ನಡೆಯಲಿದೆ ಎಂದು ಡಾ.ಆಳ್ವ ತಿಳಿಸಿದರು.

ಕನ್ನಡ ಕತೆಗಾರರನ್ನು ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಾಗೂ ಅವರ ಬರವಣಿಗೆಯ ಸ್ಪೂರ್ತಿ, ಪ್ರೇರಣೆ, ನಿಲುವುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಥಾಸಮಯವೆಂಬ ವಿಶಿಷ್ಠ ಗೋಷ್ಠಿಯೊಂದು ಸಮ್ಮೇಳನದಲ್ಲಿ ಆಯೋಜಿಸಿದ್ದು ಇದರಲ್ಲಿ ಡಾ.ನಾ ಡಿಸೋಜ, ಶ್ರೀನಿವಾಸ ವೈದ್ಯ, ನೇಮಿಚಂದ್ರ ಮತ್ತು ಸುನಂದ ಪ್ರಕಾಶ್ ಕಡಮೆ ಭಾಗವಹಿಸಲಿದ್ದಾರೆ.

ಕವಿಸಮಯ ಕವಿನಮನವೆಂಬ ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಪ್ರತಿಭಾನ್ವಿತ ಕವಿಗಳು ಭಾಗವಹಿಸುವರು. ಇದರಲ್ಲಿ ಎಲ್.ಎನ್.ಮುಕುಂದರಾಜ್, ವಿ.ಗ.ನಾಯಕ, ಕೆ.ಷರೀಫಾ, ದು.ಸರಸ್ವತಿ, ಸತ್ಯಾನಂದ ಪಾತ್ರೋಟ, ವೀಣಾ ಬನ್ನಂಜೆ, ಲಲಿತಾ ಸಿದ್ಧಬಸವಯ್ಯ, ತಾರಿಣಿ ಶುಭದಾಯಿನಿ, ರಾಮಸ್ವಾಮಿ ಡಿ.ಎಸ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ರಾಂ ಪ್ರಸಾದ್ ಕಾಂಚೋಡು ಉಪಸ್ಥಿತರಿದ್ದರು.
ಚಿತ್ರ: ರಾಜೇಶ್ ಶೆಟ್ಟಿ

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಸಂಚಾರಿ ಪೊಲೀಸ್ ಜಂಟಿಯಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ವಾಹನಗಳ ವಿಶೇಷ ತಪಾಸಣಾ ಕಾರ್ಯವನ್ನು ನವೆಂಬರ್ 2ರಿಂದ 7ರವರೆಗೆ ಹಮ್ಮಿಕೊಂಡಿದ್ದು, ಮೋಟಾರು ವಾಹನ ನಿಯಮ ಮತ್ತು ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಅವರು ತಿಳಿಸಿದ್ದಾರೆ.
ವಾಹನ ಚಾಲಕರು ತಮ್ಮ ಚಾಲನಾ ಅನುಜ್ಞಾ ಪತ್ರ ಸೇರಿದಂತೆ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಮತ್ತು ವಾಹನಗಳ ಇತರೆ ಎಲ್ಲಾ ದಾಖಲಾತಿಗಳ ಮೂಲ ಪ್ರತಿಗಳನ್ನು ತಮ್ಮೊಡನೆ ಇಟ್ಟುಕೊಂಡು ತಪಾಸಣಾ ಸಮಯದಲ್ಲಿ ಹಾಜರುಪಡಿಸತಕ್ಕದ್ದು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನು ಇಲಾಖೆ ಕೋರಿದೆ.


ಹಜ್ ಯಾತ್ರಾರ್ಥಿಗಳ ಗಮನಕ್ಕೆ
ಮಂಗಳೂರು :ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಆಯ್ಕೆಯಾದ ಯಾತ್ರಾರ್ಥಿಗಳಿಗೆ ಮಂಗಳೂರಿನ ಹಜ್ ಕ್ಯಾಂಪ್ ನಿಂದ ಹೋಗಲು ಸಾಧ್ಯವಾಗದೇ ಬಾಕಿ ಇರುವವರು ಬೆಂಗಳೂರು ಹಜ್ ಕ್ಯಾಂಪ್ ನಿಂದ ಹೊರಡಲು ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಹಜೆ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ ನಿಯಾಜ್ ಅಹ್ಮದ್ ಅವರನ್ನು ಬೆಂಗಳೂರಿನ ಹಜ್ ಕಚೇರಿ ದೂ. ಸಂ. 080- 22244434 ಮೂಲಕ ಸಂಪರ್ಕಿಸಬಹುದಾಗಿದೆ.


ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳ ಹರಾಜು
ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳತಾಲೂಕಿನ ಅಬಕಾರಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಆವರಣದಲ್ಲಿರುವ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಅಬಕಾರಿ ವಸ್ತುಗಳ ಅಕ್ರಮ ಸಾಗಾಣಿಕೆಗೆ ಬಳಸಲಾದ ವಾಹನ ಮಾರುತಿ ಒಮಿನಿ ಕಾರು ವ್ಯಾನ್ ಅನ್ನು ದಿನಾಂಕ 4.11.09 ರಂದು ಪೂರ್ವಾಹ್ನ 11.30 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಆಸಕ್ತರು ಸಕಕಾರಿ ಷರತ್ತುಗಳಿಗೊಳಪಟ್ಟಂತೆ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.


ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ
ಮಂಗಳೂರು:ಮಕ್ಕಳ ಕಲ್ಯಾಣ ಸಮಿತಿಗೆ 5 ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲು ಮನೋಶಾಸ್ತ್ರ, ಸಮಾಜಸೇವೆ ಮಕ್ಕಳ ಅಭಿವೃದ್ಧಿ ಶಿಕ್ಷಣ ಕಾನೂನು ಸಮಾಜಶಾಸ್ತ್ರ ಇವುಗಳಲ್ಲಿ ಸ್ನಾತಕೋತ್ತರ ಪದವಿಹೊಂದಿರುವ 7 ವರ್ಷಗಳ ಅನುಭವ ಹೊಂದಿರುವ ಒಬ್ಬ ಮಹಿಳೆ ಹಾಗೂ 4 ಪುರುಷ ಸದಸ್ಯರನ್ನು ಆಯ್ಕೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಅರ್ಜಿ ಅಹ್ವಾನಿಸಿರುತ್ತಾರೆ. ದಸ್ಯರಿಗೆ ಪ್ರಯಾಣ ಭತ್ಯೆ ಮತ್ತು ಉಪಸ್ಥಿತಿ ಭತ್ಯೆ ಯನ್ನು ನೀಡಲಾಗುವುದು. ದಿನಾಂಕ 7-11-09ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.


ದೈಹಿಕ ಅಶಕ್ತರಿಗೆ ಪ್ರತ್ಯೇಕ ವಿಭಾಗ
ಮಂಗಳೂರು:ಮಂಗಳೂರು ಮಹಾನಗರಪಾಲಿಕೆಯಲ್ಲಿ ಅರ್ಜಿ ಸ್ವೀಕರಿಸಲು ದೈಹಿಕವಾಗಿ ಅಶಕ್ತರಾಗಿರುವವರಿಗೆ ಹಾಗೂ ಹಿರಿಯ ನಾಗರೀಕರಿಗೆ ನಗರಪಾಲಿಕೆಯಿಂದ ದೊರಕುವಂತಹ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಯಾವುದೇ ದೂರು ,ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಕಛೇರಿಯ ಪ್ರವೇಶ ದ್ವಾರದ ಮುಂಭಾಗದ ಒಳಗಿರುವ ರೆಕಾರ್ಡರ್ ಶಾಖೆಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ.ಪ್ರತೀನಿತ್ಯ ಬರುವ ಅರ್ಜಿಗಳನ್ನು ಕೂಡಲೇ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಲ್ಕುಂದ ಮಜಲು ಜಾನುವಾರು ಜಾತ್ರೆ
ಮಂಗಳೂರು:ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ದ.ಕ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖಾ ಸಹಯೋಗದೊಂದಿಗೆ ಚಾರಿತ್ರಿಕ ಕುಲ್ಕುಂದ ಜಾನುವಾರು ಜಾತ್ರೆಯ ಉದ್ಘಾಟನಾ ಸಮಾರಂಭವನ್ನು ದಿನಾಂಕ 2-11-09 ರಂದು ಪೂರ್ವಾಹ್ನ 8.30 ಗಂಟೆಗೆ ಸುಬ್ರಹ್ಮಣ್ಯ ಕುಲ್ಕುಂದ ಮಜಲಿನಲ್ಲಿ ಏರ್ಪಡಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ .ಅಂಗಾರ .ವಹಿಸುವರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಗಳಾದ ಡಾ .ಹರೀಶ್ ಕುಮಾರ್ ಉದ್ಘಾಟನೆಯನ್ನು ಮಾಡಲಿರುವರು.
ಈ ಕುಲ್ಕುಂದ ಜಾನುವಾರು ಜಾತ್ರೆಯು ದಿನಾಂಕ 2-11-09 ರಿಂದ 11-11-09 ರ ವರೆಗೆ 10 ದಿವಸಗಳು ಕುಲ್ಕುಂದ ಮಜಲಿನಲ್ಲಿ ಪ್ರತೀ ವರ್ಷದಂತೆ ನಡೆಯಲಿರುವುದು.


ಬಾಲನ್ಯಾಯ ಮಂಡಳಿ-ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ
ಮಂಗಳೂರು:ಬಾಲ ನ್ಯಾಯ ಮಂಡಲಿಯಸದಸ್ಯರುಗಳನ್ನು ಮೂರು ವರ್ಷಗಳ ಅವಧಿಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಾಗಿರುತ್ತಾರೆ. ಸದಸ್ಯರುಗಳು ಸಮಾಜ ಕಾರ್ಯ ,ಸಮಾಜ ಶಾಸ್ತ್ರ ,ಕ್ರಿಮಿನಾಲಜಿ ಕಾನೂನು ಶಿಕ್ಷಣ ,ಮನ:ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷಗಳ ಅನುಭವ ಹೊಂದಿರುವ, 35 ವರ್ಷ ವಯೋಮಿತಿಯ ಸಮಾಜ ಸೇವಾ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. , ಇವರಿಗೆ ಪ್ರಯಾಣ ಭತ್ಯೆ ಮತ್ತು ಉಪಸ್ಥಿತಿ ಭತ್ಯೆ ನೀಡಲಾಗುವುದು.ಅರ್ಜಿಯನ್ನು 7-11-09ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಕಚೇರಿಗೆ ಸಲ್ಲಿಸಬಹುದಾಗಿದೆ
.
ಭೂ ಸೇನೆಗೆ ಭರ್ತಿಗೆ ರಾಲಿ
ಮಂಗಳೂರು :ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ದಿನಾಂಕ 12 ನವೆಂಬರ್ ನಿಂದ 16 ನವೆಂಬರ್ 2009 ರ ವರೆಗೆ ಭೂ ಸೇನೆಗೆ ರಿಕ್ರೂಟ್ಮೆಂಟ್ ರ್ಯಾಲಿ ನಡೆಯಲಿರುವುದು. ವಿದ್ಯಾರ್ಹತೆ ,ವಯೋಮಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ,ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ,ಮಂಗಳೂರು -575006 ( ದೂ. ಸಂ.0824-2450933) ಇವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಇದರ ವತಿಯಿಂದ ನೆರೆ ಸಂತ್ರಸ್ಥ ಪ್ರದೇಶವಾದ ಗದಗ ಜಿಲ್ಲೆಯ ರೋಣ ತಾಲೂಕಿನ ಭೋಪಳಾಪೂರ ಎಂಬ ಗ್ರಾಮವನ್ನು ದತ್ತು ಸ್ವೀಕರಿಸಿ ಒಂದು ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.



ನೆರೆಗೆ ಸಂಪೂರ್ಣ ನಾಶವಾಗಿರುವ ಮನೆಗಳ ಪುನರ್ ನಿರ್ಮಾಣ, ಭಾಗಶ: ನಾಶವಾಗಿರುವ ಮನೆಗಳ ದುರಸ್ಥಿ,ಕೃಷಿ ಅಭಿವೃದ್ಧಿಯ ಉದ್ದೇಶದಿಂದ ಹೊಸ ಪಂಪ್ ಸೆಟ್ ನೀಡಿಕೆ, ಮತ್ತು ಹಾನಿಗೊಂಡ ಪಂಪುಸೆಟ್ ಗಳ ದುರಸ್ಥಿ , ಶಾಲಾ ಅಭಿವೃದ್ಧಿ, ಆವರಣ ಗೋಡೆ ನಿರ್ಮಾಣ, ಸಮವಸ್ತ್ರ ವಿತರಣೆ, ಪೀಠೋಪಕರಣಗಳ ವಿತರಣೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಗ್ರಾಮ ಚಾವಡಿ ನಿಮರ್ಾಣ, ಗ್ರಾಮದ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ, ಗ್ರಾಮದ ಎಲ್ಲಾ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆಯ್ದ ರೋಗಪೀಡಿತ ವ್ಯಕ್ತಿಗಳ ಉಚಿತ ಚಿಕಿತ್ಸೆ ಹಾಗೂ 6ತಿಂಗಳ ಹಿಂಬಾಲಿಸುವಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮದಲ್ಲಿ ಒಂದು ಎಕ್ರೆ ಭೂಮಿ ಖರೀದಿಸಿ ಅಲ್ಲಿ 21ವ್ಯವಸ್ಥಿತ ಮನೆಗಳನ್ನು ನಿರ್ಮಿಸಿ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸ್ಥಳಾಂತರಿಸಲಾಗುವುದು. ಶೇ.50ರಷ್ಟು ಹಾನಿಗೊಳಗಾದ 15ಮನೆಗಳ ದುರಸ್ಥಿ ಹಾಗೂ ಶೇ.25ರಷ್ಟು ಭಾಗಶಃ ಹಾನಿಗೊಳಗಾದ ದುರಸ್ಥಿ ಕಾರ್ಯವನ್ನು ಪ್ರತಿಷ್ಠಾನ ಕೈಗೆತ್ತಿಕೊಳ್ಳಲಿದೆ.


ಈಗಾಗಲೇ ಅ.27ರಂದು ತೋಂಟದ ಶ್ರೀ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಸದ,ಶಾಸಕ ಮತ್ತು ನಾಡಿನ ಹಿರಿಯರ ಸಮ್ಮುಖದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅದೇ ದಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮತ್ತು ಇತರ ತಜ್ಞ ವೈದ್ಯರುಗಳ ಸಹಕಾರಗಳೊಂದಿಗೆ ಒಂದು ದಿನದ ವೈದ್ಯಕೀಯ ಶಿಬಿರವನ್ನು ಉಚಿತವಾಗಿ ನಡೆಸಲಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಈಗಾಗಲೇ ಗ್ರಾಮಕ್ಕೆ ಭೇಟಿನೀಡಿ ನೈರ್ಮಲೀಕರಣ,ಇನ್ನಿತರ ಮೂಲಭೂತ ಅಗತ್ಯಗಳ ಪೂರೈಸುವ ನಿಟ್ಟಿನಲ್ಲಿ ಶ್ರಮದಾನ ಮತ್ತಿತರ ಕಾರ್ಯಗಳಲ್ಲಿ ತೊಡಗಿದ್ದಾರೆ.

ಮುಂದೆ ಓದಿ

ನುಡಿಸಿರಿ

ಈ ಕನಸು ಎಕ್ಸ್ಲೂಸಿವ್ ಸಂದರ್ಶನ

ಆಳ್ವಾಸ್ ನುಡಿಸಿರಿ 2009 ಇದರ ಸರ್ವಾಧ್ಯಕ್ಷರಾದ ಡಾ.ಹಂಪಾನಾ ಅವರು ತಮ್ಮ ಅಧ್ಯಕ್ಷ ಪೀಠದಿಂದ `ಧರ್ಮ ಮತ್ತು ಭಾಷೆ'ಯ ಕುರಿತಾದ ವಿಚಾರದಲ್ಲಿ ಧ್ವನಿಎತ್ತಲಿದ್ದಾರೆ. ಅಧ್ಯಕ್ಷೀಯ ಭಾಷಣದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸುವ ಅಗತ್ಯ ನನಗೆ ಕಾಣುತ್ತಿಲ್ಲ . ಬದಲಾಗಿ ನಾಡು ಎದುರಿಸುತ್ತಿರುವ ಈ ಎರಡು ಪ್ರಮುಖ ಜ್ವಲಂತ ವಿಷಯಗಳನ್ನು ಎತ್ತಿಕೊಂಡು ಇಡೀ ಅಧ್ಯಕ್ಷೀಯ ಭಾಷಣ ನಿರ್ವಹಿಸುತ್ತೇನೆಂದು `ಈ ಕನಸು.ಕಾಂ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.



``ಆಳ್ವಾಸ್ ನುಡಿಸಿರಿ 2009ರ ಸರ್ವಾಧ್ಯಕ್ಷ ಸ್ಥಾನ ನನ್ನ ಬದುಕಿನ ತುಂಬಾ ತೃಪ್ತಿ ನೀಡಿದ ವಿಶೇಷ ಸಂದರ್ಭವಾಗಿದೆ. ಅದೆಷ್ಟೋ ಸಮ್ಮೇಳನಗಳನ್ನು ನಾನೇ ಏರ್ಪಾಡು ಮಾಡಿದ್ದೇನೆ. ಅಂದರೆ ಸಮ್ಮೇಳನಗಳು ನನಗೆ ಹೊಸತಲ್ಲ. ಇನ್ನೆಷ್ಟೋ ಸಮ್ಮೇಳನಗಳ ಅಧ್ಯಕ್ಷನಾಗಿದ್ದೆ. ಇದು ನನಗೆ ಮೊದಲ ಅಧ್ಯಕ್ಷಸ್ಥಾನವಲ್ಲ... ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಏರ್ಪಡಿಸುವ ಆಳ್ವಾಸ್ ನುಡಿಸಿರಿ ಎಲ್ಲಾ ಇತರ ಸಮ್ಮೇಳನಗಳಂತಲ್ಲ. ಈಗಾಗಲೇ ಕಳೆದ ಐದು ವರುಷಗಳ ಕಾಲ ನಡೆದಿರುವ ವಿಧಾನದಿಂದಲೇ ಈ ಸಮ್ಮೇಳನ ಅನನ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ.


ರಾಜಕಾರಣಿಗಳ/ರಾಜಕಾರಣಗಳ ಸೋಂಕಿಲ್ಲ..., ಜಾತಿ, ಮತ, ಧರ್ಮಗಳ ರಾಡಿಯಿಲ್ಲದೆ ಕೇವಲ ಸಾಹಿತ್ಯ, ಸಂಸ್ಕೃತಿಗೆ ಮೀಸಲಾದ ಸಮ್ಮೇಳನ ಇದಾಗಿದೆ. ಈ ಕಾರಣಕ್ಕಾಗಿಯೇ ನನಗೆ ತೃಪ್ತಿ.' ಇದು ಹಂಪನಾ ಅವರ ಮನದಾಳದ ಮಾತುಗಳು...

ಇಂದು ನಾಡು ಬರ ನೆರೆಯಿಂದ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ನುಡಿಸಿರಿ ಅಗತ್ಯವಿತ್ತೇ ಎಂಬ ಮಾತುಗಳು ಕೇಳಿಬರುವುದು ಸಹಜ. ಆದರೆ ಕಷ್ಟದಲ್ಲಿ ಇರುವವರಿಗೆ ಸ್ಪಂದಿಸಬೇಕಾದದ್ದು ಮೊಲದಲ ಕರ್ತವ್ಯ. ಅವರ ನೋವಿನಲ್ಲಿ ನಾವೂ ಇದ್ದು ನಾಡು ನುಡಿಯ ಇತರ ಪ್ರಶ್ನೆಗಳತ್ತವೂ ಗಮನ ಹರಿಸಬೇಕಾದದ್ದು ಅತ್ಯಗತ್ಯ.
ಇಂದು ಗಡಿ, ಭಾಷೆಯ ವಿಚಾರದಲ್ಲಿ ಅನೇಕ ತೊಂದರೆಗಳೆದುರಾಗುತ್ತಿವೆ. ವಿವಿಧ ಒತ್ತಡಗಳೂ ಕಂಡುಬರುತ್ತಿವೆ. ಭಾಷೆಯ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಖಚಿತವಾದ ವಸ್ತುನಿಷ್ಠ ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಭವಿಷ್ಯದ ಜೊತೆಯಲ್ಲಿ ಚೆಲ್ಲಾಟವಾಡಿದಂತೆ. ಇದು ಮುಂದುವರಿದ್ದೇ ಆದಲ್ಲಿ ನಾಳಿನ ಜನಾಂಗ ಖಂಡಿತವಾಗಿಯೂ ನಮ್ಮನ್ನು ಕ್ಷಮಿಸುವುದಿಲ್ಲ. ಕನ್ನಡ - ಇಂಗ್ಲಿಷ್ ಎಂಬ ಗೊಂದಲವನ್ನು ಪರಿಹರಿಸಲು ಸಾಧ್ಯವಿದೆ. ಅದಕ್ಕೆ ದೃಢ ನಿರ್ಧಾರದ ಅಗತ್ಯವಿದೆ.

ವಿಶೇಷ ಸಂದರ್ಶನ: ಹರೀಶ್ ಕೆ.ಆದೂರು.

ಮುಂದೆ ಓದಿ

ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 6,7 ಮತ್ತು 8ರಂದು ಡಾ.ಹಂಪ ನಾಗರಾಜಯ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕನ್ನಡ ನಾಡು ನುಡಿಯ ಸಾಹಿತ್ಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಅಧಿಕೃತ ಆಹ್ವಾನವನ್ನು ಡಾ.ಹಂಪ ನಾಗರಾಜಯ್ಯ ಅವರಿಗೆ ಬೆಂಗಳೂರಿನ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಡಾ.ಕಮಲಾ ಹಂಪನ ಜೊತೆಗಿದ್ದರು.



ಈ ಸಂದರ್ಭದಲ್ಲಿ ನುಡಿಸಿರಿಯ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಡಾ.ನಾ.ದಾ.ಶೆಟ್ಟಿ, ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು, ಸ್ವಾಗತ ಸಮಿತಿ ಸದಸ್ಯ ಯತಿರಾಜ್ ಶೆಟ್ಟಿ ಮೂಡಬಿದಿರೆ ಉಪಸ್ಥಿತರಿದ್ದರು.ನುಡಿಸಿರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ದೊರಕಿದ್ದು ನನ್ನ ಅದೃಷ್ಠ ಎಂದು ಈ ಸಂದರ್ಭದಲ್ಲವರು ಅಭಿಪ್ರಾಯಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ರಾಜ್ಯ ಸರಕಾರದ ನೆರೆಸಂತ್ರಸ್ತರ ಪರಿಹಾರ ನಿಧಿಗೆ ರೂ.22,507 ರೂ. ಡಿ.ಡಿ.ಯನ್ನು ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಕೆ.ಆನಂದ ಶೆಟ್ಟಿ ದ.ಕ.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಗೆ ಗುರುವಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪಿ.ಬಿ.ಹರಿಪ್ರಸಾದ್ ರೈ , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೇಪುಣಿ, ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್, ಲಕ್ಷ್ಮೀನಾರಾಯಣ ರಾವ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪಿಟಿಐ ಕರೆಸ್ಪಾಂಡೆಂಟ್ ಆಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಸದಾನಂದ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ ಉಪನ್ಯಾಸವೃತ್ತಿಗೆ ಸೇರಿದ ಈ ಕನಸು.ಕಾಂನ ಸಂಪಾದಕ ಹರೀಶ್ ಕೆ.ಆದೂರ್ ರವರಿಗೆ ಗುರುವಾರ ಮಂಗಳೂರಿನ ಪತ್ರಿಕಾ ಭವನದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬೀಳ್ಕೊಡುಗೆ ನಡೆಯಿತು.









ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಕೋಸ್ಟಲ್ ಟೈಮ್ಸ್ ಚಾನೆಲ್ ನ ಆಗ್ನೆಲ್ ರೋಡ್ರಿಗಸ್, ಮಂಗಳೂರು ಪ್ರೆಸ್ ಕ್ಲ ಬ್ ಕಾರ್ಯದರ್ಶಿ ಪಿ.ಬಿ.ಹರಿಪ್ರಸಾದ್ ರೈ , ಸನ್ಮಾನಿತರ ಬಗ್ಗೆ ಮಾತನಾಡಿ ಶುಭಕೋರಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್ .ಟಿ. ಬಾಳೇಪುಣಿ ಸ್ವಾಗತಿಸಿದರು, ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್.ವಂದಿಸಿದರು, ಪಿ.ಬಿ.ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ವರದಿ: ನಾಗರಾಜ್
ಚಿತ್ರಗಳು: ಪ್ರಸನ್ನ ಬಿ.ಪಿ

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ವೇಣೂರು: ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಪ್ರಮುಖವಾದುದು . ಹದಿ ಹರೆಯದಲ್ಲಿಯೇ ಸೇವಾ ಮನೋಭಾವನೆಯನ್ನು ಬೆಳೆಸಿ ಆದರ್ಶ ಪ್ರಜೆಯಾಗಿ ಬಾಳಬೇಕು. ಗಾಂಧೀಜಿಯವರ ಗ್ರಾಮ ರಾಜ್ಯದ ಕನಸನ್ನು ನನಸುಗೊಳಿಸಬೇಕಾದ ಜವಾಬ್ದಾರಿ ಯುವಜನತೆಯದ್ದು ಎಂದು ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ಕೆ.ಅಭಯ ಚಂದ್ರ ಜೈನ್ ಹೇಳಿದ್ದಾರೆ.
ಅವರು ಬುಧವಾರ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ಜೈನ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಿ.ಪಂ.ಸದಸ್ಯ ಪಿ.ಧರಣೇಂದ್ರ ಕುಮಾರ್ ಮಾತನಾಡಿ ಗ್ರಾಮಸ್ಥರಲ್ಲಿ ಶುದ್ಧನೀರಿನ ಬಳಕೆ, ಸಾಮಾಜಿಕ ನೈರ್ಮಲ್ಯ, ನೇತ್ರದಾನ , ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದರು.



ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಗುಣಪಾಲ ಜೈನ್, ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಗಣೇಶ್ ರೈ, ಹರಿಪ್ರಸಾದ್ ಪಿ, ಅತಿಥಿಗಳಾಗಿದ್ದರು. ಸಭಾಧ್ಯಕ್ಷತೆಯನ್ನು ಜೈನ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ಶೆಟ್ಟಿ ವಹಿಸಿದ್ದರು.
ಶಿಬಿರಾಧಿಕಾರಿ ಮಹಾವೀರ ಎಂ ಸ್ವಾಗತಿಸಿದರು. ಶಿಬಿರದ ಘಟಕ ನಾಯಕಿ ಸೌಮ್ಯ ದೇವಾಡಿಗ ವಂದಿಸಿದರು. ಕೆ.ಉದಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಮುಂದೆ ಓದಿ

ನುಡಿಸಿರಿ

ಆಳ್ವಾಸ್ ನುಡಿಸಿರಿಗೆ ಸಾಹಿತಿಗಳ ದಂಡು

ಮೂಡುಬಿದಿರೆ: ನ. 6,7 ಮತ್ತು 8ರಂದು ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ 2009 ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ನಾಡಿನೆಲ್ಲೆಡೆಯಿಂದ ಪ್ರಸಿದ್ಧ ಸಾಹಿತಿಗಳ ಗಡಣವೇ ಆಗಮಿಸಲಿದೆ. ಕನ್ನಡದ ಖ್ಯಾತ ಕವಿ, ವಿಮರ್ಶಕ, ಅನುವಾದಕ, ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿರುವ ಡಾ.ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ನ.6 ರಂದು ನುಡಿಸಿರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

'ಕನ್ನಡ ಮನಸ್ಸು: ಸಮನ್ವಯದೆಡೆಗೆ' ಎಂಬ ಮುಖ್ಯ ಪರಿಕಲ್ಪನೆಯಡಿ ಹಿರಿಯ ಸಂಶೋಧಕ ಡಾ.ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದೆ. ನ.6ರಂದು 2.20 ರಿಂದ ನಡೆಯುವ 'ಭಾಷೆ ಮತ್ತು ಸಾಹಿತ್ಯ- ಸಮನ್ವಯದೆಡೆಗೆ' ಎಂಬ ಮೊದಲ ಗೋಷ್ಠಿಯಲ್ಲಿ ಭಾಷೆಯ ಕುರಿತು ಬಿ.ಎನ್.ಸುಮಿತ್ರಾಬಾಯಿ, ಸಾಹಿತ್ಯದ ಕುರಿತು ಡಾ.ಸಿ.ಎನ್.ರಾಮಚಂದ್ರನ್ ಭಾಗವಹಿಸಲಿದ್ದಾರೆ. ನ.7 ರಂದು ಬೆಳಗ್ಗೆ 9.50ರಿಂದ ನಡೆಯುವ 'ಸಂಸ್ಕೃತಿ ಸಮನ್ವಯದೆಡೆಗೆ' ಎಂಬ ಎರಡನೇ ವಿಚಾರಗೋಷ್ಠಿಯಲ್ಲಿ ಶಿಷ್ಟ ಸಂಸ್ಕೃತಿ ಕುರಿತು ಡಾ.ಮಲ್ಲೇಪುರಂ.ಜಿ.ವೆಂಕಟೇಶ್, ಜಾನಪದ ಸಂಸ್ಕೃತಿ ಕುರಿತು ಡಾ.ಹಿ.ಶಿ ರಾಮಚಂದ್ರೇಗೌಡ ಮಾತನಾಡಲಿದ್ದಾರೆ. ಅದೇ ದಿನ ಅಪರಾಹ್ನ 2.20ರಿಂದ ನಡೆವ ಧರ್ಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಡಾ. ಶ್ರೀರಾಮ ಭಟ್ಟ, ಡಾ.ಎಚ್.ಎನ್ ಮುರಳೀಧರ ಭಾಗವಹಿಸಲಿದ್ದಾರೆ. ನ.8 ರಂದು ಬೆಳಗ್ಗೆ 9.50ರಿಂದ ನಡೆವ ಮಾಧ್ಯಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಗಿರೀಶ್ ರಾವ್ (ಜೋಗಿ) ಮುದ್ರಣ ಮಾಧ್ಯಮದ ಕುರಿತು ಜಿ,ಎನ್ ಮೋಹನ್ ವಿದ್ಯುನ್ಮಾನ ಮಾಧ್ಯಮದ ಕುರಿತು ಮಾತನಾಡಲಿದ್ದಾರೆ.

ಕನ್ನಡ ಕತೆಗಾರರನ್ನು ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಾಗೂ ಅವರ ಬರವಣಿಗೆಯ ಸ್ಪೂರ್ತಿ, ಪ್ರೇರಣೆ, ನಿಲುವುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಥಾಸಮಯವೆಂಬ ವಿಶಿಷ್ಠ ಗೋಷ್ಠಿಯೊಂದು ಸಮ್ಮೇಳನದಲ್ಲಿ ಆಯೋಜಿಸಿದ್ದು ಇದರಲ್ಲಿ ಡಾ.ನಾ ಡಿಸೋಜ, ಶ್ರೀನಿವಾಸ ವೈದ್ಯ, ನೇಮಿಚಂದ್ರ ಮತ್ತು ಸುನಂದ ಪ್ರಕಾಶ್ ಕಡಮೆ ಭಾಗವಹಿಸಲಿದ್ದಾರೆ.
ಕವಿಸಮಯ ಕವಿನಮನವೆಂಬ ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಪ್ರತಿಭಾನ್ವಿತ ಕವಿಗಳು ಭಾಗವಹಿಸುವರು. ಇದರಲ್ಲಿ ಎಲ್.ಎನ್.ಮುಕುಂದರಾಜ್, ವಿ.ಗ.ನಾಯಕ, ಕೆ.ಷರೀಫಾ, ದು.ಸರಸ್ವತಿ, ಸತ್ಯಾನಂದ ಪಾತ್ರೋಟ, ವೀಣಾ ಬನ್ನಂಜೆ, ಲಲಿತಾ ಸಿದ್ಧಬಸವಯ್ಯ, ತಾರಿಣಿ ಶುಭದಾಯಿನಿ, ರಾಮಸ್ವಾಮಿ ಡಿ.ಎಸ್ ಭಾಗವಹಿಸಲಿದ್ದಾರೆ.
ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಡಾ. ಆಳ್ವರು ವಿನಂತಿಸಿದ್ದಾರೆ. ನುಡಿಸಿರಿಯಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಆಸಕ್ತರಾದವರು ವಿವರಗಳಿಗೆ ದೂರವಾಣಿ ಸಂಖ್ಯೆ (08258-238104 ರಿಂದ 238111) ರ ವರೆಗೆ ಸಂಪರ್ಕಿಸಬಹುದು.

ಮುಂದೆ ಓದಿ
7:38 AM

ಇದೂ ಸುದ್ದಿ...

Posted by ekanasu

ವೈವಿಧ್ಯ

ಆದ್ರೆ ಸುದ್ದಿ ಪತ್ರಿಕೆಗಳದ್ದು!

ಏನೇ ಇವತ್ತು ಪೇಪರ್ ಬಂದಿಲ್ವೇ...? ಎಂದು ಬೆಳ್ಳಂಬೆಳಗ್ಗೇ ಮೈ ಮುರಿಯುತ್ತಾ ಪ್ರಶ್ನಿಸುವ ಮನೆ ಯೆಜಮಾನ... ಮಮ್ಮೀ ನ್ಯೂಸ್ ಪೇಪರ್ ಎಲ್ಲಿ...? ಎಂದು ಕೇಳುವ ಶಾಲೆಗೆ ಹೋಗುವ ಚೂಟಿ... ಛೆ... ಇಷ್ಟೊತ್ತಾದ್ರೂ ಇನ್ನೂ ಪೇಪರ್ ಬಂದಿಲ್ವೇ ಎಂದು ತಲೆಕೆರೆದುಕೊಳ್ಳುವ ಮಂದಿ... ಇವೆಲ್ಲವೂ ದಿನಂಪ್ರತಿ ನಾವು ನೀವು ಕೇಳುವ, ನೋಡುವ ಹೆಚ್ಚೇಕೆ ಅನುಭವಿಸುವ ರೀತಿ.


ಈ ಸುದ್ದಿಗಳನ್ನು ನೀಡುವ ಸುದ್ದಿ ಪತ್ರಿಕೆಗಳು ಹುಟ್ಟಿದ ರೀತಿ, ಬೆಳೆದು ಬಂದ ಹಾದಿಯ `ಸುದ್ದಿ'ಯೇ ಒಂದು ವಿಶಿಷ್ಟ-ವಿಭಿನ್ನ. ಅದೇ ಒಂದು ಆಕರ್ಷಣೆ!.
`ಒಂದು ದಿನ ಪತ್ರಿಕೆ ಇಲ್ಲದಿದ್ದಲ್ಲಿ...?' ಅದನ್ನು ಊಹಿಸುವುದಕ್ಕೂ ಅಸಾಧ್ಯ. ವಿದ್ಯುನ್ಮಾನ ಮಾಧ್ಯಮ ಎಷ್ಟೇ ಮುಂದುವರಿದರೂ ಇಂದು ಪತ್ರಿಕೆಯ ಮೇಲೆ ಕಣ್ಣಾಡಿಸದಿದ್ದಲ್ಲಿ ಆ ದಿನವೇನೋ ಒಂದು ಕಳಕೊಂಡಂತೆ ಎಂದಾಗುತ್ತದೆ. ಇದಂತೂ ಸತ್ಯ.
ಪ್ರಪಂಚದ ಪ್ರಥಮ ಪತ್ರಿಕೆ ಅದರ ಸುಧಾರಿತ ರೂಪದಲ್ಲಿ 1566 ಆರಂಭವಾಯಿತು. ಇಟೆಲಿಯ ವೆನ್ನಿಸ್ ಸರಕಾರವು ಕೈಬರಹದ ಪತ್ರಗಳನ್ನು ಬೀದಿ ಬೀದಿಗಳಲ್ಲಿರುವ ಗೋಡೆಗಳಿಗೆ ಅಂಟಿಸಿ ಪ್ರಚಾರ ಮಾಡಿತು. ತನ್ಮೂಲಕ ಸುದ್ದಿ ಪತ್ರಿಕೆಗಳ ಉಗಮವಾಯಿತು.ಅಂದು ಆ `ಸುದ್ದಿ'ಪತ್ರಿಕೆಗಳನ್ನು ಓದಬೇಕಾದಲ್ಲಿ ಸರಕಾರಕ್ಕೆ `ಗಝೆಟಾ'ಎಂಬ ನಿಗಧಿತ ಮೌಲ್ಯದ ಮೊತ್ತ ತೆರಬೇಕಾಗಿತ್ತು. ಈ ಕಾರಣಕ್ಕಾಗಿಯೇ ಸುದ್ದಿ ಪತ್ರಿಕೆಗಳಿಗೆ `ಗಝೆಟಿಯರ್' ಎಂಬ ಹೆಸರು ಬಂದಿರಬೇಕು.

ಬೆಬಿಲೋನಿಯಾ ಮತ್ತು ಅಸ್ಸೀರಿಯಾದಲ್ಲಿ ಸುದ್ದಿಗಳನ್ನು ಕಲ್ಲಿನಲ್ಲಿ ಕೆತ್ತಲಾಗುತ್ತಿತ್ತು. ಆ ಪೈಕಿ ಅತ್ಯಂತ ಹಳೆಯದಾದುದೆಂದರೆ `ಸಿಲೋವೆಲ್ ಇನ್ಸ್ಕ್ರಿಪ್ಶನ್ ' ಇದು ಶಿಲೆಯಾಗಿದ್ದು 1880ರಲ್ಲಿ ಲಭ್ಯವಾಯಿತು.ಅರ್ಧ ಶತಮಾನದ ಬಳಿಕ ವೆನ್ನಿಸ್ನಲ್ಲಿ ಗಝೆಟ್ ಕಾಣಿಸಿಕೊಂಡರೆ, ಲಂಡನ್ನಲ್ಲಿ 1622ರಲ್ಲಿ ವೀಕ್ಲೀ ನ್ಯೂಸ್ ಎಂಬ ಆಂಗ್ಲ ಪತ್ರಿಕೆ ಆರಂಭವಾಯಿತು.
ಹಳೆಯ ಆರ್ಥಿಕ ವಿಚಾರ ಪತ್ರಿಕೆ ಎನಿಸಿದ `ಕೌರಾಂಟ್' 1656ರ ಜನವರಿ 8ರಂದು ನೆದರ್ಲಾಂಡಿನ ಹಾರ್ಲೆಮ್ ನಲ್ಲಿ ಆರಂಭವಾಯಿತು.
ದೇಶದ ಸುದ್ದಿ ಪತ್ರಿಕೆಗಳ ಇತಿಹಾಸದತ್ತ ಅವಲೋಕಿಸಿದರೆ ಪ್ರಥಮ ಸುದ್ದಿಪತ್ರಿಕೆ 1780ರ ಜನವರಿ 27ರಂದು ಆರಂಭಗೊಂಡಿತು. ಇದೇ ಬಂಗಾಲಿ ಗಝೆಟ್. ಜೇಮ್ಸ್ ಹಿಕ್ಕೀ ಎಂಬಾತ ಇದನ್ನು ಪ್ರಾರಂಭಿಸಿದ. ದುರದೃಷ್ಟವಶಾತ್ ಇದು ಒಂದು ವರ್ಷದ ಅವಧಿಯಲ್ಲೇ ನಿಂತುಹೋಯಿತು. ಇದು ಇಂದು ಇತಿಹಾಸ.
1947ರ ವೇಳೆಗೆ ದೇಶದಲ್ಲಿ 3ಸಾವಿರ ಸುದ್ದಿ ಪತ್ರಿಕೆಗಳಿದ್ದವು. ಹಳೆಯ ಪತ್ರಿಕೆಗಳ ಪೈಕಿ ಕನ್ನಡದಲ್ಲಿ `ಸಂಯುಕ್ತ ಕರ್ನಾಟಕ' ಹಿರಿಯಪತ್ರಿಕೆ ಎನಿಸಿಕೊಂಡಿದೆ. ತನ್ನ ಅಮೃತಮಹೋತ್ಸವವನ್ನೂ ಆಚರಿಸಿದೆ. ಉಳಿದಂತೆ ಆಂಗ್ಲಪತ್ರಿಕೆಗಳ ಪೈಕಿ 1838ರಲ್ಲಿ ಆರಂಭಗೊಂಡ ದ ಟೈಮ್ಸ್ ಆಫ್ ಇಂಡಿಯಾ, 1865ರಲ್ಲಿ ಆರಂಭವಾದ ಪಯೋನೀರ್, 1868ರಲ್ಲಿ ಆರಂಭಗೊಂಡ ದ ಅಮೃತ್ ಬಜಾರ್ ಪತ್ರಿಕೆ, 1875ರಲ್ಲಿ ಆರಂಭಗೊಂಡ ಸ್ಟೇಟ್ಸ್ ಮೆನ್, 1876ರಲ್ಲಿ ಆರಂಭಗೊಂಡ ದ ಹಿಂದೂ ಪ್ರಮುಖವಾದವುಗಳು.


400 ವರ್ಷಗಳ ಹಿಂದೆ ಸುದ್ದಿ ಪತ್ರಿಕೆಗಳು ಆರಂಭವಾಯಿತಾದರೂ, ಇದಕ್ಕೂ ಹಿಂದೆ ಪುರಾತನ ಗ್ರೀಸ್ನಲ್ಲಿ ಸುದ್ದಿ ಮಾಧ್ಯಮಗಳಿದ್ದವು. ಇದು ಇತಿಹಾಸಗಳಿಂದ ತಿಳಿಯುತ್ತವೆ.
`ಮೊದಲ ಕನ್ನಡ ದೈನಿಕ `ಮಂಗಳೂರ ಸಮಾಚಾರ'. 1843ರಲ್ಲಿ ಮೊಗ್ಲಿಂಗ್ ಸಂಪಾಕದತ್ವದಲ್ಲಿ. 1870ರಲ್ಲಿ ಹಳೆ ಮೈಸೂರುನಲ್ಲಿ `ಕರ್ನಾಟಕ ಪ್ರಕಾಶಿಕ' ಆರಂಭವಾಯಿತು. ನಂತರದ ದಿನಗಳಲ್ಲಿ `ಸೂರ್ಯೋದಯ ಪ್ರಕಾಶಿಕ' ಆರಂಭ. ನಂತರ `ದೇಶಾಭಿಮಾನಿ..' ಈ ರೀತಿಯಾಗಿ ಮುಂದುವರಿಯುತ್ತದೆ. ಮೊದಲ ಕನ್ನಡ ಪತ್ರಿಕೆಯನ್ನು ನೀಡಿದ ಹೆಮ್ಮೆಗೆ ಪಾತ್ರವಾದ ಈ ಪ್ರದೇಶದಲ್ಲಿ ಹತ್ತು ಹಲವು ವಾರಪತ್ರಿಕೆಗೆ, ಮಾಸಿಕಗಳು ತಲೆಯೆತ್ತಿವೆ. ಕಂಠೀರವ, ನವಯುಗ, ಸ್ವತಂತ್ರಭಾರತ, ರಾಷ್ಟ್ರಬಂಧು, ಅಂತರಂಗ ಇವೇ ಮೊದಲಾದವುಗಳು.'



ಇದು 7ಸಾವಿರ ವರ್ಷಗಳ ಹಿಂದಿನ ಗೋಡೆಕೆತ್ತನೆ. ಇದು ಗ್ರೀಕ್ ಶೈಲಿಯಾಗಿದ್ದು, ಈ ರೀತಿಯಾಗಿ ಮಾಹಿತಿಗಳನ್ನು ತಿಳಿಸುವ ವ್ಯವಸ್ಥೆಯಿತ್ತು. ಇದು ಗ್ರೀಕ್ ಕೆತ್ತನೆ

ಮುಂದೆ ಓದಿ

ರಾಜ್ಯ - ರಾಷ್ಟ್ರ


ಮುಂಬಯಿ: ಅಮೆರಿಕಾ ತನ್ನ ಕೆಟ್ಟ ಚಾಳಿಯನ್ನು ಮತ್ತೆ ತೋರ್ಪಡಿಸಿದೆ.ಇದೀಗ ಭಾರತೀಯ ವಾಯುನೆಲೆಯನ್ನು ಮತ್ತೆ ಅಕ್ರಮ ಪ್ರವೇಶಿಸಿ ಸಂಶಯಕ್ಕೀಡು ಮಾಡಿದೆ.ಯು.ಎ.ಇ.ನ ಫುಜಿರಿಯಾದಿಂದ ಬ್ಯಾಂಕಾಂಗ್ ಗೆ ತೆರಳುತ್ತಿದ್ದ ಅಮೆರಿಕಾದ ವಿಮಾನವು ಅಕ್ರಮವಾಗಿ ಭಾರತೀಯ ವಾಯನೆಲೆಯನ್ನು ಪ್ರವೇಶಿಸಿದ್ದಲ್ಲದೆ ಸಂಶಾಯಾತೀತವಾಗಿ ವರ್ತಿಸಿದೆ. ಭಾರತದ ವಾಯು ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಅಮೆರಿಕಾಕ್ಕೆ ಸೇರಿದ ವಿಮಾನವೊಂದನ್ನು ಮುಂಬೈನಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿಸಿ ವಿಚಾರಣೆಗೊಳಪಡಿಸಲಾಯಿತು. ವಿಮಾನದಲ್ಲಿ 205ನೌಕಾ ಕಮಾಂಡೋಗಳಿದ್ದರು. ಬೋಯಿಂಗ್ 767 ವಿಮಾನ ಇದಾಗಿತ್ತು. ಭಾರತೀಯ ವಾಯುಪಡೆಯ ಅಧಿಕಾರಿ ವರ್ಗ,ಮುಂಬೈನ ಸುಂಕಾಧಿಕಾರಿಗಳು ಸೇರಿದಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಅಧಿಕಾರಿಗಳು ಸೂಕ್ತ ತನಿಖೆ ಕೈಗೊಂಡಿದ್ದಾರೆ.

ಮುಂದೆ ಓದಿ

ವಿಶೇಷ ವರದಿ

``ನಮಗೆ ಬ್ರೆಡ್, ಆಹಾರ, ರೊಟ್ಟಿ ಅದು ಬೇಡ...ಹಸಿವೆಯನ್ನಾದ್ರೂ ತಡೀತೀವಿ...ದಯವಿಟ್ಟು ಶಾಶ್ವತ ಪರಿಹಾರ ಒದಗಿಸಿ ಕೊಡಿ''ಇದು ಪ್ರವಾಹ ಪೀಡಿತ ಪ್ರದೇಶದ ಜನತೆಯ ಅಳಲು... ಈ ಕನಸು ತಂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿನೀಡಿ ಸಮೀಕ್ಷೆ ನಡೆಸಿದಾಗ ಈ ಅಳಲು ತೋಡಿಕೊಂಡರು. ಬಟ್ಟೆ ಬರೆ, ಹೊಟ್ಟೆ ಹಸಿವು ನೀಗಿಸ್ತೀವಿ...ಆದ್ರೆ ಇರೋಕ್ಕೊಂದು ಸೂರು ಕೊಡ್ಸಿ...ಎಷ್ಟು ದಿನಾಂತ ಹೀಗೆ ನಾವಿರೋದು...ಎಂಬ ಪ್ರಶ್ನೆಯನ್ನೆತ್ತುತ್ತಾರೆ...




ಕಳೆದ ಕೆಲವು ವರ್ಷಗಳಿಂದ ಪ್ರವಾಹ ನಿರಂತರವಾಗಿ ಈ ಪ್ರದೇಶಗಳಲ್ಲಿ ಬರುತ್ತಿದ್ದರೂ ಇವರನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಯಾವುದೇ ಸರ್ಕಾರ ಮಾಡಿಲ್ಲ. ಯಾವ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದುಕೊಂಡರೂ ಇವರೆಲ್ಲರ ತೊಂದರೆಗಳತ್ತ ಗಮನ ಹರಿಸಿಲ್ಲ ಎಂಬುದು ಇವರ ನೋವು...ನಾವು ಇಲ್ಲಿಂದ ಸ್ಥಳಾಂತರಕ್ಕೆ ರೆಡಿ ಇದ್ದೀವಿ...ಆದ್ರೆ ನಮಗೆ ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿಲ್ಲ ಎನ್ನುತ್ತಾರೆ ಅವರು...


ಇಲ್ಲಿ ಮನೆಗಳೆಲ್ಲಾ ಮಣ್ಣಿನದ್ದೇ!
ಈ ಪ್ರದೇಶದ ಮನೆಗಳನ್ನು ನೋಡಿದರೆ ಒಂದು ಅಚ್ಚರಿ ಉಂಟಾಗುತ್ತದೆ. ಇಲ್ಲಿ ಮನೆಯ ಗೋಡೆ, ಸೂರು ಎಲ್ಲವೂ ಮಣ್ಣೇ ಮಣ್ಣು... ಗೋಡೆಯನ್ನು ಮಣ್ಣಿನಿಂದಲೇ ನಿರ್ಮಿಸಲಾಗಿದೆ. ಸೂರಿಗೆ ಮಣ್ಣೇ ಆಧಾರ...ಅಂತೂ ಸರ್ವಂ ಮಣ್ಣು ಮಯಂ... ಮಳೆ ಬಂದರೆ ಮಣ್ಣ ಮೆದುವಾಗುತ್ತದೆ. ಸೂರು ಸಮೇತ ಮನೆ ನೆಲಕ್ಕಚ್ಚುತ್ತವೆ...


ಈಗಾಗಿರೋದು ಅದೇನೇ...ಯಾಕೆಂದರೆ ಮಳೆಯಿಂದಾಗಿ ಮಣ್ಣು ಸಡಿಲವಾಯಿತು...ಇದರಿಂದಾಗಿ ಗೋಡೆ ಸೇರಿದಂತೆ ಸೂರು ನೆಲಕ್ಕಚಿತು...ಪ್ರವಾಹದಿಂದಾಗಿ ನೀರು ಮನೆಯೊಳಗೆಲ್ಲಾ ಹರಿದುಬಂತು...




ಮನೆಯ ಗೋಡೆಗಳು ಸಂಪೂರ್ಣ ಒದ್ದೆಯಾಗಿ ಗೋಡೆ ಸಡಿಲವಾಯಿತು...ಅಂತೂ ಮನೆಗಳು ಭಾಗಶಃ, ಕೆಲವೊಂದು ಸಂಪೂರ್ಣ ನೆಲಕ್ಕಚಿದವು...
ಈ ಪ್ರದೇಶದ ವಾಸಿಗಳಿಗೆ ಸಂಪೂರ್ಣ ಸುಸಜ್ಜಿತ, ಶಾಶ್ವತ ನಿರ್ಮಿತಿಗಳ ಅವಶ್ಯಕತೆಯಿದೆ. ಸರ್ಕಾರ ಇದರತ್ತ ಗಮನ ಹರಿಸಬೇಕಾಗಿದೆ.

ಮುಂದೆ ಓದಿ

ವಿಶೇಷ ವರದಿ

ಹೌದು...ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಅನೇಕ ಬೆಳೆಗಳು ಇಂದು ನಾಶವಾಗಿ ಹೋಗಿದೆ...ಅಕ್ಷರಶಃ ಜನತೆ ದಿಕ್ಕೆಟ್ಟು ಹೋಗಿದ್ದಾರೆ. ಇದರಿಂದಾಗಿ ಮುಂದೆ ಬೆಲೆಗಳು ಗಗನಕ್ಕೇರುವ ಸಾಧ್ಯತೆಗಳಿವೆ...ಧಾನ್ಯ, ಬೇಳೆ ಕಾಳು, ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗುವುದರಲ್ಲಿ ಸಂದೇಹವಿಲ್ಲ.ನೆರೆಪೀಡಿತ ಗದಗ ಜಿಲ್ಲೆಯಲ್ಲಿ ಈ ಕನಸು ತಂಡ ಸುತ್ತಾಡಿದಾಗ ಕಂಡ ದೃಶ್ಯ ಮನಕಲಕುವಂತಿತ್ತು.




ರೈತರ ಬೆಳೆ ಸಂಪೂರ್ಣ ನೀರುಪಾಲಾಗಿತ್ತು. ಮುಖ್ಯವಾಗಿ ಬಿಳಿಜೋಳ,ಜೋಳ,ನೀರುಳ್ಳಿ ಹಾಗೂ ಗೋದಿ ಬೆಳೆ ಗಳು ನೀರುಪಾಲಾಗಿದ್ದವು. ರೈತ ಬೆವರು ಸುರಿಸಿ ಗಳಿಸಿದ್ದ ಎಲ್ಲಾ ಬೆಳೆಗಳು ಸಂಪೂರ್ಣ ಕೊಚ್ಚಿಹೋಗಿದ್ದವು...ಇನ್ನುಕೆಲವು ನೀರುನಿಂತು ಉಪಯೋಗಶೂನ್ಯವಾದಂತಿದ್ದವು...
ಇದೀಗ ಮಳೆ ಕಡಿಮೆಯಾಗಿದೆ. ನರೆ ತನ್ನ ರುದ್ರ ನರ್ತನವನ್ನು ಕೊಂಚ ಕಡಿಮೆ ಮಾಡಿದೆ. ಬೆಳೆಗಾರರು ಬಿಸಿಲು ಬರುತ್ತಿರುವಾಗ ನೀರುಳ್ಳಿ ಸೇರಿದಂತೆ ಅಳಿದುಳಿದ ಬೇಳೆಕಾಳುಗಳನ್ನು ಧವಸಗಳನ್ನು ಒಣಗಿಸುವ ಪ್ರಯತ್ನಕ್ಕೆ ಕೈಯಿಕ್ಕಿದ್ದಾರೆ...ಅಂತೂ ಒಂದು ದೊಡ್ಡ ದುರಂತ ಈ ಪ್ರದೇಶದಲ್ಲಿ ಸಂಭವಿಸಿದೆ...ರಾಜಕಾರಣಿಗಳು ಈ ನಡುವೆಯೂ `ತಮ್ಮ ಪಕ್ಷ'ರಾಜಕೀಯವನ್ನು ಮುಂದುವರಿಸಿದ್ದಾರೆ. ಅಂತೂ ಮಳೆ ದೊಡ್ಡ ಹೊಡೆತವನ್ನು ಉತ್ತರ ಕನ್ನಡ ಜಿಲ್ಲೆಗಂತೂ ನೀಡಿದೆ. ಇದು ಕೇವಲ ಉತ್ತರ ಕನ್ನಡಕ್ಕೆ ನೀಡಿದ ಹೊಡೆತವಲ್ಲ...ರಾಜ್ಯಕ್ಕೆ ನೀಡಿದ ಹೊಡೆತವಾಗಿದೆ...

ಮುಂದೆ ಓದಿ

ಇದು ಈ ಕನಸು ಎಕ್ಸ್ಲೂಸಿವ್
ವಿಶೇಷ ವರದಿ
ಇದು ಮಳೆ ನಿಂತು ಹೋದ ಮೇಲಿನ ದೃಶ್ಯ... ಉತ್ತರ ಕನ್ನಡ ಜಿಲ್ಲೆಯ ಜಲಾವೃತ ಪ್ರದೇಶಗಳತ್ತ ಈ ಕನಸು ತಂಡದ ನೇರ ನೋಟ...ಪ್ರತ್ಯಕ್ಷ ನೋಟ... ಈ ಕನಸು ತಂಡ ಗದಗ ಜಿಲ್ಲೆಯ ರೋಣ, ನರಗುಂದ ಮತ್ತು ನವಲುಗುಂದ ,ಗೋಕುಲಾಪುರ,ಮೆಣಸಿಗೆ,ಹೊಳೆಮಣ್ಣೂರು ಪ್ರದೇಶಕ್ಕೆ ಭೇಟಿ ನೀಡಿತು.ಸುಮಾರು 16ಸಾವಿರ ಜನತೆಯ ಜೀವನದ ಪ್ರತ್ಯಕ್ಷ ನೋಟ...ಅಲ್ಲಿ ಮೌನಮಾತಾಡುತ್ತಿತ್ತು..ರೋಧನವಿತ್ತು...ಇಡೀ ನಿರ್ಮಿತಿಗಳನ್ನು ನೆರೆ ಆವರಿಸಿತ್ತು...ನೆರೆ ತನ್ನೊಡಲಿಗೆ ಕೊಂಡೊಯ್ದಿತ್ತು...



ಮಲಪ್ರಭಾ ಮತ್ತು ಬೆಣ್ಣೆಹಳ್ಳ ಸಂಗಮದ ಪ್ರದೇಶ. ಭರ್ಜರಿ ಮಳೆಯಾದರೆ ನೀರುಕ್ಕುವುದು ಸಹಜ. ಅಲ್ಲಿನ ಭೂ ಪ್ರದೇಶವೇ ಹಾಗೆ...ಈ ನದೀ ಬೆಲ್ಟ್ ನಲ್ಲಿಯೇ ಈ ಮನೆಗಳಿವೆ...ಹಳ್ಳಿಗಳಿವೆ...ಈ ಕಾರಣಕ್ಕಾಗಿಯೇ ಈ ಪ್ರದೇಶಗಳು ಇಂದು ನೆರೆಯ ಭೀತಿಗೆ ತತ್ತರಿಸಿ ಹೋಗಿವೆ. ನೆರೆಯಿಂದ ತೀವ್ರ ತೊಂದರೆಯನ್ನನುಭವಿಸಿದೆ...



ನೆರೆಹಾವಳಿಯಿಂದ ಈ ಪ್ರದೇಶದ ಶೇ.90ರಷ್ಟು ಮನೆಗಳು ನೆಲಕ್ಕಚ್ಚಿವೆ. ಬಹುತೇಕ ಮನೆಗಳ ಒಳಗೂ ನೀರು ನುಗ್ಗಿದ ಹಿನ್ನಲೆಯಲ್ಲಿ ಮನೆಯಲ್ಲಿ ವಾಸಕ್ಕೆ ತೊಡಕಾಗಿದೆ. ಈ ಭಾಗದಲ್ಲಿರುವ ನಿವಾಸಿಗಳಿಗೆ ತಕ್ಷಣಕ್ಕೆ ಸೂಕ್ತವಾದಂತಹ ವಾಸದ ಮನೆಯ ಅವಶ್ಯಕತೆಯಿದೆ...ನಾವು ಕಂಡ ಒಂದು ದೃಶ್ಯ ನಮಗೆ ನಿಜಕ್ಕೂ ಅಚ್ಚರಿಯನ್ನು ತಂದೊಡ್ಡಿದೆ. ಅದೊಂದು ಪುಟ್ಟ ಶಾಲೆ...ಮೂರ್ನಾಲ್ಕು ಕೊಠಡಿಮಾತ್ರ ಅಲ್ಲಿದೆ...ಆದರೆ ಆ ಕೊಠಡಿಗಳೊಳಗೆ 60ಕುಟುಂಬಗಳು ನಾವು ಭೇಟಿನೀಡಿದ ದಿನದ ತನಕವೂ ವಾಸಿಸಿದ್ದವು...ಕಷ್ಟಪಟ್ಟು ಮೂರ್ನಾಲ್ಕು ಗಂಟೆಗಳಷ್ಟು ನಿಲ್ಲಬಹುದಾದ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ವಾಸ...ಸೂಕ್ತ ಶೌಚಾಲಯವಿಲ್ಲ...ಕುಡಿಯುವ ನೀರೂ ಇಲ್ಲ...ಅದೊಂದು ನರಕಯಾತನೆ...


ಇದು ಆಗ್ಲೇ ಬೇಕು
ಈ ಪ್ರದೇಶಗಳಲ್ಲಿ ಇನ್ನಾದರೂ ಸರ್ಕಾರ/ಇಲಾಖೆಗಳು/ಅಧಿಕಾರಿಗಳು ಮುತುವರ್ಜಿ ವಹಿಸಲೇ ಬೇಕು ಮತ್ತು ಈ ಪ್ರದೇಶದಲ್ಲಿ ಜನತೆಗೆ ಧೈರ್ಯ ತುಂಬುವು ಕಾರ್ಯ ಆಗಬೇಕಾಗಿದೆ...ನೆರವು ಪರಿಹಾರಗಳನ್ನು ಸಮರ್ಪಕವಾಗಿ ನೀಡುವ ಕಾರ್ಯ ಆಗಬೇಕು.ಈಗ ಹರಿದು ಬರುವ ಅನೇಕಾನೇಕ ಪರಿಹಾರ ಧನದ ಸಹಾಯದಿಂದ ಸೂಕ್ತ ನಿರ್ವಹಣಾ ಕಾರ್ಯಕ್ರಮ ನಡೆಯಬೇಕು...ಸಂಪೂರ್ಣ ಯಶಸ್ವಿಯಾದ ಸುಸಜ್ಜಿತ ಮನೆಗಳ ನಿರ್ಮಾಣ, ಸರ್ಕಾರ, ನಿರ್ಗತಿಕರ ನಡುವೆ ಸಮನ್ವಯ ನಿರ್ವಹಿಸುವ ಕಾರ್ಯ ಆಗಬೇಕು...ಜನತೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಆಗಬೇಕು...ನೆರೆ ನಿರ್ವಹಣಾ ಸಮಿತಿಯನ್ನು ನಿರ್ಮಾಣ ಮಾಡಬೇಕು..

ಮುಂದೆ ಓದಿ

ವಿಶೇಷ ವರದಿ
ಇದು ಈ ಕನಸು ಎಸ್ಕ್ಲೂಸಿವ್

ಒಂದು ಕಡೆ ಮುಖ್ಯಮಂತ್ರಿಗಳಿಂದ ಬೀದಿಗಿಳಿದು ದೇಣಿಗೆ ಸಂಗ್ರಹ, ಇನ್ನೊಂದೆಡೆ ಸರ್ಕಾರದಿಂದ ಅನುದಾನ ಬಿಡುಗಡೆ, ಇನ್ನೊಂದೆಡೆ ವಿರೋಧ ಪಕ್ಷಗಳು ಆಡಳಿತ ಪಕ್ಷಕ್ಕೆ ಪೈಪೋಟಿ ನೀಡಬೇಕೆಂಬಂತೆ ದೇಣಿಗೆ ಸಂಗ್ರಹ(ಇದು ಪ್ರಚಾರಕ್ಕೋಸ್ಕರ...ಮನೆಗೆ ಬೆಂಕಿಬಿದ್ದಾಗ ಬೀಡಿ ಹೊತ್ತಿಸಿದಂತೆ)...ಸ್ವಯಂ ಸೇವಾ ಸಂಘಟನೆಗಳು, ಅನೇಕಾನೇಕ ಸಮಾಜ ಸೇವಕರು...ಉದ್ಯಮಿಗಳು, ಸಿರಿವಂತರು ,ಶಿಕ್ಷಣ ಸಂಸ್ಥೆಗಳು ಹೀಗೆ ಸಾವಿರಾರು ಮಂದಿ ಯಥಾಶಕ್ತಿ ಸ್ವಯಂ ಪ್ರೇರಣೆಯಿಂದ ಪರಿಹಾರ ಕಾರ್ಯಗಳಲ್ಲಿ ತನು,ಮನ,ಧನಗಳಿಂದ ಸಹಾಯವನ್ನಿತ್ತಿದ್ದಾರೆ.


ಆದರೆ ಈ ಎಲ್ಲಾ ಪರಿಹಾರ ಸಹಕಾರ/ಸಹಾಯಕಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ವಿತರಣೆಯಾಗಿದೆ...ಪ್ರಯೋಜನವಾಗಿದೆ ಎಂಬುದು ಮಾತ್ರ ಚಿಂತನೆಗೆ ಈಡುಮಾಡುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಈ ಎಲ್ಲಾ ಸಹಾಯ ಯಾವ ರೀತಿಯಲ್ಲಿ ಸಹಕಾರಿಯಾಗಿದೆ ಎಂಬುದನ್ನು ಪ್ರತ್ಯಕ್ಷ ನೋಡಿದಾಗ ಅಚ್ಚರಿ,ಮರುಕ ಹುಟ್ಟಿಸುತ್ತದೆ...ಆ ರೀತಿ ಪ್ರವಾಹ ಪೀಡಿತ ಪ್ರದೇಶಗಳು ಇಂದು ನಮ್ಮ ಮುಂದೆ ನಗ್ನವಾಗಿ ತೆರೆದುನಿಂತಿವೆ...

ಹಿರಿಯಕ್ಕನ ಚಾಳಿ: 2007ರಲ್ಲಿಯೂ ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಇತರ ಹಲವಾರು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿತ್ತು... ಆಗ ಸರ್ಕಾರ ಪರಿಹಾರ ಕಾರ್ಯವಾಗಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಅನೇಕರಿಗೆ ಶೆಡ್ ನಿರ್ಮಾಣ ಮಾಡಿ ಕಲ್ಪಿಸಿತ್ತು. ಮತ್ತು ಅಂದು ತಕ್ಷಣ ನಿರ್ಗತಿಕರಿಗೆ ಸೂಕ್ತ ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿತ್ತು. ಇದೀಗ 2009ರಲ್ಲಿ ಮತ್ತೆ ನೆರೆ ಬಂದಿದೆ. ಈ ಬಾರಿ ನೆರೆಗೆ ಸೂರು ಕಳಕೊಂಡವರಿಗೆ ಇನ್ನೂ ಸೂರು ಕಲ್ಪಿಸಲಾಗಿಲ್ಲ...ಬಿಡಿ...2007ರಲ್ಲಿಯೇ ಸೂರು ಕಳಕೊಂಡು ತೊಂದರೆಗೀಡಾದ ಅನೇಕ ಮಂದಿ ಇಂದಿಗೂ ತಾತ್ಕಾಲಿಕ ಶೆಡ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಪಾಪ ಇಂದು ವಿರೋಧ ಪಕ್ಷಗಳಲ್ಲಿ ಕೂತಿರುವ ಮಂದಿ `ತನ್ನ ಎಲೆಯಲ್ಲಿರುವ ಹೆಗ್ಗಣವನ್ನು ಬಿಟ್ಟು ಇನ್ನೊಬ್ಬನ ಎಲೆಯಲ್ಲಿರುವ ನೊಣದತ್ತ ಬೊಟ್ಟುಮಾಡುವಂತೆ' ಮಾಡುತ್ತಿರುವುದು ನಾಚಿಕೆಕೇಡಿನ ವಿಚಾರ...ಸಾಧ್ಯವಾಗಿದ್ದರೆ ಅಂದು, ಅದಕ್ಕೂ ಹಿಂದೆ ನಿರ್ಮಿಸಿದ ತಾತ್ಕಾಲಿಕ ಶೆಡ್ ನಲ್ಲಿಯೇ ಆ ನಿರ್ಗತಿಕರು ವಾಸಿಸುವಂತೆ ಮಾಡಲು ಕಾರಣವೇನು? ಅವರಿಗೇಕೆ ಇನ್ನೂ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಬಗ್ಗೆ ಚಿಂತಿಸುತ್ತಿಲ್ಲ?

ಇದೀಗ ಮತ್ತೆ ನೆರೆ, ಪ್ರವಾಹ ಭೀತಿಯಿಂದ ಅನೇಕ ಮಂದಿ ನಿರ್ಗತಿಕರಾಗಿದ್ದಾರೆ. ಅನೇಕ ಧಾರ್ಮಿಕ ಕೇಂದ್ರಗಳು, ಮಠ,ಸ್ವಯಂ ಸೇವಾ ಸಂಸ್ಥೆಗಳು ,ರಾಜ್ಯದ ಇತರ ಪ್ರದೇಶಗಳು ಸಹಕಾರ/ಸಹಾಯ ಹಸ್ತ ನೀಡುತ್ತಿವೆ. ಆದರೆ ಈ ಸಹಾಯ/ಸಹಕಾರವನ್ನು ಆ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ಪ್ರಯತ್ನಿಸುತ್ತಿದ್ದಾರೆ...? ಸರಕಾರಿ ಅಧಿಕಾರಿಗಳು ನಿಜವಾಗಿಯೂ ಸರಕಾರದ ಜನಪರ ಯೋಜನೆ, ಪ್ರವಾಹ ಪರಿಹಾರವನ್ನು ಜನತೆಗೆ ತಲುಪಿಸಲು ಉತ್ಸುಕತೆ ತೋರಿದ್ದರೆ ಎಂದೋ ಈ ಪ್ರದೇಶಗಳು ಇಂತಹ ತೊಂದರೆಗಳಿಂದ ಮುಕ್ತವಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತಿತ್ತು. ಆದರೆ ಸರಕಾರದ ಬೊಕ್ಕಸ/ಉದಾರ ದಾನಿಗಳ ಹಣವನ್ನು ಕೊಳ್ಳೆಹೊಡೆಯಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅನೇಕ ಮಂದಿ ಯೋಜನೆಗಳ ಅನುಷ್ಠಾನಕ್ಕೆ ಉತ್ಸುಕತೆ ತೋರುತ್ತಿಲ್ಲ...

ಮುಂದೆ ಓದಿ

ಅಡುಗೆ
ಪ್ರಿಯ ಓದುಗರೇ... ಈ ಕನಸು ಈ ಅಂಕಣದೊಂದಿಗೆ ರುಚಿ ವೈವಿಧ್ಯವನ್ನು ಓದುಗರಿಗೆ ಪರಿಚಯಿಸಲಿದೆ. ನಿಮ್ಮಲ್ಲಿ ಅನೇಕ ವೈವಿಧ್ಯಮಯ ಅಡುಗೆಗಳ ಮಾಹಿತಿ ಇರಬಹುದು ದಯವಿಟ್ಟು ಕಳುಹಿಸಿ...ಶೀತ ಹವೆಗೆ ಬಗೆ ಬಗೆಯ ಬಿಸಿ ಬಿಸಿ ಸಾರುಗಳು.

ಕರಿಮೆಣಸಿನ ಸಾರು
ಬೇಕಾಗುವ ಸಾಮಾಗ್ರಿ: ಕರಿಮೆಣಸು 2 ಚಮಚ. ಕಾಲು ಚಮಚ ಕೊತ್ತಂಬರಿ. ಕಾಲು ಚಮಚ ಜೀರಿಗೆ, ಕಾಲು ಚಮಚ ಉದ್ದಿನ ಬೇಳೆ. , ತೆಂಗಿನಕಾಯಿ ತುರಿ ಕಾಲು ಕಪ್, ಹುಳಿ ಚಿಕ್ಕ ನೆಲ್ಲಿಕಾಯಿ ಗಾತ್ರದ್ದು, ರುಚಿಗೆ ತಕ್ಕಷ್ಟು ಉಪ್ಪು, ಹುಳಿಗಿಂತ ತುಸು ಹೆಚ್ಚು ಬೆಲ್ಲ ಮತ್ತು ಒಗ್ಗರಣೆ ವಸ್ತುಗಳು.
ಮಾಡುವ ವಿಧಾನ: ಮೇಲ್ಕಾಣಿಸಿದ ಎಲ್ಲಾ ಸಂಬಾರ ಪದಾರ್ಥಗಳನ್ನು ಹುರಿದು ಕಾಯಿತುರಿ ಹಾಗೂ ಹುಳಿಯೊಂದಿಗೆ ನುಣ್ಣಗೆ ರುಬ್ಬಿ. ಉಪ್ಪು ಬೆಲ್ಲ ಹಾಕಿ 5ಲೋಟ ನೀರು ಸೇರಿಸಿ ಕುದಿಸಿ. ಕರಿಬೇವಿನ ಒಗ್ಗರಣೆ ಕೊಡಿ.



ಹಾಗಲಸೊಪ್ಪಿನ ಸಾರು


ಬೇಕಾಗುವ ಸಾಮಾಗ್ರಿ: ಹಾಗಲಸೊಪ್ಪು ಒಂದು ಹಿಡಿ, ಒಣಮೆಣಸು ಎರಡು, ಕೊತ್ತಂಬರಿ ಕಾಲು ಚಮಚ, ಚಿಟಿಕೆ ಜೀರಿಗೆ, ಉದ್ದಿನ ಬೇಳೆ ಕಾಲು ಚಮಚ, ಹುಳಿ ನೆಲ್ಲಿಕಾಯಿ ಗಾತ್ರದ್ದು, ಇಂಗು, ಬೆಲ್ಲ , ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆ ವಸ್ತುಗಳು.
ಮಾಡುವ ವಿಧಾನ: ಮೇಲ್ಕಾಣಿಸಿದ ಸಂಬಾರ ಪದಾರ್ಥಗಳನ್ನೆಲ್ಲಾ ಹುರಿದು ಹುಡಿಮಾಡಿ ಹುಳಿ ಕಿವಿಚಿ ಉಪ್ಪು ಬೆಲ್ಲ ಹಾಕಿ ಅಗತ್ಯವಿದ್ದಷ್ಟು ನೀರಿಗೆ ಹುಡಿಮಾಡಿದ ಸಂಬಾರ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಶುದ್ಧಗೊಳಿಸಿದ ಹಾಗಲಸೊಪ್ಪನ್ನು ಕುದಿಯುವ ಸಂಬಾರು ರಸಕ್ಕೆ ಹರಿದು ಹರಿದು ಹಾಕಿ. ಇಂಗಿನ ಒಗ್ಗರಣೆ ಕೊಡಿ. ಬೆಲ್ಲ ಕಡಿಮೆ ಹಾಕಿದರೆ ಮಧುಮೇಹಿಗಳಿಗೆ ಉಪಯುಕ್ತ.
- ಸುಮತಿ ಕೆ.ಸಿ.ಭಟ್ ಆದೂರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಂಗಳೂರು:ಬದಲಾಗುತ್ತಿರುವ ಕಾಲಘಟ್ಟದಲ್ಲಿ ತುಳು ಸಂಸ್ಕೃತಿ, ಭಾಷೆಯನ್ನು ಬೆಳೆಸುವ ಕಾರ್ಯ ತುಳು ರಂಗಭೂಮಿಯಿಂದ ನಡೆಯುತ್ತಿರುವುದು ಶ್ಲಾಘನೀಯ. ಇದು ಈ ಮಣ್ಣಿನ ಗುಣ. ತುಳು ಭಾಷೆಯ ಅಭಿವೃದ್ಧಿಗೆ ತುಳು ರಂಗ ಭೂಮಿಯನ್ನು ಬೆಳೆಸೋದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಹೇಳಿದರು. ಮಂಗಳೂರು ಪುರಭವನದಲ್ಲಿ ರಂಗಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ನಡೆದ ನಾಟಕೋತ್ಸವ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವದಾಸ್ ಕಾಪಿಕಾಡ್ರ ಜನಪ್ರಿಯ ನಾಟಕಗಳಿಂದ ತುಳು ರಂಗಭೂಮಿ ಇಂದು ಶ್ರೀಮಂತಗೊಂಡಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.




ತುಳುರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸಿ ಸನ್ಮಾನಿಸುವ ಮೂಲಕ ರಂಗಚಾವಡಿ ಸಂಘಟನೆ ಉತ್ತಮ ಕೆಲಸ ಮಾಡಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ತಿಳಿಸಿದರು.
ಸಮಾರಂಭದಲ್ಲಿ ಚಿತ್ರನಟ ರೋಹಿದಾಸ್ ಕದ್ರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ದೇವಾನಂದ ಶೆಟ್ಟಿ, ಎಂ.ಟಿ.ಎಜುಕೇರ್ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹರ್ಷರಾಜ್ ಮುದ್ಯ , ಮಾಧವ ಬಗಂಬಿಲ ಉಪಸ್ಥಿತರಿದ್ದರು. ವಿ.ಜಿ.ಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮತ್ತು ಚಾಪರ್ಕದ ಮುಂಬಾಯಿ ಸಂಚಾಲಕ ಕರ್ನೂರ್ ಮೋಹನ್ ರೈಯವರನ್ನು ಗೌರವಿಸಲಾಯಿತು.

ಮುಂದೆ ಓದಿ

ಸಿನೆಮಾ
ಜೀವನ ಹರಿಯುವ ನದಿ..ನಾವು ಅದರಲ್ಲಿ ತೇಲುವ ತರಗೆಲೆಗಳು..ಅದು ಕೊಂಡೊಯ್ದ ದಿಕ್ಕಿಗೆ ಸಾಗುವುದಷ್ಟೇ ನಮ್ಮ ಕೆಲಸ. ಜೀವನ ನಮ್ಮೊಡನೆ ಹೊಂದಿಕೊಳ್ಳುವುದಿಲ್ಲ. ನಾವೇ ಅದಕ್ಕೆ ತಲೆಬಾಗಬೇಕು. ಈ ಕಠೋರ ವಾಸ್ತವದ ಅರಿವಾದಾಗ ಆಕೆ ತನ್ನ ಎಲ್ಲವನ್ನೂ ಕಳೆದುಕೊಂಡಿದ್ದಳು. ಬದುಕಿನ ಅಂಧಕಾರದಿಂದ ಹೊರಬರುವ ದಾರಿ ಕಾಣದೇ ತೊಳಲಾಡುತ್ತಿದ್ದಳು.


ಆಕೆಗೂ ಬಾನೆತ್ತರದ ಕನಸುಗಳಿದ್ದವು. ಭವಿಷ್ಯದ ಸುಂದರ ಕಲ್ಪನೆಗಳಿದ್ದವು. ತನ್ನದೇ ಆದ ಪುಟ್ಟ ಮನೆ..ಪ್ರೀತಿಸುವ ಪತಿ..ಮುದ್ದಾದ ಮಕ್ಕಳು...ಆದರೆ ಅವ್ಯಾವುದೂ ನನಸಾಗಲಿಲ್ಲ. ಸಮುದ್ರ ದಡದಲ್ಲ ಕಟ್ಟಿದ ತನ್ನ ಮರಳಿನ ಅರಮನೆ ಅಲೆಯೊಂದಿಗೆ ಕೊಚ್ಚಿಹೋದಾಗ
ಹತಾಶೆಯಲ್ಲಿ ಅಳುವ ಮಗುವಿನಂತೆ ಆಕೆಯೂ ಅಂದು ಬಿಕ್ಕಿಬಿಕ್ಕಿ ಅತ್ತಿದ್ದಳು. ಆದರೆ ಅವಳ ಅಳಲನ್ನು ಕೇಳಲು ಇಡೀ ಮುಂಬೈ ನಗರಿಯಲ್ಲಿ ಯಾರೊಬ್ಬರಿಗೂ ಸಮಯವಿರಲಿಲ್ಲ.

ಕೆಲವೊಮ್ಮೆ ಸಣ್ಣ ಪುಟ್ಟ ಘಟನೆಗಳು ನಮ್ಮ ಜೀವನದ ಹಾದಿಯನ್ನೇ ಬದಲಿಸಿಬಿಡುತ್ತವೆ. ಅಂದು ಮಮ್ತಾಜ್ಳ ಜೀವನದಲ್ಲಿ ನಡೆದ್ದದ್ದೂ ಅದೇ...ಮನುಷ್ಯ ಮಾನವೀಯತೆಯನ್ನು ಮರೆತಾಗ ಕ್ರೌರ್ಯ ಹುಟ್ಟುತ್ತದೆ. ಕ್ರೌರ್ಯ ಹಾಗೂ ಮಾನವೀಯತೆಗಳ ನಡುವಿನ ಸಂಘರ್ಷದಲ್ಲಿ ಮಾನವೀಯತೆ ಸೋತುಹೋಗುತ್ತದೆ...ಮುಗ್ಧ ಜೀವಗಳು ಬಲಿಯಾಗುತ್ತವೆ. ಇಂತಹದೇ ಒಂದು ಕೋಮು ಸಮರದಲ್ಲಿ ಮಮ್ತಾಜ್ ತನ್ನ ಹೆತ್ತವರನ್ನು ಕಳೆದುಕೊಂಡು ಅನಾಥಳಾಗುತ್ತಾಳೆ. ಜೀವನದ ದಾರಿಯನ್ನು ಹುಡುಕುತ್ತಾ ಇದ್ದೊಬ್ಬ ಮಾವನೊಡನೆ ಮುಂಬೈ ಸೇರುತ್ತಾಳೆ. ಮಹಾನಗರಿಯಲ್ಲಿ ಉದ್ಯೋಗ ಸಿಗದೇ ಜೀವನ ಕಷ್ಟವಾದಾಗ ಮಾವ ಮಮ್ತಾಜ್ಳ ಮೊರೆ ಹೋಗುತ್ತಾನೆ. ಮುಂಬೈಯಲ್ಲಿ ಹುಡುಗಿಯರಿಗೆ ಕೆಲಸಕ್ಕೇನು ಬರವಿಲ್ಲ. ಸ್ವಲ್ಪ ದಿನ ಕೆಲಸಮಾಡು ನನಗೆ ನೌಕರಿ ಸಿಕ್ಕುತ್ತಿದ್ದಂತೇ ಬಿಟ್ಟುಬಿಡು...ಮಾವನ ಒತ್ತಾಯಕ್ಕೆ ಆಕೆ ಮಣಿಯುತ್ತಾಳೆ.

ಸಂಸ್ಕಾರವಂತ ಇಸ್ಲಾಂ ಕುಟುಂಬದಲ್ಲಿ ಜನಿಸಿದ ಮಮ್ತಾಜ್ ಹೊಟ್ಟೆಪಾಡಿಗಾಗಿ ಚಾಂದಿನಿ ಬಾರ್ನ ಡಾನ್ಸ್ ಫ್ಲೋರನ್ನೇರುತ್ತಾಳೆ. ಗಿರಾಕಿಗಳ ಮನತಣಿಸಲು ಡಾನ್ಸ್ ಮಾಡುತ್ತಾಳೆ. ಅವರು ಕೊಡುವ ಜುಜುಬಿ ಕಾಸೇ ಈಗ ಇವಳ ಸರ್ವಸ್ವ... ಪ್ರತಿನಿತ್ಯ ಡಾನ್ಸ್ ಫ್ಲೋರನ್ನೇರುತ್ತಲೇ ಸಾವಿರ ಚೂರಿಗಳಿಂದ ಇರಿದ ಯಾತನೆ..ತನ್ನ ಅಸ್ತಿತ್ವವೇ ಅಲುಗಾಡಿದ ಅನುಭವ...ಇನ್ನೆಷ್ಟು ದಿನ ಈ ಹಿಂಸೆ? ಯಾವಾಗ ಇದರಿಂದ ಮುಕ್ತಿ? ನಿನಗೆ ಕೆಲಸ ಯಾವಗ ಸಿಕ್ಕತ್ತೇ ? ಇವು ಮಮ್ತಾಜ್ ಪ್ರತಿನಿತ್ಯ ರಾತ್ರಿ ತನ್ನ ಮಾವನೊಡನೆ ಕೇಳುವ ಪ್ರಶ್ನೆಗಳು...ಆದರೆ ಆಕೆಯ ಪ್ರಶ್ನೆಗಳಿಗೆ ಕೊನೆವರೆಗೂ ಉತ್ತರವಿಲ್ಲ.

ಮನೆಯ ಜವಾಬ್ದಾರಿ ಮರೆತು ಬಿಟ್ಟಿಯಾಗಿ ದೊರೆಯುತ್ತಿದ್ದ ಮಮ್ತಾಜ್ಳ ಆದಾಯವನ್ನು ಉಡಾಯಿಸುತ್ತಾ ಶೋಕಿಯ ಜೀವನ ನಡೆಸುತ್ತಾನೆ ಮಾವ. ಅದೊಂದು ದಿನ ಕುಡಿತದ ಅಮಲಿನಲ್ಲಿ ದಣಿದು ಮಲಗಿದ್ದ ಮಮ್ತಾಜ್ಳ ಮೇಲೆ ಅತ್ಯಾಚಾರವೆಸಗುತ್ತಾನೆ. ಗೆಳತಿಯ ಮಡಿಲಲ್ಲಿ ಮುಖವಿಟ್ಟು ಬಿಕ್ಕತ್ತಾಳೆ ಮಮ್ತಾಜ್. ಆತನನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದೆ. ಆದರೆ...ಆಕೆಯ ಮಾತುಗಳು ಅಳುವಿನೊಡನೆ ಬೆರೆತು ಹೋಗುತ್ತವೆ.
ಜಗತ್ತೆಲ್ಲಾ ನಿದ್ರಿಸುವ ಸಮಯದಲ್ಲಿ ಮಮ್ತಾಜ್ ದುಡಿಯುತ್ತಾಳೆ. ಆಕೆ ಮನೆಯಿಂದ ಹೊರಗೆ ಕಾಲಿಡಲು ಕತ್ತಲಾಗಬೇಕು. ರಸ್ತೆಗಳಲ್ಲಿ ನಿಯಾನ್ ದೀಪಗಳು ಹೊತ್ತಿಕೊಳ್ಳಬೇಕು. ಜಗತ್ತೆಲ್ಲಾ ಕತ್ತಲಿಗೆ ಹೆದರಿದರೆ ಆಕೆ ಬೆಳಕಿಗೆ ನಡುಗುತ್ತಾಳೆ. ಆಕೆಯ ಕೆಲಸವೇ ಅಂತಹದ್ದು...ಜನ ಬೆರಳು ಮಾಡಿ ತೋರಿಸುವಂತಹದ್ದು. ಆದರೆ ಆಕೆಗೆ ಅದೇ ಹೊಟ್ಟೆ ಪಾಡು.


ಡಾನ್ಸ್ ಫ್ಲೋರ್ ಮೆಲಿರುವ ಮಮ್ತಾಜ್ಳ ಮೇಲೆ ಕಸ್ಟಮರ್ಗಳು ನೋಟಿನ ಮಳೆಯನ್ನೇ ಸುರಿಸುತ್ತಾರೆ. ಮನೆಯಲ್ಲಿ ಮಾವನ ಹಣದ ಲಾಲಸೆ ಇನ್ನೂ ಬೆಳೆಯುತ್ತದೆ. ದುಡ್ಡಿಗಾಗಿ ಮಮ್ತಾಜ್ಳನ್ನು ವೇಶ್ಯಾವಾಟಿಕೆಗೆ ದೂಡಲು ಪ್ರಯತಿಸುತ್ತಾನೆ. ಪೋತ್ಯಾ ಮುಂಬೈಯ ಪಾಪ್ಯುಲರ್ ಗ್ಯಾಂಗ್ಸ್ಟರ್. ಪೋಲೀಸ್ ಹಿಟ್ ಲಿಸ್ಟ್ನಲ್ಲಿ ಆತನದೇ ಮೊದಲ ಹೆಸರು. ಈತನ ಹೆಸರು ಅಂಡರ್ ವಲ್ಡ್ನಲ್ಲೂ ನಡುಕ ಹುಟ್ಟಿಸುವಂತಹದ್ದು. ರಾತ್ರಿಯ ವೇಳೆ ನಗರದ ಬಾರ್ಗಳಿಗೊಂದು ರೌಂಡ್ ಹಾಕಿ ಅಲ್ಲಿನ ಹುಡುಗಿಯರೊಡನೆ ಕಾಲಕಳೆಯದಿದ್ದರೆ ಪೋತ್ಯಾನಿಗೆ ನಿದ್ರೆ ಹತ್ತುವುದಿಲ್ಲ. ಆ ರಾತ್ರಿ ಚಾಂದಿನಿ ಬಾರ್ನ ಡ್ಯಾನ್ಸ್ ಫ್ಲೋರ್ ಮೇಲೆ ಮಮ್ತಾಜ್ ನಿಂತಿದ್ದಾಳೆ...ಪೋತ್ಯಾನ ದೃಷ್ಟಿ ಆಕೆಯ ಮೇಲಿದೆ...ಅದ್ಯಾಕೋ ಆಕೆಯ ಮುಗ್ಧಮುಖ ಆತನನ್ನು ಅತಿಯಾಗಿ ಆಕರ್ಷಿಸುತ್ತದೆ. ತಟ್ಟನೆ ಬಾರ್ ಮಾಲೀಕನ ಟೇಬಲ್ ಮೇಲೆ ನೋಟಿನ ಕಂತೆಯನ್ನು ಬಿಸಾಕಿ ಕೋಣೆಯೊಂದನ್ನು ಸೇರುತ್ತಾನೆ...ಹಿಂದಿನಿಂದ ಮಮ್ತಾಜ್..ಈ ಮೊದಲು ಯಾರೊಡನಾದರೂ...?

ಪೋತ್ಯಾ ಕೇಳಿದ ಮೊದಲ ಪ್ರಶ್ನೆಗೆ ಮಮ್ತಾಜ್ಳ ಕಣ್ಣಿರೇ ಉತ್ತರ. ತನ್ನ ಜೀವನದ ಕಥೆಯನ್ನು ಆತನೊಡನೆ ಬಿಚ್ಚಿಡುತ್ತಾಳೆ. ಆಕೆಯ ಕಥೆಯನ್ನು ಕೇಳಿದ ಪೋತ್ಯಾ ಮಾಡಿದ ಮೊದಲ ಕೆಲಸ ಆಕೆಯ ಮಾವನ ಕೊಲೆ. ಮತ್ತೆ ಊರಿಗೆ ಹೋಗ್ತಿಯಾ? ಇಲ್ಲ ನನ್ನನ್ನು ಮದ್ವೆಯಾಗ್ತೀಯಾ? ನಿನ್ನಂತಹವಳಿಗೆ ಇದು ಸರಿಯಾದ ಜಾಗ ಅಲ್ಲ... ಪೋತ್ಯಾನ ನೇರ ಪ್ರಶ್ನೆಗಳು ಮಮ್ತಾಜ್ಳನ್ನು ಗೊಂದಲಕ್ಕೀಡು ಮಾಡುತ್ತವೆ. ಮಮ್ತಾಜ್ ಪೋತ್ಯಾನನ್ನು ಮದುವೆಯಾಗುತ್ತಾಳೆ. ಚಿತ್ರದ ಮೊದಲ ಭಾಗದ ಕಥೆ ಕೊನೆಗೊಳ್ಳುತ್ತದೆ. ವೀಕ್ಷಕ ಕೊಂಚ ರಿಲ್ಯಾಕ್ಸ್ ಆಗುತ್ತಾನೆ.ಮಧುರ್ ಭಂಡಾರ್ಕರ್ ಚಿತ್ರಗಳು ಅದೆಷ್ಟೇ ದೀರ್ಘವಾಗಿರಲಿ ಅವು ವೀಕ್ಷಕರನ್ನು ಬೋರ್ ಹೊಡೆಸುದಿಲ್ಲ. ಮಧುರ್ ತಮ್ಮ ಪ್ರತಿಯೊಂದು ಚಿತ್ರದಲ್ಲೂ ಹೊಸತನವನ್ನು ಬಯಸುವವರು.

ನಾವು ನಿರ್ದೇಶಿಸುವ ಚಿತ್ರಗಳು ಸಮಾಜಕ್ಕೇನಾದರೂ ಕೊಡುಗೆಯನ್ನು ಕೊಡಬೇಕು ಆಗಲೇ ಅದಕ್ಕೊಂದು ಅರ್ಥ ಎಂಬ ಸಿದ್ಧಾಂತ ಇವರದು. ಸತ್ತಾ, ಚಾಂದಿನಿ ಬಾರ್, ಟ್ರಾಫಿಕ್ ಸಿಗ್ನಲ್, ಪೇಜ್ ತ್ರೀ, ಫ್ಯಾಷ್ಯನ್, ಕಾರ್ಪೋರೇಟ್...ಹೀಗೆ ಇವರು ನಿರ್ದೇಶಿಸಿದ ಚಿತ್ರಗಳೆಲ್ಲಾ ಸಾಮಾಜಿಕ ಚಿತ್ರಗಳು. ವಾಸ್ತವಿಕತೆಗೆ ಹತ್ತಿರವಿರುವ ಸರಳ ಕಥಾವಸ್ತು ಇವರ ಚಿತ್ರಗಳ ವಿಶೇಷತೆ. ತೀರಾ ವೇಗವಾಗಿ ಓಡುವ ಮಧುರ್ ಚಿತ್ರಗಳು ಪ್ರತೀ ಹಂತದಲ್ಲೂ ನೋಡುಗರಿಗೆ ಒಂದಲ್ಲೊಂದು ಶಾಕ್ ನೀಡುತ್ತಿರುತ್ತದೆ. ಸ್ತ್ರೀ ಶೋಷಣೆ ಇವರ ಚಿತ್ರಗಳ ಸಾಮಾನ್ಯ ಕಥಾವಸ್ತು.

ಇವರ ಹೆಚ್ಚಿನ ಚಿತ್ರಗಳು ಫೀಮೇಲ್ ಸೆಂಟರ್ಡ್. ಸಮಾಜದಿಂದ ಮರೆಮಾಚಲ್ಪಟ್ಟ ಸತ್ಯಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸುವುದೇ ಇವರ ವೈಶಿಷ್ಟ್ಯತೆ. ಒಂದು ವ್ಯವಸ್ಥೆಯೊಳಗೆ ನಾವಿದ್ದಾಗ ಮಾತ್ರಾ ಅದನ್ನು ಸರಿಪಡಿಸಲು ಸಾಧ್ಯ. ಅದರಿಂದ ಹೊರನಡೆದರೆ ಯಾವತ್ತೂ ಅದನ್ನು ತಿದ್ದಲು ಸಾಧ್ಯವಿಲ್ಲ..ಇದು ಇವರ ಚಿತ್ರಗಳ ಪಾಲಿಸಿ. ಸಮಾಜದ ಕರಪ್ಟೆಡ್ ವ್ಯವಸ್ಥೆಯನ್ನು ಖಂಡಿಸುವಲ್ಲಿ ಮಧುರ್ ಚಿತ್ರಗಳು ದಿಟ್ಟ ಹೆಜ್ಜೆಯನ್ನಿಟ್ಟಿವೆ. ಇವುಗಳಲ್ಲಿ ಚಾಂದಿನಿ ಬಾರ್ ಪ್ರಮುಖವಾದುದು.

ಪೋತ್ಯಾನೊಡನೆ ವಿವಾಹವಾದ ಮಮ್ತಾಜ್ ಗೃಹಿಣಿಯಾಗುತ್ತಾಳೆ. ಬಾರ್ನ ದಾರಿಯನ್ನು ಮರೆತೇ ಬಿಡುತ್ತಾಳೆ. ತಕ್ಕಮಟ್ಟಿಗೆ ತಾನು ಬಯಸಿದ ನೆಮ್ಮದಿಯ ಜೀವನ ಆಕೆಗೆ ದೊರಕುತ್ತದೆ. ಪೋತ್ಯಾನ ವ್ಯವಹಾರ ಬೆಳೆಯುತ್ತಾ ಹೋಗುತ್ತಿದ್ದಂತೆ ಮಮ್ತಾಜ್ಳ ಭಯವೂ ಹೆಚ್ಚುತ್ತದೆ...ಏಕೆಂದರೆ ಪೋತ್ಯಾ ಈಗ ಆಕೆಯ ಸರ್ವಸ್ವ. ಅಂಡರ್ ವಲ್ಡ್ ಜತೆಗಿನ ಪೋತ್ಯಾನ ಸಂಬಂಧ ಮಮ್ತಾಜ್ಗೆ ಅಪರಿಚಿತವೇನಲ್ಲ. ಆದರೂ ಅದೇನೋ ಅವ್ಯಕ್ತ ಭಯ ಆಕೆಯನ್ನು ಹಗಲು ರಾತ್ರಿ ಕಾಡುತ್ತಿರುತ್ತದೆ. ಈ ನಡುವೆ ಮಮ್ತಾಜ್ ಎರಡು ಮಕ್ಕಳ ತಾಯಿಯಾಗುತ್ತಾಳೆ. ಅದೊಂದು ರಾತ್ರಿ ಮಗನನ್ನು ಮಲಗಿಸುತ್ತಾ ಮಮ್ತಾಜ್ ಪೋತ್ಯಾನೊಡನೆ...ನಮ್ಮ ಮಕ್ಕಳು ನಮ್ಮಂತಾಗಬಾರದು..ಅವರು ಚೆನ್ನಾಗಿ ಓದಬೇಕು...ಈ ಕೊಳಕು ಪ್ರಂಪಂಚದ ನೆರಳೂ ಅವರನ್ನು ಸೋಕಲು ನಾನು ಬಿಡಲಾರೆ....ಮಮ್ತಾಜ್ ಮಾತುಗಳನ್ನು ಕೇಳಿ ಪೋತ್ಯಾ ಮುಗುಳ್ನಗುತ್ತಾನೆ...ಆ ನಗುವಿನ ಹಿಂದೆ ಅವ್ಯಕ್ತ ನೋವಿದೆ.

ಅದೊಂದು ದಿನ ಗಡಿಬಿಡಿಯಲ್ಲಿ ಮನೆಯಿಂದ ಹೊರಬಿದ್ದ ಪೋತ್ಯಾ ಮರುದಿನ ಶವವಾಗಿ ಮರಳುತ್ತಾನೆ. ಮಮ್ತಾಜ್ ಮತ್ತೊಮ್ಮೆ ಅನಾಥಳಾಗುತ್ತಾಳೆ...ಈಗ ಎರಡು ಮಕ್ಕಳ ಭವಿಷ್ಯ ಅವಳ ಮುಂದಿದೆ...ಅವರಿಗಾಗಿ ಆಕೆ ಏನಾದರೂ ಮಾಡಲೇಬೇಕಿದೆ.
ಅಂದು ಯಾವ ಅನಿವಾರ್ಯತೆ ಆಕೆಯನ್ನು ಬಾರ್ಗೆ ಸೇರಿಸಿತ್ತೋ ಇಂದು ಮತ್ತೆ ಅದೇ ಅನಿವಾರ್ಯತೆ ಆಕೆಯ ಮುಂದೆ ಹೆಮ್ಮರವಾಗಿ ನಿಂತಿದೆ. ಯಾವ ಕೆಲಸವನ್ನು ತಾನು ಜೀವನದಲ್ಲಿ ಮತ್ತೆ ಮಾಡುವುದಿಲ್ಲವೆಂದು ನಿರ್ಧರಿಸಿದ್ದೆನೋ ಅದೇ ಕೆಲಸಕ್ಕೆ ಮತ್ತೆ ಕೈ ಹಾಕಬೇಕೇ? ಬೇಡ ಹೇಳಿತು ಮನಸ್ಸು...ಆಕೆ ಪೋತ್ಯಾನ ಹಿತೈಷಿಗಳೆನಿಸಿಕೊಂಡವರ ಸಹಾಯ ಬೇಡುತ್ತಾಳೆ...ಪೋತ್ಯಾ ಬದುಕಿರುವಾಗ ಬಾಯಿ ತುಂಬಾ ಅತ್ತಿಗೆ ಎಂದು ಕರೆದವರು ಇಂದು ಆಕೆಯನ್ನು ಕಾಣುತ್ತಿರುವ ದೃಷ್ಟಿಯೇ ಬೇರೆ!.ಮಕ್ಕಳಿಲ್ಲದಿದ್ದರೆ ಈ ಜೀವನವನ್ನೇ ಮುಗಿಸಿಬಿಡಬಹುದಿತ್ತು...ಯೋಚನಯೆ ಸುಳಿಯಲ್ಲಿ ಸಿಕ್ಕಿ ಆಕೆ ಒದ್ದಾಡುತ್ತಾಳೆ.

ಇಲ್ಲ...ತನ್ನ ಮಕ್ಕಳು ತನ್ನಂತಾಗಬಾರದು... ಅವರ ಭವಿಷ್ಯ ಉಜ್ವಲವಾಗಬೇಕಾದರೆ ತಾನು ಮತ್ತೆ ಆ ಹಾಳು ಕೂಪಕ್ಕೆ ಹಾರಲೇಬೇಕು.... ಆಕೆ ನಿರ್ಧರಿಸುತ್ತಾಳೆ. ಮರುದಿನವೇ ತನ್ನ ಹಳೆಯ ಬಾರ್ನ ಡಾನ್ಸ್ ಫ್ಲೋರನ್ನೇರುತ್ತಾಳೆ.
ಮಕ್ಕಳು ಬೆಳೆಯುತ್ತಿದ್ದಾರೆ...ಮಮ್ತಾಜ್ಳ ಅರ್ಧ ಜೀವನ ಬಾರ್ನ ಕಸ್ಟಮರ್ಗಳ ಜತೆಗೇ ಕಳೆದು ಹೋಗುತ್ತಿದೆ..ಆಕೆಗೂ ವಯಸ್ಸಾಗುತ್ತಿದೆ. ಜೀವನದಲ್ಲಿ ವಿಶ್ರಾಂತಿ ಬೇಕೆನಿಸುತ್ತಿದೆ. ಮಕ್ಕಳು ಓದಿ ಒಳ್ಳೆಯ ಕೆಲಸ ಗಿಟ್ಟಿಸಿದ ಮೇಲೆ ತಾನು ಈ ಕೆಲಸಕ್ಕೆ ವಿದಾಯ ಹಾಡುವೆನೆಂಬ ಕನಸು ಕಾಣುತ್ತಾಳೆ. ಅಂದು ಮಾವ ನೌಕರಿ ಗಿಟ್ಟಿಸಿ ತನ್ನನ್ನು ಬಾರ್ನಿಂದ ಬಿಡಿಸುವನೆಂಬ ಕನಸು ಕಟ್ಟಿರಲಿಲ್ಲವೇ? ಅದೇ ತರಹ.


ಜೀವನದಲ್ಲಿ ಬಯಸಿದ್ದೆಲ್ಲಾ ಸಿಗುವಂತಿದ್ದರೆ ಈ ಪ್ರಪಂಚದಲ್ಲಿ ಅಳುವೆಂಬ ಪದವೇ ಇರುತ್ತಿರಲಿಲ್ಲ. ಮಮ್ತಾಜ್ ಹಿಂದೆ ಗೌರವಯುತ ಜೀವನವನ್ನು ಬಯಸಿದ್ದಳು.. ಅದು ಸಿಗಲಿಲ್ಲ....ಬಳಿಕ ನೆಮ್ಮದಿಯ ಜೀವನದ ಕನಸು ಕಂಡಳು... ಅದೂ ದೊರಕಲಿಲ್ಲ...ಈಗ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ..ಈಗ ಆಕೆಗೆ ಅವರದೇ ಚಿಂತೆ. ಒಂದೆಡೆ ಮಗ ಪೋತ್ಯಾನಂತಾದರೆ?ಎಂಬ ಭಯ ವಾದರೆ ಮತ್ತೊಂದೆಡೆ ಮಗಳು ತನ್ನಂತಾಗುವಳೇ ಎಂಬ ಆತಂಕ...ಇಬ್ಬರ ಮೇಲೂ ಆಕೆ ಹದ್ದಿನ ಕಣ್ಣಿಟ್ಟಿದ್ದಾಳೆ.

ಆಕೆಯ ಭಯ ಕೊನೆಗೂ ನಿಜವಾಗುತ್ತದೆ. ಅದೊಂದು ದಿನ ಯಾರದೋ ಅಪರಾಧಕ್ಕಾಗಿ ಮುಗ್ಧ ಮಗ ಜೈಲು ಸೇರುತ್ತಾನೆ.ಪೋತ್ಯಾನ ಮಗನೆಂದ ಮೇಲೆ ಈತನೇ ತಪ್ಪಿತಸ್ಥನಿರಬೇಕು... ಪೋಲಿಸರ ನಿರ್ದಾರ ಕೇಳಿದ ಆ ಮುಗ್ಧ ಯುವಕ ಕ್ರೋಧದಲ್ಲಿ ಸಿಡಿಯುತ್ತಾನೆ. ಅಪರಾಧಿಯ ಮಗ ಅಪರಾಧಿಯೇ ಆಗಬೇಕೇ? ಪ್ರಶ್ನೆ ಆತನನ್ನು ಕಾಡುತ್ತದೆ. ಮಾಡದ ಅಪರಾಧದ ಅವಮಾನದಲ್ಲಿ ಬೇಯುತ್ತಾನೆ. ಇತ್ತ ಮಗನನ್ನು ಬಿಡಿಸಲು ದುಡ್ಡಿಲ್ಲ. ತಾಯಿ ಮತ್ತೆ ತನ್ನ ವೇಶ್ಯಾವಾಟಿಕೆಗಿಳಿಯುತ್ತಾಳೆ. ಹಣ ಸಂಗ್ರಹಿಸುತ್ತಾಳೆ..ದುಡ್ಡು ಸಾಲದಾಗ ಮಗಳನ್ನು ಚಾಂದಿನಿ ಬಾರ್ಗೆ ಕಳುಹಿಸುತ್ತಾಳೆ. ಯಾವುದರ ನೆರಳೂ ತನ್ನ ಮಕ್ಕಳನ್ನು ಸೋಕಬಾರದೆಂದಿದ್ದಳೋ ಅದೇ ಅವರ ಜೀವನವಾಗುತ್ತದೆ. ಮಗ ತಾಯಿಯ ಕಣ್ಣೆದುರೇ ತನ್ನನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದಾತನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಮಮ್ತಾಜ್ ಜೀವಂತ ಶವವಾಗುತ್ತಾಳೆ.


150 ನಿಮಿಷಗಳ ಚಿತ್ರ ಮುಗಿಯುತ್ತಿದ್ದಂತೇ ವೀಕ್ಷಕನ ಮನತುಂಬಾ ಮುಂಬೈಯ ಅಂಡರ್ ವಲ್ಡ್, ಬಾರ್ ಹಾಗೂ ಮಾಫಿಯಾಗಳೇ ತುಂಬಿರುತ್ತವೆ. 2001ರ ಐ.ಐ.ಎಫ್.ಎ ಅವಾರ್ಡ್ ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಚಾಂದಿನಿ ಬಾರ್ ಮಧುರ್ ಭಂಡಾರಕರ್ ಅವರ ಅತ್ಯತ್ತಮ ಚಿತ್ರವೆಂಬ ಖ್ಯಾತಿಯೂ ಹೊಂದಿದೆ. ಮಮ್ತಾಜ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಟಬು ಅಭಿನಯ ಮನಮುಟ್ಟುವಂತಿದೆ. ಇನ್ನು ಪೋತ್ಯಾನಾಗಿ ಮರಾಠಿ ನಟ ಅತುಲ್ ಕುಲಕರ್ಣಿ ಅದ್ಭುತ ನಟನೆಯನ್ನು ನೀಡಿದ್ದಾರೆ.

ನಾನು ನಿರ್ದೇಶಿಸುವ ಚಿತ್ರ ಅಲ್ಟಿಮೇಟ್ ಅಲ್ಲ...ಅದು ಯಾವುದೇ ವಿಷಯದ ಕುರಿತಾದ ಅಂತಿಮ ನಿರ್ಧಾರವೂ ಅಲ್ಲ. ಅದು ಬರೇ ಒಂದು ಅಭಿಪ್ರಾಯ ವಷ್ಟೇ..ಸ್ವೀಕರಿಸುವುದು ಬಿಡುವುದು ವೀಕ್ಷಕರಿಗೆ ಬಿಟ್ಟದ್ದು. ಸಮಾಜದ ಸಮಸ್ಯೆಗಳನ್ನು ಪರಿಚಯಿಸುವುದಷ್ಟೇ ನನ್ನ ಗುರಿ. ಸರಿಪಡಿಸುವುದು ಜನರ ಕೈಲಿದೆ...ಭಂಡಾರಕರ್ ಸಂದರ್ಶನವೊಂದರಲ್ಲಿ ಹೇಳಿದ ಮಾತಿದು. ಚಾಂದಿನಿ ಬಾರ್ ಮಮ್ತಾಜ್ ಓರ್ವಳ ಕಥೆಯಲ್ಲ..ನಮ್ಮ ಸಮಾಜದ ಸಾವಿರಾರು ಹೆಣ್ಮಕ್ಕಳ ಕಣ್ಣೀರ ಕಥೆ. ಅಸ್ತಿತ್ವವೇ ಇಲ್ಲದೇ ಕತ್ತಲೆಯಲ್ಲಿ ಬದುಕುತ್ತಿರುವ ಅಸಹಾಯಕರ ಕಥೆ. ಅಂತಹವರ ನೋವನ್ನು ನಮ್ಮೆಲ್ಲರಿಗೆ ಪರಿಚಯಿಸಿರುವ ಮಧುರ್ ಭಂಡಾರ್ಕರ್ ಪ್ರಯತ್ನ ಪ್ರಶಂಸನೀಯ.

- ಅಕ್ಷತಾ ಭಟ್.ಸಿ.ಎಚ್.

ಮುಂದೆ ಓದಿ
6:36 PM

ಮನದ ಕಡಲಲಿ...

Posted by ekanasu

ಸಾಹಿತ್ಯ

ನಿನ್ನ ಬಯಕೆಯೇ ಮನದ ಕಡಲಲಿ
ಭೋರ್ಗರೆವುದು;ಆ ಕಡಲ
ಭಾವದ ಅಲೆಗಳು ನಿನ್ನ ಸ್ಪರ್ಶಕೆ
ಹಾತೊರೆದು ಮೇಲೆಳುಥಿಹವು
ನಾ ಮುಂದು ತಾ ಮುಂದು ಎಂದು


ಹುಣ್ಣಿಮೆಯ ಚಂದಿರನ ಮೋಹ
ನಿಸರ್ಗದ ಕಡಲ ಆಕರ್ಷಿಸಿದಂತೆ
ಕಡಲ ಅಂಥರಾಳವು ಅಲೆಗಳ ರೂಪದಿ
ತನ್ನ ಪರಧಿಯನು ಮೀರಿ ಚಿಮ್ಮುವಂತೆ;

ನಿನ್ನ ಕಾಣಲು ನಿನ್ನ ಭಾವರೂಪದಲಿ
ಮಿಳಿಥವಾಗಲು ಮಿಡಿಯುಥಿಹುದು
ಮನ ಹುಣ್ಣಿಮೆಯ ಬೆಳದಿಂಗಳಿಗೆ
ಮೊಹಿಥವಾದ ನಿಸರ್ಗದ ಕಡಲಂತೆ

ನನ್ನ ಅಮೂರ್ತ ಭಾವಗಳು ನನ್ನ
ತ್ಹೊರೆದಿಹವು ನಿನ್ನ ಅಪೂರ್ವ ಮೂರ್ಥ
ರೂಪವನ್ನು ಸಂದಿಸಲು:
ನಿ ಆ ಭಾವಗಳ ವಶವಗದಿದ್ದರು ಸರಿಯೇ

ನೀ ಒಮ್ಮೆ ಸಿಕ್ಕ್ಕಿ ಬಿಡು ಅವಕ್ಕೆ:
ನಿನ್ನ ನೋಡಿ ಬಂದು ವಿಜ್ರುಮ್ಭಿಸುವವು
ನನ್ನ ಮನದಲಿ ನ ಎಳೆವ
ಕೊನೆಯ ಉಸಿರವರೆಗೂ ...

- ಈಶಕುಮಾರ್

ಮುಂದೆ ಓದಿ

ವಿಶೇಷ ವರದಿ

ಚಂದಾಮಾಮನ ಮೇಲೆ ನಾಸಾದ ಹೊಸ ಸಂಶೋಧನೆ ಪರಿಣಾಮ ಬೀರಿದೆ ಎಂದು ನಾಸಾ ಮುಖ್ಯಸ್ಥರು ತಿಳಿಸಿದ್ದಾರೆ. ನಮಗೆ ಬೇಕಾದ ಮಾಹಿತಿ ಲಭಿಸಿದೆ. ಸಂಶೋಧನೆಗೆ ಹೊಸ ತಿರುವು ದೊರೆತಿದೆ. ಇದರಿಂದಾಗಿ ಚಂದ್ರನ ಕುರಿತ ಸಂಶೋಧನೆ ಇನ್ನಷ್ಟು ವೇಗ ಪಡೆಯಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.





ಚಂದ್ರನ ಮೇಲ್ಮೈನಲ್ಲಿ ನೀರಿದೆ ಎಂಬ ಅಂಶವನ್ನು ದೃಢಪಡಿಸುವ ಉದ್ದೇಶದಿಂದ, ಹಾಗೂ ಈ ಕುರಿತು ಹೆಚ್ಚಿನ ಪ್ರಯೋಗ ನಡೆಸುವ ಗುರಿಯೊಂದಿಗೆ ನಾಸಾ ಚಂದ್ರನ ಮೇಲೆ ಎರಡು ವ್ಯೋಮ ನೌಕೆಗಳನ್ನು ಡಿಕ್ಕಿಹೊಡೆಸಿತು. ಇದು ಖಗೋಳ ಶಾಸ್ತ್ರದ ಇತಿಹಾಸದಲ್ಲಿಯೇ ಹೊಸತೊಂದು ಪ್ರಯೋಗ ಎಂದೇ ಗುರುತಿಸಲ್ಪಟ್ಟಿತು.



ಖಾಲಿ ಬೂಸ್ಟರ್ ರಾಕೆಟ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಸೆಕೆಂಡಿಗೆ 1.6ಕಿ.ಮೀ ವೇಗದಿಂದ ಎರಗುವಂತೆ ನಾಸಾ ಮಾಡಿತು. ಈ ಸಂದರ್ಭದಲ್ಲಿ ಚಂದ್ರನಿಂದ ಚಿಮ್ಮಿದ ಕಲ್ಲು, ಮಣ್ಣು, ಧೂಳಿನ ಕಣಗಳಲ್ಲಿನ ವಿವಿಧ ಅಂಶಗಳ ಕುರಿತಾಗಿ ಇದೀಗ ನಾಸಾ ವಿಶೇಷ ಅಧ್ಯಯನಕ್ಕೆ ಕೈ ಯಿಕ್ಕಿದೆ. ಅಂತೂ ಚಂದ್ರನಲ್ಲಿ ನೀರಿದೆ ಎಂಬ ಅಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆಯಾದರೆ ನಾಸಾ ಈ ಹೇಳಿಕೆಯ ಬೆನ್ನತ್ತಿ ಸಾಗಿದೆ...

ಮುಂದೆ ಓದಿ

ನುಡಿಸಿರಿ

ಮೂಡಬಿದಿರೆ: ಆಳ್ವಾಸ್ ನುಡಿಸಿರಿ 2009ರ ಅಂಗವಾಗಿ ಅ.11 ರಂದು ಬೆಳಗ್ಗೆ 10.30ಕ್ಕೆ ಮೂಡಬಿದಿರೆ ವಿದ್ಯಾಗಿರಿಯ ಡಾ.ಶಿವರಾಮ ಕಾರಂತ ಸಭಾಂಗಣದಲ್ಲಿ ನುಡಿಸಿರಿ ಹಿತೈಷಿಗಳ ಸಮಾಲೋಚನಾ ಸಭೆ ಏರ್ಪಡಿಸಲಾಗಿದೆ. ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಕೆ ಚಿನ್ನಪ್ಪ ಗೌಡರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಡಾ. ಮೋಹನ ಆಳ್ವರು ಉಪಸ್ಥಿತರಿರುತ್ತಾರೆ.


ಕಳೆದ ಐದು ವರ್ಷಗಳಿಂದ ಆಳ್ವಾಸ್ ಎಜುಕೇಶನ್ ಫೌಂಡೇಷನ್ ನಿರಂತರ ಆಳ್ವಾಸ್ ನುಡಿಸಿರಿ ಎಂಬ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಏರ್ಪಡಿಸುತ್ತಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಇದೇ ಬರುವ ನವೆಂಬರ್ 6,7, ಮತ್ತು 8ರಂದು ವಿದ್ಯಾಗಿರಿಯಲ್ಲಿ ಡಾ.ಹಂ.ಪಾ.ನಾಗರಾಜಯ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಬಾರಿಯ ನುಡಿಸಿರಿ ನಡೆಯಲಿದೆ. ಆಳ್ವಾಸ್ ಸಂಸ್ಥೆಯ ಹಿತೈಷಿಗಳು, ಕನ್ನಡ ನಾಡು ನುಡಿಯ ಬಗೆಗಿನ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗಿಗಳಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ
6:24 PM

ಮಾಯೆ

Posted by ekanasu

ಸಾಹಿತ್ಯ

ಕಡಲುಕ್ಕಿ ನೀರ ನೊರೆ
ಉಗಿಯಾಗಿ ಗಾಳಿಯಲಿ
ಮುಗಿಲಾಗಿ ಬಾನಲ್ಲಿ
ನೆಲೆಗಿಳಿದು ಹನಿಯಾಗಿ
ಮಳೆಯಾಗಿತ್ತು ಬದುಕು


ಹನಿಯು ನೆಲೆಗಿಳಿದು
ಮಣ್ಣ ಹಸಿಯಾಗಿ
ಹಸಿರ ಹುಸಿರಾಗಿ
ಬದುಕು ಹಸನವಾಗಿ
ಸಾಗಿತ್ತು ಜಗದ ಮಾಯೆ.

ಎಂತಕೋ ಮುನಿಸಿದು
ಕಡಲು ಮೊರೆಯಿತು
ಮೋಡ ಮುಸಿಕಿತು
ಹನಿಯು ಬಿರಿದಿತು
ನೀರು ನೆರೆಯಾಯ್ತು

ತೊರೆಹಳ್ಳ ಹೊಳೆಯಾಗಿ
ಹೊಳೆಯು ಹುಚ್ಚಾಗಿ
ನೆರೆ ನಿಟ್ಟುಗೆಟ್ಟು
ಕೊಚ್ಚಿ ಕೊಂಡೊಯ್ತು
ಬದುಕನು ಮಾಯೆ!

ನಿಂತ ಬೆಳೆ ನೀರಾಗಿ
ನೀರಾಲ್ಲೇ ಮುಳಿಗೋಗಿ
ಕೂಳೇ ಇಲ್ಲದಾಗಿ
ಬಾಳೇ ಗೋಳಾಯ್ತು
ಇಂದು ನಾಳೆ ಮಾಯೆ!

ಯಾರು ಹೊಣೆಯಾರು
ಮಾಹೆಯ ಮುನಿಸಿಗೆ?
ಎನ್ನೆದೆಯೊಳಗೆ ಪಿಸುಗುಟ್ಟಿತು
ಮಾತಿಲ್ಲದೆ ಕಂಗು
ನಿನ್ನ ಬದುಕಿನ ಶೈಲಿಯೆಂದು!

- ಕುಮಾರಸ್ವಾಮಿ ಕಡಾಕೊಳ್ಳ

ಮುಂದೆ ಓದಿ
10:51 PM

ಗೈಡ್ ಪ್ರಶಸ್ತಿ

Posted by ekanasu

ರಾಜ್ಯ- ರಾಷ್ಟ್ರ
ನೀರ್ಚಾಲು ನವಜೀವನ ಶಾಲೆಯ ವಿದ್ಯಾರ್ಥಿನಿಯರಾದ ವಿದ್ಯಾ.ಕೆ.ಎನ್, ಸುಶ್ಮಿತಾ.ಬಿ, ಮಾನಸ.ಪಿ.ಎಸ್, ಕೃತಿ.ಪಿ.ಕೆ, ಅಕ್ಷತಾ ದುರ್ಗಾ ಮತ್ತು ಐಶ್ವರ್ಯಾ ಆಳ್ವಾ.ಬಿ ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಧರ್ಮಸ್ಥಳ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಮನೆ ಮತ್ತು ಬೆಳೆ ಹಾನಿಗೊಳಗಾಗಿ ಹತಾಶರಾದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತೆಗ್ಗಿನಕೇರಿ ಓಣಿಯ ಶಿವಾನಂದ ಕಾಲುಂಗರ , ಹಳ್ಳದ ಓಣಿಯ ಬಸವರಾಜ ಹತ್ತಿಕಟಿಗಿ, ಕಳ್ಳಿಮಠದ ಓಣಿಯ ಪಕ್ಕಿರಪ್ಪ ಹಳ್ಳದ, ಗೌಡರ ಓಣಿಯ ಪಾರ್ವತಿ, ಮಲ್ಲವ್ವ ಇವರ ಮನೆಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ.ಹೆಗ್ಗಡೆಯವರು ಭೇಟಿ ನೀಡಿ, ಮನೆಯ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯರೊಂದಿಗೆ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಗವಿಮಠದ ಶ್ರೀ ವೀರಯ್ಯ ಮಹಾಸ್ವಾಮಿಗಳು, ಪಂಚಗ್ರಹ ಹಿರೇಮಠದ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಜೆಡಿಎಸ್ ತಾಲೂಕಾ ಅಧ್ಯಕ್ಷರಾದ ಲೋಕನಾಥ ಹೆಬಸೂರು, ಕೃಷಿ ಸಮಿತಿಯ ಅಧ್ಯಕ್ಷರು ಸಕ್ರಪ್ಪ ಹಳ್ಳದ, ಕರ್ನಾಟಕ ವಿಕಾಸ ಬ್ಯಾಂಕಿನ ಪ್ರಬಂಧಕರಾದ ಎಲ್.ಬಿ.ಪಾಟೀಲರು, ಪುರಸಭೆಯ ಉಪಾಧ್ಯಕ್ಷರು ಸೈಪುದ್ದಿನ ಅವರಾದಿ ಉಪಸ್ಥಿತರಿದ್ದರು. ಬೆಣ್ಣೆ ಹಳ್ಳದ ಸೇತುವೆ ಮೇಲೆ ನಿಂತು ಹಾನಿಗೊಳಗಾದ ಕೃಷಿ ಭೂಮಿಯನ್ನು ವೀಕ್ಷಿಸಿದರು.

ಅಮರಗೋಳ ಗ್ರಾಮದ ನಾಗಲಿಂಗ ಗುಡಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಅಲ್ಲಿಯ ರೈತರೊಂದಿಗೆ ಬೆಳೆ ಹಾನಿಯ ಬಗ್ಗೆ & ಮನೆಯ ಹಾನಿಯ ಬಗ್ಗೆ ಚರ್ಚಿಸಿದರು. ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳನ್ನು ರಚಿಸಿ, ಸಂಘಟನೆಗೆ ಶಕ್ತಿ ನೀಡುವುದರ ಮೂಲಕ ಜನರಿಗೆ ಆರ್ಥಿಕವಾಗಿ ನೆರವು ನೀಡುವುದಾಗಿ ತಿಳಿಸಿದರು. ನವಲಗುಂದ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಛೇರಿಗೆ ಭೇಟಿ ನೀಡಿ, ದೀಪ ಬೆಳಗಿಸಿದರು. 6 ಮೇಲ್ವಿಚಾರಕರಲ್ಲಿ ಕಾರ್ಯಕ್ಷೇತ್ರದ ಸಮಸ್ಯೆಯ ಬಗ್ಗೆ ವಿಮರ್ಶಿಸಿದರು.

ಮುಂದೆ ಓದಿ
10:21 PM

ಮತ್ತೆ `ಪ್ರಳಯ'ಭಯ

Posted by ekanasu

ವಿಶೇಷ ವರದಿ

2012ರಲ್ಲಿ ಪ್ರಳಯವೇ?

ಹೌದು ಈ ಬಾರಿಯ `ದುರಂತ'ಗಳ ಸರಮಾಲೆ ನೋಡಿದರೆ ಭೂಮಿಯಲ್ಲಿ `ಏನೋ' ಒಂದು ಬದಲಾವಣೆ `ಖಂಡಿತ'ವಾಗಿ ನಡೆದೇ ನಡೆಯುತ್ತದೆ ಎಂಬ ಅಂಶ ಗಟ್ಟಿಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಅತಿವೃಷ್ಟಿ ಹಾಗೂ ಭೂ ಕಂಪಗಳು ಇದಕ್ಕೆ ಪೂರಕವೋ ಎಂಬಂತೆ ಭಾಸವಾಗುತ್ತಿದೆ.


ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ವರುಣನ ಅಬ್ಬರ ತಗ್ಗಿದೆ. ಬೀದಿಗೆ ಬಿದ್ದಿರುವ ಲಕ್ಷಾಂತರ ಜನರಿಗೆ ಪುನರ್ವಸತಿ ಕಾರ್ಯ ಆರಂಭವಾಗಿದೆ. 'ಕಾಲಜ್ಞಾನಿ' ನಾಸ್ಟ್ರಡಾಮಸ್ ಹೇಳಿರುವ ಭವಿಷ್ಯವಾಣಿಯೊಂದು ಈ ಸಂದರ್ಭದಲ್ಲಿ ಹಲವರನ್ನು ಕಾಡುತ್ತಿದೆ!

2009ರಿಂದ 2012ರವರೆಗಿನ ಅವಧಿಯಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012ರ ಡಿಸೆಂಬರ್ ವೇಳೆಗೆ ಜಗತ್ತು ಸರ್ವನಾಶ ಹೊಂದುವುದಾಗಿ ನಾಸ್ಟ್ರಡಾಮಸ್ ಹೇಳಿರುವುದಾಗಿ ಈಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ವರದಿಯೀಗ ಹಲವರನ್ನು ಕಾಡತೊಡಗಿದೆ!

ನಿಜ, ಪ್ರಳಯಸದೃಶ ಘಟನೆಗಳು ಸಂಭವಿಸಿಯಾವು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಉಂಟೆಂಬ ಅನುಮಾನ ಬರದಿರದು. ಆದರೆ, ಜಗತ್ತೇ ಸರ್ವನಾಶವಾಗುತ್ತದೆಂಬ ನುಡಿ ಮಾತ್ರ ಉತ್ಪ್ರೇಕ್ಷೆಯೇ ಸರಿ.



ನಾಸ್ಟ್ರಡಾಮಸ್ನ ಒಗಟಿನಂಥ ಹೇಳಿಕೆಗಳನ್ನು ನಾನಾ ವಿಧಗಳಲ್ಲಿ ಅರ್ಥೈಸಬಹುದು. ಅವನ ಭವಿಷ್ಯವಾಣಿಯ ಯಾವುದೇ ಒಂದು ನಿರ್ದಿಷ್ಟ ಹೇಳಿಕೆಯನ್ನು ಹಲವು ಘಟನೆಗಳ ಸಮರ್ಥನೆಗಾಗಿ ಬಳಸಲು ಸಾಧ್ಯ. ಅವನ ಹೇಳಿಕೆಗಳಲ್ಲಿ ಕಾಣ್ಕೆಯ ಜೊತೆಗೆ ಜಾಣ್ಮೆಯೂ ಬೆರೆತಿದೆ. ಆದ್ದರಿಂದ ಅವನ ಹೇಳಿಕೆಗಳನ್ನು 'ಇದಮಿತ್ಥಂ' ಎಂದು ಅರ್ಥೈಸುವುದು ಸರಿಯಲ್ಲ.

ಇದ್ದಕಿದ್ದಂತೆ ಸರ್ವನಾಶವಾಗುವಷ್ಟು ಈ ಜಗತ್ತು ಕ್ಷುಲ್ಲಕವಲ್ಲ. ಸೃಷ್ಟಿ, ಬೆಳವಣಿಗೆ, ಮಾರ್ಪಾಡು, ನಾಶ ಎಲ್ಲವೂ ನಿಧಾನಪ್ರಕ್ರಿಯೆಗಳು. 'ಶೀಘ್ರ ಸರ್ವನಾಶ'ದ ಭ್ರಮೆಗೆ ನಾವು ಬಲಿಯಾಗಬಾರದು.

ಹಾಗೆ ನೋಡಿದರೆ, ಕಳೆದ ವರ್ಷ ವಿಜ್ಞಾನಿಗಳು ಉಂಟುಮಾಡಲೆತ್ನಿಸಿದ್ದ 'ಭೂಗರ್ಭದೊಳಗಿನ ಮಹಾಸ್ಫೋಟ' ಹೆಚ್ಚು ಅಪಾಯಕಾರಿಯಾಗುವ ಸಂಭವವಿತ್ತು. (ಅಂಥದೇನೂ ಅಪಾಯ ಎದುರಾಗದೆಯೂ ಇರಬಹುದಿತ್ತು. ವಿಜ್ಞಾನಿಗಳಿಗೇ ಈ ಬಗ್ಗೆ ನಿಖರ ಅರಿವಿಲ್ಲ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ.) ಭೂಗರ್ಭದೊಳಗೆ 7 ಟೆರಾಎಲೆಕ್ಟ್ರಾನ್ವೋಲ್ಟ್ಸ್ (7 ಟಿಇವಿ) ಶಕ್ತಿಯ ದೂಲಗಳ ಡಿಕ್ಕಿಯನ್ನು ವಿಜ್ಞಾನಿಗಳು ನಡೆಸಿದಾಗ ಕೃಷ್ಣರಂಧ್ರ ಸೃಷ್ಟಿಯಾಗಿ ಭೂಮಿಯು ಅದರೊಳಗೆ ಲೀನವಾಗಿಬಿಡುವ ಅಥವಾ ಸರಪಳಿ ಕ್ರಿಯೆಯಾಗಿ ಜ್ವಾಲಾಮುಖಿ ಸ್ಫೋಟ, ಭೂಕಂಪನ ಮೊದಲಾದವು ಸಂಭವಿಸುವ ಭಯವಿತ್ತು. ತಾಂತ್ರಿಕ ಕಾರಣಗಳಿಂದ ಆ ಪ್ರಯೋಗಕ್ಕೀಗ ಹಿನ್ನಡೆಯಾಗಿದೆ. ಅಷ್ಟರಮಟ್ಟಿಗೆ ಭೂಮಿಯೀಗ ಸುರಕ್ಷಿತವಾಗಿದೆ!

ಜೀವರಾಶಿ ಸಹಿತ ಬ್ರಹ್ಮಾಂಡದ ಸೃಷ್ಟಿಯನ್ನೇ ಮಾನವನಿಗೆ 'ಅನುಕೂಲಕರ'ವಾಗಿ ಮಾರ್ಪಡಿಸುವ ಯತ್ನ ಇಂದು ನಡೆಯುತ್ತಿದೆ. ಹಾಗೆ ಪ್ರಕೃತಿನಿಯಮಕ್ಕೆ ವಿರುದ್ಧವಾಗಿ ಸಾಗಿದಾಗ, 'ಸ್ಥಿತಿ'ಯನ್ನು ಅಂತರಗೊಳಿಸಲು ಹೊರಟಾಗ, 'ಲಯ' ಸರ್ವಥಾ ಸಂಭಾವ್ಯ. ಆದರೆ, 'ಲಯ'ವೆಂಬುದು ದಿಢೀರನೆ ಘಟಿಸುವುದು ಅಸಾಧ್ಯ. ವಿಜ್ಞಾನದ ಸ್ಥಾಪಿತ ನಿಯಮಗಳು ಈ ಆತಂಕಕ್ಕೆ ಪುಷ್ಟಿ ನೀಡುವುದಿಲ್ಲ.

ದಶಕಗಳ ಕೆಳಗೆ, ಅಷ್ಟಗ್ರಹಕೂಟದಿಂದಾಗಿ ಭೂಮಿ ಪ್ರಳಯವಾಗಿಹೋಗುತ್ತದೆಂದು ನಂಬಿಸುವ ಯತ್ನ ನಡೆದಿತ್ತು. ಕೆಲವು ಮುಗ್ಧರು ಆ ಸಂದರ್ಭದಲ್ಲಿ ಮನೆಮಠ ಮಾರಿ ಸಂಪತ್ತನ್ನೆಲ್ಲ ದಾನಮಾಡಿ ದೇವರ ಭಜನೆಮಾಡುತ್ತ ಪ್ರಳಯವನ್ನು ಎದುರುನೋಡುತ್ತ ಕುಳಿತರು! ಪ್ರಳಯ ಘಟಿಸಲಿಲ್ಲ, ಮನೆಮಾರು ಕಳೆದುಕೊಂಡವರು ಮಂಗ ಆದರು ಅಷ್ಟೆ!

ಮತ್ತೊಮ್ಮೆ, ಕೆಲವೇ ವರ್ಷಗಳಲ್ಲೇ ಪ್ರಳಯ ಸಂಭವಿಸುತ್ತದೆಂದು ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದರಲ್ಲಿ ಮುಖಪುಟ ಲೇಖನ ಪ್ರಕಟವಾಯಿತು. ಅದನ್ನು ಸಕಾರಣ ಅಲ್ಲಗಳೆದು ಅದೇ ಪತ್ರಿಕೆಯಲ್ಲೇ ನಾನೂ ಲೇಖನ ಪ್ರಕಟಿಸಿದೆ. ಪ್ರಳಯವಾಗುವುದೆಂದು ಪತ್ರಿಕೆಯು ಸೂಚಿಸಿದ ವರ್ಷಗಳಲ್ಲಿ ನಾನು ಪತ್ರಿಕೆಯು ಹೇಳಿದ ಸ್ಥಳವಾದ ಗುಜರಾತ್ ಸಮುದ್ರತೀರಕ್ಕೇ ಹೋಗಿ ವಾಸವಾಗಿದ್ದೆ! ಅದಾಗಲೇ ಗುಜರಾತ್ನ ಆ ಭಾಗಗಳಿಗೂ ಈ 'ಭವಿಷ್ಯ'ದ ಸುದ್ದಿ ತಕ್ಕಮಟ್ಟಿಗೆ ತಲುಪಿಬಿಟ್ಟಿತ್ತು! ಪ್ರಳಯವೇನೂ ಆಗುವುದಿಲ್ಲವೆಂದೂ, ಚಂಡಮಾರುತ, ಪ್ರವಾಹ, ಭೂಕಂಪಗಳು ಸಂಭವಿಸಬಹುದೆಂದೂ ಅಲ್ಲಿನ ಜನರಿಗೆ ನಾನು ಕಾರಣಸಹಿತ ವಿವರಿಸಿದೆ. ಮುಂದೇನು ಘಟಿಸಿತೆಂಬುದು ಸರ್ವವಿದಿತ.

ನಾನೇನೂ ಜ್ಯೋತಿಷಿಯಲ್ಲ. ಒಂದು ಸಿದ್ಧಾಂತಕ್ಕೆ ಹತ್ತು ಸುಳ್ಳು ಸೇರಿಸಿ ಹೇಳುವ ಜ್ಯೋತಿಷದಲ್ಲಿ ನನಗೆ ನಂಬಿಕೆಯಿಲ್ಲ. ಜ್ಯೋತಿಷದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಅಂತೆಯೇ ಕಾರಣಿಕನುಡಿ, ಭವಿಷ್ಯನುಡಿ ಮೊದಲಾವು ಕೂಡ.

ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು.

ದೇವರು, ಸೃಷ್ಟಿಕರ್ತ, ಜಗನ್ನಿಯಾಮಕ ಎಂಬ ಭಾವನೆಗಳ ಆಸರೆಯಲ್ಲಿ, ನಂಬಿಕೆಯ ನೆರಳಿನಲ್ಲಿ ಇಂದು ಮಾನವ ಸಂಕುಲ ಜೀವಿಸುತ್ತಿದೆ. ಈ ನಂಬಿಕೆಗೆ ಪೆಟ್ಟು ಬೀಳದಿರುವುದೇ ಕ್ಷೇಮ.

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ವಿಶೇಷ ವರದಿ

ಪ್ರಕಾಶ್ ಶೆಟ್ಟಿ, ಉಳೆಪಾಡಿ (ನವದೆಹಲಿ)

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತಾಯ್ತು ನಮ್ಮ ಜನಪ್ರತಿನಿಧಿಗಳ ಕಥೆ. ನಿನ್ನೆ ಜೋಸ್ತಿ ಸರಕಾರದಲ್ಲಿ(ಯಡ್ಡಿ+ಕುಮಾರ)`ಹೆಸರು'ಮಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ `ಅಕ್ಷರ ಜ್ಞಾನ'ದ ಸಂಗತಿ ನಿಮ್ಮ ಮುಂದಿಟ್ಟಿದ್ದೇವೆ. ಆದರೆ ಇದೀಗ ಜೋಸ್ತಿ ಸರಕಾರದಲ್ಲಿದ್ದಾಗ `ಜೋಸ್ತಿ'ಮಾಡಿ ಪಾಠ ಕಲಿತಿದ್ದ ನಮ್ಮ ರಾಜ್ಯದ ಈಗಿನ ಮುಖ್ಯಮಂತ್ರಿ ಬಿ.ಎಸ್ ವೈ.ಅವರ ಅಕ್ಷರ ಜ್ಞಾನದ ಬಗ್ಗೆ ಈ ಕನಸು ವಿಶೇಷ ವರದಿ ಪ್ರಕಟಿಸುತ್ತಿದೆ. ಓದಿ...ಅಭಿಪ್ರಾಯಿಸಿರಿ...



ಮಾಜಿ ಮುಖ್ಯ ಮಂತ್ರಿಗಳ ಕನ್ನಡ ಜ್ಞಾನವನ್ನು ಈವಾಗಲೇ ನಾವು ಹಿಂದಿನ ನಮ್ಮ ವರದಿಯಲ್ಲಿ ಗಮನಿಸಿರುತ್ತೇವೆ. ಕನ್ನಡದ ಮಣ್ಣಿನ ‘ಮೊಮ್ಮಗ’ ಕನ್ನಡದಲ್ಲಿ ತಪ್ಪುಗಳನ್ನು ಬರೆಯುತ್ತಿರುವುದು ಖೇದವೇ ಸರಿ.ಆದರೆ ಇಲ್ಲಿ ನೋಡೀ ನಮ್ಮ ಹಾಲಿ ಮುಖ್ಯಮಂತ್ರಿಯವರ ಕೈ ಬರಹದಲ್ಲೇನಿದೆ ನೋಡೋಣ.

ಹಿಂದೂ ಧರ್ಮ ಸಂಸ್ಕೃತಿಯನ್ನು ಉಳಿಸುವ ಪಕ್ಷದಲ್ಲಿರುವ ನಮ್ಮ ಮುಖ್ಯಮಂತ್ರಿಗಳು ‘ಹಿಂದು’ ಮುಂದು ನೋಡದೆ ತಮ್ಮ ಬರವಣಿಗೆಯಲ್ಲಿ ತಪ್ಪೆಸಗುತ್ತಾರೆ.


ರಾಜ್ಯದ ಪ್ರಜೆಗಳನ್ನೆಲ್ಲಾ ಒಗ್ಗೂಡಿಸುವಂಥಾ ಕಾರ್ಯದಲ್ಲಿ ತಲ್ಲೀನರಾಗಬೇಕಾದ ಇವರು ಆ ಶಬ್ಧವನ್ನೇ ‘ವಗ್ಗೂಡಿಸುವ’ ಅನ್ನುತ್ತಾರೆ. ಇಂಥಾ ಕನ್ನಡ ಕೊಲೆ ಮಾಡುವ ಜನನಾಯಕರಿಗೆ ನಾವೇ ಯಶಸ್ಸು ‘ಕೋರ್ ತೇವೆ ’ ಅಲ್ಲವೇ...


ಈ ಬರಹದೊಂದಿಗೆ ಲಗತ್ತಿಸಿರುವ ಮಾನ್ಯ ಮುಖ್ಯ ಮಂತ್ರಿಯವರ ಸ್ವಲಿಖಿತ ಪತ್ರದ ಛಾಯಾ ಚಿತ್ರವನ್ನು ಮಂಗಳೂರು ಸಮೀಪವಿರುವ ಉಳ್ಳಾಲದ ಕೇಸರಿ ಮಿತ್ರ ವೃಂದಕ್ಕೆ ಭೇಟಿ ಇತ್ತಾಗ ತೆಗೆಯಲಾಗಿದೆ.

ಮುಂದೆ ಓದಿ
| | |Home