ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
3:19 PM

ಕಜ್ಮಿ ಔಟ್...

Posted by ekanasu

ರಾಜ್ಯ - ರಾಷ್ಟ್ರ

ಮುಂಬೈ: ಕಸಬ್ ಪರ ವಕೀಲ ಔಟ್. ಕಾರಣ ನ್ಯಾಯಾಲಯಕ್ಕೆ ಅಗೌರವ ತೋರಿದ್ದು. ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದ ಉಗ್ರ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ವಜಾ ಗೊಳಿಸಿದೆ. ಕಜ್ಮಿ ಸ್ಥಾನಕ್ಕೆ ವಕೀಲ ಕೆ.ಪಿ.ಪವಾರ್ ಅವರನ್ನು ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ. ಸೂಕ್ಷ್ಮ ಪ್ರಕರಣವಾದ ಕಸಬ್ ಪ್ರಕರಣದಲ್ಲಿ ಕಜ್ಮಿ ನಿರ್ಲಕ್ಷ್ಯ ತೋರಿದ್ದು, ನ್ಯಾಯಾಲಯದ ಕಲಾಪಗಳಿಗೆ ಅಗೌರವ, ಅಶಿಸ್ತು ತರುವಂತೆ ಮಾಡಿದ್ದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಓದಿ
12:51 PM

ಆಹಾರ ಪೂರಕ - ಮಾರಕ

Posted by ekanasu

ಆರೋಗ್ಯ
ನಾವು ಸ್ವೀಕರಿಸುವ ಆಹಾರ ಎಷ್ಟರ ಮಟ್ಟಿಗೆ ನಮ್ಮ ದೇಹಕ್ಕೆ ಪೂರಕವಾಗಿವೆ...ಎಷ್ಟು ಮಾರಕವಾಗಿದೆ ಎಂಬುದನ್ನು ನಾವೆಷ್ಟು ಚಿಂತಿಸಿದ್ದೇವೆ? ಅಥವಾ ಚಿಂತಿಸುತ್ತಿದ್ದೇವೆ? . ಇಂದು ಆಹಾರ ಸೇವನೆಯೂ ಒಂದು ಫ್ಯಾಶನ್ ಎಂಬಂತಾಗಿದೆ. ನಾವು ಇಂತಹ ಆಹಾರ ಸೇವನೆ ಮಾಡದಿದ್ದರೆ ನಮ್ಮನ್ನು ಇತರರು ಕೀಳಾಗಿ ಕಾಣುತ್ತಾರೆಂಬ ಭಾವನೆ ಇಂದಿನ ಜನತೆಯದ್ದು. ಆರೋಗ್ಯದತ್ತ ಕಾಳಜಿ ವಹಿಸದೆ ಶೋಕೀ ಜೀವನಕ್ಕಾಗಿ ಆಹಾರ ಸೇವಿಸುವ ನಾವು ನಾವು ತಿನ್ನುವ ಆಹಾರದತ್ತ ಗಮನ ಹರಿಸಲೇ ಬೇಕು. ಪತ್ರಕರ್ತ ಮಿತ್ರ ಬಹುಮುಖಿ ಪ್ರತಿಭೆಯ ಧನಂಜಯ ಮುಡಬಿದ್ರೆ ಈ ಕನಸು.ಕಾಂಗಾಗಿ ಆಹಾರ ಪೂರಕ - ಮಾರಕ ವಿಷಯದಲ್ಲಿ ಇನ್ನುಮುಂದೆ ಬರೆಯುತ್ತಾರೆ. ಓದಿ ಅಭಿಪ್ರಾಯಿಸಿ... - ಸಂ.


ನಾವು ಸೇವಿಸುವ ಆಹಾರದಲ್ಲಿ ಏನಿದೆ? ಅವುಗಳಲ್ಲಿ ಆರೋಗ್ಯಕ್ಕೆ ಪೂರಕವಾದುದು ಏನು? ಮಾರಕವಾದುದು ಏನು? ರಾಸಾಯನಿಕ, ಕೀಟನಾಶಕ ಬೆರೆತ ಆಹಾರ ಪದಾರ್ಥಗಳಲ್ಲಿ ಅಪಾಯ ಏನಿದೆ? ತಿಳಿದೇ ಮಾಡುವ ಕಲಬೆರಕೆಯ ಸ್ವರೂಪ ಹೇಗಿದೆ? ಅವನ್ನೆಲ್ಲಾ ತಿಳಿದೇ ಸ್ವೀಕರಿಸುವ ವಿಷವರ್ತುಲದಲ್ಲಿ ನಾವಿದ್ದೇವೆಯೇ? ಆಹಾರ ಪದಾರ್ಥಗಳಲ್ಲಿರುವ ನಿಜ ಸತ್ವ, ಪೋಷಕಾಂಶಗಳ ಪ್ರಯೋಜನವನ್ನು ನಾವು ಪಡೆಯುವುದೆಂತು?ಇದನ್ನೆಲ್ಲಾ ತಿಳಿದುಕೊಳ್ಳುವ ಅವಶ್ಯಕತೆಗಾಗಿ ಆಹಾರ ಪೂರಕ ಮಾರಕ ಲೇಖನ ನೀಡುತ್ತಿದ್ದೇನೆ.
ಪೌಷ್ಠಿಕ ಸತ್ವಯುತ ಆಹಾರ ಸೇವನೆ

ಹಸಿ ತರಕಾರಿ ಹಾಗೂ ಸೊಪ್ಪುಗಳು

ತರಕಾರಿಗಳನ್ನು , ಸೊಪ್ಪುಗಳನ್ನು ಬೇಯಿಸುವುದರಿಂದ ಅವುಗಳಲ್ಲಿ ಅಡಗಿರುವ ಪೋಷಕಾಂಶಗಳು, ಖನಿಜಾಂಶಗಳು ನಾಶವಾಗುತ್ತವೆ. ಆದುದರಿಂದ ಕೆಲವು ತರಕಾರಿಗಳನ್ನಾದರೂ ಬೇಯಿಸದೆ ಹಸಿಯಾಗಿಯೇ ಸೇವಿಸಬೇಕು. ಉದಾ: ಸೌತೆಕಾಯಿ, ಕ್ಯಾರೆಟ್, ಬೀಟ್ ರೂಟ್, ಎಲೆಕೋಸು, ಹೂಕೋಸು ಇವುಗಳನ್ನು ತೊಳೆದು ಸಣ್ಣದಾಗಿ ಹಚ್ಚಿ ತಿನ್ನಬಹುದು. ಅಥವಾ ಕೋಸಂಬರಿ ಮಾಡಿಯಾದರೂ ಸೇವಿಸಬಹುದು. ತರಕಾರಿಗಳಲ್ಲಿ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಬಹಳ ಸುಲಭವಾಗಿ ನಡೆಯುತ್ತದೆ.
(ಮುಂದಿನ ಅಂಕಣದಲ್ಲಿ ಮೊಳಕೆ ಕಾಳುಗಳು)
-ಧನಂಜಯ ಮುಡಬಿದಿರೆ

ಮುಂದೆ ಓದಿ

ಅಂಕಣ
ಈ ಕನಸು.ಕಾಂ ಇಂದು ಸರ್ವರ ಪ್ರೀತಿಗೆ ಪಾತ್ರವಾಗ್ತಾ ಇದೆ ಅಂತ ಹೇಳೋದಕ್ಕೆ ಸಂತೋಷ ಆಗುತ್ತಿದೆ. ಇದೀಗ ಈ ಕನಸನ್ನು ಮೆಚ್ಚಿ ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಒಂದಾದ `ಅಸೀಮಾ'ದ ಸಂಪಾದಕ , ಗೆಳೆಯ ಸಂತೋಷ್ ತಮ್ಮಯ್ಯ ಈ ಕನಸಿಗೆ ಲೇಖನ ಬರೆಯುತ್ತಿದ್ದಾರೆ. ಓದಿ ಅಭಿಪ್ರಾಯಿಸಿ...ಒಟ್ಟಾಗಿ ಬೆಳೆಯೋಣ... - ಸಂ.
ಅತ್ಯತ್ತಿಷ್ಠ ದಶಾಂಗುಲಮ್ ಎಂಬಂತೆ. ಹಾಗೆ ಅಂದುಕೊಳ್ಳಲು ಕೊಂಚ ಧೈರ್ಯವೂ ಬೇಕು ಕೂಡ. ಏಕೆಂದರೆ ಪತ್ರಿಕೋದ್ಯಮದಂತಹ ಪೈಪೋಟಿ ತೀವ್ರವಾಗಿರುವ ರಂಗವೊಂದರಲ್ಲಿ ಹೀಗೆ ಗುರಿ-ಉದ್ದೇಶ-ತತ್ತ್ವ-ಸಿದ್ಧಾಂತವೆಂದುಕೊಂಡು ಸಂವತ್ಸರಗಳಲ್ಲಿ ಹೋರಾಡುವುದು ಕಷ್ಟ ಮತ್ತು ಆರಂಭದ ತೀವ್ರತೆಯನ್ನು ಮುಂದುವರೆಸಿಕೊಂಡು ಬರುವುದು ಇನ್ನೂ ಕಷ್ಟ. ಸಮಾಜಮುಖಿಯಾಗಿ ಚರ್ಚಿಸುತ್ತಾ, ಚಿಂತಿಸುತ್ತಾ ಧೀಶಕ್ತಿಯನ್ನು ಪ್ರಚೋದಿಸುತ್ತಾ ನಾವು ೧೭ನೇ ಸಂವತ್ಸರಕ್ಕೆ ಕಾಲಿರಿಸಿದ್ದೇವೆ. ಮತ್ತು ವಿಜಯದಶಮಿಯ ಶುಭ ಸಂದರ್ಭದಲ್ಲಿ ಎಂದಿನಂತೆ ಒಂದು ಮಹಾನ್ ವಿಜಯದ ಚರ್ಚೆಯನ್ನು ಇಲ್ಲಿ ನಡೆಸಿದ್ದೇವೆ.


ಆ ವಿಜಯವೆಷ್ಟು ಗಾಢವಾದುದು. ಮುಖ್ಯವಾದುದು ಎಂದರೆ ೫೦೦ ವರ್ಷಗಳ ತರುವಾಯವೂ ಅದರ ನೆನಪಲ್ಲಿ ನಾವು ಉತ್ಸಾಹಗೊಳ್ಳಬಹುದು. ಉಲ್ಲಸಿತರಾಗಬಹುದು. ಕೆಚ್ಚು ತುಂಬಿಸಿಕೊಳ್ಳಬಹುದು, ಎದಿರೇಟು ನೀಡಬಹುದು ಎಂಬಷ್ಟರ ಮಟ್ಟಿಗೆ ಅದು ಪ್ರಸ್ತುತ. ಅದು ವಿಜಯವೆಂಬ ಪದ ಅನ್ವರ್ಥವಾಗುವಂತೆ ಹುಟ್ಟಿ ಬೆಳೆದು-ಮೆರೆದ ಸಾಮ್ರಾಜ್ಯವೊಂದರ ಕಥೆ. ಮಹಾನ್ ಹಿಂದೂ ಸಾಮ್ರಾಜ್ಯವೊಂದರ ಕೆಚ್ಚಿನ ಕಥೆ. ಮರೆತುಹೋದ ಕಥೆಯಲ್ಲ.ಮರೆಯಲಾರದ ಕಥೆ, ಮರೆಯಬಾರದ ಕಥೆ.

ಹೀಗೆ ಅಪಾರ ಕೀರ್ತಿವೆತ್ತು ಮೆರೆದ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕವಾಗಿ ೫೦೦ ವರ್ಷಗಳಾಗಿರುವ ಹೊತ್ತಲ್ಲಿ ರಾಯರನ್ನು ನೆನಪು ಮಾಡಿಕೊಳ್ಳಬೇಕಾದುದು ನಾಡಿನ ಧರ್ಮ. ಅದು ಕರ್ತವ್ಯವೂ ಕೂಡ. ಏಕೆಂದರೆ ನೆಪೋಲಿಯನ್ನನ ಪಟ್ಟಾಭಿಷೇಕವನ್ನು ನಮ್ಮ ಪಠ್ಯಗಳು ಕಡ್ಡಾಯವಾಗಿ ನೆನಪು ಮಾಡಿಕೊಡುತ್ತಿದೆ. ಅಂದರೆ ಆತನ ನೆನಪು ನಮಗಾಗುವ ಕಾರಣಕ್ಕಾಗಿ ನಾವು ರಾಯರ ನೆನಪು ಮಾಡಿಕೊಳ್ಳಬೇಕೆಂದೇನೂ ಅಲ್ಲ. ಮತ್ತು ವಿಶ್ವದ ಇತರ ಎಲ್ಲಾ ಅರಸರಿಗಿಂತಲೂ ಮೇರು ಸ್ಥಾನದಲ್ಲಿ ನಿಲ್ಲಬಲ್ಲಂತಹ ವ್ಯಕ್ತಿತ್ವದವರಾದ ಕಾರಣ ರಾಯರಿಗೆ ರಾಯರು ಮಾತ್ರ ಸಾಟಿ. ಇತಿಹಾಸದಲ್ಲಿ ಇಂಥ ವ್ಯಕ್ತಿತ್ವಗಳು ಅಪರೂಪ. ಆದರೆ ರಾಯರು ತಮ್ಮ ಸಾಮ್ರಾಜ್ಯದಲ್ಲಿ ಹಾಗೆ ಕಂಡುಬರಲೇ ಇಲ್ಲ. ಹಾಗಾಗಿ ಪ್ರಸಕ್ತ ಸಂಚಿಕೆಯಲ್ಲಿ ರಾಯರನ್ನು ನೆಪವಾಗಿಟ್ಟುಕೊಂಡು ವಿಜಯನಗರ ವೈಭವವನ್ನು ಹೇಳಿದ್ದೇವೆ. ರಾಯರನ್ನು ಪರಿಪೂರ್ಣವಾಗಿ ಹೇಳಬೇಕೆಂದರೆ ವಿಜಯ ನಗರವನ್ನು ಹೇಳದಿದ್ದರೆ ಹೇಗೆ ಅಲ್ಲವೇ?

ಇಂದು ವಿಜಯನಗರದಲ್ಲಿ ರಾಯರಿಲ್ಲ. ಅಮಾತ್ಯ ತಿಮ್ಮರಸರು. ಪ್ರೌಢದೇವರಾಯರು. ಅಮಾತ್ಯಲಕ್ಷ್ಮೀಧರ. ಇವರಾರೂ ಕೂಡ ಇಲ್ಲ.ಅಂದು ಭವನವಿದ್ದ ಜಾಗದಲ್ಲಿ ಇಂದು ಜನಗಳೇ ಇಲ್ಲ. ಅದೊಂದು ಸಪಾಟು ಮೈದಾನ.ಅಂದು ಪೂಜಿಸಿಕೊಳ್ಳುತ್ತಿದ್ದ ಸಾವಿರಾರು ದೇವದೇವತೆಯರು ಭಗ್ನಗೊಂಡಿದ್ದಾರೆ ಅಥವಾ ಮಾಯವಾಗಿದ್ದಾರೆ. ಈಗ ಎತ್ತ ನೋಡಿದರೂ ಮುರುಕು ಮಂಟಪಗಳು, ಹಾಳುಗುಡಿಗಳು, ಬಂಡೆಗಳು, ಏಳು ಪರ್ವತಗಳು, ಪೇಟೆಯಲ್ಲಿ ಉದ್ದಕ್ಕೆ ಕಾಣುವ ಕಲ್ಲಿನ ಚಪ್ಪರದ ಸಾಲುಗಳತ್ತ ಕೈ ತೋರಿಸಿ 'ಇದೋ ಬಜಾರು' ಎನ್ನುವ ಟೂರಿಸ್ಟ್ ಗ್ರೇಡ್ ಕಲ್ಲು ಕಲ್ಲುಗಳು ಹೊತ್ತು ನಿಂತಿರುವ ಶತಮಾನದ ಕಥೆಯನ್ನು ಹೇಳಲಾರ. ನೋಡುವ ಕಣ್ಣಿಲ್ಲದವರಿಗೆ ಅದು ಕಾಣಲೂ ಆಗದು ಕೂಡ. ಅಂಥವರಿಗೆ ತುಂಗಭದ್ರೆಯ ಹರಿವಿನ ಒಳಸುಳಿಗಳೊಳಗೆ ಅಡಗಿಸಿಕೊಂಡ ರಹಸ್ಯಗಳು ಇನ್ನು ಹೇಗೆ ಅರ್ಥವಾಗಲು ಸಾಧ್ಯ? ಆದ್ದರಿಂದ ಅಂಥವರಿಂದು 'ಈ ಬಂಡೆಗಳ ಭೂಮಿಯಿಂದ ಏನನ್ನು ಪಡೆಯಲು ಸಾಧ್ಯ?' ಎಂಬಂಥ ಪ್ರಶ್ನೆಗಳನ್ನು ಹಾಕುತ್ತಾರೆ. ಅವರಿಗೆ ಪ್ರಶ್ನೆಗಳೆಂದರೆ ಕೇವಲ ಪ್ರಶ್ನೆಗಳು ಮಾತ್ರ. ಆದ್ದರಿಂದ ಪ್ರಶ್ನೆಗಳಲ್ಲೇ ಇರುವ ಉತ್ತರದ ಅರಿವು ಅವರಿಗಿಲ್ಲ. ಆದರೆ ವಾಸ್ತವವಾಗಿ ಹೇಳಬೇಕೆಂದರೆ ವಿಜಯನಗರ ಇಂದು ನಮಗೆ ಕಾಣಬರುವ ಸ್ಥಿತಿಯಿಂದಲೇ ಸಾವಿರ ಸಾವಿರ ಉತ್ತರಗಳನ್ನು ಹೇಳುತ್ತವೆ. ಆದ್ದರಿಂದ ಇಂದು ವಿಜಯನಗರ ಇರುವ ಸ್ಥಿತಿಯಿಂದಲೇ ನಮಗೆ ಪ್ರೇರಣೆ ಸಿಗುತ್ತದೆ. ಇತ್ತೀಚೆಗೆ ಮಹಾನಗರದ ಬುದ್ಧಿ ಜೀವಿಯೊಬ್ಬರು ಸಾಹಿತಿಯೊಬ್ಬರೊಟ್ಟಿಗೆ ಮಾತನಾಡುತ್ತಾ 'ಏನಿದೆ ಕಲ್ಲಿನ ಗೂಡಿನಲ್ಲಿ?' ಹಾಳು ಕೊಂಪೆಯಲ್ಲಿ? ಎಂದು ವಿಜಯನಗರವನ್ನು ಹಂಗಿಸಿ ನಕ್ಕರಂತೆ. ಅದಕ್ಕೆ ಆ ಸಾಹಿತಿ ಹೇಳಿದರಂತೆ,

"ನಮ್ಮ ಹಳ್ಳಿಯ ಮನೆಯಲ್ಲೂ ಇಂದು ಯಾರಿಲ್ಲ. ನಾ ಹುಟ್ಟಿದ ಕೋಣೆಯಿಲ್ಲ. ಆಡಿದ ಅಂಗಳ ವೊದಲಿನಂತಿಲ್ಲ. ಹಿತ್ತಲಲ್ಲಿ ಕಾಡು ಬೆಳೆದಿದೆ. ಹಳೆಯ ಮನೆಯ ಮಾಳಿಗೆ ಸೋರುತ್ತಿದೆ. ಕೊಟ್ಟಿಗೆ ಖಾಲಿಯಾಗಿದೆ. ನನ್ನ ಬಾಲ್ಯದ ನೆನಪುಗಳೆಲ್ಲಾ ಇಲ್ಲಿ ನಗರದಲ್ಲಿ ಕಳೆದು ಹೋಗಿದೆ. ಆದರೆ ಮುರುಕು-ಖಾಲಿ ಮನೆಯಲ್ಲಿ ಅದು ಭದ್ರವಾಗಿದೆ. ಅಲ್ಲಿ ನನ್ನಮ್ಮನ ಕೂಗಿದೆ. ಕರುವಿನ ಅಂಬಾ ಇದೆ. ನಾನೆಟ್ಟ ಗಿಡ ಇಂದು ಮರವಾಗಿದೆ. ಅಲ್ಲಿ ನನ್ನದೆನ್ನುವ ಎಲ್ಲವೂ ಇದೆ. ಇಲ್ಲಿನ ನನ್ನದೆನ್ನುವ ಏನೂ ಇಲ್ಲ ಅಥವಾ ಏನೋ ಞಜಿoo ಆಗಿದೆ. ನನಗೆ ನನ್ನ ಹಳೆಯ ಮನೆಯ ವಠಾರದಲ್ಲಿ ಬದುಕಿನ ಸೆಲೆ ಸಿಗುತ್ತದೆ. ಆದರೆ ಇಲ್ಲಿ ಸಾಯುವ ನೆಲೆ ಮಾತ್ರ ಇದೆ' ಎಂದು ನೊಂದು, ಭಾವಪರವಶರಾಗಿ ನುಡಿದರಂತೆ.

ವಿಜಯನಗರವೂ ಹಾಗೆಯೇ. ಅಲ್ಲಿ ನಾವೆಣಿಸುವ ಎಲ್ಲವೂ ಇದೆ. ಇಂದು ನಾವನುಭವಿಸುತ್ತಿರುವ ಸಮಸ್ಯೆಗೆ ಅದರಲ್ಲಿ ಉತ್ತರವಿದೆ. ಹಿಂದೂ ಆವಶ್ಯಕತೆ ಸಾಕಾರಗೊಂಡ ನೆಲ ಅದು. ಹಾಗಾಗಿ ವಿಜಯನಗರ ಮತ್ತು ರಾಯರು ಶತಶತಮಾನ ಕಳೆದರೂ ಇಂದಿಗೂ ಪ್ರಸ್ತುತರಾಗಿ ಕಾಣುತ್ತಾರೆ. ವಿಶ್ವದಲ್ಲಿ ಒಮ್ಮಿಂದೊಮ್ಮೆಲೆ ಮೆರೆದ ಸಾಮ್ರಾಜ್ಯಗಳಿಗೆ ಲೆಕ್ಕವಿಲ್ಲದಿರಬಹುದು. ಅವೆಲ್ಲವೂ ಕೆಲವೇ ಕಾಲಮಾನದಲ್ಲಿ ಟ್ಟಜಟಠಿಠಿಛ್ಞಿ ಉಞmಜ್ಟಿಛಿ ಗಳಾಗಿ ಹೋಗಿರುವುದನ್ನು ಇತಿಹಾಸ ಕುತೂಹಲದಿಂದ ಗಮನಿಸಿದೆ. ಆದರೆ ವಿಜಯನಗರದ್ದು ಮಾತ್ರ ಅಂದಿನಿಂದಲೂ ದರ್ಬಾರೇ ದರ್ಬಾರು. ಅದಿಂದೂ ವಿಜಯನಗರವೇ. ಬಹಮನಿಗಳು ಗುಡಿ-ಗೋಪುರಗಳನ್ನು ಕೆಡವಿರಬಹುದು. 'ಕಾಫಿರ'ರ ರಕ್ತ ಹರಿಸಿರಬಹುದು. ಖಜಾನೆ ಕೊಳ್ಳೆ ಹೊಡೆದಿರಬಹುದು. ನಗರದಲ್ಲಿ ನರಿಗಳು, ಹುಲಿ-ಕರಡಿಗಳು ವಾಸಿಸುತ್ತಿದ್ದಿರಬಹುದು. ಆದರೆ ಅದಕ್ಕೂ ಹೊರತಾದ ಬೃಹತ್ತಾದ, ಮನಪುಳಕಗೊಳಿಸುವ ಸೆಲೆಯನ್ನು ಹೊಳಪನ್ನು ಮರೆಯಲು ಹೇಗೆ ತಾನೇ ಸಾಧ್ಯ? ನಮ್ಮ ಕಲ್ಪನೆಯ ದೇಶ ಆ ೫೦೦ ವರ್ಷದ ಹಿಂದಿನ ಸಾಮ್ರಾಜ್ಯವಾಗಿತ್ತು ಎಂಬುದು ಇಂದಿನ ನಮ್ಮ ರಾಷ್ಟ್ರದ ಅಪೇಕ್ಷೆಯೂ ಯಾಕಾಗಿರಬಾರದು? ಹಾಗಾಗಿ ಇದು ಮರೆಯಬಾರದ ಸಾಮ್ರಾಜ್ಯ.

ಹಿಂದೂ ರಾಜರ ಪಟ್ಟಾಭಿಷೇಕದ ಸಂದರ್ಭದಲ್ಲಿ ನಡೆಯುವ ಆಚರಣೆಯೊಂದು (ಶಿಷ್ಟಾಚಾರ?) ನಮಗೆ ಅಲ್ಲಲ್ಲಿ ಸಿಗುತ್ತದೆ. ರಾಜ ಸಿಂಹಾಸನಾಧೀಶನಾದ ತತ್‌ಕ್ಷಣವೇ ನೆರೆದ ಸಭೆಯನ್ನುದ್ದೇಶಿಸಿ ತನ್ನನ್ನು ಅಧಿಕೃತವಾಗಿ ಪ್ರಕಟಿಸಿಕೊಳ್ಳುತ್ತಾ 'ನ ದಂಡೋಸ್ಮಿ' ಎಂದು ಘೋಷಿಸುತ್ತಾನೆ. ರಾಜನಾದವನು ತನ್ನ ಕಂಠದಿಂದ ರಾಜ್ಯವನ್ನು ಅಧೀನಗೊಳ್ಳುವ ಮೊದಲ ಪ್ರಕ್ರಿಯೆ ಅದು. ತನ್ನ ಪರಮಾಧಿಕಾರವನ್ನು ಪ್ರಕಟಿಸುವ ಬಗ್ಗೆಯೂ ಕೂಡ. ರಾಜ ಹಾಗೆನ್ನುತ್ತಲೇ ರಾಜ್ಯದ ಅಮಾತ್ಯನೋ ಅಥವಾ ಕುಲಪುರೋಹಿತರೋ ತನ್ನ ದಂಡದಿಂದ ಆತನ ಕಿರೀಟವನ್ನು ಕುಟ್ಟಿ 'ಧರ್ಮಂ ದಂಡೋಸ್ಮಿ' ಎಂದು ರಾಜಾಧಿಕಾರವನ್ನೇ ಪ್ರಶ್ನಿಸುತ್ತಿದ್ದರು. ಎಚ್ಚರಿಸುತ್ತಿದ್ದರು. ರಾಜನಿಗಿಂತ ಧರ್ಮದೊಡ್ಡದು ಎಂದು ಸಾರುತ್ತಿದ್ದರು. ರಾಜ್ಯಕ್ಕೆ ರಾಜ್ಯಾಡಳಿತ ಪ್ರತ್ಯಕ್ಷವಾದರೂ ಧರ್ಮಾಧಿಕಾರವೇ ಪರೋಕ್ಷ ಎಂಬ ಸಂಕೇತವನ್ನು ತೋರ್ಪಡಿಸುತ್ತಿದ್ದರು. ಆದರೆ ಈ ತತ್ತ್ವಶಾಸ್ತ್ರ ವಿಜಯನಗರದ ಸಂದರ್ಭದಲ್ಲಿ ಸ್ವಲ್ಪ ವಿಶಿಷ್ಟ ರೀತಿಯಲ್ಲಿ ಪ್ರಕಟಗೊಂಡಿದೆ.ಅಲ್ಲಿ ಸಿಂಹಾಸನಾಧೀಶನಾದ ತತ್‌ಕ್ಷಣವೇ ಸ್ವತಃ ರಾಜನೇ ತನ್ನ ಅಧಿಕಾರವನ್ನು ಪ್ರಕಟಿಸಿಕೊಳ್ಳುತ್ತಾ "ವಿರೂಪಾಕ್ಷ ದಂಡೋಸ್ಮಿ" ಎಂದು ಘೋಷಿಸಿಕೊಳ್ಳುತ್ತಿದ್ದ.

ವಿರೂಪಾಕ್ಷನನ್ನು ಅರಸುತನಕ್ಕೇರಿಸಿ ಅಥವಾ ಇಳಿಸಿ

ತನ್ನನ್ನು ತಾನು ಆತನಿಗೆ ಅಧೀನಗೊಳಿಸಿ

ಸಾಮ್ರಾಜ್ಯವನ್ನು ದೈವಿಕ ಆಡಳಿತಕ್ಕೊಪ್ಪಿಸಿ

ವಿಜಯನಗರದ ಅರಸರು ರಾಜ್ಯಾಭಾರ ಮಾಡುತ್ತಿದ್ದರು. ಕೃಷ್ಣದೇವರಾಯನಂತೂ ಪಟ್ಟಾಭಿಷೇಕವಾದ ಅನಂತರವೇ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ ಧರ್ಮ ಜಾಗರಣಕ್ಕಾಗಿ ದಂಡಯಾತ್ರೆಗೆ ಹೊರಟುಹೋಗಿದ್ದ. ವಿರೂಪಾಕ್ಷನ ಅಧೀನದಲ್ಲಿ ರಾಜತ್ವ ಇರುವವರೆಗೆ ವಿಜಯನಗರದ ವೈಭವ ಉತ್ತುಂಗದಲ್ಲಿರುತ್ತದೆ ಎಂದು ಸಾಕಷ್ಟು ವೊದಲೇ ಕ್ರಿಯಾಶಕ್ತಿ ವಿದ್ಯಾರಣ್ಯರು ಹೇಳಿದ ಮಾತು ನೆನಪಿಗೆ ಬರುತ್ತದೆ. ಹೀಗೆ ಸಾಮ್ರಾಜ್ಯಕ್ಕೆ ರಾಜನಾದರೂ 'ನಾನಲ್ಲ ನೀನೇ' ಎಂದು ಅಮೂರ್ತದೆಡೆಗೆ ಕೈತೋರಿಸುವ ಸಾಮ್ರಾಜ್ಯಾಧೀಶರೂ ಹಾಗೆಂದರೂ ಆಂತರ್ಯದಲ್ಲಿ 'ಸ್ವಯಮೇಂದ್ರ ಮೃಗೇಂದ್ರ'ನಂತೆ ರಾಜ್ಯಕ್ಕೆ ದುಡಿದ ರಾಜರು ವಿಶ್ವದ ಇನ್ನೆಲ್ಲಿ ನೋಡಲು ಸಿಗುತ್ತಾರೆ?

ವಿಜಯನಗರ ಒಂದು ಪ್ರಬಲ ಹಿಂದೂ ಸೈನಿಕ ಶಕ್ತಿಯ ಸಾಮ್ರಾಜ್ಯವಾಗಿತ್ತು. ಮತ್ತು ಅದರ ಅನಿವಾರ್ಯತೆ ನಿರಂತರ ಇದ್ದುದರಿಂದ ವಿಜಯನಗರದ ವೈಭವದ ಕಾಲದಲ್ಲೆಲ್ಲಾ ಹಿಂದೂ ಶಕ್ತಿ ಪರಮ ವೈಭವವನ್ನು ಕಂಡಿತು. ಆರಂಭದ ಹಲವು ರಾಜರ ಕಾಲದಲ್ಲಿ ಸೈನಿಕ ಶಕ್ತಿ ವ್ಯವಸ್ಥಿತವಾಗಿ ಇರಲಿಲ್ಲ.ಆದರೆ ರಾಯನು ಸೈನಿಕ ಶಕ್ತಿಯನ್ನು ಮುತುವರ್ಜಿಯಿಂದ ಸಂಚಯಿಸಿದ ಶಕ್ತಿಯ ಆವಶ್ಯಕತೆಯನ್ನು ಮನಗಂಡು ಮೀಸಲು ಸೈನ್ಯವನ್ನೇ ನಿರ್ಮಿಸಿದ್ದ. ಅದರ ಅನಿವಾರ್ಯತೆಯನ್ನು ಅಷ್ಟೊಂದು ತೀವ್ರವಾಗಿ ಮನಗಂಡ ಅಪರೂಪದ ಹಿಂದೂ ಅರಸ ರಾಯ. ಅಂದರೆ ವಿಜಯನಗರ ಸ್ಥಾಪನೆಯ ಉದ್ದೇಶವನ್ನು ಸಂಪೂರ್ಣ ಅರ್ಥ ಮಾಡಿಕೊಂಡ ಮತ್ತು ಅದನ್ನು ಕರ್ತವ್ಯವೆಂಬಂತೆ ಸ್ವೀಕರಿಸಿ ಮುಂದಡಿಯಿಟ್ಟ ವಿಜಯನಗರದ ಮುಂದಿನ ಪೀಳಿಗೆಯ ಅರಸನೀತ. ಅಂದು ಉತ್ತರದಿಂದ ಬಿರುಗಾಳಿಯಂತೆ ನುಗ್ಗಿ ಬರುತ್ತಿದ್ದ ಮಲ್ಲಿಕಾಫರನ ಜಿಹಾದಿಪಡೆಗೆ ತಡೆಗೋಡೆಯಂತೆ ವಿಜಯನಗರ ನಿಂತಿದ್ದುನ್ನು ರಾಯ ಮರೆತಿರಲಿಲ್ಲ ಮತ್ತು ಇದೀಗ ಬಹಮನಿಗಳ ಎದುರಿಗೆ ಅದೇ ತಂತ್ರವನ್ನು ಆತ ಅನುಸರಿಸಬೇಕಾಗಿತ್ತು.ಆದ ಕಾರಣ ಆತ ಸೈನಿಕ ಶಕ್ತಿಯನ್ನು ಬಲಪಡಿಸಿದ ಮತ್ತು ದಕ್ಷಿಣ ಭಾರತದ ನಕಾಶೆ ಬದಲಾಗುವುದನ್ನು ತಪ್ಪಿಸಿದ. ಈತನೆಷ್ಟು ರಣತಂತ್ರ ಚಾಣಾಕ್ಷನೆಂದರೆ ಮುಸಲ್ಮಾನರ ಮನಸ್ಥಿತಿಯ ಗಾಢವಾಗಿ ಅಧ್ಯಯನವನ್ನು ಕೂಡ ಮಾಡಿದ್ದ. ಬಹಮನಿಗಳ ಸವಾಲನ್ನು ಅವರದ್ದೇ ರಣತಂತ್ರದ ಮೂಲಕ ನೀಡಿದ್ದು ವಿಶೇಷ. ಪ್ರಪಂಚದ ಇತಿಹಾಸದಲ್ಲಿ ಮಹಾನ್ ಮಹಾನ್ ಯುದ್ಧತಂತ್ರ ಬಲ್ಲವರ ಉಲ್ಲೇಖಗಳನ್ನು ಕಾಣುತ್ತೇವೆ. ಆದರೆ ಇದರಲ್ಲೆಲ್ಲೂ ರಾಯರ ಪ್ರಸಂಗವೇ ಕಾಣದು. ರಾಯರ ಮುಂದೆ ಎಲ್ಲಾ ಇತಿಹಾಸಗಳು ಗೌಣ ಎಂದೂ ನಾವು ಹೇಳಿಕೊಳ್ಳಬಹುದು. ಅದಕ್ಕೊಂದು ಉದಾಹರಣೆ.

ಒಮ್ಮೆ ರಾಯರು ಸೈನ್ಯಸಮೇತ ಬಿದರೆಯನ್ನು ಮುತ್ತಲು ಹೋಗಿದ್ದರು. ಆದರೆ ದಾರಿಗಡ್ಡವಾಗಿ ನಿಂತದ್ದು ಕೃಷ್ಣೆ. ಪ್ರವಾಹ ಬೇರೆ. ಕಾದರು. ಒಂದೆರಡು ವಾರಗಳಾದರೂ ಅಬ್ಬರವಿಳಿಯುವ ಲಕ್ಷಣ ಗೋಚರಿಸಲಿಲ್ಲ. ಒಂದು ದಿನ ಮುಂಜಾನೆ ನದೀ ತೀರಕ್ಕೆ ಬಂದವರೇ ಅಧಿಕಾರಿಗಳನ್ನುದ್ದೇಶಿಸಿ ಕೃಷ್ಣೆಗೆ ಎರಡು ಕಾಲುವೆ ತೋಡಲು ಆಜ್ಞಾಪಿಸಿದರು. ಎರಡೇ ವಾರಗಳಲ್ಲಿ ಕಾಲುವೆ ಸಿದ್ಧಗೊಂಡಿತು. ಕೃಷ್ಣೆ ಶಾಂತವಾಗಿ ರಾಯರಿಗೆ ದಾರಿ ಬಿಟ್ಟುಕೊಟ್ಟಳು. ಅನಂತರವೂ ರಾಯರ ರಾಜದೃಷ್ಟಿ ಅಷ್ಟಕ್ಕೇ ಸೀಮಿತವಾಗಲಿಲ್ಲ. ತೋಡಿದ ಎರಡು ಕಾಲುವೆಗಳು ಜನೋಪಯೋಗಿಯಾಗುವಂತೆ ವ್ಯವಸ್ಥೆ ಮಾಡಿದರು. ಅದರ ಪ್ರಯೋಜನವನ್ನು ಇಂದೂ ಭೂಮಿ ಪಡೆಯುತ್ತಿದೆ. ಇಂಥ ಮುತ್ಸದ್ದಿತನ-ಧೈರ್ಯ ತೋರಿದ ಅರಸರು ಇನ್ಯಾರಿದ್ದಾರೆ? ಪಾಶ್ಚಾತ್ಯರಲ್ಲಿ ಒಂದು ಸೇತುವೆ ಮುರಿದವನು ಜಿಠಿಠ್ಝಿಛಿ ಟ್ಟmಟ್ಟZಠಿಛಿ ಎಂದುಕೊಳ್ಳುತ್ತಾನೆ. ಹಾಗಾದರೆ ರಾಯರನ್ನು ಏನನ್ನಬೇಕು?

ಹಲವು ಇತಿಹಾಸಕಾರರು ರಾಯರನ್ನು ಉದ್ದಟನೆಂದೂ ಒರಟನೆಂದೂ ಜರಿಯುತ್ತಾರೆ. ಶಾಹಿ ಅರಸನೊಬ್ಬನನ್ನು ತನ್ನ ಪಾದ ಚುಂಬಿಸಲು ರಾಯ ಕರೆ ಕಳುಹಿಸಿದ್ದೇ ಅದಕ್ಕೆ ಕಾರಣ. ತನಗೆ ಉಪಟಳ ನೀಡುತ್ತಿದ್ದ ಮುಸಲ್ಮಾನನ ಪ್ರದೇಶವನ್ನು ತಾನು ವಶಪಡಿಸಿಕೊಂಡು ಆತನನ್ನು ಸೋಲಿಸಿ ಕೊಲ್ಲದೇ ಬಿಟ್ಟದ್ದು ರಾಯರ ದೊಡ್ಡ ಗುಣ. ಮತ್ತು ಆತನ ಅನಂತರ ಆತನ ನರಿಬುದ್ದಿಯಿಂದ ಕ್ರೋಧಗೊಂಡ ರಾಯರು ಹಾಗೆ ಕರೆ ಕಳುಹಿಸಿದ್ದೂ ಕೂಡ ಸತ್ಯ. ಅದು ಹಿಂದೂ ಅರಸನೊಬ್ಬನ ಕೆಚ್ಚೆದೆಯ ಕರೆ. ಮುಳ್ಳನ್ನು ಮುಳ್ಳಿನಿಂದ ತೆಗೆಯುವ ಚಾಣಾಕ್ಷ ತಂತ್ರಗಾರಿಕೆ. ಹೀಗೆ ರಾಯರು ಅಂದಿನ ಪರಿಸ್ಥಿತಿಗೆ ತಕ್ಕಂತೆಯೇ ರಾಜ್ಯವಾಳಿದರು. ಧೈರ್ಯದಿಂದ ಮತ್ತು ಮುಕ್ತವಾಗಿಯೇ 'ಹಿಂದೂರಾಯ' ಎಂದು ಕರೆಸಿಕೊಂಡರು. ಆದ್ದರಿಂದ ರಾಯರ ವ್ಯಕ್ತಿತ್ವದ ಬಗ್ಗೆ ಎರಡು ಮಾತಿಲ್ಲ. ಅಂಥ ಕರೆ ಕಳುಹಿಸುವ ಅರಸನೊಬ್ಬನನ್ನು ಹಿಂದೂ ದೇಶ ಬಹುಕಾಲದಿಂದ ಕಾಯುತ್ತಿತ್ತು. ರಾಯ ಅದನ್ನು ತುಂಬಿಸಿಕೊಟ್ಟರು.

ಹೀಗೆ ರಾಯರನ್ನು ನೆಪವಾಗಿಟ್ಟುಕೊಂಡೇ ವಿಜಯನಗರವನ್ನು ಹೇಳಲು ಸಾಕಷ್ಟು ಸಂಗತಿಗಳಿವೆ. ರಾಯರನ್ನೇ ತಿಳಿಯಲು ಒಂದು ಜೀವನವನ್ನು ಮುಡಿಪಾಗಿಡಬೇಕು. ವಿಜಯನಗರ ಹೀಗೆ ಹುಡುಕಿದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತದೆ. ನೋಡುವ ದೃಷ್ಟಿಯಿದ್ದರೆ ಅಲ್ಲಿ ಪ್ರೇರಣೆ, ಹುರುಪುಗಳು ಸಿಗುತ್ತವೆ. ಸಾಮ್ರಾಜ್ಯಗಳು ಇರುವುದೇ ಅಳಿದು ಹೋಗಲು ಎಂಬ ಮಾತು ಸುಳ್ಳಾಗುವ ಜಾಗ ವಿಜಯನಗರದಲ್ಲಿ ಶಬ್ದಕ್ಕೆ ನಿಲುಕದ ಮತ್ತೇನೋ ಒಂದು ಇದೆ. ಅದನ್ನು ಹೇಳಬೇಕೆಂದರೂ ಹೇಳಲಾಗುತ್ತಿಲ್ಲ ಎಂಬ ಕಷ್ಟವೂ ನಮ್ಮದಾಗಿದೆ. ನಮ್ಮ ಸಂಸ್ಕಾರಕ್ಕೆ ಅನುಗುಣವಾಗಿ ನಾವು ಹಿಂದೂರಾಯರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ.ಆದರೆ ಯಾವ ಇತಿಹಾಸಕಾರನಿಗೂ ನಿಲುಕದ ಸಂಗತಿಗಳು ರಾಯರಲ್ಲೂ ವಿಜಯನಗರದಲ್ಲೂ ಇವೆ. ಆದರೆ ೫೦೦ ವರ್ಷದ ಅನಂತರವೂ ನಾವದನ್ನು ಹುಡುಕುವ ಪ್ರಯತ್ನ ಮಾಡದಿದ್ದರೆ ನಮ್ಮಷ್ಟು ಮುಠಾಳರು ಇನ್ಯಾರೂ ಇಲ್ಲ.
- ಸಂತೋಷ್ ತಮ್ಮಯ್ಯ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಕೈಗಾ ಎಂಬ ಕರಿನೆರಳು ಜನತೆಯನ್ನು ನಿರಂತರ ಹಿಂಬಾಲಿಸುತ್ತಿದೆ. ಅದು ಜನತೆಯ ಪಾಲಿಗೆ ತೀವ್ರ ತೊಂದರೆಯನ್ನು ನೀಡುತ್ತಿದೆ. ಇದೀಗ ವಿಕಿರಣ ಸೋರಿಕೆಯ ಹಿಂದಿನ `ರಹಸ್ಯ' ಮತ್ತೆ ಜನತೆಯ ನಿದ್ದೆಕೆಡುವಂತೆ ಮಾಡಿದೆ.ಕೈಗಾ ಅಣುಸ್ಥಾವರ ಜನತೆಯ ತೀವ್ರ ವಿರೋಧದ ನಡುವೆಯೂ ಸ್ಥಾಪನೆಗೊಂಡಿದೆಯಾದರೂ ಕ್ಷಣ ಕ್ಷಣಕ್ಕೆ ಎಂಬಂತೆ ಜನತೆಗೆ ಗೊಂದಲ,ತೊಂದರೆಗಳ ಮಹಾಪೂರವನ್ನೇ ನೀಡುತ್ತಾ ಬಂದಿದೆ. ಇತ್ತೀಚೆಗೆ ಕೈಗಾ ಉದ್ಯೋಗಿಯಾಗಿರುವ ರವಿ ಅವರ ಸಾವು,ವೈಜ್ಞಾನಿಕ ಅಧಿಕಾರಿ ಮಹಾಲಿಂಗಂ ಅವರ ಸಾವು ಎಲ್ಲವೂ ಅತ್ಯಂತ ನಿಗೂಢವಾಗಿಯೇ ಜನತೆಯನ್ನು ಕಾಡುತ್ತಿತ್ತು. ಈ ಹಿಂದೆ ನಡೆದ ಅನಿಲ ಸೋರಿಕೆ ಪ್ರಕರಣಗಳಿರಬಹುದು, ನಾಪತ್ತೆ ಪ್ರಕರಣಗಳಿರಬಹದು ಎಲ್ಲವೂ ರಹಸ್ಯವಾಗಿಯೇ ಉಳಿದಿದ್ದು ಜನತೆಯೆದುರು `ಕೈಗಾ' ಒಂದು `ಭೂತ'ವಾಗಿ ಕಾಣತೊಡಗಿದೆ. ಕೈಗಾದ ಕರಿನೆರಳು ಕ್ಷಣ ಕ್ಷಣಕ್ಕೆ ಜನತೆಯ ಎದೆಯನ್ನು ತಲ್ಲಣಗೊಳಿಸುತ್ತಿದೆ...



ವಿಕಿರಣ ಸೋರಿಕೆ ಎಂಬ ಆಘಾತ
ಕೈಗಾ ಘಟಕದಲ್ಲಿ ವಿಕಿರಣ ಸೋರಿಕೆ ಆಗಿರುವುದಕ್ಕೆ ವಿದ್ವಂಸಕ ಶಕ್ತಿಗಳ ಕೈವಾಡ ಇದೆ ಎಂದು ಅಣುಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅಭಿಪ್ರಾಯಿಸುತ್ತಾರೆ. ಘಟಕದ ಒಳಗಿರುವವರೇ ಈ ಕೃತ್ಯ ನಡೆಸಿದ್ದಾರೆಂಬುದು ಅವರ ಬಲವಾದ ನಂಬಿಕೆ. ಇದೊಂದು ಪೂರ್ವ ಯೋಜಿತ ಕೃತ್ಯ ಎಂದೂ ಅವರು ಹೇಳುತ್ತಾರೆ. ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ `ವಿಕಿರಣ'ದಿಂದಾಗಿ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಇದೀಗ `ವಿದ್ವಂಸಕ ಕೃತ್ಯದ ಫಲಶೃತಿ' ಎಂದೇ ಬಿಂಭಿತಗೊಳ್ಳುವುದರೊಂದಿಗೆ `ಭಯೋತ್ಪಾದನೆಯ' ಕೈವಾಡದ ಮತ್ತೊಂದು ಮುಖ ಅನಾವರಣಗೊಂಡಂತಾಗುತ್ತದೆ.

ಏನಾಗಿತ್ತು ಅಂದು?
ಉತ್ತರ ಕನ್ನಡ ಜಿಲ್ಲೆಯ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣದಿಂದಾಗಿ 50 ಕಾರ್ಮಿಕರು ಅಸ್ವಸ್ಥಗೊಂಡಿದ್ದರು.
ಇದಕ್ಕೆ ಕಾರಣ ವಿಕಿರಣ ಶೀಲ ಟ್ರೈಷಿಯಂ ಸೇವನೆ. ಕುಡಿಯುವ ನೀರಿನ ಕೂಲರ್ ನಲ್ಲಿ ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಟ್ರೈಷಿಯಂ ಸೇರಿಸಿದ್ದರಿಂದ ಆ ನೀರನ್ನು ಸೇವಿಸಿದ ಕಾರ್ಮಿಕರು ಅಧಿಕ ಮಟ್ಟದ ವಿಕಿರಣಕ್ಕೆ ತುತ್ತಾಗುವಂತಾಯಿತು.
ಇದೀಗ ಅವರೆಲ್ಲರೂ ಸುರಕ್ಷಿತರಾಗಿದ್ದಾರೆ.

ಮಾಧ್ಯಮಗಳಲ್ಲಿ ಕೈಗಾ






ಕೈಗಾದ ಕರ್ಮಕಾಂಡಗಳನ್ನು ಕನ್ನಡ ಮುದ್ರಣ ಮಾಧ್ಯಮಗಳು ಅತ್ಯಂತ ಮಹತ್ವದ ವಿಚಾರವಾಗಿ ಬಿಂಭಿಸಿದೆ.
ಹೊಸದಿಗಂತ ಕನ್ನಡ ದೈನಿಕವು ಕೈಗಾ ವಿಕಿರಣ ಸೋರಿಕೆ ವಿಧ್ವಂಸಕ ಕೃತ್ಯ ಎಂದು ವರದಿಮಾಡಿದರೆ,ವಿಜಯ ಕರ್ನಾಟಕ ಕೈಗಾ ಎಲ್ಲವೂ ನಿಗೂಢ ಎಂದು ತಿಳಿಸಿದೆ. ಪ್ರಜಾವಾಣಿ ಪತ್ರಿಕೆಯು ವಿಕಿರಣ ಸೋರಿಕೆ ದುಷ್ಕೃತ್ಯ ಎಂದು ಚಿತ್ರಿಸಿದೆ. ಅಂತೂ ಈ ದುರಂತದ ಬಗ್ಗೆ ಸೂಕ್ತ ತನಿಖೆ ಆಗಬೇಕಾಗಿದೆ. ದೇಶದ ಮೇಲೆ ವಿದ್ವಂಸಕ ಕೃತ್ಯದ ತೂಗುಕತ್ತಿ ನೇತಾಡುತ್ತಿದ್ದರೂ ಇನ್ನೂ ಈ ಬಗ್ಗೆ ಎಚ್ಚರಗೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಗಾನ ಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಅವರಿಗೆ ಆಫೀಸರ್ ಆಫ್ ದಿ ಲೀಜನ್ ಆಫ್ ಹಾನರ್ ಎಂಬ ಪ್ರಶಸ್ತಿ ಲಭಿಸಿದೆ. ಇದು ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾಗಿದ್ದು ಡಿಸೆಂಬರ್ 2ರಂದು ಮುಂಬಯಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಉಡುಪಿ: ಪರ್ಯಾಯ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯ ಪೂರ್ವದಲ್ಲಿ ಪ್ರಕಟಿಸಿದ್ದ ದಶಯೋಜನೆಗಳಲ್ಲೊಂದಾದ ಭವ್ಯ ಸುಸಜ್ಜಿತ ಅನ್ನಛತ್ರ ಅನ್ನಬ್ರಹ್ಮ ಲೋಕಾರ್ಪಣವಾಯಿತು.ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಪೂರ್ವ ವಿನ್ಯಾಸದ ಎರಡಂತಸ್ತಿನ ಆಕರ್ಷಕ ಅನ್ನಛತ್ರ ಲಿಫ್ಟ್ ಸೌಕರ್ಯ ಹೊಂದಿರುವ ರಾಜ್ಯದಲ್ಲೇ ಪ್ರಥಮವೆನಿಸಿದ ದೇವಾಲಯದ ಅನ್ನಛತ್ರ ಎಂದು ಪರಿಗಣಿಸಲ್ಪಪಟ್ಟಿದೆ. ಬೆಳಗೆ ಅತಿಥಿ- ಅಭ್ಯಾಗತರೊಡಗೂಡಿ, ಕೃಷ್ಣಮಠದ ಚಂದ್ರಶಾಲೆಯಲ್ಲಿ ಕೃಷ್ಣನೆದುರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಠದ ಪಟ್ಟದ ದೇವರ ಸಹಿತ ಕೃಷ್ಣನ ಉತ್ಸವ ಮೂರ್ತಿಯನ್ನು ಮುಂದಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿಬರಲಾಯಿತು.





ಭಾವೀ ಪರ್ಯಾಯ ಶೀರೂರು ಲಕ್ಷ್ಮೀವರತೀರ್ಥರೂ ಸೇರಿದಂತೆ ವಿವಿಧ ಯತಿಗಳು, ಸಚಿವರಾದ ಡಾ. ವಿ. ಎಸ್. ಆಚಾರ್ಯ ಮತ್ತು ಜನಾರ್ದನ ರೆಡ್ಡಿ, ಸಂಸದ ಡಿ. ವಿ. ಸದಾನಂದ ಸೇರಿದಂತೆ ವಿವಿಧ ಶಾಸಕರು, ಅತಿಥಿ ಅಭ್ಯಾಗತರು ಸಂಭ್ರಮದ ಈ ಕ್ಷಣಗಳಿಗೆ ಸಾಕ್ಷಿಯಾದರು. ಸಚಿವ ಡಾ. ವಿ. ಎಸ್. ಆಚಾರ್ಯ ಮತ್ತು ಜನಾರ್ದನ ರೆಡ್ಡಿ ಅನ್ನಛತ್ರವನ್ನು ಉದ್ಘಾಟಿಸಿದರು. ಬಳಿಕ ಸಚಿವ ರೆಡ್ಡಿ ಊಟ ಬಡಿಸುವ ಮೂಲಕ ಅನ್ನದಾನಕ್ಕೆ ಚಾಲನೆ ನೀಡಿದರು.



ಅನ್ನದಾನದಿಂದ ಸಾನ್ನಿಧ್ಯ ವೃದ್ಧಿ
ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಪೀಠಸ್ಥ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ, ಅನ್ನಬ್ರಹ್ಮ ಎಂದೇ ಹೆಸರಾದ ಉಡುಪಿ ಕೃಷ್ಣನ ಸನ್ನಿಧಿಯಲ್ಲಿ ಕಳೆದ 800 ವರ್ಷಗಳಿಂದಲೂ ನಿರಂತರ ಅನ್ನದಾನ ನಡೆಯುತ್ತಿದೆ. ಅನ್ನದಾನ ಹೆಚ್ಚಿಸಿದಷ್ಟೂ ಸಾನ್ನಿಧ್ಯ ವೃದ್ಧಿ ಎಂಬುದು ನಂಬಿಕೆ. ಉಡುಪಿ ಕೃಷ್ಣ ತಿಂಡಿಪೋತ ಕೃಷ್ಣ. ಆತನ ಪೂಜಾ ಸಮಯದಲ್ಲಿ ಭಕ್ತಾದಿಗಳಿಗೆ ಊಟ ನಡೆಯುತ್ತಿರಬೇಕು. ಅದೇ ಉಡುಪಿಗೂ, ಉಳಿದ ದೇವಾಲಯಗಳಿಗೂ ಇರುವ ವ್ಯತ್ಯಾಸ ಎಂದರು.



ಮನೆಮಂದಿಯೆಲ್ಲಾ ಒಟ್ಟಾಗಿ ಊಟ ಮಾಡಿದಲ್ಲಿ ಕುಟುಂಬ ಐಕ್ಯತೆ ಸಾಧ್ಯ. ಈ ಆಶಯವನ್ನಿರಿಸಿ, ಸಾಮೂಹಿಕವಾಗಿ ಭೋಜನಕ್ಕಾಗಿ ನೂತನ ಅನ್ನಬ್ರಹ್ಮ ತೆರೆಯಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ ಸೇರಿದಂತೆ ವಿವಿಧ ಸಂಘಸಂಸ್ಥೆಗಳವರು, ದೇವಳದವರು, ದಾನಿಗಳು ನೆರವಾಗಿದ್ದಾರೆ ಎಂದರು.

ಮಲ್ಪೆಯಲ್ಲಿ ಮಧ್ವಾಚಾರ್ಯ ವಿಗ್ರಹ
ಅನ್ನದಾನಕ್ಕೆ ಚಾಲನೆ ನೀಡಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪ್ರವಾಸೋದ್ಯಮ ಖಾತೆ ಸಚಿವ ಜನಾರ್ದನ ರೆಡ್ಡಿ, ಆಚಾರ್ಯ ಮಧ್ವರಿಗೆ ವಡಭಾಂಡೇಶ್ವರದಲ್ಲಿ ಗೋಪಿಚಂದನ ಮುದ್ದೆಯಲ್ಲಿ ಲಭಿಸಿದ ಕೃಷ್ಣಮೂರ್ತಿಯ ಸ್ಮರಣೆಗಾಗಿ ಮಲ್ಪೆ ಕಡಲ ತೀರದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಚಾರ್ಯ ಮಧ್ವರ ಶಿಲಾಪುತ್ಥಳಿ ಸ್ಥಾಪಿಸಲಾಗುವುದು. ಭಗವಂತನಲ್ಲಿ ತಾನಿರಿಸಿದ ನಂಬಿಕೆ, ಭಕ್ತಿಯ ಧ್ಯೋತಕವಾಗಿ ಅನ್ನಬ್ರಹ್ಮ ಶಿಲಾನ್ಯಾಸ ನೆರವೇರಿಸಿದ ತನಗೆ ಅದರ ಉದ್ಘಾಟನೆಯಲ್ಲೂ ಭಾಗವಹಿಸುವ ಅವಕಾಶ ಲಭಿಸಿತು ಎಂದರು.

ಜ್ಞಾನಕಾರ್ಯಕ್ಕೆ ದೇವಳ ಹಣ
ಅಭ್ಯಾಗತರಾಗಿ ಆಗಮಿಸಿದ್ದ ಗೃಹ ಮತ್ತು ಮುಜರಾಯಿ ಖಾತೆ ಸಚಿವ ಡಾ. ವಿ. ಎಸ್. ಆಚಾರ್ಯ, ದೇವಳಗಳ ಹಣವನ್ನು ದೇವಳಗಳ ಅಭಿವೃದ್ಧಿಗೆ ಹೊರತುಪಡಿಸಿ ಬೇರಾವುದೇ ಕಾರ್ಯಗಳಿಗೆ ಬಳಸಲಾಗುತ್ತಿಲ್ಲ. ದೇವಳಗಳಲ್ಲಿ ನಡೆಯುವ ಉತ್ಸವ, ಧಾರ್ಮಿಕ ಕಾರ್ಯಗಳು, ಜ್ಞಾನಕಾರ್ಯಗಳಾದ ಹರಿಕಥೆ, ಯಕ್ಷಗಾನ, ಉಪನ್ಯಾಸ ಇತ್ಯಾದಿಗಳಿಗೆ ಬಳಸಲಾಗುವುದು. ದೇವಳಗಳ ಅರ್ಚಕರಿಗೆ ಈ ಹಿಂದೆ ನೀಡುತ್ತಿದ್ದ ಸಂಭಾವನೆಯನ್ನು ತಮ್ಮ ಸರಕಾರ ಹೆಚ್ಚಿಸಿದ್ದು, ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತಿದೆ. ಅದನ್ನು 12 ಸಾವಿರ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಬಜೆಟ್ ನಲ್ಲಿದೆ ಎಂದರು.

ಕಲ್ಯಾಣ ಮಂಟಪ ನಿರ್ಮಾಣ
ಅಧ್ಯಕ್ಷತೆ ವಹಿಸಿದ್ದ ತಿರುಮಲ ತಿರುಪತಿ ದೇವಳ ಅಧ್ಯಕ್ಷ ಆದಿಕೇಶವುಲು ನಾಯ್ಡು, ಉಡುಪಿ ಹಾಗೂ ತಿರುಪತಿ ಕ್ಷೇತ್ರಗಳಿಗೆ ಅವಿನಾಭಾವ ಸಂಬಂಧವಿದೆ. ಅದು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ತಿರುಪತಿ ದೇವಳ ವತಿಯಿಂದ ಕಲ್ಯಾಣ ಮಂಟಪ ನಿರ್ಮಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಸೂಕ್ತ ಸ್ಥಳಾವಕಾಶ ಒದಗಿಸಿಕೊಟ್ಟಲ್ಲಿ ಶೀಘ್ರ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದರು.
ತಿರುಪತಿ ದೇವಳ ವತಿಯಿಂದ ಹಿಂದೂ ಧರ್ಮ ರಕ್ಷಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀನಿವಾಸ ಕಲ್ಯಾಣ, ದಾಸ ಸಾಹಿತ್ಯ ಪ್ರಚಾರ, ಗೋರಕ್ಷಣೆ ಇತ್ಯಾದಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಾಣಿಯೂರು ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಭೀಮನಕಟ್ಟೆ ಭೀಮಸೇತು ಮುನಿವೃಂದ ಸಂಸ್ಥಾನದ ರಘುಮಾನ್ಯತೀರ್ಥ ಸ್ವಾಮೀಜಿ ಮತ್ತು ರಘುವರೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.


ಧರ್ಮಸ್ಥಳ ಹರ್ಷೇಂದ್ರಕುಮಾರ್, ಶಾಸಕರಾದ ಕೆ. ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಮಾಜಿ ಸಂಸದ ವಿನಯಕುಮಾರ್ ಸೊರಕೆ, ನಗರಸಭಾಧ್ಯಕ್ಷ ದಿನಕರ ಶೆಟ್ಟಿ, ಹುಬ್ಬಳ್ಳಿ- ಬೆಂಗಳೂರು ಲೋಕಶಿಕ್ಷಣ ಟ್ರಸ್ಟ್ ಜಂಟಿ ಕಾರ್ಯದರ್ಶಿ ಎ. ಸಿ. ಗೋಪಾಲ್, ಉದ್ಯಮಿಗಳಾದ ಪ್ರಮೋದ್ ಮಧ್ವರಾಜ್ ಮತ್ತು ಸುರೇಶ್ ಅಭ್ಯಾಗತರಾಗಿದ್ದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಪ್ರಕಾಶ ಶೆಟ್ಟಿ ಮುಂಬೈ, ಗಿರಿರಾಜನ್ ಕೋಲ್ಕತಾ, ವೇಣುಗೋಪಾಲ ರಾವ್ ವಿಜಯವಾಡ ಮತ್ತು ಬಾಲಕೃಷ್ಣ ಶೆಟ್ಟಿ, ರಾಧಾಬಾಯಿ ಬೈಲೂರು ಉಡುಪಿ ಅವರನ್ನು ಸನ್ಮಾನಿಸಲಾಯಿತು.
ವರದಿ: ಕಿರಣ್ ಮಂಜನ ಬೈಲು

ಮುಂದೆ ಓದಿ
9:46 PM

ಬೆಂಕಿ...ಬೆಂಕಿ...

Posted by ekanasu

ರಾಜ್ಯ - ರಾಷ್ಟ್ರ

ಪಡುಬಿದ್ರಿ: ಮಂಗಳೂರಿನಿಂದ ಮಲ್ಪೆ ಕಡೆಗೆ ಮೀನುಗಾರಿಕೆಗೆ ತೆರಳಿದ್ದ ಬೃಹತ್ ಪರ್ಸೀನ್ ಬೋಟಿಗೆ ಸಮುದ್ರ ಮಧ್ಯೆಯೇ ಬೆಂಕಿ ಹತ್ತಿಕೊಂಡು ಮುಳುಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.ಹೆಜಮಾಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಸಮುದ್ರ ಮಧ್ಯೆ ಘಟಿಸಿದೆ.
ಬೋಟಿನಲ್ಲಿದ್ದ 21 ಮೀನುಗಾರರನ್ನು ಹೆಜಮಾಡಿಯಟ್ರಾಲ್ ಬೋಟು ಮೀನುಗಾರರು ರಕ್ಷಿಸಿದ್ದಾರೆ. ಮಂಗಳೂರಿನ ಬೆಂಗರೆ ನಿವಾಸಿ ಶಶಿ ಮೆಂಡನ್ ಮಾಲಕತ್ವದಲ್ಲಿ ನೂತನವಾಗಿ ಖರೀದಿಸಿದ್ದ ಬಾಲು ಪ್ರಸಾದ್ ಎಂಬ ಹೆಸರಿನ ಬೋಟು ಇದಾಗಿದ್ದು ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ.




ಘಟನಾ ವಿವರ
ಬಾಲು ಪ್ರಸಾದ್ ಎಂಬ ಹೆಸರಿನ ಈ ಬೋಟು 21 ಜನ ಮೀನುಗಾರರನ್ನು ಹೊತ್ತುಕೊಂಡು ಶುಕ್ರವಾರ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಮಲ್ಪೆ ಮೀನುಗಾರಿಕಾ ಬಂದರಿನತ್ತ ಪಯಣ ಬೆಳೆಸಿತ್ತು. ಮಧ್ಯಾಹ್ನದ ವೇಳೆಗೆ ಬೋಟಿನ ಇಂಜಿನಿನ ಬ್ಯಾಟರಿ ಕೇಬಲಿನಲ್ಲಿ ಶಾರ್ಟ್ ಸಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತ್ತು. ಅದಾಗಲೇ ಮೀನುಗಾರರು ಇಂಜಿನ್ ಸ್ಥಗಿತಗೊಳಿಸಿ ಬೆಂಕಿ ನಂದಿಸಲು ಸಮುದ್ರದ ನೀರನ್ನು ಚಿಮುಕಿಸಿದ್ದರು. ಆದರೆ ಬೆಂಕಿ ಬಹಳ ವೇಗವಾಗಿ ಬೋಟಿನ ಡೀಸೆಲ್ ಟ್ಯಾಂಕಿಗೆ ಹತ್ತಿಕೊಂಡಿತು. ಬೆಂಕಿ ಹೆಚ್ಚಾಗತೊಡಗಿದಾಗ ಹೆದರಿದ ಮೀನುಗಾರರು ಮಂಗಳೂರಿನ ಹೆಲ್ಪ್ ಡೆಸ್ಕ್ ಗೆ ಫೋನಾಯಿಸಿದ್ದರು.




ಆದರೆ ತಕ್ಷಣ ಅವರ ಬರುವಿಕೆ ಕಾಣದೆ ಕಂಗಾಲಾಗಿದ್ದರು. ಈ ಸಂದರ್ಭ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಹೆಜಮಾಡಿಯ ಧರ್ಮಶಾಸ್ತ ಮತ್ತು ಮಹಾಲಕ್ಷ್ಮೀ ಟ್ರಾಲ್ ಬೋಟಿನ ಮೀನುಗಾರರು ಸಮುದ್ರ ಮಧ್ಯದಲ್ಲಿರುವ ಬೃಹತ್ ಬೋಟೊಂದರಲ್ಲಿ ಹೊಗೆ ಬರುತ್ತಿದ್ದುದನ್ನು ಗಮನಿಸಿ ಬೆಂಕಿ ಹತ್ತಿ ಉರಿಯುತ್ತಿದ್ದ ಬಾಲು ಪ್ರಸಾದ್ ಬೋಟಿನ ಪಕ್ಕ ಹೋಗಿ ಅದರಲ್ಲಿದ್ದ ಕೆಲ ಮೀನುಗಾರರನ್ನು ತಮ್ಮ ಬೋಟಿನ ಮುಖಾಂತರ ರಕ್ಷಿಸಿದರು. ಮತ್ತೆ ಕೆಲವರು ಪರ್ಸೀನ್ ಸಣ್ಣ ಮೀನು ಸಾಗಿಸುವ ದೋಣಿ ಮೂಲಕ ಜೀವ ಉಳಿಸಿಕೊಂಡರು.



ಅದಾಗಲೇ ಬೆಂಕಿಯ ಕೆನ್ನಾಲಗೆ ಮಂಗಳೂರು-ಉಡುಪಿಯಾದ್ಯಂತದ ಸಮುದ್ರ ತೀರದ ಜನರಿಗೆ ಗೋಚರಿಸಿತ್ತು. ಬೋಟಿನ ಮಾಲೀಕ ಶಶಿ ಮೆಂಡನ್ರವರು ಲಕ್ಷಾಂತರ ರೂ. ಖರ್ಚು ಮಾಡಿ ಈ ಬೋಟನ್ನು ಖರೀದಿಸಿದ್ದರು. ಬೆಂಕಿ ಹತ್ತಿಕೊಂಡ ಬೋಟಿನಲ್ಲಿದ್ದ ಬಲೆ, ಇಂಜಿನ್, ಫೈಬರ್ ಬಾಡಿ ಎಲ್ಲವೂ ಸಂಪೂರ್ಣ ಬೆಂಕಿಗಾಹುತಿಯಾಗಿ ಸುಟ್ಟು ಹೋಗಿದೆ. ಸುಮಾರು ಹತ್ತು ಕಿ.ಮೀ. ಗೂ ದೂರದಲ್ಲಿ ಬೋಟಿಗೆ ಹತ್ತಿಕೊಂಡ ಬೆಂಕಿಯನ್ನು ಕಂಡು ಸಮುದ್ರ ತೀರದಲ್ಲಿ ಸಾವಿರಾರು ಜನರು ಜಮಾವಣೆಗೊಂಡಿದ್ದರು.


ಕೈಕೊಟ್ಟ ಕರಾವಳಿ ರಕ್ಷಣಾ ಪಡೆ
ಮಧ್ಯಾಹ್ನ 12;30 ರ ಸಮಯದಲ್ಲಿ ಬೋಟಿಗೆ ಬೆಂಕಿ ಬಿದ್ದು ಮಂಗಳೂರಿನ ಹೆಲ್ಪ್ ಡೆಸ್ಕ್ಗೆ ಮಾಹಿತಿ ನೀಡಿದ್ದರೂ ಸಂಜೆ 5 ಗಂಟೆಯಾದರೂ ಕರಾವಳಿ ತಟ ರಕ್ಷಣಾ ಪಡೆಯವರು ಅಲ್ಲಿಗೆ ಬರದಿರುವುದನ್ನು ಕಂಡು ಇದರಿಂದ ಮೀನುಗಾರರು ಆಕ್ರೋಶಗೊಂಡಿದ್ದರು.



ಘಟನೆಯ ಬಗ್ಗೆ ಸುದ್ದಿ ತಿಳಿದ ಕಾರ್ಕಳ ಡಿ.ವೈ.ಎಸ್.ಪಿ. ಸಂತೋಷ್ ಕುಮಾರ್, ಸಿ.ಐ. ಚೆಲುವರಾಜು, ಎಸ್.ಐ. ಮೋಹನ್ ಕೊಟ್ಟಾರಿ ಮತ್ತವರ ಸಿಬ್ಬಂದಿಗಳು ಆಗಮಿಸಿದ್ದರು.



ಪಡುಬಿದ್ರಿಯ ಪೊಲೀಸ್ ಪೇದೆಯವರಾದ ಸುರೇಶ್ ಹಾಗೂ ಯೋಗೀಶ್ ಬೆಂಕಿ ಹತ್ತಿಕೊಂಡ ಬೋಟಿನ ಹತ್ತಿರಕ್ಕೆ ಸ್ಥಳೀಯ ದೋಣಿಯ ಮೂಲಕ ತೆರಳಿ ವೀಕ್ಷಣೆ ನಡೆಸಿ ವರದಿ ನೀಡಿದರು. ಸಂಜೆಯ ವೇಳೆಗೆ ಬೋಟು ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿದ್ದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮುಲ್ಕಿ: ಇದೀಗ ಮುಲ್ಲಿ ನಗರವನ್ನು ಅನಾಮಿಕ ಜ್ವರ ಬೆಚ್ಚಿಬೀಳಿಸಿದೆ. ಮುಲ್ಕಿ ಪರಿಸರದಲ್ಲಿ ಜನತೆ ಭಯಭೀತರಾಗಿದ್ದಾರೆ. ಅನಾಮಿಕ ಜ್ವರದಿಂದ ಈ ಪರಿಸರದ ಲಿಂಗಪ್ಪಯ್ಯ ಕಾಡಿನ76ಮನೆಯ 144ಜನ ತತ್ತರಿಸುತ್ತಿದ್ದಾರೆ. ಇದೀಗ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿನೀಡಿದ್ದಾರೆ.
ವಿವರ
ಜ್ವರದಿಂದ ಬಳಲುತ್ತಿದ್ದ 60ಜನ ಸರಕಾರಿರಿ ಆಸ್ಪತ್ರೆಗೆ, ತಲಾ 4 ಜನರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ತೀಕ್ಣ ಜ್ವರ, ಮೈಕೈ ನೋವು, ಜ್ವರ ಕಡಿಮೆಯಾದರೂ ನಡೆಯಲಾಗದ ಸ್ಥಿತಿ ಈ ರೋಗ ಬಾಧಿತರದ್ದು.ಮುಲ್ಕಿಯ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡಿನ ವಲಸೆ ಕಾರ್ಮಿಕರು ವಾಸಿಸುವ ಬಿಜಾಪುರ ಕಾಲೋನಿಯಲ್ಲಿ ಜನರು ಕಳೆದ ಕೆಲವು ದಿನಗಳಿಂದ ಅನಾಮಿಕ ಜ್ವರದಿಂದ ಬಳಲುತ್ತಿರುವುದನ್ನು ಕಂಡ ಆರೋಗ್ಯ ಇಲಾಖೆ ಅಧಿಕಾರಿಗಳುಭೇಟಿ ನೀಡಿ ಪರಿಹಾರ ರೂಪದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ಹಾಗೂ ಆರೋಗ್ಯ ಸಹಾಯಕಿಯರು ಪ್ರತಿ ಮನೆಗೆ ಭೇಟಿ ನೀಡಿದಾಗ ನೂರಾರು ಪ್ರಕರಣಗಳು ಪತ್ತೆಯಾದವು. ಅಲ್ಲಿನ ಪರಿಸರವು ಸ್ಚಚ್ಚತೆಯಿಲ್ಲದೇ ಕುಡಿಯುವ ನೀರಿನ ಶೇಖರಣೆಯ ಟ್ಯಾಂಕಿನಲ್ಲಿ ಸೊಳ್ಳೆ ಮರಿಗಳು, ಟಯರ್, ಸಿಯಾಳದ ಹೋಳು, ರಸ್ತೆಯಲ್ಲಿಯೇ ಅಕ್ರಮ ಕಟ್ಟಿಗೆ ದಾಸ್ತಾನು, ಶೌಚಾಲಯದ ಮಲೀನತೆಯು ಮುಖಕ್ಕೆ ರಾಚುವಂತೆ ಅಣಕಿಸುತ್ತಿತ್ತು.

ಈ ಬಗ್ಗೆ ಮೂಲ್ಕಿ ನಗರ ಪಂಚಾಯ್ತಿಯ ಅಧ್ಯಕ್ಷ ಬಿ.ಎಂ.ಆಸಿಫ್, ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲಿಯಾನ್ ಸದಸ್ಯ ಅಶೋಕ್, ಮುಂದಿನ ಒಂದು ದಿನದಲ್ಲಿ ಪರಿಸರವನ್ನು ಸ್ವಚ್ಚವಾಗಿ ಇರಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಂಚಾಯ್ತಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಮನೆ ಮನೆಗೆ ತೆರಳಿ ಎಚ್ಚರಿಕೆ ನೀಡುತ್ತಿದ್ದರು.
ಈ ನಡುವೆ ಜನರು ಸಹ ಇಲ್ಲಿ ನೀರು ಮೂರು, ನಾಲ್ಕು ದಿನಗಳಿಗೊಮ್ಮೊ ಬರುತ್ತಿದ್ದು ನೀರನ್ನು ಅಷ್ಟು ದಿನಗಳವರೆಗೆ ಶೇಖರಿಸಿ ಇಡಬೇಕಾಗುತ್ತದೆ ಎಂಬ ಅಸಹಾಯಕತೆ ತೋರ್ಪಡಿಸಿದರು. ಮಾಹಿತಿ ನೀಡುವ ತಂಡದಲ್ಲಿ ವೃತ್ತ ನಿರೀಕ್ಷಕ ಶಿವಪ್ರಕಾಶ್ ನಾಯಕ್, ದಲಿತ ಸಮಿತಿಯ ಮಂಜುನಾಥ, ಇಂಜಿನಿಯರ್ ದಿವಾಕರ್, ಆರೋಗ್ಯ ಸಹಾಯಕಿ ಸಂಧ್ಯಾ ಇನ್ನಿತರರು ಕಾರ್ಯ ನಿರ್ವಹಿಸಿದರು.

ಸ್ಥಳಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಜಗನ್ನಾಥ್ ಭೇಟಿ ನೀಡಿ ಪರಿಸರದಲ್ಲಿ ಈ ಶಂಕಿತ ಜ್ವರದ ಲಕ್ಷಣವನ್ನು ಪತ್ತೆ ಹಚ್ಚಲು ವೈದ್ಯರ ನೇತೃತ್ವದಲ್ಲಿ ರಚಿಸಿದ ಆರೋಗ್ಯ ತಂಡ ಕಾರ್ಯನಿರ್ವಹಿಸುತ್ತಿದೆ.ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು, ರೋಗ ಲಕ್ಷಣದ ವ್ಯಕ್ತಿಯ ರಕ್ತದ ಸ್ಯಾಂಪಲನ್ನು ಮಂಗಳೂರಿನಲ್ಲಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಶಂಕಿತ ಜ್ವರವು ಚಿಕನ್ ಗುನ್ಯದ ಒಂದಂಶವನ್ನು ಮಾತ್ರ ಹೊಂದಿದೆ, ಸೊಳ್ಳೆಯಿಂದ ಇದು ಹರಡುತ್ತಿದ್ದು ಜನರು ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದರು.

ಮೋರಿಗಳಲ್ಲಿ ಹೂಳು ತುಂಬಿದ್ದನ್ನು ತೆಗೆಯಲಾಗುವುದು, ಸುಮಾರು 30ಲಕ್ಷದಲ್ಲಿ ಪಾಳು ಬಿದ್ದಿರುವ ರಸ್ತೆ ಮತ್ತು ಮೋರಿ ರಚನೆಯನ್ನು ತ್ವರಿತವಾಗಿ ಮಾಡುತ್ತೇವೆ, ಪರಿಸರದಲ್ಲಿ ಎಲ್ಲಾ ಕಡೆಗಳಲ್ಲಿ ಫಾಗಿಂಗ್ ನಡೆಸಲಾಗುವುದು, ಭಾನುವಾರ ವಿಶೇಷ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು, ಶಂಕಿತ ಜ್ವರವು ಹರಡದಂತೆ ಸ್ಥಳೀಯರು ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಬಿ.ಎಂ.ಆಸಿಫ್ ತಿಳಿಸಿದರು.

ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅರುಣ್ ಕುಮಾರ್, ಜಿಲ್ಲಾ ಕೀಟ ತಜ್ಞೆ ಮುಕ್ತ ರವರು ಜನರೊಂದಿಗೆ ಮಾತುಕತೆ ನಡೆಸಿದರು. ಅಧಿಕಾರಿಗಳಿಗೆ ನಗರ ಪಂಚಾಯ್ತಿಯ ಸ್ಥಾಯಿ ಸಮಿತಿಯ ಶಶಿಕಾಂತ ಶೆಟ್ಟಿ ಅಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿದರು.

ಮುಂದೆ ಓದಿ
9:34 PM

ಗ್ರಾಹಕರ ಸಮಾವೇಶ

Posted by ekanasu

ಮುಲ್ಕಿ: ಬ್ಯಾಂಕಿನಿಂದ ಗ್ರಾಹಕರಿಗೆ ನೀಡಲಾಗುವ ಸವಲತ್ತುಗಳ ಸುಧಾರಣೆಗಾಗಿ ಗ್ರಾಹಕರ ಸಮಾವೇಶವನ್ನು ಹಮ್ಮಿಕೊಂಡು ಬ್ಯಾಂಕ್ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ ಎಂದು ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಸುಜೀರ್ ಪ್ರಭಾಕರ್ ನಾಯಕ್ ಹೇಳಿದರು.
ಮುಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಮೂಲ್ಕಿ ಶಾಖೆ ಮತ್ತು ವಿಜಯಾ ಕಾಲೇಜು ಶಾಖೆ ಜಂಟಿಯಾಗಿ ಹಮ್ಮಿಕೊಂಡ ಗ್ರಾಹಕರ ಸಮಾವೇಶದಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.


ಸಿಂಡ್ ಆರೋಗ್ಯ ಎಂಬ ಸಿಂಡಿಕೇಟ್ ಬ್ಯಾಂಕ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ಟಿ.ಟಿಕೆ ಎಂಬ ಖಾಸಗಿ ಸಂಸ್ಥೆ ಸೇರಿಕೊಂಡು ನಡೆಸುವ ಆರೋಗ್ಯ ವಿಮೆಯಿಂದ ಹೆಚ್ಚಿನವರು ತೊಂದರೆಗೊಳಗಾಗಿದ್ದು ಕೇವಲ 18ಸಾವಿರ ರೂ ವಿಮೆಹಣ ಪಡೆಯಲು ತಾವು ಪಟ್ಟ ಬವಣೆಯನ್ನು ಮತ್ತು ಟಿ.ಟಿ.ಕೆ ಅಧಿಕಾರಿಗಳಿಂದಾದ ಮಾನಸಿಕ ಹಿಂಸೆಯನ್ನು ಉದ್ಯಮಿ ರಾಮಮೂರ್ತಿ ಹೇಳಿದರು.ಈಬಗ್ಗೆ ಇನ್ನೂ ಹಲವಾರು ಸಾರ್ವಜನಿಕರು ಸಿಂಡ್ ಆರೋಗ್ಯದಿಂದ ತಮಗೆ ವಂಚನೆಯಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಈಬಗ್ಗೆ ಉತ್ತರಿಸಿದ ಪ್ರಭಾಕರ್ ನಾಯಕ್ ವಿಮೆಯ ಬಗ್ಗೆ ಹಲವಾರು ದೂರುಗಳು ತಮಗೂ ಬಂದಿದ್ದು ಈಬಗ್ಗೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.ಕೋರ್ ಬ್ಯಾಂಕಿಂಗ್,ಇಂಟರ್ನೆಟ್ ಬ್ಯಾಂಕಿಂಗ್ ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಸವಲತ್ತುಗಳ ಬಗ್ಗೆ ನಾಯಕ್ ವಿವರಿಸಿದರು.

ಈಸಂದರ್ಭ ಬ್ಯಾಂಕಿನ ಹಿರಿಯ ಮತ್ತು ಅತ್ಯುತ್ತಮ ಗ್ರಾಹಕರಾದ ಪ್ರೊ.ಅಂಬ್ರೋಸ್ ಪುತ್ರಾದೊ,ಪ್ರೊ.ಯಶೋಧರಾ,ಮಾಲತಿರಾವ್,ವಿ.ವಿಶ್ವನಾಥ ಕಾಮತ್,ರಾಮಮೂರ್ತಿ,ವಿ.ವಿನೋದ್ ಕಾಮತ್,ಪ್ರೊನಾಗರಾಜ ನಾಯಕ್,ಪ್ರೊ.ರಾಘವ ಭಟ್,ರೆ.ಗೋಡ್ವಿನ್ ಪ್ರಮೋಧನ್,ಕೆ.ನರಸಿಂಹ ಪೈ ಯವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜು ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿ,ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ಅತಿಥಿಗಳಾಗಿದ್ದರು.

ವಿಜಯಾಕಾಲೇಜು ಶಾಖಾ ಪ್ರಭಂದಕರಾದ ನಂದನ್ ಕಾಮತ್ ಸ್ವಾಗತಿಸಿದರು. ಮುಲ್ಕಿ ಶಾಖೆಯ ಪ್ರಭಂದಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಸುಬ್ಬಣ್ಣ ವಂದಿಸಿದರು.

ವರದಿ: ಭಾಗ್ಯವಾನ್ ಮುಲ್ಕಿ

ಮುಂದೆ ಓದಿ

ವೈವಿಧ್ಯ

ಕ್ಲಿರ್....ಕ್ಲ್.... ಎಂದು ಈಗಲೂ ಅದೇ ಹೊಸ ಕ್ಯಾಮಾರಾದಂತೆ ಸದ್ದು ಮಾಡುವ ಈ ರಾಜಾ ಕ್ಯಾಮರಾಗಳು ನೋಡಲು ಅಂದ...ಜೊತೆ ಜೊತೆಗೆ ಅದರಲ್ಲಿ ತೆಗೆದ ಛಾಯಾಚಿತ್ರಗಳೂ ಬಲುಚೆಂದ.ಮಂಗಳೂರು ಮಹಾ ನಗರದ ಪಿ.ವಿ.ಎಸ್ ವೃತ್ತದ ಬಳಿಯಲ್ಲಿರುವ ಮಹಾವೀರ ಆರ್ಟ್ ಸ್ಟುಡಿಯೋದಲ್ಲಿ ಹಳೆಯ ಹಲವು ಕ್ಯಾಮರಾಗಳಿವೆ. ಜಯವರ್ಮ ರಾಜ್ ಅವರ ಮಾಲಿಕತ್ವದ ಈ ಸ್ಟುಡಿಯೋದಲ್ಲಿ ಇಂದಿಗೂ ಹಳೆಯ ಕ್ಯಾಮರಾಗಳಿಗೂ ಒಂದು ಸ್ಥಾನ ದೊರಕಿಸಲಾಗಿದೆ. ಅವುಗಳನ್ನು ಒಪ್ಪ ಓರಣವಾಗಿ ಜೋಡಿಸಿ, ಕಾಪಿಡುತ್ತಾ ಬಂದಿದ್ದಾರೆ ಸುಧಾಕರ ಶೆಣೈ. ಈ ಹಳೆಯ ಕ್ಯಾಮಾರಾಗಳತ್ತ ಒಂದು ನೋಟ ಇಲ್ಲಿದೆ.



ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಕೆಲವರಿಗೆ ಸ್ಟಾಂಪ್ ಸಂಗ್ರಹವಾದರೆ ಇನ್ನು ಕೆಲವರಿಗೆ ಪೆನ್ನು ಸಂಗ್ರಹ, ಪತ್ರಿಕೆ ಸಂಗ್ರಹ, ನಾಣ್ಯ ಸಂಗ್ರಹ ಹೀಗೆ. ಇನ್ನೂ ಕೆಲವೊಬ್ಬರಿಗೆ ಹಳೆಯ ಪರಿಕರಗಳನ್ನು, ಮರದ ಸಾಮಾಗ್ರಿಗಳನ್ನು ಸಂಗ್ರಹಿಸುವ ಹವ್ಯಾಸ. ಮತ್ತೆ ಕೆಲವರಿಗೆ ವಾಹನಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಆದರೆ ಇದು ಕ್ಯಾಮರಾ ಸಂಗ್ರಹದ ಹವ್ಯಾಸ.



ಇಲ್ಲಿ 1986 ರೋಲ್ಫ್ಲೆಕ್ಸ್ ಕ್ಯಾಮರಾದಿಂದ ತೊಡಗಿ ಈಗಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮಾರಾ ತನಕ ಕಾಣಸಿಗುತ್ತದೆ. ಯಾಶಿಕಾ 1249, ನ್ಯಾಷನಲ್ ವಿಡಿಯೋ ಕ್ಯಾಮರಾ ಎಂ3 , 1980, ಕ್ಯಾನೋನ್ ಅಟೋ ಝೂಮ್ ಎಸ್ 12 ಎಕ್ಸ್ಎಲ್, ಬಾಕ್ಸ್ ಕ್ಯಾಮರಾ, ಮಿನಾಲ್ಟ್ ಕ್ಯಾಮರಾ ಹೀಗೆ ಹಲವು ಕ್ಯಾಮರಾಗಳಿವೆ. ನೋಡುಗರನ್ನು ಇದು ಕುತೂಹಲಕ್ಕೀಡುಮಾಡುತ್ತವೆ. ರಸ್ತೆ ಬದಿಯಲ್ಲೇ ಇರುವ ಸ್ಟುಡಿಯೋದ ಶೋಕೇಸ್ನಲ್ಲಿ ಸ್ಥಾನ ಪಡೆದ ಈ ಕ್ಯಾಮರಾಗಳನ್ನು ಕಂಡು ಕುತೂಹಲಗೊಂಡ ಹಲವಾರು ಮಂದಿ ಇದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರಂತೆ. ಹಲವು ಮಂದಿ ವಿದೇಶೀಯರೂ ತಮ್ಮ ಕುತೂಹಲವನ್ನು ತಣಿಸಿಕೊಂಡಿದ್ದಾರಂತೆ.


ಈ ಕ್ಯಾಮರಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರೂ ಸೇರಿದಂತೆ ಹಲವಾರು ಮಂದಿ ಗಣ್ಯರ ಛಾಯಾಚಿತ್ರಗಳನ್ನು ತೆಗೆಯಲಾಗಿದೆಯಂತೆ. ಈಗಲೂ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುವ ಸಾಮಥ್ರ್ಯಗಳನ್ನು ಈ ಕ್ಯಾಮರಾಗಳು ಉಳಿಸಿಕೊಂಡಿವೆ ಎಂಬುದು ಮತ್ತೊಂದು ಅಚ್ಚರಿ.
ಎಚ್.ಕೆ.
ಚಿತ್ರ: ಪ್ರಸನ್ನ ಬಿ.ಪಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಾದರಿ ಗ್ರಾಮದ
ಹಿಂದೊಬ್ಬ ಉತ್ಸಾಹಿ ಯುವಕ...

ರಾಜಕೀಯಕ್ಕೆ ಇಳಿದಾಕ್ಷಣ ಹಣ ಮಾಡಬೇಕು ಎಂದುಕೊಳ್ಳುವ ಮಂದಿಯೇ ಅಧಿಕ... ಪ್ರಚಾರ ಹಾಗೂ ಹಣದ ಹಿಂದೆಯೇ ಇರುವವರು ಸದಾ ನಮ್ಮ ನಡುವೆ ಕಾಣಸಿಗುತ್ತಾರೆ. ಆದರೆ ಇಲ್ಲೊಬ್ಬ ಯುವಕ ಇವೆಲ್ಲಕ್ಕಿಂತ ವ್ಯತಿರಿಕ್ತ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರೂ ಸ್ವಂತಕ್ಕೆಂದು ಕಿಂಚಿತ್ತು ಹಣ ಕೂಡಿಡದೆ ಕೇವಲ ಸಮಾಜ ಸೇವೆಯಲ್ಲೇ ತೃಪ್ತಿ ಕಂಡಿದ್ದಾರೆ. ತನ್ನ ಗ್ರಾಮ, ವಾಡರ್ಿನ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದರೆ ಅಚ್ಚರಿಯಾಗದಿರದು.

ಏನು ಸಾಧೆನೆ?
ಬೆಳ್ತಂಗಡಿ ತಾಲೂಕು ವ್ಯಾಪ್ತಿಗೊಳಪಟ್ಟ ಬಡಕೋಡಿ ಮತ್ತು ಹೊಸಂಗಡಿ ಗ್ರಾಮಗಳನ್ನು ಒಳಗೊಂಡ ಹೊಸಂಗಡಿ ಗ್ರಾಮ ಪಂಚಾಯತ್ ಸುಮಾರು 5ಸಾವಿರ ಜನಸಂಖ್ಯೆಯನ್ನು ಒಳಗೊಂಡಿದೆ. ಸುಮಾರು 1 ಸಾವಿರದಷ್ಟು ಮನೆಗಳಿರುವ ಈ ಗ್ರಾಮದಲ್ಲಿ ಸರ್ವಧರ್ಮೀಯರೂ ಸಹಬಾಳ್ವೆಯಿಂದ ಬಾಳುತ್ತಿದ್ದಾರೆ. ಇಂತಹ ಗ್ರಾಮವನ್ನು ಪ್ಲಾಸ್ಟಿಕ್ ನಿಯಂತ್ರಿತ ಗ್ರಾಮವನ್ನಾಗಿಸುವ ಸಾಹಸಕ್ಕೆ ಈ ಯುವಕ ಕೈಯಿಕ್ಕಿದ್ದಾರೆ!

ಸ್ವಚ್ಛ , ಮಾದರಿ ಗ್ರಾಮವೆಂದೇ ಖ್ಯಾತಿ ಪಡೆದ ಬಂಟ್ವಾಳ ತಾಲೂಕಿನ `ಇರಾ'ಗ್ರಾಮವನ್ನೇ ಮಾದರಿಯಾಗಿಟ್ಟುಕೊಂಡು `ಹೊಸಂಗಡಿ' ಗ್ರಾಮವನ್ನು ಕಟ್ಟುವ ಕಾರ್ಯಕ್ಕೆ ಈ ಯುವಕ ಮುಂದಾಗಿದ್ದಲ್ಲದೆ ಯಶಸ್ವಿಯಾಗಿದ್ದಾರೆಂಬುದು ಶ್ಲಾಘನಾರ್ಹ. `ಸ್ವಚ್ಛ ಗ್ರಾಮ ಆರೋಗ್ಯ ಧಾಮ' ಧ್ಯೇಯದ ಮೂಲಕ `ಪ್ಲಾಸ್ಟಿಕ್ ನಿಯಂತ್ರಿತ' ಗ್ರಾಮವನ್ನಾಗಿಸುವ ಗುರಿಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಊರಲ್ಲಿ ನಡೆಸುತ್ತಿದ್ದಾರೆ.

ಪ್ಲಾಸ್ಟಿಕ್ ಸಂಗ್ರಹಕ್ಕಾಗಿ ಭರ್ಜರಿ ಕಾಂಕ್ರೀಟ್ ಸೌಧವೇ ಇಲ್ಲಿ ನಿರ್ಮಾಣಗೊಂಡಿದೆ. ಇಂತಹ ಕಾಂಕ್ರೀಟ್ ಸೌಧಗಳು ರಾಜ್ಯದಲ್ಲೇ ಮೊತ್ತ ಮೊದಲ ಪ್ರಯತ್ನ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.. ಒಟ್ಟು 12 ಕಾಂಕ್ರೀಟ್ ಸೌಧಗಳು ಹಾಗೂ 5 ತಾತ್ಕಾಲಿಕ ಸೌಧಗಳು ಪ್ಲಾಸ್ಟಿಕ್ ಸಂಗ್ರಹಕ್ಕಾಗಿ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇದೀಗ ತಲೆಯೆತ್ತಿ ನಿಂತಿವೆ. ಇವೆಲ್ಲವೂ ಈ ಯುವಕನ ಕಲ್ಪನೆಯ ಕೂಸುಗಳು...

ಯಾರೀ ಸಾಧಕ?
ಗ್ರಾಮದ ಯಾರಲ್ಲೇ ಕೇಳಲಿ `ಹರಿಯಣ್ಣ' ಎಂದೇ ಖ್ಯಾತಿ ಪಡೆದ ಸರಳ ಯುವಕ ಈ ಹರಿಪ್ರಸಾದ್ ಪಿ ಈ ಸಾಧಕ. ಸಂಕೋಚ ಸ್ವಭಾವ, ಸರಳ ಜೀವಿ. ಸದಾ ಶ್ವೇತವರ್ಣದ ತಿಳಿಯಂಗಿ. ಮೊಬೈಕ್ ಏರಿ ಊರವರ ಸಹಕಾರಕ್ಕೆ ಅಹರ್ನಿಶಿ ದುಡಿಯುತ್ತಾರೆ. ಯಾರಿಗೆ ಯಾವ ಹೊತ್ತಲ್ಲಿ ಏನೇ ತೊಂದರೆ ಬಂದರೂ ಈ ಯುವಕ ಅಲ್ಲಿ ಪ್ರತ್ಯಕ್ಷ... ಅಷ್ಟರ ಮಟ್ಟಿಗೆ ಊರವರ ನಡುವೆ `ಎಲ್ಲೊರೊಳೊಂದಾಗಿ' ಎಂಬಂತೆ ಬೆರೆಯುತ್ತಾರೆ. ತನ್ನ ಉತ್ಸಾಹಿ, ಸಮಾನ ಮನಸ್ಕರ ತಂಡದೊಂದಿಗೆ, ಊರವರ ಸಹಕಾರದೊಂದಿಗೆ ಊರೊಳಗೆ ನಿರಂತರ ಚಟುವಟಿಕೆ ನಡೆಸುತ್ತಿದ್ದಾರೆ.

ಇಷ್ಟಕ್ಕೆ ಮುಗಿದಿಲ್ಲ

ಊರ ಜನತೆಯಲ್ಲಿ ಆರೋಗ್ಯ ಮಾಹಿತಿ ಉಂಟಾಗಬೇಕು, ರಕ್ತದಾನದ ಬಗ್ಗೆ, ನೇತ್ರದಾನದ ಬಗ್ಗೆ ಕಾಳಜಿ ಮೂಡಬೇಕು ಎಂಬ ಮಹೋನ್ನತ ಚಿಂತನೆಯನ್ನು ಹೊಂದಿ ಇತ್ತೀಚೆಗೆ ವೈಶಿಷ್ಟ್ಯಪೂರ್ಣ ಪ್ರಯೋಗವೊಂದನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಈ ಹರಿಪ್ರಸಾದ್ ಅವರದ್ದು. ಮೂಡಬಿದಿರೆ ಜೈನ ಪ.ಪೂ.ಕಾಲೇಜಿನ ಎನ್.ಎಸ್.ಎಸ್.ವಿದ್ಯಾರ್ಥಿಗಳನ್ನೆಲ್ಲಾ ಒಟ್ಟು ಸೇರಿಸಿ ವಿಶೇಷ ವಾರ್ಷಿಕ ಶಿಬಿರವೊಂದನ್ನು ಹೊಸಂಗಡಿಯಲ್ಲಿ ಆಯೋಜಿಸಿದರು. ಶಿಬಿರಾರ್ಥಿಗಳಿಂದ ಹೊಸಂಗಡಿ ಗ್ರಾಮದ ಶೈಕ್ಷಣಿಕ, ಸಾಮಾಜಿಕ, ನೈರ್ಮಲ್ಯ ಸಮೀಕ್ಷಾ ಕಾರ್ಯ , ಶುದ್ಧ ನೀರಿನ ಪರೀಕ್ಷೆಗಾಗಿ ನೀರಿನ ಮಾದರಿಗಳನ್ನು ಗ್ರಾಮದ ಪ್ರತೀ ಮನೆಗಳಿಂದಲೂ ಸಂಗ್ರಹಿಸಿ ಪರೀಕ್ಷೆ ನಡೆಸಿದರು. ನಿಸರ್ಗದತ್ತ ಆಹಾರ, ನಾಟಿ ಔಷಧಿಯನ್ನು ಊರೊಳಗೆ ಪ್ರಯೋಗಿಸುವ ಕಾರ್ಯ ನಡೆಸಿದರು. ಜೊತೆಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಿದರು. ರಕ್ತ ವರ್ಗೀಕರಣ ಶಿಬಿರ ನಡೆಸಿದರು. ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾ ನಡೆಸಿದರು.
ಅಂತೂ ಎಂದೂ ಪ್ರಚಾರ ಬಯಸದೆ ನಿಸ್ವಾರ್ಥವಾಗಿ ಗ್ರಾಮದ ಅಭಿವೃದ್ಧಿ ಮಾಡಿದ ಹರಿಯಣ್ಣ ಊರವರ ಪಾಲಿಗೆ ಅಚ್ಚುಮೆಚ್ಚಿನ ಯುವಕ.
* ನಾಡೋಡಿ.

ಮುಂದೆ ಓದಿ

ವಿಶೇಷ ವರದಿ: ಹರೀಶ್ ಕೆ.ಆದೂರು


ಹೂವಿಂದ ಹೂವಿಗೆ ಹಾರುವ....
ಜೇನು ಸಂತತಿಗೆ ಕುತ್ತು ಬಂತು!


` ದೇಶದಲ್ಲಿ 20 ಕೋಟಿ ದೂರವಾಣಿ ಬಳಕೆಯಲ್ಲಿವೆ. ಈ ಪೈಕಿ ಶೇ.80ರಷ್ಟು ಮೊಬೈಲ್. ಮೊಬೈಲ್ ಹೊರಸೂಸುವ ವಿಕಿರಣ ಮಾಲಿನ್ಯ ಕಾರಿ. ವಿದ್ಯುತ್ ಕಾಂತೀಯ ವಿಕಿರಣದಿಂದಾಗಿ ಮಾನವನಲ್ಲಿ ನಿದ್ರಾಹೀನತೆ, ಕಿವುಡು ತನ, ಆಲಸ್ಯ ಸೇರಿದಂತೆ ಅನೇಕ ರೋಗಗಳು ಬರುವ ಸಾಧ್ಯತೆಗಳಿವೆ. ಇದೇ ಮೊಬೈಲ್ ತರಂಗಗಳು ಇತರ ಜೀವಿಗಳ ಮೇಲೂ ಪ್ರಭಾವ ಬೀರುತ್ತವೆ.'



`ಜೇನು' ಇದು ಅದ್ಭುತ ಶಕ್ತಿಯನ್ನು ಹೊಂದಿದೆ. ದೈನಂದಿನ ಕಾರ್ಯ, ವೈಧಿಕ, ಧಾರ್ಮಿಕ ಕಾರ್ಯಗಳಲ್ಲೂ ಇದಕ್ಕೆ ಪ್ರಾಧಾನ್ಯತೆ. ಆರೋಗ್ಯ ನೀಡುವ ಔಷಧವಾಗಿಯೂ ಇದನ್ನು ಬಳಸಲಾಗುತ್ತದೆ. ಇಂತಹ ಮಧು ಇಂದು ಉತ್ಪತ್ತಿಯಾಗುತ್ತಿಲ್ಲವೇ. ಇದಕ್ಕೆ ಕಾರಣವೇನು? ಈ ಜೇನಿನ ಸಂತತಿ ಇಂದು ಅವನತಿಯಂಚಿಗೆ ಸಾಗತೊಡಗಿದೆಯೇ... ಇದಕ್ಕೆ ಇಂದಿನ ಆಧುನಿಕತೆಯೇ ಮುಳುವಾಯಿತೇ ಈ ಎಲ್ಲಾ ಪ್ರಮುಖ ಪ್ರಶ್ನೆಗಳು ಇದೀಗ ಉದ್ಭವಿಸತೊಡಗಿದೆ.



ಇಡೀ ವಿಶ್ವದಾದ್ಯಂತ `ಜೇನು' ಬಳಸಲ್ಪಡುತ್ತದೆ. ಇದು ನೈಸರ್ಗಿಕ ಆಹಾರವೂ ಹೌದು. ಹೂವಿಂದ ಹೂವಿಗೆ ಹಾರಿ ಮಕರಂದ ಹೀರಿ ಆಕರ್ಷಕ ಗೂಡುಗಳಲ್ಲಿ ನೊಣಗಳು ಈ ಜೇನನ್ನು ಸಂಗ್ರಹಿಸಿಡುತ್ತವೆ. ಅಬಾಲ ವೃದ್ಧರಾದಿಯಾಗಿ ಜೇನನ್ನು ಇಷ್ಟ ಪಡದವರಿಲ್ಲ. ಇದನ್ನೊಂದು `ಕೃಷಿ'ಯಾಗಿಯೂ ವಾಣಿಜ್ಯ ಬೆಳೆಯಾಗಿಯೂ, ವ್ಯವಸಾಯವಾಗಿಯೂ ಬೆಳೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಇದನ್ನೊಂದು `ಕೃಷಿ'ಯಾಗಿ ವಾಣಿಜ್ಯ ದೃಷ್ಠಿಯಿಂದ ಬೆಳೆಯುತ್ತಿದ್ದಾರೆ. ಈ ವರ್ಷ `ಜೇನಿಗೆ' ರೋಗ ಹೆಚ್ಚಾಗಿದೆ. ಜೇನು ನೊಣಗಳ ಸಂತತಿ ಇಲ್ಲಿ ತೀವ್ರ ಪ್ರಮಾಣದಲ್ಲಿ ಕುಸಿಯತೊಡಗಿದೆ.



ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಗಳಾಗಿವೆ. ಇದರಿಂದಾಗಿ ಜಗತ್ತು ಕಿರಿದಾಗುತ್ತಾ ಸಾಗಿವೆ. ವಿಜ್ಞಾನ ಇಷ್ಟು ಮುಂದುವರಿದಂತೆ ಅಭಿವೃದ್ಧಿ, ಪ್ರಗತಿಯ ದೃಷ್ಠಿಯಿಂದ ಪ್ರಯೋಜನಗಳಾಗಿವೆಯಾದರೂ ನೈಸರ್ಗಿಕ ಆಸ್ತಿಗೆ ನಿರಂತರ ಹೊಡೆತ ಬೀಳುತ್ತಾ ಸಾಗಿದೆ. ಇದೀಗ ವಿಜ್ಞಾನದ ಅಪರಿಮಿತ ಪ್ರಗತಿಯಿಂದ ಜೇನ್ನೊಣಗಳಿಗೂ `ಆಧುನಿಕತೆ ಮುಳುವಾಗಿ' ಪರಿಣಮಿಸಿದೆ. ಇದು ಸತ್ಯ ಕೂಡ.
ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಪ್ರಗತಿಯಿಂದಾಗಿ ಸಂಪರ್ಕ ಮಾಧ್ಯಮಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿವೆ. ಸಂಪರ್ಕ ಮಾಧ್ಯಮಗಳಾಗಿ ದೂರವಾಣಿ, ಮೊಬೈಲ್ ಹೀಗೆ ಇತರ ವ್ಯವಸ್ಥೆಗಳು ಅಧಿಕವಾಗಿವೆ. ಇವುಗಳಿಂದ ಹೊರ ಬರುತ್ತಿರುವ `ತರಂಗ'ಗಳು ಈ ಜೇನು ನೊಣಗಳ ಜೀವಕ್ಕೆ ತೊಡಕುಂಟುಮಾಡುತ್ತಿವೆ.
ಜೇನು ನೊಣಗಳು ನೃತ್ಯದ ಮೂಲಕ ಅದರ ಸಂಪರ್ಕ (ಕಮ್ಯೂನಿಕೇಷನ್) ನಡೆಸುತ್ತದೆ. ಇದೀಗ ಇಡೀ ದೇಶದಾದ್ಯಂತ ಹೆಚ್ಚಿರುವ ವೈಜ್ಞಾನಿಕ ಪ್ರಗತಿ ಒಂದು ರೀತಿಯಲ್ಲಿ ಜೇನ್ನೊಣಗಳ ಸಂತತಿಯ ನಾಶಕ್ಕೆ ಕಾರಣವಾಗಿದೆ ಎಂದರೆ ಅಚ್ಚರಿಯಾಗಲಾರದು.
ಜೇನ್ನೊಣಗಳು ಸಂಪೂರ್ಣ ಸಂವಹನವನ್ನು ತನ್ನ ತರಂಗಗಳನ್ನು ಆಧರಿಸಿ ನಡೆಸುತ್ತದೆ. ಸೂರ್ಯ ರಶ್ಮಿಯ ದಿಕ್ಕಿಗೆ ಅನುಗುಣವಾಗಿ ಅದು ತನ್ನ ಸಂಜ್ಞೆಗಳ ಮೂಲಕವೇ ತನ್ನ ಸಂವಹನ ಕ್ರಿಯೆ ಕೈಗೊಳ್ಳುತ್ತದೆ.
ದೇಶದಲ್ಲಿ ಇತ್ತೀಚೆಗೆ ವೈಜ್ಞಾನಿಕ ಪ್ರಗತಿ ಅಧಿಕವಾಗುತ್ತಿದ್ದಂತೆಯೇ ಈ ಜೇನ್ನೊಣಗಳಿಗೂ ಇದು ಪ್ರಭಾವ ಬೀರಿದೆ.
ದೇಶದಲ್ಲಿ 20 ಕೋಟಿ ದೂರವಾಣಿ ಸಂಪರ್ಕಗಳಿದ್ದು ಈ ಪೈಕಿ ಶೇ.80ರಷ್ಟು ಪಾಲು ಮೊಬೈಲ್ ದೂರವಾಣಿಗಳು ಬಳಕೆಯಲ್ಲಿವೆ. ಇದೇ ಜೇನು ನೊಣಗಳಿಗೆ ಒಂದು ರೀತಿಯಲ್ಲಿ ತೊಂದರೆಯನ್ನೊಡ್ಡುತ್ತಿದೆ ಎಂಬುದು ಕೌತುಕಕಾರಿ ಅಂಶ.
ಮೊಬೈಲ್ ಸಂಪರ್ಕ ಸಹ ತರಂಗಗಳ ಆಧಾರದಲ್ಲಿ ಸಾಗುತ್ತಿದ್ದು ಇದು ಇಂದು ಈ ಜೇನು ನೊಣಗಳ ಹಾದಿಗಡ್ಡವಾಗಿದೆ ಎಂಬುದು ಒಂದು ಆಘಾತಕಾರಿ ಅಂಶ. ಇದರಿಂದಾಗಿ ಜೇನು ನೊಣಗಳ ಸಂತತಿಯ ಮೇಲೂ ಪರಿಣಾಮ ಬೀರಲಾರಂಭಿಸಿದ್ದು, ಜೇನು ಸಂತತಿಯಲ್ಲಿ ಸಾಕಷ್ಟು ಕುಸಿತ ಕಂಡುಬರಲಾರಂಭಿಸಿದೆ.
ಬಿಲ್ಡಿಂಗ್ಗಳಲ್ಲಿ ಮಾಯ!

ದೊಡ್ಡ ದೊಡ್ಡ ನಗರಗಳಲ್ಲಿರುವ ಬೃಹತ್ ಕಟ್ಟಡಗಳಲ್ಲಿ, ಕಟ್ಟಡಗಳ ಸೂರಿನ ಕೆಳಗಡೆ, ಗೋಡೆಗಳಲ್ಲಿ ಬೃಹತ್ ಗಾತ್ರದ ಜೇನುಗೂಡುಗಳು ಕೆಲ ವರ್ಷಗಳ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದವು. ಆದರೆ ಅವುಗಳ ಸಂಖ್ಯೆ ಇಂದು ಗಣನೀಯವಾಗಿ ಇಳಿಕೆಯಾಗಿವೆ. ಬೃಹತ್ ನಗರಗಳಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ತರಂಗಗಳು ಇದಕ್ಕೆ ಪ್ರಮುಖ ಕಾರಣವಾಗಿವೆ.

ಸಂತತಿ ಬೆಳೆಯುತ್ತಿಲ್ಲ


ಈ ವರ್ಷ ಜಿಲ್ಲೆಯಲ್ಲಿ ಜೇನಿಗೆ ರೋಗ ತಗಲತೊಡಗಿದೆ. ಜೇನುಗೂಡುಗಳಲ್ಲಿದ್ದ ಮೊಟ್ಟೆಗೆ ಈ ಸೋಂಕು ತಗುಲಿ ಹೊಸ ಸಂತತಿ ಹುಟ್ಟುತ್ತಿಲ್ಲ. ಇದರಿಂದಾಗಿ ಜೇನಿನ ಸಂತತಿ ಬೆಳೆಯುತ್ತಿಲ್ಲ. ಒಂದು ರೀತಿಯ ವೈರಸ್ ನಿಂದಾಗಿ ಈ ರೋಗ ಕಾಣಿಸಿಕೊಂಡಿದ್ದು ಅದೊಂದು ಅಂಟು ರೋಗ ಮಾದರಿಯಲ್ಲಿ ಹಬ್ಬುತ್ತಿದೆ ಎನ್ನುತ್ತಾರೆ ಜೇನು ಕೃಷಿ ತರಬೇತುದಾರರಾದ ಶ್ಯಾಮ ಭಟ್.

ಮುಂದೆ ಓದಿ
5:29 PM

ಶಾಪ

Posted by ekanasu

-ಕಥೆ-

3 ದಿನಗಳಿಂದಲೂ ಒಂದೇ ತೆರನಾಗಿ ಬೀಳುವ ಮಳೆಯನ್ನೂ ಲೆಕ್ಕಿಸದೆ ಜಾನಕಿ ಕೊರಂಬು ತಲೆಗೇರಿಸಿ, ಮೊಣಗಂಟಿನವರೆಗೂ ಸೀರೆಯನ್ನು ಮೇಲಕ್ಕೆತ್ತಿ, ಲೋಟ ಹಿಡಿದ ಕೈಗಳನ್ನು ಚಳಿಗೆ ಎದೆಯ ಒಳಗಿರಿಸಿಕೊಂಡು ವೆಂಕಟ ಭಟ್ಟರ ಜಾರುವ ಅಂಗಳಕ್ಕೆ ಕಾಲಿಟ್ಟಾಗ ಮುಸ್ಸಂಜೆಯ ಹೊತ್ತು ಹಲಸಿನ ಹಪ್ಪಳ ಮೆಲ್ಲುತ್ತಿದ್ದ ಭಟ್ಟರಿಗೆ ಆಶ್ಚರ್ಯವಾಯಿತು. ತಮ್ಮ ಪಕ್ಕದಲ್ಲಿಯೆ ಕುಳಿತು ಕರಿದ ತೆಳುವಾದ ಹಪ್ಪಳಗಳನ್ನು ಆರಿಸುತ್ತಿದ್ದ ಮಗನಿಗೆ ಹೇಳಿದರು.
"ಮಾಣಿ, ಹೋಗು ಆ ಕೆಳಗಿನ ಮನೆಯ ಹೆಂಗಸು ಬಂದಿದೆ. ಚಳಿಗೆ ನಡುಗುತ್ತಾ ನಿಂತಿದೆ. ಅದಕ್ಕೆ ಕೇಳಿ ತೆಗೆದುಕೊಳ್ಳುವುದಕ್ಕೆ ಹೊತ್ತು ಗೊತ್ತು ಇಲ್ಲ. ಬಾಗಿಲು ತೆಗಿ" ಭಟ್ಟರ ಮಗ ರಮಣ ಆರಿಸಿದ ಹಪ್ಪಳವನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಮಳೆಗೆ ಗಚ್ಚನೆ ಮುಚ್ಚಿದ ಬಾಗಿಲಿನ ಚಿಲಕ ತೆಗೆದು ಎಳೆದ.


ಚಳಿಗೆ ನಡುಗುತ್ತಿದ್ದ ಹೆಂಗಸು, " ಮಾಣಿ, ಅಮ್ಮ ಮನೆಯಲ್ಲಿ ಇಲ್ವಾ?" ಅಂದಾಗ ರಮಣ, "ಇದ್ದಾರೆ" ಅನ್ನುತ್ತಾ ಇಡೀ ಹಪ್ಪಳಕ್ಕೆ ಬಾಯಿ ಹಚ್ಚಿದ.
ಒಳಗೆ ಬಂದು ಗೋಡೆಗೆ ಒರೆಸಿಕೊಂಡಂತೆ ಕುಕ್ಕರುಗಾಲಿನಲ್ಲಿ ಕುಳಿತ ಹೆಂಗಸು, ಹಪ್ಪಳ ಕರಿದ ತೆಂಗಿನೆಣ್ಣೆಯ ಪರಿಮಳ ಮೂಗಿಗೆ ನಾಟುತ್ತಲೇ, ಅಡುಗೆ ಮನೆಯತ್ತ ಮುಖ ಹೊರಳಿಸಿತು.
"ಏನು ಜಾನಕಮ್ಮ, ಈ ಹೊತ್ತಿನಲ್ಲಿ? ಮಳೆಗೆ ತಲೆ ಹೊರಗೆ ಹಾಕುವುದು ಬೇಡ ಅನ್ನುವಷ್ಟು ಬೇಜಾರು. ಮೈ, ಕೈಯೆಲ್ಲಾ ಒದ್ದೆ ಮಾಡಿಕೊಂಡು ಬಂದಿದ್ದೀರಲ್ಲಾ, ಏನು ಕಥೆ?" ಹಪ್ಪಳದ ತಟ್ಟೆಯನ್ನು ಮಗನ ಕಡೆಗೆ ನೂಕಿ ಕುಳಿತಿದ್ದ ಹೆಂಗಸನ್ನು ಕೇಳಿದರು ಭಟ್ಟರು.
"ಭಟ್ರೆ, ಒಲೆ ಉರಿಸೋದೆ ಕಷ್ಟ ಆಗಿದೆ. ಒಟ್ಟು ಮಾಡಿಟ್ಟ ಕಟ್ಟಿಗೆಗೆ ಪಸೆ ಬಂದಿದೆ. ಗಂಜಿಯೇನೋ ಬೇಯಿಸಿ ಬಂದೆ. ಪದಾರ್ಥ ಮಾಡೋದಿಕ್ಕೆ ಸಾಧ್ಯವಿಲ್ಲ. ಸ್ವಲ್ಪ ಮಜ್ಜಿಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು"
ಭಟ್ಟರಿಗೂ ಹೆಂಗಸಿನ ಮೇಲೆ ಕನಿಕರ ಬಂತು. ತಮ್ಮ ಮಡದಿ ವನಜಾಕ್ಷಿಯನ್ನು ಕರೆದರು.
"ಇಕಳ್ಳೇ... ಅವರಿಗೆ ಮಜ್ಜಿಗೆ ಬೇಕಂತೆ, ಕೊಡು"
ಅಡುಗೆ ಮನೆಯಲ್ಲಿ ಎಣ್ಣೆಯ ಬಾಣಲೆಯನ್ನು ಒಲೆಯಿಂದ ಕೆಳಗಿರಿಸಿ, ತೂಗು ಬಲೆಯಿಂದ ಮಜ್ಜಿಗೆಯ ಪಾತ್ರೆ ತೆಗೆದು, ಲೋಟಕ್ಕೆ ಸುರುವಿ, ಒಂದು ಹಸಿ ಮೆಣಸಿನ ಕಾಯಿಯನ್ನು ಅದಕ್ಕೆ ಹಾಕಿ ಹೊರಗೆ ಬಂದ ವನಜಾಕ್ಷಿ, ಜೊತೆಗೆ ಒಂದು ಕರಿದ ಹಪ್ಪಳವನ್ನು ಜಾನಕಿಯ ಕೈಯಲ್ಲಿಟ್ಟು ಅವರ ಲೋಟಕ್ಕೆ ಮಜ್ಜಿಗೆಯನ್ನು ಸುರಿದರು. ಹಪ್ಪಳವನ್ನು ಮುರಿದ ಹೆಂಗಸು, "ಅಕ್ಕೋರೆ, ಏನಾದರೂ ವಿಶೇಷ ಉಂಟಾ?" ಅಂದಾಗ ವನಜಾಕ್ಷಿಗೆ ನಗು ಬಂತು.
"ಮಳೆಗಾಲದಲ್ಲಿ ಏನು ವಿಶೇಷ ಜಾನಕಮ್ಮ?"
"ಅಲ್ಲ, ನಾನು ಅದು ಕೇಳಿದಲ್ಲ"
"ಮತ್ತೆಂತ ವಿಶೇಷ? ಮದುವೆಯಾಗಿ ಹತ್ತು ವರ್ಷವಾಯಿತು. ಮಗನಿಗೆ ಎಂಟು ವರ್ಷವಾಯಿತು. ಇನ್ನೆಂತಹ ವಿಶೇಷ?" ನಕ್ಕು ನುಡಿದ ವನಜಾಕ್ಷಿ0ು ಮಾತಿನಲ್ಲಿ ನೋವಿನ ಎಳೆಯಿರುವುದನ್ನು ಗುರುತಿಸಿದ ಹೆಂಗಸು, "ಏನೇ ಹೇಳಿ... ನಾಲ್ಕೈದು ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದ ಮನೆ ಇದು. ನಿಮಗೂ ಒಂದು ಹೆಣ್ಣು ಸಂತಾನ ಇದ್ದಿದ್ರೆ ಚೆನ್ನಾಗಿರ್ತಿತ್ತು" ಅಂದಾಗ ಅವರ ಮುಖ ಸಂಪೂರ್ಣ ಬಾಡಿದಂತಾಯಿತು.
ವೆಂಕಟ ಭಟ್ಟರಿಗೆ ಹೆಂಗಸಿನ ಮಾತು ಕೇಳಿ, " ಈ ಹೆಂಗಸಿನ ಬುದ್ಧಿಯೆ ಇಷ್ಟಾ?" ಅಂದುಕೊಂಡರು.
ವನಜಾಕ್ಷಿಯ ನೋವಿಗೆ ಒಂದಷ್ಟು ತುಪ್ಪ ಸುರಿದು, ಕೊರಂಬು ಹಿಡಿದು ನಡು ಬಾಗಿಸುತ್ತಾ ಅಂಗಳಕ್ಕೆ ಕಾಲಿಟ್ಟಿತು ಹೆಂಗಸು. ವನಜಾಕ್ಷಿ ಬಾಗಿಲು ಸರಿಸಿ, ಚಿಲಕ ಸೇರಿಸಿ ಹಿಂತಿರುಗಿದರು.
"ಅಲ್ವೇ, ಆ ಹೆಂಗಸಿಗೆಂತ ಅಧಿಕ ಪ್ರಸಂಗ? ನಮ್ಮ ಮನೆಯ ವಿಚಾರಕ್ಕೆ ಮೂಗು ತೂರಿಸೋದಕ್ಕೆ ಅದಕ್ಕೇನಿದೆ ಹಕ್ಕು?"
ವೆಂಕಟ ಭಟ್ಟರ ಮಾತು ವನಜಾಕ್ಷಿಗೆ ಸರಿ ಕಾಣಲಿಲ್ಲ.
"ಅವರು ಹೇಳಿದ್ರಲ್ಲಿ ತಪ್ಪೇನಿದೆ? ಈ ಮನೆಯಲ್ಲಿ ನಿಮ್ಮ ಅಕ್ಕಂದಿರು, ತಂಗೀಂತ ನಾಲ್ಕೈದು ಜನ ಇರ್ಲಿಲ್ವಾ? ನಮಗೂ ಒಂದು ಹೆಣ್ಣು ಮಗು ಆಗ್ಲೀಂತ ಆಸೆಯಿಂದ ಹೇಳಿತು. ಅದಕ್ಕೇನಂತೆ?"
"ನಿನಗೆ ಗೊತ್ತೇ ಇದೆ ಇವಳೆ... ನಮ್ಮ ಮನೆ ಹೆಣ್ಣು ಮಕ್ಕಳು ಯಾರು ಸುಖದಲ್ಲಿದ್ದಾರೆ ಹೇಳು? ಎಲ್ಲರೂ ಹೊಕ್ಕ ಮನೆಯಲ್ಲಿ ಕಷ್ಟ ಕಷ್ಟ ಕಷ್ಟವೆ. ಒಂದು ಸೀರೆ ಬೇಕಿದ್ರೂ ಅವು ನಮ್ಮತ್ರ ಬಂದು ಸಂಕೋಚದಿಂದ ಕೇಳ್ತಾವೆ"
"ಅದಕ್ಕೆ ಏನಂತೆ? ನಾವು ಈಗ ನೆಮ್ಮದಿಯಿಂದ ಇಲ್ವಾ? ನಮಗೊಂದು ಹೆಣ್ಣು ಮಗುವಾದ್ರೆ ಅದನ್ನು ಸಾಕುವಷ್ಟು ನಮ್ಮಲ್ಲಿ ಇಲ್ವಾ?"
"ನಮತ್ರ ಈಗ ಬೇಕಾದಷ್ಟು ಇದೆ. ಇಲ್ಲಾಂತ ನಾನು ಹೇಳೋದಿಲ್ಲ. ಆದರೆ ನಮ್ಮ ಸಂತಾನಕ್ಕೆ ಶಾಪ ಇದೇಂತ ನನ್ನ ಅನಿಸಿಕೆ"
"ಏನು ಶಾಪರೀ? ಇದ್ದ ಬದ್ದ ಉಳುಮೆಯ ಗದ್ದೆಯನ್ನೆಲ್ಲಾ ನಿಮ್ಮಪ್ಪ ಒಕ್ಕಲಿಗನಿಗೆ ಮಾಡಿದ್ರು. ಅವನು ಖುಷಿಯಲ್ಲಿಯೆ ಇದ್ದಾನೆ. ಒಂದು ಚೂರು ಯಾರ ಆಸ್ತಿಗೂ, ವಸ್ತುವಿಗೂ ಅತ್ತೆ, ಮಾವ ಆಸೆ ಪಟ್ಟವರಲ್ಲ. ಇದ್ದಷ್ಟು ಕೈಯೆತ್ತಿ ಕೊಟ್ಟಿದ್ದಾರೆ. ಹಾಗಿರುವಾಗ ನಮಗೆ ಶಾಪ ಯಾರ್ದೂಂತ?"
"ನೋಡು, ನಿನಗೆ ಅರ್ಥವಾಗ್ತದ ಇಲ್ವಾಂತ ನನಗೆ ಗೊತ್ತಿಲ್ಲ. ನನ್ನ ಅಣ್ಣಂದಿರಿಗಾಗಲಿ, ತಮ್ಮನಿಗಾಗಲಿ ಹೆಣ್ಣು ಸಂತಾನ ಉಂಟಾ? ನನ್ನ ಅಪ್ಪ, ಅಮ್ಮನಿಗೆ ತಮ್ಮ ಹೆಣ್ಣು ಮಕ್ಕಳ ಕಣ್ಣೀರು ನೋಡಿ, ಮುಂದಿನ ಸಂತಾನಕ್ಕೆ ಹೆಣ್ಣು ಆಗೋದೇ ಬೇಡಾಂತ ಅಂದುಕೊಂಡಿರಬಹುದಲ್ವಾ?"
"ಹಾಗೆ ನೋಡಿದ್ರೆ ನಿಮ್ಮ ಅಕ್ಕಂದಿರಿಗೆ, ತಂಗಿಗೆ ಹೆಣ್ಣು ಸಂತಾನವಿಲ್ವಾ? ನೀವ್ಯಾಕೆ ಹಿರಿಯರ ಶಾಪವಿದೇಂತ ಹೇಳ್ತೀರಾ?"
"ಅವರು ಕೊಟ್ಟು ಹೋದವರು. ಗಂಡು ಮಕ್ಕಳಿಗೆ ಮಾತ್ರ ಹೆಣ್ಣು ಸಂತಾನ ಬೇಡಾಂತ ಅವರ ಮನಸ್ಸಿನಲ್ಲಿದ್ದಿರಬಹುದು"
ಗಂಡನ ಮಾತು ವನಜಾಕ್ಷಿಗೆ ಹಿಡಿಸಲಿಲ್ಲ. ತಮ್ಮ ಸ್ವಂತ ಮಕ್ಕಳಿಗೆ ಯಾರಾದರೂ ಶಾಪ ಕೊಡುತ್ತಾರೆಯೆ? ಅನ್ನುವುದು ಅವಳಿಗೆ ರುಚಿಸದ ಮಾತಾಗಿತ್ತು.
ವೆಂಕಟ ಭಟ್ಟರಿಗೆ ಮಾತ್ರ ತಲೆಯಲ್ಲಿ ಅದು ಅಡರಿ ಹೋಗಿತ್ತು. ಹೆಂಡತಿಯ ಹಾಗೆ ಆತನಿಗೂ ಹೆಣ್ಣು ಮಗು ಬೇಕೆನ್ನುವ ಆಸೆಯಿದ್ದರೂ ಮನಸ್ಸಿನಲ್ಲಿ ಅದೇ ವಿಷಯ ಗಟ್ಟಿಯಾಗಿ ಕುಳಿತಿತ್ತು. ಇಲ್ಲವಾದರೆ ಮಡದಿ, ರಮಣ ಹುಟ್ಟಿದ ನಂತರ 3 ಬಾರಿ ಗರ್ಭಿಣಿಯಾದರೂ, ಎರಡು ಸಲ ಗಂಡು ಮಗು ಬೇಡವೆಂದು ಗರ್ಭ ತೆಗೆಸಿದ್ದಾಯಿತು. ಮೂರನೆ ಬಾರಿ ಗರ್ಭ ಹೋದಾಗ ಅದೆಷ್ಟು ಬೇಸರವಾಗಿತ್ತು. ನಂತರ ಗರ್ಭ ನಿಂತೇ ಇಲ್ಲವೇಕೆ?
"ನೀನು ಏನೆ ಹೇಳು ಆ ಹೆಂಗಸು ಸರಿಯಿಲ್ಲ. ನಮ್ಮ ಮನೆಯ ವಿಷಯಗಳನ್ನೆಲ್ಲಾ ಇನ್ನೊಂದು ಮನೆಗೆ ಹೇಳಿ ಹಿಂದಿನಿಂದ ನಗಾಡುತ್ತೆ ಅಷ್ಟೆ. ಇಲ್ಲಾಂದ್ರೆ ಎದುರು ಮನೆಯ ಶಾಂತಕ್ಕ ನಮ್ಮ ಜೊತೆಗೆ ಜಗಳ ಕಾಯೋಕಿತ್ತಾ? ಮೂರು ಹೊತ್ತು ಗದ್ದೆ ಕೆಲಸ ಮಾಡಿಕೊಂಡು ನಾವು ಕೊಡ್ತಿದ್ದ ಊಟ ತಿಂದುಕೊಂಡು ಒಳ್ಳೆಯ ರೀತಿಯಲ್ಲಿ ಇರಲಿಲ್ವಾ?"
"ಅದಕ್ಕೆಂತ ಮಾಡೋದು? ಅವರ ಮಗ ಬೊಂಬಾಯಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ತಾಯಿಯನ್ನು ಕೆಲಸಕ್ಕೆ ಹೋಗುವುದು ಬೇಡ ಅಂದಿದ್ದಾನೆ. ಅವರು ಕೆಲಸ ನಿಲ್ಲಿಸಿದ್ದಾರೆ. ಆ ಹೆಂಗಸು ಬರ್ಲಿಲ್ಲಾಂತ ನಮ್ಮ ಮನೆ ಕೆಲಸ ನಿಂತಿದಾ? ನಾವು ಮಾಡಿಕೊಂಡು ಹೋಗ್ತಾ ಇಲ್ವಾ?"
"ನೀನು ಗದ್ದೆಗೆ ಇಳಿಯುವ ಹಾಗಾಗಿದ್ದು ಅದೇ ಹೆಂಗಸಿನಿಂದ ಅಲ್ವಾ? ಈ ಜಾನಕಮ್ಮ ಆ ಹೆಂಗಸಿಗೆ ಏನೋ ಕಿವಿಯೂದಿದೆ. ಅದಕ್ಕೆ ಆ ಹೆಂಗಸು ಇದ್ದಕ್ಕಿದ್ದಂತೆ ಜಗಳ ಮಾಡ್ಕೊಂಡು ಕೆಲಸ ಬಿಡ್ತು ನೋಡು"
"ನಾನು ನಿಮಗೆ ಹೇಳ್ತಾ ಇಲ್ವಾ... ಈ ಜಾಗ ಮಾರಿ ಎಲ್ಲಾದ್ರೂ ಪಟ್ಟಣದ ಕಡೆಗೆ ಹೋಗೋಣಾಂತ. ನೀವು ಕೇಳ್ತಾ ಇಲ್ಲ. ನಮ್ಮ ಮಣ್ಣಿನ ಋಣ ಇಲ್ಲೆ ಇದೆ. ಇದ್ದದನ್ನು ನಾವೆ ಮಾಡ್ಕೊಂಡು ಹೋಗುವುದು ಚೆಂದ ಅಲ್ವಾ?"
"ಈ ಜಾಗನ ಬಿಟ್ಟು ಹೋಗುವುದು ಕಷ್ಟಾಂತ ನಿನಗೆ ಗೊತ್ತಿಲ್ವಾ? ನನ್ನ ಅಪ್ಪಯ್ಯ ಎಷ್ಟು ಕಷ್ಟ ಪಟ್ಟು ಈ ಜಾಗಾನ ತೆಗೆದುಕೊಂಡಿದ್ದಾರೇಂತ ನಿನಗೆ ಗೊತ್ತಿಲ್ವಾ? ಅಂತದ್ರಲ್ಲಿ ಮಾರುವ ಮಾತುಂಟಾ ಅಥವಾ ನಾವು ಅದನ್ನು ಯೋಚಿಸುವುದೂ ತಪ್ಪಲ್ವಾ?"
ಮಾತು ಮುಂದುವರಿಸಲು ಇಚ್ಛಿಸದೆ ವನಜಾಕ್ಷಿ ತಟ್ಟೆ, ಲೋಟಗಳನ್ನು ಎತ್ತಿಕೊಂಡು ಅಡುಗೆ ಕೋಣೆಯೊಳಗೆ ನಡೆದರು.

***
ಎಪ್ಪತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿಯಾದಾಗ ಶ್ರೀನಿವಾಸರಿಗೆ ತಾವು ಮಧುರೈ0ುಲ್ಲಿ ನಡೆಸುತ್ತಿದ್ದ ಹೊಟೇಲು ಹೆಚ್ಚು ಸಮಯ ಮುಂದುವರಿಯಲಾರದೆನಿಸಿತು. ತಮ್ಮನ್ನೇ ನಂಬಿರುವ ತಮ್ಮಂದಿರಾದ ಗಿರೀಶ ಮತ್ತು ಜಗನ್ನಾಥರನ್ನು ಕರೆದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು.

"ಇನ್ನು ಈ ಪುಢಾರಿಗಳ ಉಪಟಳದಿಂದ ಹೊಟೇಲು ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟ. ಅವರುಗಳು ದಿನಕ್ಕೊಂದು ತಗಾದೆ ತೆಗೆದು, ಹಫ್ತಾ ವಸೂಲಿಗೂ ಮುಂದಾಗುತ್ತಿದ್ದಾರೆ. ನಾವು ಮರ್ಯಾದೆಯಿಂದ ಬಾಳುವುದು ಕಷ್ಟವೇ. ಇನ್ನು ಮುಂದೆ ಏನು ಮಾಡುವುದು? ನೀವೂ ಯೋಚಿಸಿ... ಒಂದು ನಿರ್ಧಾರಕ್ಕೆ ಬರೋಣ"
ಶ್ರೀನಿವಾಸರ ಹಾಗೇ ಗಿರೀಶ ಹಾಗೂ ಜಗನ್ನಾಥರಿಗೂ ಎಂಟು ಹತ್ತು ಮಕ್ಕಳು. ಇದ್ದಕ್ಕಿದಂತೆ ಹೊಟೇಲು ಮುಚ್ಚಿ, ಸಂಸಾರವನ್ನು ನಡು ಬೀದಿಯಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಾದರೆ? ಎಂಬ ಆತಂಕ ತಮ್ಮಂದಿರಿಬ್ಬರಲ್ಲು ಮೂಡಿತು. ಅವರೊಂದು ನಿರ್ಧಾರಕ್ಕೆ ಬಂದು, "ಅಣ್ಣಾ, ಕಷ್ಟನೋ ಸುಖನೋ ನಮ್ಮ ಜೀವನ ಇಲ್ಲೇ ಸಾಗಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ, ಶ್ರೀನಿವಾಸರಿಗೆ ನಿಜವಾಗಿಯೂ ಇರುಸು ಮುರಿಸಿನ ಪರಿಸ್ಥಿತಿಯಾಯಿತು. ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತು ಕೊಂಡು ಹೇಗೋ ಹೊಟೇಲನ್ನು ನಡೆಸಿಕೊಂಡು ಹೋಗಿದ್ದರು. ಅವರಿಗಂತೂ ಮುಂದುವರಿಸುವ ಯೋಚನೆಯಿಲ್ಲ. ತಮ್ಮಂದಿರಿಬ್ಬರಿಗೆ ಜವಾಬ್ದಾರಿಯನ್ನು ಬಿಟ್ಟು ಹೊಗುವ ನಿರ್ಧಾರ ಕೈಗೊಂಡರು.
"ನಾನು ನಿರ್ಧಾರ ತೆಗೆದುಕೊಂಡಾಯಿತು. ಇನ್ನು ಕಷ್ಟನೋ ಸುಖನೋ ನಾನು ಊರಿಗೆ ಹೋಗಿ ಸೆಟಲ್ ಆಗಿ ಬಿಡ್ತೀನಿ. ಹೊಟೇಲನ್ನು ನೀವು ನಿಭಾಯಿಸಿಕೊಂಡು ಹೋಗ್ತೀರೀಂತ ನನಗೆ ಧೈರ್ಯ ಇದೆ"
ಶ್ರೀನಿವಾಸನ ಮಾತುಗಳನ್ನು ಕೇಳಿ ತಮ್ಮಂದಿರೇನು ಹೌಹಾರಲಿಲ್ಲ. ಸಂತೋಷದಿಂದ ಒಪ್ಪಿಕೊಂಡರು.
"ನನ್ನ ಪಾಲಿನ ಹಣವನ್ನು ನಾನು ಹಿಂತೆಗೆ0ುಬಹುದಲ್ಲಾ?" ಶ್ರೀನಿವಾಸರು ಸಂಕೋಚದಿಂದ ಕೇಳುವಾಗ ತಮ್ಮಂದಿರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
"ಎಲ್ಲ ಹಣ ನೀನು ತೆಗೆದುಕೊಂಡು ಹೋದರೆ ನಮಗೆ ನಿಭಾಯಿಸಲು ಕಷ್ಟವಾಗುತ್ತದೆ. ಹೇಗೂ ನೀನು ಇಲ್ಲಿಗೆ ನಮ್ಮನ್ನು ನೋಡೋದಿಕ್ಕೆ ಬರುತ್ತಿಯಲ್ಲಾ. ಆಗ ಸ್ವಲ್ಪ ಸ್ವಲ್ಪವೇ ಹಣ ಹೊಂದಿಸಿ ಕೊಡುತ್ತೇವೆ" ಎಂದು ಹೇಳುವಾಗ ಒಪ್ಪಿಕೊಳ್ಳವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.
ಅಂತೂ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಜೊತೆಗೆ ಕೈ ಹಿಡಿದವಳನ್ನು ಕರೆದುಕೊಂಡು ಮೂರು ದಿನ ರೈಲಿನ ಪ್ರಯಾಣ ಜೊತೆಗೆ ಒಂದು ದಿನ ಬಸ್ಸಿನಲ್ಲಿ ಪ್ರಯಾಣ ಮುಗಿಸಿ, ಊರಿಗೆ ಬರುವಾಗ ಅಣ್ಣ ಅನಂತರಾಮ ಬಹಳ ಸಂತೋಷದಿಂದಲೇ ಸ್ವಾಗತಿಸಿದ್ದ. ಅನಂತರಾಮನಿಗೂ ಹತ್ತು ಜನ ಮಕ್ಕಳು. ಜೊತೆಗೆ ಶ್ರೀನಿವಾಸನ ಎಂಟು ಮಕ್ಕಳು ಮನೆಯಲ್ಲಿ ನಿತ್ಯ ಗಲಾಟೆಯೆ. ಶ್ರೀನಿವಾಸನ ಮಕ್ಕಳಿಗೆ ಕನ್ನಡ, ತುಳು ಭಾಷೆ ಅಷ್ಟಾಗಿ ಬರುತ್ತಿರಲಿಲ್ಲವಾದುದರಿಂದ ಅವುಗಳು ತಮಿಳಿನಲ್ಲಿಯೆ ಏನೇನೋ ಅಂದುಕೊಂಡು ಸುಮ್ಮನಾಗುತ್ತಿದ್ದವು.

ಒಂದು ದಿನ ರಾತ್ರಿ ಒಂದು ಸಣ್ಣ ವಿಷಯದ ಕಿಡಿ ದೊಡ್ಡ ಜ್ವಾಲೆಯಾಗಿ ಹೋಯಿತು. ಶ್ರೀನಿವಾಸನ ದೊಡ್ಡ ಮಗ ತನ್ನ ದೊಡ್ಡಪ್ಪ ಅನಂತರಾಮನ ಎದುರಿಗೆ ಕುರ್ಚಿಯ ಮೇಲೆ, `ಕಾಲಿನ ಮೇಲೆ ಕಾಲು ಹಾಕಿ ಕುಳಿತ' ಅನ್ನುವುದು ಅನಂತರಾಮನಿಗೆ ಆ ಹುಡುಗ `ಮರ್ಯಾದೆ' ಕೊಡಲಿಲ್ಲ ಅನ್ನುವ ಮಟ್ಟಿಗೆ ಬಂದು ನಿಂತಿತು. ರಾತ್ರಿ ಅಂಗಡಿ ಮುಗಿಸಿ ಬಂದ ಶ್ರೀನಿವಾಸನನ್ನು ಊಟ ಮಾಡಲು ಬಿಡದೆ ಜಗಳ ಕಾಯ್ದರು ಅನಂತರಾಮ.
"ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯಾವುದನ್ನೂ ಹೇಳಿಕೊಡಲಿಲ್ಲ. ದೊಡ್ಡವರು ಅನ್ನುವ ಗೌರವವೇ ನಿನ್ನ ಮಕ್ಕಳಿಗೆ ಇಲ್ಲ"
ಶ್ರೀನಿವಾಸನಿಗೆ ಹಸಿದ ಹೊಟ್ಟೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಣ್ಣ ಹೇಳಿದ ಮಾತುಗಳು, ತನ್ನ ಹಿರಿಯ ಮಗನ ಮೇಲೆ ಕೋಪ ಉಕ್ಕಿ ಬರುವಂತೆ ಮಾಡಿತು. ಮಗನನ್ನು ಕರೆದು ಕೆನ್ನೆಗೆ ನಾಲಕ್ಕು ಬಾರಿಸಿ, ಅಗ್ರಜನ ಕಾಲು ಹಿಡಿಸಿದ.
ಶ್ರೀನಿವಾಸನ ಹೆಂಡತಿ ನಳಿನಾಕ್ಷಿಗೆ ಈ ರೀತಿ ತನ್ನ ಹಿರಿಯ ಮಗ ಸುಮ್ಮನೆ ಪೆಟ್ಟು ತಿಂದದ್ದು ಅವಳ ಕಣ್ಣುಗಳಲ್ಲಿ ನೀರು ತರಿಸಿತು.
ರಾತ್ರಿ ಗಂಡ ಹತ್ತಿರ ಬಂದಾಗ, "ರೀ, ಎಷ್ಟು ದಿನಾಂತ ಈ ಮನೆಯಲ್ಲಿ ಜೀವ ತೇಯೋದು? ನಮ್ಮ ಮಕ್ಕಳಿಗಂತೂ ಉಸಿರು ಕಟ್ಟೋ ಹಾಗಾಗಿದೆ. ಕೂತರೆ ತಪ್ಪು, ನಿಂತರೆ ತಪ್ಪು. ನಿಮ್ಮ ಅಣ್ಣನ ಮಕ್ಕಳು ಉಂಡಾಡಿ ಗುಂಡರ ತರಹ ಅಲೆದಾಡಿಕೊಂಡು ಬರ್ತಾರೆ. ನಮ್ಮ ಮಕ್ಕಳು ಅಡುಗೆ ಕೆಲಸದಿಂದ ಹಿಡಿದು ಗದ್ದೆ ಕೆಲಸ ಮಾಡುವವರೆಗೂ ಸಹಾಯ ಮಾಡ್ಬೇಕು. ನಮ್ಮ ಮಕ್ಕಳು ಬೆಳೆದಿರುವುದೆಲ್ಲಾ ಪಟ್ಟಣದಲ್ಲಿ. ಈ ಹಳ್ಳಿಯ ರೀತಿ, ರೀವಾಜು ಅವುಗಳಿಗೆಲ್ಲಾ ಹೇಗೆ ಗೊತ್ತಾಬೇಕು, ಹೇಳಿ? ಇವತ್ತು ಇಷ್ಟು ಸಣ್ಣ ವಿಷಯಕ್ಕೆ ಹೇಗೆ ಹಾರಾಡಿದ್ರು ನೋಡಿದ್ರಾ?" ಅಂದಾಗ
ಹೆಂಡತಿಯ ಮಾತಿಗೆ ತೆಪ್ಪಗೆ ಮುಸುಕೆಳೆದು ಮಲಗಿದ ಶ್ರೀನಿವಾಸನಿಗೆ ಮುಸುಕಿನ ಒಳಗಿಂದಲೇ ಚಿಂತೆ ಕಾಡಿತು. ಇದೇ ರೀತಿ ಮುಂದುವರಿದರೆ, ಒಂದಲ್ಲ ಒಂದು ದಿನ ಅಗ್ರಜ `ಮನೆ ಬಿಟ್ಟು ಹೋಗು' ಅಂದರೆ ಇಷ್ಟು ದೊಡ್ಡ ಸಂಸಾರವನ್ನು ಹಿಡಿದುಕೊಂಡು ಹೋಗುವುದು ಎಲ್ಲಿಗೆ?
ಕೊನೆಗೆ ಹೊರಳಾಡಿ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದ. ಹೇಗೂ ತನ್ನ ಪಾಲಿನ ಹಣ ತಮ್ಮಂದಿರಿಂದ ಬರುವುದಿದೆ. ಮಧುರೈಗೆ ಹೋಗಿ ಆ ಹಣ ಹಿಡಿದುಕೊಂಡು ಬಂದು ಊರಿನಲ್ಲಿಯೆ ಸ್ವಲ್ಪ ಆಸ್ತಿಯನ್ನು ತೆಗೆದುಕೊಂಡು ಸಣ್ಣ ಮನೆ ಕಟ್ಟಿಕೊಂಡು ಸಂಸಾರ ಹೂಡುವುದು. ನಳಿನಾಕ್ಷಿಗೆ ತನ್ನ ನಿರ್ಧಾರವನ್ನು ತಿಳಿಸಿದ. ಆಕೆಗೆ ಸುತಾರಾಂ ಇಷ್ಟವಿಲ್ಲ.
"ನಮ್ಮ ಮಕ್ಕಳು ಸಿಟಿಯಲ್ಲಿ ಬೆಳೆದವರು. ಪಟ್ಟಣದಲ್ಲಿಯೆ ಒಂದು ಸಣ್ಣ ಮನೆಯನ್ನು ನೋಡಿ. ನೀವೂ ಅಲ್ಲಿ ಸಣ್ಣ ಮಟ್ಟದಲ್ಲಿ ಹೊಟೇಲೋ, ಅಂಗಡಿಯೋ ಇಟ್ಟುಕೊಂಡರೆ ಮನೆ ಖರ್ಚು ನಡೆಯುತ್ತದಲ್ಲಾ?"
"ಪಟ್ಟಣದ ಬದುಕು ಅಷ್ಟು ಸುಲಭ ಅಲ್ಲ. ಪಟ್ಟಣ ಬೆಳೆದ ಹಾಗೇ ನಮ್ಮ ಆದಾಯನೂ ಬೆಳೆಯುವ ಹಾಗಿದ್ದರೆ ಸರಿ, ಇಲ್ಲದಿದ್ದರೆ ಈ ಮಕ್ಕಳನ್ನು ಕಟ್ಟಿಕೊಂಡು ಸಂಸಾರ ನಡೆಸುವುದು ಹೇಗೆ? ಮೊದಲು ಅಣ್ಣನ ಬಳಿ ಮಾತನಾಡುತ್ತೇನೆ. ಅವನು ಏನು ಹೇಳುತ್ತಾನೋ ಹಾಗೆ ಮಾಡೋಣ" ಅಂದಾಗ ನಳಿನಾಕ್ಷಿಗೆ ಮಾತನಾಡುವಂತೆ ಇರಲಿಲ್ಲ. ಅಣ್ಣನ ಮಾತೇ ವೇದವಾಕ್ಯ ಎಂದು ತಿಳಿದ ಶ್ರೀನಿವಾಸನಿಗೆ ಅಣ್ಣನಿಂದಲೇ ಮಾತು ಬಂದಾಗ ಅಧೀರನಾದ.
"ಶ್ರೀನಿವಾಸ, ನಮ್ಮ ಸಂಸಾರಗಳು ದೊಡ್ಡ ಸಂಸಾರಗಳು. ಹಿರಿಯರ ಮನೇಂತ ಇಷ್ಟು ದಿನ ನಿನ್ನನ್ನು ಇಲ್ಲಿ ಇರೂಂತ ಹೇಳಿದೆ. ನನಗೂ ಬೇಸಾಯದಿಂದ ಏನೂ ಸಿಗ್ತಾ ಇಲ್ಲ. ನೀನು ಖರ್ಚಿಗೆ ಕೊಡುವುದು ಕೂಡ ಏನೂ ಸಾಲುವುದಿಲ್ಲ. ಹಿರಿಯರ ಆಸ್ತಿ ಬೇಡಾಂತ ಹೇಳಿ ನೀವುಗಳು ನನ್ನ ಹೆಸರಿಗೆ ಬರೆದು ಕೊಟ್ಟಿದ್ದೀರಿ. ಆದರಿಂದ ನೀನು ಇಲ್ಲೇ ಎಲ್ಲಾದರೂ ಆಸ್ತಿ ಖರೀದಿಸುವುದು ಒಳ್ಳೆಯದು. ಸುಮ್ಮನೆ ನಾವು ನಾವು ಜಗಳ ಮಾಡಿಕೊಂಡು ನಿಷ್ಠುರ ಆಗುವುದಕ್ಕಿಂತ ಮೊದಲೇ ನೀನು ಬೇರೆ ವ್ಯವಸ್ಥೆ ಮಾಡಿಕೋ"
ಅಗ್ರಜನ ಮಾತು ಕೇಳಿದ ನಂತರ ಆ ಮನೆಯಲ್ಲಿ ನಿಂತರೆ ಮರ್ಯಾದೆಯಿಲ್ಲವೆನಿಸಿತು. ಸ್ವಂತ ಅಣ್ಣನ ಮಕ್ಕಳೇ ಹೀಯಾಳಿಸುವಾಗ ಶ್ರೀನಿವಾಸನಿಗೆ ದು:ಖವೇ ಬರುತ್ತಿತ್ತು.
"ಅಣ್ಣಯ್ಯ , ಒಂದೆರಡು ತಿಂಗಳು ಅವಕಾಶ ಕೊಡು. ಎಲ್ಲಾದರೂ ಇದೇ ಊರಿನಲ್ಲಿ ಆಸ್ತಿ ತೆಗೆದುಕೊಂಡು ಸಣ್ಣ ಮನೆ ಕಟ್ಟಿ ಕುಳಿತುಕೊಳ್ಳುತ್ತೇನೆ. ಅಲ್ಲಿಯವರೆಗೆ..."
ಮುಂದೆ ಮಾತನಾಡಲಾರದೆ ಗಂಟಲುಬ್ಬಿ ಬಂತು.
"ಸರಿ, ನಮ್ಮ ಶ್ಯಾನುಭೋಗರದ್ದೆ ಜಾಗ ಮಾರಾಟಕ್ಕಿದೆ. ನೀನು ದುಡ್ಡಿನ ವ್ಯವಸ್ಥೆಯನ್ನು ಮಾಡು. ಮುಂದೆ ನೋಡೋಣ" ಅನ್ನುವಾಗಲಷ್ಟೆ ಶ್ರೀನಿವಾಸನ ಮನಸ್ಸಿಗೆ ನೆಮ್ಮದಿಯೆನಿಸಿದ್ದು.
ಅಂಗಡಿಗೆ ಒಂದು ವಾರ ಬಾಗಿಲು ಹಾಕಿ ಮಧುರೈಗೆ ಹೊರಟ ಶ್ರೀನಿವಾಸ. ತಮ್ಮಂದಿರು ಆಪ್ಯಾಯತೆಯಿಂದ ಬರ ಮಾಡಿಕೊಳ್ಳುತ್ತಾರೆನ್ನುವ ನಿರೀಕ್ಷೆ ಹುಸಿಯಾಯಿತು. ಅಣ್ಣ ಬಂದಿರುವ ವಿಷಯ ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಇಬ್ಬರೂ ಮುಖ ಗಂಟಿಕ್ಕಿದಂತೆ ಇದ್ದರು. ಶ್ರೀನಿವಾಸ ಕೇಳಿಯೇ ಬಿಟ್ಟ.
"ನಾನೀಗ ತಾಪತ್ರಯದಲ್ಲಿದ್ದೇನೆ. ನನ್ನ ಪಾಲಿನ ಹಣ ನೀವು ಈಗ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬೀಳುವ ಸ್ಥಿತಿ" ಪೀಠಿಕೆ ಹಾಕುವಾಗ ಹಿರಿಯ ತಮ್ಮ ಗಿರೀಶ ಒಮ್ಮೆಗೆ ಬಿ.ಪಿ. ಏರಿಸಿಕೊಂಡವರಂತೆ ಶ್ರೀನಿವಾಸನ ಎದುರು ಬಂದು ನಿಂತ.
"ಯಾವುದು ನಿನ್ನ ಹಣ? ನಾವು ಯಾಕೆ ಕೊಡಬೇಕು? ನಮಗೆ ಸಂಸಾರ ಇಲ್ವಾ? ನೀನು ಬಿಟ್ಟು ಹೋದ ನಂತರ ವ್ಯಾಪಾರ ಅಷ್ಟಕಷ್ಟೆ. ನಮಗೂ ಇಲ್ಲಿ ನೆಮ್ಮದಿಯಿಲ್ಲ. ನಾವು ಬಿಟ್ಟು ಬಿಡ್ತಾ ಇದ್ದೇವೆ"
ಗಿರೀಶನ ಮಾತುಗಳನ್ನು ಕೇಳಿ ಶ್ರೀನಿವಾಸನಿಗೆ ಆಕಾಶ ತಲೆಯೆ ಮೇಲೆ ಬಿದ್ದ ಹಾಗಾಯಿತು. ಅದರೂ ಎದೆಗುಂದದೆ ಹೇಳಿದ.
"ನೀವು, ಕೊಟ್ಟ ಮಾತಿಗೆ ತಪ್ತಾ ಇದ್ದೀರಿ. ನಾನು ಹೇಳಿದ್ನಲ್ಲಾ ನೀವುಗಳು ಹಣ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬರುತ್ತದೆ. ದಯವಿಟ್ಟು ಇಲ್ಲ ಅನ್ಬೇಡಿ" ತಮ್ಮಂದಿರಿಗೆ ಕೈ ಮುಗಿದು ಕೇಳುವ ಸ್ಥಿತಿ ಬಂದಾಗ ಮನಸಿನಲ್ಲಿ ನೋವು ಮಡುಗಟ್ಟಿತು.
ಜಗನ್ನಾಥ ಒಳಗೆ ಹೋದವನೇ ಸಿಹಿತಿಂಡಿ ಕತ್ತರಿಸುವ ಚೂರಿಯನ್ನು ತಂದು ಶ್ರೀನಿವಾಸನ ಮುಂದೆ ನಿಂತ.
"ಏನು ನಿನ್ನ ಹಣ ಬಾಕಿಯಿರೋದು? ಏನೂ ಮಾತನಾಡದೆ ಬಂದ ಹಾಗೆ ಹಿಂದೆ ಹೋಗು. ಇಲ್ಲಾಂದ್ರೆ ನೀನು ಇಲ್ಲಿಗೆ ಬಂದೇ ಇಲ್ಲಾಂತ ಮಾಡ್ತೀನಿ"
ಕಿರಿಯ ತಮ್ಮನೂ ಮಿತಿಮೀರಿ ವರ್ತಿಸಿದಾಗ ಶ್ರೀನಿವಾಸ ಭೂಮಿಗಿಳಿದು ಹೋದ. ಹಣವಿಲ್ಲದೆ ಬರಿಗೈಯಲ್ಲಿ ಹೋದರೆ ಆಗುವ ಹೋಗುವ ವಿಚಾರವಲ್ಲವೆಂದು ತಿಳಿಯಿತು.
ತಾನೇ ಮುಂದೆ ತಂದ ತಮ್ಮಂದಿರು ತಿರುಗಿ ನಿಂತಾಗ ಅಸಹಾಯಕನಂತೆ ಕೈ ಚೆಲ್ಲಿ ಕುಳಿತ.
"ನಾನು ನಿಮ್ಮ ಜೊತೆಗೆ ಜಗಳ ಕಾಯುವುದಕ್ಕೆ ಬಂದಿಲ್ಲ. ನನ್ನ ಹಣ ಕೇಳೊದಿಕ್ಕೆ ಬಂದೆ. ನೀವು ಕೊಡದಿದ್ರೆ ಬೇಡ. ನೀವುಗಳು ಚೆನ್ನಾಗಿರಿ. ಆದರೆ ನಾನು ಬರಿಗೈಯಲ್ಲಿ ಊರಿಗೆ ಹೋದರೆ ಅಣ್ಣನಿಗೂ ನನ್ನ ಮೇಲೆ ಕೋಪ ಬರುತ್ತೆ. ನನಗೆ ಸಾಲದ ರೂಪದಲ್ಲಿ ಒಂದು ಐವತ್ತು ಸಾವಿರ ಹಣ ಕೊಟ್ರೆ... ನಿಮ್ಮ ಕಷ್ಟ ಕಾಲದಲ್ಲಿ ಹಿಂದಿರುಗಿಸ್ತೇನೆ" ಎಂದು ತಮ್ಮಂದಿರನ್ನು ಕೇಳುವಾಗ ಜಗನ್ನಾಥ, ಗಿರೀಶನ ಕಡೆಗೆ ಕಣ್ಣು ಮಿಟುಕಿಸಿದ.
ಗಿರೀಶ ಒಳಗೆ ಗೋದ್ರೇಜ್ನಿಂದ ಐವತ್ತು ಸಾವಿರ ಎಣಿಸಿ, "ಇದು ಜಗನ್ನಾಥನ ಹಣ. ನೀನು ವಾಪಸು ಕೊಡುವಾಗ ಅವನಿಗೆ ಕೊಟ್ಟು ಬಿಡು" ಹಣವನ್ನು ಶ್ರೀನಿವಾಸನ ಕೈಯಲ್ಲಿಟ್ಟಾಗ ಶ್ರೀನಿವಾಸನಿಗೆ ಪರ್ವತ ಸಿಕ್ಕಷ್ಟು ಸಂತಸವಾಯಿತು. ತಮ್ಮಂದಿರ ಮನೆಗೂ ಹೋಗದೆ ನೇರವಾಗಿ ರೈಲು ಹಿಡಿದು ಊರು ತಲುಪಿದ.
ಹೆಂಡತಿಯ ಮಾತು ಕೇಳದೆ ಅವಳನ್ನು ಸಮಾಧನಿಸಿದ.
"ನೋಡು, ಪಟ್ಟಣದ ಬದುಕು ನಮಗೆ ಕಷ್ಟ. ಇಲ್ಲೆ ಶ್ಯಾನುಭೋಗರ ಆಸ್ತಿ ಮಾರೋದಿದೆಯಂತೆ. ಒಳ್ಳೊಳ್ಳೆಯ ಉಳುಮೆಯ ಗದ್ದೆಗಳು. ಆಸ್ತಿ ತೆಗೆದು ಹಾಕಿದರೆ ಮುಂದೆ ಮಕ್ಕಳಿಗೆ ಅನುಕೂಲವಾಗಬಹುದು. ನಾನು ಅಣ್ಣನ ಜೊತೆಗೆ ಹೋಗಿ ನೋಡಿಕೊಂಡು ಬರುತ್ತೇನೆ"
"ಅಲ್ಲ, ಈ ಹಳ್ಳಿಯಲ್ಲಿ ಉಳುಮೆಯ ಆಸ್ತಿ ತೆಗೆದು ಹಾಕಿದ್ರೆ, ನಮ್ಮ ಮಕ್ಕಳು ಏನು ಮಾಡಬೇಕು? ಅವುಗಳಿಗೆ ಗದ್ದೆಯ ಕೆಲಸ ಮಾಡಿ ಗೊತ್ತುಂಟಾ?"
"ನಮಗೆ ಬದುಕ ಬೇಕಾದ್ರೆ ನಮ್ಮ ಮಕ್ಕಳು ಗದ್ದೆಯ ಕೆಲಸ ಅಲ್ಲ... ಯಾವ ಕೆಲಸವನ್ನಾದ್ರೂ ಕಲಿಬೇಕು. ಮತ್ತೆ ಅವರಿಗೂ ಅಭ್ಯಾಸವಾಗುತ್ತದೆ"
ಶ್ರೀನಿವಾಸ ನಳಿನಾಕ್ಷಿಯ ಬಾಯಿ ಮುಚ್ಚಿಸಿದ. ಮರುದಿನ ಅಗ್ರಜನನ್ನು ಕರೆದುಕೊಂಡು ಶ್ಯಾನುಭೋಗರ ಬಳಿ ಮಾತನಾಡಲು ಹೋದ.
ಶ್ಯಾನುಭೋಗರು ಮೊದಲೆ ತಮ್ಮ ಜಾಗ ಮಾರಾಟ ಮಾಡುವುದೆಂದು ನಿರ್ಧರಿಸಿದ್ದರಿಂದ ಉಟ್ಟ ಬಟ್ಟೆಯಲ್ಲಿಯೆ ಗದ್ದೆಗಳನ್ನು ತೋರಿಸಲು ಹೊರಟರು. ಶ್ರೀನಿವಾಸನಿಗೆ ಗದ್ದೆಗಳೆಲ್ಲ ಹಿಡಿಸಿದವು. ಐವತ್ತು ಸಾವಿರಕ್ಕೆ ಎಲ್ಲವೂ ಇತ್ಯರ್ಥವಾಗಿ ಶ್ರೀನಿವಾಸ ಆ ಆಸ್ತಿಯ ಒಡೆಯನಾದ. ಆತ ಮಾಡಿದ ದೊಡ್ಡ ತಪ್ಪೆಂದರೆ ಗೇಣಿಯನ್ನು ಮುಂದುವರಿಸಿಕೊಂಡು ಬಂದಿದ್ದು. ಮನೆ ಕಟ್ಟಿ ಸಂಸಾರವನ್ನು ನೋಡಿಕೊಳ್ಳುವ ಹೊತ್ತಿಗೆ `ಉಳುವವನೆ ಹೊಲದೊಡೆಯ' ಕಾನೂನು ಬಂದಾಗ ಕಷ್ಟದಲ್ಲಿ ತೆಗೆದುಕೊಂಡ ಆಸ್ತಿಯೂ ಕೈ ಬಿಟ್ಟು ಹೋಯಿತು. ಮದುವೆಗೆ ತಯಾರಾಗಿ ನಿಂತ ಹೆಣ್ಣು ಮಕ್ಕಳಿಗೆ ಅದು ಹೇಗೋ ನಳಿನಾಕ್ಷಿ ಮಾಡಿಟ್ಟ ಚಿನ್ನವನ್ನು ಮಾರಿ ಮದುವೆ ಮಾಡಿಸಿದ. ಆ ಹೊತ್ತಿಗೆ ಹಿರಿಯ ಮಗ ಕೆಲಸಕ್ಕೆ ಸೇರಿದ್ದರಿಂದ ಅಷ್ಟಿಷ್ಟು ಮನೆ ಖರ್ಚು ನಡೆಯುತ್ತಿತ್ತು. ಹುಡುಗಿಯರು ಮದುವೆಯಾಗಿ ಹೋದರೂ ಅವರಿಗೆ ನೆಮ್ಮದಿಯಿರಲಿಲ್ಲ. ಹಿರಿ ಮಗಳು ಉಪಾಸನ ಬಡತನದಲ್ಲಿಯೆ ಸಂಸಾರ ಹೂಡುವಂತಾದರೆ, ಎರಡನೆಯ ಮಗಳು ಆರಾಧನ ಮದುವೆಯಾಗಿ ಆರು ತಿಂಗಳಿನಲ್ಲೇ ತವರು ಸೇರುವಂತಾಯಿತು. ಮೂರನೆಯ ಮಗಳು ಅರ್ಚನಾಳ ಗಂಡ ಸ್ಫುರದ್ರೂಪಿ ಯುವಕ. ಸ್ವಲ್ಪ ಹೆಣ್ಣುಗಳ ಜೊತೆಗೆ ಮಾತುಕತೆ ನಡೆದಾಗ ಸಂಶಯ ಹೊಂದಿದ ಅರ್ಚನಾಳಿಗೆ ದಿನ ಅವನ ಜೊತೆಗೆ ಜಗಳ ಕಾಯುವುದೆ ಆಯಿತು. ನಾಲ್ಕನೆಯವಳು ಪೂಜಾ. ಅವಳ ಗಂಡನ ಕೈ ಯಾವಾಗಲೂ ತೂತೆ. ಹಾಗಾಗಿ ಹೆಣ್ಣು ಮಕ್ಕಳ ಗೋಳಿನ ಪತ್ರ ಬಂದಾಗಲೆಲ್ಲಾ ಶ್ರೀನಿವಾಸ ಹೈರಾಣಗುತ್ತಿದ್ದ. ನಳಿನಾಕ್ಷಿಗಂತೂ ಕಣ್ಣೀರು ತಪ್ಪಿದಲ್ಲ. ಕೊನೆಗೆ ಆತ ಹಾಸಿಗೆ ಹಿಡಿದ. ಹಾಸಿಗೆ ಹಿಡಿದ ಎರಡು ವಾರಗಳಲ್ಲಿಯೆ ಆತನ ಸಂಸಾರದ ಗಾಲಿ ಕಳಚಿಕೊಂಡಿತು. ಇನ್ನೆರಡು ವರ್ಷಕ್ಕೆ ನಳಿನಾಕ್ಷಿ ಕೂಡ ಗಂಡನ ಕಡೆಗೆ ನಡೆದದ್ದಾಯಿತು. ಆ ಮನೆಯಲ್ಲಿ ನೆಮ್ಮದಿ ಅಳಿಸಿತು. ಹಿರಿಯ ಮಗ ದೂರವಿದ್ದುದರಿಂದ ಎರಡನೆಯ ಮಗ ಉಳಿದ ಆಸ್ತಿಯ ಜವಾಬ್ದಾರಿಯನ್ನು ಹೊರುವಂತಾಯಿತು.
***
ಹಳೆಯ ನೆನಪುಗಳೆಲ್ಲಾ ಕೆದಕಿ ಆ ರಾತ್ರಿಯಿಡಿ ನಿದ್ದೆ, ವೆಂಕಟಭಟ್ಟನಿಂದ ದೂರವೇ ಉಳಿಯಿತು. ಅಪ್ಪ ಇಷ್ಟು ಕಷ್ಟ ಬಿಟ್ಟು ಮಾಡಿನ ಆಸ್ತಿಯನ್ನು ಮಾರುವ ಮಾತು ಮುಂದೆ ಈ ಮನೆಯಲ್ಲಿ ಬರಬಾರದೆಂಬ ನಿರ್ಧಾರವನ್ನು ತೆಗೆದುಕೊಂಡ. ವನಜಾಕ್ಷಿ ಪಕ್ಕಕ್ಕೆ ಬಂದು ಮಲಗಿದರೂ ಗೋಚರವಾಗಲಿಲ್ಲ. ತದೇಕ ದೃಷ್ಟಿಯಿಂದ ಸೂರನ್ನೇ ದಿಟ್ಟಿಸುತ್ತಾ ಮಲಗಿದ.
"ರೀ" ವನಜಾಕ್ಷಿಗೂ ನಿದ್ದೆ ಸುಳಿಯದೆ ಗಂಡನನ್ನು ಕರೆದಳು.
"ಏನಾಗ್ಬೇಕು?"
"ಅಲ್ಲ... ನೀವಂದ್ರಿ... ನಮ್ಗೆ ಹೆಣ್ಣು ಸಂತಾನ ಅಗೊದು ಬೇಡಾಂತ ನಿಮ್ಮ ತಂದೆ-ತಾಯಿಯ ಶಾಪ ಇದೇಂತ, ಇದು ಸತ್ಯಾನಾ? ಯಾರಾದ್ರೂ ತಮ್ಮ ಸ್ವಂತ ಮಕ್ಕಳಿಗೆ ಆ ರೀತಿ ಶಾಪ ಕೊಡ್ತಾರಾ?"
"ನಾನು ಆಗ್ಲೆ ಹೇಳಿದ್ನಲ್ಲಾ... ನಮ್ಮ ಮನೆ ಹೆಣ್ಣುಗಳ ಕಷ್ಟ ನೋಡಿ ಹಾಗೆ ಅಂದಿರಬಹುದೂಂತ ಹೇಳಿದೆ. ಹಾಗೇ ಇನ್ನೂ ತಿಳಿದುಕೊಳ್ಳುವ ಇಚ್ಛೆ ಇದ್ರೆ ನಾಳೆ ರಾಮ ಜೋಯಿಸರತ್ರ ಹೋಗಿ ಬರೋಣ"
ಗಂಡನ ಮಾತಿನಲ್ಲಿ ವ್ಯಂಗ್ಯವಿದ್ದುದನ್ನು ಗುರುತಿಸಿದ ವನಜಾಕ್ಷಿಗೆ ಮಾತನಾಡಲಾಗದೆ ವಿರುದ್ಧ ದಿಕ್ಕಿಗೆ ಹೊರಳಿ ಮಲಗಿದಳು. ಆದರೆ ಮನಸ್ಸು ತಡೆಯಲಾರದೆ ಮಗ್ಗುಲು ಬದಲಿಸದೆ ಕೇಳಿದಳು.
"ನಮಗೆ ಹೆಣ್ಣು ಮಗು ಆಗೋದಿಲ್ವಾ?"
"ಪದೇ ಪದೇ ಅದನ್ನು ಕೇಳಬೇಡ. ಹೆಣ್ಣು ಮಗು ಆಗದಿದ್ರೆ ದತ್ತು ತೆಗೆದುಕೊಳ್ಳೋಣ. ಈಗ ಸುಮ್ನೆ ಮಲಗು"
"ಹಾಗಂತೀರಾ? ಅದು ನಮ್ಮ ಮಗು ಆಗೊದಿಲ್ವಲ್ಲಾ?"
"ಮನಸ್ಸು ಉದಾರವಾಗಿರಲಿ. 0ಾರದ್ದಾದರೇನು, ಜವಾಬ್ದಾರಿ ನಾವು ತೆಗೆದುಕೊಂಡ ನಂತರ ಅದು ನಮ್ಮದೆ ಮಗು ತಾನೆ?"
"ಹಾಗಾ?"
ಗಂಡನ ಮಾತುಗಳನ್ನು ಮೆಲುಕು ಹಾಕಿಕೊಂಡು ವನಜಾಕ್ಷಿ ಹಾಗೆ ನಿದ್ರೆಗೆ ಜಾರಿದರೆ, ವೆಂಕಟ ಭಟ್ಟರಿಗೂ ಏನೋ ತೃಪ್ತಿಯೆನಿಸಿ ಹಾಗೆ ಕಣ್ಣು ಮುಚ್ಚಿ ನಿದ್ದೆಗೆ ಇಳಿದರು.
****
- ಅನು ಬೆಳ್ಳೆ

ಮುಂದೆ ಓದಿ

ಸಾಹಿತ್ಯ
ಪಡ್ರೆ ಬರೆಕೆರೆ ಮನೆಯಲ್ಲಿ ನಡೆದ ಯಕ್ಷಗಾನ ಬಯಲಾಟ ವೀಕ್ಷಕರೋರ್ವರಿಗೆ ಸ್ಪೂರ್ತಿ ನೀಡಿದ್ದು ಅದನ್ನು ಬರಹರೂಪಕ್ಕಿಳಿಸಿ ಈ ಕನಸಸಿಗಾಗಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು. - ಸಂ

ಒಟ್ಟಿನಲ್ಲಿ ಹೇಳುವುದಾದರೆ ಲೀಲಾಮುರ್ತಿ ಶ್ರೀಕೃಷ್ಣ (ಕೃಷ್ಣ ಲೀಲೆ ಕಂಸವಧೆ) ಪ್ರದರ್ಶನ ಯಶಸ್ವಿಯಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ವಸುದೇವ ದೇವಕಿಯರ ವಿವಾಹದಿಂದ ಮೊದಲ್ಗೊಂಡು ಕಂಸವಧೆಯಲ್ಲಿ ಪ್ರಸಂಗ ಅಂತ್ಯಗೊಂಡಾಗ ನಿಜವಾದ ಯಕ್ಷಲೋಕ ಅನಾವರಣಗೊಂಡು ಕೆಲವೊಂದು ಉತ್ತಮ ನಿರ್ವಹಣೆಗಳು ರೂಪುಗೊಂಡವು.



ಕಂಸ(೧) ಕಾಸರಗೋಡಿನ ಸುಬ್ರಾಯ ಹೊಳ್ಳ ತಮ್ಮದೇ ಆದ ವಿಶಿಷ್ಠ ಛಾಪನ್ನು ಒದಗಿಸಿಕೊಂಡು ಯಾವುದೇ ಪಾತ್ರವಾದರೂ ಸೈ ಎನ್ನುವುದನ್ನು ತೋರ್ಪಡಿಸಿದರು. ವಸುದೇವನಾಗಿ ಪೂಕಳ, ದೇವಕಿಯಾಗಿ ಸದಾಶಿವ ಶೆಟ್ಟಿ ಸಿದ್ದಕಟ್ಟೆ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಿದರು. ಹಿಮ್ಮೇಳದಲ್ಲಿ ಪ್ರಸಾದ್ ಬಲಿಪ, ಸುಬ್ರಹ್ಮಣ್ಯ ಶಾಸ್ತ್ರಿ , ಪುಂಡಿಕಾಯಿ ರಾಜೇಂದ್ರ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಪೂತನಿಯಾಗಿ ಹರಿನಾರಾಯಣ ಭಟ್, ಮಾಯಾ ಪೂತನಿಯಾಗಿ ಸಂಜಯ ಕುಮಾರ್ ತಮ್ಮ ಪ್ರಬುದ್ಧ ಪ್ರದರ್ಶನ ತೋರ್ಪಡಿಸಿದರು. ಕೃಷ್ಣ(೧) ಶಶಿಧರ್ ಕುಲಾಲ್ ಕನ್ಯಾನ ಉತ್ತಮ ನಿರ್ವಹಣೆ ನೀಡಿದರು. ಶಕಟ ಧೇನು ವಾತಾಸುರರಾಗಿ ಬೆಳ್ಳಾರೆ ಮಂಜುನಾಥ್ ಭಟ್ , ಗೋಪಾಲ ಬೆಳ್ಳಾರೆ, ದಿನೇಶ್ ಕೋಡಪದವು ಪಾತ್ರಗಳಿಗೆ ಜೀವ ತುಂಬಿದರು. ಗೋಪಿಕಾ ಸ್ತ್ರೀಯರ ಪಾತ್ರದಲ್ಲಿ ಬಾಲಕೃಷ್ಣ ಸೀತಾಂಗೋಳಿ ಹಾಗೂ ವಾಮನ ಕುಮಾರ್ ಶಿಸ್ತುಬದ್ಧ ಅಭಿನಯ ತೋರಿದರು. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ ಕಲಾಪ್ರೌಢಿಮೆ ಮೆರೆದರು.


ಕಂಸ (೨)ಕೋಳ್ತಿಗೆ ನಾರಾಯಣ ಗೌಡ ಉತ್ತಮವಾಗಿ ಪಾತ್ರಾಭಿನಯ ಮಾಡಿದರು. ಅಕ್ರೂರನಾಗಿ ಕೋಟೆ ರಾಮಭಟ್, ಕೃಷ್ಣ(೨)ದೀಪಕ್ ಪೇಜಾವರ ತಮ್ಮ ಪ್ರಬುದ್ಧ ನಾಟ್ಯಪ್ರದರ್ಶಿಸಿದರು. ವೇಣೂರು ಸದಾಶಿವ ಆಚಾರ್ಯ, ಮಿಜಾರು ತಿಮ್ಮಪ್ಪ, ಬಾಲಕೃಷ್ಣ ಮಣಿಯಾಣಿ ರಂಗದಲ್ಲಿ ರಂಜಿಸಿದರು.
ಯಕ್ಷರಂಗದ ದಿಗ್ಗಜ ಬಲಿಪ ನಾರಾಯಣ ಭಾಗವತರು ತಮ್ಮ ಪರಂಪರಾಗತ ಶೈಲಿಯನ್ನು ಮೆರೆದರು. ಪಡ್ರೆದ್ವಯರ ಹಿಮ್ಮೇಳದ ಸಾಥ್ ಮತ್ತಷ್ಟು ರಂಜನೆ ನೀಡಿತು.
- ಕೆ.ವಿ.ಬೆಂಗಳೂರು.

ಮುಂದೆ ಓದಿ

ಸಾಹಿತ್ಯ
ಓದುಗನಾಗಲು ಹೊರಟ ಲೇಖಕರು ಕಾದಂಬರಿ ಬರೆದರು, ಅಲೆಮಾರಿಯಾಗಬೇಕೆಂದಿದ್ದ ಚಿರಾಯು ಜ್ನಾನಪೀಠ ಪ್ರಶಸ್ತಿ ಪುರಸ್ಕತನಾಗಿ ಮಹತ್ವಾಕಾಂಕ್ಷಿಯಾದ. ಜೋಗಿಯವರ "ಯಾಮಿನಿ" 'ಚಿರಾಯುವಿನ ಆತ್ಮ ; ಯಾಮಿನಿಯ ಕತೆ'.ಕಾದಂಬರಿಯ ಕೇಂದ್ರಬಿಂದು ಚಿರಾಯು ಒಬ್ಬ ಜನಪ್ರಿಯ ಕಾದಂಬರಿಕಾರ. ಇಡೀ ಕತೆ ಒಂದು ಸ್ವಗತದಂತೆ, ಕಾದಂಬರಿಯುದ್ದಕ್ಕೂ ನಾಯಕ ತನ್ನನ್ನೇ ತಾನು ವಿಮರ್ಶಿಸಿಕೊಳ್ಳುತ್ತಾನೆ. ಎದುರಾಗುವ ಪ್ರತಿಯೊಬ್ಬರ ಎದುರೂ ಒಂದೊಂದು ಮುಖವಾಡ ಧರಿಸುತ್ತಾನೆ ಮತ್ತು ನಿಜವಾದ ಚಿರಾಯು ಇನ್ನೆಲ್ಲಿಯೋ ಉಳಿಯುತ್ತಾನೆ.
ಕೇವಲ 114 ಪುಟವಿರುವ ಈ ಕಾದಂಬರಿಯನ್ನು ಎರಡು ಗಂಟೆ ಇರುವ ಬಸ್ ಪ್ರಯಾಣದಲ್ಲಿ ಓದಿ ಮುಗಿಸುತ್ತೇನೆ ಎಂಬ ನನ್ನ ಅಹಂ ಗೆಲ್ಲುವುದರೊಡನೆ ಸೋತಿತ್ತು ಕೂಡಾ. ಚಿರಾಯವಿನ ವಾದಗಳು, ಯೋಚನೆಗಳು, ಪ್ರತಿಯೊಬ್ಬರ ಜೊತೆಯೂ ಆತ ನಡೆಸುವ ಚರ್ಚೆಗಳು ಮತ್ತು ನಮ್ಮನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಅಲ್ಲೆ ಕೈ ಬಿಟ್ಟು ವಾದಗಳು ಬರ್ತಿಯಾಗಿ ನಾಲ್ಕುಸಲ ಯಾಮಿನಿಯನ್ನು ಓದುವಂತೆ ಮಾಡಿದೆ ಹಾಗೆಯೇ ಮಗದೊಮ್ಮೆ ತಿರುಗಿ ನೋಡು ಎಂದು ಬೇಡುತ್ತಲೇ ಇದೆ.

ಸುಮಾರು 8 ಗಂಟೆಗಳ ಕಾಲ ಮತ್ತೆ ಮತ್ತೆ ಓದಿ ನಿಟ್ಟಸಿರು ಬಿಡುವ ಹೊತ್ತಿಗೆ ಶೇಷು ಮತ್ತೆ ಮತ್ತೆ ಕಾಡುತ್ತಾನೆ, ಇದ್ದರೆ ಅಂಥವನ ಜೊತೆಗಿರಬೇಕೆನಿಸುತ್ತದೆ. ಒಂದು ತಿಂಗಳ ಕಾಲ ಸುಮ್ಮನೆ ಸಾವಿರಕಂಬದ ಬಸದಿಯಲ್ಲಿ ಕಳೆದು, ಕೇವಲ ಚಿರಾಯುವಿನ ಚಲನ ವಲನಗಳನ್ನು ನೋಡಿ ಅರ್ಥೈಸಿಕೊಳ್ಳುವ ಶೇಷುವನ್ನು, ಇತರ ಪಾತ್ರಗಳಿಗೆ ಜೀವ ತುಂಬುವ ಚಿರಾಯು ಅರಿತುಕೊಳ್ಳುವಲ್ಲಿ ಸೋತಿದ್ದಾನೆ ಅಂತೆಣಿಸುವುದು 'ಅವನು ನನ್ನನ್ನು ಅರ್ಥಮಾಡಿಕೊಂಡಿದ್ದಾನೋ ಅಥವಾ ಆತನ ಅನಿವಾರ್ಯತೆಯೋ ಎಂದು ಆತ ಆಡುವ ಮಾತಿನಿಂದ.ಆದರೆ ಜೋಗಿಯ ಸುಂದರ ಸೃಷ್ಟಿ ಶೇಷು.

" ಬಾಲ್ಯದಲ್ಲಿ ಕಂಡು ಮೆಚ್ಚಿಕೊಂಡ ವ್ಯಕ್ತಿಗಳನ್ನೇ ನಾವು ಜೀವನದುದ್ದಕ್ಕೂ ಹುಡುಕುತ್ತೇವೆ. ಬಾಲ್ಯದಲ್ಲಿ ಕಂಡವರೇ ಮತ್ತೆ ಬೇರೆ ಬೇರೆರೂಪಗಳಲ್ಲಿ ಎದುರಾಗತ್ತಾರೋ ಅಥವಾ ತಾನೇ ಅವರನ್ನು ಹುಡುಕುತ್ತಾ ಅಲೆಯುತ್ತಿದ್ದೇನೋ" ಎನ್ನುವಂತಹ ಚಿರಾಯುವಿನ ಮಾತುಗಳೇಯಾಮಿನಿಯನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಬರೆಯುವ ಸುಖ ಮತ್ತು ಲೇಖಕ ಎದುರಿಸುವ ಸಮಸ್ಯೆ ಹಾಗೂ ಚಿರಾಯು ಕೇಳಿಕೊಳ್ಳುವ ಪ್ರಶ್ನೆ ಎಲ್ಲಾ ಲೇಖಕ, ಕವಿ ಕಾದಂಬರಿಕಾರರ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ. ಕಾದಂಬರಿಯ ಕೊನೆಗೆ ಚಿರಾಯುವನ್ನು ತಬ್ಬಿ ಮುತ್ತಿಕ್ಕುವ ಯಾಮಿನಿ ಎಂಬ ಹುಡುಗಿ 'ಅಂತಹ ಉಕ್ಕುವ ಸೌಂದರ್ಯದ ಖನಿಯೇನೂ ಅಲ್ಲ' ಎನ್ನುವ ಸಾಲು ನಾನು ಬಾಲ್ಯದಿಂದಲೂ ಓದಿಕೊಂಡು, ಕಲ್ಪಿಸಿಕೊಂಡು ಬಂದ ಹಾಗೆ ಕಥಾನಾಯಕಿಯರೆಲ್ಲ ಸುಂದರಿಯರೇ ಅನ್ನುವುದಕ್ಕೆ ಬಿದ್ದ ಮೊದಲ ಪೆಟ್ಟು. ಚಿರಾಯುವಿನ ಕಳೆದುಹೋದ ಕಥೆಗಳೊಂದಿಗೆ ಬರುವಾಕೆ ಈಕೆ, ಗೆದ್ದಾಗಲೂ, ಸೋತಾಗಲೂಚಿರಾಯುವಿಗೆ ನೆನಪಾಗುವುದು ಪ್ರೀತಿಸುತ್ತಲೇ ಟೀಕಿಸುತ್ತಿರುವ ಯಾಮಿನಿ. ಈತನ ಅಹಂ ಗರಿಬಿಚ್ಚಿದಾಗ ಅದನ್ನು ಮಾತಿನಿಂದಲೇ ಮುದುಡುವಂತೆ ಮಾಡುತ್ತಾಳೆ.
" ಕಂಡದ್ದನ್ನು ಕಂಡಹಾಗೆ ಬರೆದಾಗ ಅದು ಕಾದಂಬರಿಯಾಗುವುದಿಲ್ಲ ಡ್ಯಾಕುಮೆಂಟರಿಯಾಗುತ್ತದೆ". ಆದುದರಿಂದಲೇ 'ಯಾಮಿನಿ'ಯಲ್ಲಿ ಬರುವ ಎಲ್ಲಾ ಪಾತ್ರಗಳು ಲೇಖಕನ ಕಲ್ಪನೆಯೊಂದಿಗೆ ಭಾವಲೋಕದಲ್ಲಿ ವಿಹರಿಸುತ್ತವೆ. ಈ ಕಾದಂಬರಿಯ ಕೊನೆಯ ಕಂತು' ಶ್ರದ್ಧಾಂಜಲಿ' ನನ್ನನ್ನು ಚಕಿತಗೊಳಿಸಿತು. ಕತೆಗೂ ಶ್ರದ್ಧಾಂಜಲಿ ಇರುತ್ತಾ, ಆದರೆ ಎಲ್ಲೋ ಓದಿದ ನೆನಪು " ಅಂತ್ಯ ಅನ್ನೋದು ಕೊನೆಯಲ್ಲ ಇನ್ನೊಂದು ಕತೆಯ ಆರಂಭ"ಅಂತಾ.
ಚಿರಾಯುವಿನ ಜೊತೆಯಲ್ಲೇ ಇರಬೇಕಾದ ಸ್ಮಿತಾ ಅರಿತಿರುವ, ಶೇಷು ಅರ್ಥಮಾಡಿಕೊಂಡ, ಶ್ರದ್ಧಾ ಹುಡುಕ ಹೊರಟ, ಯಾಮಿನಿಯ ಎದೆಯೊಳಗಿರುವ ಹಾಗೂ ಆತನ ಆತ್ಮೀಯರು ಅರಿತಿರುವ ಚಿರಾಯುವಿನ ಚಿತ್ರಪಟ ಬೇರೆ ಬೇರೆಯದೇ. ಹೀಗೆ ಪ್ರತಿಯೊಬ್ಬರಿಗೂ ಹಲವಾರು ಮುಖವಾಡಗಳಿವೆ ಆದರೆ ನಮಗೆ ಪರಿಚಯವಾಗೋದು ಎಲ್ಲರ ಒಂದು ಮುಖವಾಡ ಮಾತ್ರ.
ನನ್ನನ್ನು ಕೊನೆಗೂ ಕಾಡುತ್ತಿರುವುದು ಚಿರಾಯು ಹೇಳುವ ಒಂದೇ ಒಂದು ಸಾಲು;" ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು". ಹಾಗೆಯೇ ಮತ್ತೆ ಮತ್ತೆ ನೆನಪಾಗೋದು" ತನ್ನ ಚಿಂತನೆಗಳಲ್ಲಿ ತನ್ನದೆಷ್ಟು, ಮತ್ತೊಬ್ಬರದೆಷ್ಟು, ಎಂದು ತಿಳಿಯದ ಹಾಗೆ ಬದುಕಿದ್ದರಿಂದ ತಾನು ಕಳೆದುಕೊಂಡಿದೆಷ್ಟು" ಎಂಬ ಚಿರಾಯುವಿನ ಮಾತು.
ಧೀಷ್ಮಾ ಡಿ ಶೆಟ್ಟಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಷ್ಠಾನ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಯುಗಪುರುಷದ ಭುವನಾಭಿರಾಮ ಉಡುಪ ಮೊದಲಾದವರಿದ್ದರು.

ಮುಂದೆ ಓದಿ

ಆರೋಗ್ಯ

ನಮ್ಮಲ್ಲಿ ಬಹುತೇಕ ಮಂದಿಗೆ ಸರಿಯಾಗಿ ನಿದ್ದೆ ಮಾಡಲಿಕ್ಕೆ ಬರೋಲ್ಲ. ಇದು ಜೋಕಲ್ಲ ಸ್ವಾಮಿ. ನೂರಕ್ಕೆ ನೂರರಷ್ಟು ಸತ್ಯ. ಹ್ಯಾಗ್ಯಾಗೊ ಮಲಗಿ, ಒಟ್ಟಾರೆ ನಿದ್ದೆ ಮಾಡಿ ಮುಗಿಸ್ತಾರೆ. ನಿದ್ದೆ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಕೆಲಸ ಮಾಡಿ ಸುಸ್ತಾದ ದೇಹ ಹಾಗೂ ಮನಸ್ಸಿಗೆ, ಉಲ್ಲಾಸ, ನವೋತ್ಸಾಹ ತುಂಬುತ್ತದೆ ನಿದ್ದೆ. ಸರಿಯಾದ ನಿದ್ದೆ ಇಲ್ಲದಿದ್ದರೆ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ದೇಹ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಬಿಡುತ್ತದೆ.


ಶರೀರ ರೋಗಗಳ ಗೂಡಾಗಿ ಬಿಡುವ ಸಾಧ್ಯತೆಯಿದೆ. ನಿದ್ರಾಹೀನತೆ ದೈಹಿಕ ಹಾಗೂ ಮಾನಸಿಕ ತೊಂದರೆಗೆ ಕಾರಣವಾಗುತ್ತದೆ. ಮೆದುಳು ಸರಿಯಾಗಿ ಕೆಲಸ ಮಾಡಲಾರದು. ಮಾನಸಿಕ ಖಿನ್ನತೆ, ಹೃದಯದ ತೊಂದರೆ ಕಾಣಿಸಿಕೊಳ್ಳಬಹುದು. ಇದು ರಕ್ತದ ಒತ್ತಡ, ಬೊಜ್ಜು ಶೇಖರಣೆಗೆ ಮೂಲವಾಗಬಹುದು. ನಿದ್ದೆಯ ಗುಣಮಟ್ಟ ಹಾರ್ಮೋನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಶಕ್ತಿಯ ಮೇಲೂ ಪರಿಣಾಮ ಬೀರಬಲ್ಲುದು.

ಆರೋಗ್ಯವಂತ ವ್ಯಕ್ತಿಗೆ ದಿನವೊಂದಕ್ಕೆ ೬-೭ ತಾಸು ನಿದ್ದೆ ಬೇಕೇ, ಬೇಕು. ಹಾಗಾಗಿ ಅನಾರೋಗ್ಯಕರವಾದ ಮಲಗುವ ಭಂಗಿ ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು. ಗೊರಕೆ, ಬೆನ್ನು ನೋವು, ಕುತ್ತಿಗೆ ನೋವುಗಳು ಬರುವುದು ಅನಾರೋಗ್ಯಕರ ಮಲಗುವ ಭಂಗಿಯಿಂದಾಗಿ ಎಂಬುದು ನೆನಪಿರಲಿ.

ಆಧುನಿಕ ಜೀವನ ಶೈಲಿ ಹಲವು ಮಂದಿಯಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತಿದೆ. ದೀರ್ಘಾವಯವರೆಗೆ ಕೆಲಸ ಮಾಡುವವರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರು ಉತ್ತಮ ನಿದ್ದೆಯಿಂದ ವಂಚಿತರಾಗುತ್ತಾರೆ ಎಂಬುದು ವೈದ್ಯರ ಅಭಿಮತ. ಮನುಷ್ಯನ ವಯಸ್ಸು ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ನಿದ್ದೆ ಮಾಡುವುದು ಕಡಿಮೆ.
ಉತ್ತಮ ನಿದ್ದೆಗೆ ಕೆಲವು ಟಿಪ್ಸ್ ಇಲ್ಲಿದೆ.

* ಉತ್ತಮ, ಆರಾಮದಾಯಕವಾದ ಹಾಸಿಗೆ ಉಪಯೋಗಿಸಿ. ದುಬಾರಿ ಹಾಸಿಗೆಯೇ ಬೇಕೆಂದಿಲ್ಲ. ಆದರೆ, ಮಲಗುವ ಹಾಸಿಗೆ ಸ್ವಚ್ಚವಾಗಿರಲಿ. ಶುಭ್ರವಾಗಿರಲಿ.
* ದಿಂಬು ಬಳಸುವ ಹವ್ಯಾಸವಿದ್ದರೆ ಉತ್ತಮ ದಿಂಬನ್ನು ಬಳಸಿ.
*ಮಲಗುವ ಕೋಣೆ ಸ್ವಚ್ಚವಾಗಿರಲಿ. ಆದಷ್ಟೂ ನಿಶ್ಯಬ್ಧವಾಗಿರುವಂತೆ ನೋಡಿಕೊಳ್ಳಿ. ಪ್ರಶಾಂತ ವಾತಾವರಣ ಉತ್ತಮ ನಿದ್ದೆಗೆ ಅನುಕೂಲ.
*ಚಳಿ ಎನಿಸಿದರೆ ಹೆಚ್ಚು ಹೊದಿಕೆ ಬಳಸಿ, ಸೆಖೆ ಎನಿಸಿದರೆ ಕಡಿಮೆ ಹೊದಿಕೆ ಬಳಸಿ. ಆರಾಮ ಎನಿಸುವಷ್ಟೇ ಹೊದಿಕೆ ಸಾಕು.
*ಮಲಗುವ ಕೋಣೆಯಲ್ಲಿ ಕಣ್ಣಿಗೆ ಹಿತ ನೀಡುವಷ್ಟೇ ಬೆಳಕಿರಲಿ. ಕತ್ತಲ ಕೋಣೆ ನಿದ್ದೆಗೆ ಸಹಕಾರಿ. ಪ್ರಖರ ಬೆಳಕು ನಿದ್ದೆಗೆ ಒಳಿತಲ್ಲ.
*ಮಲಗುವುದಕ್ಕೂ ಸ್ವಲ್ಪ ಮೊದಲು ರಿಲ್ಯಾಕ್ಸ್ ಆಗಿ .
*ಬೇಕಿದ್ದರೆ ಬಿಸಿ ನೀರ ಸ್ನಾನ ಮಾಡಿ.
* ಬೆಚ್ಚನೆಯ ಹಾಲು ಕುಡಿಯಿರಿ. ಬೇಕಿದ್ದರೆ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ.
*ಹಲ್ಲುಜ್ಜಿ ಮಲಗಲು ಮರೆಯದಿರಿ.
* ಬಿಗಿಯಾದ ಬಟ್ಟೆ ಧರಿಸಿ ಮಲಗಬೇಡಿ. ಸಡಿಲ ಉಡುಪು ಧರಿಸಿ. ಹಿತವಾದ ಭಂಗಿಯಲ್ಲಿ ಮಲಗಿ.
* ಹಾಸಿಗೆ ಅನುಕೂಲಕರವಾಗಿಲ್ಲ ಎಂದಾದಾಗ ಹಾಗೆಯೇ ಮಲಗಬೇಡಿ. ಸರಿಪಡಿಸಿಕೊಂಡು ಮಲಗಿ.
* ನಿದ್ದೆ ಬರುತ್ತಿಲ್ಲ ಎಂದಾದರೆ, ಕೆಲ ಸಮಯ ದೀರ್ಘ ಉಸಿರಾಟ ನಡೆಸಿ.
* ದಿಂಬನ್ನು ಸ್ವಲ್ಪ ತಂಪಾಗಿಸಿ ಕೊಳ್ಳಿ. ಬೇಕಿದ್ದರೆ ಫ್ರಿಜ್ ಬಳಿ ಕೆಲ ಸಮಯ ಹಿಡಿಯಿರಿ. ತಂಪನೆಯ ದಿಂಬು ತಲೆಗೆ ತಂಪನೆಯ ಅನುಭವ ನೀಡುತ್ತದೆ. ದೇಹದ ಉಳಿದ ಭಾಗ ಇದನ್ನು ಅನುಸರಿಸುತ್ತದೆ.
* ಮಲಗಿ ೧೦-೧೫ ನಿಮಿಷವಾದರೂ ನಿದ್ದೆ ಬರಲಿಲ್ಲ ಎಂದಾದರೆ ಎದ್ದು ನಿಧಾನ ಓಡಾಡಿ. ಕೆಲ ಸಮಯ ಒಳ್ಳೆಯ ಪುಸ್ತಕ ಓದಿ. ಇಲ್ಲ ಏನಾದರೂ ಬರೆಯಿರಿ. ಇಂಪಾದ ಸಂಗೀತ ಕೇಳಿ. ನಿದ್ದೆ ಬರದಿದ್ದರೂ ಬಲವಂತವಾಗಿ ಹಾಗೆಯೇ ಮಲಗಿ ಹಾಸಿಗೆ ಮೇಲೆ ಹೊರಳಾಡಬೇಡಿ.
* ಇವೆಲ್ಲಕ್ಕಿಂತ ಮುಖ್ಯವಾಗಿ ದಿನವಿಡಿ ಚಟುವಟಿಕೆಯಿಂದ ಕೂಡಿದ್ದು, ಕ್ರಿಯಾಶೀಲರಾಗಿರಿ. ಚಟುವಟಿಕೆಯಿಂದ ಇದ್ದರೆ ದೇಹದಲ್ಲಿ ಅವಶ್ಯಕ ಹಾರ್ಮೋನು ಉತ್ಪತ್ತಿಯಾಗುತ್ತದೆ. ದೇಹದ ಶಕ್ತಿ ವ್ಯಯವಾಗುತ್ತದೆ. ದೇಹದಲ್ಲಿ ಜಢತ್ವ ನೆಲೆಸಿದ್ದರೆ ಶಕ್ತಿ ವ್ಯಯವಾಗುವುದೇ ಇಲ್ಲ. ಪರಿಣಾಮ ದೇಹಕ್ಕೆ ನಿದ್ದೆಯ ಅವಶ್ಯಕತೆ ಬೀಳುವುದಿಲ್ಲ.
* ಮಲಗುವುದಕ್ಕೂ ಮೊದಲು ಕೆಲ ಹೊತ್ತು ಧ್ಯಾನ/ಪ್ರಾರ್ಥನೆ ಮಾಡುವ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದಾಗಿ ಮಲಗುವ ಸಮಯದಲ್ಲಿ ಮನಸ್ಸಿನಲ್ಲಿ ಬೇರೆ ಯೋಚನೆಗಳು ಬಂದು ಮನಸ್ಸು ಕಲುಷಿತಗೊಳ್ಳುವ ಸಂದರ್ಭ ಬರಲಾರದು. ಬೇಕಿದ್ದರೆ ಇಂಪಾದ ಸಂಗೀತ ಕೇಳಿ. ಸ್ವಲ್ಪ ಹೊತ್ತು ಸಂಗೀತದ ವಾದ್ಯಗಳನ್ನು ನುಡಿಸಿ. ಮನಸ್ಸು ಪ್ರಶಾಂತವಾಗಬಹುದು.
* ಮಲಗುವ ಮುಂಚೆ ಪಿಷ್ಠ ಅಕ ಇರುವ ವಸ್ತುಗಳ ಸೇವನೆ ಮಾಡಬೇಡಿ. ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಬೇಡ. ಹಿತ, ಮಿತ ಆಹಾರ ಸೇವಿಸಿ. ಪ್ರೋಟಿನ್, ತರಕಾರಿ, ಸ್ವಲ್ಪ ಪ್ರಮಾಣದ ಕೊಬ್ಬು ಊಟದಲ್ಲಿರಲಿ. ಕುರುಕಲು ತಿಂಡಿ, ಮದ್ಯ ಸೇವನೆ, ಕೆಫಿನ್, ನಿಕೊಟಿನ್, ಇನ್ನಿತರ ನಿದ್ದೆ ತಡೆಯುವ ಪಾನೀಯಗಳ ಸೇವನೆ ಬೇಡ.
* ಮಲಗುವುದಕ್ಕೂ ಕನಿಷ್ಠ ಮೂರು ಗಂಟೆಗಳ ಮೊದಲು ಊಟ ಮಾಡಿ.
* ಲಘು ಸಂಗೀತ ಕೇಳುತ್ತಾ ಮಲಗಿದಾಗ, ಮಿದುಳು ಸಂಗೀತಕ್ಕೆ ತಕ್ಕಂತೆ ನಿಧಾನವಾಗಿ ತಲೆದೂಗುತ್ತದೆ. ಹಾಗೆಯೇ ನಿದ್ದೆ ಆವರಿಸುತ್ತದೆ.
* ದೇಹದ ಉಷ್ಣತೆ ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದಾಗ ದೇಹದ ಉಷ್ಣತೆ ಕಡಿಮೆ ಇರುತ್ತದೆ. ರಾತ್ರಿ ವೇಳೆ ಮಲಗುವಾಗ ಹೆಚ್ಚಿರುತ್ತದೆ. ನಿದ್ದೆಗೆ ಜಾರಿದಂತೆ ದೇಹದ ಉಷ್ನತೆ ಕಡಿಮೆಯಾಗುತ್ತಾ ಸಾಗುತ್ತದೆ. ಬಿಸಿ ನೀರ ಸ್ನಾನ ದೇಹದ ಉಷ್ಣತೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ನಂತರ ವೇಗವಾಗಿ ಉಷ್ಣತೆ ತಗ್ಗಲು ಕಾರಣವಾಗುತ್ತದೆ. ನಿದ್ದೆಯ ಮಂಪರಿಗೆ ನಮ್ಮನ್ನು ತಳ್ಳುತ್ತದೆ.
* ಇವೆಲ್ಲಾ ತಂತ್ರಗಳು ವಿಫಲವಾದಾಗ ನೈಸರ್ಗಿಕ ಔಷಧಗಳತ್ತ ಮುಖ ಮಾಡಬಹುದು. ಮೆಲಾಟೊನಿನ್ ಇಂತಹ ಔಷಗಳಲ್ಲಿ ಒಂದು. ಹಾಗೇ ನೋಡಿದರೆ ಮೆಲಾಟೊನಿನ್ ನಮ್ಮ ದೇಹದಲ್ಲಿಯೇ ಉತ್ಪಾದನೆಯಾಗುವ ಹಾರ್ಮೋನ್. ಇದು ರಾತ್ರಿ ವೇಳೆ ಉತ್ಪಾದನೆಯಾಗುವ ಹಾರ್ಮೊನ್. ಇದನ್ನು ’ನಿದ್ದೆಯ ಹಾರ್ಮೊನ್’ ಅಂತಲೂ ಕರೆಯಲಾಗುತ್ತದೆ. ಅಂಧರು, ಅತಿಯಾಗಿ ಬಿಸಿಲಿಗೆ ಮೈಯೊಡ್ಡುವವರು ನಿದ್ದೆಯ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚು. ಕಾರಣ ಇವರಲ್ಲಿ ಮೆಲಾಟೊನಿನ್ ಉತ್ಪಾದನೆ ಕಡಿಮೆ ಎನ್ನುವುದು ಆರೋಗ್ಯ ತಜ್ಞರ ಅಭಿಮತ. ಕ್ಯಾಮೊಲಿನ್, ಅತಿ ಹಳೆಯ ನೈಸರ್ಗಿಕ ಔಷಧ. ಇದು ಆಹ್ಲಾದಕರ ರುಚಿ ಹೊಂದಿದ್ದು, ಬಹುತೇಕ ವೇಳೆ ಚಹ ತರಹ ಸೇವನೆ ಮಾಡಲಾಗುತ್ತದೆ. ಹೊಟ್ಟೆ ಉರಿಯ ಶಮನಕ್ಕೂ ಇದನ್ನು ಬಳಸಲಾಗುತ್ತದೆ. ವ್ಯಾಲೆರಿಯನ್ ಬಳಕೆ ಕೂಡ ರೂಢಿಯಲ್ಲಿದೆ.
- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ

ತುಳು ಸಮ್ಮೇಳನ
ಒಡಿಪು (ಉಡುಪಿ),: ಸಂಸ್ಕೃತಿ ಪನ್ಪಿ ದೈತೊ ಮೂಲ ಬೇರ್ಗ್ ಎಡ್ಡೆ ರೀತಿಡ್ ಆರೈಕೆ ಮಲ್ತ್ದಿಜಿಂದಾಂಡ ಐತೊ ಬುಳೆಚ್ಚಿಲ್ ಸಾಧ್ಯ ಇಜ್ಜಿಂದ್ ಧರ್ಮಸ್ಥಳತೊ ಖಾವಂದೆರಾಯಿನ ಡಾ. ಡಿ. ವೀರೇಂದ್ರ ಹೆಗ್ಗಡೆರ್ ಮದಿಪು ಕೊರ್ಯೆರ್.
ವಿಶ್ವ ತುಳು ಸಮ್ಮೇಳನೊ ಆಶ್ರಯಡ್ ಸನಿಯಾರದಾನಿ ಮುಲ್ತ ಎಂಜಿಎಂ ಕಾಲೇಜ್ದ ಮಜಲ್ದ ಉಳಮೆಯೈಟ್ ಉಂಡುಮಲ್ತಿಂದಿತ್ತಿನಂಚಿನ ಮುದ್ದಣ ಮಂಟಪೊದ ತುಳುನಾಡ ಸಿರಿ ವೇದಿಕೆಡ್ ನಡತ್ತಿನ ತುಳುವೆರೆನ ತುತ್ತೈತ, ಪದ್ದೆಯಿ ಬಂಗಾರ್, ಊರ ಮರ್ದ್ ಕೋಡೆ- ಇನಿ- ಎಲ್ಲೆ ಪಲ್ಪಿ ವಿಚಾರ ಕೂಟೊದ ಉದಿಪನೊ ಲೇಸ್ಡ್ ಪಾತೆರಿಯೆರ್.


ವಿಶ್ವದ ನಾನಾ ಬಾಗೊಲೆಡ್ ಇಪ್ಪುನಂಚಿನ ಮಾಂತಾ ತುಳುವೆರ್ನ್ ಒಟ್ಟು ಮಲ್ತ್ದ್ ಅಕ್ಲೆನ್ ತಂಕ್ಲೆ ಮೂಲ ಸ್ಥಾನೊದಂಚಿ ಒರ ತೋಜಾವುನವು ವಿಶ್ವ ತುಳು ಸಮ್ಮೇಳನೊತ ಉದ್ದೇಶ. ಇತ್ತೆ ನಮ ಓಲುಲ್ಲ, ಎಂಚ ಉಲ್ಲ ಪಂಡ್ದ್ ತೂಪುನೆಡ್ದ್ಲಾ ನಮ ಒಲ್ತು ಬತಿನಕ್ಲುಂದ್ ತೂವೊಡಾಯಿನ ಅಗತ್ಯ ಬೈದಂಡ್. ನಮ ಅಪ್ಪೆ ಬಾಸೆ ತುಳುಕು ದಾನಾಂಡಲಾ ಮಲ್ತ್ಜಿಡ ನನ ದುಂಬಗ್ ಬಾರೀ ಪ್ರಮಾಣದ ಲುಕ್ಸಾನ್ ಎದುರಿಸಾವೊಡಾಯಿನ ಪರಿಸ್ಥಿತಿ ಬರುಂದ್ ಪೋಡಿಗೆ ತೋಪಾಯೆರ್. ಇತ್ತೆಲಾ ನಮ್ಮ ಹಳ್ಳಿದಕ್ಲು ಸಾಂಪ್ರದಾಯಿಕ ತುತ್ತೈತೊಲೆನ್ ತುತೊಂದೆಂದಿಪುನೆನ್ ತೂವೊಲಿಂದ್ ಹೆಗ್ಗಡೆರ್ ಪಂಡೆರ್.











ಸೌಹಾರ್ದ ಬಾಳ್ವೆ: ಏರ್ಯ ಆಳ್ವೆರ್
ತಿಬಿಲಗ್ ಬಾರ್ ಪಾಡ್ದ್ ಅಯ್ತ ಮೇಲ್ಡ್ ಬೊಲ್ಪು ದೀದ್ ಲೇಸ್ನ್ ಉದಿಪನ ಮಲ್ತಿನ ಮಾಮಲ್ಲ ಸಾಹಿತಿ, ಏರ್ಯ ಲಕ್ಷ್ಮೀನಾರಾಯಣ ಆಳ್ವೆರ್, ತುಳು ಬಾಸೆದ ಗೆಲುವು, ಉಳಿವು ಬಗ್ಗೆ ರಡ್ಡನೇ ಚಳುವಳಿ ನಡತ್ತಿನವು ಒಡಿಪುಡು. ಪಣಿಯಾಡಿ ಮುತಾಲ್ಕೆಡ್ ತುಳು ಸಾಹಿತ್ಯ, ಸಂಸ್ಕೃತಿ ಬುಳೆಚ್ಚಿಲ್ಗ್ ಮಲ್ಲ ಆಂದೋಲನನೇ ಆರ್ ಮಲ್ತ್ದಿತ್ತೆರ್. ಕೃಷ್ಣದೇವರಾಯನ ಆಡಳಿತದ ಕಾಲ ಸ್ವರ್ಣಯುಗಂದ್ ಪನೊಲಿ. ಇತ್ತೆ ಅವೇ ಪರಿಸ್ಥಿತಿ ಡಾ. ಹೆಗ್ಗಡೆರ್ನ ಮುಕಾಂತರ ತುಳುಕ್ ಒದಗ್ದ್ ಬೈದಂಡ್. ವಿಶ್ವೊದ ನಾನಾ ಕಡೆಟಿಪ್ಪುನಂಚಿನ ತುಳುವೆರೆನ್ ಒಟ್ಟು ಮಲ್ಪುನ ಮಾಮಲ್ಲ ಕೆಲಸನ್ ಹೆಗ್ಗಡೆರ್ ಮಲತೊಂದುಲ್ಲೆರ್ ಪಂಡೆರ್.

ವರದಿ: ಕಿರಣ್ ಮಂಜನ ಬೈಲು

ಮುಂದೆ ಓದಿ
3:33 PM

ತುಳು ಸಮ್ಮೇಳನ

Posted by ekanasu

ತುಳು ಸಮ್ಮೇಳನ
ವಿಶ್ವ ತುಳು ಸಮ್ಮೇಳನಕ್ಕಾಗಿ ಉಜಿರೆ ಸಿದ್ಧಗೊಳ್ಳುತ್ತಿದೆ. ತುಳು ಸಮ್ಮೇಳನದ ಸಂದರ್ಭಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ತುಳು ಗ್ರಾಮದ ರಚನೆಯನ್ನು ಈ ಕನಸು.ಕಾಂನ ವಿಶೇಷ ಪ್ರತಿನಿಧಿ ಈ ರೀತಿ ಸೆರೆಹಿಡಿದಿದ್ದಾರೆ.










ಮುಂದೆ ಓದಿ

ತುಳು ಸಮ್ಮೇಳನ

ವಿಶ್ವತುಳು ಸಮ್ಮೇಳನ 2009 ಇದರ ಆಮಂತ್ರಣ ಪತ್ರಿಕೆಯನ್ನು ಮಾಚಾರ್ ಗೋಪಾಲ ನಾಯಕ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ, ಯಶೋವರ್ಮ, ಸುಪ್ರಿಯಾ, ಹಷೇಂದ್ರ ಕುಮಾರ್ ಮೊದಲಾದವರಿದ್ದರು.

ಮುಂದೆ ಓದಿ

ಭಾವನಾ
ಕನ್ನಡ ನಾಡಿನೊಳು ಅಲ್ಲೊಂದು ಚಿಕ್ಕ ಊರಿತ್ತಂತೆ. ಆ ಊರಿನಲ್ಲಿ ನೂರಕ್ಕಿಂತ ಕಡಿಮೆ ಮನೆ ಇದ್ದವು. ನಾಲ್ಕೈದು ನೂರು ಮಂದಿ ಆ ಊರಲ್ಲಿಇದ್ದರಂತೆ. ಊರಿನ ಹೊರಗೆ ಹತ್ತಿರದಲ್ಲೇ ಒಂದು ದೊಡ್ಡ ಹಳ್ಳವಿತ್ತು. ಮುನ್ನೂರ ಅರವತ್ತೈದು ದಿನಗಳೂ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳದ ತುಂಬಾ ಈಚಲ, ಕಾರೆ ಗಿಡ, ಮಾವಿನ ಮರ, ತೆಂಗಿನ ಮರ, ಬಾರೆ ಮರ ಇನ್ನೆಂತಂತದ್ದೋ ಮರಗಳು. ಮರದ ತುಂಬಾ ಹಣ್ಣುಗಳಿರುತ್ತಿದ್ದವು. ಹಳ್ಳದ ತುಂಬಾ ನೂರಾರು ಬಳ್ಳಿಯ ಪೊದೆಗಳು. ಗುಂಗಿ ಗೂಯ್ ಎಂದು ಸದ್ದು ಮಾಡುತ್ತ ಹೂವಲ್ಲಡಗಿದ ಬಂಡನ್ನು ಹೀರಲು ಬರುತ್ತಿದ್ದವು. ಜೇನು ಹುಳು ಮನೆ ಕಟ್ಟಿ ಬಂಡು ತಂದು ಜೇನುತುಪ್ಪ ಕೂಡಿಡುತಿದ್ದವು. ಜೇನು ಕಿತ್ತು ಹುಡುಗರೆಲ್ಲಾ ತಿನ್ನುತಿದ್ದರು. ಸರ ಸರನೆ ಸದ್ದು ಮಾಡುತ್ತ ಹರಿದೋಗುತ್ತಿದ್ದ ಹಾವುಗಳು. ಹಳ್ಳದ ಜೆಬ್ಬು ಹುಲ್ಲಲ್ಲಿ ಎತ್ತಲೂ ಹೋಗದೆ ನಿಂತು ಮೇಯುತ್ತಿದ್ದ ಹಸು ಎಮ್ಮೆಗಳು. ಒಂದಗಳಿಗೆ, ಕತೆಯನ್ನು ಬರೆಯಲು ಮುಂದಾಗಿದಿನಿ ಅಂತ ಮೂದಲಿಸಬೇಡಿ. ನನ್ನೂರಿ ಇಂದಿನ ಪಾಡು ನೋಡಿ ನನ್ನೊಳಗೆ ಹಬ್ಬಿರಿರುವ ನೋವನ್ನು ನಿಮ್ಮ ಮುಂದೆ ಹೇಳಿಕೊಳ್ಳಲು ಮುನ್ನುಡಿ ಬರೆಯುತ್ತಿರುವೆ ಅಶ್ಟೆ.

ಹವುದು ಮೇಲೆ ನಾನು ಬರೆದಿರುವ ಒಂದೊಂದೂ ಮಾತು ದಿಟವಾಗಿತ್ತು. ಅದೊಂದು ಕಲ್ಪನೆಯಲ್ಲ. ನಮ್ಮೂರ ಹಳ್ಳ ತುಂಬಿ ಹರಿಯುತ್ತಿತ್ತು. ನಮ್ಮೂರಿನ ಹಳ್ಳ ಬತ್ತಿದ್ದೂ ಯಾರಿಗೂ ಗೊತ್ತಿರಲಿಲ್ಲ. ಇದು ತುಂಬಾ ಹಳೆಯ ಮಾತೇನಲ್ಲ. ನಾನು ಹದಿನೈದು ವರುಶಗಳ ಹಿಂದೆ ಎಂಟು ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದೆ ಆವಾಗಿನ ಮಾತು. ಶಾಲೆಗೆ ಹೋಗುವಾಗ ಒಮ್ಮೆಮ್ಮೆ ಹಳ್ಳ ದಾಟಲಾರದಶ್ಟು ತುಂಬಿ ಹರಿಯುತ್ತಿತ್ತು. ಅವತ್ತು ಮಳೆರಾಯನ ಹಾರೈಕೆಯಿಂದ ನಮಗೆ ರಜೆ. ಒಮ್ಮೆಮ್ಮೆ ನಮ್ಮೂರಲ್ಲಿ ಒಂದನಿಯೂ ಮಳೆ ಬೀಳುತ್ತಿರಲಿಲ್ಲ ಆದರೆ ಹಳ್ಳ ಬೋರೆಂದು ತುಂಬಿ ಬರುತ್ತಿತ್ತು. ಹಳ್ಳ ಊರಿಂದ ದೂರವೇನಿರಲಿಲ್ಲ. ಅಲ್ಲೇ ಹತ್ತಿರದಲ್ಲೇ ಇತ್ತು. ಜೋರಾಗಿ ಊರಲ್ಲಿ ನಿಂತು ಕೂಗಿದರೆ ಹಳ್ಳದ ಹತ್ತಿರ ನಿಂತಿರುವವರಿಗೆ ಕೇಳಿಸುತ್ತಿತ್ತು. ಆ ಹಳ್ಳ ನನ್ನೂರಿನ ಬದುಕಾಗಿತ್ತು. ಹಳ್ಳದ ದಂಡೆಯ ಸುತ್ತೆಲ್ಲಾ ಇರುವ ಹೊಲದಲ್ಲಿ ಮರಗಳು ಹಸಿರಿನಿಂದ ಪಿಳಿಗುಟ್ಟುತ್ತಿದ್ದವು. ಯಾರು ಎಂದೂ ನೀರು ಹಾಯಿಸುತ್ತಿರಲಿಲ್ಲ. ಆದರೂ ಹಳ್ಳದ ಹತ್ತಿರ ಇರುವ ಸುಡಗಾಡಿನಲ್ಲಿ ಬೆಳದ ಹತ್ತಾರು ತೆಂಗಿನ ಮರಗಳು ಕಾಯಿ ಹೊತ್ತು ತೂಗಾಡುತ್ತಿದ್ದವು.

ಅಂದಿನ ನನ್ನೂರನ್ನು ನನ್ನೂರಿನ ಸಿರಿತನವನ್ನು ಎಶ್ಟು ಹೇಳಿದರೂ ಸಾಕಾಗದು. ಅಂದಿನ ಸಿರಿ ಇಂದು ನೆನಪು ಮಾತ್ರ. ಸಿರಿಯಿಂದ ಮೆರೆದಿದ್ದ ಊರು ಇಂದು ಬರಡಾಗಿದೆ. ಅಂದು ತುಳುಕುತಿದ್ದ ಹಳ್ಳದಲ್ಲಿ ಹಕ್ಕಿ ಗುಟುಕಿಸಲು ಒಂದು ಸೆರೆ ನೀರಿಲ್ಲ. ಮೋಪಾಗಿ ಬೆಳೆದು ಹೆಗ್ಗಾಡಾಗಿದ್ದ ಊರಿನ ತೋಪುಗಳ ಮೋಟುಕೂಡಾ ಕಾಣಸಿಗದಂತಾಗಿದೆ. ಸುಡುಗಾಡಲ್ಲಿ ತುಗಾಡುತ್ತಿದ್ದ ತೆಂಗಿನ ಗರಿಗಳ ಚಾಮರ ಇಂದು ನಿಂತು ಮೂಕವಾಗಿದೆ. ಎಲ್ಲೆಲ್ಲೂ ಕಂಗು. ಮಣ್ಣು ಹುಡಿಯಾಗಿ ಕಂಗಿನಲಿ ಬೆರೆತು ಹಸನವಾಗಿದ್ದ ಬದುಕೇ ಹಳಸಿ ಹೋಗಿದೆ. ಊರು ಸಣ್ಣದಾಗಿದ್ದರೂ ಇಪ್ಪತ್ತಕ್ಕೂ ಹೆಚ್ಚು ಬಾವಿಗಳಿದ್ದವು. ಕೈಚಾಚಿದರೆ ಸಿಗುವಶ್ಟು ನೀರಿನಿಂದ ತುಳುಕಾಡುತ್ತಿದ್ದವು. ಇಂದು ಹಾಳಾದ ಬಾವಿಯ ಗುರುತು ಮಾತ್ರ ಉಳಿದಿದೆ. ಮಳೆಗಾಲದಲ್ಲಿ ಹೊಲದಲ್ಲಿ ಎಲ್ಲೆಲ್ಲೂ ವರತೆಗಳು ಉಕ್ಕಿ ಬರುತ್ತಿದ್ದ ನೀರು ಇಂದು ಇತಿಹಾಸವಾಗಿದೆ.

ಅಂದು ನನ್ನೂರಲ್ಲಿ ಎಲ್ಲಾ ಮನೆಯಲ್ಲಿ ವಿದ್ಯುತ್ ದೀಪದ ಬೆಳಕಿರಲಿಲ್ಲ. ಚಿಮನಿ ಎಣ್ಣೆಯ ಬುಡ್ಡಿ ಇದ್ದವು. ಇಂದು ಊರಿನ ಹಾದಿ ಹಾದಿಗೂ ಬೀದಿ ದೀಪದ ಕಂಪಗಳಿವೆ. ಹೆಚ್ಚು ಕಡಿಮೆ ಎಲ್ಲಾ ಮನೆಯಲ್ಲಿ ಕರೆಂಟಿದೆ. ಊರಿಗೊಂದು ಟೀವಿ ಇರಲಿಲ್ಲ. ಇಂದು ಎಲ್ಲರೂ ಕಣ್ಣು ಪಿಳಿಕಿಸದೇ ದಾರವಾಹಿಯನ್ನು ತಮ್ಮ ತಮ್ಮ ಮನೆಯಲ್ಲೇ ನೋಡುವಚಿತಾಗಿದೆ. ಊರಿಗೋಂದು ಪೋನ್ ಇರಲಿಲ್ಲ ಇಂದು ಊರಲ್ಲಿರೋ ಕಾಲುಮಂದಿಯ ಕೈಯಲ್ಲಿ ಕಿರಿಚಾಡುವ ನಡೆದೂರುಲಿ ಇವೆ. ಮನೆಗೊಂದು ಜೊತೆ ಎತ್ತು ಜೊತೆಗೊಂದು ಎತ್ತಿನಗಾಡಿ ಇದ್ದವು. ಎತ್ತು ಎತ್ತಲೋ ಇರುವ ಕಸಾಯ ಕಾನೆಯ ಮನೆಸೇರಿ ಮಾಸವಾಗಿ ಯಾರೋ ಒಡಲು ಸೆರಿವೆ. ಎತ್ತಿನ ಬಂಡಿ ಉಳತಿಂದು ಮುರಿದು ಮೂಲೆಗುಂಪಾಗಿವೆ. ಹೊಗೆ ಉಗಳುವ ಟ್ರಾಕ್ಟರ್ ಅರಚಾಡುತ ಊರನ್ನು ಹೊಕ್ಕಿದೆ. ಕಲ್ಲೆಣ್ಣೆ ಬೆಲೆ ಬೆಟ್ಟಕ್ಕೇರಿದರೂ ಪರಿವಿಲ್ಲದಂತೆ ಮನೆಗೊಂದು ಬೈಕುಗಳು ಬಂದು ನಿಂತಿವೆ. ಅಂದು ಏತ ಹೊಡೆಯುತ್ತ ಹಾಡುತ್ತಿದ್ದ ಹಾಡಿನ ಸೊಗಸು ಎಲ್ಲೆಲ್ಲೂ ತುಂಬಿತ್ತು. ಇಂದು ನೆಲವನ್ನೇ ಹೀರುವ ಸಬ್ಮರ್‍ಸಿಬಲ್ ಮೋಟರ್ ಗುಂಡಿ ಹೊತ್ತಿ ಕೂತಿರುವ ಮಂದಿಯ ಕಾಡು ಹರಟೆ ಮಾತ್ರ ಉಳಿದಿದೆ. ಊರಿನ ಮಂದಿ ಇಂತಹ ಸೋಕಿಯ ಮಂಪರಿನಲ್ಲಿ ತೋಲಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಕೊಟ್ಟ ಹೆಸರು ಆದುನಿಕ ಬದುಕು, ಅಬಿವೃದ್ದಿ.

ಇಂದು ನನ್ನೂರಲ್ಲಿ ಹತ್ತನೇ ತರಗತಿ ಓದಿದವರಾರು ಕೈಮುಟ್ಟಿ ಒಕ್ಕಲುತನದ ಕೆಲಸ ಮಾಡರು. ಎಲ್ಲರದೂ ಒಂದೇ ನಿಟ್ಟು ಬೆಂಗಳೂರಗೆ ಹೋಗಬೇಕು. ಗಾರ್‍ಮೆಂಟ್ ನಲ್ಲಿ ಹಗಲಿರುಳು ನಿದ್ದೆ ಇಲ್ಲದೆ ಓಟಿ ಮಾಡಿ ಹತ್ತಾರು ರೂಪಾಯಿ ಕಾಸು ಗಳಿಸಿ ಉಳಿಸಬೇಕು. ಬಣ್ಣ ಬಣ್ಣದ ಬಟ್ಟೆ ಕಾಲಿಗೆ ಎತ್ತರದ ಒಂದು ಜೊತೆ ಬೂಟು ಕಯ್ಗೊಂದು ನಡೆದೂರುಲಿ (ಮೊಬೈಲ್) ದಕ್ಕಿಸಿಕೊಳ್ಳಬೇಕು. ಎಲ್ಲರ ತಲೆಯೊಳಗೂ ಬರಿ ಇಂತಹುದೇ ಕನಸುಗಳು ತೇಲಿ ತೇಲಿ ಮುತ್ತುತ್ತಿವೆ. ಇದೆಕ್ಕೆಲ್ಲ ಮತ್ತದೇ ಹೆಸರು ಅಬಿವೃದ್ದಿ. ಬೆಂಗಳೂರಿನಲ್ಲಿ ಕಾಲುಚಾಚಲಾರದಶ್ಟು ಸಣ್ಣ ಮನೆಯಾದರೂ ಅದರಲ್ಲೇ ನಾಲ್ಕುರು ಹುಡುಗರು ಸೇರಿಕೊಂಡು ಬದುಕು ನಡೆಸಿದರೂ ಪರವಾಗಿಲ್ಲ. ಹಳ್ಳಿಯನ್ನು ತೊರೆದು ಪಟ್ಟಣ ಸೇರಿರುವ ನಮ್ಮಂತವರಿಗೇನು ಕಡಿಮೆಯಿಲ್ಲ.

ಈ ಎಲ್ಲಾ ಅಬಿವೃದ್ದಿಯ ತರಾತುರಿಯಲ್ಲಿ ನಾವು ಕಳೆದುಕೊಂಡಿರುವುದು ಏನು? ಯಾರೊಬ್ಬರಿಗೂ ಅರಿವಿಲ್ಲ. ತಂತ್ರಗ್ನಾನದ ಹುಚ್ಚಾಟಕೆ ಹುಟ್ಟಿದ್ದು ಕೊಳವೆ ಬಾವಿ. ಇಂದು ನೆಲವನ್ನು ಎಲ್ಲಿಬೇಕೆಂದಲ್ಲಿ ಕೊರೆದು ತೂತುಮಾಡಿದ್ದೆವೆ. ನೆಲದ ಒಡಲ್ಲಿ ಅಡಗಿದ್ದ ಬದುಕಿನ ಸಿರಿಯಾಗಿದ್ದ ನೀರನ್ನು ಹೀರಿ ಹೀರಿ ಹಾಕುತ್ತಿದೆ. ಹೆಚ್ಚು ಹೆಚ್ಚು ಹಣದ ಹಂಬಲಕೆ ಒಕ್ಕಲಿಗರು ಶರಣಾದರು. ಹಸಿರು ಕ್ರಾಂತಿಯ ಹೈಬ್ರೀಡ್ ಬೀಜಗಳ ನೀರಿನ ದಾಹ ತೀರಿಸಲು ನೆಲೆಯ ಒಡಲಾಳದ ನೀರನ್ನೆಲ್ಲಾ ಹೀರಿಯಾಯಿತು. ನಾಮುಂದು ತಾಮುಂದು ಎಂಬಂತೆ ಸಿಕ್ಕ ಸಿಕ್ಕಲ್ಲಿ ಬೋರು ಕೊರೆಸಿದ್ದೇ ಕೊರೆಸಿದ್ದು. ಹುಚ್ಚಾಟಕೆ ತೆರೆದ ಬಾವಿಯ ನೀರು ಪಾತಾಳಿಕ್ಕಿಳಿಯಿತು. ಇಂದು ಒಂದು ಗಟುಕು ನೀರಿಗೂ ಪರದಾಡುವಂತಾಗಿದೆ. ಎಗ್ಗಿಲ್ಲದೆ ಬಳಸಿದ ರಸಾಯನಿಕ ಗೊಬ್ಬರಗಳ ಬಳಕೆಗೆ ಸಿಹಿಯಾಗಿದ್ದ ನೀರು ಉಪ್ಪಡರಿ ಕಲಗಚ್ಚಾಗಿದೆ. ಈ ಅಬಿವೃದ್ದಿಯ ಹುಚ್ಚಾಟಕ್ಕೆ ಬದುಕಿನ ಬುನಾದಿಯಾಗಿರುವ ನೀರು ಕಾಡನ್ನು ಕಳೆದು ಕೊಂಡಾಗಿದೆ. ಮೊಬೈಲ್, ಬೈಕ್, ಟ್ರಾಕ್ಟರ್, ಟೀವಿಗಳೇ ಸುಕದ ಸೋಪಾನವಾಗಿವೆ. ಇವುಗಳೇ ನಮ್ಮ ಬದುಕನ್ನು ಅಳೆಯುವ ಮಟ್ಟಕ್ಕೆ ಬಂದು ನಿಂತಿದ್ದೇವೆ.

ಕರೆಂಟು ಕಣ್ಣು ಮುಚ್ಚಾಲೆಯಾಡುತ್ತಿದೆ. ಹತ್ತು ಅಡಿಯಲ್ಲಿ ಸಿಗುತ್ತಿದ್ದ ನೀರು ಮುನ್ನೂರು ಅಡಿಯ ಆಳಕ್ಕಿಳಿದಿದೆ. ಒಂದು ದಿನ ಕರೆಂಟ್ ಕಣ್ಣು ಮುಚ್ಚಿದರೂ ಊರು ನೀರಿಲ್ಲದೆ ಉಸಿರುಗಟ್ಟುತ್ತದೆ. ನೀರಿಗಾಗಿ ಹತ್ತಾರು ಗಾವುದ ಅಲೆಯಬೇಕು. ನಾನು ಹತ್ತಿ ಮರಕೋತಿಯಾಡುತ್ತಿದ್ದ ಮರ ಇಂದಿಲ್ಲ. ಹುಳಿಯಾಗಿದ್ದರೂ ಕಂತೆ ಕಂತೆ ಹಣ್ಣನ್ನು ಕೊಡುತ್ತಿದ್ದ ಸೂಜಿ ಬಾರೆ ಮರ ಎಂದೋ ತುಂಡಾಗಿದೆ. ಹಳ್ಳದ ಎಡ ಮಗ್ಗಲಿನಲ್ಲಿದ್ದ ಆಳದ ಗುಂಡಿಯೊಳಗೆ ಈಜುತ್ತಿದ್ದ ಮೋಜು ಈಗ ನೆನಪು.

ಡಾಂಬಾರ್ ದಾರಿಯ, ಕಾಕ್ರೀಟ್ ನಾಡಿನ ದೂರದ ದೊಡ್ಡ ಪಟ್ಟಣದಲ್ಲಿ ಬಣ್ಣದ ಬದುಕು ನಡೆಸುವ ನನ್ನೋಳಗೆ ಅದೇ ನೆನಪು. ಹಳ್ಳದಲ್ಲಿ ಈಜಿದ್ದು, ಜೇನು ಕೀಳುವಾಗ ಕಡಿಸಿಕೊಂಡು ಊದಿಕೊಂಡಿದ್ದ ಮೂತಿ, ಬಿದ್ದ ತೆಂಗಿನಕಾಯನ್ನು ಹಳ್ಳದ ದಂಡೆಯಲ್ಲೇ ಕುಟ್ಟಿ ತಿನ್ನುತ್ತಿದ್ದ ನೆನಪು. ಊರಿನ ಬದುಕಾಗಿದ್ದ ಹಳ್ಳದ ನೆನಪು. ಹಸಿರಿನ ನೆನಪು. ನೆನಸಿಕೊಂಡು ಊರಿಗೋದರೆ ಹಳ್ಳದಲ್ಲಿ ನೀರಿಲ್ಲ. ಮರದ ಹಸಿರು ಮಾಸಿಯೋಗಿದೆ. ಎಲ್ಲೆಲ್ಲೂ ಮಣ್ಣು ಹುಡಿಯಾಗಿ ಗಾಳಿಜೊತೆ ಸೇರಿ ಬರುವ ಬೆಂಗಾಡು. ಬಿಸಿಲ ಮಳೆ. ಹೊಸ ಹೊಸ ತಂತ್ರಗ್ನಾನ ಬಳಿಕೊಂಡು ಕೆಲಸಮಾಡುವೆನಾದರೂ ಏನೋ ಸಿರಿಯನ್ನು ಕಳೆದುಕೊಂಡ ಸಂಕಟ ನಿಂತಲ್ಲಿ ಕುಂತಲ್ಲಿ ತಲೆಯಲ್ಲಿ ಸುಳಿಯುವುದೊಂದೇ ನೆನೆಪು ನಮ್ಮೂರ ಹಳ್ಳ, ಬೆಟ್ಟ ಹಸಿರು ಕಾಡು. ಇಲ್ಲ ಅದಾವುದೂ ಇಂದು ಉಳಿದಿಲ್ಲ. ಊರಿನ ಇನ್ನೊಂದು ಹೆಸರು ಬೆಂಗಾಡು. ನಮ್ಮ ಬದುಕಿನ ಸಿರಿ ದೂರವಾಗಲು ಯಾರು ಹೊಣೆ? ನಮ್ಮೆಲ್ಲರ ಕೈಯಲ್ಲಿ ಮೊಬೈಲ್ ಇದೆ. ಮನೆಯಲ್ಲಿ ಟೀವಿ ಇದೆ. ಗಾಡಿ ಇವೆ. ಇನ್ನೇನೋ ನಮ್ಮ ಮನೆ ಹೊಕ್ಕಿವೆ.

ಇವು ಯಾವು ನಮ್ಮಲ್ಲಿ ಇಲ್ಲದಿದ್ದರೂ ಬದುಕು ಹಸನವಾಗಿ ನಡೆಯುತ್ತದೆ. ಯಾವುದನ್ನು ಕಳೆದು ಕೊಂಡರೆ ಬದುಕು ನಿಂತು ಹೊಗುವುದೋ ಅದನ್ನೇ ಕಳೆದುಕೊಳ್ಳುತ್ತಿದೆ ಊರು. ಆದರೆ ಯಾರಿಗೂ ಅರಿವಿಲ್ಲ. ಏನೋ ಕಳೆದುಕೊಳ್ಳುತ್ತಿರುವ ಅರಿವಾಗುತ್ತಿರುವ ನಾನು ಇಂದು ಗುಲಾಮ. ಹಣದ ಬಲೆಯೊಳಗೆ ಬಿಗಿದುಕೊಂಡು ಬಂದಿಯಾದವನು. ಆದರೂ ಆ ಊರಿನ, ಆ ಹಳ್ಳದ, ಆ ಹಸುರಿನ ಸಿರಿಯ ನೆನಪಿಗೆ ಯಾರ ಹಂಗೇನು? ತಲೆಯೊಳಗೆ ಸುಳಿದು ನೋಯಿಸುತಿದೆ. ಕುರುಡು ಹಣದ ಹಂಬಲದೊಳಗೇ ಒಂದು ಕನಸು ಕಣ್ಣೊಳಗೆ ಬಂದು ಇಣುಕುತ್ತಿದೆ. ಮತ್ತೆ ನನ್ನೂರಿಗೆ ಮರಳಿ ಆ ಊರಿನ ಹಳ್ಳದ ಸಿರಿಯನ್ನು ಮರಳಿ ತರುವ ಕನಸು. ಬೆಂಬಿಡದೇ ಬೆನ್ನತ್ತಿ ಕೂತಿದೆ. ಕನಸಿನೊಂದಿಗೆ ಬಂದಾವರಿಸಿದೆ ಎದೆಯೊಳಗೆ ಒಂದು ದಿಗಿಲು.

ಕನಸು ಬಿತ್ತುತ್ತಿದೆ ನನ್ನೊಳಗೆ ಊರ ಸಿರಿಯನ್ನು ಮರಳಿಪಡೆಯುವ ಬೆಳಗನ್ನು. ಆ ಬೆಳಗಿನ ಹಾದಿಯಲ್ಲಿ ಮೂಡಿವೆ ಹತ್ತಾರು ಬರೆವಸೆಗಳು. ಒಂದು ಹುಲ್ಲಿನ ಕ್ರಾಂತಿಯ ಮಸನೋಬ ಪುಕುವೊಕೋ ತೋರಿಸಿದ್ದಾರೆ ಅಂತಹ ಬರವಸೆಯ ಹಾದಿ. ಆ ಬರವಸೆ, ಕನಸು ನನಸಾದರೆ ಆ ಹಳ್ಳದ ದಂಡೆಗೆ ನಮ್ಮವರಾದ ನಿಮ್ಮನ್ನು ಕರೆದೊಯುವೆ. ಇದೇ ನನ್ನ ನಂಬುಗೆ. ನೆನಪು ಕನಸುಗಳು ಬೆರೆತು ಮನದೊಳಗೆ ಕಾಡುತಿವೆ. ನನಗೆ ಕಾಡುವ ಈ ನೆನಪು ಕನಸುಗಳೇ ಎಲ್ಲರನ್ನೂ ಕಾಡಲಿ. ಕಳೆದುಕೊಂಡ ಸಿರಿಯನ್ನು ಬೇಗ ಪಡೆಯುವ ಹಂಬಲದಿಂದ ಈ ಹುಚ್ಚು ಹರಿಕೆ.

ಕುಮಾರಸ್ವಾಮಿ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೈಂದೂರಿನಲ್ಲೊಂದು ಭೀಕರ ಅಪಘಾತ
ಉಡುಪಿ: ಬೈಂದೂರು ಸಮೀಪದ ನಾಯಕನಕಟ್ಟೆ ಬಳಿ ಗುರುವಾರ ರಾತ್ರಿ 9.15ರ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಗಂಭೀರ ಗಾಯಗೊಂಡ ಈರ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಖಾಸಗಿ ಬಸ್ ಮತ್ತು ಟಾಟಾ ಸುಮೊ ಮುಖಾಮುಖಿ ಢಿಕ್ಕಿ ಸಂಭವಿಸಿದೆ. 4 ಮಂದಿ ಪುರುಷರು ಹಾಗೂ ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಈರ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.ಭಟ್ಕಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಕುಂದಾಪುರ ಕಡೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಟಾಟಾ ಸುಮೊಗೆ ಢಿಕ್ಕಿ ಹೊಡೆದ ಪರಿಣಾಮ ಸುಮೊದಲ್ಲಿದ್ದರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಭಟ್ಕಳ ನಿವಾಸಿಗಳು ಎಂದು ಬೈಂದೂರು ಪೊಲೀಸರು ತಿಳಿಸಿದ್ದಾರೆ.
ಮೃತರಾದವರು ಪ್ರತ್ಯೇಕ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.

ವರದಿ: ಕಿರಣ್ ಮಂಜನಬೈಲು

ಮುಂದೆ ಓದಿ

ತುಳು ಸಮ್ಮೇಳನ

ವಿಶೇಷ ವರದಿ: ಹರೀಶ್ ಕೆ.ಆದೂರು

ಉಜಿರೆ: ಏನೇ ಹೇಳಿ... ಧರ್ಮಸ್ಥಳದ ಯಾವುದೇ ಒಂದು ಕಾರ್ಯವಿರಲಿ ಅದೊಂದು `ಮಾದರಿ' ಇದ್ದಂತೆ... ಇದು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಅದು ಸತ್ಯ ಕೂಡಾ... ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಏರ್ಪಡಿಸುತ್ತಿರುವ ವಿಶ್ವತುಳು ಸಮ್ಮೇಳನ ಕೂಡಾ ಅದೇ ರೀತಿ ಮೂಡಿಬರಲಿದೆ. ಅದಕ್ಕೆ ಸಾಕ್ಷಿಯೇ ಇಡೀ ಉಜಿರೆಗೆ ಉಜಿರೆಯೇ ಇಂದು `ತುಳು ಸಂಸ್ಕೃತಿಯ ಕೇಂದ್ರ'ವಾಗಿ ಮಾರ್ಪಾಡಾಗುತ್ತಿರುವುದು! ಇವುಗಳಲ್ಲಿ ಮುಖ್ಯವಾದುದು `ತುಳುಗ್ರಾಮ'



ಏನಿದು ತುಳುಗ್ರಾಮ?



ವಾಸ್ತವವಾಗಿ ಅದೊಂದು ಸುಂದರ ತೋಟ... ಕಂಗು , ತೆಂಗು... ಅಲ್ಲಿಗೆ ಪ್ರವೇಶಿಸಬೇಕಾದರೆ ಸೊಂಪಾಗಿ ಬೆಳೆದ ತೇಗದ ಮರದ ತೋಪನ್ನು ದಾಟಿಹೋಗಬೇಕು. ಗೋಧೂಳಿಯ ಸಮಯವಾದರೆ ಸೂರ್ಯ ಕೆಳಜಾರುತ್ತಿರುವ ದೃಶ್ಯ ಅಲ್ಲಿರುವ ಕರ್ರಗಿನ ಕಲ್ಲುಗಳ ಮಧ್ಯೆ ಕಾಣಸಿಗುತ್ತದೆ...ಅಲ್ಲೇ ಬಲಕ್ಕೆ ಹೊರಳಿದರೆ ಇಳಿಜಾರ ಪ್ರದೇಶದಲ್ಲಿ ಹಲವಾರು ನಿರ್ಮಿತಿಗಳು... ಫಕ್ಕನೆ ನೋಡಿದರೆ ಯಾವುದೋ ಸಿನೆಮಾ ಶೂಟಿಂಗ್ ಗಾಗಿ ಸೆಟ್ ಹಾಕಿದ್ದಾರೋ ಎನ್ನಿಸದಿರದು... ಗೋಣಿಚೀಲ, ಮರದ ರೀಪುಗಳು, ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿ ನಿರ್ಮಿಸಲ್ಪಟ್ಟ ಶ್ಯಾನುಭೋಗರ ಮನೆ, ವೈದ್ಯರ ಮನೆ, ನಲಿಕೆಯವರ ಗುಡಿಸಲು, ದೇಗುಲ, ಭಜನಾ ಮಂದಿರ, ಪುಟ್ಟ ಶಾಲೆ, ಪಟ್ಟಣದ ಚಿತ್ರಣ ಕಲ್ಪಿಸುವ ಒಂದು ಪುಟ್ಟ ಬೀದಿ...ಅಲ್ಲೆಲ್ಲಾ ಲಾಟೀನು ರಿಪೇರಿಯ ಅಂಗಡಿ,ಕಲಾಯಿ ಪಾತ್ರೆಯ ಅಂಗಡಿ, ಬಡಗಿ ಕೊಟ್ಟಿಗೆ, ಕಮ್ಮಾರನ ಠಂಕಸಾಲೆ, ಸೈಕಲ್ ರಿಪೇರಿ ಅಂಗಡಿ, ಚರ್ಮಕುಟೀರ,ತರಕಾರಿ ಮಾರುವ ಸಣ್ಣ ಅಂಗಡಿ,ಗೂಡಂಗಡಿ ಹೀಗೆ ಇನ್ನನೇಕ...ಒಟ್ಟಿನಲ್ಲಿ ನಮ್ಮ ಹಿರಿಯರ ಕಾಲದ ನೆನಪನ್ನು ಮತ್ತೆ ಜನತೆಯೆದುರು ತಂದಿಡುವ ಒಂದು ಉತ್ತಮ ಪ್ರಯತ್ನ...




ಸಾಕ್ಷಾತ್ ನಮ್ಮ ಹಿರಿಯರ ನೆನಪನ್ನು ಸಾಕ್ಷಾತ್ಕರಿಸುವ `ತುಳುಗ್ರಾಮ'ವೊಂದರ ನಿರ್ಮಾಣ...ಶ್ಯಾನುಭೋಗರ ಅಂತರ ಚಾವಡಿ ಮನೆಯಿಂದ ಹಿಡಿದು ಪ್ರತಿಯೊಂದು ಪರಂಪರೆಯ ಆಚರಣೆಗಳನ್ನು ಮತ್ತೆ ಯುವಜನತೆಗೆ ನೆನಪಿಸುವ ಕಾರ್ಯ ತುಳುಗ್ರಾಮದ ಮೂಲಕ ನಡೆಯಲಿದೆ.
ಅಲ್ಲಿ ಏತನೀರಾವರಿಯ ಮಾದರಿಯಿದೆ... ಮೀನು, ಬಲೆ ನೇಯುವ ನೇಕಾರರ ಜೀವನ ಶೈಲಿ ಬಿಂಭಿಸುವ ವ್ಯವಸ್ಥೆಯಿದೆ...ಹಳ್ಳಿ ಹಳ್ಳಿಗಳಲ್ಲಿ ಹಳ್ಳಿಗರ ಮನಸೂರೆಗೊಳಿಸುವ ಯಕ್ಷಗಾನದ ಅಬ್ಬರವಿದೆ...ಹೀಗೆ ಅತ್ಯಂತ ಚೊಕ್ಕವಾಗಿ ತುಳುಗ್ರಾಮದ ರಚನೆಕಾರ್ಯ ನಡೆಯುತ್ತಿದೆ.
ಸುಮಾರು ಐದು ಎಕ್ಕರೆಗಳ ವಿಶಾಲ ಪ್ರದೇಶದಲ್ಲಿ ಈ ತುಳುಗ್ರಾಮವನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಧರ್ಮಸ್ಥಳದ ಹೇಮಾವತೀ ವಿ.ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯ ನಡೆಯುತ್ತಿದೆ.ಸಿನೆಮಾ ಸೆಟ್ ನಿರ್ಮಿಸುವ ನುರಿತ ಕಲಾವಿದರೇ ಈ ತುಳುಗ್ರಾಮದ ಸೆಟ್ ವ್ಯವಸ್ಥೆಗೊಳಿಸುತ್ತಿದ್ದಾರೆ. ಜೊತೆಗೆ ಜಿಲ್ಲೆಯ ಕಲಾವಿದರ ಮಾರ್ಗದರ್ಶನವಿದೆ.

ಮುಂದೆ ಓದಿ

ತುಳು ಸಮ್ಮೇಳನ

ಉಜಿರೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಪೂರ್ವಭಾವೀ ಸಮಾಲೋಚನಾ ಸಭೆ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಎಂ.ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ನಡೆಯಿತು.




ಮುಂದೆ ಓದಿ
| | |Home