ವೈವಿಧ್ಯ
ಹೊಸವರುಷ ಅಂದಾಗ ಹೇಳಿಕೊಳ್ಳಲಾಗದ ಹುರುಪು, ಜಗತ್ತನ್ನೇ ಗೆದ್ದ ಸಂಭ್ರಮ, ಏನೂ ಮಾಡಬಲ್ಲೆ ಅನ್ನೋ ಆತ್ಮವಿಶ್ವಾಸ,ಮತ್ತೆ ಪ್ರತೀಹೆಜ್ಜೆಯಲ್ಲೂ ಕಾಡುವಂತಹ ನೆನಪು. ಜನವರಿ ಒಂದರಂದು ಕಾಲೇಜಿನ ಕರಿಹಲಗೆಯಲ್ಲಿ ದಿನಾಂಕ ಬದಲಾಗಿರುತ್ತದೆ. ಎಲ್ಲರೂ ಹಸ್ತಚಾಚಿ ಮುದ್ದುನಗೆಯಿಂದ ಶುಭಾಷಯಗಳು ಅಂತನ್ನುತ್ತಿರುತ್ತಾರೆ. ಇವತ್ತು, ನಿನ್ನೆ, ನಾಳೆಗಳ ಮದ್ಯೆ 365 ದಿನ ಕಳೆದುಹೋಯಿತು. ಅಂದರೆ ಒಂದು ವರುಷ. ನಾವು ಬದುಕುಳಿಯುವ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾಯಿತು. ಒಂದು ವರುಷ ಅಂದರೆ ಹೊರಲಾಗದ ಮೂಟೆ. ಕಾರಣ ಬತ್ತಳಿಯದ ನೆನಪು, ಮರೆಯಲಾಗದ ನೋವು, ಹೇಳಿಕೊಳ್ಳಲಾಗದ ನೋವು, ಹಂಚಿಕೊಂಡ ಸುಖ, ತುಂಬಿದ ಮೂಟೆ. ಅದಕ್ಕಾಗಿಯೆ ಡಿಸೆಂಬರ್ 31 ರ ರಾತ್ರಿ ಭೋರೆಂದು ಅಳಬೇಕೆಂದಿದ್ದೇನೆ ಸಂತೋಷಕ್ಕೆ ಆನಂದಭಾಷ್ಪವಾಗಿ ದು:ಖಕ್ಕೆ ಕಣ್ಣೀರಕೋಡಿಯಾಗಿ....
ಹೊಸವರುಷ ಅಂದಾಗ ಕನಸುಕಾಣೋದು ಮಾಮೂಲಿ. ಆದರೆ ಅದನ್ನು ನನಸು ಮಾಡುತ್ತೇವಾ....ಡಿಸೆಂಬರ್ ಕೊನೆಯ ರಾತ್ರಿ ಲೆಕ್ಕ ಹಾಕಹೊರಟರೆ ಜನವರಿ ಒಂದರಂದು ಕಂಡ ಕನಸೇ ಮರೆತು ಹೋಗಿರುತ್ತದೆ. ಆದರೂ ಕನಸು ಕಾಣುವ ಹುಚ್ಚು. ನಾವೇ ಹೊರಲಾಗದ ಕನಸಿನ ಪಟ್ಟಿ ತಯಾರಾಗುತ್ತದೆ. ಅದು ನನಸಾಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ನಾನೂ ಇಂಥ ಕನಸು ಕಂಡಿದ್ದೆ ಎಂದು ಮಾತ್ರ ಹೆಮ್ಮೆಯಿಂದ ಹೇಳಬಲ್ಲೆ .
ಹೊಸವರುಷವೆಂದರೆ ಉಲ್ಲಾಸದ ಉತ್ಸವ ಒಲವಿನ ನಿಲ್ದಾಣ.... ಯಾಕೆಂದರೆ ಹಳೆಯ ವರ್ಷದ ಹೆಜ್ಜೆಗಳು, ಗುನುಗಿಕೊಂಡ ಹಾಡುಪಾಡುಗಳು, ಹೂವಿನಂತೆ ಅರಳಿಸಿದ ಹಿಗ್ಗುಗಳು, ಮಳೆಯಂತೆ ತೋಯಿಸಿದ ದುಗುಡಗಳು ಒಟ್ಟೊಟ್ಟಿಗೆ ಕೈ ಹಿಡಿದು ನಿಲ್ಲಿಸುತ್ತವೆ. ಮತ್ತೆ ಹೊಸವರ್ಷದ ಹಾದಿಗೆ ಮೊಂಬತ್ತಿಯಂತೆ ಬೆಳಕು ನೀಡುತ್ತದೆ.
ನಿನ್ನೆಯ ಕನಸುಗಳು ನಾಳೆಯ ಸವಿನೆನಪುಗಳಾಗಿ ಕಾಡುತ್ತವೆ. ಮತ್ತೊಮ್ಮೆ ಏಕಾಂತದ ನೋವುಗಳಿಗೆ ಬೆಳ್ಳಂ ಬೆಳಕಾಗಿ ಆಸರೆ ನೀಡುತ್ತವೆ. ಹೀಗೆ ಹೊಸವರ್ಷವೆಂದರೆ ಬೆಲೆಕಟ್ಟಲಾಗದ ಸಂಭ್ರಮ...ಅರಳುವ ಗುಲಾಬಿಯ ಬಗ್ಗೆ ಮೊಗ್ಗಿದ್ದಾಗಲೇ ಸಾವಿರ ಕನವರಿಕೆಗಳಿರುತ್ತದಲ್ವಾ ಹಾಗೇ ಹೊಸವರ್ಷಕ್ಕೂ ನನಗಂಥಹದೇ ನಿರೀಕ್ಷೆಗಳು... ನಿಮ್ಮೆದರು ಮೊಗ್ಗಂತೆ ಅರಳುತಿರುವ ಹೊಸತನದೊಂದಿಗೆ ಬರುವ ಹೊಸವರ್ಷಕ್ಕೆ ಚಿಟ್ಟೆ ಬಳಗದ ಶುಭಾಷಯ ಪತ್ರದ ಸಾಲುಗಳು ನಿಮಗಾಗಿ...
"ಹೊಸವರ್ಷದ ಉಡುಗೊರೆಗೆಂದು
ಪೇಟೆ ಹೊಕ್ಕ ನಾನು
ಕಡೆಗೆ ತಂದದ್ದಾದರೂ ಏನು
ಮೊದಲು ನನ್ನ ಕಣ್ಣಿಗೆ ಬಿದ್ದದ್ದು
ಸಂತೋಷ-ಇರಲಿ ಎಂದು ತಗೆದಿಟ್ಟೆ
ಸ್ವಲ್ಪ ದೂರ ಹೋದ ಮೇಲೆ ಕಂಡದ್ದು
ಸಂಭ್ರಮ-ಬೇಕೆನಿಸಿತು ತೆಗೆದಿಟ್ಟೆ
ಸ್ವಲ್ಪ ನೆಮ್ಮದಿ ಇದ್ದರೆ ಸರಿಯೆನಿಸಿತು
ಅದನ್ನೂ ತೆಗೆದಿಟ್ಟೆ
ಕಡೆಗೆ....
ಇದೊಂದಿಲ್ಲದಿದ್ದರೆ ಈ ಉಡುಗೊರೆ
ಅಪೂರ್ಣವೆನಿಸಿ....
ಬಹಳಷ್ಟು ಪ್ರೀತಿಯನ್ನು ತೆಗೆದಿಟ್ಟೆ
ಕೇವಲ ನಿನಗಾಗಿ....
ವರುಷ ಪೂರ್ತಿ
ಆ ಉಡುಗೊರೆ ನಿನ್ನೊಡನಿದ್ದು
ನಿನಗೆ ಆನಂದವ ನೀಡಲಿ.
ಹೊಸವರ್ಷದ ಶುಭಾಷಯಗಳು"
ಹೇಳಿ ಬದುಕಲ್ಲಿ ಸಂತೋಷ, ಸಂಭ್ರಮ, ನೆಮ್ಮದಿ,ಹಾಗೂ ಪ್ರೀತಿ ಜೊತೆಗಿದ್ದರೆ ಲೈಫ್ ಫುಲ್ ದಿಲ್ ಖುಷ್ ಅಲ್ವಾ. ಹ್ಙುಂ ಪ್ರೀತಿಪಾತ್ರರಿಗೆ ಇದಕ್ಕಿಂತ ಮಿಗಿಲಾದ ಉಡುಗೊರೆ ಕೊಡಲು ಸಾಧ್ಯನಾ...
- ಧೀಷ್ಮಾ ಡಿ.ಶೆಟ್ಟಿ.
ವಿಶೇಷ ವರದಿ
ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು. ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರುಭೂಮಿಯಾಗಿರದೆ ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವೈಶಿಷ್ಟತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.
ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.
ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.
ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು ಕಾಣಸಿಗುವುದಿಲ್ಲ. ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.
ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.
ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.
- ಅಶ್ರಫ್ ಮಂಜ್ರಾಬಾದ್
ಕಥೆ
ಖಾದರ್ ಸಾಬ್.... ಖಾದರ್ ಸಾ..... ಟಕ್.. ಟಕ್... ಟಕ್... ಬಾಗಿಲು ಬಡಿಯುವ ಸದ್ದು ಹೊರಗೆ ಗೌಡರ ಆಸಾಮಿ ರಂಗ ಗಂಟಲು ಕಿತ್ತುಕೊಳ್ಳುವ ಹಾಗೆ ಕಿರುಚುತ್ತಿದ್ದ.ಬೂದೂರು ಕೇವಲ ಐವತ್ತು ಅರವತ್ತು ಮನೆಗಳಿಂದ ಕೂಡಿದ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಸಾಬರದು ಕೇವಲ ಐದಾರು ಮನೆಗಳು ಮಾತ್ರ. ಒಂದು ಶುಕ್ರವಾರದ ದಿನ ಬಾಗಿಲು ತೆರೆದುಕೊಳ್ಳುವ ಜುಮ್ಮಾ ಮಸೀದಿಯನ್ನು ಬಿಟ್ಟರೆ ಮತ್ತೊಂದು ಮೋಹರ್ರಮ್ ತಿಂಗಳಿನ ಪೀರ್ಲದೇವರನ್ನು ಪ್ರತಿಷ್ಟಾಪನೆ ಮಾಡಲು ಕಟ್ಟಿರುವ ಆಶೂರಖಾನ ಕಟ್ಟಾ. ಅದರ ಮುಂದೆಯೆ ಒಂದು ಹನುಮಪ್ಪನ ಗದ್ದುಗೆ ಬಲಕ್ಕೆ ಸ್ವಲ್ಪ ಮುಂದೆ ಸಾಗಿದರೆ ಮಾರೆಮ್ಮನ ಗುಡಿ. ಊರ ಹೊರಗಡೆ ಇರುವುದು ಅಗಸೆಕಟ್ಟೆ ಇದು ಬೂದೂರು ಗ್ರಾಮದ ಸ್ಥಿತಿ. ಈ ಹಳ್ಳಿಯಲ್ಲಿ ಏನಾದರೊಂದು ವಿಶೇಷ ಘಟನಾವಳಿಗಳು ಜರುಗಿದರೆ ಎಲ್ಲರೂ ಸೇರುವುದು ಮಾತಾಡಿಕೊಳ್ಳುವುದು ಆ ಅಗಸೆಕಟ್ಟೆಯಲ್ಲಿಯೆ. ಈ ಅಗಸೆಕಟ್ಟೆಗೆ ಸೋಮಾರಿಕಟ್ಟೆ ಎಂಬ ಪ್ರತೀತಿಯು ಇದೆ. ಇದಕ್ಕೆ ಹಲವಾರು ಕಾರಣಗಳು ಉಂಟು. ಕೆಲಸವಿಲ್ಲದ ಊರ ಸೋಮಾರಿಗಳು ತಮ್ಮ ದಿನವನ್ನು ಕಳೆಯಲು ಈ ಅಗಸೆಕಟ್ಟೆಗೆ ಹೊಂದಿಕೊಂಡಿರುವ ಆಲದ ಮರದ ಕೆಳಗೆ ಬಿಡಾರ ಹೋಡಿ ಬೀಡಿ ಸೇದುತ್ತ ಇಸ್ಪೀಟು ಆಡುವುದು, ಹರಟೆ ಹೊಡೆಯುದು ನಿತ್ಯದ ಜಾಯಮಾನವನ್ನಾಗಿ ಮಾಡಿಕೊಂಡಿದ್ದರು.
ಊರಿನ ಶುಭಾಶುಭ ಕಾರ್ಯಗಳಿಗಾಗಿ ಖಾದರ್ ಸಾಬ ನ ಸಹಾಯ ಸಹಕಾರ ಊರ ಜನರಿಗೆ ಬೇಕಾಗಿತ್ತು. ಕುರಿ ಕೋಳಿ ಹಲಾಲ್ ಮಾಡಲಿಕ್ಕೂ ಅವನೆ ಬೇಕು. ಆದ್ದರಿಂದಲೆ ಖಾದರ್ ಊರ ಜನರಿಗೆ ಚಿರಪರಿಚಿತ ಮತ್ತು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ. ಮಕ್ಕಳಿಂದ ಮುದುಕರ ವರೆಗೂ ಅವನನ್ನು ಸಾಬ ಎಂದೆ ಕರೆಯುತ್ತಿದ್ದರು. ಅದಕ್ಕೆ ಅದಕ್ಕೆ ಅವನು ಸಹ ಹೊಂ ಗೊಟ್ಟುತ್ತಿದ್ದ.
* * * * *
ಕಳೆದ ವರ್ಷದ ಮೋಹರ್ರಮ್ ಪೀರ್ಲದೇವರ ಪ್ರತಿಷ್ಠಾಪನೆಯ ವಿಷಯದಲ್ಲಿ ದಲಿತರ ಮಧ್ಯೆ ಮತ್ತು ಮಾಲಿಗೌಡರ ಮಧ್ಯೆ ನಡೆದ ಕಲಹದಿಂದಾಗಿ ಅದು ನಂತರ ದಲಿತರ ಮೇಲಿನ ದೌರ್ಜನ್ಯವೆಂದು ಬಿಂಬಿತವಾಗಿ ಆ ಎರಡೂ ಕೋಮಿ ದ್ವೇಷದ ಕಿಡಿ ಊರಿಗೆ ಊರೇ ಕೋಮುದಳ್ಳೂರಿಯಲ್ಲಿ ಬೆಂದುವಂತೆ ಮಾಡಿತ್ತು.
ದಲಿತರ ಮಾದ್ಯನು ಅಲಾಯಿ(ಕುಣೀ) ಆಡುವಂತ ಸಂದರ್ಭದಲ್ಲಿ ಮಾಲಿಗೌಡನಿಗೆ ಕಾಲು ತಾಗಿದ ಪರಿಣಾಮವಾಗಿ ಅದು ಜಗಳಕ್ಕೆ ಎಡೆ ಮಾಡಿಕೊಟ್ಟಿತ್ತು. ಲೇ ಅರುವುಗೇಡಿ ಮಗನೆ ಮುಕ್ಳ್ಯಾಗೇನ್ ಹಲ್ಲ್ ಬಂದಾವ ಮಗ್ನಾ? ನನ್ನ ಕಾಲು ತುಳಿಯಷ್ಟು ಧೈರ್ಯ ಬಂತೇನ್ಲೇ ಎಂದು ಕಾಲುಗೀರಿ ಕಲಹಕ್ಕೆಡೆ ಮಾಡಿಕೊಟ್ಟಿದ್ದ. ಇದನ್ನೆ ನೆಪ ಮಾಡಿಕೊಂಡ ಆ ಕಡೆಯ ಒಂದಿಷ್ಟು ದಲಿತ ಕೇರಿಯ ಪೋರರು ಈ ಕಡೆಯ ಸವರ್ಣಿಯರ ಹುಡುಗರು ಸೇರಿಕೊಂಡು ಸಿಕ್ಕ ಸಿಕ್ಕವರ ಮೇಲೆ ಏರಿ ಹೋಗಿ ಹೊತ್ತು ಮುಳುಗಿ ಸೂರ್ಯ ಬರುವುದರೊಳಗೆ ಈ ಕಡೆಯ ಒಂದೆರಡು ಆ ಕಡೆಯ ಒಂದೆರಡು ತಲೆಗಳು ಉರುಳಿ ಹೋಗಿದ್ದವು. ಇದೆಲ್ಲ ಅನಾಹುತದಿಂದಾಗಿ ಅಂದಿನಿಂದ ಮೋಹರ್ರಮ್ ಚಂದ್ರಮಾ ಕಾಣುವುದು ಆ ಊರಿನ ಜನರಿಗೆ ಬೇಕಾಗಿರಲಿಲ್ಲ. ಸ್ವತಃ ಪೋಲಿಸ್ ಪಾಟೀಲ್ ಲಿಂಗಪ್ಪಗೌಡನೂ ಇದನ್ನು ರದ್ದು ಮಾಡಿ ಈಗ ನಮ್ಮೂರ್ನಾಗಿ ಏನೋ ಕೇಡುಗಾಲ ಬಂದಂಗೈತಿ ಸದ್ಯಕ ಕೆಲವು ವರ್ಸ ಈ ಪೀರ್ಲದೇವರ ಅಲಾಯಿ ಹಬ್ಬನ್ನ ಮಾಡೋದ್ ಬ್ಯಾಡ ಎಂದು ಊರೆಲ್ಲ ಫರ್ಮಾನು ಹೊರಡಿಸಿದ್ದ.
ಇಷ್ಟೆಲ್ಲ ಕಳೆದು ಹತ್ತಾರು ವರ್ಷಗಳೆ ಮುಗಿದರೋ ಇನ್ನೂ ದಲಿತರ ಮತ್ತು ಗೌಡರ ಮದ್ಯ ಹೊತ್ತಿಕೊಂಡಿರುವ ದ್ವೇಷಾಗ್ನಿ ಮಾತ್ರ ನಂದಿರಲಿಲ್ಲ. ಆಗಾಗ ಕಾಲು ಕೆದರಿ ಹೋಗಿ ಗೌಡರ ಹುಡುಗರು ದಲಿತರನ್ನು ಹೊಡೆ ಬಡಿಯುವುದು ಮಾಡುತ್ತಲೇ ಇದ್ದರು. ಅದಕ್ಕೆ ಬಗ್ಗದ ದಲಿತರು ಅವರಿಗೆ ಪ್ರತಿರೋಧನವನ್ನು ಒಡ್ಡುತ್ತಿದ್ದರು. ಒಮ್ಮೆ ಊರ ಚೇರ್ಮನ್ ಗೌಡನು ಎರಡೂ ಕೋಮಿನವರಲ್ಲಿ ಹೊಂದಾಣಿಕೆ ಮಾಡಲು ಊರ ಪಂಚಾಯತಿಯನ್ನು ಸೇರಿಸಿ ತಾವು ಇನ್ನು ಮುಂದೆ ಹೊಡೆಬಡೆಯುವುದಾಗಲಿ ಮಾಡಕೂಡದೆಂದು ಎರಡೂ ಗುಂಪಿನ ಯುವಕರಲ್ಲಿ ತಿಳಿ ಹೇಳಿ ಒಂದು ಒಳಒಪ್ಪಂದವನ್ನು ಮಾಡಿಕೊಂಡು ಮುಂದೆ ಊರ ಜನ ಶಾಂತಿ ನೆಮ್ಮದಿಯಿಂದ ಬಾಳಲು ಅವಕಾಶವನ್ನು ಮಾಡಿಕೊಟ್ಟಿದ್ದನು. ಅಂದಿನಿಂದ ಆ ಊರು ಮೇಲ್ನೋಟಕ್ಕೆ ಶಾಂತಿಯಿಂದಿರುವಂತೆ ಕಂಡರೂ ಗೌಡರ ಒಡಲು ದ್ವೇಷ ಹಾಗೂ ಸೇಡಿನಿಂದ ಬಿರಿಯುತ್ತಿತ್ತು. ಹೇಗಾದರೂ ಮಾಡಿ ಮತ್ತೇ ಈ ವರ್ಷದ ಮೋಹರ್ರಮ್ ಮಾಸದಲ್ಲಿ ಪೀರ್ಲದೇವರನ್ನು ಪ್ರತಿಷ್ಟಾಪನೆ ಮಾಡಿಸಿ ತಮ್ಮ ಸೇಡನ್ನು ತೀರಿಸಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.
ಹಳ್ಳಿಯ ಹರಿಜನಕೇರಿಯ ಯುವಕರು ಈಗ ಮೊದಲಿನಂತೆ ಇರಲಿಲ್ಲ. ಅಲ್ಪಸ್ವಲ್ಪ ಅಕ್ಷರ ಜ್ಞಾನವನ್ನು ಪಡೆಯುವುದರ ಮೂಲಕ ತಮ್ಮ ಹಕ್ಕುಗಳೇನು? ಸಮಾನತೆ, ಸಂಘಟನೆಯ ಕುರಿತು ತಿಳುವಳಿಕೆಯನ್ನು ಪಡೆದಿದ್ದು ಮೇಲ್ಜಾತಿಯವರು ತಮ್ಮೊಂದಿಗೆ ವ್ಯವಹರಿಸುತ್ತಿದ್ದ ರೀತಿನೀತಿಗಳನ್ನು ಖಂಡಿಸುವಷ್ಟು ಧೈರ್ಯ ಆ ಹುಡುಗರಲ್ಲಿ ಹುಟ್ಟಿತು. ಇದಕ್ಕೆ ಕಾರಣ ಅಂದು ಮೊಳಕೆಯೊಡೆದೆ ದಲಿತ ಚಳುವಳಿಗಳ ಪರಿಣಾಮವಾಗಿತ್ತು. ಅವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಮಂತ್ರವನ್ನು ಉಚ್ಚರಿಸಿದ್ದೇ ತಡ ಗೌಡರ ಕಡೆಯವರು ಕೈ ಕೈ ಮಸೆಯತೊಡಗಿ ಇನ್ನೇನು ತಮ್ಮ ಉಳಿಗಾಲವಿಲ್ಲ ಎಂದು ಮನದಲ್ಲೆ ಅಂದುಕೊಂಡು ಅದಕ್ಕಾಗಿ ಏನಾದರೂ ಒಂದು ವ್ಯವಸ್ಥಯನ್ನು ಮಾಡಿಯೆ ತೀರಬೇಕೆಂದು ಪಣವನ್ನು ತೊಟ್ಟಿದ್ದು ಗುಟ್ಟಾಗಿ ಉಳಿದಿದ್ದಿಲ್ಲ.
ಆ ದಿನ ಬೆಳಿಗ್ಗೆ ಗೌಡರ ಯುವತಿಯು ನೀರು ತರಲು ಹೋದಾಗ ಬಾವಿಯ ಬಳಿ ದಲಿತರ ಹನುಮ್ಯಾ ಇದ್ದದ್ದು ಬಾವಿಯು ಮೈಲಿಗೆಯಾಗಲು ಕಾರಣವೆಂದು ಬೊಬ್ಬೆ ಹಾಕಿದ್ದು ಇದನ್ನು ಕೇಳಿದ ಹುಡುಗರು ಹನುಮ್ಯಾನನ್ನು ಬಾವಿಯ ಕಂಬಕ್ಕೆ ಕಟ್ಟಿ ಹಾಕಿ ದನಕ್ಕೆ ಬಡಿದಂತೆ ಬಡಿದಿದ್ದರು. ಇದನ್ನು ಪ್ರತಿಭಟಿಸಿದ ದಲಿತೋದ್ಧಾರಕ ಸಂಘಟನೆಯ ಸದಸ್ಯರು ಮೇಲ್ಜಾತಿಯವರು ತಮ್ಮ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಹೋರಾಟವನ್ನು ಆರಂಭಿಸಿದ್ದು ಆ ಕ್ಷೇತ್ರದ ಎಮ್ಮೆಲ್ಲೆ ರಾಯಪ್ಪನಿಗೆ ಭಾರಿ ತಲೆನೋವು ಉಂಟುಮಾಡಿತ್ತು.
ಜನತಾ ಸರ್ಕಾರ ಬಂದಾಗಿನಿಂದ ಅಲ್ಲಲ್ಲಿ ದಲಿತ ಹೋರಾಟಗಳು ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮಗಳು ಜೀವಪಡೆದುಕೊಂಡಿದ್ದವು. ಇದರ ಪರಿಣಾಮವೆ ಬೂದೂರಿನ ಯುವಕರು ತಾವು, ಮನುಷ್ಯರು ತಮಗೆ ಇತರರಂತೆ ಜೀವಿಸುವ ಹಕ್ಕಿದೆ ತಮಗೂ ಎಲ್ಲರಂತೆ ಹೋಟೆಲಲ್ಲಿ ಕುಳಿತು ಚಹಾ ಸೇವಿಸುವ ಹಕ್ಕಿದೆ ಎಂದು ನಿತ್ಯವೋ ಮೇಲ್ಜಾತಿ ಮತ್ತು ದಲಿತರ ಮಧ್ಯ ಒಂದಿಲ್ಲೊಂದು ರೀತಿಯಲ್ಲಿ ತಕರಾರು ನಡೆದೆ ಇದ್ದವು. ಈ ಮಧ್ಯೆ ಒಂದೆರಡು ಬಾರಿ ದೂರದ ತಾಲೂಕಿನಿಂದ ಬಂದ ಖಾಕಿ ಬಟ್ಟೆಯವರ ಸರಕಾರಿ ವಹಾನಗಳು ಸುತ್ತುಹಾಕಿ ಹೋಗಿದ್ದವು. ಸರಕಾರವೆ ಮುಂದೆ ನಿಂತು ದಲಿತರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಸಹಕರಿಸಿತ್ತು. ಬೂದೂರಿನ ದಲಿತರಿಗೆ ಯಾರಾದರೂ ತಮ್ಮ ಹೋಟೆಲ್ಲುಗಳಲ್ಲಿ ಪ್ರವೇಶ ನೀಡದೆ ಹೋದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದೆಂದು ಸರಕಾರಿ ಅಧಿಕಾರಿಗಳು ಗತ್ತಿನಲ್ಲಿಯೆ ಸಾರಿ ಹೋಗಿದ್ದರು. ಅಂದಿನಿಂದ ದಲಿತರಿಗೆ ಯಾವುದೆ ಅಡೆತಡೆಗಳಿಲ್ಲದೆ ಊರಿನ ಎಲ್ಲಾ ಹೊಟೇಲು ಗಳಲ್ಲಿ ಪ್ರವೇಶ ದೊರೆಯುತ್ತಿತ್ತು. ಈ ದಲಿತರಲ್ಲಿ ಇಷ್ಟೆಲ್ಲ ಕ್ರಾಂತಿಕಾರಿ ವಿಚಾರಗಳು ಬರಲು ಆ ಊರಿನ ಅಂಬೇಡ್ಕರ್ ಸಂಘದ ರಮೇಶನೆ ಕಾರಣ ಇವನು ಒಂದೆರಡು ಪಟ್ಟಣಗಳನ್ನು ಸುತ್ತಿ ಅಂಬೇಡ್ಕರ ವಿಚಾರಗಳನ್ನು ಯುವಕರಲ್ಲಿ ಅರುಹುತ್ತಿದ್ದ.
ಅದೊಂದು ಹಿರಿದಾದ ವಿಶಾಲ ಮನೆ. ಒಳ ಪಡಸಾಲೆಯಲ್ಲಿ ಹಾಕಿದ್ದ ತೂಗು ಮಂಚದಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ಪೋಲಿಸ್ ಪಾಟಿಲ್ ನಿಂಗಪ್ಪಗೌಡ ತನ್ನ ಮೀಸೆಯನ್ನು ತೀವುತ್ತ ಅಲ್ಲಾ ಈ ಮಕ್ಳು ನಮ್ಮತಾವನೆ ಪೋಕರಿಕೆ ಮಾಡತಾವಲ್ಲ. ಎಷ್ಟೊಂದು ಪೊಗರು ಅಂತೀನಿ ಎಂದು ತಮ್ಮ ಮುಂದಿನ ಕುರ್ಚಿಯಲ್ಲಿ ಕುಳಿತ ಮಾಲಿಗೌಡನೊಂದಿಗೆ ಈ ಮಕ್ಳಿಗೆ ಒಂದು ಗತಿ ಕಾಣಿಸಕ್ಕಾಯ್ತದ ಎಂದ. ಆತನ ದ್ವನಿಯಲ್ಲಿ ರೋಷವು ಪ್ರತಿದ್ವನಿಸುತ್ತಿತ್ತು. ಅದಕಾ ನಾ ಖಾದರ ಸಾ.. ನನ್ನು ಕರೆ ಕಳಿಸಿದ್ದು ಏನಾದರೊಂದು ಮಾಡಿ ಈ ಸಲ ಪೀರ್ಲದೇವರನ್ನು ಕೂಡಿಸಿ ಪ್ಯಾಟ್ಯಾಗೊಳಗಿಂದ ನಾಕ ಜನ ಕರೆಸಿ ಈ ಮಕ್ಳ ಹೆಣ ಬೀಳಿಸಬೇಕು ಆಗ ತಾವ ಬಾಯಿ ಮುಚ್ಗಂಡು ಕೂಡತಾವು. ಇಲ್ಲಾಂದ್ರ ಸಂಗಗಿಂಗ ಕಟ್ಕೊಂಡು ನಮ್ ಜನನ್ನ ನಮ್ ತಾವ ಛೂ ಬಿಡ್ತಾವ. ಏನಂತಿ? ಎಂದು ಮಾಲಿಗೌಡ ತನ್ನ ನರಿಬುದ್ದಿಯನ್ನು ಪ್ರದರ್ಶಿಸಿದ.
ಖಾದರ್ ಸಾಬ್... ಕಾದರ್ ಸಾ.... ರಂಗನ ಕೂಗು ಜೋರಾಯಿತು. ಯಾರು? ಯಾರದು ಮನೆಯೊಳಗಿಂದ ಹೆಣ್ಣು ದ್ವನಿ ಮುಖವನ್ನು ತನ್ನ ಸೆರಗಿನಿಂದ ಮುಚ್ಚಿಕೊಂಡ ಮಹಿಳೆಯೊಬ್ಬಳು ಅರ್ದ ತೆರೆದ ಬಾಗಿಲಿನಿಂದ ಇಣುಕಿ ಕೇಳಿತು. ಖಾದರ್ ನ ಪತ್ನಿ ಇರಬೇಕು. ಪೂರ ಹೊರಗೆ ಬರದೆ ಮರೆಯಲ್ಲಿ ನಿಂತೆ ಮಾತನಾಡಿದಳು.
ಯಾರು ಯಾರು ಬೇಕು?
ನಾನ್ಕಣವ್ವ ಗೌಡರ ಆಸಾಮಿ ರಂಗ. ಗೌಡ್ರು ನಿಮ್ಮೆಜಮಾನ್ರನ್ನ ಬರಾಕ ಹೇಳ್ವರೇ, ಅದೇನೋ ಅರ್ಜಂಟು ಕೆಲ್ಸಂದ್ರು. ಈಗ್ಲೆ ನನ್ತಾವೆ ಕರ್ಕೊಂಡು ಬರ್ಲಿಕ್ಕೇಳವ್ರೆ ಎಂದು ಗೌಡನ ಆದೇಶವನ್ನು ಒಪ್ಪಿಸಿದ ರಂಗ. ಅವರು ಮನೇಲಿ ಇಲ್ಲ. ಈಗತಾನೆ ಯಾರೋ ಬಂದ್ರು ಕರ್ಕೊಂಡು ಹೋದ್ರು. ಬಂದಮೇಲೆ ನಾ ಹೇಳ್ತೀನಿ ಎಂದು ಹೊಳ ಹೊಕ್ಕಳು.
ಒಂದರ್ಧ ಮುಕ್ಕಾಲು ಗಂಟೆಯಾಗಿರಬೇಕು ರಂಗ ಹೋಗಿ ಆಗಲೆ ಕಾದರ್ ಮನೆಯೊಳಗೆ ಕಾಲಿಟ್ಟ ಮನೆಗೆ ಬಂದ ಖಾದರ್ ಮುಂದೆ ಹೆಂಡತಿ ಸಮೀನಾ ರಂಗನ ವಿಚಾರವನ್ನು ಮುಂದಿಟ್ಟಳು. ಹೆಂಡತಿಯಿಂದ ವಿಷಯ ತಿಳಿದು ಗೌಡರ ಬುಲಾವು, ಏನ್ ಗ್ರಹಚಾರ ಕಾದಿದೆಯೋ ಏನೋ ಎನ್ನುತ್ತ ತನ್ನ ಓಬೆರಾಯನ ಕಾಲದ ಸೈಕಲ್ಲಿನ ಪೈಡಲ್ಲನ್ನು ತುಳಿಯಹತ್ತಿದ.
ಅದೇ ವಿಶಾಲ ಪಡಸಾಲೆಯಲ್ಲಿ ಗೌಡ ಚಾರ್ಮಿನಾರ್ ಛಾಪಿನ ಸಿಗರೇಟನ್ನು ಬಾಯಲ್ಲಟ್ಟು ಒಂದೊಂದೆ ದಮ್ಮು ಸೇದುತ್ತ ಹೊಗೆಯನ್ನು ಉಗುಳುತ್ತಿದ್ದ. ಆ ಹೊಗೆಯಲ್ಲಿ ಏನೋ ಸುಟ್ಟ ವಾಸನೆ. ಬಾ ಕಾದರ್ ಸಾಬ್ ನಿನ್ನ ಹಾದಿಯನ್ನೆ ನೋಡುತ್ತಿದ್ದೆ. ಎಂದು ಮಾಲಿಗೌಡ ಕಾದರ್ ನನ್ನು ಸ್ವಾಗತಿಸಿದ. ಆತನ ದ್ವನಿಯಲ್ಲಿನ ಕುಹಕ ಕಾದರ್ ಅರಿಯದಾದ. ಪಡಸಾಲೆಯ ಮೆಟ್ಟಿಲುಗಳನ್ನೇರಿ ಮುಂದಿನ ಕಂಬಕ್ಕೊರಗಿ ನಿಂತು ಏನ್ರಿ ಗೌಡ್ರೆ ಅರ್ಜಂಟು ಅಂತ ಹೇಳಿ ಕಳಿಸಿದ್ರಿ, ನಿಮ್ ವಿಷಯ ಕೇಳಿ ಕೂಡಲೆ ಬಂದ್ಬಿಟ್ಟೆ ಎಂದ. ಏನಿಲ್ಲ ಬಾ ಕೂತ್ಕೋ ಎಂದು ಪಕ್ಕದ ಕುರ್ಚಿಯನ್ನು ಮುಂದಕ್ಕೆಳೆದ ಗೌಡನ ಮುಂದೆ ಕುರ್ಚಿಯ ಮೇಲೆ ಕೂಡುವುದು ಅಷ್ಟೇನು ಸರಿಕಾಣಲಿಲ್ಲ ಆದರೂ ಗೌಡನೆ ಈಗ ಕುರ್ಚಿಯನ್ನು ಮುಂದೆ ಮಾಡಿದ್ದಾನೆ ಎಂದ ಮೇಲೆ ಸ್ವಲ್ಪ ದೈರ್ಯವನ್ನು ತಂದು ಕೊಂಡ ಕಾದರ್ ಕುರ್ಚಿಯನ್ನು ಸ್ವಲ್ಪ ದೂರಕ್ಕೆಳೆದು ಕುಳಿತುಕೊಂಡ.
ಲೇ ರಂಗ... ಲೇ ರಂಗ...ಎಲ್ಹೋದ... ಗೌಡ ಸ್ವಲ್ಪ ಏರು ದ್ವನಿಯಲ್ಲಿ ಅಬ್ಬರಿಸತೊಡಗಿದ. ಏದುಸಿರುಬಿಟ್ಟು ಓಡಿ ಬಂದ ರಂಗ ಏನ್ ಸಾಮಿ ಇಲ್ಲೆ ದನದ ಕ್ವಟ್ಟಿಗ್ಯಾಗ ಮೇವು ಹಾಕ್ತಿದ್ದೆ ಎಂದ ಜೀವ ಭಯದಿಂದ. ನೀ ಹೋಗಿ ಆ ನಾಡಗೌಡನ್ನ ಮರಿಗೌಡನ್ನ ನಾ ಕರದೀನಂತ ಹೇಳು ಎಂದು ರಂಗನನ್ನು ಹೊರಕಟ್ಟಿದ. ಈಗ ಕಾದರ್ ಕಡೆಗೆ ತಿರುಗಿ ಆಂ ನೋಡು ಕಾದರ್ ಈ ಪೀರ್ಲ ದೇವರ ಕೂಡುಸ್ತಾರಲ್ಲ ಅದೇ ಮೋಹರ್ರಮ್ ಹಬ್ಬದ ಚಂದ್ರ ಯಾವಾಗ ಕಾಣ್ತದ ಎಂದು ಗೌಡ ಮೆಲ್ಲಗೆ ವಿಷಯಕ್ಕೆ ಬಂದ.
ಅದ್ಯಾಕ್ ಇಚಾರ ಈಗ ಬುಡ್ರಿ ಗೌಡ್ರೆ ನಮ್ಮೂರ್ನಾಗ ಜಗಳ ಆಗಿದಾಗ್ನಿಂದ ಪೋಲಿಸ್ನೋರು ಬಂದು ದೇವರ ಪಂಜಾ ಕೂಡಿಸ್ಬಾರ್ದು ಅಂತ ಫೈಸಲಾ ಮಾಡಿ ಹೋಗೌರೆ, ಈಗ ಅದರ ಇಚಾರನೆ ನಮ್ ತಲಿಯೊಳಗಿಲ್ಲ ಅದರ ಸುದ್ದಿ ಈಗ ತೆಗಿಬ್ಯಾಡ್ರಿ ಎಂದು ಖಾದರ್ ತನ್ನ ನಿರ್ಣಯವನ್ನು ತಿಳಿಸಿದ. ಅಲ್ಲೋ ಖಾದರ್ ಸಾ... ಆ ಹಸೇನ ಹುಸೇನಿ ಪಂಜಾ ಕೂಡಿಸೋದ್ ಬಂದ್ ಮಾಡಿದಾಗ್ನಿಂದ ನಮ್ ಊರಾಗ ಏನಾದ್ರೋ ಸೂಕೂನು ಐತೇನು ನೀನೆ ಹೇಳು? ಒಂದು ವರ್ಷ ಬರಗಾಲ ಬಂದು ಹೊಲ ಮನೆ ಹಾಳಾದ್ವು, ಈಗ ಊರ್ನಲ್ಲಿ ಈ ಹೋಲೆಯರದೊಂದು ಕಾಟ ಸುರುವಾಗೈತೆ ಏನು ಸಂಗಗಿಂಗ ಕಟ್ಕೊಂಡು ನಮ್ ವಿರುದ್ಧ ಹೋರಾಟಕ್ಕೆ ನಿಂತ್ವರೆ ಇದೆಲ್ಲ ಅವರಿಗೆ ಬೇಕಾಗಿತ್ತ? ಎಂದು ತನ್ನ ಮಾತಿನ ಸರಪಳಿಯನ್ನು ಬಿಚ್ಚತೊಡಗಿದ.
ನೊಡು ಕಾದರ್ ಈ ಪೀರ್ಲ ದೇವರ ಕೂಡಿಸೊದ್ರಿಂದ ಯಾರಿಗೂ ನಷ್ಟವಿಲ್ಲ ನಿನಗೂ ಒಂದಿಷ್ಟು ಕಾಳುಕಡ್ಡಿ ಅಂತ ಸಿಗ್ತದೆ ಒಂದ ನಾಕೈದು ತಿಂಗಳು ಹೊಟ್ಟೆ ಉಪಜೀವನಕ್ಕ ಆಗ್ತೈತೆ ಅದು ಅಲ್ದೆ ನಮ್ಮ ಊರ್ನಾಗ ಶಾಂತಿನು ಬರ್ತೈತೆ, ಇದರ ಮ್ಯಾಗ ನಿನ್ ಇಚಾರ. ನಾವು ನಿನ್ನ ಒಳೇದ್ಕೆ ಹೇಳಿದ್ವಿ ಎಂದು ಗೌಡ ರಾಗ ಎಳೆದ. ಕಾದರ್ನಿಗೇಕೋ ಗೌಡನ ಮಾತು ಸರಿ ಎನಿಸಿತು. ಈ ತುಟ್ಟಿ ಜಮಾನದಾಗ ನಾಲ್ಕೈದು ಮಕ್ಳನ್ನು ಸಾಕೋದು ಕಷ್ಟನೆ ಇರುವಾಗ ಗೌಡ ಹೇಳಿದ್ದರಲ್ಲಿ ತನ್ನ ಲಾಭವಿದೆ ಅನ್ನಿಸಿದರೂ ಮನಸ್ಸು ಮಾತ್ರ ಮುಂಬರುವ ಅಪಾಯದ ಮುನ್ಸೂಚನೆಯನ್ನು ನೀಡುತ್ತಿತ್ತು.
ಸ್ವಲ್ಪ ಹೊತ್ತು ಪಡಸಾಲೆ ನೀರಾವ ಮೌನದಿಂದ ತುಂಬಿತ್ತು. ಅಷ್ಟರಲ್ಲಿಯೆ ಗೌಡಸಾಣಿ ತಟ್ಟೆಯೊಂದರಲ್ಲಿ ಚಹಾ ತಂದು ಟಿಪಾಯಿ ಮೇಲೆ ಇಟ್ಟಳು. ಚಹಾವನ್ನು ಹೀರುತ್ತ ಅದೇ ಗುಂಗಿನಲ್ಲಿ ಕುಳಿತಿದ್ದರು ಮೂವರು. ಯಾಕ್ರಿ ಗೌಡ್ರೆ ನಮ್ಮನ್ನೂ ಬರ್ಲಿಕ್ಕೆ ಹೇಳಿದ್ರಂತೆ ರಂಗ ಈಗ ತಾನೆ ಬಂದು ಹೇಳಿಹೋದ ಏನ್ ವಿಚಾರ ಎಂದಾಗಲೆ ಮೂವರು ವಾತ್ಸವ ಲೋಕಕ್ಕೆ ಮರಳಿದ್ದು.
ತುಂಬು ಮೊಖ, ಹುರಿ ಮೀಸೆ, ಠೀವಿಯ ನಡೆ, ಕೈಗೊಂದು ಬ್ರಾಸ್ ಲೆಟ್ ಚೈನು, ಖಾದಿ ಜುಬ್ಬಾ ತೊಟ್ಟ ಸರಪಂಚ ನಾಡಗೌಡ ಮತ್ತವನ ಸಂಬಂಧಿ ಮರಿಗೌಡ ದರ್ಪದಿಂದಲೆ ಗೌಡನ ಮನೆಯ ಮೆಟ್ಟಿಲನ್ನು ಹತ್ತಿದ್ದರು. ಇಬ್ಬರನ್ನು ಆದರದಿಂದ ಸ್ವಾಗತಿಸಿದ ಮಾಲಿಗೌಡ ಸ್ವಲ್ಪ ಏನೋ ಯೋಚಿಸಿದಂತೆ ಮಾಡಿ ಆಂ ನಿಮ್ ವಿಚಾರ ಏನಾದ ಹೇಳ್ರಲಾ ಸರಪಂಚರೆ ಎಂದು ಮೌನ ಮುರಿದು ಮಾತಿಗೆ ಮುನ್ನುಡಿ ಹಾಕಿದ. ಎನೋ ನನಗೊಂದು ತಿಳಿತಿಲ್ಲ ಎಂದು ನಾಟಕೀಯವಾಗಿಯೆ ನುಡಿದರು. ಸರಪಂಚರು.
ಅದಾ ಮೋಹರ್ರಮ್ ಪೀರ್ಲದೇವರ ಪಂಜಾ ಕೂಡಿಸೊ ದಿನ ಸಮೀಪಕ ಬಂತು ನೋಡು. ಈ ವರ್ಸಾ ಪೀರ್ಲ ದೇವರ ಕೂಡಿಸೋ ವಿಚಾರ ಮಾಡಿವಿ. ಓಹೋ ಅದಾ ವಿಷಯ ಭಾಳ ಛಲೋ ಆಯ್ತು ಬಿಡ್ರಿ. ನಮ್ಮೂರಾಗ ಹತ್ತು ವರ್ಸಾಯ್ತು ದೇವ್ರು ಕೂಡಿಸಲಾರ್ದೆ. ಅದಕ ಊರಿಗೆ ಊರೇ ಸಣಿ ಬಡಿದಂಗಾಗ್ಯದ. ನಾನೂ ಈ ಇಚಾರ ನಿಮಗ ತಿಳಿಸೋಣು ಅಂತ ಮಾಡಿದ್ದೆ ಈಗ ನಿಮ್ ಮನಸ್ನ್ಯಾಗ ಬಂದ ಬಿಟೈತೆ ಅಂದ ಮ್ಯಾಲ ಮತ್ಯಾಕ ತಡ ಎಲ್ಲ ವ್ಯವಸ್ಥೆನೂ ಮಾಡಿ ಬಿಡುವ ನಾ ಸಕರ್ಾರದವರ ಜತೆನೂ ಮಾತಾಡ್ತಿನಿ ಎಂದರು ಸರಪಂಚರು. ನಾಡಗೌಡ ಹಾಕಿದ ಪೂರ್ವಯೋಜನೆಯಂತೆ.
ಮೋಹರ್ರಮ್ ಆಚರಣೆಗೆ ಖಾದರ್ ಮನಸು ಒಪ್ಪದಿದ್ದರೂ ಊರ ಗೌಡರ ಬಲವಂತದಿಂದ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು.
ಮೋಹರ್ರಮ್ ಚಂದ್ರದರ್ಶನಕ್ಕೆ ಇನ್ನೆರಡೆ ದಿನ ಬಾಕಿ ಈ ಸಲ ಖಾದರ್ ಪೀರ್ಲದೇವರ ಕೂಡುಸ್ತಾನಂತೆ ಎಂಬ ಮಾತುಗಳು ಎಲ್ಲರ ಬಾಯಲ್ಲಿ ತೇಲಾಡಿದವು. ಜನರು ಊರಅಗಸೆಕಟ್ಟೆಯಲ್ಲಿ ಕುಳಿತು ಮುಂದಾಗುವ ಬೆಳವಣೆಗೆಗಳ ಬಗ್ಗೆ ಲೆಕ್ಕಾಚಾರ ಹಾಕತೊಡಗಿದರು. ಹತ್ತಾರು ವರ್ಷಗಳಿಂದ ಸುಣ್ಣಬಣ್ಣ ಕಾಣದಿದ್ದ ಆಶುರಖಾನ ಕಟ್ಟೆಯು ಈಗ ಸುಣ್ಣಬಣ್ಣ ಬಳಿದುಕೊಂಡು ಮೈಕೊಡವಿ ನಿಂತುಕೊಂಡಿದೆ.. ಬಣ್ಣ ಬಣ್ಣಗಳ ಕಾಗದಗಳಿಂದ ತಳಿರುತೋರಣಗಳಿಂದ ಅಲಂಕೃತ ಈ ಆಶುರ್ಖಾನ ಕಟ್ಟೆ ಈಗದು ಎಲ್ಲರ ಆಕರ್ಷಣೀಯ ಕೇಂದ್ರ ಬಿಂದು.
ಅಂದು ಮೋಹರ್ರಮ್ ಒಂದನೆಯ ತಾರೀಕು ಇಸ್ಲಾಮಿನ ಹೊಸ ವರ್ಷದ ಮೊದಲದಿನ ಸಾವಿರಾರು ವರ್ಷಗಳ ಹಿಂದೆ ಅರೇಬಿಯದಲ್ಲಿ ಧರ್ಮಸಂಸ್ಥಾಪನೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ಪ್ರಾವಾದಿ ಮುಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನರು ಇದೇ ಮೋಹರ್ರಮ್ ತಿಂಗಳು ಹತ್ತನೆ ತಾರೀಕಿನಂದು ಇರಾಕಿನ ಕಬರ್ಲಾ ಎಂಬ ಪ್ರದೇಶದಲ್ಲಿ ವೀರ ಮರಣವನ್ನಪ್ಪಿದ್ದ ದಿನ ಇದನ್ನೆ ವಿಶ್ವದ ಮುಸ್ಲಿಮರು ಕಬಲರ್ಾದ ದಿನ ಅಥವಾ ಕತ್ತಲ್ ರಾತ್ರಿ ಎಂದು ಆಚರಿಸುತ್ತಾರೆ.
ಅಂದು ಬೂದೂರಿನ ಜನ ಕೂಡ ಚಂದ್ರದರ್ಶನ ಗೈಯಲು ಕಾತುರದಿಂದ ನಿಂತಿದ್ದಾರೆ. ಚಂದ್ರದರ್ಶನವಾದಕೂಡಲೆ ಆಶುರ್ಖಾನ ಕಟ್ಟೆಯ ಮುಂದಿನ ಜಾಗದಲ್ಲಿ ಒಂದು ಅಲಾಯಿ(ಕುಣಿ)ಯನ್ನು ತೋಡಲಾಗತ್ತದೆ. ವಡ್ಡರ ಪೋರರು ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ಅಲಾಯಿ ತೋಡುವ ಕೆಲಸದಲ್ಲಿ ನಿರತರಾದ್ದಾರೆ. ನೋಡನೋಡುತ್ತಿದ್ದಂತೆ ಮಣ್ಣಿನ ದೊಡ್ಡ ರಾಶಿಯೆ ನಿರ್ಮಾಣವಾಗುತ್ತದೆ ಏಳೆಂಟು ಅಡಿ ಆಳದ ಕುಣಿ(ಅಲಾಯಿ) ಸಿದ್ದವಾಗುತ್ತದೆ.
ಮೋಹರ್ರಮ್ ಒಂದನೆ ತಾರೀಖಿನಿಂದ ಹತ್ತನೆಯ ತಾರೀಖಿನ ತನಕ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ ಸಕ್ಕರೆಯನ್ನು ಓದಿಸಿಕೊಂಡು ಹೋಗುವುದು. ಹರಕೆ ಹೊರುವುದು, ಸಕ್ಕರೆ ತುಲಭಾರ ತೆಂಗಿನಕಾಯಿ ಒಡೆಸಿ ಹರಕೆಯನ್ನು ತೀರಿಸುವುದು ಹೀಗೆ ನಾನ ರೀತಿಯ ಸೇವೆ ನಡೆಯುತ್ತದೆ. ಸುಮಾರು ಹತ್ತು ವರ್ಷಗಳಿಂದ ನಡೆಯದ ಈ ಹಬ್ಬ ಈಗ ನಡೆಯುತ್ತಿರುವುದರಿಂದ ಈ ವರ್ಷ ಭಕ್ತಾದಿಗಳ ಸಂಖ್ಯೆಯು ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಖಾದರ್ ಸಾಬ್ ಒಳಗೊಳಗೆ ಖುಷಿ ಪಡುತ್ತಿದ್ದು ಮುಂದಿನ ಎರಡು ವರ್ಷಗಳಷ್ಟು ಆದಾಯ ಆಗಿದೆ ಎಂದು ಮನದಲ್ಲೆ ಲೆಕ್ಕಾ ಹಾಕುತ್ತಿದ್ಧಾನೆ.
ಅಂದು ಮೋಹರ್ರಮ್ ಕೊನೆಯ ದಿನ ಕತ್ತಲ್ ರಾತ್ರಿ ಅಲಾಯಿ ತುಂಬ ನಿಗಿ ನಿಗಿ ಉರಿಯುವ ಬೆಂಕಿ ಸಿದ್ದಗೊಂಡಿದೆ. ಸಂಜೆ ಆರು ಗಂಟೆಗೆ ಹಸೇನ್ ಹುಸೇನ್ ಪೀರಾ ಪಂಜಾಗಳ ಸವಾರಿ ಹೊರಡುತ್ತದೆ. ಊರಿನ ಎಲ್ಲ ಜನರು ಅದನ್ನು ಕಾಣಲು ಕಾತುರರಾಗಿದ್ದಾರೆ. ಇತ್ತ ದಲಿತ ಕೇರಿಯ ಹತ್ತಾರು ಹುಡುಗರು ಬಂದು ಅಲಾಯಿ ಕುಣಿತದಲ್ಲಿ ತಲ್ಲಿನರಾಗಿದ್ದಾರೆ.
ಮೊದಲೆ ಪೂರ್ವಯೋಜನೆಯಂತೆ ಗೌಡ ಪಟ್ಟಣದಿಂದ ಕರೆಸಿದ ರೌಡಿಗಳು ಎಲ್ಲಾ ಸಿದ್ದತೆಯೊಂದಿಗೆ ಬಂದಿದ್ದಾರೆ. ಗೌಡನು ಸಹ ಅಲಾಯಿ ಕುಣಿತದಲ್ಲಿ ಶಾಮಿಲಾಗಿದ್ದಾನೆ. ನೋಡ ನೂಡುತ್ತಿದ್ದಂತೆ ಕತ್ತಿ ಲಾಂಗುಗಳು ಝಳಪಿಸುತ್ತವೆ. ಉರಿಯುತ್ತಿದ್ದ ಅಲಾಯಿ ಕುಣಿಯು ಹೆಣ ಸುಡುವ ಸುಡುಗಾಡಾಗಿ ಮಾರ್ಪಟ್ಟಿದ್ದೆ. ಅಷ್ಟರಲ್ಲಿ ಇಬ್ಬರು ದಲಿತರ ಹುಡುಗರು ಗೌಡರ ನಾಲ್ಕು ಜನ ಮುಖಂಡರನ್ನು ಎಳೆದು ಉರಿಯುವ ಅಲಾಯಿಕುಣಿಗೆ ತಳ್ಳುತ್ತಾರೆ. ಗೌಡನು ತಾನಿ ತೋಡಿದ ಕುಣಿಯಲ್ಲಿ ಬಿದ್ದು ಉರಿದು ಹೋಗುತ್ತಾನೆ. ಅಂದು ಬೂದೂರಿನಲ್ಲಿ ನಡೆದ ಕತ್ತಲ್ ರಾತ್ರಿಯು ಗೌಡರ ಪಾಲಿಗೆ ಕರಾಳ ರಾತ್ರಿಯಾಗುತ್ತದೆ.
ಮುಹಮ್ಮದ್ ರಝಾ ಮಾನ್ವಿ
ರಾಜ್ಯ - ರಾಷ್ಟ್ರ
ವಿಶೇಷ ವರದಿ: ಮೌನೇಶ ವಿಶ್ವಕರ್ಮ ಸಾಮಾನ್ಯವಾಗಿ ಶಾಲೆಯೆಂದರೆ ಪ್ರತಿದಿನ ಬೆಳಿಗ್ಗೆ ಧ್ವಜಸ್ತಂಭದ ಎದುರು ಅಸೆಂಬ್ಲಿ ಮಾಡಿ, ನಾಡಗೀತೆ ಹಾಡುವುದು ರೂಢಿ. ಆದರೆ ಈ ಮಕ್ಕಳ ದೌರ್ಭಾಗ್ಯವೆಂದೇ ಹೇಳಬೇಕು... ''ಅಪಾಯ''ವೆಂಬ ಬೋರ್ಡ್ ತಗಲಿಸಿಕೊಂಡಿರುವ ಧ್ವಜಸ್ತಂಭಕ್ಕಿಂತಲೂ ಅದೆಷ್ಟೋ ಎತ್ತರವಾಗಿರುವ ವಿದ್ಯುತ್ ಗೋಪುರದ ಅಡಿಯಲ್ಲೇ ಇವರ ಪ್ರತಿದಿನದ ನಾಡಗೀತೆ,ರಾಷ್ಟ್ರಗೀತೆ ಮೊಳಗುತ್ತದೆ.ಬೆಳಗಿನ ನಾಡಗೀತೆ ಮೊಳಗುವ ಹೊತ್ತು ಟವರ್ ಹಾಗೂ ಮಕ್ಕಳ ಫೋಟೋ ಕ್ಲಿಕ್ಕಿಸಲೆಂದು ಹೋದಾಗ ಶಿಕ್ಷಕಿಯೊಬ್ಬರು ''ಇನ್ನೆಂತಕೆ ...? ಬೊಜ್ಜಕ್ಕಾ...?'' ಎಂದು ಗೊಣಗಿದ್ದು, ಉಳಿದದ್ದೆಲ್ಲಾ ಮುಗಿದಿದೆ ಎಂಬಷ್ಟು ಅಸಹನೆಯಿಂದ ಕೂಡಿತ್ತು.
ಬಂಟ್ವಾಳ ; ಒಂದೆಡೆಯಲ್ಲಿ ಚಿಣ್ಣರು ಆಡುವ ಅಂಗನವಾಡಿ, ಮತ್ತೊಂದೆಡೆ ಶಾಲೆ-ಶಾಲಾ ಮಕ್ಕಳು,ಇನ್ನೊಂದೆಡೆ ಬಿಸಿ ಬಿಸಿ ಊಟ ತಯಾರಾಗುವ ಕೊಠಡಿ.... ಈ ಮೂರರ ನಡುವೆ ಎದ್ದು ನಿಂತಿದೆ ''ಅಪಾಯಕಾರಿಯಾದ ವಿದ್ಯುತ್ ಗೋಪುರ''..ಇದು ಮಾಣಿ ಸಮೀಪದ ಕೆದಿಲ ಗಡಿಯಾರ ಶಾಲೆಯಲ್ಲಿ ಕಂಡು ಬರುವ ಸನ್ನಿವೇಶ.
ಹೌದು..ಸರಕಾರಿ ಜಾಗವೆಂಬ ಕಾರಣಕ್ಕೆ ಸರಕಾರಿ ಶಾಲಾ ಅಂಗಳದಲ್ಲೇ ಮೆಸ್ಕಾಂ ನಿರ್ಮಿಸಿರುವ ಬೃಹತ್ ಗೋಪುರ ಅಪಾಯವನ್ನು ಆಹ್ವಾನಿಸುವಂತಿದ್ದು ಇದರಿಂದಾಗಿ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಪ್ರಾಣಭಯದಿಂದ ದಿನ ದೂಡುವಂತಾಗಿದೆ.
ಬೆಳ್ತಂಗಡಿಯ ಗುರುವಾಯನಕೆರೆಯಿಂದ ನೆಟ್ಲಮುಡ್ನೂರುವಿನ ನೆಟ್ಲಮುಡ್ನೂರುವಿನ 220/110/11ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಸಂಪರ್ಕಿಸುವ ಈ ಲೈನ್ ಶಾಲೆಯಿರುವ ಸರ್ವೆ ನಂ.11/3 ರಲ್ಲಿ ಹಾದು ಹೋಗಿರುವುದು ಶಾಲಾಡಳಿತಕ್ಕೆ,ಮಕ್ಕಳಿಗೆ ಹಾಗೂ ಊರವರಿಗೆ ತೀರಾ ಸಂಕಟ ತಂದಿದೆ.ಗೋಪುರ ನಿರ್ಮಾಣದ ವೇಳೆ ಶಾಲಾಡಳಿತ ವ್ಯಾಪಕವಾಗಿ ಶಾಲಾ ಅಂಗಳದಲ್ಲಿ ಟವರ್ ನಿರ್ಮಿಸುವುದು ಬೇಡ ಎಂದು ಒತ್ತಾಯಿಸಿದ್ದರೂ ಜಿಲ್ಲಾಧಿಕಾರಿಗಳ ಆದೇಶ ಈ ಒತ್ತಾಯವನ್ನು ಅಡಗಿಸಿದೆ.
ಸರಕಾರಿ ಶಾಲೆಗಳ ಬಗ್ಗೆ, ಶಾಲಾ ಮಕ್ಕಳ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಅಸಡ್ಡೆ ಇದೆ ಎಂಬುವುದಕ್ಕೆ ಇದೇ ದೊಡ್ಡ ನಿದರ್ಶನ. ಶಾಲಾ ಅಂಗಳದಲ್ಲಿ ಟವರ್ ನಿರ್ಮಿಸಬೇಕೆಂಬ ಮೆಸ್ಕಾಂ ಬೇಡಿಕೆ, ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕರ ವಿರೋಧದ ಮಧ್ಯೆ ಜಿಲ್ಲಾಧಿಕಾರಿ,ಕಂದಾಯ ಇಲಾಖೆ,ಮೆಸ್ಕಾಂ,ಹಾಗೂ ಶಿಕ್ಷಣ ಇಲಾಖೆಗಳು ಒಟ್ಟು ಪ್ರಕರಣದ ಒಳ ಹೊಕ್ಕಿದೆ. ಆದರೆ ಎಲ್ಲರಿಗೂ ಸರ್ಕಾರಿ ಸುತ್ತೋಲೆ,ಸರ್ಕಾರಿ ಜಮೀನು,ಸರ್ಕಾರಿ ಜಮೀನು ಎಂಬುದೇ ಮುಖ್ಯವಾಯಿತಲ್ಲದೇ ಆ ಶಾಲೆಯಲ್ಲಿ ಕಲಿಯುತ್ತಿರುವ, ಅಂಗನವಾಡಿಯಲ್ಲಿ ಆಟವಾಡುವ ಮಕ್ಕಳ ಜೀವ ಭದ್ರತೆಯ ಬಗ್ಗೆ ಯಾರೂ ಚಿಂತಿಸಲೇ ಇಲ್ಲ. ಹಾಗಾಗಿ ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡಿರುವಂತಾ ಸ್ಥಿತಿ ಇಲ್ಲಿಯವರದ್ದು.
ಸಾಮಾನ್ಯವಾಗಿ ಶಾಲೆಯೆಂದರೆ ಪ್ರತಿದಿನ ಬೆಳಿಗ್ಗೆ ಧ್ವಜಸ್ತಂಭದ ಎದುರು ಅಸೆಂಬ್ಲಿ ಮಾಡಿ, ನಾಡಗೀತೆ ಹಾಡುವುದು ರೂಢಿ. ಆದರೆ ಈ ಮಕ್ಕಳ ದೌಭರ್ಾಗ್ಯವೆಂದೇ ಹೇಳಬೇಕು... ''ಅಪಾಯ''ವೆಂಬ ಬೋರ್ಡ್ ತಗಲಿಸಿಕೊಂಡಿರುವ ಧ್ವಜಸ್ತಂಭಕ್ಕಿಂತಲೂ ಅದೆಷ್ಟೋ ಎತ್ತರವಾಗಿರುವ ವಿದ್ಯುತ್ ಗೋಪುರದ ಅಡಿಯಲ್ಲೇ ಇವರ ಪ್ರತಿದಿನದ ನಾಡಗೀತೆ,ರಾಷ್ಟ್ರಗೀತೆ ಮೊಳಗುತ್ತದೆ.
ಹೋರಾಟವೆಲ್ಲ ವ್ಯರ್ಥವಾಯಿತು....
ಶಾಲಾ ಅಂಗಳದಲ್ಲಿ ವಿದ್ಯುತ್ ಟವರ್ ನಿರ್ಮಾಣವಾಗಿದೆ ಎಂದಾಕ್ಷಣ ಮನಸ್ಸಿಗೆ ತೋಚುವುದು ಅಲ್ಲಿಯ ಎಸ್.ಡಿ.ಎಂ.ಸಿ. ಏನು ಮಾಡುತ್ತಿದೆ ಎಂದು. ಆದರೆ ಇಲ್ಲಿ ಈ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ರಘು ಅಜಿಲರು ಮತ್ತು ಸಮಿತಿ ಸದಸ್ಯರು ಮಕ್ಕಳ ಹಿತ ದೃಷ್ಟಿಯಿಂದ ಶಾಲಾ ಗೇಟಿಗೆ ಬೀಗ ಜಡಿದೂ ಪ್ರತಿಭಟನೆ ನಡೆಸಿದ್ದಾರೆ. ಶಾಲಾ ಶಿಕ್ಷಕರೂ ತಮ್ಮಿಂದಾದ ಬೆಂಬಲವನ್ನೂ ನೀಡಿದ್ದಾರೆ. ಆದರೆ ಊರವರ ಬೆಂಬಲ ನಿರೀಕ್ಷಿತ ಪ್ರಮಾಣದಲ್ಲಿ ದೊರಕದಿರುವುದು,ಶಿಶು ಅಭಿವೃದ್ದಿ ಇಲಾಖೆ,ಶಿಕ್ಷಣ ಇಲಾಖೆಯವರ ನಿರ್ಲಕ್ಷ್ಯ ಈ ಹೋರಾಟಕ್ಕೆ ನಿರೀಕ್ಷಿತ ಜಯ ತಂದು ಕೊಟ್ಟಿಲ್ಲ. ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಿಕೊಡುತ್ತೇವೆ ಎಂದು ಹೇಳಿರುವ ಮೆಸ್ಕಾಂ ಶಾಲೆಗೆ ಸಂಬಂದಿಸಿದ ಜಮೀನಿನಲ್ಲಿ 2 ಟವರ್ ನಿರ್ಮಿಸಿದೆ.ಈ ಪೈಕಿ 20 ಗೇರು ಮರ ಹಾಗೂ 3 ತೆಂಗಿನ ಮರ ಕಡಿದದ್ದರ ಬಾಬ್ತು 25828 ರುಪಾಯಿ ಪರಿಹಾರ ಧನವನ್ನು ಶಾಲೆಗೆ ನೀಡಿದೆ.
ಉಳಿದಂತೆ ಟವರ್ ಸುತ್ತ 8ಅಡಿ ಎತ್ತರದ ತಡೆಗೋಡೆ ಮಾಡಿಕೊಡುತ್ತೇವೆ,ಅಂಗನವಾಡಿಯನ್ನು ಸ್ಥಳಾಂತರ ಮಾಡುತ್ತೇವೆ ಎಂದು ಹೇಳುವ ಮೆಸ್ಕಾಂ ಅಧಿಕಾರಿಗಳು ಆ ಬಗೆಗಿನ ಪ್ರಕ್ರಿಯೆಯಲ್ಲಿ ತೊಡಗಿದ್ದಾರಂತೆ. ಆದರೆ ಶಿಶು ಅಭಿವೃದ್ದಿ ಇಲಾಖೆಯೂ ಹೆಚ್ಚಿನ ಆಸಕ್ತಿ ವಹಿಸದೇ ಇರುವುದರಿಂದ ಅಂಗನವಾಡಿ ಸ್ಥಳಾಂತರ ಗೊಳ್ಳಲು ವರ್ಷಹಿಡಿದರೂ ಅಚ್ಚರಿಯಿಲ್ಲ.
ಶಾಲಾ ಅಧ್ಯಾಪಕರು ಶಾಲೆಯಲ್ಲಿ ಇಲ್ಲದ ಸಂದರ್ಭ ಸರ್ವೇ ಕಾರ್ಯನಡೆಸಿ ಸ್ಥಳ ಗುರುತಿಸಿರುವ ಮೆಸ್ಕಾಂ ಹಠ ಹಿಡಿದು ಜಿಲ್ಲಾಧಿಕಾರಿಯವರ ಜು,10/2007ರ ಆದೇಶ ದಂತೆ ಟವರ್ ನಿರ್ಮಿಸಿಯೇ ಬಿಟ್ಟಿದೆ. ''ಉತ್ತಮ ಸೇವೆಗೆ ಉನ್ನತ ಪ್ರಯತ್ನ'' ಎಂಬ ಘೋಷಣೆಯಡಿ ರಾಜ್ಯದ ಇಂಧನ ಖಾತೆ ಸಚಿವರಾದ ಕೆ.ಎಸ್. ಈಶ್ವರಪ್ಪರವರು ಕಳೆದ ನವೆಂಬರ್ 23ರಂದು 43.64 ವೆಚ್ಚದ ನೆಟ್ಲಮುಡ್ನೂರುವಿನ 220/110/11ಕೆವಿ ಸಾಮಥ್ರ್ಯದ ವಿದ್ಯುತ್ ವಿತರಣಾ ಕೇಂದ್ರ ವನ್ನು ಉದ್ಘಾಟಿಸಿ, ಭಾಷಣ ಬಿಗಿದು ತೆರಳಿದ್ದಾರೆ. ಅಂದಿನಿಂದ ಈ ಟವರ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು ಆಸುಪಾಸಿನವರಿಗೆ ಉಸಿರು ಕಟ್ಟಿದಂತಾಗಿದೆ.
ಟವರ್ ಅಡಿಯಲ್ಲೇ ನಡೆಯುತ್ತಿರುವ ಅಂಗನವಾಡಿ ಕೇಂದ್ರದಲ್ಲಿ ಸುಮಾರು 35 ಮಕ್ಕಳಿದ್ದರೆ, ಒಂದನೇ ತರಗತಿಯಿಂದ ಎಂಟನೆ ತರಗತಿವರೆಗೆ ಕಲಿಯುತ್ತಿರುವ 345 ಮಕ್ಕಳು ಪ್ರಾಥಮಿಕ ಶಾಲೆಯಲ್ಲಿದ್ದಾರೆ.
ಬೆಳಗಿನ ನಾಡಗೀತೆ ಮೊಳಗುವ ಹೊತ್ತು ಟವರ್ ಹಾಗೂ ಮಕ್ಕಳ ಫೋಟೋ ಕ್ಲಿಕ್ಕಿಸಲೆಂದು ಹೋದಾಗ ಶಿಕ್ಷಕಿಯೊಬ್ಬರು ''ಇನ್ನೆಂತಕೆ ...? ಬೊಜ್ಜಕ್ಕಾ...?'' ಎಂದು ಗೊಣಗಿದ್ದು, ಉಳಿದದ್ದೆಲ್ಲಾ ಮುಗಿದಿದೆ ಎಂಬಷ್ಟು ಅಸಹನೆಯಿಂದ ಕೂಡಿತ್ತು.
ಮಕ್ಕಳು ಎಲ್ಲಿದ್ದರೂ ಸ್ವತಂತ್ರ ವಾಗಿರಬೇಕು. ಭೀತಿಯಿಂದ ಓಡಾಡುವ ಪರಿಸ್ಥಿತಿ ಅವರಿಗೆ ಬರಬಾರದು,,, ಅಂತಹ ಸ್ಥಿತಿ ಈಗ ಕೆದಿಲ ಗಡಿಯಾರ ಶಾಲೆ, ಅಂಗನವಾಡಿ ಮಕ್ಕಳಿಗೆ ಬಂದಿದೆ. ಪುತ್ತೂರು ಕ್ಷೇತ್ರದ ಶಾಸಕರು,ಸ್ಥಳೀಯ ಗ್ರಾಮಪಂಚಾಯತ್,ತಾ.ಪಂ.ಜಿ.ಪಂ ಸದಸ್ಯರು, ಶಿಕ್ಷಣ ಇಲಾಖೆ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಾಗಿದೆ. ಊರ ಮಂದಿ ಇನ್ನಾದರೂ ಜಾಗೃತರಾಗಬೇಕಾದ ಅನಿವಾರ್ಯತೆ ಬಂದಿದೆ.. ಟವರ್ ಸ್ಥಳಾಂತರ ಅಸಾಧ್ಯವೆಂದಾದರೆ ಶಾಲೆಯನ್ನಾದರೂ ಸ್ಥಳಾಂತರಗೊಳಿಸಬಹುದಲ್ಲವೇ ಎಂಬ ಬಗ್ಗೆ ಯೋಚಿಸಲೇಬೇಕಾಗಿದೆ.
ರಾಜ್ಯ - ರಾಷ್ಟ್ರ
ಮಡಿಕೇರಿ :ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸರಕಾರ ಅಧಿಕಾರಿ, ಸಿಬ್ಬಂದಿ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವಂತಾಗಬೇಕು ಅದಕ್ಕೆ ಎಲ್ಲರೂ ಪ್ರತಿನಿತ್ಯ ತಮ್ಮ ಭಾಷಾ ಸಾಮರ್ಥ್ಯವನ್ನು ವೃದ್ಧಿಗೊಳಿಸಬೇಕು. ಒಂದು ಪ್ರದೇಶದಲ್ಲಿ ವಾಸಮಾಡುವ ಜನರ ಭಾಷೆಯಲ್ಲೇ ಆಡಳಿತವೂ ನಡೆದಾಗ ಮಾತ್ರ ಪ್ರಾಮಾಣಿಕತೆ ,ಪಾರದರ್ಶಕತೆಗಳು ಬೇರೂರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಶ್ವತ್ಥ್ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಾಷಾ ಬಳಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಮಾಡುವ ಪ್ರಯತ್ನ ನಿರಂತರವಾಗಿ ನಡುಯುತ್ತಿದ್ದರೂ ಅನುಷ್ಠಾನದಲ್ಲಿ ವಿಫಲವಾಗಿರುವ ಕುರಿತು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬಾಕಾಗಿದೆ. ಕನ್ನಡ ಅನುಷ್ಠಾನ ಕಡ್ಡಾಯವಿದ್ದರೂ ಕೆಲವರಿಗೆ ನಾವು ಕನ್ನಡ ಪಂಡಿತರಲ್ಲ ಎಂಬ ಕೀಳಿರಿಮೆಯ ಮನಸ್ಥಿತಿ ಅಡ್ಡಿಯುಂಟುಮಾಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಯವರು ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಕ್ಕಾಗಿ ಅಧಿಕಾರಿ ನೌಕರರು ಕಂಕಣಬದ್ಧರಾಗಬೇಕಾಗಿದೆ. ಜನರಾಡುವ ಭಾಷೆಯಲ್ಲಿಯೇ ಆಡಳಿತ ನಡೆಸುವುದು ಅಧಿಕಾರಿಗಳು ಹಾಗೂ ನೌಕರರ ಗುರಿಯಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಮಾತನಾಡಿ ಕನ್ನಡ ಈ ನೆಲದ ಭಾಷೆ, ಇಚ್ಛಾ ಶಕ್ತಿಯ ಕೊರತೆಯಿಂದ ಆಡಳಿತದಲ್ಲಿ ಶೇ. 100ರಷ್ಟು ಕನ್ನಡ ಭಾಷೆಯು ಸಾಧ್ಯವಾಗುತ್ತಿಲ್ಲ. ಕೆಲವೊಂದು ಇಲಾಖೆಗಳು ತಾಂತ್ರಿಕ ಕಾರಣಗಳಿಂದ ಇಂಗ್ಲೀಷ್ ಭಾಷೆ ಬಳಸುತ್ತಿವೆ. ಮುಂದಿನ ದಿನಗಳಲ್ಲಿ ಇದು ಕೂಡ ಕನ್ನಡದಲ್ಲಿಯೇ ನಡೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಿರ್ಜಾಅಕ್ಬರುಲ್ಲಾ ಅವರು ಮಾತನಾಡಿ ಸರಕಾರದ ಆದೇಶಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಮನೋಇಚ್ಚೆಯಿಂದ ದೈನಂದಿನ ಆಡಳಿತದಲ್ಲಿ ಕನ್ನಡವನ್ನೇ ಬಳಸಬೇಕು. ಕಚೇರಿ ಕೈಪಿಡಿ, ಆಡಳಿತ ಪದಕೋಶ, ಇತ್ಯಾದಿ ಪುಸ್ತಕಗಳ ನೆರವಿನಿಂದ ಪಾರಿಭಾಷಿಕ ಪದಗಳನ್ನು ಅರಿತು ಕನ್ನಡವನ್ನು ಪ್ರೀತಿಯಿಂದ ಆಡಳಿತ ಭಾಷೆಯಾಗಿ ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಪರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ, ಸರಿಯಾದ ಕನ್ನಡ ಬಳಕೆ ಇಂದಿನ ಅವಶ್ಯಕತೆ, ಶತಮಾನಗಳ ಇತಿಹಾಸವಿರುವ ಕನ್ನಡ ಭಾಷೆಯ ಬಳಕೆಗೆ ಇಚ್ಛಾ ಶಕ್ತಿಯ ಕೊರತೆ ಕಾಡಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಹೊರತು ಇನ್ನುಳಿದ ಅವಧಿಯಲ್ಲಿ ಕನ್ನಡ ಭಾಷೆ ಬಳಸುವುದು ಕಡ್ಡಾಯ ಎಂದರು.
ಪ್ರಾದೇಶಿಕ ಸುದ್ದಿ
ಮಡಿಕೇರಿ ಡಿ:ಕರ್ನಾಟಕ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ. ಜಿ. ಬೋಪಯ್ಯ ಅವರು ನಾಳೆ (ಜನವರಿ, 01) ಹೊಸ ಹುದ್ದೆ ಅಲಂಕರಿಸಿದ ನಂತರ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಕುಶಾಲನಗರದ ಕೊಪ್ಪ ಗೇಟ್ ಬಳಿಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10ಗಂಟೆಗೆ ಕೊಪ್ಪ ಗೇಟ್ಬಳಿಗೆ ಆಗಮಿಸಲಿರುವ ನೂತನ ವಿಧಾನ ಸಭಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು.
ನಂತರ ಕೆ.ಜಿ. ಬೋಪಯ್ಯ ಅವರು ಕುಶಾಲನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವರು. ಬೆಳಿಗ್ಗೆ 11.30ಕ್ಕೆ ಕುಶಾಲನಗರದಿಂದ ಹೊರಟು ಮಡಿಕೇರಿಗೆ ಆಗಮಿಸುವ ಕೆ.ಜಿ .ಬೋಪಯ್ಯ ಅವರಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ವತಿಯಿಂದ ಸ್ವಾಗತ ಕೋರಲಾಗುವುದು. ಇದೇ ವೇಳೆ ಅವರು ನಗರದ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣದಿಂದ ನಗರ ಸಭೆಯ ಕಚೇರಿವರೆಗೆ ನಿರ್ಮಿಸಲಾಗಿರುವ ಹೊಸ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.
ತದ ನಂತರ ನೂತನ ವಿಧಾನ ಸಭಾಧ್ಯಕ್ಷರಿಗೆ ಕಾವೇರಿ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಇದರಲ್ಲಿ ಶಕ್ತಿ ಪತ್ರಿಕೆ ಸಂಪಾದಕರಾದ ಜಿ. ರಾಜೇಂದ್ರ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಸದರಿ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬೀದರ: ಕೇಂದ್ರ ಸರಕಾರದ ಕೌನ್ಸೆಲ್ಗಳಾಗಿ ಹಿರಿಯ ವಕೀಲರಾದ ಮಹಮ್ಮದ್ ಲೈಕೊದ್ದೀನ್ ಹಾಗೂ ಗಂಗಶೆಟ್ಟಿ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು (ಆದಾಯ ತೆರಿಗೆ ಹಾಗೂ ರೈಲ್ವೇ ಇಲಾಖೆ ಹೊರತುಪಡಿಸಿ) ಗುಲ್ಬರ್ಗಾ ಸಂಚಾರಿ ಪೀಠದ ಮುಂದೆ ವಾದಿಸಲು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ವಕಾಲತ್ತು ವಹಿಸಲು ಇವರನ್ನು ನೇಮಕ ಮಾಡಲಾಗಿದೆ. ಈ ನೇಮಕ ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.
ಮುಂದೆ ಓದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಮಸ್ತ ಜನತೆಗೆ ಹೊಸ ವರ್ಷದ ಸಂದರ್ಭದಲ್ಲಿ ಶುಭಾಶಯ ಸಲ್ಲಿಸಿದ್ದಾರೆ.ಕಳೆದ ವರ್ಷದ ಕಹಿ ನೆನಪು ದೂರವಾಗಿ ಹೊಸ ವರ್ಷದಲ್ಲಿ ಹರ್ಷದ ಹೊನಲು ಹರಿಯಲಿ. ಎಲ್ಲರಿಗೂ ಯಶಸ್ಸು ಮತ್ತು ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ.
ರಾಜ್ಯ - ರಾಷ್ಟ್ರ
ಮಂಗಳೂರು: ನವಮಂಗಳೂರು ಬಂದರು ಬಳಿ ಜುಲೈ 18 ರಂದು ಮುಳುಗಿದ್ದ ಎಂ ವಿ ಏಶಿಯನ್ ಫಾರೆಸ್ಟ್ ಹಡಗಿನಿಂದ ತೈಲ ತೆಗೆಯುವ ಕಾರ್ಯ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.ಜಿಲ್ಲಾಡಳಿತ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ನಿರ್ದೇಶನದಂತೆ ಪಿ ಅಂಡ್ ಐ ಕ್ಲಬ್ ನವರು ಮುಳುಗಿರುವ ಹಡಗಿನಿಂದ ತೈಲ ಹೊರ ತೆಗೆಯಲು ಸಿಂಗಾಪೂರ ಮೂಲದ ಸ್ಮಿತ್ ಸಾಲ್ವೇಜ್ ಕಂಪೆನಿಗೆ ವಹಿಸಿದ್ದು,ತೈಲ ತೆಗೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ.ಈ ಬಗ್ಗೆ ಸಮೀಕ್ಷೆ ನಡೆಸಿ ಕಾರ್ಯಾಚರಣೆ ಆರಂಭಿಸಿರುವ ಕಂಪೆನಿ 36 ದಿನಗಳೊಳಗೆ ಸಮುದ್ರ ಕಲುಷಿತಗೊಳ್ಳದಂತೆ ಹಾಟ್ ಟ್ಯಾಪ್ ವಿಧಾನದ ಮೂಲಕ ತೈಲ ತೆಗೆಯುವುದಾಗಿ ಪಿಪಿಟಿ ಪ್ರಸಂಟೇಷನ್ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿದರು .ಫೆಬ್ರವರಿ ಮೊದಲ ವಾರದೊಳಗೆ ತೈಲ ತೆಗೆಯುವುದನ್ನು ಸಂಪೂರ್ಣಗೊಳಿಸಿದ ಬಳಿಕ ಹಡಗಿನ ಅವಶೇಷಗಳನ್ನು ತೆಗೆಯುವ ಬಗ್ಗೆಯೂ ಶಿಪ್ಪಿಂಗ್ ಕಂಪೆನಿಯ ಪ್ರತಿನಿಧಿಯವರು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನಿರ್ದೇಶಿಸಿದರು.
ಮಂಗಳೂರು:2010-11ನೇ ಸಾಲಿಗೆ 119.40ಕೋಟಿ ರೂ.ಗಳ ವಾರ್ಷಿಕ ಕರಡು ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರೂಪಿಸಿದೆ.ಶೈಕ್ಷಣಿಕ ವಲಯಕ್ಕೆ 20.07ಕೋಟಿ,ಕುಟುಂಬಕಲ್ಯಾಣ ಕಾರ್ಯಕ್ರಮಕ್ಕೆ 12.67ಕೋಟಿ ರೂ.,ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ 22.68ಕೋಟಿರೂ.,ಪಂಚಾಯತ್ ರಾಜ್ ಸಂಸ್ಥೆಗಳಿಗೆ13.18ಕೋಟಿರೂಗಳ ಕರಡು ಯೋಜನೆ ರೂಪಿಸಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ನ 21ನೇ ಸಾಮಾನ್ಯ ಸಭೆಯಲ್ಲಿ ಕರಡು ಯೋಜನೆ ಅನುದಾನದ ವಿವರಗಳನ್ನು ನೀಡಲಾಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ,ಮೂಲಭೂತ ಸೌಕರ್ಯಗಳ ಬಗ್ಗೆ, ರಸ್ತೆ,ವಿದ್ಯುತ್ ಸಂಪರ್ಕ ಯೋಜನೆಗಳ ಬಗ್ಗೆ,ಅಡಿಕೆ ಬೆಳೆಗೆ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಸದಸ್ಯರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಸೆಳೆಯುವ ಭರವಸೆಯನ್ನು ಜಿಲ್ಲಾ ಪಂಚಾಯಿತಿಯಲ್ಲಿ ನೀಡಿದರು. ಸದಸ್ಯರ ಅಭಿವೃದ್ಧಿ ಕಾಮಗಾರಿಕುರಿತ ಅನುದಾನದ ಸಂಶಯಗಳಿಗೆ ಸಿಇಒ ಪಿ.ಶಿವಶಂಕರ್ ಉತ್ತರಿಸಿದರು.ಎಲ್ಲಾ ಸ್ಥಾಯಿಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು

ಬೆಂಗಳೂರು: ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನರಾದರು. ಬೆಂಗಳೂರಿನ ಅಭಿನಂದನ್ ಸ್ಟುಡಿಯೋ ಆವರಣದಲ್ಲಿ ಮೇರುನಟನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಧಿವತ್ತಾಗಿನಡೆಯಿತು. ಈ ಸಂದರ್ಭದಲ್ಲಿ ಭಾರತೀ ವಿಷ್ಣುವರ್ಧನ್ ಸೇರಿದಂತೆ ಕುಟುಂಬಸ್ಥರು , ಆಪ್ತರು, ಅಭಿಮಾನಿಗಳು ಸೇರಿದ್ದರು.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಷಣ ಗಣನೆ ಪ್ರಾರಂಭವಾಗಿದೆ. ವೈಧಿಕ ಕ್ರಿಯಾಧಿಗಳು ಪ್ರಾರಂಭಗೊಂಡಿವೆ. ಈಗಾಗಲೇ ವಿಶೇಷ ಅಂಬ್ಯುಲೆನ್ಸ್ ವಾಹನದಲ್ಲಿ ಪಾರ್ಥಿವ ಶರೀರವನ್ನು ಅಭಿಮಾನ್ ಸ್ಟುಡಿಯೋಕ್ಕೆ ಕರೆತರಲಾಗುತ್ತಿದೆ. ಕತ್ತಲಾವರಿಸುವ ಮುನ್ನ ಅಂತ್ಯಕ್ರಿಯೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಏತನ್ಮಧ್ಯೆ ಶಂಕರ ಬಿದರಿ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.

ಅಭಿಮಾನಿಗಳ ಹೆಸರಲ್ಲಿ ಕಿಡಿಗೇಡಿ ಕೃತ್ಯಗಳು ವಿಷ್ಣುವರ್ಧನ್ ಅಂತಿಮ ದರ್ಶನದ ಸಂದರ್ಭ ನಡೆದಿರುವುದು ದುಃಖಕರ ಅಂಶ. ಬೆಂಗಳೂರು ನಗರ ಸಾರಿಗೆ ಸಂಸ್ಥೆಗೆ ಸೇರಿದ 40ರಷ್ಟು ಬಸ್ಸುಗಳ ಗಾಜು ಪುಡಿಗೈದು ಹಾನಿನಡೆಸಲಾಗಿದೆ. ಕೆಲವೊಂದು ಬಸ್ಸುಗಳಿಗೆ ಬೆಂಕಿ ಹಚ್ಚಿಹಾನಿಮಾಡುವ ಪ್ರಯತ್ನಗಳು ನಡೆದಿವೆ. ಹಲವಾರು ವಾಹನಗಳಿಗೆ ಕಲ್ಲುತೂರಾಟ ನಡೆಸಿ ಹಾನಿಗೊಳಿಸಲಾಗಿದೆ. ಕೆಲವೊಂದು ವಾಹನಗಳನ್ನು ಸಂಪೂರ್ಣ ಹಾನಿಗೊಳಿಸಿ ಗೊಂದಲ ಸೃಷ್ಠಿಸುವ ವಾತಾವರಣಕ್ಕೆ ಕಿಡಿಗೇಡಿಗಳು ಕಾರಣೀಕರ್ತರಾಗಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಇದೀಗ ಪಾರ್ಥಿವ ಶರೀರವನ್ನು ನೇರವಾಗಿ ಅಭಿಮಾನ್ ಸ್ಟುಡಿಯೋದತ್ತ ಕೊಂಡೊಯ್ಯಲಾಗುತ್ತಿದೆ. ದಾರಿಯುದ್ದಕ್ಕೂ ವಿಷ್ಣು ಅಭಿಮಾನಿಗಳು ಜಮಾಯಿಸಿದ್ದು ನಾಯಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇತರ ಗಣ್ಯರು ಸೇರಿದ್ದಾರೆ. ಸರಕಾರಿ ಗೌರವಗಳ ಮೂಲಕ ಅಂತ್ಯಸಂಸ್ಕಾರ ನಡೆಯಲಿದೆ.

ವಿಷ್ಣುವರ್ಧನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸ್ತೋಮ ಇನ್ನೂ ಹರಿದುಬರುತ್ತಲೇ ಇದೆ. ಇತ್ತ ಇನ್ನೊಂದು ಕಡೆ ತೀವ್ರ ಹಿಂಸಾಚಾರ ಮುಗಿಲು ಮುಟ್ಟಿದೆ. ವ್ಯವಸ್ಥಿತವಾದ ಗುಂಪೊಂದು ಹಿಂಸಾಚಾರವನ್ನು ನಡೆಸುತ್ತಿದೆ. ಇದರಿಂದಾಗಿ ನಿಜವಾದ ಅಭಿಮಾನಿಗಳಿಗೂ ತೀವ್ರ ತೊಂದರೆ ಉಂಟಾಗುತ್ತಿದೆ.
ವಿಷ್ಣು ವರ್ಧನ ಅವರ ಪಾರ್ಥಿವ ಶರೀರ ವೀಕ್ಷಣೆಯ ಸಂದರ್ಭ ಅನೇಕ ಮಂದಿ ಮೂರ್ಚೆಹೋಗಿ ತೊಂದರೆಗೊಳಗಾಗಿದ್ದಾರೆ. ಅನೇಕ ಮಂದಿ ಕಾಲ್ತುಳಿತಕ್ಕೊಳಗಾಗಿದ್ದಾರೆ. ವಿಷ್ಣುವರ್ಧನ್ ಅವರ ಆಪ್ತಮಿತ್ರ ಅಂಬರೀಶ್ ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರ ವಿಷ್ಣವರ್ಧನ್ ಅವರ ಸವಿನೆನಪಿಗೆ ಸ್ಮಾರಕ ನಿರ್ಮಾಣಕ್ಕೆ ಒಪ್ಪಿರುವುದನ್ನು ಪ್ರಶಂಸಿಸಿದರು.

ಸಾಹಸ ಸಿಂಹನ ಅಕಾಲ ನಿಧನಕ್ಕೆ ಅವರ ಅಭಿಮಾನಿಯೋರ್ವ ಮೈಸೂರಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.ಆತನನ್ನು ರಕ್ಷಿಸಲು ಹೋಗಿದ್ದ ಆತನ ಸ್ನೇಹಿತನೂ ಮೃತಪಟ್ಟಿದ್ದಾನೆ. ಏತನ್ಮಧ್ಯೆ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರ ವೀಕ್ಷಣೆಗಾಗಿ ತೀವ್ರ ನೂಕುನುಗ್ಗಲು ಪ್ರಾರಂಭಗೊಂಡಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.ಇದೇವೇಳೆ ಉದ್ರಿಕ್ತಗುಂಪುಗಳು ಹಲವಾರು ಕಟ್ಟಡಗಳ ಮೇಲೆ ಕಲ್ಲುತೂರಾಟ ನಡೆಸಿದೆ. ಹಲವಾರು ಕಟ್ಟಡಗಳ ಗಾಜುಗಳು ಪುಡಿಯಾಗಿವೆ. ವಾಹನಗಳು ಜಖಂಗೊಂಡಿವೆ. ಒಟ್ಟಿನಲ್ಲಿ ಗೊಂದಲಮಯವಾತಾವರಣ ನಿರ್ಮಾಣಗೊಂಡಿದೆ.

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಷ್ಣುವರ್ಧನ್ ನಿಧನಾ ನಂತರ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ. 2ಎಕ್ಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಲು ಸರಕಾರ 10ಕೋಟಿ ನೀಡಲು ಸರ್ಕಾರ ಒಪ್ಪಿರುವುದಾಗಿ ಘೋಷಿಸಿದ್ದಾರೆ.
ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪಾರ್ಥಿವ ಶರೀರವಿರಿಸಲಾಗಿದ್ದು ಇಂದು ಸಂಜೆ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಂಜೆ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಜನ ಜಮಾಯಿಸುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದ್ದು ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಹಲವಾರು ಮಂದಿ ಕಾಲ್ತುಳಿತಕ್ಕೊಳಗಾಗಿದ್ದಾರೆ. ನಿರಂತರವಾಗಿ ಪೊಲೀಸ್ ಲಾಠಿಚಾರ್ಜ್ ನಡೆಯುತ್ತಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೇರಿದ್ದ ವಿಷ್ಣು ಅಭಿಮಾನಿಗಳಿಂದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಯುತ್ತಿದೆ. ಹಲವಾರು ಪ್ರದೇಶಗಳಲ್ಲಿ ಆಸ್ತಿಪಾಸ್ತಿ ನಾಶಹೊಂದಿದೆ. ವಾಹನಗಳ ಮೇಲೆ ಕಲ್ಲುತೂರಾಟ, ಬೆಂಕಿ ಹಾಕಿದ ಘಟನೆಗಳೂ ಸಂಭವಿಸಿವೆ.
ಪೊಲೀಸ್ ವಾಹನಗಳ ಮೇಲೆ ಉದ್ರಿಕ್ತ ಅಭಿಮಾನಿಗಳ ಗುಂಪು ನಿರಂತರ ಕಲ್ಲುತೂರಾಟ ನಡೆಸುತ್ತಿದೆ. ಹಲವಾರು ಪೊಲೀಸರಿಗೂ ಗಾಯಗಳಾಗಿವೆ. ಪ್ರತಿಯಾಗಿ ಪೊಲೀಸರು ಆಶ್ರುವಾಯು ಸಿಡಿಸಿ ಗುಂಪುಚದುರಿಸಲೆತ್ನಿಸುತ್ತಿದ್ದಾರೆ.

ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ವಿಷ್ಣು ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಅಂತಿಮ ದರ್ಶನ ಪಡೆಯುತ್ತಿರುವ ಸಹಸ್ರಾರು ಅಭಿಮಾನಿಗಳ ರೋಧನ ಮುಗಿಲುಮುಟ್ಟಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿಪ್ರಹಾರ ನಡೆಸಿದ್ದಾರೆ.800ಮಂದಿ ಪೊಲೀಸರು ಸ್ಥಳದಲ್ಲಿ ಭದ್ರತಾ ವ್ಯವಸ್ಥೆಕೈಗೊಂಡಿದ್ದಾರೆ. ಏತನ್ಮಧ್ಯೆ ಡಾ.ವಿಷ್ಣು ಅವರ ಹೆಸರು ಶಾಶ್ವತವಾಗಿರುವಂತೆ ಮಾಡಲು ಯಾವುದಾದರೂ ಒಂದು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ರಾಜ್ಯ - ರಾಷ್ಟ್ರ
197ಚಿತ್ರಗಳಲ್ಲಿ ನಟಿಸಿ ಅತ್ಯಂತ ಉತ್ಕೃಷ್ಠ ಪ್ರದರ್ಶನ ನೀಡಿದ್ದ ಡಾ.ವಿಷ್ಣವರ್ಧನ್ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಮುಂಜಾನೆ 3.30ರ ಸುಮಾರಿಗೆ ವಿಷ್ಣವರ್ಧನ್ ಅವರ ಪಾರ್ಥಿವ ಶರೀರವನ್ನು ಮೈಸೂರು ವಿಕ್ರಮ್ ಆಸ್ಪತ್ರೆಯಿಂದ ಮನೆಮಂದಿಗೆ ಹಸ್ತಾಂತರಿಸಲಾಯಿತು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿರಿಯ ಕನ್ನಡ ನಾಯಕ ನಟರು, ಪರಭಾಷಾ ಕಲಾವಿದರು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು ವಿಷ್ಣುವರ್ಧನ್ ಅವರ ನಿವಾಸದಲ್ಲಿ ಜಮಾಯಿಸಿದ್ದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇಂದು ಸಂಜೆ 4ರ ತನಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ನಂತರ ಅಂತ್ಯಕ್ರಿಯೆಗಳು ನಡೆಯಲಿವೆ. ವಿಷ್ಣು ಅವರ ಅತ್ಯಂತ ಹೃದಯಸ್ಪರ್ಶಿ ನಟನೆಗಾಗಿ 7ಫಿಲಂಫೇರ್ ಪ್ರಶಸ್ತಿಗಳು ಅವರಿಗೆ ಸಂದಿದ್ದವು.
ಶಾಲಾ ಕಾಲೇಜುಗಳಿಗೆ ರಜೆ
ಹಿರಿಯ ನಟನ ನಿಧನಕ್ಕೆ ಗೌರವ ಸೂಚಿಸುವ ಸಲುವಾಗಿ ಇಂದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ನಾಯಕನ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗೊಳಿಂದಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ - ರಾಷ್ಟ್ರಬೆಂಗಳೂರು: ಸಾಹಸ ಸಿಂಹ ವಿಷ್ಣವರ್ಧನ್ ಇನ್ನಿಲ್ಲ. ಕನ್ನಡ ಚಿತ್ರರಂಗದ ಮೇರುನಟ ವಿಷ್ಣವರ್ಧನ್ ಸಮಸ್ತ ಅಭಿಮಾನಿಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಓರ್ವ ಸಾಹಸ, ಆದರ್ಶ ಮತ್ತು ಅತ್ಯಂತ ಜನಮನಗೆದ್ದ ನಟನಾಗಿ ವಿಷ್ಣವರ್ಧನ್ ಮಿಂಚಿದ್ದರು. ಅವರ ಸಾಹಚಿತ್ರಗಳು ಜನತೆಯನ್ನು ಹುಚ್ಚಬ್ಬಿಸಿದೆ. 1950ರಲ್ಲಿ ಜನಿಸಿದ ವಿಷ್ಣವರ್ಧನ್ ಇಡೀ ಕನ್ನಡಿಗರ ಕಣ್ಮಣಿಯಾಗಿದ್ದರು.ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ವಿಷ್ಣವರ್ಧನ್ ಸಂಪೂರ್ಣ ಆರೋಗ್ಯವಂತರಾಗಿದ್ದು ಇದೀಗ ಅವರ ಅಗಲಿಕೆ ಇಡೀ ನಾಡಿನ ಜನತೆಯಲ್ಲಿ ಬೇಸರ ಉಂಟುಮಾಡಿದೆ.ಕಳೆದ ಎರಡು ವರ್ಷಗಳಿಂದ ವಿಷ್ಣವರ್ಧನ್ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ದರು. ಅವರ ಉಡುಗೆತೊಡುಗೆಗಳೂ ಅದೇರೀತಿಯಲ್ಲಿ ಭಾಸವಾಗುತ್ತಿತ್ತು.
ವಿಷ್ಣವರ್ಧನ್ ಅವರ ಆಪ್ತಮಿತ್ರ ಚಿತ್ರ ಅತ್ಯಂ ಜನಪ್ರಿಯತೆಯನ್ನು ಗಳಿಸಿತ್ತು. ಇದಲ್ಲದೆ ಅವರ ಬಹುತೇಕ ಎಲ್ಲಾಚಿತ್ರಗಳೂ ಒಂದು ವೈವಿಧ್ಯತೆಯಿಂದ ಕೂಡಿದ್ದು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿತ್ತು.
ನಾಡು ಬರವಾಗಿದೆ: ಸಿ.ಎಂ.
ಅಭಿನವ ಭಾರ್ಗವ ಕಳೆದುಕೊಂಡು ನಾಡು ಬರಡಾಗಿದೆ. ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ವಿಷ್ಣವರ್ಧನ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಸಲಾಗುವುದು.ವಿಷ್ಣ ಕೇವಲ ನಟಮಾತ್ರ ಅಲ್ಲ. ಅವರು ಒಬ್ಬ ಗಾಯಕನಾಗಿದ್ದರು. ಅತ್ಯಂತ ಪ್ರಿಯ ಕಲಾವಿದರಾಗಿದ್ದರು. ಅವರ ಚಿತ್ರಗಳು ಯಜಮಾನ, ಸಹ್ಯಾದ್ರಿಯ ಸಿಂಹ ಮೊದಲಾದವರು ಆದರ್ಶನೀಯ. ಮೇರುನಟನನ್ನು ಕಳೆದ ನಾಡು ಬರಡಾಗಿದೆ. 6ಫಿಲಂಫೇರ್ ಅವಾರ್ಡ್ ಪಡೆದ ಓರ್ವ ಹಿರಿಯ ನಟ ಅವರು ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.



ನೇಶನಲ್ ಕಾಲೇಜು ಮೈದಾನದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ಪ್ರದರ್ಶನ ನಡೆಯಲಿದೆ. ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದ್ದ ಮೇರುನಟನ ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ.

ಮಹಾನ್ ಗಾಯಕ ಸುಗಮ ಸಂಗೀತ ಕ್ಷೇತ್ರದ ಸಾಧಕ ಸಿ.ಅಶ್ವತ್ ಮಂಗಳವಾರ ನಿಧನರಾಗಿದ್ದಾರೆ.
ಪ.ಗೋ.ಪತ್ರಗಳು
ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ!
ಬಹುಶಃ ಪ.ಗೋ. ಬೆಂಗಳೂರಿನಲ್ಲಿ ಒಂದಷ್ಟು ಕಾಲ ಸೇವೆ ಸಲ್ಲಿಸಿ 01.08.1959ರಂದು ಮಂಗಳೂರಿನ ‘ನವಭಾರತ’ ಪತ್ರಿಕೆಗೆ ಸೇರ್ಪಡೆಯಾಗಿರಬಹುದು. ಆ ಸಮಯಕ್ಕೆ ಹೆಚ್.ಆರ್.ನಾಗೇಶರಾವ್ ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಸೇರಿ ಒಂದು ವರ್ಷ ಕಳೆದಿತ್ತು. ಬೆಂಗಳೂರಿನಲ್ಲಿದ್ದಾಗ ಪ.ಗೋ. ಅವರಿಗೆ ‘ನ್ಯೂಸ್’ ಸೆಕ್ಷನ್ ಬದಲಿಗೆ ‘ಮ್ಯಾಗಝಿನ್’ ಸೆಕ್ಷನ್ ಲಭಿಸಿದ್ದಿರಬಹುದು. ಆ ಕಾರಣಕ್ಕಾಗಿಯೇ ಅವರು ಬೆಂಗಳೂರಿಗೆ ವಿದಾಯ ಹೇಳಿರಬಹುದು. ಇದು ನನ್ನ ಊಹೆ. ಮುಂದಿನ ಅದೆಷ್ಟೋ ಪತ್ರಗಳಲ್ಲಿ ಬೆಂಗಳೂರಿನ ಪತ್ರಿಕೆಗಳಲ್ಲಿ ಅವಕಾಶಗಳಿವೆಯೆ? ಎಂಬ ಪ್ರಶ್ನೆಯನ್ನು ಪ.ಗೋ. ಕೇಳಿದ್ದಾರೆ.
ದಿನಾಂಕ 08.08.1959 ಪ.ಗೋ. ತಮ್ಮ ಮಿತ್ರ ನಾಗೇಶರಾಯರಿಗೆ ಹೀಗೊಂದು ಪತ್ರ ಬರೆಯುತ್ತಾರೆ. ಅದು ದಿನಾಂಕ 10.08.1959ರಂದು ತಲುಪಿತೆಂದು ನಾಗೇಶರಾವ್ ಪತ್ರದ ಮೇಲೇ ದಾಖಲಿಸಿದ್ದಾರೆ. ಪ.ಗೋ. ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪೋಸ್ಟ್ ಕಾರ್ಡ್ ಅನ್ನು ತುಂಬಿಸಿದ್ದಾರೆ.
ನಮಸ್ತೆ ನಾಗೇಶರಾಯರಿಗೆ!
ಒಂದನೇ ತಾರೀಕಿನಿಂದ ನೊಗಕ್ಕೆ ಕತ್ತು ತಗಲಿದೆ. ಸಾಪ್ತಾಹಿಕ ಮಂಜರಿಯ ವ್ಯವಸ್ಥೆ.
ಇಲ್ಲೂ ಸಿಗಲಿಲ್ಲ ನ್ಯೂಸೂ!
ಇರಲಿ ‘ಕಾಲಕ್ಕೆ ತಕ್ಕಂತೆ ತಾಳ’ ತಾನೆ? 16ರಿಂದ ಸಂಚಿಕೆ ಆರಂಭ.
ನೀವು ಹೇಗಿದ್ದೀರೆಂದು ತಿಳಿಯುವ ಕುತೂಹಲ. ಪತ್ರ ವ್ಯವಹಾರವಿರಿಸಿಕೊಳ್ಳಲೂ ಬಹುದಲ್ಲವೆ!
ಬೆಂಗಳೂರಿನ ಗಾಳಿ ತಿಂದು ಅಭ್ಯಾಸ .... ಮಂಗಳೂರಿನ ಸೆಕೆಯುಣ್ಣಲು ಆಗಿಲ್ಲ. ವೃತ್ತಿ ಸಹಜ ಹೋಟಲೂಟ (‘ಅವರು’ ಊರು ಮನೆಯಲ್ಲಿ!)
ಬರಹವಿನ್ನೂ ನಾಟಿಲ್ಲ. ಹಾಲ್ - ಹೋಲು; ಬ್ಯಾಂಕ್ - ಬೇಂಕುಗಳ ನಡುವೆ ತಾಕಲಾಟ ಇನ್ನೂ ಆಗುತ್ತಿದೆ. (ಕೈವಾಡ ಏನಾದರೂ ಗುರುತಿಸಿದ್ದೀರಾ?). ಕೆಲವೊಮ್ಮೆ ವಾರ್ತಾವಿಭಾಗಕ್ಕೂ ಹೋಗುತ್ತಿದ್ದೇನೆ - ಅನಧಿಕೃತವಾಗಿ.
ಶ್ರೀ ಅ.ಸುಬ್ಬರಾಯರಿಗೆ ಒಂದು ನೆನಕೆ ಸಲ್ಲಿಸಿ (ಕಾಫಿ timeನಲ್ಲಾದರೆ ಉತ್ತಮ)
ಉತ್ತರ ಹಾರೈಸಲೆ?
ನಿಮ್ಮ
ಪ.ಗೋ. 8/8/59
ಹಾಲ್ದೊಡ್ಡೇರಿ ಸುಧೀಂದ್ರ
* * * * * * **
ಪ್ರಿಯ ಓದುಗರೇ,
ಈ ಅಭಿಪ್ರಾಯಗಳನ್ನು ಓದುವಾಗ ನಿಮಗೆ ಇದೇನು ಲೇಖನಗಳೋ ಅಥವಾ ಅಭಿಪ್ರಾಯಗಳೋ ಎಂಬ ಸಂದೇಹ ಬಂದರೂ ತಪ್ಪಲ್ಲ. ಕಾರಣ `ಪ.ಗೋ' ಅವರ ಪ್ರಭಾವ...ಅವರ ಆದರ್ಶಗಳು. ಪ.ಗೋ ಓರ್ವ ಆದರ್ಶ ಪತ್ರಕರ್ತರಷ್ಟೇ ಆಗಿರಲಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲ್ಪಟ್ಟ ಅನೇಕ ಅಭಿಪ್ರಾಯಕಾರರು ಉಲ್ಲೇಖಿಸಿದ್ದಾರೆ. ಓದುಗರಿಗೆ ಅನೇಕ ಹೊಸ ವಿಚಾರಗಳನ್ನು ಪ.ಗೋ ಅವರ ಕುರಿತಾಗಿ ಕಟ್ಟಿಕೊಟ್ಟಿದ್ದಾರೆ. ಅಭಿಪ್ರಾಯಿಸಿದ ಎಲ್ಲಾ ಆತ್ಮೀಯರಿಗೂ ಕೃತಜ್ಞತೆಗಳು. ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಪ.ರಾಮಚಂದ್ರ ಅವರಿಗೂ ಕೃತಜ್ಞತೆಗಳು. ಇನ್ನಷ್ಟು ಅಭಿಪ್ರಾಯಗಳು ನಮ್ಮ ಇನ್ ಬಾಕ್ಸ್ ನಲ್ಲಿವೆ. ಅನೇಕ ಪತ್ರಕಗಳು ಹೆಸರು ಉಲ್ಲೇಖಿಸದೇ ಬಂದಿವೆ ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸಿದ್ದೇವೆ. ಮುಂದೆಯೂ ತಮ್ಮೆಲ್ಲರ ಪ್ರೋತ್ಸಾಹ ನಿರೀಕ್ಷಿಸುತ್ತಿದ್ದೇವೆ. - ಸಂ.
ಆತ್ಮೀಯ ಹರೀಶ್,
ನನ್ನ ತಂದೆಯವರನ್ನು ಕನ್ನಡಿಗರಿಗೆ ಅದರಲ್ಲೂ ವಿಶೇಷವಾಗಿ ಕರಾವಳಿ ಓದುಗರಿಗೆ ಮತ್ತೆ ಪರಿಚಯಿಸುತ್ತಿದ್ದೀರಿ. ರಾಮಚಂದ್ರ ಹಾಗೂ ನಿಮ್ಮ ಅಭಿಮಾನಕ್ಕೆ ನಾನು ಋಣಿ.
ವಂದನೆಗಳೊಡನೆ
ಹಾಲ್ದೊಡ್ಡೇರಿ ಸುಧೀಂದ್ರ
* * * * *
ನಿಜವಾಗಿಯೂ ..ಈಗ ನಮ್ಮ ಪ್ರಪಂಚ ಚಿಕ್ಕದಾಗಿದೆ ಅಂತ ಅನ್ನಿಸುತ್ತದೆ. ಮೊದಲಿನವರು ಪ್ರಯಾಣಕ್ಕೆ ಪಟ್ಟ ಪಾಡು...ನಂತವರಿಗೆ ಗೊತ್ತಿಲ್ಲ. ಅದನ್ನೆಲ್ಲ ಅನುಭವಿಸಿದವರು ಹೇಳಲು ಅವರೇ ಇಲ್ಲ.ಪ.ಗೋ. ಅವರಂತವರು ಬರೆದ ಕತೆಗಳು ಮಾತ್ರ ಇಂತಹ ಅನುಭವಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳ ಬಲ್ಲದು..
- ಮೌನೇಶ್ , ಪುತ್ತೂರು
* * * * * * *
ಪ.ಗೋ.ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳ" ಗೊಂಚಲಿನಿಂದ ಮೂಡಿಬರುತ್ತಿರುವ ಒಂದೊಂದು ಅಂಕಣಗಳೂ ಸಮಾಜದ ಹಲವು ಮುಖಗಳನ್ನು ತೆರೆದಿಡುವುದರ ಜೊತೆಗೆ ಓದುಗರಲ್ಲಿ ಮತ್ತೆ ಓದುವ ಆಸಕ್ತಿಯನ್ನು ಮೂಡಿಸುತ್ತದೆ.
- ಅಶ್ರಫ್ ಮಂಜ್ರಾಬಾದ್, ತಬೂಕ್-ಸೌದಿ ಅರೇಬಿಯಾ
* * * * * * *
ಗೋಪಾಲಕೃಷ್ಣ (ಪ.ಗೋ.) ಎಂದರೆ ಪದ್ಯಾಣ ಗೋಪಾಲಕೃಷ್ಣ ಎಂಬುದರ ಬಗ್ಗೆ ಪತ್ರಿಕೋದ್ಯಮದ ಗೋಪಾಲಕೃಷ್ಣ ಎಂಬುದು ಜನಜನಿತವಾದ ವಿಚಾರ ಎಂದು ಡಾ.ಬನಾರಿ ಹೇಳಿದ ಮಾತು ಸತ್ಯವಾದದ್ದು. ಇದರ ಜೊತೆಗೆ ಯಕ್ಷಗಾನ ಎಂಬ ವಿಶೇಷಣವನ್ನು ಕೂಡಾ ಗುರುತಿಸಬಹುದು.
ಅಡ್ಯನಡ್ಕದ ಈಚಣ್ಣಭಟ್ಟರು ಎಂದರೆ ಪದ್ಯಾಣ ಈಶ್ವರ ಭಟ್ಟರು ಯಕ್ಷಗಾನ ಪ್ರೇಮಿ ಹಾಗೂ ಪ್ರೋತ್ಸಾಹಕರಾಗಿದ್ದರು. ಪ್ರತಿವರ್ಷ ನಾಲ್ಕಾರು ಮೇಳಗಳ ಯಕ್ಷಗಾನ ಬಯಲಾಟಗಳನ್ನು ಅಡ್ಯನಡ್ಕ ಶಾಲೆಯ ಆಟದ ಬಯಲಿನಲ್ಲಿ ಏರ್ಪಡಿಸಿ ಸುತ್ತುಮುತ್ತಲಿನ ನಾಲ್ಕು ಗ್ರಾಮಗಳ ಸಾರ್ವಜನಿಕರಿಗೆ ಒದಗಿಸುತ್ತಿದ್ದರು. ಪ.ಗೋ. ಇವರ ಪುತ್ರ. ಹೀಗಾಗಿ ಯಕ್ಷಗಾನ ಇವರ ರಕ್ತನಾಳದಲ್ಲಿ ಹರಿದು ಬಂದಿದೆ ಎನ್ನಬಹುದು. ಪ.ಗೋ. ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೂಡಾ ಒಮ್ಮೊಮ್ಮೆ ಅರ್ಥ ಹೇಳುತ್ತಿದ್ದರು. ವಿಶೇಷವೆಂದರೆ ಕುರುಡಪದವು ಶಾಲೆಯಲ್ಲಿ ಹಿರಿಯ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಜೊತೆಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು.
ಪ.ಗೋ. ಅವರ ಇತರ ಅಭಿರುಚಿಯೆಂದರೆ ನಾಟಕ, ಸಿನೆಮಾ ಮೊದಲಾದ ಮಾಧ್ಯಮಗಳು. ತುಳು ಭಾಷೆಯಲ್ಲಿ ಮೂರನೆಯ ಸಿನೆಮಾವನ್ನು ಮಂಗಳೂರಿನಲ್ಲಿ ತಯಾರಿಸಿದ್ದರು.(ಆದರೆ ಇದು ಬಿಡುಗಡೆ ಆಗಲಿಲ್ಲ) ಒಂದು ಕೊಂಕಣಿ ಚಿತ್ರವನ್ನು ಕೂಡಾ ಪ. ಗೋ. ನಿರ್ದೇಶಿಸಿದ್ದರು. ಶಾಲಾದಿನಗಳಲ್ಲಿ ತಿಂಗಳ ಹಬ್ಬದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಮುಂದೆ ದೇಶಭಕ್ತರು? ಎಂಬ ರಾಜಕೀಯ ನಾಟಕವನ್ನು ೧೯೪೮ರಲ್ಲಿ ಅಡ್ಯನಡ್ಕದಲ್ಲಿ ಪ.ಗೋ.ತಾವೇ ಬರೆದು ನಿರ್ದೇಶಿಸಿ ಮುಖ್ಯ ಪಾತ್ರವನ್ನು ಕೂಡಾ ವಹಿಸಿ ಪ್ರದರ್ಶಿಸಿದ್ದರು. ಅದುವರೆಗೆ ಪೌರಾಣಿಕ ಅಥವಾ ಐತಿಹಾಸಿಕ ನಾಟಕಗಳಿಗೆ ಸೀಮಿತವಾಗಿದ್ದ ಗ್ರಾಮೀಣ ನಾಟಕ ಮಂಡಳಿಗಳಿಗೆ ಈ ಹೊಸ ಗಾಳಿ ಹೊಸ ಚೇತನ ತುಂಬಿತು ಎನ್ನಬಹುದು.
ಪ.ಗೋ. ಮುಂಬಯಿಯಲ್ಲಿ ಸುಮಾರು ೮ ವರ್ಷಗಳ ಕಾಲ ಸಿನೆಮಾ ರಂಗದಲ್ಲಿ ದುಡಿದಿದ್ದರು. ಉಪನಿರ್ದೇಶಕರಾಗಿಯೂ ಇದ್ದರು. ಪ.ಗೋ. ಅವರ ಇನ್ನೊಂದು ಕ್ಷೇತ್ರ ಶಿಕ್ಷಣ ಕ್ಷೇತ್ರ. ಇವರು ಕೆಲಕಾಲ ಅಡ್ಯನಡ್ಕ ಶಾಲೆಯಲ್ಲಿ ಶಿಕ್ಷಕರಾಗಿಯೂ ಇದ್ದರು. ಬಣ್ಣದ ಕುಂಚದಿಂದ ಚಿತ್ರ ಬಿಡಿಸುತ್ತಿದ್ದರು ಹಾಗೂ ವ್ಯಂಗ್ಯ ಚಿತ್ರಗಳನ್ನು ಕೂಡಾ ವಿದ್ಯಾರ್ಥಿದೆಸೆ ಯಲ್ಲಿಯೇ ಬರೆದು ಪ್ರದರ್ಶಿಸುತ್ತಿದ್ದರು. ಇವರ ಒಂದು ಕಾರ್ಟೂನ್ ಚಿತ್ರ (ಕುಂಞಿ ತಮ್ಮ ಎಂಬ ಅಡ್ಡಹೆಸರಿನ ಸಹೋದರ ಸದಾಶಿವಭಟ್ಟರ ಬಗ್ಗೆ ಇದ್ದ ವ್ಯಂಗ್ಯ ಚಿತ್ರ) ತುಂಬಾ ಮೆಚ್ಚುಗೆ ಪಡೆಯಿತು. ಅದೇರೀತಿ ಅವರ ತಂದೆಯ ಕೋಪವನ್ನೂ ಮೀರಿಸಿತು. "ನನ್ನ ಮುಂದೆ ನಿಲ್ಲಬೇಡ ,ಹೊರಟುಹೋಗು" ಎಂದು ಘರ್ಜಿಸಿದರು. ಉಟ್ಟ ಬಟ್ಟೆ, ತೊಟ್ಟ ಬನಿಯನ್,ಕೈಯಲ್ಲೊಂದು ಪುಸ್ತಕ ಹಿಡಿದು ಪ.ಗೋ. ಮನೆಯಿಂದ ಹೊರಬಿದ್ದರು. ಆಗ ಅವರ ವಯಸ್ಸು ಸುಮಾರು ೧೨ ಇದ್ದಿರಬಹುದು. ಆತ್ಮಾಭಿಮಾನ ಪ.ಗೋ. ಅವರ ಇನ್ನೊಂದು ಸಂಪತ್ತು ಎನ್ನಬಹುದು. ಊರಿನ ಹಿರಿಯರಾದ ಗುರಿಕ್ಕಾರ ನಾರಾಯಣ ಭಟ್ಟರು, ಶಾಲೆಯ ತಿಮ್ಮಣ್ಣ ಮಾಸ್ಟರು,ಲಕ್ಷ್ಮಣ ಪೈ ಮೊದಲಾದ ಊರ ಪ್ರಮುಖರು ಪ.ಗೋ.ಅವರನ್ನು ಸಮಾಧಾನ ಪಡಿಸಿ ಮನೆಗೆ ಕರೆತರಬೇಕಾಯಿತು.
ಪ.ಗೋ. ಜೀವನದಲ್ಲಿ ಅನೇಕ ಸಾಹಸಗಳನ್ನು ಮಾಡಿದ್ದರೂ ಗೆಲುವು ತೀರ ಕಮ್ಮಿ. ಆದರೆ ಗೆಲುವು ಪಡೆದ ಮಹತ್ವದ ಅಂಶಗಳಲ್ಲಿ ೪ ಕಾದಂಬರಿಗಳನ್ನು ಬರೆದದ್ದು ಸುಮಾರು ೪೦೦೦ ಪುಟಗಳಷ್ಟು. ೧೩ ಪತ್ರಿಕೆಗಳಲ್ಲಿ ಬೇರೆಬೇರೆ ಕಾಲದಲ್ಲಿ "ಕಾಲಂ" ಬರೆಯುತ್ತಿದ್ದರು ಹಾಗೂ ನಾಲ್ಕು ದಶಕಗಳಷ್ಟು ಕಾಲ ಪತ್ರಿಕೋದ್ಯಮವನ್ನೇ ಬದುಕಿನ ಉಸಿರಾಗಿ ನಡೆಸಿ ಕೊಂಡದ್ದು ಅವರ ವೈಶಿಷ್ಟ್ಯ ಎನ್ನಬಹುದು. ಸ್ವತಃ ವಾರ್ತಾಲೋಕ ಎಂಬ ದಿನಪತ್ರಿಕೆ ಯನ್ನು ಸಂಪಾದಿಸಿ, ಮುದ್ರಿಸಿ, ಪ್ರಕಟಿಸಿದ ಪತ್ರಿಕೆಯನ್ನು ಅವರ ಪತ್ನಿ ಶ್ರೀಮತಿ ಸಾವಿತ್ರಿ ಗೋಪಾಲಕೃಷ್ಣ ಮನೆಮನೆಗೆ ತಾವೇ ಹಂಚುತ್ತಿದ್ದರು ಎಂಬುದು ಅತೀ ಸೋಜಿಗದ ವಿಷಯ. ಇಂತಹ ವಿಶಿಷ್ಟ ವ್ಯಕ್ತಿ ಪ.ಗೋ. ಆತ್ಮೀಯ ವರ್ಗದಲ್ಲಿ ನಾನು ಇದ್ದೆ ಎಂಬುದು ನನಗೆ ಹೆಮ್ಮೆ ಪಡುವ ವಿಚಾರ.
- ಡಾ. ಎಂ.ಬಿ ಮರಕಿಣಿ
* * ** * ** *
ನಮ್ಮ ಪ್ರಾಯ ಮಾತ್ರ ಬದಲಾಗುತ್ತಿದೆ ಆದರೆ ಲೋಕ ಇದ್ದ ಹಾಗೆ ಇದೆ. Simply No Change at all. ಇದನ್ನು ಬಹಳ ವರ್ಷಗಳ ಹಿಂದೆಯೇ ಪ. ಗೋ.ರವರು ಮನಗಂಡಿದ್ದರು . ನಾವು ಈಗ ಅವರ ಕಥೆಗಳನ್ನು ಓದಿ ಅದು ನೂರಕ್ಕೆ ನೂರು ಸರಿ
ಈಶ್ವರಿ. ಕೆ. ಭಟ್, ನೆಲ್ಲಿಕ್ಕುಂಜೆ ಗುತ್ತು, ಉಕ್ಕಿನಡ್ಕ, ಕಾಸರಗೋಡು.
* * * * * **
ಪದ್ಯಾಣ ಗೋಪಾಲಕೃಷ್ಣರ - ನನ್ನ ಸ್ನೇಹ ಮತ್ತು ಸಹಾಯ ಪರಸ್ಪರ ಅಷ್ಟು ಆತ್ಮೀಯವಾಗಿತ್ತು. ವೃತ್ತಿಯಲ್ಲಿಯೂ - ನನ್ನ ಸ್ವಂತ ಸಮಸ್ಯೆಗಳಲ್ಲಿಯೂ ಅವರು ನನ್ನೊಡನೆ ಸಹಕಾರ ಮತ್ತು ಸಹಾಯ ಆಗಿಂದ್ಯಾಗೆ ನೀಡುತ್ತಿದರು.ಹಾಗಾಗಿ ಡಾ. ಎಮ್.ಬಿ.ಮರಕಿಣಿ ನನ್ನನು ಸಂಪರ್ಕಿಸಿ ಪ.ಗೋ.ಸ್ಮಾರಕ ವಿಶ್ವಸ್ಥ ಮಂಡಲಿ ರಚಿಸಿ, ಅದರ ಅಧ್ಯಕ್ಷರಾಗಬೇಕೆಂದು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡೆ.
ಸದುದ್ದೇಶದಿಂದ ಸ್ಥಾಪಿತವಾದ ಈ ಟ್ರಸ್ಟಿನ ಮೂಲಕ ಹೊರ ತಂದ ಕೃತಿ, ಕನ್ನಡ ಪ್ರೇಮಿಗಳು ಓದಿ ಖುಶಿಪಡಬಹುದಾದ ಅಂಕಣ ಬರಹಗಳು “ನೋ ಚೇಂಜ್ ಕಥೆಗಳು”. ಈ ಸಂಕಲನಗಳು ಪ.ಗೋ. ಅವರ ಸಾಧನೆಯನ್ನು ಪರಿಚಯಿಸುವ ಜೊತೆಗೆ ಅವರ ಯಥಾರ್ಥತೆಯನ್ನು ಪ್ರತಿಬಿಂಬಿಸುವ ವಿಶ್ವಾಸ ವಿಶ್ವಸ್ಥ ಮಂಡಲಿಯದ್ದು.
ಟ್ರಸ್ಟಿನ ವತಿಯಿಂದ ಪ್ರಾರಂಭಿಸಿದ ಉದಯೋನ್ಮುಖ ಯುವ ಪತ್ರಕರ್ತರ ಉತ್ಕೃಷ್ಟ ಗ್ರಾಮೀಣ ವರದಿಗೆ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಹತ್ತು ವರ್ಷಗಳಿಂದ ನಡೆಸಿದ್ದೇವೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೆರವು ದೊರೆತಿದೆ. ಇವರಿಗೆ ನಾವು ಋಣಿಗಳು.
ಕಳೆದ ಎರಡು ವರ್ಷದಿಂದ ನನ್ನ ಇಳಿವಯಸ್ಸಿನ ಅನಾರೋಗ್ಯದಿಂದಾಗಿ ನಡೆಯದ ಈ ಪ್ರಶಸ್ತಿ ಕಾರ್ಯವನ್ನು ಮುನ್ನಡೆಸುವ ನನ್ನ ಕೋರಿಕೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಒಪ್ಪಿಕೊಂಡಿದ್ದಾರೆ. ೨೦೦೪ರ ಉತ್ಕೃಷ್ಟ ಗ್ರಾಮೀಣ ವರದಿ “ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರದ ಕನಸು”,ಇದರ ಸಲುವಾಗಿ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ಅಂದಿನ ಉದಯೋನ್ಮುಖ ಪತ್ರಕರ್ತ ಶ್ರೀ ಗುರುವಪ್ಪ ಎನ್.ಟಿ.ಬಾಳೇಪುಣಿಯವರು ಇಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆ ಮುನ್ನಡೆಸಿಕೊಂಡು ಹೋಗಬೇಕೆಂದು ಪತ್ರಕರ್ತರ ಸಂಘಕ್ಕೆ ನಾನು ವಿವರಿಸಿದ್ದೇನೆ.
ನಾನು ಈ ವಿಶ್ವಸ್ಥ ಮಂಡಳಿಗೆ ಸೇರಿದ ಬಗ್ಗೆ ನನ್ನ ಸ್ನೇಹಿತರೊಬ್ಬರು,“ಕ್ಷುಲ್ಲಕ ವಿಚಾರಗಳಿಗೆ ಕೋರ್ಟ್ ಮೆಟ್ಟಲು ಹತ್ತುವ ನಮ್ಮ ಬಳಗದಲ್ಲಿ ನೀವು ಹೇಗೆ ಸೇರಿಕೊಂಡಿರಿ” ಅಂತ ಕೇಳಿದರು.“ಪ.ಗೋ. - ನನ್ನ ಸ್ನೇಹ ಅಷ್ಟು ಆತ್ಮೀಯವಾಗಿತ್ತು” ಎಂದಷ್ಟೆ ಉತ್ತರಿಸಿದೆ.
-ಯು.ನರಸಿಂಹ ರಾವ್,
ನಿವೃತ್ತ ಪತ್ರಕರ್ತ, "ದಿ ಹಿಂದೂ" ಪತ್ರಿಕೆಯ ಮಂಗಳೂರಿನ ಪೂರ್ವ ವರದಿಗಾರ.
* * * * * * * *
ಹಿರಿಯ ಸಾಹಿತಿಯಾಗಿ ಬಹಳಷ್ಟು ಅನುಭವದೊಂದಿಗೆ ಸುತ್ತು ನಿತ್ಯವೂ ಕಾಣುವ ವಸ್ತುಗಳನ್ನು ಆಯ್ದು ಸಾಹಿತ್ಯ - ಅಭಿರುಚಿಯನ್ನು ಬಡಿದು -ಎಬ್ಬಿಸುವ , ಓದಿದರೆ ಮತ್ತೆ ಮತ್ತೆ ಓದಬೇಕೆನ್ನುವ ಸಾಹಿತ್ಯ ಚೈತನ್ಯವನ್ನು ತುಂಬಿಸುವ ವಿಶೇಷ ರಚನೆಯೇ ಅವರ ರಚನೆ ಆಕರ್ಷಕವಾಗುವೂದರಲ್ಲಿ ಸಂಶಯವಿಲ್ಲ : ವಿಶ್ವಪತಿ ಎಂ., ವಿವೇಕ ಸಾಹಿತ್ಯ ಮಾಲೆ, ಮಣ್ಣಗುಡ್ಡ ,ಮಂಗಳೂರು.
* * * * * * *
ಗಹನವಾದ ವಿಷಯಗಳನ್ನು ತುಂಬಾ ಸರಳವಾಗಿ ಹೇಳುವ ಲೇಖನಗಳು. ವಿಷಯಕ್ಕೆ ಪೂರಕವಾದ ಹಾಸ್ಯ, ತುಸು ಹೆಚ್ಚು-ಕಡಿಮೆ ಎನ್ನುವ ಹಾಗೆ ಇಲ್ಲ.ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚು ಹೇಳದೇ, ಉಳಿದದ್ದನ್ನು ಓದುಗರ ವಿಚಾರಕ್ಕೆ ಬಿಡುವ ಶೈಲಿ ತುಂಬಾ ಚೆನ್ನಾಗಿದೆ. ತಾನು ಹೇಳಿದ್ದೆ ಸತ್ಯ, ಅದನ್ನೇ ನಂಬಬೇಕು ಎಂದು ಓದುಗರನ್ನು ಬಲವಂತ ಮಾಡುವ ಧಾಟಿ ಲೇಖನಗಳಲ್ಲಿ ಇಲ್ಲ. (ಇಂದಿನ ಕೆಲವು ಅಂಕಣಕಾರರು ನೋಡಿ ಕಲಿಯಬೇಕಾದ ವಿಚಾರಗಳು ಸಾಕಷ್ಟಿವೆ). ಭಾಷೆಯೂ ಬಹಳ ಸುಂದರವಾಗಿದೆ. ಮುಂದಿನ ವಾರಕ್ಕಾಗಿ ಕಾಯುವಂತೆ ಮಾಡುವ ಅಂಕಣಗಳು.
Balasubrahmanya, Doha
* * * * * **
ನಾನು ಮಂಗಳೂರಲ್ಲಿ ಇದ್ದಾಗ ಪ.ಗೋ ಅವರ ವಲಯದಲ್ಲಿ ಇದ್ದೆ. ಅವರ ನೇರ, ಸರಳ ಮತ್ತು ಸ್ಪಷ್ಟ ನಡೆ ನುಡಿ ಗಳಿಂದ ನಾನು ತುಂಬಾ ಕಲಿತಿದ್ದೆ. ಈಗ ಎಲ್ಲ ನೆನಪಾಗಿ ಎದೆ ಭಾರವಾಗುತ್ತಿದೆ.
- ಪುರುಷೋತ್ತಮ ಬಿಳಿಮಲೆ
* * * * * ** *
ಪ. ಗೋ ರವರ ಬಗ್ಗೆ ಹೆಚ್ಹಿನ ಮಾಹಿತಿ ಕೊಟ್ಟ ಈ ಕನಸು ಪತ್ರಿಕೋದ್ಯಮ ಕ್ಕೆ ಧನ್ಯವಾದಗಳು.ಇನ್ನು ಹೆಚ್ಹಿನ ಸಂಚಿಕೆಗಳು ಬರಲಿ ಎಂದು ಆಶೀಸುವ,
ಕಿನಿಲ ಸುರೇಶ ಭಟ್ಟ
* * * ** * * *
ಪದ್ಯಾಣ ಗೋಪಾಲ ಕೃಷ್ಣ ಭಟ್ಟರು ಒಬ್ಬ ಸೃಜನ ಶೀಲ ಪತ್ರಕರ್ತ ಎನ್ನುವುದರಲ್ಲಿ ಎರಡು ಮಾತಿಲ್ಲ.ಭಾಷೆ,ಸಾಹಿತ್ಯ ಹಾಗೂ ವಿಚಾರದಲ್ಲಿ ಯಾವುದೇ ಕೊರತೆ ಇಲ್ಲ.ಈಗಿನ ಹಲವಾರು ಪತ್ರಕರ್ತರು ಇಷ್ಟೆಲ್ಲಾ ತಾಂತ್ರಿಕತೆ ಇದ್ದೂ ಕೂಡ ಭಾಷೆ ,ಸಾಹಿತ್ಯ,ವ್ಯಾಕರಣದಲ್ಲಿ ತಪ್ಪನ್ನು ಮಾಡುತ್ತಾರೆ.ಅವರ ಪತ್ರಗಳು ಯಾವುದೋ ಲೋಕಕ್ಕೆ ಎಳೆದು ಕೊಂಡು ಹೋಗುತ್ತವೆ.ಅವರ ಒಂದು ಪತ್ರದಲ್ಲಿ ಹಲವಾರು ವಿಷಯಗಳು ಅಡಕ ವಾಗಿರುತ್ತವೆ.ಇಂತಹ ಪತ್ರ ಗಳನ್ನು ಪ್ರಕಟಿಸಿದ ಈ ಕನಸು ಪತ್ರಿಕಾ ಮಂಡಳಿಯ ಎಲ್ಲ ಕನಸು ನನಸಾಗಲೆಂದು ಹಾರೈಸುತ್ತೇನೆ.
- ಕುಮಾರ್ ಕುಂಟಿಕಾನ ಮಠ ,ಲಂಡನ್ .
* * * * * * *
ಶ್ರೀಯುತ ಹರೀಶ್ ,
ಈ ಕನಸು .ಕಾಂ ಪ್ರಸ್ತುತ ಪ್ರಕಟಿಸುತ್ತಿರುವ ಶ್ರೀಯುತ ನಾಗೇಶರಾಯರ ಅದ್ಭುತ ಸಂಗ್ರಹಗಳನ್ನು ನಮ್ಮಂತಹ ಓದುಗರಿಗೆ ದೊರಕುವಂತೆ ಮಾಡಿದ ನಿಮಗೆ ಹಾಗೂ ಸದರಿ ಸಂಗ್ರಹಗಳನ್ನು ಜತನದಿಂದ ಕಾಪಾಡಿದ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ ಇವರಿಗೂ ಓದುಗರಾದ ನಾವೆಲ್ಲರೂ ಅಭಾರಿಗಳು. ಯಾಂತ್ರಿಕ ಜೀವನದ ಈ ದಿವಸಗಳಲ್ಲಿ ಪತ್ರಗಳು ಬಹಳಷ್ಟು ಅಪರೂಪ. ಹೀಗಿರುತ್ತಾ, ಶ್ರೀಯುತ ಪ. ಗೋ.ರವರ ೧೯೬೪ ಇಸವಿಯ ಪತ್ರವನ್ನು ನೋಡಿ ಸಂತೋಷವಾಯಿತು.ಅವರಿಬ್ಬರ ಆತ್ಮೀಯತೆ ೫ ಗೆರೆಗಳ ಪತ್ರದಲ್ಲಿ ಸ್ಪಷ್ಟವಾಗಿ ಭಾವಸವಾಗಿವೆ. ಶ್ರೀಯುತ ಪ. ಗೋ. ರವರ ಬರವಣಿಗೆಗಳ ಶೈಲಿಯೇ ಹಾಗೆ. ಹೇಳಬೇಕಾದುದನ್ನು ಚುಟುಕಾಗಿ,ಮನಮುಟ್ಟುವಂತೆ, ಬೇಕಾದರೆ ವ್ಯಂಗ್ಯವಾಗಿ! ಬರೆಯುವುದು ಅವರ ಶೈಲಿ. ಈ ಕನಸಿಗೆ ಶ್ರಮಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು.ಇನ್ನೂ ಹೆಚ್ಚಿನ ಓದುಗರು ಈ. ಕನಸಿಗೆ ದೊರಕಲಿ ಎಂದು ನನ್ನ ಹಾರೈಕೆ.
ನಮಸ್ಕಾರ.
ರಾಮಕೃಷ್ಣ ಪುಂಜತ್ತೋಡಿ.
ಕತಾರ್
* * * * * * *
ನಿಜಕ್ಕೂ ಧಾಖಲಾಗ ಬೇಕಾದ ಸ೦ಗತಿ.
ಈಗಲಾದರೂ ಆಗುತ್ತಿರುವುದು ಸ೦ತಸದ ವಿಚಾರ.
- Venkatakrishna.K.K.
* * * * * * **
ನಾನು, ರವಿಶಂಕರ್.ಕೆ.ಭಟ್, ಮೂಲತಃ ಕಾಸರಗೋಡಿನ ಕುಂಬಳೆಯವನು. ಸಕುಟುಂಬವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಸದ್ಯ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ಸುದ್ದಿ ಸಂಪಾದಕನ ಉದ್ಯೋಗ (ಕಳೆದ ನ.15ರ ವರೆಗೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕನಾಗಿದ್ದೆ). ಪತ್ನಿ ನಾಗಚಂದ್ರಿಕಾ ಹಿನ್ನೆಲೆ ಗಾಯಕಿ, ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾಳೆ (ಕಳೆದ ತಿಂಗಳು ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ್ದು ಇತ್ತೀಚಿನದು). ಪುತ್ರ ಅರ್ಣವ ಇನ್ನೂ ಒಂದೂವರೆ ವರ್ಷದ ಕಂದ. ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಸರಸ್ವತಿ ಅವರೂ ಜತೆಯಲ್ಲೇ ಇದ್ದಾರೆ.
ಏತನ್ಮಧ್ಯೆ, ನನ್ನದೊಂದು ಸಣ್ಣ ಪ್ರಶ್ನೆ ನಿಮ್ಮಲ್ಲಿ. ನಾನು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪೂರ್ಣಪ್ರಜ್ಞ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ನನಗೆ ಶ್ರೀಪತಿ ಪದ್ಯಾಣ ಎಂಬ ಹೆಸರಿನ ಕನ್ನಡ ಗುರುಗಳಿದ್ದರು. ಅವರು ತಮಗೆ ಪರಿಚಿತರೇ? ಹೌದಾಗಿದ್ದರೆ ದಯವಿಟ್ಟು ಅವರ ವಿಳಾಸ ಇತ್ಯಾದಿ ಮಾಹಿತಿ ನೀಡಿದರೆ ಸಂಪರ್ಕಿಸುವ ಬಯಕೆ ಇದೆ.
ಹೊಸ ವರುಷದ ಶುಭಾಶಯಗಳೊಂದಿಗೆ,
ರವಿಶಂಕರ್.ಕೆ.ಭಟ್
* * * * * *
DEAR SRI RAMACHANDRA,
Sri pa. go. has done pa lot for so many fields and people. But he was not lucky to be recognised,. Also due to his attitude and style of working. he was a an avadhoota type of worker, a real detatched person.
another thing to note is, in the history of Yakshagana, many people claim many things as started by them . they dont know , men like. pa. go and others have done those things long back. so a systematic record of happenings is needed.
- M. prabhakara joshy.
* * * * * *
I am very much happy to read Mr.P.gopalakrishna's stories. Because, I knew him personally very well when he was alive. Still I remember his advice. I am the student of him. I salute him. And, through this media I express my deep gratitude towards his family. My wishes to Mrs.Savithri Gopalakrisha bhat.
- Flora Castelino, Dubai
* * * * * *
Dear Editor, I have been reading ‘No-change Kathegalu’ . I am very thankful to you for publishing this series. Its author, the Late P. Gopalakrishna, is a guru for a generation of young journalists. I had the good fortunes of working with him in Mangalore during the early 1990s. He was considered a walking encyclopedia. Mangalore was a small city then but was slowly acquiring importance in the national and the international map. Local journalists’ knowledge was limited and when important persons from Bangalore, Delhi or abroad came to address press conferences in Mangalore most of us would have nothing to ask them. Pa Go used to manage such press conferences by asking the most intelligent questions. I had seen several such dignitaries calling Pa. Go for a separate discussion later. We used to wonder where this man had acquired all these knowledge sitting in a place like Mangalore during those pre-Intenet days. There was hardly anything that he did not know. He was the Times of India Correspondent then. I was working for a different newspaper but he would read all my reports clinically and give me his valuable feedback. There were several occasions when he pulled me up for silly mistakes, which no one else could spot. One day we covered the Mangalore University Senate meeting together. I wrote that a decision taken by the Senate was sent to the State Legislature for ratification. I do not know how it occurred to me to write so. The next day Pa. Go was furious. He asked me what on earth made me think that a Senate decision would be sent to the State Legislature? He said I better read public administration and know how various institutions worked in a democratic polity or else quit journalism. I felt ashamed especially because he did it in front of my other colleagues. But that was a valuable lesson. I realized it as I went to work for major newspapers and journalism institutions. Pa. Go would also never forget to compliment me for a good report, which, I should say, was very rare. I always felt that Pa Go did not get his due and he wasted his talents in a small place like Mangalore. He could have become a national figure in journalism or whatever he chose to do.
Thanks again:- Narayana A Gatty
* * ** * *
PA GO..very rare journalist. I am lucky to accompany him a couple of pres meets. I still remember style of asking(attacking) questions..
- Ramesh S Perla
e t.v mangalore
* * * * * *
PA.GO JOTEGINA PATRIKODYAMADA DINAGAlU AVISMARANEEYAVADAVU. AVARA KURITU EKANASU UTTAMA KELASA MAADUTTIRUDAKKE ABHINANDANEGALU
CHIDAMABARA BAIKAMPADY
v4 media, mangalore
ವೈವಿಧ್ಯ
ಮಂಗಳೂರು:ಅಲ್ಲಿ ರಸ್ತೆಯ ವಾಹನಗಳ ಸದ್ದು..., ಇನ್ನೊಂದೆಡೆ ಹಾರನ್ ಗಳು ಕರ್ಕಶ ಧ್ವನಿ ಮಾಡುತ್ತಿದ್ದವು. ಆದರೂ ಅದೆಲ್ಲದರ ನಡುವೆ ಹಳೆಯ ಹಿಂದೀ ಭಾಷಾ ಪ್ರಣಯ ಗೀತೆಯೊಂದು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಕುತೂಹಲದಿಂದ ಅತ್ತ ಕತ್ತೆತ್ತಿ ನೋಡಿದರೆ ಅದೇ ಹಳೆಯ ಫಿಲಂಗಳಲ್ಲಿ ಕಂಡು ಬರುವಂತಹ ಗ್ರಾಮಾ ಫೋನ್ ಗಳು ತನ್ನಷ್ಟಕ್ಕೆ ತಾನೇ ಹಾಡು ಹೊರಸೂಸುವಲ್ಲಿ ತಲ್ಲೀನವಾಗಿದ್ದವು... ಒಂದು ನಾಲ್ಕು ಗ್ರಾಮಾಫೋನುಗಳು ಬೆಚ್ಚಗೆ ರಸ್ತೆ ಬದಿಯಲ್ಲಿ ಕೂತಿದ್ದವು...! ಇದು ಮಂಗಳೂರ ಬೀದಿಯೊಂದರ ಕಥೆ. ಇಲ್ಲಿನ ಲಾಲ್ ಬಾಗ್ ಮತ್ತು ಲೇಡಿಹಿಲ್ ರಸ್ತೆಯ ನಡುವೆ ಮಂಗಳಾ ಸ್ಟೇಡಿಯಂ ಸನಿಹ ರಸ್ತೆ ಬದಿಯಲ್ಲಿ ಹಳೆಯ ಗ್ರಾಮಾಫೋನುಗಳ ಮಾರಾಟ ಕಂಡುಬಂತು.ಕೆಲವರ್ಷಗಳ ಹಿಂದೆ ಈಗಿನಂತೆ ಸಿ.ಡಿ, ಡಿ.ವಿ.ಡಿ, ವಿ.ಸಿ.ಡಿ, ಎಂ.ಪಿ ತ್ರೀ ಪ್ಲೇಯರುಳಾಗಲೀ, ಟೇಪ್ ರೆಕಾರ್ಡರ್ಗಳಾಗಲೀ ಇರಲಿಲ್ಲ. ಒಂದಷ್ಟು ಸುಮಧುರ ಸಂಗೀತ ಕೇಳಬೇಕೆಂದರೆ ಅದೇ ಹಳೆಯ ಗ್ರಾಮಾ ಫೋನುಗಳೇ ಗತಿ. ಗ್ರಾಮಾ ಫೋನುಗಳ ಡಿಸ್ಕ್ ಗಳ ಮೇಲೆ ಗ್ರಾಮಾ ಫೋನಿನ ಮುಳ್ಳು ಕೂರಿಸಿ, ಹ್ಯಾಂಡಲ್ ತಿರುಗಿಸಿದರೆ ಸುಮಧುರ ಸಂಗೀತದ ರಸಧಾರೆ ಹರಿದು ಬರುತ್ತಿದ್ದವು.
ಆದರೆ ಕಾಲದ ಮಹಿಮೆಯೋ ಏನೋ ಇವು ಮೂಲೆ ಸೇರಿದವು. ಆ ಸ್ಥಾನದಲ್ಲಿ ಗ್ರಾಮಾ ಫೋನುಗಳ ವ್ಯವಸ್ಥೆಯನ್ನೇ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆವಿಷ್ಕಾರಗೊಳಿಸಿದಂತಹ ಸಿ.ಡಿ ಪ್ಲೇಯರ್ಗಳು ಡಿ.ವಿ.ಡಿ ಪ್ಲೇಯರ್ಗಳು ಅಲಂಕರಿಸಿದವು.
ಆಧುನಿಕ ಮನೋರಂಜನಾ ಉಪಕರಣಗಳು ಬಳಕೆಗೆ ಬಂದಂತೆ ಗ್ರಾಮಾಫೋನುಗಳು ಬೆಚ್ಚನೆ ಮೂಲೆಗೆ ಸರಿದಿವೆ... ಸದ್ದಿಲ್ಲದೆ ಮನೆಯ ಮಹಡಿಯಲ್ಲೋ ಇನ್ನೆಲ್ಲೋ ಸ್ಥಾನ ಪಡೆಯುವಂತಾಗಿದೆ. ಇನ್ನು ಕೆಲವು `ಗುಜುರಿ'ಯೆಂದೇ ಪರಿಗಣಿಸಿ ಗುಜುರಿ ರಾಶಿ ಸೇರಿವೆ. ಇವೆಲ್ಲವನ್ನು ಆರಿಸಿ, ಅದಕ್ಕೆ ಒಂದಷ್ಟು `ಚಿಕಿತ್ಸೆ' ನೀಡಿ ಮತ್ತೆ `ನವ ಚೈತನ್ಯ' ಪಡೆಯುವಂತೆ ಮಾಡಿದ್ದಾರೆ ಕೇರಳದ ಕಣ್ಣೂರು ನಿವಾಸಿ ಹಂಸ. ಇವರು ಕಳೆದ 8 ವರ್ಷಗಳಿಂದ ಹಳೆಯ ಉಪಕರಣಗಳನ್ನು ಎಲ್ಲೆಲ್ಲಿಂದಲೋ ತಂದು ಕೂಡಿ ಹಾಕುತ್ತಾರೆ. ಅವುಗಳಿಗೆಲ್ಲಾ ಹೊಸ ರೂಪ ನೀಡುತ್ತಿದ್ದಾರೆ. ಕೆಲವೊಂದು ತೀರಾ ಕಳಪೆಯಾಗಿದ್ದು ಉಪಯೋಗ ಶೂನ್ಯವಾಗಿರುತ್ತವಂತೆ. ಆದರೆ ಅವುಗಳ ಕೆಲವೊಂದು ಬಿಡಿ ಭಾಗಗಳು ಪ್ರಯೋಜನಕ್ಕೆ ಬರುತ್ತವೆ ಎಂದು ಈ ಕನಸು.ಕಾಂಗೆ ತಿಳಿಸಿದ್ದಾರೆ.
`ಕೇವಲ ಕೇರಳದಲ್ಲಷ್ಟೇ ಅಲ್ಲ ಇತರ ರಾಜ್ಯಗಳಿಗೆ ಹೋಗಿ ಹಳೆಯ ವಸ್ತುಗಳನ್ನು ಸಂಗ್ರಹಿಸಿತ್ತೇನೆ. ಅವುಗಳ ರಿಪೇರಿಗಳನ್ನು ಮಾಡಿ ಕರ್ನಾಟಕದಲ್ಲಿ ಮಾರಾಟ ಮಾಡುತ್ತೇನೆ. ಕರ್ನಾಟಕದಲ್ಲಿ ಇಂತಹ ಹಳೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ' ಎನ್ನುತ್ತಾರೆ ಹಂಸ.
ಸುಮಾರು 900ರಿಂದ ಒಂದು ಸಾವಿರದ ತನಕವೂ ರಿಪೇರಿ ಖರ್ಚು ತಗಲುತ್ತದೆ. ಎರಡೂವರೆಯಿಂದ ಮೂರು ಸಾವಿರ ರುಪಾಯಿಗಳಿಗೆ ನಾವಿದನ್ನು ಮಾರಾಟ ಮಾಡುತ್ತೇವೆ. ಸುಮಾರು ನಾನ್ನೂರರಿಂದ ಐದುನೂರರ ತನಕ ಲಾಭ ಬರುತ್ತದೆ. ಕೇವಲ ಮಂಗಳೂರಿನಲ್ಲಿಯೇ ನೂರರಷ್ಟು ಹಳೆಯ ಗ್ರಾಮಾಪೋನುಗಳನ್ನು ಮಾರಾಟ ಮಾಡಿದ್ದೇನೆ. ಹೆಚ್ಚಾಗಿ ಹಳೆಯ ವಸ್ತುಗಳ ಸಂಗ್ರಹ ಮಾಡುವವರು ಕೊಳ್ಳುತ್ತಾರೆ. ಉಳಿದಂತೆ ಬ್ಯಾಂಕ್ ಉದ್ಯೋಗಿಗಳು, ಇತರರು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವೊಂದು ಬಾರಿ ಬೆಳಗ್ಗೆ ಬಂದರೆ ಒಂದು ಹತ್ತು ಗಂಟೆಯೊಳಗೆಯೇ ಎಲ್ಲಾ ಮಾರಾಟವಾಗುತ್ತವೆ ಎಂದವರು ಅನುಭವ ಹಂಚಿಕೊಂಡರು.
ಇವರಲ್ಲಿ ಹಳೆಯ ಕಾಲದ ದೂರವಾಣಿ ಸಲಕರಣೆಗಳು, ದೂರದರ್ಶಕಗಳು, ವಾಚುಗಳು, ಬ್ಯಾಟರಿ ಲೈಟುಗಳು, ಲಾಟೀನುಗಳು ಹೀಗೆ ಇನ್ನೇನೇನೋ ಇವೆ.ಮಹಾರಾಜಾ ಫೋನ್, ಕ್ಯಾಂಡಲ್ ಫೋನುಗಳಿಗೆ ಎಲ್ಲಿಲ್ಲದ ಬೇಡಿಕೆ ಎನ್ನುತ್ತಾರೆ ಹಂಸ.
- ನಾಡೋಡಿ.
ಸಾಹಿತ್ಯ 
ಮಲೆನಾಡಿನ ಕವಿ ಕುವೆಂಪು ಅವರಿಂದಿರುತ್ತಿದ್ದರೆ ಅವರಿಗೆ ನೂರೈದು ವರುಷಗಳಾಗುತ್ತಿದ್ದವು...ಇದೇ ಡಿಸೆಂಬರ್ 29ಕ್ಕೆ ಅಪರ ಜನ್ಮದಿನ.ಚಿಕ್ಕಮಗಳೂರು ಜಿಲ್ಲೆಯ ಹಿರೆಕೂಡಿಗೆಯಲ್ಲಿ ಜನಿಸಿದ ಕುವೆಂಪು ಬೆಳೆದದ್ದು ಕುಪ್ಪಳ್ಳಿಯಲ್ಲಿ. ಅವರ ಸಾಹಿತ್ಯ ಕೃತಿಗಳು ಅನರ್ಘ್ಯಕೃತಿಗಳಾಗಿ ಇಂದಿಗೂ ಜನಮಾನಸದಲ್ಲಿದೆ. ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಒಂದು ನೋಟ ಹರಿಸೋಣ...
ಹರೀಶ್ ಕೆ. ಆದೂರು.
ಕುವೆಂಪು... ಮಲೆನಾಡಿನ ಕವಿ. ಇದು ಸ್ವತಃ ಅವರೇ ಹೇಳಿದ ವಾಕ್ಯ. ಮಲೆನಾಡಿನ ಚೆಲುವನ್ನು ಅದರ ಸೊಬಗನ್ನು ಅದ್ಭುತ, ರಮ್ಯವಾಗಿ ಚಿತ್ರಿಸಿದಂತೆಯೇ ಅದರ ಒಡಲಿನ ಸಾಮಾಜಿಕ ಬದುಕನ್ನು ಅದರ ಗಾಢವಾದ ವಿವರಣೆಗಳೊಂದಿಗೆ, ಸಾಮಾಜಿಕ ಸ್ಥಿತ್ಯಂತರಗಳ ಜೊತೆ ಜೊತೆಗೆ ದಾಖಲಿಸುತ್ತಾ ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ವಿವಿಧ ಮಗ್ಗಲುಗಳನ್ನೂ, ಅಲ್ಲಿ ಮೂಡಿದ ತಲ್ಲಣಗಳನ್ನೂ, ಪಲ್ಲಟಗಳನ್ನೂ ಸ್ಥಿತ್ಯಂತರಗಳನ್ನೂ ಅವರು ಗ್ರಹಿಸಿದ, ಅದನ್ನು ಸಾಹಿತ್ಯಕ್ಕೆ ಬಳಸಿಕೊಂಡುದ್ದರ ಜೊತೆ ಜೊತೆಗೇ, ಅವರು ಅದನ್ನು ಅರಗಿಸಿಕೊಂಡ ರೀತಿ ಕ್ರಮಗಳೆಲ್ಲವೂ ಅನನ್ಯ, ಅದ್ಭುತವಾದಂತಹದ್ದು.
ಆಧ್ಯಾತ್ಮ, ವೈಚಾರಿಕತೆ, ಗಾಢವಾದ ನಿಸರ್ಗ ಪ್ರೀತಿ ಇವೆಲ್ಲವೂ ಅವರ ಸಾಹಿತ್ಯ ಕೃತಿಗಳನ್ನವಲೋಕಿಸಿದಾಗ ಸ್ಪಷ್ಟವಾಗಿ ಗೋಚರಿಸಲ್ಪಡುತ್ತದೆ. ಒಂದು ಚಿಕಿತ್ಸಕ ದೃಷ್ಠಿಕೋನವನ್ನಿಟ್ಟುಕೊಂಡು ಸಾಹಿತ್ಯ ಕೃತಿ ರಚಿಸಿದ ಮಹಾನ್ ಸಾಹಿತಿ ಈ ಕುವೆಂಪು. ಈ ಕಾರಣಕ್ಕಾಗಿಯೇ ಇವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ಪ್ರತೀಕ ಎಂದರೆ ತಪ್ಪಾಗಲಾರದು.
ಇದನ್ನು ಅವರ ಸಾಹಿತ್ಯ ವೈಭವದಿಂದ ನಾವು ಕಾಣಬಹುದು. ಅವರ ಬರಹಗಳು, ಲೇಖನಗಳು, ಕವಿತೆಗಳು, ಮಹಾಕಾವ್ಯಗಳು ಒಂದು ಹೊಸ ಅನುಭವವನ್ನು ಓದುಗನ ಮುಂದೆ ತೆರೆದಿಡುತ್ತಾ ಹೋಗುತ್ತದೆ. ಅದೇ ಅವರ ಸಾಹಿತ್ಯದ ಒಂದು ಹೆಗ್ಗಳಿಕೆ ಆಗಿದೆ.
ಕುವೆಂಪು ಮೂಲತಃ ಯಾವುದೇ ಒಂದು ಸಿದ್ಧ ಸಂಪ್ರದಾಯಕ್ಕೆ ಸೇರಿದವರಲ್ಲ. ಅವರು ಈ ದೇಶದ ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ಪರಂಪರೆಗಳನ್ನು ತಮ್ಮ ಅಧ್ಯಯನದ ಮೂಲಕ ಮೈಗೂಡಿಸಿಕೊಂಡರು. ಕಾಲಧರ್ಮಗಳಿಗನುಗುಣವಾಗಿ ಪುನರ್ ವ್ಯಾಖ್ಯಾನ ಮಾಡುತ್ತಾ ಒಂದು ಹೊಸ ದಾಖಲೆಯನ್ನು ಮೆರೆದಿದ್ದಾರೆ.
ಕುವೆಂಪು ಸಾಹಿತ್ಯದತ್ತ ಸೂಕ್ಷ್ಮನೋಟ
ಶ್ರೀ ರಾಮಾಯಣ ದರ್ಶನಂ- ಮಹಾಕಾವ್ಯ
(ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ)
ಕಾನೂನು ಹೆಗ್ಗಡತಿ - ಕಾದಂಬರಿ
ಮಲೆಗಳಲ್ಲಿ ಮದುಮಗಳು - ಕಾದಂಬರಿ
ನೆನಪಿನ ದೋಣಿಯಲ್ಲಿ - ಆತ್ಮಚರಿತ್ರೆ
ಕವನ ಸಂಗ್ರಹಗಳು, ನಾಟಕಗಳು
ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾಕೃತಿಗಳು.
ವೈಚಾರಿಕ ಲೇಖನಗಳು
ಮಲೆನಾಡಿನ ಚಿತ್ರಗಳು - ಲಲಿತ ಪ್ರಬಂಧ
ಕಥಾ ಸಂಕಲನಗಳು
ಜೀವನ ಚರಿತ್ರೆಗಳು.
ಕವಿಗೆ ಸಂದ ಗೌರವ-ಪುರಸ್ಕಾರ
1956: ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957: ಧಾರಾವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ.
1958: ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಪ್ರದಾನ.
1964: ರಾಜ್ಯ ಸರ್ಕಾರದಿಂದ ರಾಷ್ಟ್ರಕವಿ ಬಿರುದು.
1968: ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ.
1988: ಕರ್ನಾಟಕ ಸರಕಾರದ ಪ್ರಥಮ `ಪಂಪ ಪ್ರಶಸ್ತಿ' ಪ್ರದಾನ.
1992: ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ.
1956ರಿಂದ 1995: 8ಬೇರೆ ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿ.
ಸಾಹಿತ್ಯ
ಗಡಿನಾಡ ಕಾಸರಗೋಡಿನವರಾದ ಎಂಬ ವ್ಯಾಸ ಸ್ನೇಹ ಜೀವಿ.ನಮ್ಮೊಂದಿಗೆಯೇ, ನಮ್ಮ ನಡುವೆಯೇ ಇದ್ದು, ಉತ್ತಮ ಸಾಧನೆ ಮಾಡಿದರೂ, ಅಂತಹವರನ್ನು ನಮ್ಮ ಸಮಾಜ ಗುರುತಿಸುವುದಿಲ್ಲ. ಏನೊಂದು ಹೇಳಿಕೊಳ್ಳುವಂತಹ ಸಾಧನೆ ಮಾಡದೆ ಕೇವಲ `ಪ್ರಚಾರ'ವನ್ನೇ ಬಂಡವಾಳವನ್ನಾಗಿಸಿಕೊಳ್ಳುವವರು `ಸ್ಟಾರ್' ಗಳಾಗುತ್ತಾರೆ. ಎಂ.ವ್ಯಾಸ ಕಾಸರಗೋಡಿನ ಬದಲು ಬೆಂಗಳೂರಿನಲ್ಲಿದ್ದರೆ ಇನ್ನೂ ಹೆಚ್ಚು ಅವರ ಸಾಹಿತ್ಯ ಕೀರ್ತಿ ಮೆರೆಯುತ್ತಿತ್ತು. ಅಂತಹ ವ್ಯಕ್ತಿತ್ವ, ಪ್ರೌಢಿಮೆ ಅವರ ಬರಹಗಳಲ್ಲಿದೆ. `ಹಿತ್ತಿಲ ಗಿಡ ಮದ್ದಲ್ಲ' ಎಂಬಂತೆ ವ್ಯಾಸ ಅಷ್ಟೊಂದು ಸಾಧನೆ ಮಾಡಿದರೂ ನಮ್ಮೊಳಗೆ ಒಬ್ಬರಾಗಿ ಉಳಿದಿದ್ದಾರೆ. ಇದು ಬೇಸರದ ಸಂಗತಿ ಎನ್ನುತ್ತಾರೆ ವ್ಯಾಸರ ಅಭಿಮಾನಿಯೋರ್ವರು.ವ್ಯಾಸರ ಪ್ರಕಾರ 300ರಷ್ಟು ಕಥೆಗಲನ್ನು ಅವರು ಬರೆದಿದ್ದಾರೆ. ನವ್ಯ ಸಂದರ್ಭದಲ್ಲಿ ಬರವಣಿಗೆ ಆರಂಭಿಸಿದವರು. ಪ್ರಶಸ್ತಿ, ಪ್ರಸಿದ್ಧಿಗಳಿಂದ ತಾವಾಗಿಯೇ ದೂರ ಉಳಿದವರು. `ಕಂಬನಿ;, `ಕೃತ' ಕಥಾ ಸಂಕಲನಗಳು. ಸುಳಿ ಮತ್ತು ಕ್ಷೇತ್ರ ಕವನ ಸಂಕಲನಗಳು. ಅಜಂತ ಮತ್ತು ನಾಡಪ್ರೇಮಿ ಪತ್ರಿಕೆಗಳ ಸಂಪಾದಕರಾಗಿ ಅನುಭವ ಪಡೆದವರು. ಇಂತಹ ಎಂ.ವ್ಯಾಸ ಅನೇಕ ಮಂದಿ ಯುವಕರ ಸ್ನೇಹಸಂಪಾದಿಸಿದ್ದರು.ಈ ಹಿರಿಯ ವ್ಯಕ್ತಿಯ ಪ್ರೀತಿ ಪತ್ರಗಳು ಮುಂದಿನ ವಾರದಿಂದ ಪ್ರತೀ ಮಂಗಳವಾರ ಈ ಕನಸು.ಕಾಂ ನಲ್ಲಿ ನಿರೀಕ್ಷಿಸಿರಿ.ಎಂ.ವ್ಯಾಸರು ಬರೆದ ಪತ್ರಗಳು ನಿಮ್ಮಲ್ಲೂ ಇರಬಹದು ಇದ್ದರೆ ನಮಗೆ ಕಳುಹಿಸಿಕೊಡಿ ... -ಸಂ.
ಎರಡಕ್ಷರದ ಶೀರ್ಷಿಕೆಗಳ ಕಥೆಗಾರ
ಎಂ. ವ್ಯಾಸ ಇವರು ಎರಡಕ್ಷರದ ಕಥೆಗಾರರೆಂದೇ ಪ್ರಸಿದ್ಧಿ ಪಡೆದವರು. ಇವರ ಹೆಚ್ಚಿನ ಎಲ್ಲಾ ಕಥೆಗಳ ಶೀರ್ಷಿಕೆಯೂ ಎರಡಕ್ಷರದ್ದೇ!. ಅದು ಅಷ್ಟೊಂದು ಅದ್ಭುತ ಅರ್ಥ, ತಿರುಳು ಹುದುಗಿಸಿಕೊಂಡಿರುತ್ತದೆ. `ದತ್ತ', `ಕೆಂಡ', `ತ್ರಿಜ್ಯ' ಹೀಗೆ... ಆಕರ್ಷಕ ಶೀರ್ಷಿಕೆಗಳಂತೆ ಇವರ ಕಥೆಗಳೂ... ಮಾಮೂಲಿ ಕಥೆಗಾರರ ಕಥೆಗಳಂತಲ್ಲ ಈ ಹಿರಿಯ ಸಾಹಿತಿಯ ಕಥೆಗಳು. ಇವರ ಕಥೆಗಳು ಒಂದು ಭಿನ್ನ...ವಿಭಿನ್ನ... ಅದೇ ವ್ಯಾಸರ ಶೈಲಿ!. ನಾನು ಅರ್ಥೈಸಿಕೊಂಡಂತೆ ಅವರ ಕಥೆಗಳು ಓರ್ವ ಚಿತ್ರಗಾರನ ಚಿತ್ರಗಳಿದ್ದಂತೆ. ಅವರ ಕಥೆಗಳನ್ನು ಓದುತ್ತಾ ಸಾಗಿದಂತೆ ಒಂದು ಅವ್ಯಕ್ತ ಅನುಭವ ದೊರಕುತ್ತದೆ. ಅದು ವರ್ಣನಾತೀತ. ಅನುಭವಿಸಿದರೆ ಮಾತ್ರ ಅದು ಅರಿವಿಗೆ ಬರುತ್ತದೆ.ಗಡಿನಾಡ ಕಾಸರಗೋಡಿನಲ್ಲಿದ್ದುಕೊಂಡೇ ವ್ಯಾಸರು ಇಂದು ಈ ಎತ್ತರಕ್ಕೇರಿದ್ದಾರೆ.
ಹಸಿರ ಐಸಿರಿಯ ನಡುವೆ ಸಾಹಿತ್ಯ ಸೇವೆ. ಸಾಹಿತ್ಯ, ಸಾಹಿತಿ ಮಿತ್ರರೆಂದರೆ ಅದೇನೋ ಒಂದು ಆತ್ಮೀಯತೆ... ಕುತೂಹಲ. ಒಂದಷ್ಟು ವಿಚಾರಗಳ ಬಗ್ಗೆ, ಆತ್ಮೀಯರ ಬಗ್ಗೆ ಮಾತನಾಡುತ್ತಾರೆ. ವ್ಯಾಸರದ್ದು ನೇರ ಮಾತು. ಪ್ರಶಸ್ತಿ, ಪ್ರಸಿದ್ಧಿಗಳಿಗೆ ಇಷ್ಟ ಪಡದವರು. ಕಥೆ ಎಂಬುದು ಹೇಳಿ ಕೇಳಿ ಬರುವಂತಹುದಲ್ಲ. ಅದೊಂದು ಅನುಭವ. ಅದನ್ನು ಹೇಳಿಕೊಟ್ಟು `ಕಟ್ಟಲು' ಸಾಧ್ಯವಿಲ್ಲ ಎಂಬುದು ಅವರ ವಾದ. ಬರವಣಿಗೆಯಲ್ಲಿ ತೊಡಗಿದರೆ ಅವರು ಏಕಾಂತವನ್ನು ಬಯಸುತ್ತಾರೆ... ಸಂಪೂರ್ಣ ಸಾಹಿತ್ಯ ರಚನೆಯಲ್ಲೇ ತಲ್ಲೀನರಾಗುತ್ತಾರೆ ಎನ್ನುತ್ತಾರೆ ಅವರ ಧರ್ಮಪತ್ನಿ.
ಅವರ ಕಥೆ, ಕವನ, ಅಂಕಣಗಳಷ್ಟೇ ಅವರ `ಪತ್ರ'ಗಳೂ ಓದಲು ಒಂದು ಹೊಸ ಅನುಭವ ನೀಡುತ್ತದೆ. ಈ ಭಾಗ್ಯ ಅವರ `ಸ್ನೇಹ' ಪಡೆದವರಿಗಷ್ಟೇ ದೊರಕಲು ಸಾಧ್ಯ.ವ್ಯಾಸರೇ ಹೇಳುವಂತೆ `ಕಳೆದ ಐದು ದಶಕದ ಅಕ್ಷರ ಬದುಕಿನಲ್ಲಿ ಆಯಾ ದಶಕದ ಯುವ ಬರಹಗಾರರ ಸಾಹಿತಿಗಳ ಕವಿಗಳ ಪ್ರೀತಿ ದೊರಕುತ್ತಲೇ ಇತ್ತು. ಈ (ಬಹುಶ:) ಕೊನೆಯ ದಶಕದಲ್ಲೂ ಅದು ನನಗೆ ಅಹಂಕಾರ ಹೆಚ್ಚಿಸುವಷ್ಟು ಸಿಕ್ಕಿದೆ. ಓದುಗ ಪ್ರಪಂಚ ನನಗೆ ಕರುಣೆ ಕೊಟ್ಟಿದೆ, ದಯೆ ಕೊಟ್ಟಿದೆ, ಕ್ಷಮೆ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಕೊಟ್ಟಿದೆ'. ಇದು ಅವರ ಹೃದಯಾಂತರಾಳದ ಮಾತುಗಳು...
ವ್ಯಾಸರ ಕಥೆಗಳತ್ತ ಒಂದು ನೋಟ ಹರಿಸೋಣ...
ಕೆಂಡ
ಇದು ನಮ್ಮ ಫ್ಯಾಮಿಲಿ ಆಲ್ಬಂ. ಇದರಲ್ಲಿ ಮೂರು ತಲೆಮಾರಿನ ನಮ್ಮ ಕುಟುಂಬದ ಸದಸ್ಯರ ಭಾವಚಿತ್ರಗಳಿವೆ. ಇದರಲ್ಲಿ ಗಂಡು, ಹೆಣ್ಣುಗಳ, ಯುವಕ, ಯುವತಿಯರ, ಹುಡುಗ, ಹುಡುಗಿಯರ ಅನೇಕ ಮುಖಗಳಿವೆ. ಬಿಂದು ಎಂಬ ನನ್ನ ಮಗಳ ಮುಖ ಇದರಲ್ಲಿ ಯಾವ ಮುಖವನ್ನೂ ಹೋಲುವುದಿಲ್ಲ. ಏಕೆ ಹೀಗೆ...? ಇಂಥಾ ಪ್ರಶ್ನೆಯನ್ನು ಶಿವದಾಸ್ ಸಾಮಾನ್ಯವಾಗಿ ತನ್ನ ಮನೆಗೆ ಬಂದವರಿಗೆಲ್ಲಾ ಕೇಳುತ್ತಿರುತ್ತಾನೆ.
ದತ್ತ
ಶಾಮಿಯಾನದ ಒಳಗೆ ಜನಸಂದಣಿ ಇತ್ತು. ಹಲವರು ಕುಳಿತಿದ್ದರು. ಹಲವರು ನಡೆದಾಡುತ್ತಿದ್ದರು. ಒಳಗೆ ಚಾವಡಿಯಲ್ಲಿ ಹೋಮ ಕುಂಡವಿತ್ತು. ಹತ್ತು ದಿನಗಳ ಹಿಂದೆ ಸತ್ತ ಮಹಾಪ್ರಾಣದ ಮಹಾ ಪ್ರಸ್ತಾನದ ಸಿದ್ಧತೆಯಾಗುತ್ತಿತ್ತು. ಮಂತ್ರ ಘೋಷಗಳಾಗುತ್ತಿದ್ದವು. ಅಗೋಚರ ಆತ್ಮವನ್ನು ವೈತರಣಿ ದಾಟಿಸುವ ಮಂತ್ರಗಳು ಆಕಾಶ ಗಮನದಲ್ಲಿದ್ದವು. ಹೊರಗೆ ಕುಳಿತವರ ಮಾತುಗಳು ಒಂದರೊಡನೊಂದು ಕಲಸಿ ಹೋಗಿ ಅರ್ಥವನ್ನು ಕಳೆದುಕೊಳ್ಳುತ್ತಿದ್ದವು... ನನ್ನ ಎಡಗಡೆಯ ಕೆಲವು ಕುರ್ಚಿಗಳು ಖಾಲಿಯಾಗಿತ್ತು... ಇವೆರಡು ವ್ಯಾಸ ಅವರ ಕಥೆಗಳ ಸ್ಯಾಂಪಲ್ ಆದರೆ...
`ಶಬ್ದ ವಿಮಾನ'ಗಳಲ್ಲಿ ದೂರ ತೀರ ಯಾನ
ಮನ ಶಾಸ್ತ್ರಜ್ಞರು ಹೇಳುವ ಹಾಗೆ ಮನಸ್ಸಿನ ಸ್ವಾತಂತ್ರ್ಯ ಎಂಬುದು ಮನುಷ್ಯ ಮನಸ್ಸಿನ ಅಹಂಕಾರ ಮತ್ತು ಸ್ವಾರ್ಥವಾಗಿದೆ. ನಾನು ಯಾರಿಗೇನು ಕಡಿಮೆ ಎಂಬ ಪ್ರಶ್ನೆ ಮೂಡಿದಾಗ ಮನುಷ್ಯ ಮನಸ್ಸು ತನ್ನನ್ನು ಇನ್ನೊಬ್ಬನೊಂದಿಗೆ ಹೋಲಿಸಿ `ತಾನು ಕಡಿಮೆಯಲ್ಲ' ಎಂಬ ಏಕಪಕ್ಷೀಯ ತೀರ್ಮಾನಕ್ಕೆ ಬರುತ್ತದೆ... ಇದು ಎಂ. ವ್ಯಾಸರ ಜನಪಥ ಅಂಕಣದ ಸ್ಯಾಂಪಲ್...ಹೀಗೆ ಅವರ ಒಂದೊಂದು ಬರಹಗಳೂ ಹೊಸತೊಂದು ಯೋಚನೆಗಳಿಗೆ ಮನಸ್ಸನ್ನು ಅಣಿಗೊಳಿಸುತ್ತಾ ಸಾಗುತ್ತದೆ. ಹೊಸ ಹೊಸ ಓದುಗ ವರ್ಗವನ್ನು ಆಕರ್ಷಿಸುತ್ತಾ ಸಾಗುತ್ತದೆ.
ರಾಜ್ಯ - ರಾಷ್ಟ್ರ
ಚಳಿಗಾಲದಲ್ಲಿ ಮಳೆಯಬ್ಬರ...!!!
ಮಂಗಳೂರು: ಕರಾವಳಿಯಲ್ಲಿ ಭಾನುವಾರ ಮುಂಜಾನೆ ಎರಡುಗಂಟೆಯಿಂದ ಭೀಕರ ಮಳೆ ಬೀಳಲಾರಂಭಿಸಿದೆ. ಕರಾವಳಿಯ ಬಹುಪಾಲು ಪ್ರದೇಶದಲ್ಲಿ ಮಳೆ ಬಿದ್ದಿದೆ. ಕೆಲವೊಂದು ಕಡೆ ಗುಡುಗು , ಸಿಡಿಲುಗಳಿಂದ ಕೂಡಿದ ಮಳೆಯಾಗಿದ್ದು ಗಾಳಿಯಬ್ಬರವೂ ಜೋರಾಗಿತ್ತು. ರಾತ್ರಿಯ ತನಕ ಶುಭ್ರವಾಗಿದ್ದ ಬಾನಲ್ಲಿ ಏಕಾಏಕಿ ಕರಿಮೋಡಗಳು ಕಂಡುಬಂದಿದ್ದು ಒಂದೇ ಸವನೆ ಮಳೆ ಸುರಿಯಲಾರಂಬಿಸಿತು. 
ಮಳೆಯ ಅಬ್ಬರ ಜೋರಾಗಿತ್ತು. ಮಳೆಗಾಲದ ಪ್ರಾರಂಭದಲ್ಲಿರುವ ಬಿರುಸಿನ ಮಳೆಯಂತೆ ಈ ಮಳೆ ಕಂಡುಬಂದಿತು. ದಿನವಿಡೀ ಸುರಿಯುತ್ತಲೇ ಇದ್ದ ಮಳೆ ರಾತ್ರಿಯ ತನಕವೂ ಮುಂದುವರಿದಿದೆ. ಹಲವು ಪ್ರದೇಶಗಳಲ್ಲಿ ಈ ಧಿಡೀರ್ ಮಳೆಯಿಂದಾಗಿ ಜನತೆ ಕಂಗೆಟ್ಟಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಮೈ ಕೊರೆಯುವ ಚಳಿ ಇರಬೇಕಾಗಿದ್ದು ಇದೀಗ ಮಳೆಗಾಲವನ್ನೂ ನಾಚಿಸುವ ರೀತಿಯಲ್ಲಿ ಹೊಯ್ದ ಮಳೆ ತೀವ್ರ ತೊಂದರೆಯನ್ನುಂಟುಮಾಡಿದೆ. ಮುಂಜಾವಿನ ವೇಳೆಯಲ್ಲಿ ಮುನ್ಸೂಚನೆಯೂ ನೀಡದೆ ಸುರಿದ ಮಳೆಯಿಂದಾಗಿ ಕೃಷಿಕರು ಕಂಗೆಟ್ಟಿದ್ದಾರೆ. ಒಣಗಿದ್ದ ಅಡಿಕೆಗಳು ಮಳೆಗೆ ತೋಯ್ದುಹೋಗಿವೆ. ಕೃಷಿಗೂ ಹಾನಿಯಾಗಿವೆ.
ಅಂಗಳದಲ್ಲಿದ್ದ ಉತ್ಪನ್ನಗಳು ಮಳೆ ನೀರಿಗಾಹುತಿಯಾಗಿದೆ. ಅಂತೂ ಈ ಬಾರಿ ಮಳೆಗಾಲ ನಿರಂತರ ಎಂಬಂತಾಗಿರುವುದು ಸೋಜಿಗವನ್ನು ಸೃಷ್ಠಿಸಿದೆ. ಒಂದೆಡೆ `ಪ್ರಳಯ'ದ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಅನಿಯಮಿತ ಮಳೆ ಜನತೆಯನ್ನು ದಿಕ್ಕೆಡಿಸಿರುವುದು ಮಾತ್ರ ಸುಳ್ಳಲ್ಲ.
ಭಕ್ತಿ ಸಿಂಚನ
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಶ್ರೀಗಳು ಇಡೀ ವಿಶ್ವದಲ್ಲೇ ಒಂದು ಕ್ರಾಂತಿಯನ್ನುಂಟುಮಾಡಿದವರು. ಅಪಾರ ಶಿಷ್ಯವರ್ಗವನ್ನು ಹೊಂದಿದ ಶ್ರೀ ಗುರುಗಳು ಇಡೀ ಸಮಸ್ತ ಜನತೆಯ ಪ್ರೀತಿಪಾತ್ರರಾದವರು. ಭಾರತೀಯ ಗೋ ವಂಶವನ್ನು ಉಳಿಸಬೇಕು , ಮತ್ತೆ ಗೋ ಸಂತತಿಯನ್ನು ಬೆಳೆಸಬೇಕು ಭಾರತೀಯ ಗೋ ವಂಶವನ್ನು ಅಭಿವೃದ್ಧಿಪಡಿಸಬೇಕೆಂಬ ಪಣತೊಟ್ಟು ನಾನಾ ಯೋಜನೆಗಳನ್ನು ಹಮ್ಮಿಕೊಂಡು ಇಡೀ ವಿಶ್ವವನ್ನೇ ತನ್ನತ್ತ ನೋಡುವಂತೆ ಮಾಡಿದ ಅಪೂರ್ವ ಶಕ್ತಿಹೊಂದಿದವರು. ಶ್ರೀ ಮಠದ ಅಡಿಯಲ್ಲಿ ಹತ್ತು ಹಲವು ಜನಪರ ಯೋಜನೆಗಳನ್ನು ಹಾಕಿಕೊಂಡು ತಮ್ಮ ಶಿಷ್ಯವರ್ಗದ ಜೊತೆಗೂಡಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆಯೇ `ಈ ಕನಸು.ಕಾಂ' ತಂಡವನ್ನು ಹರಸಿದ ಪ್ರೋತ್ಸಾಹಿಸಿದ ಶ್ರೀಗಳ ನುಡಿಮುತ್ತುಗಳು ನಮ್ಮ ಸಮಸ್ತ ಓದುಗರಿಗಾಗಿ ಮುಂದೆ ಪ್ರತೀ ಭಾನುವಾರ...ಈ ಕನಸು.ಕಾಂಗಾಗಿ ಶ್ರೀಮಠದ ವತಿಯಿಂದ ಕಳುಹಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಲೇಖನಾಮೃತ ಪುಸ್ತಿಕೆಯಿಂದ ಈ ಅಂಕಣ ಆಯ್ದುಕೊಳ್ಳಲಾಗಿದೆ. -ಸಂ.
ರಾಮಾಯಣದ ಕಥೆ ಭಾರತ ವರ್ಷದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ರಾಮಾಯಣದ ತಾತ್ವಿಕ ಹಿನ್ನಲೆಯನ್ನು ಚಿಂತಿಸುವವರೆಷ್ಟು ಮಂದಿ? ತೆಂಗಿನಕಾಯಿಯ ಕರಟವನ್ನು ಭೇದಿಸಿದವನಿಗೆ ಒಳಗಿನ ತಿರುಳು ಸಿಗುವಂತೆ ಕಥೆಯ ಕರಟವನ್ನು ಭೇದಿಸಿಸುವ ನಿಶಿತಮತಿಗೆ ಮಾತ್ರ ಒಳಗಿನ ತತ್ವಾರ್ಥದ ತಿರುಳು ಸಿಗುತ್ತದೆ. ರಾಮಾಯಣದ ತಾತ್ತ್ವಿಕ ತಿರುಳನ್ನು ಸವಿಯುವ ಪ್ರಯತ್ನ ಮಾಡೋಣ.
ಸೀತಾದೇವಿಯೊಡನೆ ಶ್ರೀರಾಮ ದಂಡಕಾವನದಲ್ಲಿ ಸಂಚಾರ ಮಾಡುತ್ತಿದ್ದಾಗ ಬಂಗಾರದ ಜಿಂಕೆಯೊಂದು ಸೀತೆಯ ಕಣ್ಮುಂದೆ ಸುಳಿಯಿತು. ಅಲ್ಲಿಯವರೆಗೆ ರಾಮನನ್ನು ಹೊರತು ಬೇರೇನನ್ನೂ ಬಯಸದ ಸೀತೆ ಮಾಯಾ ಬಂಗಾರದ ಜಿಂಕೆಯನ್ನು ಬಯಸಿದಳು. ಅದಕ್ಕಾಗಿ ಶ್ರೀರಾಮನನ್ನು ದೂರ ಕಳುಹಿಸಿಕೊಟ್ಟಳು. ತನ್ನ ರಕ್ಷಣೆಗಾಗಿ ರಾಮನಿಂದ ನಿಯುಕ್ತನಾಗಿದ್ದ ಲಕ್ಷ್ಮಣನನ್ನು ದೂರ ಅಟ್ಟಿದಳು. 
ಮಾಯಾವಿಯಾದ ರಾವಣ ಸಮಯ ಕಾದು ಸೀತೆಯನ್ನಪಹರಿಸಿದ. ಸಮುದ್ರ ಮಧ್ಯದ ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಬಂಧಿಸಿದ. ರಾಮನ ವಿರಹದಿಂದ ಕಂಗೆಟ್ಟ ಸೀತೆ ಕಣ್ಣೀರಿಟ್ಟಳು. ಸೀತೆಯ ಮೊರೆ ತಲುಪಿತೋ ಏನೋ, ಶ್ರೀ ರಾಮನ ದೂತ ಮಾರುತಿ ಸಮುದ್ರ ಹಾರಿ ಲಂಕೆಯನ್ನು ತಲುಪಿದ. ಹೆಸರಿಗೆ ಅಶೋಕವನವಾದರೂ ಶೋಕವನವೇ ಆಗಿದ್ದ ರಾವಣನ ಉದ್ಯಾನದಲ್ಲಿ ಸೀತೆಯನ್ನು ಸಂಧಿಸಿದ. ರಾವಣನ ಮಾಯೆಗಳನ್ನು ನೋಡಿ ಯಾರನ್ನೂ ನಂಬದ ಸ್ಥಿತಿಗೆ ತಲುಪಿದ್ದ ಸೀತೆ ಮಾರುತಿಯನ್ನು ನಂಬಲಿಲ್ಲ. ರಾಮನ ಚಿಹ್ನೆಯಾದ ಮುದ್ರೆ ಉಂಗುರವನ್ನು ತೋರಿ ಮಾರುತಿ ಸೀತೆಯ ಪರೀಕ್ಷೆಯಲ್ಲಿ ಉತ್ತೀರ್ಣನಾದ.
ದೂರವಾಗಿದ್ದ ಸೀತಾರಾಮರನ್ನು ಪುನಃ ಬೆಸೆದ. ಮಾರುತಿಯ ಸಂದೇಶದ ಮೇರೆಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ ಶ್ರೀರಾಮ ಲಂಕೆಗೆ ತಲುಪಿ ರಾಕ್ಷಸರನ್ನೆಲ್ಲ ಸಂಹರಿಸಿದ. ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧಳಾಗಿ ಹೊರಹೊಮ್ಮಿದ ಸೀತೆಯೊಡನೆ ಅಯೋಧ್ಯೆಯ ರತ್ನಸಿಂಹಾಸನವನ್ನೇರಿದ.
ಇಲ್ಲಿ ಜೀವನವೇ ದಂಡಕಾವನ. ಸೀತಾರಾಮರೆಂದರೆ ಜೀವ - ದೇವರುಗಳು. ದೇವನೊಡನೆ ಆನಂದದಿಂದ ವಿಹರಿಸುತ್ತಿದ್ದ ಜೀವನ ಕಣ್ಮುಂದೆ ಮಾಯೆಯೆಂಬ ರಾವಣನಿಂದ ನಿರ್ಮಿತವಾದ ವಿಷಯಸುಖವೆಂಬ ಕನಕಮೃಗ ಸುಳಿದಾಡುತ್ತದೆ. ದೇವನನ್ನು ಮಾತ್ರವೇ ಬಯಸಬೇಕಾದ ಜೀವ ಅದನ್ನು ಬಿಟ್ಟು ವಿಷಯಸುಖದ ಕನಕಮೃಗವನ್ನು ಬಯಸಿತು. ಕಾಣುವ ಬಂಗಾರದ ಜಿಂಕೆಯ ಕವಚದಲ್ಲಿ ಕಾಣದ ಘೋರರಾಕ್ಷಸನಿರುವಂತೆ, ಕಾಣುವ ವಿಷಯ ಸುಖದ ಹಿನ್ನಲೆಯಲ್ಲಿ ಕಾಣದ ದಾರುಣ ದುಃಖವಿದೆಯೆಂದು ಅರಿಯಲಿಲ್ಲ. ವಿಷಯ ಸುಖದ ಮರೀಚಿಕೆಗಾಗಿ ಜೀವ, ದೇವನನ್ನೂ ಕಳೆದುಕೊಂಡಿದ್ದಲ್ಲದೆ ತನ್ನ ರಕ್ಷಣೆಗೆ ದೇವನಿಂದ ನಿಯುಕ್ತನಾಗಿದ್ದ ಲಕ್ಷ್ಮಣನನ್ನೂ ದೂರ ಅಟ್ಟಿತು. ಆಗ ಸನ್ಯಾಸಿಯ ಭವ್ಯರೂಪದಲ್ಲಿ ಬಳಿ ಬಂದ ರಾವಣನೆಂಬ ಮಾಯೆ ಜೀವಸೀತೆಯನ್ನಪಹರಿಸಿ , ಸಂಸಾರಸಮುದ್ರದ ಮಧ್ಯದಲ್ಲಿ ಕಾಮಕ್ರೋಧಗಳೆಂಬ ರಾಕ್ಷಸರಿಂದ ಆವೃತವಾದ ಅಜ್ಞಾನದ ಲಂಕಾನಗರಿಯಲ್ಲಿರಿಸಿತು.
ಲಂಕೆಯ ಅಶೋಕವನದಲ್ಲಿ ರಾಮನಿಲ್ಲದೆ ಸೀತೆ ನೊಂದಂತೆ, ಜೀವನ ಶೋಕವನದಲ್ಲಿ ದೇವನನ್ನು ಕಾಣುವ ಹಂಬಲದಲ್ಲಿ ಜೀವ ನೊಂದಾಗ ಕರಗಿ ಕಣ್ಣೀರಿಟ್ಟಾಗ, ಮಾಯೆಯ ಭೋಗದ ಆಮಿಷಕ್ಕೆ ಮನಮಾಡದೆ, ದೇವನಲ್ಲಿಯೇ ಮನವನ್ನು ನೆಟ್ಟಾಗ ಕೃಪೆ ತೋರುತ್ತಾನೆ. ತನ್ನ ಪ್ರತಿನಿಧಿಯಾದ ಮಾರುತಿಯೆಂಬ ಗುರುಮೂರುತಿಯನ್ನು ಕಳುಹಿಸಿಕೊಡುತ್ತಾನೆ. ಆ ಗುರು, ಭಗವಂತನ ಅಭಿಜ್ಞಾನವನ್ನು ಹೊತ್ತವನಾಗಿರಬೇಕು. ಜೀವದ ವೇದನೆಯನ್ನು ಭಗವಂತನಲ್ಲಿ ನಿವೇದನೆ ಮಾಡಬಲ್ಲವನಾಗಿರಬೇಕು. ಜೀವ, ಗುರುವನ್ನು ಪರೀಕ್ಷಿಸಿಯೇ ಸ್ವೀಕರಿಸಬೇಕು. ಆಮೇಲೆ ದೇವ, ಜೀವನನ್ನು ಸುತ್ತುವರಿದ ಎಲ್ಲಾ ರಾಕ್ಷಸರನ್ನೂ ಸಂಹರಿಸಿ , ಸಾಧನೆಯ ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧನಾಗಿ ಹೊರಹೊಮ್ಮಿದ ಜೀವನನ್ನು ಪರಿಗ್ರಹಿಸುತ್ತಾನೆ. ಎಲ್ಲ ಯುದ್ಧಗಳಿಗೆ ಮೀರಿದ ಅಯೋಧ್ಯೆಯ ಮೋಕ್ಷಸಿಂಹಾಸನದಲ್ಲಿ ತನ್ನೊಡನೆ ಜೀವನನ್ನು ಕುಳ್ಳಿರಿಸಿಕೊಳ್ಳುತ್ತಾನೆ.ಹೀಗೆ
ಜೀವ - ದೇವರ ವಿರಹ - ಸಂಗಮಗಳ ಕಥೆಯೇ ರಾಮಾಯಣ.
ರಾಜ್ಯ - ರಾಷ್ಟ್ರ
ಒಂದು ಮನವಿ
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಕಾಸರಗೋಡು ಇದರ ಆಶ್ರಯದಲ್ಲಿ 2010ನೇ ಜನವರಿ 9 ಮತ್ತು 10ರಂದು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ನಾಡಿನ ಹಿರಿಯ ಖ್ಯಾತ ವಿದ್ವಾಂಸರಾದ ಖಂಡಿಗೆ ಶಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಿ ಕಾರ್ಯಪ್ರವೃತ್ತರಾಗಿರುವ ವಿಚಾರ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ ಸಂತಸ ತಂದಿದೆ. ಕನ್ನಡ ಮಾಧ್ಯಮದ ಬಾಲವಾಡಿಯಿಂದ ಪದವಿ ತನಕದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು 1500 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಹಿರಿಯ ವಿದ್ವಾಂಸರೂ ಖ್ಯಾತ ಯಕ್ಷಗಾನ ಅರ್ಥಧಾರಿಗಳೂ ನಿವೃತ್ತ ಅಧ್ಯಾಪಕರೂ ಆದ ಪೆರ್ಲ ಕೃಷ್ಣ ಭಟ್ಟರು ಆಯ್ಕೆಯಾಗಿರುವುದು ತುಂಬ ಸಂತಸದ ವಿಷಯ.
ಸಮ್ಮೇಳನದ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ನಡೆಸಲಿದ್ದು ಹಾಸ್ಯಗೋಷ್ಟಿ, ಕವಿಗೋಷ್ಟಿ, ಭಾಷಾ ಸೌಹಾರ್ದ ಗೋಷ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಸಂಪನ್ನವಾಗಲಿದೆ.ಕಾಸರಗೋಡಿನ ಕನ್ನಡಕ್ಕೆ ಕಂಪು ಇದೆ, ಇಂಪು ಇದೆ, ತನ್ನತನವಿದೆ. ಕರ್ನಾಟಕದ ಗಣ್ಯವ್ಯಕ್ತಿಗಳೆಲ್ಲ ಕಾಸರಗೋಡನ್ನು ಸಂದರ್ಶಿಸಿದಾಗಲೆಲ್ಲ ಇಲ್ಲಿಯ ಕನ್ನಡ ಚಟುವಟಿಕೆಗಳ ಕುರಿತು ಭಾಷಾ ಶುದ್ಧತೆಯ ಕುರಿತು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಅದು ಈ ನೆಲದ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಶ್ರೀ ಕ್ಷೇತ್ರ ಅನಂತಪುರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭೇಟಿ ಇತ್ತಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ನೆಲದ ಕನ್ನಡ ಭಾಷೆಯ ಅಚ್ಚತನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದು ಖಂಡಿತವಾಗಿಯೂ ಕನ್ನಡಿಗರಿಗೆ ಪ್ರೋತ್ಸಾಹಕರ.
ಕಾಸರಗೋಡಿನಲ್ಲಿ ಕನ್ನಡ ನಶಿಸಿಹೋಗುತ್ತಿದೆ ಎನ್ನುವಂತಹ ಕೂಗು ಕೇಳಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಸುಮಾರು ನಾಲ್ಕು ಲಕ್ಷದಷ್ಟು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸುವುದು ಸುಲಭ ಸಾಧ್ಯವಲ್ಲ. ಕನ್ನಡಿಗರು ಸಹಾಯ ನೀಡುವುದರಲ್ಲಿ ಹಿಂದಿಲ್ಲ. ಆದರೆ ಸಕಾಲದಲ್ಲಿ ಸಂಪರ್ಕಿಸುವ ಕಾರ್ಯ ಆಗಬೇಕಾಗಿದೆ. ಆರ್ಥಿಕ ಅಡಚಣೆಯಿಂದಾಗಿ ಒಂದು ಹಂತದಲ್ಲಿ ಸಮ್ಮೇಳನವನ್ನು ರದ್ದುಪಡಿಸುವುದು ಅಥವಾ ಮುಂದೂಡುವುದು ಉತ್ತಮ ಎಂಬ ಅಭಿಪ್ರಾಯವೂ ಬಂದಿತ್ತು ಎಂಬುದು ವಿಷಾದಕರ ವಿಷಯ. ಆದರೆ ನಾಡಿನ ಕನ್ನಡಾಭಿಮಾನಿಗಳು ಕೈಬಿಡಲಾರರು ಎಂಬ ದೃಢನಂಬಿಕೆಯಿಂದ ಮುಂದಡಿ ಇಡುತ್ತಿದ್ದೇವೆ.
ಸಮ್ಮೇಳನದ ಯಶಸ್ವಿಗಾಗಿ ಕನ್ನಡಾಭಿಮಾನಿಗಳು, ಕನ್ನಡಪರ ಸಂಘಸಂಸ್ಥೆಗಳು ಕೈಜೋಡಿಸಿ ಯಶಸ್ಸಿನಲ್ಲಿ ಭಾಗೀದಾರಿಗಳಾಗಲೇ ಬೇಕಾಗಿದೆ. ಆರ್ಥಿಕ ಸಂಪನ್ಮೂಲ ಒದಗಿಸುವುದಕ್ಕೆ ನೆರವು ನೀಡಬೇಕಾಗಿದೆ. ಕರ್ನಾಟಕದ ಕನ್ನಡಬಂಧುಗಳೂ ಸಂಘಸಂಸ್ಥೆಗಳೂ ಈ ಕಾರ್ಯದಲ್ಲಿ ನಮಗೆ ನೆರವಿನ ಹಸ್ತಚಾಚಬೇಕಾದ ಅಗತ್ಯವಿದೆ, ಅನಿವಾರ್ಯತೆಯಿದೆ. ಕಾಸರಗೋಡಿನ ಮಣ್ಣಿನಲ್ಲಿ ಕನ್ನಡವನ್ನು ಉಳಿಸುವುದಕ್ಕೆ ಬೆಳೆಸುವುದಕ್ಕೆ ಎಲ್ಲರ ಸಹಾಯ ಪ್ರೋತ್ಸಾಹಗಳನ್ನು ಖಂಡಿತವಾಗಿಯೂ ನಿರೀಕ್ಷಿಸುತ್ತೇವೆ.
ಸಹಾಯವನ್ನು ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖೆಯ ಉಳಿತಾಯ ಖಾತೆ ಸಂಖ್ಯೆ 7197ಕ್ಕೆ ಕಳುಹಿಸಬಹುದು ಅಥವಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸ್ವಾಗತ ಸಮಿತಿ, ನೀರ್ಚಾಲು, ಕಾಸರಗೋಡು ಜಿಲ್ಲೆ, 671 321. ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 09497603883ನ್ನು ಸಂಪರ್ಕಿಸಬಹುದು.
ಮಾಹಾಲಿಂಗೇಶ್ವರ ಭಟ್ ಎಂ.ವಿ
ಪ್ರಧಾನ ಕಾರ್ಯದರ್ಶಿ
ಸ್ವಾಗತ ಸಮಿತಿ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನೀರ್ಚಾಲು.
ಭೋಪಾಲ್ ಅನಿಲ ದುರಂತದ ಮೂಕ ಸಾಕ್ಷಿ ಗ್ಯಾಸುವಿಗೆ 25 ವರುಷ
ಪ್ರತ್ಯಕ್ಷ ವರದಿ: ಪ್ರಕಾಶ್ ಶೆಟ್ಟಿ ಉಳೆಪಾಡಿ.jpg)
ವಿಷಾನಿಲ ಸೇವಿಸಿದವರಿಗೆಲ್ಲ ರಕ್ತವಾಂತಿಯಾಗಿ ರಸ್ತೆಗಳಲ್ಲೆಲ್ಲ ನೆತ್ತರು ಹರಿಯುತ್ತಿತ್ತಂತೆ! ಡ್ರೈನೇಜ್ ನಲ್ಲಿಯೂ ಕೆಂಪು ಬಣ್ಣ ಹರಡಿಕೊಂಡಿತ್ತಂತೆ. ಮರುದಿನ ಗಾಯಗೊಂಡವರಿಗೆ ವಿಷಾನಿಲ ಪರಿಣಾಮಕ್ಕೊಳಗಾದವರಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇರಲಿಲ್ಲ. ಏಕೆಂದರೆ ಅವರೂ ಬಲಿಯಾಗಿ ಹೋಗಿದ್ದರು!
ಆಗಷ್ಟೇ ಹುಟ್ಟಿದ ಹಸುಗೂಸು ಕಿರಣ್ ಬಾಯಿ ಅವರ ಕೈಯಲ್ಲಿತ್ತು ಹಸಿ ಹಸಿ ಬಾಣಂತಿ... ಮನದಲ್ಲಿ ಹರುಷ.. ಒಂದೆರಡು ಕ್ಷಣ ಕಳೆದಿರಬಹುದು... ಅಯ್ಯಯೋ.. ಓಡಿ.. ಓಡಿ.. ಅನ್ನೋ ಬೊಬ್ಬೆ... ಕುಯ್ಯೋ..... ಅನ್ನೋ.. ಕಾರ್ಖಾನೆಯ ಸೈರನ್ ಶಬ್ದ.. ಸುತ್ತಮುತ್ತಲಿನ ಜನರು ಕಂಗಾಲಾಗಿ ಓಡತೊಡಗಿದರು.. ಹೆರಿಗೆ ನೋವನ್ನು ಅನುಭವಿಸಿ ಆಗಷ್ಟೇ ಕ್ಷಣಗಳು ಕಳೆದಿವೆ ಅಷ್ಟೇ... ಈ ಹೆಣ್ಣು ಮಗಳು ಹಸುಗೂಸನ್ನು ಹಿಡಿದುಕೊಂಡು ಓಡತೊಡಗಿದಳು.. ಎತ್ತ ಹೋಗಲಿ.. ಎತ್ತ ಓಡಲಿ... ದಾರಿ ಕಾಣುತ್ತಿಲ್ಲ....jpg)
ಹೌದು `ಗ್ಯಾಸು'ವಿಗೆ ಇಂದಿಗೆ 25 ವರುಷ ತುಂಬಿದೆ... 1984 ಡಿಸೆಂಬರ್ 3ರ ಕರಾಳ ದಿನದಂದು ಜನ್ಮವೆತ್ತಿದ ಚಂದ್ರಶೇಖರ ಭೋಪಾಲ್ ಅನಿಲ ದುರಂತಕ್ಕೆ ಸಾಕ್ಷಿಯಾಗಿ ನೆರೆಹೊರೆಯವರೆಲ್ಲರ ಬಾಯಿಯಿಂದ `ಗ್ಯಾಸು' ಎಂಬ ಅಡ್ಡ ಹೆಸರಿನಿಂದಲೇ ಕರೆಸಿಕೊಳ್ಳುತ್ತಾನೆ. ಚಂದ್ರಶೇಖರ ಎಂದು ಯಾರಾದರೂ ಕರೆದರೆ ಈತನಿಗೆ ಅದು ತನ್ನ ಹೆಸರಲ್ಲವೆಂದೇ ಅನಿಸುತ್ತದೆ...
ಡಿಸೆಂಬರ್ 3, 2009 ಕ್ಕೆ ಭೋಪಾಲ್ ಅನಿಲ ದುರಂತ ಸಂಭವಿಸಿ 25 ವರ್ಷ ಕಳೆಯುತ್ತವೆ. 2ನೇ ತಾರೀಖು ಡಿಸೆಂಬರ್ 1984 ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಎಂಬ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕ ಬಹುರಾಷ್ಟ್ರೀಯ ಕಾರ್ಖಾನೆ. ಸಾವಿರಾರು ಅಮಾಯಕರನ್ನು ಕೊಂದ ಈ ಘಟನೆಗೆ ಮುಖ್ಯ ಕಾರಣ ಆ ಕಾರ್ಖಾನೆಯಲ್ಲಿ ಕೀಟನಾಶಕ ಹಾಗೂ ಗೊಬ್ಬರವನ್ನು ತಯಾರಿಸಲು ಬಳಸುತ್ತಿದ್ದ ಮಿಥೇಲ್ ಐಸೋಸೈನೇಟ್ ಮತ್ತು ಲೀಥೆಲ್ ಎಂಬ ವಿಷ ಅನಿಲ ಸೋರಿಕೆ. .jpg)
ಈ ವಿಷಾನಿಲ ಎಷ್ಟರ ಮಟ್ಟಿಗೆ ಹಾನಿಮಾಡಿತೆಂದರೆ ನೋಡನೋಡುತ್ತಿದ್ದಂತೆ ವಿಷಾನಿಲ ಹರಡುತ್ತಿತ್ತು ಜನ ಸಾಮೂಹಿಕವಾಗಿ ಏಕಾಏಕಿ ಜೋರಾಗಿ ಕೆಮ್ಮತೊಡಗಿದರು. ಗಂಟಲೊಳಗೆ ಬೆಂಕಿ ಕೆಂಡ ತುರುಕಿದ ಉರಿ. ಕಣ್ಣೊಳಗೆ ನೂರು ಕೆಂಪು ಮೆಣಸಿನ ಕಾಯಿ ಅರೆದು ಕುಟ್ಟಿದ ಯಾತನೆ. ಒಂದೇ ಸಮನೆ ನೋವು, ಉರಿ ಎಂದು ಅರಚುತ್ತಾ ಮನೆಯ ಹೊರಗೋಡಿ ಬರುವಷ್ಟರಲ್ಲಿ ಉಸಿರುಗಟ್ಟಿ ಸತ್ತರು. ಮುದುಕರು ಹಾಸಿಗೆಯಲ್ಲೇ ಮಡಿದರು. ಗರ್ಭಿಣಿಯರಿಗೆ ಇದ್ದಲ್ಲಿಯೇ ಗರ್ಭಪಾತವಾಯಿತು. ಆಸ್ಪತ್ರೆಯಲ್ಲಿ ಹುಟ್ಟಿದ ನೂರಾರು ನವಜಾತ ಶಿಶುಗಳು ತೊಟ್ಟಿಲಲ್ಲೇ ಅಸು ನೀಗಿದವು. ವಿಷಾನಿಲ ಯಾವ ಯಾವ ಮನೆಗೆ ಕಾಲಿಟ್ಟಿತೋ ಅಲ್ಲೆಲ್ಲ ಹೆಣಗಳು! ದಾರಿಯಲ್ಲಿ ಹೋಗುವವರು, ಬೀದಿಬದಿಯಲ್ಲಿ ಮಲಗಿದವರು, ಕಣ್ಣುಗಳನ್ನು ತೆರೆಯುವುದರೊಳಗೆ ಶಾಶ್ವತವಾಗಿ ಕಣ್ಮುಚ್ಚಿದ್ದರು. 
ಸಾವಿರಾರು ಮಂದಿ ದಿಕ್ಕಾಪಾಲಾಗಿ ಓಡಿದರು. ದಿಗ್ಭ್ರಮೆಯಲ್ಲಿ ಅನೇಕರಿಗೆ ಎತ್ತ ಕಡೆ ಓಡಬೇಕೆಂಬುದೇ ತಿಳಿಯಲಿಲ್ಲ. ಬಹುತೇಕರು ಅನಿಲ ಸೋರಿಕೆಯಾಗುತ್ತಿದ್ದ ಕಡೆಗೇ ಓಡತೊಡಗಿದರು. ಈ ಧಾವಂತದಲ್ಲಿ ಕಾಲ್ತುಳಿತಕ್ಕೊಳಗಾಗಿ ಸತ್ತರು, ಗಾಯಗೊಂಡರು. ಮುಂಜಾನೆಯ ಹೊತ್ತಿಗೆ ಸುಮಾರು ಭೋಪಾಲದ ಸುಮಾರು 25 ಸಾವಿರ ಜನರು ಶವವಾಗಿದ್ದರು. ಕನಿಷ್ಠ ಒಂದು ಲಕ್ಷ ಜನರು ಅಸ್ವಸ್ಥರಾದರು. ವಿಷಾನಿಲ ಸೇವಿಸಿದವರಿಗೆಲ್ಲ ರಕ್ತವಾಂತಿಯಾಗಿ ರಸ್ತೆಗಳಲ್ಲೆಲ್ಲ ನೆತ್ತರು ಹರಿಯುತ್ತಿತ್ತಂತೆ! ಡ್ರೈನೇಜ್ನಲ್ಲಿಯೂ ಕೆಂಪು ಬಣ್ಣ ಹರಡಿಕೊಂಡಿತ್ತಂತೆ. ಮರುದಿನ ಗಾಯಗೊಂಡವರಿಗೆ ವಿಷಾನಿಲ ಪರಿಣಾಮಕ್ಕೊಳಗಾದವರಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇರಲಿಲ್ಲ. ಏಕೆಂದರೆ ಅವರೂ ಬಲಿಯಾಗಿ ಹೋಗಿದ್ದರು! ಹೆಣ ಸಾಗಿಸುವವರು ಇರಲಿಲ್ಲ. ದಾರಿಯಲ್ಲೆಲ್ಲ ರಕ್ತ ಕಕ್ಕಿಕೊಂಡು ಬಿದ್ದಿದ್ದ ಶವಗಳ ರಾಶಿ! ಇವಿಷ್ಟು ಮೊದಲನೆಯ ದಿನದ ಪರಿಣಾಮ. .jpg)
ಅಲ್ಲಿಯ ಜನರು ಇಂದಿಗೂ ತಿಂಗಳಿಗೆ 5-10 ಜನರು ಸಾವಿನ ಬಾಗಿಲನ್ನು ಮುಟ್ಟುತ್ತಾರೆ. ಕಳೆದ ಇಪ್ಪತ್ತೈದು ವರ್ಷದಿಂದ ಅದೆಷ್ಟು ಜನ ಸತ್ತಿದ್ದಾರೋ ಆ ದೇವರಿಗೆ ಗೊತ್ತು. ಈಗಲೂ ಅಲ್ಲಿಯ ಜನರು ಅಸ್ತಮಾ, ಅಲರ್ಜಿ, ಶ್ವಾಸಕೋಶ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಹುಟ್ಟುವ ಮಕ್ಕಳು ಅಂಗವಿಕಲರಾಗಿಯೋ, ಉಸಿರಾಟ ಸಂಬಂಧಿ ಕಾಯಿಲೆಗಳೊಂದಿಗೋ ಹುಟ್ಟುತ್ತಿದ್ದಾರೆ!
ಸಾರ್ `ಗ್ಯಾಸು'ವಿಗೆ ಪರಿಚಯುಸುತ್ತೇನೆ ಎಂದು ಅಕ್ರಂ ಖಾನ್ ಎಂಬ 26ರ ಹರೆಯದ ಯುವಕ ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋದ.
ಸದ್ಯಕ್ಕೆ ಸ್ಥಳೀಯ ಖಾಸಗಿ ಬಸ್ಸಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ `ಗ್ಯಾಸು' ಮೇಲ್ನೋಟಕ್ಕೆ ಆರೋಗ್ಯವಂತನಾಗಿಯೇ ಕಂಡರೂ... ಆತನ ಕಥೆಯೇ ಬೇರೆ... ಸರಿಯಾಗಿ ಉಸಿರು ತಗೊಳ್ಳಲಾಗುತ್ತಿಲ್ಲ... ಕಾಲು ಸ್ವಲ್ಪ ಊನವಾಗಿದೆ ನಡೆಯುವಾಗ ಆಯ ತಪ್ಪಿದಂತಾಗುತ್ತದೆ ಎನ್ನುತ್ತಾನೆ... ಆತನ ಅಮ್ಮ ಕಿರಣ್ ಬಾಯಿಯನ್ನು ಮಾತನಾಡಿಸಿದಾಗ ಆಕೆಗೆ ಮಾತೇ ಹೊರ ಬರುತ್ತಿಲ್ಲ.. ಆ ದಿನಗಳನ್ನು ನೆನೆದು ಕೊಂಡು ಕಣ್ಣಿಂದ ಎರಡು ಹನಿ ಉದುರಿದರೂ ನಮ್ಮ ಜೊತೆ ಅನುಭವ ಹಂಚಿಕೊಂಡರು.
ಗಫರ್ ಗಂಜ್ನ ಬೀದಿಯಲ್ಲಿ ನಮ್ಮನ್ನು ಅಕ್ರಂ ಖಾನ್ ಒಂದೊಂದು ಮನೆಗೂ ಪರಿಚಯಿಸಿಕೊಂಡು ಹೋಗುತ್ತಿದ್ದ ಪ್ರತಿಯೊಂದು ಮನೆಯದೂ ಒಂದೊಂದು ಕತೆ... ಒಂದೊಂದು ವ್ಯಥೆ...
ಸಾರ್... ಇಲ್ಲಿ ಪಕ್ಕದಲ್ಲಿ ನಮ್ಮ ಮೌಸಿಯ ಮನೆ ಇದೆ ಅವರ ಹೆಸರು ಲೀಲಾ ಬಾಯಿ ಅಂದ ಅಕ್ರಂ... ಸರಿ ಎಂದು ಅವರ ಮನೆ ಬಾಗಿಲಿಗೆ ಹೋದೆವು... ಆಕೆಯದು ಇನ್ನೊಂದು ಕಥೆ... ಮೃತ್ಯುವಿನ ದವಡೆಯಿಂದ ಎದ್ದು ಬಂದಾಕೆ ಲೀಲಾ ಬಾಯಿ... 25 ವರುಷಗಳ ಹಿಂದಕ್ಕೆ ನಮ್ಮನ್ನು ಕೊಂಡು ಹೋದರು...
ಆಗಷ್ಟೇ ಆರು ತಿಂಗಳ ಗರ್ಭಿಣಿ... ಗ್ಯಾಸ್ ಲೀಕ್ ಆದಾಗ ಏನೆಂದೇ ತೋಚಲಿಲ್ಲ... ಕಣ್ಣು ಕತ್ತಲೆ ಇಟ್ಟಂತಾಯಿತು ಏನೂ ತೋಚಲಿಲ್ಲ... ಅಲ್ಲಿಗೇ ಸ್ಮೃತಿ ತಪ್ಪಿ ಬಿದ್ದು ಬಿಟ್ಟೆ...
ಎಚ್ಚರವಾದಾಗ ನನಗೆ ದಿಗ್ಭ್ರೆಮೆ ಕಾದಿತ್ತು... ಸುತ್ತಲೂ ರಾಶಿ ರಾಶಿ ಹೆಣಗಳು. ನನ್ನ ಮೇಲೂ ಬಿಳಿ ಬಟ್ಟೆ ಹೊದೆಯಲಾಗಿತ್ತು. ಎದ್ದು ಕೂತೆ... ಆದರೆ ಆ ಪರಿಸ್ಥಿತಿಯಲ್ಲಿ ಅಕ್ಷರಶಃ ನಾನೊಂದು ಹೆಣವಾಗಿದ್ದೆ... ಆದರೂ ನಾನು ಉಸಿರಾಡುತಿದ್ದುದು ನನಗೆ ಮಾತ್ರ ಗೊತ್ತು. ಒಂದು ವೇಳೆ ಅವರು ಎಲ್ಲಾ ಹೆಣಗಳ ಮೇಲೆ ಪೆಟ್ರೋಲ್ ಸುರಿಯದಿದ್ದರೆ, ಅದರ ಘಾಟು ನನ್ನ ಮೂಗಿಗೆ ಬಡಿಯದಿರುತ್ತಿದ್ದರೆ... ನಾನಿಂದು ನಿಮ್ಮೆದುರು ಮಾತನಾಡಲು ಇರುತ್ತಿರಲಿಲ್ಲ ಎಂದಾಗ ಅವರ ಕಣ್ಣು ತುಂಬಿ ಬರುತ್ತಿತ್ತು... ಆಮೇಲೆ ನನ್ನನ್ನೊಬ್ಬನನ್ನೇ ಹತ್ತಿರ ಕರೆದು ಬೇಟಾ... ಆ ದಿನ ನನ್ನ ಆರು ತಿಂಗಳ ಗರ್ಭಪಾತ ಆಗದಿರುತ್ತಿದ್ದರೆ ನಿನ್ನಷ್ಟು ದೊಡ್ಡ ಮಗನಿರುತ್ತಿದ್ದ ಎಂದು ನನ್ನ ತಲೆ ನೇವರಿಸಿ ಮಾತೆಯ ಮಮತೆಯನ್ನು ತೋರಿಸುವಾಗ ಅವರ ಕಿವುಚಿಕೊಂಡ ಮುಖ ನೋಡಿ ಕರುಳು ಕಿತ್ತು ಬರುತ್ತಿತ್ತು.
ಅಕ್ರಂ ನಿನಗೆ ಏನಾದರೂ ಅರ್ಜೆಂಟ್ ಕೆಲಸ ಇದ್ದರೆ ಮುಗಿಸಿಕೋಪ್ಪಾ... ನಾವು ಮುಂದುವರಿಯುತ್ತೇವೆ ಅಂದೆವು... ಸಾರ್ ನೀವೇನೂ ವರಿ ಮಾಡ್ಕೋಬೇಡಿ ಇನ್ನೊಬ್ಬರಿಗೆ ಸಹಾಯ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಮಸೀದಿಯಲ್ಲಿ ಸ-ಅದ್ನಲ್ಲಿ ಹೇಳಿದ್ದಾರೆ.. ನೀವು ಬೇರೆ ಊರಿನವರು ನಿಮಗೆ ಸ್ಹಾಯ ಮಾಡುವುದೇ ನನ್ನ ಭಾಗ್ಯ, ಬನ್ನಿ ಸಾರ್... ನಮ್ಮ ಇಲ್ಲೆ ನಮು ಇದೆ ಟೀ ಕುಡ್ಕೊಂಡು ಹೋಗಿ ಅಂತ ಅವರ ಮನೆಗೆ ಬೇಡವೆಂದರೂ ಕರ್ಕೊಂಡೋದ. ಅಕ್ರಂನ ತಂದೆ ಇಬ್ರಾಹಿಂ ಖಾನ್ ಬಂದು ಕುಶಲ ವಿಚಾರಿಸಿದರು. ಸಾರ್ ನಮ್ಮ ತಂದೆಯವರೂ ಅನಿಲ ಪೀಡಿತರು ಗೊತ್ತಾ ಅಂದ... ಅವರ ಹೊಟ್ಟೆ ಉಬ್ಬಿದೆ...
ದೊಡ್ಡ ಗುಡಾಣದಂತಿದೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ... 25 ವರುಷದಿಂದ ಸರಿಯಾಗಿ ಕೆಲಸವೂ ಮಾಡಲಾಗುತ್ತಿಲ್ಲ... ``ಏನು ಮಾಡುವುದು ಹೇಳಿ ಅಂದಿನಿಂದ ಇಂದಿನವರೆಗೂ ಮದ್ದು ನಡೆಯುತ್ತಾ ಇದೆ. ಈಗ ನಮ್ಮ ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದಾರೆ ತೊಂದರೆ ಇಲ್ಲ. ಅಲ್ಪ ಸ್ವಲ್ಪ ದುಡಿದು ತಂದುದರಲ್ಲಿ ನನ್ನ ಮದ್ದಿನ ಖರ್ಚು ನಡೆಯುತ್ತದೆ'' ಎಂದರು. ಅನಿಲ ಪೀಡಿತ ಮನೆಯಲ್ಲೇ ಬಿದ್ದಿರುವ ತಂದೆ ಇಬ್ರಾಹಿಂ ಖಾನ್ ಅವರನ್ನು ಸಾಕುವ ಜವಾಬ್ದಾರಿಯೂ ಅಕ್ರಂನದ್ದೇ... ಒಡಲಲ್ಲೇ ಕುದಿಯುತ್ತಿರುವ ದುಖವನ್ನು ಅವಡುಗಚ್ಚಿ ಹಿಡಿದು ಇನ್ನೊಬ್ಬರಿಗೆ ಸಹಾಯ ಮಾಡುವುದು ತಮ್ಮ ಧರ್ಮ ಎನ್ನುವ ನಿಜವಾದ ನೈಜ ಮಾನವ ಧರ್ಮವನ್ನು ಆ ಹುಡುಗನಲ್ಲಿ ಕಂಡೆ.
ಇಷ್ಟೆಲ್ಲಾ ಕಥೆಗಳಿಗೆ ಕಾರಣಕರ್ತನಾಗಿರುವ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಸಂಸ್ಥೆಯ ಮಾಲೀಕ ಮುಖ್ಯಸ್ಥ ವಾರೆನ್ ಆಂಡರ್ಸನ್ ಈ ಘಟನೆ ನಡೆದ 3-4 ದಿನದಲ್ಲೆ ಅರೆಸ್ಟ್ ಆದರೂ ಕೂಡ ಡಿಸೆಂಬರ್ 8, 1984 ರಂದು ಬಿಡುಗಡೆಯಾದರು. ಕೆಲ ಮಾಹಿತಿಯು, ತಲೆಮರೆಸಿಕೊಂಡಿದ್ದಾರೆಂದು ಹೇಳುತ್ತವೆ. ತಲೆಮರೆಸಿಕೊಂಡಿದ್ದಾರೆನ್ನುವುದಕ್ಕಿಂತ ಆಗಿನ ನಮ್ಮ ಘನ ಸರ್ಕಾರವು ಅವನನ್ನು ಅಮೆರಿಕಾಕ್ಕೆ ಕಳುಹಿದರು. ನಂತರ ಸಂಧಾನವಾಗಿ 470 ಕೋಟಿ ರೂಪಾಯಿಯನ್ನು ಪರಿಹಾರವಾಗಿ ಪಡೆಯಲಾಯಿತು. ಈ ಹಣ ಇನ್ನೂ ಸಂತ್ರಸ್ತರನ್ನು ತಲುಪಿಲ್ಲ. ಪರಿಹಾರಕ್ಕಾಗಿ ಹೋರಾಟ ನಡೆದಿದೆ. ಸಂಸ್ಥೆಯ ಮುಖ್ಯಸ್ಥನನ್ನು ಅಪರಾಧಿ ಹಾಗೂ ಕೊಲೆಪಾತಕ ಎಂದು ನ್ಯಾಯಾಲಯವು ಘೋಷಣೆ ಮಾಡಿದ್ದರೂ ಅವನನ್ನು ಬಂಧಿಸುವ ಧೈರ್ಯವನ್ನು ನಮ್ಮ ಸರ್ಕಾರ ಮಾಡಿಲ್ಲ. ಅಮೇರಿಕ ಸರಕಾರದ ಹಿತವಾದ ರಕ್ಷಣೆಯಲ್ಲಿ ಸುಖವಾಗಿದ್ದಾರೆ ಅಪರಾಧಿಗಳು. ಅಪರಾಧಿಗಳನ್ನು ಹಿಡಿದರೆ ಎಲ್ಲಿ ಒಳಕ್ಕೆ ಹರಿದುಬರುವ ಬಂಡವಾಳ ತಪ್ಪುತ್ತದೆಯೋ ಎಂದು ಹೆದರಿಕೆ ನಮ್ಮನ್ನು ಆಳುವವರಿಗೆ!.jpg)
ಶಬ್ಬಿರ್ ಖಾನ್ ಹೇಳುವುದೇ ಬೇರೆ... ಆ ಕರಾಳ ರಾತ್ರಿಯಂದು ಎರಡು ಮಕ್ಕಳನ್ನು ಹಿಡಿದುಕೊಂಡು ಮಡದಿಯೊಂದಿಗೆ ಎದ್ದು ಬಿದ್ದು ಓಡುತ್ತಿದ್ದೆ ಮಕ್ಕದ ಮನೆಯ ಸತ್ಯೇಂದ್ರ ಸಾಹು ಪ್ರಾಣ ಸಂಕಟದಿಂದ ಒದ್ದಾಡುತ್ತಿದ್ದರೂ ಅವರತ್ತ ನೋಡುವಷ್ಟು ಶಕ್ತ ನಾನಾಗಿರಲಿಲ್ಲ 2 ದಿನಗಳ ನಂತರ ಎಲ್ಲ ಶಾಂತವಾದಾಗ ಬಂದು ನೋಡಿದರೆ ಸತ್ಯೇಂದ್ರ ಹಾಗೂ ಆತನ ಎರಡು ಹೆಣ್ಣು ಒಂದು ಗಂಡು ಮಗು ಸಾವಿನ ಬಾಗಿಲು ಸೇರಿದ್ದರು. ಸಾಯುವಾಗ ನನ್ನನ್ನು ಕರೆದರೂ ಆತನತ್ತ ಮುಖ ಮಾಡಿ ನೋಡಲಿಲ್ಲವಲ್ಲಾ ಅನ್ನೋ ಕೊರಗು ಈಗಲೂ ಕಾಡುತ್ತಿದೆ ಎಂದು ಮರುಕ ಪಡುತ್ತಾರೆ. ತಾನೂ ಕೆಲಸ ಮಾಡಲು ಅಶಕ್ತನಾಗಿದ್ದೇನೆ.. ಇದುವರೆಗೆ ಎರಡು ಕಂತಿನಲ್ಲಿ 25 ಸಾವಿರದ ಹಾಗೆ ಒಟ್ಟು 50 ಸಾವಿರ ರೂಪಾಯಿ ದೊರೆತಿದೆ ಅದು ಖಾಸಗಿ ಚಿಕಿತ್ಸಾಲಯದಲ್ಲಿ ಮಾಡಿದ ಮದ್ದಿಗೆ ಏನೇನೂ ಸಾಲಲಿಲ್ಲ.. ಈಗ ನೋಡಿ ಜೋಪಡಿಪಟ್ಟಿಯಲ್ಲಿ ಬದುಕುತ್ತಿದ್ದೇನೆ... ದುಡಿದದ್ದೆಲ್ಲವನ್ನೂ ಕಳಕೊಂಡೆ ಎನ್ನುತಾ... ಕಹಿ ನೆನಪುಗಳನ್ನು ಮೆಲಕುಹಾಕುತ್ತಾರೆ.
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಜಬ್ಬಾರ್ ಅವರನ್ನು ಮಾತನಾಡಿಸಿದಾಗ ಅವರು ಹೇಳುವುದಿಷ್ಟೇ... ``ದುರಂತ ನಡೆದಿರುವುದು ಬಡವರಿಗೆ ಸಂತ್ರಸ್ತರಿಕೆ ಗಾಯದ ಮೇಲೊಂದು ಬರೆ ಎಳೆದಂತೆ ಆಗಿದೆ ಮೇಲಿಂದ ಮೇಲೆ ನಡೆದ ಅಭಿಶಾಪವಾಗಿದೆ ಆದರೆ ಕೆಲವು ಧನಗಾಹಿಗಳಿಗೆ ಇದೊಂದು ವರದಾನವಾಗಿ ಪರಿಣಮಿಸಿದೆ. ಸಂತ್ರಸ್ತರಿಗೆ ಸಿಗುವ ಸವಲತ್ತುಗಳು ಪರಿಹಾರ ಧನವನ್ನು ಬಾಚಿಕೊಂಡು ಕಬಳಿಸುತ್ತಿದ್ದಾರೆ'' ಎನ್ನುತ್ತಾರೆ.
ದುರಂತದಲ್ಲಿ ಮನೆ ಮಠ ಕಳೆದುಕೊಂಡು ಬೀದಿಪಾಲಾದವರಿಗಾಗಿ `ಬೇವೂ' ಕಾಲನಿಯನ್ನು ನಿರ್ಮಿಸಲಾಗಿದೆ ಅಲ್ಲಿ ಯಾರನ್ನಾದರೂ ಮಾತನಾಡಿಸಿದರೆ... `ಹಂ ಕಿರಾಯೇ ಪರ್ ರಹ್ ರಹೇ ಹೈ ಸಾಬ್, ಘರ್ ಕಾ ಮಾಲಿಕ್ ಯಹಾಂ ನಹೀ ಹೈ'' ಅನ್ನುತ್ತಾರೆ ಮನೆಯವರು... ಆ ಕಾಲನಿಯಲ್ಲಿ ನಿಜವಾದ ಸಂತ್ರಸ್ತರು ಯಾರೂ ಇಲ್ಲ... ಎಲ್ಲಾ ಉಳ್ಳವರು ಕಬಳಿಸಿಕೊಂಡಾಗಿದೆ.
ಪರಿಸರಕ್ಕೆ ಈ ದುರಂತದಿಂದ ಉಂಟಾದ ಹಾನಿ ಕಡಿಮೆಯೇನಲ್ಲ. ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾಸಾಯನಿಕ ತ್ಯಾಜ್ಯಗಳಿಂದಾಗಿ ಅಂತರ್ಜಲ ಕಲುಷಿತಗೊಂಡಿದೆ ಎಂಬುದನ್ನು ಅಲ್ಲಿನ ಸಂಸ್ಥೆಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ವಾಯು ಉಸಿರಾಡಲು ಅಯೋಗ್ಯವಾಗಿ ದಶಕಗಳೇ ಕಳೆದು ಹೋದವು! ಮಣ್ಣಿನಲ್ಲಿ ಅದೆಷ್ಟು ವಿಷ ಸೇರಿದೆಯೋ ಬಲ್ಲವರಾರು? ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ತರಕಾರಿಗಳಲ್ಲಿ ವಿಷ ಸೇರಿರುವ ಬಗ್ಗೆ ಅಧ್ಯಯನ ವರದಿಗಳು ತಿಳಿಸುತ್ತವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ವ್ಯವಧಾನ ಯಾರಿಗಿದೆ? ಎಷ್ಟೆಂದರೂ ಜೀವನ ಎಂದರೆ ಅತ್ಯಂತ ಕಡಿಮೆ ಬೆಲೆಯದಲ್ಲವೇ ಭವ್ಯ ಭಾರತ ದೇಶದಲ್ಲಿ? ಯಾರು ಯಾರನ್ನು ಯಾವಾಗ ಬೇಕಾದರೂ ಕೊಂದು ಹಾಕಬಹುದು, ಅದರಲ್ಲೂ ಸಾಮೂಹಿಕವಾಗಿ ಕೊಂದರೆ ಬೆಲೆ ಹೆಚ್ಚು!
ಸಾರ್.. ಇದು ರವೀಂದ್ರ ಕುಮಾರ್ ಸಾಹು ದುರಂತ ನಡೆದ ಸಮಯದಲ್ಲಿ ನಿಮ್ಮಂಗೆ ಗಟ್ಟಿ ಮುಟ್ಟಾಗಿದ್ದರಂತೆ ಈವಾಗ ನೋಡಿ ಎಂದು ಸಣಕಲು ಕಡ್ಡಿಯಂತಿರುವ ವ್ಯಕ್ತಿಯತ್ತ ಬೆರಳು ಮಾಡಿದ... ಅಕ್ರಂನ ವಿವರಣೆ ಮುಗಿಯದ ಕಥೆಯಂತೆ ಸಾಗುತ್ತಲೇ ಇತ್ತು...
Video

