ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಎಕ್ಸ್ಲೂಸಿವ್
ಈ ಸಾವಿಗೆ ಕಾರಣವಾದ್ರೂ ಏನು...?!!!ಇಲ್ಲಿ ಸಾವಿಗೆ ಕಾರಣವಿಲ್ಲ.ವೃದ್ದರೆಲ್ಲಾ ಇಲ್ಲಿ ಆರಾಮವಾಗಿದ್ದರೆ ಉಳಿದವರೆಲ್ಲಾ ಸಾವಿನ ಕದ ತಟ್ಟುತ್ತಿದ್ದಾರೆ.ಕಳೆದ 15 ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮೆತ್ತಡ್ಕದ ಬಡಾವಣೆಯಲ್ಲಿ 25 ಅಪಮೃತ್ಯು ಸಂಭವಿಸಿದೆ.ಆದರೆ ಸತ್ತವರೆಲ್ಲಾ ವೃದ್ದರೂ ಅಲ್ಲ.ಅದ್ಯಾವುದೋ ಕಾಣದ ಶಕ್ತಿಯೊಂದು ಇಲ್ಲಿ ಆಟವಾಡುತ್ತಿದೆ.ಹೀಗಾಗಿ ಈ ಬಡಾವಣೆಯ ಜನ ಭಯಭೀತರಾಗಿ ಇಲ್ಲೊಂದು ಸಭೆ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ್ದಾರೆ.ಹಾಗಿದ್ದರೆ ಆ ಶಕ್ತಿ ಯಾವುದು ಎಂಬುದೇ ಪ್ರಶ್ನೆಯಾಗಿದೆ.ಈಗ ಜನರಿಗೆ ಭಯಕ್ಕೆ ಕಾರಣವಾಗಿರುವ ಅಂಶ ಯಾವುದು?!!!ಇಲ್ಲಿ ಹೀಗೆ ಜನ ಸೇರಿ ಗಂಭೀರವಾಗಿ ಚರ್ಚೆ ಮಾಡುತ್ತಾ ಅದ್ಯಾವುದೋ ಯೋಚನೆಯಲ್ಲಿ ಕುಳಿತಿರುವುದು ಸುಮ್ಮನಲ್ಲ.ತಮ್ಮ ಕುಟುಂಬದ ನಾಳೆಯ ದಿನದ ಬಗ್ಗೆ ಆತಂಕ ಈ ಜನರಿಗೆ.ಅದಕ್ಕೂ ಕಾರಣವಿದೆ.ಇವರ ಬಡಾವಣೆಯಲ್ಲಿ ಕಳೆದ 15 16 ತಿಂಗಳಲ್ಲಿ 25 ಕ್ಕೂ ಹೆಚ್ಚು ಮಂದಿ ಅಪಮೃತ್ಯುವಿನಿಂದ ತೀರಿಕೊಂಡಿದ್ದಾರೆ.ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಸಾಮೆತ್ತಡ್ಕದ ಬಡಾವಣೆಯ ಜನರ ಭಯದ ಪ್ಲಾಶ್ ಬ್ಯಾಕ್.ಸರಿಸುಮಾರು 15 ತಿಂಗಳ ಹಿಂದೆ ಒಬ್ಬ ಬಾಲಕ ಈ ಬಡಾವಣೆಯಲ್ಲಿ ನೀರಿನಹೊಂಡಕ್ಕೆ ಬಿದ್ದು ಸಾವನ್ನಪ್ಪುತ್ತಾನೆ.ಅಲ್ಲಿಂದ ಶುರುವಾಗುವ ಸಾವಿನ ಯಾತ್ರೆ ಪ್ರತೀ ತಿಂಗಳಿಗೆ ಕನಿಷ್ಠ ಒಂದರಂತೆ ಬಡಾವಣೆಯ ಬಹುತೇಕ ಮನೆಯಲ್ಲಿ ಒಂದಿಲ್ಲೋಂದು ಘಟನೆ ನ ಡೆಯುತ್ತಲೇ ಇತ್ತು.ಹೀಗಾಗಿ ಜನ ಮಾನಸಿಕ ನೆಮ್ಮದಿ ಕಳೆಕೊಂಡರು.ಅದಕ್ಕಾಗಿ ದೇವಸ್ಥಾನದಲ್ಲಿ ಬಡಾವಣೆಯ ಜನ ಕೇಳಿದಾಗ 108 ಕಾಯಿ ಗಣಪತಿ ಹೋಮ ಹಾಗೂ ಮಹಾಮೃತ್ಯುಂಜಯ ಹವನಕ್ಕೆ ಸೂಚನೆ ಮಾಡಲಾಗಿದೆ.ಅದಕ್ಕಾಗಿ ಊರ ಜನ ಸೇರಿಕೊಂಡು ಮುಂದಿನ ಹೆಜ್ಜೆಯ ಕುರಿತಾಗಿ ಚರ್ಚೆ ನಡೆಸಿದರು.

ಸಾಮೆತ್ತಡ್ಕದ ಈ ಪ್ರದೇಶದಲ್ಲಿ ಸಸುಮಾರು 100 ರಿಂದ 200 ಮನೆಗಳಿವೆ.ಈಗ ಇಲ್ಲಿ ಹೀಗೆ ಸಾವಿನ ಸರಣಿ ಮುಂದುವರಿಯುತ್ತಿದ್ದಂತೆಯೇ ಅನೇಕರು ಭಯಭೀತರಾಗಿ ಮನೆ ತೊರೆಯಲು ನಿರ್ಧರಿಸಿದ್ದೂ ಇದೆ.ಇನ್ನೂ ಕೆಲವರು ಮನೆಗೆ ಬೀಗಹಾಕಿ ಕೆಲದಿನಗಳ ಕಾಲ ಹೊರಗಡೆ ತೆರಳಿದ್ದಾರೆ.ಇನ್ನೂ ಕೆಲವರು ತಮ್ಮ ಮನೆಗೆ ಯಾವುದೇ ಕಾಟ ಇರದಿರಲಿ ಎಂದು ದೈವದ ಮುಖವನ್ನು ಮನೆಯ ಎದುರು ಇರಿಸಿದ್ದಾರೆ.ಪೂಜೆ ,ಹವನ, ಜ್ಯೋತಿಷ್ಯ ಹೀಗೆ ಪರಿಹಾರ ಅರಸಿಕೊಂಡು ಹೋಗಿದ್ದಾರೆ.ಆದರೆ ಪರಿಹಾರ ಎಲ್ಲೂ ಸಿಕ್ಕಿಲ್ಲ.ಈಗ ಜನರೆಲ್ಲಾ ಸೊಮದೆಡೆ ಸೇರಿ ಮುಂದಿನ ಹೆಜ್ಜೆ ಬಗ್ಗೆ ಚಿಂತಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದೊಂದು ಕಾಕತಾಳೀಯ ಘಟನೆಯೋ ಅಥವಾ ಕಾಣದ ಶಕ್ತಿಯೊಂದರಿಂದ ಮಾಡಲಾಗುತ್ತದೆಯೇ ಎಂಬುದು ಕುತೂಹವಾಗಿಯೇ ಉಳಿದುಕೊಂಡಿದೆ.ಒಂದೇ ಬಡಾವಣೆಯಲ್ಲಿ ಬೆನ್ನುಬೆನ್ನಿಗೇ ಅಪಮೃತ್ಯುಗಳಾಗುವುದಕ್ಕೆ ಏನು ಕಾರಣ ಎಂಬುದೇ ಪ್ರಶ್ನೆಯಾಗಿ ಉಳಿದುಕೊಂಡಿದೆ.

ವಿಶೇಷ ವರದಿ: ಮಹೇಶ್ ಪುಚ್ಚೆಪ್ಪಾಡಿ

0 comments:

Post a Comment