ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಸಕಲೇಶಪುರ : ಯಸಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ದ ಸೂಕ್ತ ಕ್ರಮ ಕೈ ಗೊಳ್ಳುವ ಬರವಸೆಯನ್ನು ಜಿ.ಪಂ.ಕಾರ್ಯನಿರ್ವಹಣಾದಿಕಾರಿ ನೀಡಿದ ಮೇರೆಗೆ ಗ್ರಾ.ಪಂ. ಎದುರು ಸೋಮವಾರದಿಂದ ಆರಂಬಿಸಿದ್ದ ಸಾಮ್ರಾಟ್ ಅಶೋಕ್ ಯುವಕ ಸಂಘದ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.ಬುಧವಾರ ಇಬ್ಬರು ಅಸ್ವಸ್ಥಗೊಂಡು ಪಟ್ಟಣದ ಕ್ರಾಫರ್ಡ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಘದ ಅಧ್ಯಕ್ಷ ದೇವೇಂದ್ರ ಹಾಗೂ ಶರೀಪ್ ಅಸ್ವಸ್ಥಗೊಂಡಿರುವ ಪ್ರತಿಭಟನಾಕಾರರಾಗಿದ್ದು, ಯಸಳೂರಿನಲ್ಲಿ ಕಾರ್ಯಕರ್ತರು ಉಪಾವಾಸ ಸತ್ಯಾಗ್ರಹ ಮುಂದುವರಿಸಿದ್ದರು. ಪ್ರತಿಭಟನಾಕಾರರ ಬೇಡಿಕೆಗಳನ್ನು ತಾಲ್ಲೂಕು ಆಡಳಿತ ಈಡೇರಿಸಲು ಮುಂದಾಗದಿರುವುದು ಚಳವಳಿ ತೀವ್ರವಾಗಲು ಕಾರಣವಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಪವನ್, ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಧರಣಿ ಪ್ರಾರಂಬಿಸಿದ್ದು, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿಲ್ಲ. ಪರೋಕ್ಷವಾಗಿ ತಾಲ್ಲೂಕು ಆಡಳಿತ ಭ್ರಷ್ಟರನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೇಸ್ ಖಂಡನೆ: ಸರಕಾರದ ವಿವಿಧ ಯೋಜನೆಗಳನ್ನು ಗ್ರಾ.ಪಂ.ನ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗ ದುರ್ಬಳಕೆ ಮಾಡಿಕೊಂಡಿದೆ ಎಂದು ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೇಸ್ ಮುಖಂಡರು ತಹಸೀಲ್ದಾರ್ ಚಂದ್ರಮ್ಮ ರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಜ್.ಬಿ. ಕಾಂತರಾಜ್,ಡಿ.ಸಿ.ಸಣ್ಣಸ್ವಾಮಿ,ಲೋಕೇಶ್,ಮ್ನಸೂರ್ ಮುಂತಾದವರು ಇದ್ದರು.

0 comments:

Post a Comment