ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರದ ಹಿತಕ್ಕೆ ಧಕ್ಕೆಯಾದಾಗ ಒಗ್ಗಟ್ಟು: ಒಡಿಯೂರು ಶ್ರೀ
ವಿಟ್ಲ : ಕರ್ಮ ಧರ್ಮಯುಕ್ತವಾಗಿದ್ದಾಗ ಸಮಾಜಕ್ಕೆ ಒಳಿತಾಗುತ್ತದೆ. ಸಮಗ್ರ ರಾಷ್ಟ್ರದ ಹಿತಕ್ಕೆ ಧಕ್ಕೆಯಾದಾಗ ಒಗ್ಗಟ್ಟಾಗಬೇಕು. ಪರರಿಗಾಗಿ ಸಹಕಾರದ ಬದುಕನ್ನು ಬಾಳಿದಾಗ ಸಮಾಜ ಸಂಘಟನೆ ಸಾಧ್ಯ. ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಕರೆ ನೀಡಿದರು.ಅವರು ದಕ್ಷಿಣದ ಗಾಣಗಾಪುರ, ತುಳುನಾಡಿನ ದತ್ತಪೀಠವೆಂದು ಕರೆಯಲ್ಪಡುತ್ತಿರುವ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಸೋಮವಾರ ಸಮಾಜ ಸಂಘಟನಾ ಸಮಾವೇಶ ಹಾಗೂ ಒಡಿಯೂರು ರಥೋತ್ಸವದ ಅಂಗವಾಗಿ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನಾ ಸಂದೇಶವನ್ನು ನೀಡಿದರು. ಭಾರತೀಯ ಸಂಸ್ಕೃತಿ ಎಲ್ಲಿಯೂ ಸಿಗದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಸುದ್ದಿ ಬಿಡುಗಡೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ, 10 ಮಂದಿಗೆ ಸಹಾಯಧನ ವಿತರಿಸಿದರು. ಸಾದ್ವೀ ಶ್ರೀ ಮಾತಾನಂದಮಯೀ ಅವರು ಭಾಗವಹಿಸಿದ್ದ ಸಂಘಟನಾ ಪ್ರಮುಖರಿಗೆ ಸಂಘಟನಾ ಸಂಕಲ್ಪವನ್ನು ಬೋಧಿಸಿದರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರಕಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಡೋಜ ಡಾ.ಎಸ್.ಆರ್.ನಾಯಕ್ ಅವರು `ಒಡಿಯೂರುದ ಸಿರಿ' ಸಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿ 84 ಜೀವರಾಶಿಗಳಲ್ಲಿ ಮಾನವನೇ ಅತೀ ಹೆಚ್ಚು ಕ್ರೂರಿ. ಇಂದು ಮನುಷ್ಯನಿಗೆ ಯಾವುದೇ ವಿಚಾರಗಳಲ್ಲಿ ತೃಪ್ತಿ ಎಂಬುವುದಿಲ್ಲ. ಇದೇ ಅಶಾಂತಿಗೆ ಕಾರಣವಾಗಿದೆ. ಒಡಿಯೂರು ಶ್ರೀಗಳು ಭ್ರಾತೃತ್ವದ ಮೂಲಕ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿರುವುದು ವಿಶ್ವಮಾನವ ಸಂದೇಶವನ್ನು ಸಾರಿದಂತಾಗುತ್ತಿದೆ ಎಂದರು.

ಬ್ರಹ್ಮಶ್ರೀ ವೇ.ಮೂ.ರವೀಶ್ ತಂತ್ರಿ ಕುಂಟಾರು ಅವರು ರ್ಶರೀ ಸಂಸ್ಥಾನದಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ಪಡೆದ 21 ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿದರು. ಕಾರ್ಕಳ ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಶ್ರೀರಾಮ ಭಟ್, ಮುಂಬೈ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ಪ್ರಕಾಶ್ ಎಲ್.ಶೆಟ್ಟಿ, ಮುಂಬೈ ಮಲಾಡ್ ಉದ್ಯಮಿ ಜಯಂತ ಶೆಟ್ಟಿ, ಅಹಮದ್ನಗರ ಉದ್ಯಮಿ ವಿಜಯ ಹೆಗ್ಡೆ ಭಾಗವಹಿಸಿದ್ದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಕೇಂದ್ರದ ಯೋಜನಾಧಿಕಾರಿ ಸತ್ಯಗಣಪತಿ ಪಂಬತ್ತಜೆ ಸ್ವಾಗತಿಸಿ, ನಿರೂಪಿಸಿದರು. ಕಾರ್ಯನಿರ್ವಾಹಕ ಜಗನ್ನಾಥ ರೈ ವಂದಿಸಿದರು. ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ವೈಭವೋಪೇತ ರಥಯಾತ್ರೆ ಜರುಗಿತು.
ಚಿತ್ರ-ವರದಿ: ಜ್ಯೋತಿಪ್ರಕಾಶ್ ಪುಣಚಾ

0 comments:

Post a Comment