ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಫೆ.22 ಸೋಮವಾರದಂದು ಸಂಜೆ 6.30ಕ್ಕೆ ಕಲ್ಕತ್ತಾದ ಸಂಗೀತ ಮಾಂತ್ರಿಕ ಸಂದೀಪ್ ಚಟರ್ಜಿ ಅವರ ಸಂತೂರ್ ವಾದನ ಮತ್ತು ಮಣಿಪಾಲದ ರವಿಕಿರಣ್ ಅವರ ಹಿಂದುಸ್ಥಾನಿ ಗಾಯನ ಜುಗಲ್ ಬಂದಿ ಕಾರ್ಯಕ್ರಮ ವಿದ್ಯಾಗಿರಿಯ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಈ ವಿಶೇಷ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಶಶಿಕಾಂತ ಕುಲಕರ್ಣಿ, ಭಾರವೀ ದೇರಾಜೆ, ಶಶಿಕಿರಣ್ ಇವರು ತಬ್ಲಾ ವಾದಕರಾಗಿ ಭಾಗವಹಿಸಲಿದ್ದಾರೆ. ಆಸಕ್ತ ಸಂಗೀತ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.ಆಳ್ವಾಸ್ ನಲ್ಲಿ ನೀನಾಸಂ ನಾಟಕಗಳು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಫೆ. 23 ಮತ್ತು 24ರಂದು ಸಂಜೆ 7.15ಕ್ಕೆ ವಿದ್ಯಾಗಿರಿಯ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ನೀನಾಸಂ ತಿರುಗಾಟ ನಾಟಕಗಳು ನಡೆಯಲಿವೆ. ಫೆ. 23 ರಂದು ಸಂಜೆ 7.15ಕ್ಕೆ ಕೆ.ವಿ. ಅಕ್ಷರ ನಿರ್ದೇಶನದ ವೆನಿಸ್ಸಿನ ವ್ಯಾಪಾರ ಎಂಬ ನಾಟಕ ನಡೆಯಲಿದೆ.ಫೆ. 24 ರಂದು ಸಂಜೆ 7.15ಕ್ಕೆ ಪೀಯೂಷ್ ಮಿಶ್ರ ಅವರ ಹಿಂದಿ ನಾಟಕ ಗಗನ್ ದಮಾಮಾ ಬಾಜೌ ನ ಕನ್ನಡ ರೂಪ ಆಕಾಶ ಭೇರಿ ಎಂಬ ನಾಟಕ ನಡೆಯಲಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅನುವಾದದ ಈ ನಾಟಕದ ನಿರ್ದೇಶನ ಸಂಜಯ ಉಪಾಧ್ಯಾಯ ಇವರದ್ದು.ಈ ಎರಡು ನಾಟಕಗಳಿಗೆ ಉಚಿತ ಪ್ರವೇಶಾವಕಾಶವಿದ್ದು ಸರಿಯಾದ ಸಮಯಕ್ಕೆ ಆರಂಭಗೊಳ್ಳುವುದು. ಆಸಕ್ತರು ಇದರ ಸದುಪಯೋಗವನ್ನು ಪಡೆಯಬೇಕೆಂದು ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ವರದಿ: ಧನಂಜಯ ಕುಂಬ್ಳೆ

0 comments:

Post a Comment