ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:42 PM

ನೆನಪಿನಂಗಳದಿಂದ...

Posted by ekanasu

ಭಾವನಾ
ಗೊತ್ತಾಗ್ತಾ ಇಲ್ಲ ಈಗೇಕೆ ಆ ನೆನಪುಗಳು ನನ್ನ ಬಂದು ಹೀಗೆ ಕಾಡುತ್ತಿವೆ ಎಂದು. ಮನಸ್ಸು ಯಾಕೋ ನಿನ್ನನ್ನ ತುಂಬಾ ನೆನಪು ಮಾಡಿಕೊಳ್ಳುತ್ತಾ ಇದೆ. ನೀನು ಹೇಗೋ ನನ್ನೊಳಗೆ ಇಳಿದೆ ನನಗೆ ಗೊತ್ತಿಲ್ಲದೇ ಎಲ್ಲಾ ಹೇಳೋರು ತುಂಬಾ ಟಫ್ ಗರ್ಲ್ ಅಂತ. ಆದ್ರೂ ಅದು ಹೇಗೋ ನನ್ನೊಳಗೆ ನಿನಗೊಂದು ಪುಟ್ಟ ಮನೆಯನ್ನ ನೀನೇ ಕಟ್ಟಿಕೊಂಡಿದ್ದಾದರೂ ಹೇಗೆ...
ಮಳೇಯೇ ಮಧ್ಯಾನವಾಗಿದ್ದ ದಿನ ಅದು. ನಿದ್ರೆಯ ಸುಂದರ ಲೋಕದಲ್ಲಿದ್ದ ನನ್ನನ್ನು ಎಬ್ಬಿಸಿದ್ದು ಆ ನಿನ್ನ ಫೊನ್ ಕರೆ. ಏ ಇಲ್ಲಿ ಜೋರು ಮಳೆ ಬರ್ತಿದೆ ಕಣೋ ಹೋಗಿ ನೆನೀಬೇಕು ಅನ್ನಿಸ್ತಾ ಇದೆ, ಆದ್ರೆ ಆ ಮ್ಯಾನೇಜರ್ ಇಲ್ಲೇ ಕೂತ್ಕೊಂಡಿದ್ದಾನೆ ಅಂತ ಗೊಣಗಿದ್ದವನು ನೀನೇ ಅಲ್ವಾ?ಏ ಹುಡ್ಗಾ ಬಯಕೆಗಳಿಗೂ ಒಂದು ಮಿತಿ ಬೇಕು. ಆದ್ರೆ ನಿನ್ನ ಬಯಕೆಗಳಿಗೆ ಒಂದು ಮಿತಿಯೇ ಇರ್ಲಿಲ್ಲ ಅನ್ನಿಸಿದ್ದು ಯಾವಾಗ ಗೊತ್ತಾ? ಅವತ್ತು ಊರಿಗೆ ಬಂದಾಗ ಮಳೆಯಂತೆ ಬೀಳುತ್ತಿದ್ದ ಆ ಮಂಜಿನ ಮುಂಜಾನೆಯಲ್ಲಿ ತೋಟಕ್ಕೆ ಬಂದ ನನ್ನನ್ನ ನಿಬ್ಬೆರಗಾಗಿಸಿದ್ದು ನಿನ್ನ ಮತ್ತು ಇಬ್ಬನಿಯ ಸರಸ. ನಿನಗೆ ಗೊತ್ತಾ? ಅವತ್ತು ನೀನು ತೆಂಗಿನ ಗರಿಯ ತುದಿಯಲ್ಲಿ ಮುತ್ತಿನಂತೆ ಹೊಳೆಯುತ್ತಿದ್ದ ಆ ಇಬ್ಬನಿ ಹನಿಗೆ ಮುಖವಿಟ್ಟು ಆನಮ್ದಿಸುತ್ತಿದ್ದೆ. ಎಂಥಾ ಬಯಕೇನೋ ನಿನ್ನದು, ಹೌದು ಗೆಳೆಯಾ ಹೀಗೆ ನನ್ನೊಳಗೆ ಮೆಲ್ಲಗೆ ಸದ್ದಿಲ್ಲದೆ ಇಳಿಯುತ್ತಾ ಹೋದೆ. . . .

ನಿನಗೆ ನೆನಪಿದೆಯೇ ಆಫೀಸಿಂದ ಬಂದ ನೀನು ಮರಿ ಹಾಕಿರೋ ಬೀದೀ ನಾಯಿ ಮರಿಗಳನ್ನ ನೋಡುತ್ತಾ ಎಷ್ಟೋ ಹೊತ್ತನ್ನ ಕಳೆಯುತ್ತಿದ್ದೆ ಅಂತ. ಹಾ ನನಗೆ ಗೊತ್ತು. ಆ ಸಂಜೆ ತಣ್ಣಗೆ ಬೀಸುತ್ತಿದ್ದ ತಂಗಾಳಿಯಲ್ಲಿ ನಾನು ನೀನು ಇಬ್ರೆ ಆಗುಂಬೆ ಘಾಟಿಯಲ್ಲಿ ಮಾತನಾಡದೆ ನೆಡೆದು ಹೋದ ದಿನ. ಮೌನವೇ ರಾಗವಾಗಿತ್ತು. ನಮ್ಮುಸಿರೇ ಭಾವನೆಗಳನ್ನ ನಮ್ಮ ಸುತ್ತ ಹರಡುತ್ತಿತ್ತು. ಬೀಸುತ್ತಿದ್ದ ಆ ತಂಗಾಳಿಗೆ ಹಾರುತ್ತಿದ್ದ ಆ ಮುಂದಲೆಯ ಗುಂಗುರು ಆಗುಂಬೆಯ ಘಾಟಿಯ ತಿರುವುಗಳಷ್ಟೇ ಮೈ ಜುಮ್ಎನಿಸುವಂತಿತ್ತು. ಅಬ್ಭಾ ಅದೆಂತಾ ಸಂಜೆ, ಆ ಸಂಜೆಯನ್ನ ನೀನು ಮರೆತಿರೋಕ್ಕೆ ಸಾಧ್ಯಾನೆ ಇಲ್ಲ ಅಲ್ವ?

ಇವತ್ತು ನನ್ನ ಜೊತೆಗಿದೆ ಗೆಳೆಯ ನಿ ಬರೆದ ಆ ಪತ್ರ. ಜಡಿ ಮಳೆಯಲ್ಲಿ ನೆನೆದು ಅಜ್ಜಿ ಮನೆ ಮಡಕೆಯ ಬಿಸಿ ನೀರಲ್ಲಿ ಸ್ನಾನ ಮಾಡಿ ದೊಡ್ಡ ಲೋಟದಲ್ಲಿ ಬಿಸಿ ಕಾಫಿ ಹೀರುತ್ತಾ ಅಜ್ಜಿ ಮನೆ ಉಪ್ಪರಿಗೆ ಕುಳಿತು ಮುಂದೆ ಗದ್ದೆ ಮೇಲೆ ಬೀಳುತ್ತಿದ್ದ ಆ ಮಳೆಯನ್ನ ಮನಸ್ಸು ಪೂರ್ತಿ ಆನಂದಿಸುತ್ತಾ ನೀ ಬರೆದ ಆ ಪತ್ರ ಈಗಲೂ ನನ್ನ ಕಪಾಟಿನಲ್ಲಿ ಬೆಚ್ಚಗೆ ಇದೆ.

ಆ ಎಲ್ಲ ದಿನಗಳು ನಿನ್ನೆಲ್ಲ ಬಯಕೆಗಳು ಇನ್ನು ನನ್ನೊಳಗೆ ತಣ್ಣಗೆ ಮಲಗಿ ನಿದ್ರಿಸುತ್ತಿವೆ. ಇವುಗಳಿಂದ ಅಲ್ಲವೆ ನೀನು ನನ್ನೊಳಗೆ ಒಂದು ಪ್ರೀತಿಯ ಅರಮನೆಯನ್ನ ಕಟ್ಟಿದ್ದು. ಅದೊರೊಳಗೆ ನಾನು ನೀನು ಬೆಚ್ಚಗೆ ನಿದ್ರಿಸಿದ್ದು. ಇನ್ನು ಎಷ್ಟು ದಿನ ಈ


ರಶ್ಮೀ ಗೌಡ

2 comments:

Anonymous said...

very emotional...But far from reality.

Sushma said...

rashmi, navirada bhavagalu chennagi moodi bandide....abhinandanegalu...

Post a Comment