ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಖಿಲ ಭಾರತ ವಿ.ವಿ.ಬಾಲ್ ಬ್ಯಾಡ್ ಮಿಂಟನ್
ವಿ.ಟಿ.ಯುಗೆ ರೋಚಕ ಸೋಲು; ಪಂದ್ಯದಿಂದ ಹೊರಕ್ಕೆ

ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಾಲ್ ಬ್ಯಾಟ್ ಮಿಂಟನ್ ಪಂದ್ಯಾಟದ ದ್ವಿತೀಯ ದಿನ ಬೆಳಗಾಂ ನ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಎರಡನೇ ಸುತ್ತಿನ ಪಂದ್ಯಾಟದಲ್ಲಿ ತಮಿಳ್ನಾಡು ಬಿ.ಎಸ್.ಎ.ಆರ್ ವಿ.ವಿ. ಎದುರು 29-10, 27-29,29-24 ಅಂತರದಲ್ಲಿ ಸೋಲನ್ನನುಭವಿಸಿ ಪಂದ್ಯದಿಂದ ಹೊರನಡೆಯಿತು.
ಇಂದಿನ ಪಂದ್ಯ: ಶುಕ್ರವಾರ ಬೆಳಗ್ಗೆ 7ಗಂಟೆಗೆ ಪಂದ್ಯಾಟ ಪ್ರಾರಂಭಗೊಳ್ಳಲಿದೆ. ಕಕಾತೀಯ ವಿ.ವಿ.ಹಾಗೂ ಎಮ್.ಎಸ್. ವಿ.ವಿ. ತಿರುನೇಲ್ವೆಲ್ ನಡುವೆ, ತಿರುವಳ್ಳೂರು ವಿ.ವಿ. ಹಾಗೂ ಬಿ.ಎಸ್.ಎ.ಆರ್ ವಿ.ವಿ ನಡುವೆ, ಜೆ.ಎನ್.ಟಿ.ಯು ಹೈದರಾಬಾದ್ ಮತ್ತು ಅಣ್ಣಾಮಲೈ ವಿ.ವಿ. ನಡುವೆ ಹಾಗೂ ಎಸ್.ಕೆ.ಅನಂತಪುರ ಮತ್ತು ಕ್ಯಾಲಿಕಟ್ ವಿ.ವಿ ನಡುವೆ ಪಂದ್ಯಾಟ ನಡೆಯಲಿದೆ.
ಪೆರಿಯಾರ್ ವಿ.ವಿ. ಸೇಲಂ ಮತ್ತು ಮೈಸೂರು ವಿ.ವಿ ನಡುವೆ ,. ಒಸ್ಮಾನಿಯಾ ವಿ.ವಿ. ಮತ್ತು ಕೇರಳ ವಿ.ವಿ ನಡುವೆ, ಭಾರತೀದಾಸನ್ ವಿ.ವಿ. ಮತ್ತು ಎಸ್.ಆರ್.ಟಿ.ಎಂ. ನಾಂದೇಡ್, ಎಸ್.ವಿ. ವಿ.ವಿ. ತಿರುಪತಿ ಮತ್ತು ಚೆನ್ನೈ ಎಸ್.ಆರ್.ಎಮ್ ವಿವಿ. ನಡುವೆ ಪಂದ್ಯಾಟಗಳು ನಡೆಯಲಿವೆ.ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಅತ್ಯಂತ ರೋಚಕ ಪಂದ್ಯಾಟಗಳು ನಡೆಯುತ್ತಿದ್ದು, ಕ್ರೀಡಾಸಕ್ತರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಫೆ.7ರ ತನಕ ಪಂದ್ಯಾಟ ನಡೆಯಲಿದೆ.

0 comments:

Post a Comment