ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು.


ಜಿದ್ದಾ (ಸೌದಿ ಅರೇಬಿಯಾ): ಟ್ರಾವೆಲ್ ಏಜೆನ್ಸಿಯ ಮೂಲಕ ವಿಸಾ ಪಡೆದು ಸೌದಿ ಅರೇಬಿಯಾದ ಜೆದ್ದಾ ಸಮೀಪದ ಕಂಪೆನಿಯೊಂದಕ್ಕೆ ಕೆಲಸಕ್ಕೆ ಬಂದ ಭಾರತೀಯ ಮೂಲದ ೨೦ ಕಾರ್ಮಿಕರು ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಇತ್ತ ಕೆಲಸವೂ ಇಲ್ಲದೆ ಜೊತೆಗೆ ವಾಸಿಸಲು ಸ್ಥಳವೂ ಇಲ್ಲದೆ ಬೀದಿ ಪಾಲಾಗಿರುವ ಘಟನೆ ಜೆದ್ದಾದಲ್ಲಿ ಸಂಭವಿಸಿದೆ.ಭಾರತದಲ್ಲಿರುವ ಟ್ರಾವೆಲ್ ಏಜೆನ್ಸಿಗಳಿಗೆ ಸುಮಾರು ೮೦೦೦೦ ದಿಂದ ೧೦೦೦೦೦ ರೂಪಾಯಿಗಳ ವರೆಗೆ ಹಣ ಕೊಟ್ಟು ಪೆಪ್ಸಿ ಕಂಪೆನಿಯಲ್ಲಿ ಕೆಲಸಕ್ಕೆಂದು ಬಂದಿದ್ದ ೩೫ ಕಾರ್ಮಿಕರು ಇತ್ತ ಕೆಲಸವಿಲ್ಲದೇ ವಂಚಿತರಾಗಿದ್ದರು. ಇವರಲ್ಲಿ ೧೫ ಮಂದಿಯನ್ನು ಭಾರತಕ್ಕೆ ವಾಪಾಸ್ಸು ಕಳುಹಿಸಲಾಗಿದ್ದು ಇನ್ನೂ ಇಪ್ಪತ್ತು ಮಂದಿ ಕೆಲಸವಿಲ್ಲದೇ ಅಸಹಾಯಕರಾಗಿದ್ದಾರೆ. ಭಾರತೀಯ ಮೂಲದ ಸಂಘ ಸಂಸ್ಥೆಗಳು ಇವರಿಗೆ ಈಗ ಇಲ್ಲಿ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದು ಇವರನ್ನು ಸುರಕ್ಷಿತವಾಗಿ ವಾಪಾಸ್ಸು ಕಳುಹಿಸಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿವೆ.

ವರದಿ : ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ.

0 comments:

Post a Comment