ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:37 AM

ವಿಪರ್ಯಾಸ ...

Posted by ekanasu

ಆ ದಿನ ಬೆಳಿಗ್ಗೆ ಎಂದಿನ ರೂಢಿಯಂತೆ ಪೇಪರ್ ಓದಲು ಕುಳಿತೆ.ಆಗ ನನ್ನೆದುರು ಇದ್ದದ್ದು ಜನಪ್ರಿಯ ಕನ್ನಡ ದಿನಪತ್ರಿಕೆ , ಮೊದಲನೇ ಪುಟದಲ್ಲಿ ಅರ್ಧಕ್ಕಿಂತ ಜಾಸ್ತಿ ಪುಟ ಜಾಹೀರಾತು ಇತ್ತು.ಇನ್ನು ಉಳಿದ ಅರ್ಧಕ್ಕಿಂತ ಕಡಿಮೆಯಿದ್ದ ಪುಟದಲ್ಲಿಟಿ.ಎಸ್.ಸತ್ಯನ್ ತೀರಿಕೊಂಡ ಸುದ್ದಿ ,ತುಳು ಸಮ್ಮೇಳನದ ಸಮಾರೋಪ ಸಮಾರಂಭದ ವರದಿ,ಹವಾಮಾನ ವರದಿ ಹಾಗು ಒಂದಿಷ್ಟು ರಾಜಕೀಯ ಇತ್ತು.ಇದೆಲ್ಲದರ ಜೊತೆಗೆಪೇಪರ್ ಬಲ ಮೂಲೆಯಲ್ಲಿ ಒಂದಿಷ್ಟು ಪುಟ್ಟ ಪುಟ್ಟ ಬರಹದ ತುಣುಕುಗಳು ಇದ್ದುವು .ಮತ್ತೆ ಇವತ್ತಿನ ಈ ಬರಹಕ್ಕೆ 'ಸ್ಫೂರ್ತಿಸೆಲೆ'ಯಾದ ಆ ಒಂದು ಬರಹವೂ ಇತ್ತು ಅದೇಬಲ ಮೂಲೆಯಲ್ಲಿ. ಮೊದಲು ಆ ಬರಹವನ್ನ ಓದಿಕೊಳ್ಳಿ .ಆಮೇಲೆ ಉಳಿದ ಕಥೆ .ಅದು ಹೀಗಿದೆ ನೋಡಿ..''ಭವಿಷ್ಯದ ಬಗ್ಗೆ ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.ಆದರೆ ಭವಿಷ್ಯವನ್ನು ಸೃಷ್ಟಿಸಲು ಸಾಧ್ಯವಿದೆ.ಅದರಲ್ಲೂ ನಮ್ಮ ಭವಿಷ್ಯ ರೂಪಿಸಬೇಕಾದವರು ನಾವೇ"

ಆಹಾ ಎಷ್ಟು ಒಳ್ಳೆಯ ಮಾತು!ಓದಿ ನನ್ನ ಆ ದಿನದ ಬೆಳಗು ಧನ್ಯವಾಯ್ತು ಎಂದುಕೊಂಡೆ.ಹಾಗೆ ಧನ್ಯತೆಯನ್ನ ಅನುಭವಿಸುತ್ತ ಅನುಭವಿಸುತ್ತಾ ಎರಡನೇ ಪುಟಕ್ಕೆ ಬಂದೆ.ಹಾಗೇ ಮುಂದೆ ಮೂರಕ್ಕೆ ತಲುಪಿಕೊಂಡೆ.ಅಲ್ಲಿ 'ದಿನ ಭವಿಷ್ಯ 'ಇತ್ತು .ಹಿರಿಯ ಪುಣ್ಯಾತ್ಮರೊಬ್ಬರು ಅಲ್ಲಿ ಜಗದ ಜನರೆಲ್ಲರ ಹೆಣೆಬರಹವನ್ನ ದಿನದ ಲೆಕ್ಕದಲ್ಲಿ ಲೆಕ್ಕಹಾಕಿ'ರಾಶಿ'ಮಾಡಿ ನಮ್ಮ ನಮ್ಮ ಹಣೆಬರಹ ನೋಡಿಕೊಳ್ಳುವ ಕರ್ಮವನ್ನ ನಮ್ಮ ಪಾಲಿಗೆ ಹಗುರಾಗಿಸಿ ಇಟ್ಟಿದ್ದರು.ನನ್ನ ಹೆಣೆಬರಹ ಆ ದಿನ ಹೀಗಿತ್ತು ನೋಡಿ...

"ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.ಸಗಟು ವ್ಯಾಪಾರಿಗಳಿಗೆ ಒಳ್ಳೆಯ ವ್ಯಾಪಾರದಿಂದ ಹೆಚ್ಚಿನ ಲಾಭ ದೊರೆಯುತ್ತದೆ"

ಅವರು ಹೇಳಿದ ಭವಿಷ್ಯಕ್ಕೂ ನಾನಿದ್ದ ವಾಸ್ತವಕ್ಕೂ ತಾಳಮೇಳ ಸಿಕ್ಕಲಿಲ್ಲ.ವಿಷಯ ಅದಲ್ಲ ಬಿಡಿ..ಮೊದಲ ಪುಟದಲ್ಲಿ ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು ಎಂಬರ್ಥದಲ್ಲಿಬರೆದು ಮೂರನೇ ಪುಟದಲ್ಲಿ ನಮ್ಮ ಭವಿಷ್ಯವನ್ನ ತುಂಬಾ ನೀಟಾಗಿ ಇನ್ಯಾರೋ ಮಹಾನುಭಾವರ ಕೈಯಲ್ಲಿ ಬರೆಸಿ ಹಣೆಬರಹವನ್ನ ಪ್ರಿಂಟ್ ಮಾಡಿ ಬಿಟ್ಟಿದ್ದರಲ್ಲ! ನನಗೆ ತಲೆಹನ್ನೆರಡಾಣೆ ಆಗಿದ್ದು ಆವಾಗಲೇ.ಮೊದಲ ಪುಟದ ಧನ್ಯತೆ ಮಣ್ಣು ಮಸಿ ಎಲ್ಲ ಕರಗಿ ಅಳಬೇಕೋ ನಗಬೇಕೋ ಗೊತ್ತಾಗದೆ ಕೊನೆಗೆ ಮನಸಾರೆ ನಕ್ಕಿದ್ದೆ.

ಪಾಪ ಪೇಪರ್ ಮಂದಿ.ತಮ್ಮೆಲ್ಲ ನಿಲುವು,ಅಭಿಪ್ರಾಯ, ತತ್ವ ಸಿದ್ಧಾಂತಗಳ ಜೊತೆ ಎಲ್ಲ ವರ್ಗದ ಜನರನ್ನೂ ಗಮನದಲ್ಲಿಟ್ಟುಕೊಂಡು ಹೆಣಗಬೇಕು.ಮಾರ್ಕೆಟಿಂಗ್ ಮೈಂಡ್ ಇಲ್ಲಿಜಾಸ್ತಿಯಾಗಿ ಮುಖ್ಯವಾಗಿ ಬಿಡುತ್ತೆ. ಪತ್ರಿಕೆಯ ಉಳಿವಿಗೆ ಅದು ಅಗತ್ಯ ಕೂಡ.ಅದು ಸರಿ ಎಂದು ಹೇಳಲಾಗದು.ಅದು ಅಗತ್ಯ ಅಷ್ಟೇ.ತಮ್ಮೆಲ್ಲ ವಿಚಾರಗಳ ಜೊತೆ ಓದುಗರನ್ನೂಸಂಭಾಳಿಸಿಕೊಂಡು ಹೋಗುವ ಅನಿವಾರ್ಯತೆಯಲ್ಲಿ ಕೆಲವೊಮ್ಮೆ ಈ ಥರದ ವಿಪರ್ಯಾಸಗಳು ಹುಟ್ಟಿ ಬಿಡುತ್ತವೆ.ಇಲ್ಲಿ ಯಾರನ್ನೂ ದೂರುವಂತಿಲ್ಲ.ನಮಗೆ ಎಷ್ಟು ಬೇಕೋಅಷ್ಟನ್ನು ಪಡೆದುಕೊಂಡು ತಣ್ಣಗೆ ಇದ್ದುಬಿಡಬೇಕು.ನಾವು ಜಾಣರಾಗಬೇಕು.ಈ ಪೇಪರ್ ನ ವಿಷಯದಲ್ಲಿ ಮಾತ್ರವಲ್ಲ.ನಿತ್ಯ ಬದುಕಿನಲ್ಲೂ ಕೂಡ.

- ಗೌತಮ್ ಹೆಗಡೆ


0 comments:

Post a Comment