ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ-ಅವಲೋಕನ
ಅಖಿಲ ಭಾರತ ಅಂತರ್ ವಿ.ವಿ.ಪುರುಷರ ಬಾಲ್ ಬ್ಯಾಡ್ ಮಿಂಟನ್
ಮೂಡಬಿದಿರೆ:ಮಂಗಳೂರು ವಿ.ವಿ ಮತ್ತು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮೂಡಬಿದಿರೆ ಇದರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆದ ಅಖಿಲ ಭಾರತ ಅಂತರ್ ವಿ.ವಿ. ಬಾಲ್ ಬ್ಯಾಡ್ ಮಿಂಟನ್ ಪಂದ್ಯಾಟದಲ್ಲಿ ಆತಿಥೇಯ ಮಂಗಳೂರು ವಿ.ವಿ ಚಾಂಪಿಯನ್ ಆಗಿದೆ.


ಆಂದ್ರ ಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ. ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ. ತಮಿಳ್ನಾಡಿನ ಎಸ್.ಆರ್.ಎಂ. ವಿ.ವಿ ಮತ್ತು ಆಂದ್ರದ ಒಸ್ಮಾನಿಯ ವಿ.ವಿ. ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನಕ್ಕೆ ತೃಪ್ತಿಪಟ್ಟವು.
ಭಾನುವಾರ ಅಪರಾಹ್ನ ನಡೆದ ರೋಚಕ ಫೈನಲ್ ಪಂದ್ಯಾಟದಲ್ಲಿ ತಮಿಳ್ನಾಡಿನ ಎಸ್.ಆರ್.ಎಂ. ವಿ.ವಿ.ತಂಡವನ್ನು 29-15,29-25 ಅಂಕಗಳ ನೇರ ಸೆಟ್ ಗಳೊಂದಿಗೆ ಮಣಿಸಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತಂಡ ಗೆಲುವು ಸಾಧಿಸಿ ರಾಷ್ಟ್ರಮಟ್ಟದ ಕೀರ್ತಿಗೆ ಪಾತ್ರವಾಯಿತು.ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಹೈದರಾಬಾದ್ ನ ಒಸ್ಮಾನಿಯಾ ವಿ.ವಿಯನ್ನು 29-27,29-15ರಿಂದ ಮಣಿಸಿ ಚೆನ್ನೈನ ಎಸ್.ಆರ್.ಎಂ ವಿ.ವಿ. ಗೆಲುವು ಸಾಧಿಸಿತು.
ಚಾಂಪಿಯನ್ ತಂಡದಲ್ಲಿ ಸುಜಿತ್ ಕುಮಾರ್, ನಟರಾಜ್ ಎಂ, ಪವನ್ ಪಿ, ಗಿರೀಶ್ ಎಲ್, ಕಿರಣ್ ಕುಮಾರ್ ಬಿ.ಎನ್, ರವಿರಾಜ್, ಶಂಕರ್ ಜಿ, ಕಾತರ್ಿಕ್ ಪಿ.ಎಲ್, ನಾಗೇಂದ್ರ ಬಾಬು, ತೇಜೇಶ್ ಕ್ರೀಡಾಳುಗಳಿದ್ದು ಎಲ್ಲರೂ ಆಳ್ವಾಸ್ ಸಂಸ್ಥೆಗಳ ವಿದ್ಯಾಥರ್ಿಗಳೆಂಬುದು ಗಮನಾರ್ಹ.
ಮಂಗಳೂರು ವಿ.ವಿ.ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ನ ಕಿರಣ್ ಕುಮಾರ್ ಉತ್ತಮ ಕ್ರೀಡಾಳು ಪ್ರಶಸ್ತಿಯನ್ನು ಪಡೆದರು.
ಪ್ರಶಸ್ತಿ ಪ್ರದಾನ ಸಮಾರಂಭ:
ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮೊದಲ ಅರ್ಜುನ ಪ್ರಶಸ್ತಿ ವಿಜೇತ ಆಂದ್ರದ ಎ.ಪಿಚ್ಚಯ್ಯ ವಿಜೇತರಿಗೆ ಬಹುಮಾನ ವಿತರಿಸಿದರು.


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಡಾ.ಚಿನ್ನಪ್ಪ ಗೌಡ , ಮಾಜಿ ಸಚಿವ ಅಮರನಾಥ ಶೆಟ್ಟಿ,ಮಂಗಳೂರು ವಿ.ವಿ ಸಿಂಡಿಕೇಟ್ ಮೆಂಬರ್ ತೇಜೋಮಯ , ಎಸ್.ಡಿ.ಎಂ ಉಜಿರೆ ಪ್ರಾಂಶುಪಾಲ ಪ್ರೊ.ಯಶೋವರ್ಮ, ಉದ್ಯಮಿ ಶ್ರೀನಿವಾಸ್ ಬಾಳಿಗ ಉಪಸ್ಥಿತರಿದ್ದರು. ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ:
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮೊದಲ ಅಜರ್ುನ ಪ್ರಶಸ್ತಿ ವಿಜೇತ ಆಂದ್ರದ ಎ.ಪಿಚ್ಚಯ್ಯ ಅವರನ್ನು ಆಳ್ವಾಸ್ ಎಜುಕೇಷನ್ ಫೌಂಡೇಶನ್ ವತಿಯಿಂದ ಗೌರವಾರ್ಪಣೆ ಸಹಿತ ಹತ್ತು ಸಾವಿರ ನಗದು ನೀಡಿ ಗೌರವಿಸಲಾಯಿತು.
ಮಂಗಳೂರು ವಿ.ವಿ.ಯ ದೈಹಿಕ ಶಿ.ನಿರ್ದೇಶಕ ಡಾ. ಎಚ್.ನಾಗಲಿಂಗಪ್ಪ ವರದಿವಾಚಿಸಿದರು. ಪ್ರೊ.ಕುರಿಯನ್ ಸ್ವಾಗತಿಸಿದರು. ವೆಂಕಟಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.ಮಂಗಳೂರು ವಿ.ವಿ.ದೈ.ಶಿ.ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ ವಂದಿಸಿದರು.
ವಿಶೇಷ ಪ್ರಶಸ್ತಿ:
ವಿಜೇತ ತಂಡಕ್ಕೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮತ್ತು ಮಂಗಳೂರು ವಿ.ವಿ. ತಲಾ 25 ಸಾವಿರ ಬಹುಮಾನ ಘೋಷಿಸಿದರು. ಎಂ.ಕೆ.ಅನಂತ್ರಾಜ್ ಟ್ರೋಫಿಯನ್ನು ವಿಜೇತ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಶೇಷ ವಾಗಿ ನೀಡಲಾಯಿತು.


ಚಿತ್ರ: ಹರೀಶ್ ಕೆ.ಆದೂರು

0 comments:

Post a Comment