ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:50 PM

ಕಿವಿಮಾತು

Posted by ekanasu

ಸಾಹಿತ್ಯ

ಹೋಮ ಹವನ, ಪೂಜೆ ಪುನಸ್ಕಾರ,
ಜಪತಪ, ಮಂತ್ರತಂತ್ರ
ನೂರಿವೆ ಜಗದಿ
ಒಳಹುಳುಕ ಮುಚ್ಚಿ ಮುಕ್ತಿಗೇರಲು

ಇಲ್ಲಿ ಚೆಂದಾಗಿ ಬಾಳದೆ
ಮತ್ತೆಲ್ಲೋ ಮೇಲೆ
ಸೊಗದ ಬಾಳರಸೋ
ಯಾಕಿಂತ ಕಸರತ್ತು?ಚೆಂದನೆ ಮನ ಹರವಿಕೊಂಡು
ಅಲ್ಲಿ ಸುತ್ತಲ ಜಗವ
ಬರಮಾಡಿಕೊಂಡು
ಎಲ್ಲರಲ್ಲೂ ನಮ್ಮ ಕಂಡು
ನಾವು ನಾವಾಗಿ ಸಾಗೋಣ ನಿರ್ಲಿಪ್ತರಾಗಿ
ಕಾಲದೊಡನೆ

ಇಲ್ಲೇ ಎಲ್ಲವಿದೆ
ನಾಕ, ಮುಕ್ತಿ,
ಮತ್ತೆ
ಅವನೆಲ್ಲ ಮೀರಿದ್ದು.

- ಗೌತಮ್ ಹೆಗಡೆ

0 comments:

Post a Comment