ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಪೆರಿಂಜೆ ಇಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆತಿದೆ.

ಸ್ವಸ್ತಿ ಶ್ರೀ ಶಕ 1931ನೇ ವಿರೋಧೀ ನಾಮ ಸಂವತ್ಸರದ ಮಕರ ಮಾಸ 29 ಸಲುವ ಮಾಘ ಬಹುಳ ಶುಕ್ರವಾರ (12-2-2010)ರಿಂದ ಮೊದಲ್ಗೊಂಡು ಶುದ್ಧ ಪ್ರತಿಪತ್ ಸೋಮವಾರ 15-2-2010ರ ಪ್ರಾತಃ ಕಾಲ 8.5ಕ್ಕೆ ಒದಗುವ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಮೂಲಸ್ಥಾನವಾದ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಗಳು ಬ್ರಹ್ಮಶ್ರೀ ದೇರೇಬೈಲು ಹರಿಕೃಷ್ಣ ತಂತ್ರಿ ಇವರ ನೇತೃತ್ವದಲ್ಲಿ ಮಾರೂರು ಖಂಡಿಗ ಶ್ರೀ ವೇದಮೂರ್ತಿ ರಾಮದಾಸ ಆಸ್ರಣ್ಣರ ಅಮೃತ ಹಸ್ತದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಸಂಜೆ 6ಗಂಟೆಗೆ ಪಡ್ಯೋಡಿ ಗುತ್ತಿನಿಂದ ಶ್ರೀ ದೈವದ ಭಂಡಾರ ಆಗಮಿಸಿತು. ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಹೋಮ ಕಾರ್ಯಕ್ರಮಗಳು ಜರಗಿದವು.ಫೆ.13ರಂದು ಬೆಳಗ್ಗೆ 9ರಿಂದ ಶ್ರೀ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪುಣ್ಯಾಹ , ಪಂಚಗವ್ಯ, ಆದ್ಯ ಗಣಯೋಗ, ಸಪ್ತಶುದ್ಧಿ, ಭೂಶುದ್ಧಿ ಹೋಮ, ನವಗ್ರಹ ಹೋಮಾದಿಗಳು ನಡೆಯಲಿವೆ.

0 comments:

Post a Comment