ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:40 PM

ಅಭಿಪ್ರಾಯ

Posted by ekanasu

ವರ್ಷಾಚರಣೆ
ಈ ಕನಸು ಅಂತರ್ಜಾಲ ಪತ್ರಿಕೆಗೆ ಒಂದು ವರ್ಷ ತುಂಬಿದ್ದಕ್ಕೆ ಸಂತಸವಾಗುತ್ತಿದೆ. ಪತ್ರಿಕೆಯನ್ನು ಆರಂಭದಿಂದ ಹಿಡಿಡು ಇಂದಿನವರೆಗೂ ಸೂಕ್ಷ್ಮವಾಗಿ ನೋಡುತ್ತಿದ್ದೇನೆ. ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಅಭಿನಂದನೆಗಳು. ಮಂಗಳೂರಿನಿಂದ ಆರಂಭವಾದ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಇದು. ಆರಂಭದ ದಿನಗಳಲ್ಲಿ ಈ ಕನಸಿನಲ್ಲಿ ಬರುತ್ತಿದ್ದ ಜೋಗಿ, ಜಯಂತ ಕಾಯ್ಕಿಣಿ ಈಗ ಮರೆಯಾಗಿದ್ದಾರೆ, ಏಕೆ? ಅವರ ಬರಹಗಳನ್ನು ಮತ್ತೆ ಮತ್ತೆ ಓದು ಆನಂದಿಸುವ ಅವಕಾಶವನ್ನು ಮಾಡಿಕೊಡಿ.ಅದಲ್ಲದೆ, ಪತ್ರಿಕೆಯ ಆರಂಭದಿಂದಲೂ ಸಂಪಾದಕರ ಜೊತೆ ಪತ್ರಿಕೆಯ ಹೂರಣದ ಬಗ್ಗೆ ಸಾಕಷ್ಟು ತಕರಾರುಗಳನ್ನು ಮಾಡುತ್ತಲೇ ಬಂದಿದ್ದೇನೆ. ಆದರೆ ಸಂಪಾದಕರು ಅದ್ಯಾವುದರ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ!

ಪತ್ರಿಕೆಯ ವಿನ್ಯಾಸ ಬದಲಾಗಬೇಕು, ಸುದ್ದಿಯ ಪ್ರಕಟಣೆಯ ಜೊತೆಜೊತೆಗೆ ಸುದ್ದಿ ವಿಶ್ಲೇಷಣೆ, ಕಥೆ, ಕವನ, ವೈಚಾರಿಕ ಲೇಖನಗಳನ್ನು ಹೆಚ್ಚೆಚ್ಚು ಪ್ರಕಟಿಸಬೇಕು. ಲೇಖನಗಳು ಹೇಗಿರಬೇಕಪ್ಪಾ ಅಂದರೆ, ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನಿಸುವಂತಿರಬೇಕು.

ಪುಸ್ತಕ ವಿಮರ್ಶೆಗಳು ಇನ್ನೂ ಹೆಚ್ಚು ಬರಲಿ. ಬಹಳ ದಿನಗಳಿಂದ ಈ ಕನಸಿನಲ್ಲೇ ಬಂದಿರುವ ಸುದ್ದಿಯಂತೆ ಪತ್ರಿಕೆಯ ವಿನ್ಯಾಸ ಬೇಗ ಬದಲಾಗಲಿ. ಸುದ್ದಿಯನ್ನು ಕೊಡುವ ಶೈಲಿ ಸ್ವಲ್ಪ ಬದಲಾದರೆ ಉತ್ತಮ.

ಇದೆಲ್ಲದರ ಜೊತೆಗೆ, ಎಂದಿನಂತೆ, ಹೊಸ ಬರಹಗಾರರಿಗೆ ಅವಕಾಶ ಕೊಡುವ ಕಾಯಕವನ್ನು ಈ ಕನಸು ಮುನ್ನಡೆಸಿಕೊಂಡು ಹೋಗಲಿ.

-ವಿಜಯ್ ಜೋಶಿ

0 comments:

Post a Comment