ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಪಡ್ಡ್ಯಾರಬೆಟ್ಟ ಪೆರಿಂಜೆ ಇಲ್ಲಿ ಸೋಮವಾರ ಪ್ರಾತಃಕಾಲದಿಂದ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ ಸಮಸ್ತ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಬ್ರಹ್ಮಶ್ರೀ ದೇರೇಬೈಲು ಹರಿಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಮಾರೂರು ಖಂಡಿಗ ಶ್ರೀ ವೇದಮೂರ್ತಿ ರಾಮದಾಸ ಆಸ್ರಣ್ಣರ ಅಮೃತ ಹಸ್ತದಿಂದ ಬ್ರಹ್ಮಕಲಶಾಭಿಷೇಕವು ನೆರವೇರಿತು. ಫೆ.12ರಿಂದ ಮೊದಲ್ಗೊಂಡು ಫಾಲ್ಗುಣ ಶುದ್ಧ ಪ್ರತಿಪತ್ ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಬೆಳಗ್ಗೆ 6ಗಂಟೆಗೆ ಪ್ರಾರಂಭಗೊಂಡಿತು.ಧಾರ್ಮಿಕ ವಿಧಿ ವಿಧಾನಗಳಾದ ಕುಂಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆಗಳು ನಡೆದವು.ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಪಡ್ಯೋಡಿಗುತ್ತು ಎ.ಜೀವಂಧರ್ ಕುಮಾರ್ ಹಾಜರಿದ್ದರು.


0 comments:

Post a Comment