ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಸುರತ್ಕಲ್:ಸಾಮಾನ್ಯ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುವ ಶಕ್ತಿ ಸಾಕ್ಷ್ಯಚಿತ್ರಕ್ಕಿದೆ. ಮಾಧ್ಯಮಗಳ ಮೂಲಕ ಸಂಸ್ಕೃತಿಯ ಪ್ರತಿಫಲನ ವಾಗಬೇಕಾಗಿದ್ದು ಯುವ ಸಮುದಾಯ ಈ ನಿಟ್ಟಿನಲ್ಲಿ ಸಾಕ್ಷ್ಯ ಚಿತ್ರಗಳ ಕಡೆಗೆ ಒಲವನ್ನು ವ್ಯಕ್ತಪಡಿಸಬೇಕಾಗಿದೆ ಎಂದು ಹಿರಿಯ ಸಾಕ್ಷ್ಯಚಿತ್ರ ನಿರ್ದೇಶಕ ಸೇತುಮಾಧವ ಜೋಡಿದಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಭಾನುವಾರ ಬೆಂಗಳೂರಿನ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಮಂಗಳೂರಿನ ಸಹಮತ ಫಿಲಂ ಸೊಸೈಟಿ ,ಪತ್ರಿಕೋದ್ಯಮ ವಿಭಾಗ ಮತ್ತು ಫಿಲಂ ಕ್ಲಬ್ , ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಕಾಳಜಿ ಸುರತ್ಕಲ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಜಲದನಿ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಾಕ್ಷ್ಯಚಿತ್ರಗಳಿಗೆ ಬಂಡವಾಳ ಹರಿದು ಬಂದಂತೆ ಪ್ರೇಕ್ಷಕ ವರ್ಗದ ಸಹಕಾರವೂ ಅಗತ್ಯವಿದೆ , ಈ ನಿಟ್ಟಿನಲ್ಲಿ ಸಧಬಿರುಚಿಯ ಪ್ರೇಕ್ಷಕರ ಅಗತ್ಯವಿದೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಜಿಲ್ಲಾ ಸಂಚಾಲಕ ಐವನ್ ಡಿಸಿಲ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಫಿಲಂ ಕ್ಲಬ್ಗಳ ಸ್ಥಾಪನೆಯಾಗಬೇಕಾಗಿದ್ದು , ಇವುಗಳ ಸಹಕಾರದಲ್ಲಿ ಸಾಕ್ಷ್ಯಚಿತ್ರಗಳ ಪ್ರದರ್ಶನವಾಗಬೇಕಾಗಿದೆ ಎಂದರು..

ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ದೇವಪ್ಪ ಕುಳಾಯಿ ಅಧ್ಯಕ್ಷತೆ ವಹಿಸಿದ್ದರು, ಕಾಳಜಿ ಸುರತ್ಕಲ್ ನ ಗೌರವ ಅಧ್ಯಕ್ಷ ರಘುರಾಮ ರಾವ್ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಕೆ.ಮೊಯಿಲಿ,ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಮೂರ್ತಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಮತ್ತಿತರರಿದ್ದರು.

0 comments:

Post a Comment