ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸ್ಥಳದಲ್ಲೇ ನೋಂದಾವಣೆಗೆ ಅವಕಾಶ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ `ಪ್ರಗತಿ' 26 ಮತ್ತು 27ರಂದು ಮೂಡಬಿದಿರೆಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ನಡೆಯಲಿದ್ದು 32 ಉತ್ಕೃಷ್ಠ ಸಂಸ್ಥೆಗಳು ಭಾಗವಹಿಸಲಿದ್ದು 3ಸಾವಿರಕ್ಕೂ ಮಿಕ್ಕಿದ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.ಉದ್ಯೋಗಾಕಾಂಕ್ಷಿಗಳು ಪದವೀಧರರಾಗಿದ್ದು, ಉದ್ಯೋಗ ಮೇಳದ ಸಂದರ್ಭದಲ್ಲೇ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಎಲ್ಲ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗಲಿದೆ.ಉದ್ಘಾಟನೆ: ಉದ್ಯೋಗಮೇಳವನ್ನು 26ರಂದು ಬೆಳಗ್ಗೆ 10ಕ್ಕೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಯಶ್ರೀ ಅಮರನಾಥ ಶೆಟ್ಟಿ , ಪ್ರಗತಿ ಉದ್ಯೋಗಮೇಳದ ಸಂಯೋಜಕ ಮಹೇಶ್ ಶೇಖ್, ಟ್ರಸ್ಟಿ ವಿವೇಕ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆವಹಿಸಲಿದ್ದಾರೆ.
ನೋಂದಾವಣೆ: ಈಗಾಗಲೇ 2ಸಾವಿರ ಉದ್ಯೋಕಾಂಕ್ಷಿಗಳು ನೋಂದಾವಣೆ ಮಾಡಿದ್ದು ಇನ್ನೂ 3ಸಾವಿರ ಮಂದಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ಫೋಸಿಸ್, ಎಚ್.ಡಿ.ಎಫ್.ಸಿ, ಟಾ.ಟಾ, ವಿಪ್ರೋ, ರಿಲಾಯಾನ್ಸ್ ಮೊದಲಾದ ಪ್ರತಿಷ್ಠಿತ ಕಂಎಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಂದರ್ಶನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.

1 comments:

Anonymous said...

good effort by dr alva... let it be more in the years to come

Post a Comment