ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:37 PM

ಅಭಿಪ್ರಾಯ

Posted by ekanasu

ವರ್ಷಾಚರಣೆ
ಕನ್ನಡ ನಾಡಿನಿಂದ ಸಾವಿರಾರು ಮೈಲು ದೂರದ ಕೊಲ್ಲಿ ಪ್ರದೇಶದ ಕತಾರ್ ದೇಶದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಪರಿಸರದ ಸುದ್ದಿಗಳ ಶ್ರೀ.ಜ್ಯೋತಿಪ್ರಕಾಶ್ ಪುಣಚ ಅವರ ತಾಜಾ ವರದಿಗಳನ್ನು ಓದಿ ಆನಂದಿಸಲು ಅವಕಾಶ ಮಾಡಿಕೊಟ್ಟ ಹಾಗೂ ನಾಡಿನ ತಾಜಾ ಕನ್ನಡ ವರದಿಗಳ ಜೊತೆಗೆ ಕನ್ನಡ ಭಾವಗೀತೆಗಳನ್ನು ಕೇಳಿ ವಿದೇಶದಲ್ಲಿ ಸವಿಯುವ ಯೋಗ ಕಲ್ಪಿಸಿಕೊಟ್ಟ ಕನ್ನಡ ಇ -ಪತ್ರಿಕೆ ಈ -ಕನಸು ತಂಡಕ್ಕೆ ವಂದನೆಗಳು. ಗೃಹ ಮಂತ್ರಿಗಳು ಗ್ರಹ ಮಂತ್ರಿಗಳಾಗಿ ಮಾಡಿ , ರಾಂಕ್ ಅನ್ನು ರ್ಯಾಂಕ್ ಎಂದು ಪರಿವರ್ತಿಸಿ ಕನ್ನಡ ಭಾಷೆಯ ವಿನೀತತೆಯ ಸತತ ಮಾನಭಂಗವಾಗುತಿದ್ದರೂ ,ಇದರ ಬಗ್ಗೆ ತಲೆ ಕೆಡಿಸಿಕೊಳ್ಳದವು ನಾಡಿನ 'ಕನ್ನಡ ಗಣಕ ಪರಿಷತ್' , 'ಕನ್ನಡ ಅಭಿವೃದ್ದಿ ಪ್ರಾಧಿಕಾರ'ಗಳು. ಇಂತಹ ಪರಿಸರದಲ್ಲಿ ಕನ್ನಡದಲ್ಲಿ ಉತ್ತಮ ಲೇಖನಗಳನ್ನು ನಾಡಿನ ಜನತೆಗೆ ಅರ್ಪಿಸುತ್ತಿರುವ ಕೂಸು 'ಈ ಕನಸು' ಸದಾ ಮುನ್ನಡೆಯಲಿ ಎನ್ನುವ ಹಾರೈಕೆ ನನ್ನದು.ಪ.ರಾಮಚಂದ್ರ
ರಾಸ್ ಲಫ್ಫಾನ್ , ಕತಾರ್

0 comments:

Post a Comment