ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತರಾಷ್ಟ್ರ
ಬ್ರಿಟನ್ ಗಾಟ್ ಟಾಲೆಂಟ್ ಇಂಗ್ಲೆಂಡಿನಲ್ಲಿ ನಡೆಯುವ ಬಹುದೊಡ್ಡ ಪ್ರತಿಭಾನ್ವೇಷಣೆ. ಸುಮಾರು ಒಂದು ಲಕ್ಷ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅರ್ಜಿಯನ್ನು ಹಾಕುತ್ತಾರೆ.ಅವುಗಳಲ್ಲಿ ಕೇವಲ ಒಂದು ಸಾವಿರ ಅರ್ಜಿಗಳನ್ನು ಆಯ್ಕೆ ಮಾಡಿ ಮೊದಲ ಸುತ್ತಿನ ಆಯ್ಕೆಯ ಪ್ರತಿಕ್ರಿಯೆಯನ್ನು ಮಾಡುತ್ತಾರೆ.ಅದರಲ್ಲಿ ಕೇವಲ ನೂರು ಪ್ರತಿಭೆಗಳನ್ನು ಪುನಃ ಕರೆದು ಸಂದರ್ಶನ ಮಾಡಿ, ಮೂರು ಜನ ತೀರ್ಪುಗಾರರು ತೀರ್ಪನ್ನು ಕೊಡುತ್ತಾರೆ. ಅದರನ್ವಯ ಮುಂದಿನ ಸುತ್ತಿಗೆ ಅರುವತ್ತು ಪ್ರತಿಭೆಗಳು ,ಆಮೇಲೆ ಎಂಟು ವಾರ ಟೀವಿ ಯಲ್ಲಿ ಪ್ರದರ್ಶನ ಮಾಡಿ ವೀಕ್ಷಕರ ಮತಗಳನ್ನು ಆಧರಿಸಿ ಒಬ್ಬನನ್ನು ಬ್ರಿಟನ್ ಪ್ರತಿಭೆ ಎಂದು ಘೋಷಿಸಿ ನೂರು ಸಾವಿರ ಪೌಂಡ್ (ಸುಮಾರು ಎಂಬತ್ತು ಲಕ್ಷ ರುಪಾಯಿ ) ಹಣವನ್ನು ಕೊಡುತ್ತಾರೆ.
ಇಂತಹ ಒಂದು ಪ್ರತಿಭಾನ್ವೇಷಣೆ ಯಲ್ಲಿ ಭಾಗವಿಸಿ ಒಂದನೇ ಸುತ್ತಿಗೆ ಆಯ್ಕೆಯಾಗಿ ,ಮತ್ತೆ ಎರಡನೆ ಸುತ್ತಿಗೆ ಬಂದು ಒಂದು ಲಕ್ಷ ಪ್ರತಿಭೆಗಳಲ್ಲಿ ಆಯ್ಕೆಯಾದ ನೂರರಲ್ಲಿ ಒಂದಾದ ನಮ್ಮ ಕರಾವಳಿಯ ಯಕ್ಷಗಾನ ಕಲೆ ನಿಜವಾಗಿಯೂ ಬಹುದೊಡ್ಡ ಕಲೆ.ಇಂತಹ ಒಂದು ಸಾಧನೆ ಇಂಗ್ಲೆಂಡಿನಲ್ಲಿ ವಾಸವಿರುವ ಯಕ್ಷ ರಾಜನ ವೇಷಧಾರಿ ಕುಂಟಿಕಾನಮಠ ಕುಮಾರ್ ಅವರು ಮಾಡಿದ್ದಾರೆ. ಫೆಬ್ರುವರಿ ಎಂಟರಂದು, ಲಂಡನ್ನಿನ ಅಪ್ಪೋಲೋ ಹಾಲ್ ನಲ್ಲಿ ಎರಡನೆ ಸುತ್ತಿನ ಆಯ್ಕೆ ಕಾರ್ಯಕ್ರಮದಲ್ಲಿ ತೀರ್ಪು ಗಾರರಲ್ಲಿ ಪ್ರಮುಖರಾದ ಸೈಮನ್ ರವರ ಮನಸ್ಸನ್ನು ಗೆದ್ದದ್ದು ಬಹು ವಿಶೇಷ.ಆದರೆ ಇನ್ನೆರಡು ತೀರ್ಪುಗಾರರು ಯಕ್ಷಗಾನ ನಾಟ್ಯವನ್ನು ಉತ್ತಮ ನೃತ್ಯವೆಂದು ಪರಿಗಣಿಸದೆ ಇದ್ದ ಕಾರಣ ಮುಂದಿನ ಸುತ್ತಿಗೆ ಅಯ್ಕೆಯಾಗದ್ದು ವಿಷಾದನೀಯ.

ಆದರೆ ಸುಮಾರು ಲಕ್ಷ ಜನರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುದ್ದು ,ಲಕ್ಷದಲ್ಲಿ ನೂರಾದದ್ದು ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಇಲ್ಲಿಯ ವರೆಗೆ ಅಯ್ಕೆಯಾದದ್ದರಲ್ಲಿ ಕುಂಟಿಕಾನಮಠ ಕುಮಾರ್ ರವರಿಗೆ ಮುಂದಿನ ಹಲವಾರು ಟೀ ವಿ ಕಾರ್ಯಕ್ರಮಕ್ಕೆ ,ಪ್ರಿನ್ಸ್ ಚಾರ್ಲೆಸ್ ನಡೆಸುವ ಚಾರಿಟಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ಸಿಕ್ಕಿದೆ.

0 comments:

Post a Comment