ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:03 PM

ಅನಿವಾರ್ಯತೆ

Posted by ekanasu

ಸಾಹಿತ್ಯ
ಹೆಕ್ಕಿಕೋ ಹೂವೊ೦ದ ಸಿಕ್ಕಿಸಿಕೋ ನಿನ್ನೆದೆಯೊಳಗೆ
ಮೆಲ್ಲನೆ ನಡೆವಾಗ ನಿನ್ನ ಹಾದಿ ಪರಿಮಳಿಸಲಿ
ಯಾವ ಕ್ಷಣದಲಿ ಉಸಿರ ಜೋಳಿಗೆ ಖಾಲಿಯಾಗುವುದೋ
ಅಲ್ಲಿ ತನಕ ಪರಿಮಳದ ಸುಳಿಗಾಳಿ ಸುತ್ತ ಸುತ್ತುತ್ತಿರಲಿ
ಯಾವ ಪಥದಲಿ ಹಸಿರ ರಾಶಿ ಕರಗಿ ಬರಡಾಗುವುದೋ
ಬಾಡುವ ಮುನ್ನ ಆ ಹೂ ನಿನ್ನ ಕೈಯೊಳಗಿರಲಿ
ಜನ ಜ೦ಗುಳಿಯೊಳಗೆ ಯಾರ ಆಸರೆ ಎ೦ದು ಕೈ ತಪ್ಪುವುದೋ
ಈ ಹೂ ಮಾತ್ರ ನಿನ್ನುಡಿಯಲ್ಲಿ ಅರಳುತ್ತಿರಲಿ
ಮನದೊಳಗಿನ ಬೇಸರ ತೆರೆತೆರೆಯಾಗಿ ಹೊರಳುವಾಗ
ಪರಿಮಳದ ಪನ್ನೀರ ತು೦ತುರು ಹನಿಯುತ್ತಿರಲಿ
ಮರಳ ಗೋಪುರದೊಳಗೆ ಅಷ್ಟೊತ್ತು ಕುಳಿತಿದ್ದಾಗಲೂ
ಇದೇ ನನ್ನ ಮನೆಯೆ೦ಬ ಭ್ರಮೆಯೊಳಗಿದ್ದಾಗಲೂ
ಹೆಕ್ಕಿಕೋ ಹೂವೊ೦ದ ಸಿಕ್ಕಿಸಿಕೋ ನಿನ್ನೆದೆಯೊಳಗೆ
ಮೆಲ್ಲನೇ ನಡೆವಾಗ ನಿನ್ನ ಹಾದಿ ಪರಿಮಳಿಸಲಿ...

ಅನು.ಪಾವಂಜೆ

0 comments:

Post a Comment