ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷಾಚರಣೆ
ಕರ್ನಾಟಕ ಅನಿವಾಸಿ ವೇದಿಕೆಯ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಇಂಗ್ಲೆಂಡಿನ ಕರ್ನಾಟಕ ಅನಿವಾಸಿ ವೇದಿಕೆಯವರು ಆಯೋಜಿಸಿದ್ದ ಲಂಡನ್ ಕಣ್ಣು ತದ್ರೂಪ ಬೆಂಗಳೂರಿನಲ್ಲಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ಸರಕಾರದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡಿಸುವುದಾಗಿ ಭರವಸೆಯನ್ನಿತ್ತರು.ಕಾರ್ಯಕ್ರಮವನ್ನು ಕರ್ನಾಟಕ ಅನಿವಾಸಿ ವೇದಿಕೆಯ ಯುರೊಪ್ ನ ಪ್ರತಿನಿಧಿ ಡಾಕ್ಟರ್ ನೀರಜ್ ಪಾಟೀಲ್ ರವರು ಲಂಡನ್ನಿನ ಮ್ಯಾರೀಎಟ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರು.
ಲಂಡನ್ ಕಣ್ಣಿನ ಡಿಸೈನರ್ ಡೇವಿಡ್ ಮಾರ್ಕ್ಸ್ ರವರು ಕಾರ್ಯಕ್ರಮದ ಮೊದಲಿಗೆ ಲಂಡನ್ ಕಣ್ಣಿನಲ್ಲಿ ಗಣ್ಯರಿಗೆ ಒಂದು ಪ್ರವಾಸ ವನ್ನು ವ್ಯವಸ್ಥೆ ಮಾಡಿ ಎಲ್ಲ ರೀತಿಯಾದ ತಾಂತ್ರಿಕತೆಯ ಬಗ್ಗೆ ನಿರೂಪಿಸಿದರು.ಆಮೇಲೆ ಸಭಿಕರನ್ನು ಉದ್ದೇಶಿಸಿ ತಾವು ಎಡತಾಕಿದ ಸಮಸ್ಯೆಗಳನ್ನುಹೇಗೆ ಎದುರಿಸಿದರು ಎಂದು ಬಹಳ ಸುಂದರವಾಗಿ ನಿರೂಪಿಸಿದರು. ಸೌತ್ ಲಂಡನ್ನಿನ ಸಂಸದೆ ,ಮಾಜಿ ಗೃಹ ಸಚಿವೆ ಕೇಟ್ ಹುಯಿ ಯವರು ತಾವು ಹೇಗೆ ಸರಕಾರದಿಂದ ಲಂಡನ್ ಕಣ್ಣು ಸ್ಥಾಪಿಸಲು ಸಹಕಾರವನ್ನು ,ಅವರು ಅನುಬವಿಸಿದ ತೊಂದರೆಗಳನ್ನು ವಿವರಿಸಿದರು.ಪ್ರಪಂಚದಲ್ಲಿ ಇಂದು ಹೆಸರು ಮಾಡುತ್ತಿರುವ ಬೆಂಗಳೂರಿನಲ್ಲಿ ಲಂಡನ್ ಕಣ್ಣು ಖಂಡಿತ ಬಹುದೊಡ್ಡ ಪ್ರವಾಸಿ ಆಕರ್ಷಣೆಯಾಗಲಿದೆ, ಸುಮಾರು ಉದ್ಯೋಗವನ್ನು ,ವ್ಯವ ಹಾರವನ್ನು ಸೃಷ್ಟಿಸಲಿದೆ ಎಂದು ತಮ್ಮಿಂದಾದ ಸಹಕಾರವನ್ನು ಕೊಡುವುದಾಗಿ ಆಶ್ವಾಸನೆಯನ್ನು ಇತ್ತರು.ಗುಜರಾತ್ ಸಮಾಚಾರ್ ಮತ್ತು ಏಶಿಯನ್ ವಾಯ್ಸ್ ಪತ್ರಿಕೆಯ ಸಂಪಾದಕರಾದ ಸಿ ಬಿ ಪಟೇಲ್ ರವರು ಮಾತನಾಡುತ್ತ ಯೋಜನೆಯು ಬಹು ದೊಡ್ಡದು ಬೆಂಗಳೂರಿನವರಿಗೆ ಮೊದಲ ಆದ್ಯತೆ ,ಬೆಂಗಳೂರಿಗೆ ಬೇಡದೆ ಹೋದರೆ ಗುಜರಾತ್ ನಲ್ಲಿ ಈ ಯೋಜನೆ ಕಾರ್ಯ ರೂಪಕ್ಕೆ ತರಲು ಅಲ್ಲಿನ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ ಎಂದರು.

ಕಾರ್ಯಕ್ರಮದ ಅಂಗವಾಗಿ ಯೂರೋಪಿನ ಬಹುತೇಕ ಎಲ್ಲ ಕನ್ನಡ ಸಂಸ್ಥೆಯ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಬ್ರಿಟನ್ ಸಂಸದೆ ಕೇಟ್ ಹುಯಿ ಯವರು ನಡೆಸಿಕೊಟ್ಟರು. ಸನ್ಮಾನವನ್ನು ಡಾಕ್ಟರ್ ಭಾನುಮತಿ ,ಕನ್ನಡಬಳಗದ ಪರವಾಗಿ , ವಿನಯ್ ರಾವ್ ಕನ್ನಡಿಗರು ಯು ಕೆ ಪರವಾಗಿ ,ಡಾಕ್ಟರ್ ಸುನಿಲ್ ಬಾಗೇವಾಡಿ ವೀರಶೈವ ಯು ಕೆ ಪರವಾಗಿ ,ಡಾಕ್ಟರ್ ಪ್ರಕಾಶ್ ನಾಯಕ್ ಗೌಡ ಸಾರಸ್ವತ್ ಸಭಾ ಪರವಾಗಿ ,ಡಾಕ್ಟರ್ ರಮೇಶ್ ಶೆಟ್ಟಿ ಬಂಟ್ಸ್ ಯು ಕೆ ಪರವಾಗಿ ಸ್ವೀಕರಿಸಿದರು.ವಿಶೇಷವಾಗಿ ಡಾಕ್ಟರ್ ಅಪ್ಪಾಜಿ ಗೌಡ ,ಡಾಕ್ಟರ್ ನಂದಕುಮಾರ್ , ಮಹೇಶ್ ನಾಗರಾಜಯ್ಯ ಮತ್ತು ಸಿ ಬಿ ಪಟೇಲ್ ರವರನ್ನು ಕರ್ನಾಟಕ ಅನಿವಾಸಿ ವೇದಿಕೆಯ ಪರವಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಸನ್ಮಾನಿಸಿದರು.ಕಾರ್ಯಕ್ರಮದ ಮೊದಲಿಗೆ ಕುಂಟಿಕಾನ ಮಠ ಕುಮಾರ್ ರವರು ಸ್ವಾಗತ ಭಾಷಣವನ್ನು ಮಾಡಿದರು.
ಡಾಕ್ಟರ್ ನೀರಜ್ ಪಾಟೀಲ್ ರವರು ಅನಿವಾಸಿ ಕನ್ನಡಿಗ ವೇದಿಕೆಯ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು ಮತ್ತು ಸಂಪತ್ ಯದವಾದ್ ವಂದನಾರ್ಪಣೆ ನೆರವೇರಿಸಿದರು.ಈ ಕಾರ್ಯಕ್ರಮಕ್ಕೆ ಹಲವಾರು ರೀತಿಯಲ್ಲಿ ಶರತ್ ಅಯ್ಯರ್ ,ಚೇತನ ಶರತ್ ,ದೀಪಿಕಾ ಕುಂಟಿಕಾನ ಮಠ ,ಪ್ರಿಯಾ ಸಂಪತ್ ಮತ್ತು ಅನಂತ್ ಭಟ್ ಸಹಕರಿಸಿದರು.

ಏನಿದು ಲಂಡನ್ ಕಣ್ಣು ?. ಲಂಡನ್ನಿನ ಪ್ರೇಕ್ಷಣಿಯ ಸ್ಥಾನಗಳಲ್ಲಿ ಲಂಡನ್ ಕಣ್ಣು ಮೊದಲ ಸ್ಥಾನ .ಸುಮಾರು ೩೦ ಲಕ್ಷ ಜನರು ಒಂದು ವರುಷಕ್ಕೆ ವೀಕ್ಷಿಸುತ್ತಾರೆ.ಇದು ೧೩೫ ಮೀಟರ್ ಎತ್ತರದ ಬಹುದೊಡ್ಡ ಚಕ್ರ .ಅದರಲ್ಲಿ ೨೫ ಜನರು ಕೂರಬಹುದಾದ ಸುಮಾರು ೩೨ ಸಣ್ಣ ಸಣ್ಣ ಕೋಣೆಗಳು.ಹೆಚ್ಹಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿದೆ.
ವರದಿ: ಕುಮಾರ್/ರಾಮಚಂದ್ರ

0 comments:

Post a Comment