ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಗೋ ಹತ್ಯೆ ನಿಶೇಧ ಹೇರಿಕೆಗೆ ಒಂದು ಹಸಿರು ನಿಶಾನೆ ದೊರಕಿದೆಯೇ...! ಅಂತೂ ಸರಕಾರ ಈ ಬಗ್ಗೆ ಚಿಂತನೆ ಕೈಗೊಂಡಿತೇ ಎಂಬ ಬಹುಸಮಯದ ಪ್ರಶ್ನೆಗೆ ಈ ಗೊಂದು ಉತ್ತರ ದೊರೆತಂತಾಗಿದೆ. ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964ರ ತಿದ್ದುಪಡಿಗೆ ಮುಂಬರುವ ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿ ಗೃಹಸಚಿವ ವಿ.ಎಸ್.ಆಚಾರ್ಯ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ತಿಪ್ಪಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ಸದಸ್ಯರ ನಾಮಕರಣಕ್ಕೆ ಆಯ್ಕೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.ಛತ್ತೀಸ್ಗಢದಲ್ಲಿ ಸ್ಥಾಪಿಸಲಾಗುತ್ತಿರುವ ಉಷ್ಣ ವಿದ್ಯುತ್ ಸ್ಥಾವರದ ಉತ್ಪಾದನಾ ಸಾಮಥ್ರ್ಯ 1200 ಮೆಗಾವ್ಯಾಟ್ನಿಂದ 1600 ಮೆಗಾವ್ಯಾಟ್ಗೆ ಏರಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ. 48 ತಿಂಗಳಲ್ಲಿ ವಿದ್ಯುತ್ ಸರಬರಾಜಾಗಲಿದ್ದು, ಒಪ್ಪಂದದಂತೆ ಕರ್ನಾಟಕಕ್ಕೆ ಶೇ. 80 ಹಾಗೂ ಛತ್ತೀಸ್ಗಢಕ್ಕೆ ಶೇ. 20 ವಿದ್ಯುತ್ ಹಂಚಿಕೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 594 ಕೈದಿಗಳ ಬಿಡುಗಡೆ ಬಗ್ಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಆರಂಭಿಸಲಾಗಿರುವ ಪೊಲೀಸ್ ಕಮಿಷನರೇಟ್ಗೆ ಸಚಿವ ಸಂಪುಟದಿಂದ ಘಟನೋತ್ತರ ಮಂಜೂರಾತಿ. ಈ ಹಿಂದೆ ಪಟೇಲರಿಗೆ ರೂ. ಸಾವಿರ, ಶಾನುಭೋಗರಿಗೆ ರೂ. 500 ಗೌರವ ಧನ ನೀಡಲಾಗುತ್ತಿತ್ತು. ಶಾನುಭೋಗರ ಗೌರವಧನ ರೂ. ಒಂದು ಸಾವಿರಕ್ಕೆ ಏರಿಕೆ. ಉಡುಪಿ ಪವರ್ ಕಂಪೆನಿಗೆ 1115 ಮೆ.ವ್ಯಾ. ಬದಲು 1200 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅನುಮತಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಶೇ. 33 ಬಡ್ತಿಯ ಮೂಲಕ ಹಾಗೂ ಶೇ. 67 ರಷ್ಟು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಬೇಕಾಗಿದ್ದು, ಇದರನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಅರ್ಹ 33 ಸಿಬ್ಬಂದಿಗೆ ಬಡ್ತಿ ನೀಡಲು ಸಚಿವ ಸಂಪುಟದ ಒಪ್ಪಿಗೆ ನೀಡಲಾಗಿದೆ ಎಂದರು.

0 comments:

Post a Comment