ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:49 PM

ಅಭಾವಿಪ ಆಗ್ರಹ

Posted by ekanasu

ಪ್ರಾದೇಶಿಕ ಸುದ್ದಿ

ವಿಟ್ಲ : ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಮೋಹಕ್ ಕುಮಾರ್ ಮತ್ತು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಉತ್ತಪ್ಪ ಅವರನ್ನು ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ವಿಟ್ಲ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಜಿಲ್ಲಾಡಳಿತವನ್ನು ಆಗ್ರಹಿಸಿ ಬೃಹತ್ ಪ್ರತಿಭಟನಾ ರಾಲಿ ಸೋಮವಾರ ಬೆಳಿಗ್ಗೆ ನಡೆಸಿತು.
ಬೃಹತ್ ಪ್ರತಿಭಟನಾ ಮೆರವಣಿಗೆ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟು ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ವಿದ್ಯಾರ್ಥಿ ಕೊಲೆ ಪಾತಕಿಗಳನ್ನು ಬಂಧಿಸಬೇಕು ಎಂಬ ಮುಗಿಲು ಮುಟ್ಟುವ ಘೋಷಣೆಯನ್ನು ಕೂಗುತ್ತ ವಿಟ್ಲ ನಾಡಕಚೇರಿಗೆ ತೆರಳಿತು.

ವಿಟ್ಲ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ವ್ಯವಸ್ಥಾ ಪ್ರಮುಖ್ ವೆಂಕಟೇಶ್ವರ ಅಮೈ ಮಾತನಾಡಿ ಹೋರಾಟ ವಿದ್ಯಾರ್ಥಿಗಳಿಂದ ಆರಂಭಗೊಂಡಿದೆ ಮತ್ತು ನ್ಯಾಯ ಸಿಗುವಲ್ಲಿ ವಿಳಂಭವಾದರೆ ಸಂಘ ಪರಿವಾರದ ಸುಮಾರು 40 ಸಂಘಟನೆಗಳು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದು ತನಿಖಾಧಿಕಾರಿಗಳನ್ನು ಎಚ್ಚರಿಸಿದರು.ಮತ್ತು ಪುತ್ತೂರು ಘಟಕ ಕಾರ್ಯದರ್ಶಿ ಜಗದೀಶ ಪುತ್ತೂರು ಮಾತನಾಡಿ ವಿದ್ಯಾರ್ಥಿಗಳು ಜಾಗೃತರಾಗಬೇಕಾಗಿದೆ. ನ್ಯಾಯಕ್ಕಾಗಿ ಗುರಿಮುಟ್ಟುವ ತನಕ ಹೋರಾಟ ನಡೆಯುತ್ತದೆ. ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವನ್ನು ವಿನಯ ಆಲಂಗಾರು, ಸುರೇಶ ಅಡ್ಯನಡ್ಕ, ರವಿ ಮಾಣಿಲ, ದೇವದಾಸ್ ಬೆರಿಪದವು, ಶ್ರೀಧರ, ಪ್ರಶಾಂತ ಮಾಡತ್ತಡ್ಕ, ಮಹೇಶ, ಚಂದ್ರಹಾಸ, ಜಯಶ್ರೀ, ಕುಸುಮ, ವಸಂತಿ, ಸುಚಿತ್ರ ವಹಿಸಿದ್ದರು. ಸಂಘ ಪರಿವಾರದ ಮುಖಂಡರಾದ ಅರುಣ ವಿಟ್ಲ, ಜಯಂತ, ಉದಯ ನಾಯಕ್ ಉಪಸ್ಥಿತರಿದ್ದರು.

0 comments:

Post a Comment