ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:26 PM

ಮಹತ್ವದ ತೀರ್ಪು

Posted by ekanasu

ರಾಜ್ಯ - ರಾಷ್ಟ್ರ
ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಲಾಲ್ ತೆಲಗಿ ಸೇರಿದಂತೆ 20 ಮಂದಿಗಳನ್ನು ನ್ಯಾಯಾಲಯ ಆರೋಪಿಗಳೆಂದು ಹಾಗೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರ ಸಹೋದರ ರೇಹಾನ್ ಬೇಗ್ ಸೇರಿ 9 ಮಂದಿಯನ್ನು ನಿರ್ದೋಷಿಗಳೆಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ರೈಲ್ವೇ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ತೆಲಗಿ 1994ರಲ್ಲಿ ಛಾಪಾ ಕಾಗದ ಮಾರಾಟ ಪರವಾನಿಗೆ ಪಡೆದು ನಾಸಿಕ್ ನಲ್ಲಿ ಮುದ್ರಣ ಆರಂಭಿಸಿದ. ಅಷ್ಟೇ ಅಲ್ಲದೆ ಅಕ್ರಮ ಹಗರಣಗಳಲ್ಲಿ ಭಾಗಿಯಾದ. ತನ್ಮೂಲಕ ಕೋಟ್ಯಾಂತರ ರುಪಾಯಿಗಳ ಒಡೆಯನಾದ.2001ರಲ್ಲಿ ತೆಲಗಿ ಬಂಧಿತನಾಗಿದ್ದು ಒಂದು ದಶಕಗಳಿಂದ ಜೈಲುವಾಸ ಅನುಭವಿಸುತ್ತಿದ್ದಾನೆ.ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಛಾಪಾ ಕಾಗದ ಹಗರಣದ ವಿಚಾರಣೆ ನಡೆಸಿದ ನ್ಯಾ.ಚಂದ್ರಶೇಖರ್ ನೇತೃತ್ವದ ನ್ಯಾಯಪೀಠವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ.

0 comments:

Post a Comment