ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತರಾಷ್ಟ್ರ

ದಮಾಮ್(ಸೌದಿ ಅರೇಬಿಯಾ): ಸೌದಿ ಅರೇಬಿಯಾದ ದಮಾಮ್ - ಜುಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೌದಿ ಅರೇಬಿಯಾದ ಪ್ರಮುಖ ಅನಿವಾಸಿ ಮಂಗಳೂರಿಗರ ಸಂಘಟನೆಯಾದ ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ ಅಧ್ಯಕ್ಷರಾದ ಮಾಧವ ಅಮೀನ್ ಅವರ ಪುತ್ರ ಮಯೂರ್ ಅಮೀನ್ (೨೪) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತಮ್ಮ ನೂತನ ವ್ಯವಹಾರವೊಂದರ ಒಪ್ಪಂದಕ್ಕೆ ಸಹಿ ಹಾಕಲು ಬೆಳಿಗ್ಗೆ ಸುಮಾರು ೩ ಗಂಟೆಗೆ ದಮಾಮಿನಲ್ಲಿರುವ ತಮ್ಮ ಮನೆಯಿಂದ ಕಾರಿನಲ್ಲಿ ಜುಬೈಲಿಗೆ ಹೊರಟ ಮಯೂರ್ ಅಮೀನ್ ಜುಬೈಲ್ ತಲುಪಲು ಕೆಲವು ಕಿ.ಮೀ. ದೂರ ಬಾಕಿ ಇರುವಂತೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟರು.



ಮೃತರು ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ (MASA) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತದೇಹವನ್ನು ಜುಬೈಲಿನ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು ದಮಾಮ್ ಮತ್ತು ಜುಬೈಲಿನ ಹಲವಾರು ಸಾಮಾಜಿಕ ಸಂಘಟನೆಗಳ ಪ್ರಮುಖರು ಮತ್ತು ಅಸಂಖ್ಯಾತ ನಾಗರೀಕರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.

ವರದಿ: ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ.

0 comments:

Post a Comment