ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗದಗ : ಗದಗ ನಗರದಲ್ಲಿ ಫೆ.19 ರಿಂದ 21ರ ವರೆಗೆ ಜರುಗಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತಿ ಸಮಿತಿ ಅಧ್ಯಕ್ಷ ಬಿ. ಶ್ರೀರಾಮುಲು ಅವರು ತಿಳಿಸಿದರು. ಗದಗ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇಂದು ಜರುಗಿದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಮ್ಮೇಳನಕ್ಕಾಗಿ ಈಗಾಗಲೇ 21 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅವು ಕಾರ್ಯ ಪ್ರವೃತ್ತವಾಗಿವೆ. ಈ ವರೆಗೆ ವಿವಿಧ ಮೂಲಗಳಿಂದ 85 ಲಕ್ಷ ರೂ.ಗಳು ನೆರವು ಸಂಗ್ರಹಿಸಲಾಗಿದೆ. ವಿವಿಧ ನಿಗಮ ಮಂಡಳಿಗಳಿಗೆ ವಂತಿಗೆಗೆ ಕೋರಿ ಪತ್ರ ಬರೆಯಲಾಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಸಮ್ಮೇಳನಕ್ಕೆ ಹಣಕಾಸಿನ ಕೊರತೆಯಾಗುವುದಿಲ್ಲವೆಂದು ತಿಳಿಸಿದರು. ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರಿಗೆ ಸಹ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸುವಂತೆ ಸಚಿವರು ಸೂಚಿಸಿದರು. ಪಕ್ಷಭೇದ ಮರೆತು ಎಲ್ಲರೊಡಗೂಡಿ ಈ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದ್ದು, ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆತಂಕ ಪಡುವ ಅಗತ್ಯವಿಲ್ಲವೆಂದರು.ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರ ಪ್ರಸಾದ ಅವರು ಸಭೆಯಲ್ಲಿ ಮಾತನಾಡಿ, ನೆರೆಹಾವಳಿಯಿಂದ ತತ್ತರಿಸಿದ ಈ ಜಿಲ್ಲೆಯಲ್ಲಿ ಈಗ ವಾತಾವರಣ ತಿಳಿಯಾಗಿದೆ, ಎಲ್ಲರೂ ಏಕತಾ ಭಾವದಿಂದ ಗುಣಗ್ರಾಹಿಗಳಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು. ಗದಗ ಸಮ್ಮೇಳನದ ಸವಿ ನೆನಪುಗಳು ಧೀರ್ಘಕಾಲ ಮೆಲಕು ಹಾಕುವಂತರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರಯುವಂತೆ ನೋಡಿಕೊಳ್ಳಲು ಸಂಘಟಿಕರಿಗೆ ಸೂಚಿಸಿದರು. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಕೂಡಾ ಒಂದೇ ರೀತಿಯ ಶುಚಿ-ರುಚಿಯಾದ ಊಟ ನೀಡುವಂತೆ ಸಲಹೆ ಮಾಡಿದರು. ಸಮ್ಮೇಳನಕ್ಕೆ ರಾಜ್ಯ ಸರಕಾರ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ 40 ಲಕ್ಷ ರೂ.ಗಳನ್ನು ಸಾಹಿತ್ಯ ಪರಿಷತ್ ಉಳಿಸಿಕೊಂಡು, 60 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ಇನ್ನೇರಡು ದಿನಗಳಲ್ಲಿ ಕಳುಹಿಸಲಾಗುವುದೆಂದರು. ಎಲ್ಲರೂ ಮನಸ್ಸು ಹಾಗೂ ಛಲವನ್ನು ಸೇರಿಸಿ ಈ ಸಮ್ಮೇಳನವನ್ನು ಹೆಚ್ಚು ಅರ್ಥಪೂರ್ಣವಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.


ಸಬೆಯಲ್ಲಿ ಸ್ವಾಗತ, ಪ್ರಚಾರ ಮತ್ತು ಮಾಧ್ಯಮ ಸಂಪರ್ಕ, ಊಟ ಉಪಹಾರ, ವಸತಿ, ಸಾರಿಗೆ, ಜಾಹೀರಾತು, ವೇದಿಕೆ, ಕಲಾ ಪ್ರದರ್ಶನ, ವಾಣಿಜ್ಯ ಮಳಿಗೆ, ಸ್ಮರಣ ಸಂಚಿಕೆ, ಅತಿಥಿ ಸತ್ಕಾರ, ಭದ್ರತೆ ಮತ್ತು ಸುರಕ್ಷತೆ, ಮಹಿಳಾ ನೆರವು ಮುಂತಾದ ಸಮಿತಿಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಸಭೆಯಲ್ಲಿ ಸಮ್ಮೇಳನದ ಸ್ವಾಗತಾ ಅದ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದಶರ್ಿ ಸಿ.ಸಿ ಪಾಟೀಲ, ಸಮ್ಮೇಳನದ ಕಾರ್ಯಾಧ್ಯಕ್ಷರಾದ ಶಾಸಕ ಶೈಲಪ್ಪ ಬಿದರೂರ, ಶಾಸಕರು ಹಾಗೂ ಹಿರಿಯ ಉಪಾಧ್ಯಕ್ಷರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ಮಾತನಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕೆ.ಸಿ.ಸಿ ಬ್ಯಾಂಕ ಅಧ್ಯಕ್ಷ ಸಂಕಣ್ಣವರ, ಜಿ.ಪಂ ಅಧ್ಯಕ್ಷ ನಿಂಗಪ್ಪ ಕೆಂಗಾರ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಬಸವರಡ್ಡೇರ, ಪುರಸಭಾ ಅಧ್ಯಕ್ಷೆ ಜಯಶ್ರೀ ಉಗಲಾಟದ, ಜಿಲ್ಲಾಧಿಕಾರಿಗಳು ಹಾಗೂ ಸಮ್ಮೇಳನದ ಕೋಶಾಧ್ಯಕ್ಷ ಎನ್.ವಿ ಪ್ರಸಾದ, ಅಪರ್ ಜಿಲ್ಲಾಧಿಕಾರಿ ಪಿ.ಟಿ ರುದೇಗೌಡ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಬಿ. ಹಿರೇಮಠ ಸ್ವಾಗತಿಸಿದರು. ಸಂಯೋಜಕ ವಿವೇಕಾನಂದಗೌಡ ಪಾಟೀಲ ವಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ನಿರ್ವಹಣೆ ಕುರಿತಂತೆ ಕೈಕೊಳ್ಳಲಾದ ಕಾರ್ಯ ಚಟುವಟಿಕೆಗಳನ್ನು ಕುರಿತು ಪರಿಶೀಲನಾ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಮೊದಲು ಜರುಗಿತು. ಜಿಲ್ಲೆಯ ಶಾಸಕರು, ಸಂಸದರು, ಸಮ್ಮೇಳನದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.


ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ


48 ವರ್ಷಗಳ ನಂತರ ನಗರದಲ್ಲಿ ನಡೆಯಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗುವುದು ಇದಕ್ಕೆ ಯಾವುದೇ ಹಣದ ಕೊರತೆಯಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ರಾಜ್ಯ ಸರಕಾರದಿಂದ 1 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಸಮ್ಮೇಳನಕ್ಕೆ 4 ಕೋಟಿ ರೂ.ಗಳು ವೆಚ್ಚವಾಗುವ ನಿರೀಕ್ಷೆಯಿದ್ದು, ಈಗಾಗಲೇ 1.50 ಕೋಟಿ ರೂ.ಗಳ ವಂತಿಗೆ ಸಂಗ್ರಹವಾಗಿದ್ದು, ಇನ್ನೂ ಹಲವು ನಿಗಮ ಮಂಡಳಿ ಹಾಗೂ ಸಂಸ್ಥೆಗಳಿಂದ ದೇಣಿಗೆ, ಹಣ ನಿರೀಕ್ಷಿಸಲಾಗಿದೆ. ಸರಕಾರದಿಂದ 50 ಲಕ್ಷ ರೂ.ಗಳ ಹೆಚ್ಚಿನ ನೆರವನ್ನು ಸಹ ಕೋರಲಾಗಿದೆ ಎಂದು ಸಚಿವರು ವಿವರಿಸಿದರು. ಸಮ್ಮೇಳನಕ್ಕೆ ಬರುವವರಿಗೆ ಉಪಹಾರ ಹಾಗೂ ಊಟಕ್ಕಾಗಿ ರೊಟ್ಟಿ, ಪಲ್ಲೆ, ಅನ್ನ, ಸಾಂಬಾರು ಜೊತೆ ಸಿಹಿ ತಿನಸನ್ನು ಸಹ ನೀಡಲಾಗುವುದು. 7 ಸಾವಿರ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದ್ದು, ಅವರ ವ್ಯಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಕ್ಷರ ಹಬ್ಬಕ್ಕೆ ಆಗಮಿಸುವವರಿಗೆ ಜಿಲ್ಲೆಯ ಐತಿಹಾಸಿಕ ಸ್ಥಳ ಹಾಗೂ ಸನಿಹದ ಪ್ರೇಕ್ಷಣೀಯ ಸ್ಥಳಕ್ಕೆ ಸಾರಿಗೆ ಇಲಾಖೆಯಿಂದ ಪ್ರವಾಸ ಏರ್ಪಡಿಸಲಾಗುವುದು. ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಹಾಗೂ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಸಿ ಪಾಟೀಲ ಶಾಸಕರಾದ ಶೈಲಪ್ಪ ಬಿದರೂರ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಮುಂತಾದವರು ಉಪಸ್ಥಿತರಿದ್ದರು

0 comments:

Post a Comment