ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ವೈದ್ಯಾಧಿಕಾರಿಗಳಿಗೆ ಸಂಬಂಧಿಸಿದಂತೆ ದಿನಾಂಕ 25-9-2009 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಭತ್ಯೆಗಳನ್ನು ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು ಈ ತೀರ್ಮಾನದಂತೆ ಆದೇಶ ಹೊರಡುವ ಮೊದಲೇ ಸರ್ಕಾರದ ತೀರ್ಮಾನಕ್ಕೆ ಅತೃಪ್ತಿ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ದರದಲ್ಲಿ ಭತ್ಯೆಗಳ ಪರಿಷ್ಕರಣೆ ಕೋರಿ ವೈದ್ಯಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ 28-10-2009 ರಂದು ವೈದ್ಯಾಧಿಕಾರಿ ಸಂಘದ ಬೇಡಿಕೆಗಳನ್ನು ಚರ್ಚಿಸಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಸಂಪುಟ ತೀರ್ಮಾನವನ್ನು ಪರಿಷ್ಕರಿಸಿ ಹೆಚ್ಚಿನ ದರದಲ್ಲಿ ವಿವಿಧ ಭತ್ಯೆಗಳನ್ನು ನೀಡಲು ತೀರ್ಮಾನಿಸಲಾಯಿತು.


ಆ ಪ್ರಕಾರ ಹೆಚ್ಚುವರಿ ಭತ್ಯೆಗಳನ್ನು ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಿದ ನಂತರ ಸರ್ಕಾರವು ಮಂಜೂರು ಮಾಡಿ ದಿನಾಂಕ 10-12-2009 ರಂದು ಆದೇಶ ಹೊರಡಿಸಿದೆ. ಆದರೆ ವೈದ್ಯಾದಿಕಾರಿಗಳ ಸಂಘವು ಅನಂತರ ಹಲವಾರು ಅಂಶಗಳನ್ನು ಪ್ರಸ್ತಾಪಿಸಿ, ಅವುಗಳನ್ನೂ ಪರಿಗಣನೆಗೆ ತೆಗೆದು ಕೊಂಡು ಮಾರ್ಪಡಿಸಿದ ಸರ್ಕಾರಿ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದು ಪರಿಶೀಲನೆಯಲ್ಲಿರುವ ಕಾರಣ 10-12-2009 ರಂದು ಹೊರಡಿಸಿರುವ ಸರ್ಕಾರಿ ಆದೇಶದ ಪ್ರಕಾರ ವೈದ್ಯಾಧಿಕಾರಿಗಳಿಗೆ ಮಂಜೂರು ಮಾಡಲಾದ ಹೆಚ್ಚಿನ ಆರ್ಥಿಕ ಸೌಲಭ್ಯ ಇನ್ನೂ ದೊರಕಿಲ್ಲವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ ಇ. ವಿ. ರಮಣರೆಡ್ಟಿ ಅವರು ಇಂದು ಪತ್ರಕರ್ತರಿಗೆ ತಿಳಿಸಿದರು. ಸಂಘದ ಮನವಿ ಪ್ರಕಾರವೇ ಆದೇಶವನ್ನು ಮಾರ್ಪಡಿಸಿರುವ ಕಾರಣ ಸದರಿ ವಿಳಂಬಕ್ಕೆ ಸಂಘವೇ ಕಾರಣವಾಗಿರುತ್ತದೆ ಎಂದು ಅವರು ತಿಳಿಸಿದರು.

ಸಂಘದ ಪ್ರಮುಖ ಬೇಡಿಕೆಗಳಲ್ಲಿ ಒಂದು- ಇನ್ನು ಮುಂದೆ ಗುತ್ತಿಗೆ ವೈದ್ಯರನ್ನು ನೇಮಕಾತಿ ಮಾಡಬಾರದು, ಬದಲಾಗಿ ಪ್ರತಿವರ್ಷ ನಿಯತಕಾಲಿಕವಾಗಿ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ವೈದ್ಯರನ್ನು ನೇಮಕಾತಿ ಮಾಡಬೇಕು ಎಂದಿದ್ದು, 31-10-2008 ರಿಂದ ಗುತ್ತಿಗೆ ವೈದ್ಯರ ನೇಮಕಾತಿಯನ್ನು ಮಾಡುತ್ತಿಲ್ಲವೆಂದರು.

562 ಖಾಲಿ ವೈದ್ಯರ ಹುದ್ದೆಗಳನ್ನು ಭರ್ತಿಮಾಡಲು ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರಸ್ತಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಲಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
ವೈದ್ಯರ ಮೇಲಿನ ಹಲ್ಲೆಯನ್ನು ತಪ್ಪಿಸಲು ಸೂಕ್ತ ಕಾನೂನು ರಚನೆ ಕುರಿತ ಎರಡನೇ ಬೇಡಿಕೆಯನ್ವಯ 2-3-2009 ರಂದು ಈ ಕಾನೂನು ಜಾರಿಗೆ ತಂದು ಅಧಿಸೂಚಿಸಲಾಗಿದೆ ಎಂದರು.

ಗುತ್ತಿಗೆ ವೈದ್ಯರ ಸೇವೆಯನ್ನು ಸಕ್ರಮಗೊಳಿಸುವ ಬೇಡಿಕೆ ಕುರಿತಂತೆ 31-10-2008 ರಂದು ಇದ್ದಂತೆ ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿರುವ 462 ವೈದ್ಯಾಧಿಕಾರಿಗಳು ಹಾಗೂ 109 ದಂತ ವೈದ್ಯಾಧಿಕಾರಿಗಳ ಸೇವೆಯನ್ನು ವಿಶೇಷ ನಿಯಮಗಳ ಮೂಲಕ ಸಕ್ರಮಗೊಳಿಸಲು ಸಚಿವ ಸಂಪುಟದ ಅನುಮೋದನೆ ಪಡೆದಿದ್ದು ಈ ಪೈಕಿ ಮೂರು ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿದ ಗುತ್ತಿಗೆ ವೈದ್ಯರ ಸೇವೆಯನ್ನು ಮೊದಲ ಹಂತದಲ್ಲಿ ಹಾಗೂ ಉಳಿದವರಿಗೆ ಮುಂದೆ ಮೂರು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಸಕ್ರಮಗೊಳಿಸಲು ಅನುಮೋದನೆ ಪಡೆಯಲಾಗಿದೆ. ಈವರೆಗೆ 279 ವೈದ್ಯಾಧಿಕಾರಿಗಳು ಹಾಗೂ 66 ದಂತ ವೈದ್ಯರ ಸೇವೆಯನ್ನು ಸಕ್ರಮಗೊಳಿಸಲಾಗಿದೆ ಎಂದು ತಿಳಿಸಿದರು.

ಸಂಘದ ಮತ್ತೊಂದು ಬೇಡಿಕೆಯಾದ -ವೈದ್ಯರು ಸಲ್ಲಿಸಿದ ಗುತ್ತಿಗೆ ಸೇವಾವಧಿಯನ್ನು ಸಹ ಸ್ನಾತಕೋತ್ತರ ಪದವಿಗೆ ನಿಯೋಜಿಸಲು ಪರಿಗಣಿಸಬೇಕು ಎಂಬ ಬಗ್ಗೆ ಪರಿಶೀಸುತ್ತಿದ್ದಾಗಲೇ, ಕೆಲವು ವೈದ್ಯರುಗಳು ಗ್ರಾಮೀಣಿ ಕೃಪಾಂಕದ ಅಡಿಯಲ್ಲಿ ಸಲ್ಲಿಸಿದ ಸೇವೆಯನ್ನು ಸಹ ಪರಿಗಣಿಸಬೇಕೆಂದು ಬೇಡಿಕೆ ಸಲ್ಲಿಸಿದರು. ಈಗ 29-1-2010 ರಂದು ಈ ಬೇಡಿಕೆಯನ್ನು ಪರಿಶೀಲಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕಾರ್ಯದರ್ಶಿಗಳು ತಿಳಿಸಿದರು.

ಗ್ರಾಮೀಣ ಸೇವೆ ಸಲ್ಲಿಸಿದ ವೈದ್ಯರಿಗೆ ರೂ 7000 ಗಳ ವಿಶೇಷ ಭತ್ಯೆಯನ್ನು (ಪ್ರೋತ್ಸಾಹಕವಾಗಿ) ನೀಡುತ್ತಿದ್ದು ಅದೇ ಪ್ರಮಾಣದ ಭತ್ಯೆಯನ್ನು ನಗರದಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳಿಗೂ ನೀಡಬೇಕೆಂಬುದು ಸಂಘದ ಮತ್ತೊಂದು ಬೇಡಿಕೆಯಾಗಿದೆ. ಪ್ರಸಕ್ತ ಅವರಿಗೆ ರೂ. 5000ಭತ್ಯೆ ನೀಡಲಾಗತ್ತಿದ್ದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕಾರ್ಯದರ್ಶಿಗಳು ತಿಳಿಸಿದರು.

0 comments:

Post a Comment