ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಅಖಿಲ ಭಾರತ ವಿ.ವಿ. ಬಾಲ್ ಬ್ಯಾಡ್ ಮಿಂಟನ್
ಮೈಸೂರು ವಿ.ವಿ.ಗೆ ನಿರಾಸೆ

ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಾಲ್ ಬ್ಯಾಟ್ ಮಿಂಟನ್ ಪಂದ್ಯಾಟದ ತೃತೀಯ ದಿನವಾದ ಶುಕ್ರವಾರ ಅತ್ಯಂತ ರೋಚಕ ಪಂದ್ಯಾಗಳು ನಡೆದಿದ್ದು ಎಂಟರ ಘಟ್ಟಕ್ಕೆ ಒಸ್ಮಾನಿಯಾ , ಅಣ್ಣಾಮಲೈ ವಿ.ವಿ. ಪ್ರವೇಶಿಸಿದೆ.ಹೈದರಾಬಾದ್ ನ ಒಸ್ಮಾನಿಯಾ ವಿ.ವಿ, ಅಣ್ಣಾಮಲೈ ವಿ.ವಿ., ವಾರಂಗಲ್ ನ ಕಾಕತೀಯ ವಿ.ವಿ. ಹಾಗೂ ಎಸ್.ಆರ್.ಎಂ. ವಿ.ವಿ. ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.ಶನಿವಾರ ಮುಂಜಾನೆ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಆಗಿದ್ದ ತಮಿಳ್ನಾಡಿನ ಅಣ್ಣಾ ವಿ.ವಿ ತಂಡವು ಒಸ್ಮಾನಿಯಾ ವಿ.ವಿ. ತಂಡವನ್ನು ಹಾಗೂ ಆತಿಥೇಯ ಮಂಗಳೂರು ವಿ.ವಿ. ತಂಡವು ವಾರಂಗಲ್ ನ ಕಾಕತೀಯ ವಿ.ವಿ. ತಂಡವನ್ನು , ಮದ್ರಾಸ್ ವಿ.ವಿ, ಎಸ್.ಆರ್.ಎಂ ವಿ.ವಿ ತಂಡವನ್ನು ಹಾಗೂ ನಾಗಾರ್ಜುನ ವಿ.ವಿ ಅಣ್ಣಾಮಲೈ ವಿ.ವಿ ತಂಡವನ್ನು ಎದುರಿಸಲಿದೆ.

ಇಂದು ಶುಭಾರಂಭ
ಆತಿಥೇಯ ಮಂಗಳೂರು ವಿ.ವಿ. ತಂಡವು ವಾರಂಗಲ್ ನ ಕಾಕತೀಯ ತಂಡದೊಂದಿಗೆ ಪಂದ್ಯಾಟ ಆರಂಭಗೊಳಿಸಲಿದೆ. ಕಳೆದ ಬಾರಿ ಮಂಗಳೂರು ವಿ.ವಿ. ಕಂಚಿನ ಪದಕಕ್ಕೆ ಪ್ರಾಪ್ತವಾಗಿತ್ತು.

ರೋಚಕ ಪಂದ್ಯಗಳು:
ಓಸ್ಮಾನಿಯಾ - ಭಾರತೀದಾಸನ್, ಅಣ್ಣಾಮಲೈ - ಬಿ.ಎಸ್.ಎ.ಆರ್, ಪೆರಿಯಾರ್ ವಿ.ವಿ. - ಮೈಸೂರು ವಿ.ವಿ.

ಕಾತರದ ವೀಕ್ಷಣೆ

ಮೂಡಬಿದಿರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಾಲ್ ಬ್ಯಾಡ್ ಮಿಂಟನ್ ಪಂದ್ಯಾಟಕ್ಕೆ ಪ್ರಥಮ ಅರ್ಜುನ ಪ್ರಶಸ್ತಿ ವಿಜೇತ ಹಿರಿಯ ಕ್ರೀಡಾಪಟು ಆಂದ್ರಪ್ರದೇಶದ ಪಿಚ್ಚಯ್ಯ ಶುಕ್ರವಾರ ಆಗಮಿಸಿ ಪಂದ್ಯಾಟವನ್ನು ವೀಕ್ಷಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

0 comments:

Post a Comment