ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಉದ್ಘಾಟಿಸುತ್ತಿರುವ ವೆಂಕಟೇಶ್ವೇಣೂರು: ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವೇಣೂರು, ಆಸಕ್ತರ ವೇದಿಕೆ ಪೆರಿಂಜೆ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಎ.ಜೆ.ವೈದ್ಯಕೀಯ ಮತ್ತು ದಂತ ವಿಜ್ಞಾನ ಸಂಸ್ಥೆ ಮಂಗಳೂರು , ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಅಂಧತ್ವ ನಿವಾರಣಾ ಘಟಕ ಮಂಗಳೂರು ಇವರ ಸಹಯೋಗದೊಂದಿಗೆ ವಿಶೇಷ ತಜ್ಞವೈದ್ಯರಿಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಎ.ಜೆ.ಆಸ್ಪತ್ರೆಯ ಗ್ರಂಥಪಾಲಕರಾಗಿರುವ ವೆಂಕಟೇಶ್ ಶಿಬಿರ ಉದ್ಘಾಟಿಸಿ ಶುಭ ಕೋರಿದರು. ಸಾಮಾನ್ಯರೋಗ, ಎಲುಬು ಮತ್ತು ಕೀಲು ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಸ್ತ್ರೀ ರೋಗ ತಜ್ಞರು, ನೇತ್ರಚಿಕಿತ್ಸೆ, ದಂತ ಚಿಕಿತ್ಸಾ ತಜ್ಞರು ಈ ಸಂದರ್ಭದಲ್ಲಿ ಭಾಗವಹಿಸಿ 500 ಮಂದಿಗೆ ಉಚಿತ ಆರೋಗ್ಯ ತಪಾಸಣೆ , ಸೂಕ್ತ ಔಷಧಿಗಳನ್ನು ನೀಡಿದರು.

ಜಿ.ಪಂ.ಸದಸ್ಯ ಧರಣೇಂದ್ರ ಕುಮಾರ್, ಡಾ.ರಿತೇಶ್ ಆಳ್ವ, ಡಾ.ಮಾರ್ಟಿಸ್, ಆಸಕ್ತರ ವೇದಿಕೆ ಸಂಚಾಲಕ ಹರೀಶ್ ಕೆ.ಆದೂರು, ಉಪನ್ಯಾಸಕ ಬಿ.ಕೃಷ್ಣಮೂರ್ತಿ, ಭರತ್ ರಾಜ ಮುದ್ಯ, ಮಹಮ್ಮದ್ ರಫೀಕ್, ಗಂಗಾಧರ, ಶ್ರೀನಿವಾಸ್ ಅತಿಥಿಗಳಾಗಿದ್ದರು. ಹೊಸಂಗಡಿ ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

0 comments:

Post a Comment