ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗುಲಬರ್ಗಾ: ಕರ್ನಾಟಕ ಅಲ್ಪಸಂಖ್ಯತರ ಅಭಿವೃದ್ಧಿ ನಿಗಮದಿಂದ ರಾಜ್ಯದ 2010-11ನೇ ಸಾಲಿನ ಆಯವ್ಯಯದಲ್ಲಿ ನಿಗಮಕ್ಕೆ 106 ಕೋಟಿ ರೂ. ಅನುದಾನ ನೀಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕರ್ ಅವರು ಹೇಳಿದರು.
ಅವರು ಬುಧವಾರ ಗುಲಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಪ್ರಸ್ತಾವನೆಯ ಪ್ರಕಾರ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 300ರಂತೆ ಒಟ್ಟು 74800 ಅಲ್ಪಸಂಖ್ಯಾತ ಫಲಾನುಭವಿಗಳಿಗೆ ವಿವಿದ ಯೋಜನೆಗಳ ಪ್ರಯೋಜನ ಕಲ್ಪಿಸಲು ಯೋಜಿಸಿದ್ದು ಮುಖ್ಯಮಂತ್ರಿಗಳು ಸಹ ಪ್ರಸ್ತಾವನೆಗೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದರು.


ಕರ್ನಾಟಕ ಅಲ್ಪಸಂಖ್ಯತರ ಅಭಿವೃದ್ಧಿ ನಿಗಮವು ಪ್ರಸಕ್ತ ವರ್ಷ 35100 ಅಲ್ಪಸಂಖ್ಯಾತ ಫಲಾನುಭವಿಗಳಿಗೆ 49.2 ಕೋಟಿ ರೂ. ನೆರವು ನೀಡುವ ಗುರಿ ಹೊಂದಿದ್ದು, ಈವರೆಗೆ 26903 ಫಲಾನುಭವಿಗಳಿಗೆ ನೆರವು ಕಲ್ಪಿಸಿ 34.61 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 4200 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ನೆರವು ಕಲ್ಪಿಸಿ 51.20 ಕೋಟಿ ರೂ. ವಿನಿಯೋಗಿಸಲಾಗಿದೆ. ಅದೇರೀತಿ ನಿಗಮಕ್ಕೆ ಫಲಾನುಭವಿಗಳಿಂದ 130 ಕೋಟಿ ರೂ. ಬಾಕಿ ಬರಬೇಕಾಗಿದ್ದು, ವಸೂಲಿ ಕಾರ್ಯ ಚುರುಕುಗೊಳಿಸಿದ ಪ್ರಯುಕ್ತ ಪ್ರತಿ ತಿಂಗಳು ಒಂದು ಕೋಟಿ ರೂ. ವಸೂಲು ಮಾಡಲಾಗುತ್ತಿದೆ ಎಂದು ತಿಳಿಸಿದರು.

0 comments:

Post a Comment