ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡುಬಿದಿರೆ: ಆಳ್ವಾಸ್ ಸಮಾಜ ಕಾರ್ಯ ಕಾಲೇಜಿನ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿರುವ ಆಳ್ವಾಸ್ ಮಹಾವಿದ್ಯಾಲಯದ ಸೆಮಿನಾರ್ ಹಾಲ್ ನಲ್ಲಿ ಮಾ.6ರಂದು `ಆಳ್ವಾಸ್ ರೀಚ್ - 2010' ಎಂಬ ರಾಜ್ಯಮಟ್ಟದ ಸಮಾಜಕಾರ್ಯ ಅಂತರ್ ಕಾಲೇಜು ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.ಕಾರ್ಯಕ್ರಮದಲ್ಲಿ ಸಾಮಾಜಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ನೃತ್ಯರೂಪಕ, ಮೂಕಾಭಿನಯ, ಕೊಲಾಜ್ ರಚನೆ, ಜಾಗೃತಿ ಹಾಡು, ಭಿತ್ತಿಪತ್ರ , ವ್ಯಕ್ತಿಗತ ಸಮಸ್ಯೆ ಅಧ್ಯಯನ ಮತ್ತು ವಿಶ್ಲೇಷಣೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.ಸಮಾಜಕಾರ್ಯ ವೃತ್ತಿಯಲ್ಲಿ ಅನೇಕ ಸವಾಲುಗಳನ್ನೆದುರಿಸಬೇಕಾಗಿದ್ದು ಅದರ ಸಮರ್ಥ ನಿರ್ವಹಣೆ, ಹೊಂದಾಣಿಕೆಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ದೃಷ್ಠಿಯಿಂದ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.ಕಾರ್ಯಕ್ರಮವನ್ನು ಹೊನ್ನಾವರದ ಮುಕ್ತ ಟ್ರಸ್ಟ್ ನ ನಿರ್ದೇಶಕರಾದ ಪ್ಯಾಟ್ರಿಕ್ ಪುರ್ಟಾಡೋ ಬೆಳಗ್ಗೆ 9ಕ್ಕೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸಲಿದ್ದಾರೆ.
ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದು ಅತಿಥಿಗಳಾಗಿ ಮಂಗಳೂರು ವಿ.ವಿ. ಸಮಾಜ ಕಾರ್ಯ ವಿಭಾಗದ ಸಂಯೋಜಕ ಡಾ.ಲೀನಾ ಅಶೋಕ್ ವಹಿಸುವರು.

0 comments:

Post a Comment