ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷಾಚರಣೆ
ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಮ್ ಅನೇಕ ಸಮಾರಂಭಗಳಲ್ಲಿ ವಿಧ್ಯಾರ್ಥಿಗಳಿಗೆ ಒಂದು ಕರೆ ಕೊಡುತಿದ್ದರು. ನೀವು ಕನಸು ಕಾಣುವುದಾದರೆ ಚಿಕ್ಕ ಪುಟ್ಟ ಕನಸುಗಳನ್ನು ಕಾಣುವ ಬದಲು ದೊಡ್ಡ ದೊಡ್ಡ, ದೂರದೃಷ್ಟಿವುಳ್ಳ ಮಹತ್ವಾಕಾಂಕ್ಷೆಯ ಕನಸುಗಳನ್ನು ಕಾಣಿರಿ ಎಂದು. ಅವರ ಪ್ರಕಾರ ಕನಸು ಕಾಣುವ ವ್ಯಕ್ತಿಯೇ ಸಾಧನೆ ಮಾಡಬಲ್ಲ ಎಂಬುವುದಾಗಿತ್ತು. ಅಂದ ಹಾಗೆ ಅಂತರ್ಜಾಲದಲ್ಲಿ ಕನ್ನಡದ ಸಾಹಿತ್ಯಾಸಕ್ತರ ಕನಸುಗಳನ್ನು ಮತ್ತು ಅವರ ಮನದಾಳದ ಚಿಂತನೆಗಳನ್ನು ಬರಹ ರೂಪಕ್ಕೆ ಇಳಿಸಲು ಸಹಕಾರ ನೀಡುತ್ತಿರುವ ಈ ಕನಸು ಡಾಟ್ ಕಾಂ ಇದೀಗ ತನ್ನ ಯಶಸ್ವೀ ಸಾಧನೆಯ ಒಂದು ವರ್ಷವನ್ನು ಪೂರೈಸಿ ಎರಡನೇ ವರ್ಷಕ್ಕೆ ದಾಪುಗಾಲಿಡುತ್ತಿರುವ ಸಂಧರ್ಭದಲ್ಲಿ ಅದರ ಸಂಪಾದಕರಾದ ಹರೀಶ್.ಕೆ. ಆದೂರು ಮತ್ತು ಅವರ ತಂಡವನ್ನು ಅಭಿನಂದಿಸಲೇ ಬೇಕಾಗುತ್ತದೆ.ಕನ್ನಡದ ಸಾಹಿತ್ಯಾಭಿಮಾನಿಗಳ ಆಸಕ್ತಿಯನ್ನು ತಣಿಸಲು ಮತ್ತು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಂತರ್ಜಾಲದಲ್ಲಿ ಕೇವಲ ಕೆಲವೇ ಕೆಲವು ಉತ್ತಮ ತಾಣಗಳಿವೆ. ಅಂತಹ ಒಂದು ತಾಣಗಳಲ್ಲಿ ಈ ಕನಸು ಸಹ ಒಂದು. ಯಾವುದೇ ಒಂದು ಮಾಧ್ಯಮವನ್ನು ಆರಂಭಿಸುವುದು ಬಹಳ ಸುಲಭ . ಆದರೆ ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಮುನ್ನಡೆಸುವುದು ಒಬ್ಬ ವೃತ್ತಿಪರ ವ್ಯಕ್ತಿಯಿಂದ ಮಾತ್ರ ಸಾಧ್ಯ. ಈ ಕಾರ್ಯವನ್ನು ಈ ಕನಸು ತಂಡ ಮಾಡಿ ತೋರಿಸಿದೆ. ಸ್ಪರ್ಧಾತ್ಮಕವಾದ ಈ ಕಾಲದಲ್ಲಿ ಯಾರೊಂದಿಗೂ ಪೈಪೋಟಿಗಿಳಿಯದೆ ಯಾವುದೇ ಒಂದು ಮಾನವೀಯ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈ ಕನಸು ಮುನ್ನಡೆಯುತ್ತಿದೆ. ಈ ಸುಂದರ ತಾಣ ಇನ್ನಷ್ಟು ಬೆಳಗಲಿ. ಕನ್ನಡ ನಾಡು ನುಡಿಯ ಸೇವೆಯಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುತ್ತಾ ಕನ್ನಡ ತಾಯಿಯ ಕೀರ್ತಿ ಪತಾಕೆಯನ್ನು ದಿಗಂತದೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ.

ಇಂತೀ

ಅಶ್ರಫ್ ಮಂಜ್ರಾಬಾದ್.

ಸೌದಿ ಅರೇಬಿಯಾ.

0 comments:

Post a Comment