ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಅಂದು ಪಾಠ ಇರಲಿಲ್ಲ... ಪಾಠಮಾಡಲು ಉಪಾನ್ಯಾಸಕರೂ ಬಂದಿರಲಿಲ್ಲ... ಇನ್ನು ತರಗತಿಯಲ್ಲಿ ನಮ್ಮದೇನು ಕೆಲಸ... ಏನಾದರೊಂದು ಹೊಸತು ಮಾಡೋಣ ಎಂದು ಹೊರಟ ನಮಗೆ ನೆನಪಿಗೆ ಬಂದಿದ್ದು ಎಷ್ಟೋ ವರುಷಗಳಿಂದ ಸೊಲ್ಲೆತ್ತದೆ , ನಿರಂತರ ಜನತೆಯ ದಬ್ಬಾಳಿಕೆ, ಅನ್ಯಾಯಗಳು ನಡೆಯುತ್ತಿದ್ದರೂ ಪ್ರತಿಕ್ರಿಯಿಸದೆ, ನಿಶ್ಚಲವಾಗಿ ಸುಪ್ತವಾಗಿ ಹರಡಿನಿಂತ ಸುಂದರ ಬೆಟ್ಟ!...
ಕ್ಲಾಸಿನ ಕಿಟಕಿಯಿಂದ ಆ ಬೆಟ್ಟದ ಚೆಲುವು ನೋಡಿದಾಗೆಲ್ಲ ಒಂದೇ ಬಯಕೆ... ಅಲ್ಲಿಗೊಮ್ಮೆ ಹೋಗಬೇಕು... ಆ ಸೊಬಗನ್ನೊಮ್ಮೆ ಸನಿಹದಿಂದ ಸವಿಯಬೇಕು... ಎಂದು...

ಇಂದು ಏನಾದರಾಗಲಿ...ಅಲ್ಲಿಗೆ ಹೋಗಿಯೇ ಸಿದ್ಧ ಎಂಬ ತೀರ್ಮಾನ ನಮ್ಮದಾಯಿತು. ನಾವೈವರು ಸ್ನೇಹಿತರು ಬೆಟ್ಟದ ಮನೋಜ್ಞ ನೋಟದ ಸವಿಸವಿಯಲು ಮುಂದಾದೆವು. ಕಣ್ಣು ಹಾಯಿಸಿದಷ್ಟುದ್ದಕ್ಕೂ ಬೆಟ್ಟ...ಎತ್ತರ ತಗ್ಗಿನ ಆ ಮೋಹಕ ಬೆಟ್ಟದ ತುಂಬೆಲ್ಲಾ ಹಸಿರು... ಮೇಲ್ಭಾಗದಲ್ಲಿ ಹತ್ತಿಯುಂಡೆಯಂತಿರುವ ಮೇಘ..ಸಮೀರ... ಮಂಜು ಮುತ್ತಿಕ್ಕುತ್ತಿರುವಂತಹ ಅಮೋಘ ದೃಶ್ಯ ವೈಭವ...

ಬೆಟ್ಟದ ತುದಿಯನ್ನೇರಿ ಕೆಳ ನೋಡುತ್ತಿದ್ದಂತೆಯೇ ಅಷ್ಟೂ ಹೊತ್ತು ಸವಿದ ಸಿಹಿ ಅನುಭವಗಳು ಜರ್ರನೆ ಇಳಿದೇ ಹೋಯಿತು... ಮಾನವನ ಕ್ರೌರ್ಯ ಅಲ್ಲಿ ತಾಂಡವವಾಡುತ್ತಿತ್ತು. ಕಣ್ಣು ಹಾಯಿಸಿದಷ್ಟುದ್ದಕ್ಕೂ ಎಲ್ಲೆಂದರಲ್ಲಿ ಕಾಂಕ್ರೀಟ್ ಕಾಡುಗಳು ತಲೆಯೆತ್ತಿನಿಂತಿದ್ದವು. ಮಾನವ ಹೇಯ ಕೃತ್ಯವನ್ನು ನೋಡಿ ಮನನೊಂದಿತ್ತು.
ಈ ಅನುಭವ ಉಂಡು ಹಲವು ದಿನಗಳು ಸಂದಿವೆ. ಕಾಲೇಜು ಜೀವನದ ಕೊನೆಯ ಘಟ್ಟದಲ್ಲಿ ನಾವಿದ್ದೇವೆ...ಪರೀಕ್ಷೆಗೆ ನಮ್ಮತಯಾರಿ ನಡೆಯುತ್ತಿದೆ...ಈಗೇನಿದ್ದರೂ ಬೆಟ್ಟದ ಅನುಭವ ಸುಂದರ ನೆನಪು ಮಾತ್ರ... ಮತ್ತೆ ಆ ದಿನಗಳು...ಪದೇ...ಪದೇ ನಮ್ಮನ್ನು ಕಾಡುತ್ತಿವೆ.
- ನೇತ್ರಾವತಿ
ತೃತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು , ಮೂಡಬಿದಿರೆ.