ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಯುವ ಪ್ರತಿಭಾ ವೇದಿಕೆ ಮತ್ತು ಶ್ರೀ ಕಾಲೇಜು ಮೂಡಬಿದಿರೆ ಸಂಯುಕ್ತಾಶ್ರಯದಲ್ಲಿ ಮೂಡಬಿದಿರೆಯ ನವಮಿ ಚಿತ್ರಮಂದಿರದಲ್ಲಿ ಕಳೆದ 3 ದಿನಗಳ ಕಾಲ ಆಯೋಜಿಸಿದ ಕರ್ನಾಟಕ ರಾಜ್ಯ ಮಿನಿ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ `ಸಾಧಕ ಚಿತ್ರ ನಿರ್ದೇಶಕರಿಗೆ' ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ನಡೆಯಿತು.

ನವೋದಿತ ನಿರ್ದೇಶಕ ಗೌರವಕ್ಕೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಎಂ.ಸಿ.ಜೆ ವಿದ್ಯಾರ್ಥಿ ಬೊರ್ಗಾಲು ಗುಡ್ಡೆ ಮಂಜುನಾಥ (ಅರಸರನ್ನು ಅರಸುತ್ತಾ ಸಾಕ್ಷ್ಯಚಿತ್ರ)ಹಾಗೂ ವಿಶೇಷ ಗೌರವ ಪ್ರಶಸ್ತಿಗೆ ಪಾತ್ರವಾದ `ಬದುಕು' ಸಾಕ್ಷ್ಯಚಿತ್ರ ದ ನಿರ್ದೇಶಕ ಹರೀಶ್ ಕೆ.ಆದೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ ಹೆಗಡೆ, ಬಿ.ಜೆ.ಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ, ರವೀಂದ್ರ ರೈ, ಚಂದ್ರಹಾಸ್ ಅತಿಥಿಗಳಾಗಿದ್ದರು.
ಮಿನಿ ಚಲನಚಿತ್ರೋತ್ಸವ ಸಂಘಟಕ ಶೇಖರ ಅಜೆಕಾರು ಸ್ವಾಗತಿಸಿದರು. ಸುಮನಾ ವಂದಿಸಿದರು. ಹರೀಶ್ ಕೆ.ಆದೂರು ಹಾಗೂ ಮಂಜುನಾಥ ಅನುಭವ ಹಂಚಿಕೊಂಡರು.

1 comments:

Anonymous said...

hearty congrats for documentary film awards...
saadhaneya haadiyali innashtu prashasthigalirali.....

Post a Comment