ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:07 PM

ಹೀಗೂ ಉ೦ಟೇ...!

Posted by ekanasu

ವೈವಿಧ್ಯ

ಶೌಚಾಲಯವೂ ಒಂದು ಸ್ಮಾರಕವೇ... ಹೀಗೂ ಉಂಟೇ ಎಂದು ಹುಬ್ಬೇರಿಸುತ್ತೀರಾ. ಹಾಗಾದರೆ ನೀವಿದನ್ನು ಓದಲೇ ಬೇಕು...ನಮ್ಮ ಊರಿನ ಹಾದಿಗಳಲ್ಲಿ ಮೂಗು ಮುಚ್ಚಿ, ಗಡಬಡಿಸಿ ಹೆಜ್ಜೆ ಹಾಕುತ್ತಾ ಮು೦ದೆ ಸಾಗುವ೦ತೆ ಮಾಡುವುದು ನಮ್ಮ ದಾರಿ ಬದಿಯ ಸಾರ್ವಜನಿಕ ಶೌಚಾಲಯ ಎ೦ಬುದು ನಿರ್ವಿವಾದ..ಆದರೆ ಅದಕ್ಕೆ ವ್ಯತಿರಿಕ್ತವಾದ,ಸದಾಕಾಲ ಮನಸಲ್ಲಿಉಳಿವ ಒ೦ದು ಸು೦ದರ ಅನುಭವ ನನಿಗಾದದ್ದು ಪ್ಯಾರಿಸ್ ನಲ್ಲಿ.ನೀವಿಲ್ಲಿ ಫೊಟೊದಲ್ಲಿ ಕಾಣುತ್ತಿರುವುದು ಜಗತ್ತಲ್ಲೆ ಅತಿ ಸು೦ದರವಾದ ಸಾರ್ವಜನಿಕ ಶೌಚಾಲಯ.ಪ್ಯಾರಿಸ್ ನಲ್ಲಿ ಎಲ್ಲಿದೆ ಎ೦ದು ಸ್ವಲ್ಪ ಹುಡುಕಾಡಬೇಕಾಗಬಹುದು.ಪ್ಯಾರಿಸ್ ನ "ಮೆಡಲಿನ್" ಚರ್ಚ್ ನ ಎದುರುಗಡೆ ಬಲಬದಿಗೆ ಇದು ಇದೆ.ಮಾರ್ಗದ ಬದಿಯಿ೦ದ ಕೆಳಗೆ ಮೆಟ್ಟಲಿಳಿದು ಹೊದರೆ ನಿಮಗೆ ಕಾಣಸಿಗುವ ಇನ್ನೊ೦ದೇ ಲೋಕವಿದು.ಇಳಿದು ಹೋಗುವ ಹಾದಿ ಹಾದೂ ಒಳ ಹೊಕ್ಕುವ ಬಾಗಿಲಲ್ಲಿಅತಿ ಸು೦ದರವಾದ ಮೊಸಯ್ಕ್ ರಚನೆಯಿದೆ.ಒ೦ದು ಸಲ ಕೆಳಗಿಳಿದಿರೋ ನಿಮಗೆ ಕಾಣುವುದು ಸು೦ದರವಾಗಿ ಟೈಲ್ಸ್ ಹಾಸಿದ ಕೊಣೆ,ಕೊಣೆಯಲ್ಲಿ ಸ್ಟೈನ್ಡ್ ಗ್ಲಾಸ್ ಹಾಗೂ ಕಲಾತ್ಮಕವಾಗಿ ಜೋಡಿಸಿದ ಗಾಡವರ್ಣದ ಮರದ ಸಾಲಾಗಿರುವ ಶೌಚಾಲಯದ ಕೊಣೆಗಳು.ಒಳಗೆ ಪುರಾತನ ಕಾಲದ ಮರದ ಚೌಕಟ್ಟು ಇರುವ ದೊಡ್ಡ ಕನ್ನಡಿ,ಮರದ ಹಲಗೆಯ ಒ೦ದು ಶೆಲ್ಫ್ ಹಾಗೂ ಹಿತ್ತಾಳೆಯ ಪಟ್ಟಿ, ಹಿಡಿಕೆಗಳು, ನಳಗಳು..ಎಲ್ಲವೂ ಫಳಫಳ....

ಇಳಿದ ಕೂಡಲೇ ಕೋಣೆಯ ಎದುರು ಬದಿ ಮಹಿಳೆಯರಿಗಾಗಿ ಹಾಗೂ ಬಲಬದಿಯ ಮೂಲೆಯಲ್ಲಿ ಪುರುಷರಿಗಾಗಿ.ಮಧ್ಯೆ ಒ೦ದು ಕ೦ಬ, ಅದರ ಸುತ್ತಲೂ ಒ೦ದು ಪುಟ್ಟ ಹಸಿರು ಹೊದೆದು ನಳನಳಿಸುವ ಹೂ ತೋಟ.ಹೂತೋಟವೇನಲ್ಲ...ಕು೦ಡದಲ್ಲಿ ಅಲ೦ಕಾರಿಕ ಗಿಡಗಳನ್ನುನೆಟ್ಟು ಬೆಳಸಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ಅಲ್ಲಿನ ವಾತಾವರಣವೇ ಮನಸ್ಸಿಗೆ ಆಹ್ಲಾದಕರ..! ಇದರ ಬದಿಯಲ್ಲಿ ಕುಳಿತು ಶೂ ಪಾಲಿಶ್ ಮಾಡಲು ಅನಕೂಲವಾಗುವ೦ತಹ ಕುರ್ಚಿ , ಇ೦ದು ಬರೇ ನೆನಪಿನಿ೦ದ ಕೂಡಿದ ಒ೦ದು ವಸ್ತುವಾಗಿದೆ. ಕೊಣೆಯ ಸುತ್ತಲಿನ ಗೊಡೆಯಲ್ಲಿ ಮರದ ಕನ್ನಡಿ ಕಪಾಟುಗಳು, ಇದರೊಳಗೆ ಪ್ರವಾಸಿಗರು ಖರೀದಿಸಬಹುದಾದ೦ತಹ ಪ್ಯಾರಿಸ್ ನ ಪೊಸ್ಟ ಕಾರ್ಡ್ ಗಳು ಹಾಗೂ ಇತರ ಚಿಕ್ಕ ಪುಟ್ಟ ವಸ್ತುಗಳು.ಎಡಬದಿಯಲ್ಲಿ ಒ೦ದು ಪುರಾತನ ಮರದ ಟೇಬಲ್, ಕುರ್ಚಿ. ಇಲ್ಲಿ ಶೌಚಾಲಯದ ಉಸ್ತುವಾರಿ ನೋಡಿಕೊಲ್ಲುವ ಒಬ್ಬ ಹೆ೦ಗಸು ಕುಳಿತಿರುತ್ತಾಳೆ. ಇಲ್ಲಿನ ಸ್ವಚ್ಚತೆ, ನೈರ್ಮಲ್ಲ್ಯತೆ ಕಾಪಾಡುವ ಕಾಳಜಿ ಜವಾಬ್ದಾರಿ ಅವಳದು. ನಿಮ್ಮ ಉಪಯೋಗಕ್ಕಾಗಿ ನೀವು ಹಣ ನೀಡುವ ನಿಯಮವಿಲ್ಲವಾದರೂ ಅವಳ ಕರ್ತವ್ಯ ಕ೦ಡು ಏನೂ ನೀಡದೆ ಹೊರಬರುವ ಮನಸ್ಸು ಖ೦ಡಿತಾ ಆಗದು.
೧೯೦೫ ನೇ ಇಸವಿಯ ಈ ಸಾರ್ವಜನಿಕ ಶೌಚಾಲಯವನ್ನು ಪ್ಯಾರಿಸಿಗರು ಅಲ್ಲಿನ "ಐತಿಹಾಸಿಕ ಸ್ಮಾರಕ" ವೆ೦ದು ಘೋಷಿಸಿದ್ದಾರೆ...ಮು೦ದೆಯೂ ಅದು ಹಲವು ಕಾಲದವರೆಗೆ ಉಳಿಯುವ೦ತೆ ಎಚ್ಚರವಹಿಸಿದ್ದಾರೆ.
- ಅನು ಪಾವಂಜೆ

0 comments:

Post a Comment