ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು:ಹಂಪಿ ಪುನರುತ್ಥಾನಕ್ಕೆ ಕನ್ನಡ ವಿಶ್ವವಿದ್ಯಾನಿಲಯದ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಮುಖ್ಯ ಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನಲ್ಲಿ ಆಯವ್ಯಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ವಿಶ್ವವಿದ್ಯಾನಿಲಯದ 85 ಎಕರೆ ಜಮೀನನ್ನು ಹಂಪಿಯ ಅಭಿವೃದ್ಧಿಗೆ ಶ್ರೀ ಕೃಷ್ಣದೇವರಾಯ ಪುನರುತ್ಥಾನ ಟ್ರಸ್ಟ್ ವಶಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಚರ್ಚೆಯಾಗುತ್ತಿದೆ.
ಸಾರ್ವಜನಿಕರ, ಸಾಹಿತಿಗಳ ಭಾವನೆಗೆ ಧಕ್ಕೆಉಂಟುಮಾಡಲು ಇಚ್ಫೆಯಿಲ್ಲ. ಹಾಗಾಗಿ ಅದನ್ನು ಗೌರವಿಸಿ ವಿಶ್ವವಿದ್ಯಾನಿಲಯದ ಒಂದು ಗುಂಟೆ ಜಮೀನನ್ನು ಕೂಡ ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲವೆಂದು ಮುಖ್ಯ ಮಂತ್ರಿಗಳು ತಿಳಿಸಿದರು.

ವಿಶ್ವ ವಿಖ್ಯಾತ ಹಂಪಿಗೆ ಪ್ರವಾಸಿಗರು ಜಗತ್ತಿನ ಮೂಲೆ ಮೂಲೆಯಿಂದಲೂ ಬಂದು ಹಾಳು ಹಂಪೆಯನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ನೆನಪಿಡುವಂತೆ ಹಂಪಿಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಮೀನಿನಲ್ಲಿ ಹಾಗೂ ಅಗತ್ಯ ಬಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಆ ಸ್ಥಳದಲ್ಲಿ ಅಂತರಾಷ್ಟ್ರೀಯ ಉದ್ಯಾನವನ, ವಿಜಯನಗರ ಸಾಮ್ರಾಜ್ಯ ಪರಂಪರೆ ಕೇಂದ್ರ, ಅಧ್ಯಯನ ಪೀಠ ಹಾಗೂ ಕೃಷ್ಣದೇವರಾಯರ ಪುತ್ಧಳಿಯನ್ನು ಸ್ಥಾಪಿಸಲಾಗುವುದೆಂದು ಅವರು ತಿಳಿಸಿದರು.

ರೈತರಿಗೆ ಅನ್ಯಾಯ ಮಾಡುವುದಿಲ್ಲ

ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಕರ್ಾರ ಶ್ರಮಿಸುತ್ತಿದೆ. ರೈತರಿಗೆ ಅನ್ಯಾಯ ಮಾಡುವುದಿಲ್ಲ. ಕೈಗಾರಿಕೀಕರಣಕ್ಕಾಗಿ ರೈತರಿಂದ ಖುಷ್ಕಿ ಜಮೀನನ್ನು ವಶಪಡಿಸಿಕೊಳ್ಳದೆ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನನ್ನು ವಶಪಡಿಸಿಕೊಳ್ಳಲಾಗುವುದು. 20 ವರ್ಷದಲ್ಲಿ ಫಲವತ್ತಾದ ಜಮೀನನ್ನು ಯಾರ ಯಾರ ಕಾಲದಲ್ಲಿ ವಶಪಡಿಸಿಕೊಳ್ಳಲಾಯಿತು ಎಂಬ ಬಗ್ಗೆ ಚರ್ಚೆಯಾಗಲಿ. ರೈತರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಿ ಕೈಗಾರಿಕೀಕರಣದ ವೇಗವನ್ನು ತಗ್ಗಿಸಬಾರದು. ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕಾಗಿದೆ. ರೈತರಿಗೆ ಷೇರು ನೀಡುವ ಬಗ್ಗೆಯೂ ಚರ್ಚೆಯಾಗಲಿ ಎಂದು ಮುಖ್ಯ ಮಂತ್ರಿಗಳು ನುಡಿದರು.

ಜಮೀನು ನೀಡಿಕೆ ಬಗ್ಗೆ ಸಮರ್ಥನೆ

ಆಸ್ಪತ್ರೆ ಕಟ್ಟಲು ಅಮೃತಾನಂದಮಯಿ ಟ್ರಸ್ಟ್ ಜಮೀನು ನೀಡಬೇಕೆಂದು ಕೇಳಿರಲಿಲ್ಲ. ಬಡವರಿಗೆ ಅನುಕೂಲವಾಗಲೆಂದು ಆಸ್ಪತ್ರೆ ನಿರ್ಮಾಣಕ್ಕಾಗಿ 15 ಎಕರೆ ಜಮೀನನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು. ಈ ಟ್ರಸ್ಟ್ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 2000 ಮನೆ ನಿರ್ಮಿಸುತ್ತಿದ್ದು ಮತ್ತೆ 1000 ಮನೆ ನಿರ್ಮಿಸಲು ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.

0 comments:

Post a Comment